` dk shivakumar, - chitraloka.com | Kannada Movie News, Reviews | Image

dk shivakumar,

  • DK Releases DK Trailer

    dk movie image

    Energy Minister D.K. Shivakumar who is fondly known as DK released the trailer of Prem starrer 'DK' at the Renukamba Preview Theater in Bangalore. It has been a long pending dream of actor-producer Prem to release the audio of his latest film 'DK' from minister D.K. Shivakumar. But however it was not possible due to various reasons. So, with no other go the audio was released in a low-key affair and now the film's trailer has finally been released by D K Shivakumar.

    dk_trailer.jpg

    Along with D.K. Shivakumar, director Vijay Hampali, producer Rakshitha Prem, music director Arjun Janya, Chaitra Chandranath and others were present at the occasion.
  • DK Shivakumar Releases The Songs Of 'Johnny Johnny Yes Papa'

    dk shivakumar releases johnny johnny yes papa

    Power Minister D K Shivakumar on Saturday night released the songs of 'Duniya' Vijay starrer 'Johnny Johnny Yes Papa' in Bangalore. The songs of the film has been composed by Ajaneesh Lokanath and Dhananjay Ranjan has written the lyrics for all the songs of the film.

    'Johnny Johnny Yes Papa' is directed by Preetham Gubbi and Preetham earlier directed actor 'Duniya' Vijay in 'Johnny Mera Naam' produced by Jayanna. Now the duo have made a comeback with 'Johnny Johnny Yes Papa'. Jayanna is distributing the film.

    The film is being produced by Vijay under Duniya Talkies production house. The film stars Vijay, Rachita Ram, Sadhu Kokila, Rangayana Raghu and others in prominent roles.

  • DKS IT raids affects Sudeep

    sudeep, dk shivakumar image

    In a strange way Sandalwood star Sudeep had to face problem due to the ongoing income tax raids on energy minister DK Shivakumar. Apart from various offices and homes of Shivakumar the IT raid is also taking place in Eagelton Resorts where he was taking care of the Gujarat Congress MLAs there.

    Sudeep is acting in a guest role in Raju Kannada Medium. Shooting for the film was scheduled for today at the resort. Sudeep was already in the resort. When the film crew arrived for shooting this morning they were not allowed inside. They were allowed after nearly 30 minutes. It is not known if the shooting is taking place after that.

     

  • Malashree To Join Congress?

    will malashree join congress?

    As the Assembly elections approach there are more and more film actors who are ready to join politics and give it a try. The latest it seems is Malashree. Producer Ramu and actress Malashree have remained far away from politics all these years.

    Malashree was the reigning star of the film industry in the 80s and 90s. Her popularity was no less than that of any hero. Even today she acts in lead roles in films which cannot be said of many other stars. She surprised everyone today by meeting DK Shivakumar, one of the top Congress politician in Karnataka and the Energy Minister. The details of the meeting was not revealed. But it left no doubt that Malashree will be joining Congress and is also likely to contest in the upcoming Assembly elections.

    Sources said that she is likely to contest from Bengaluru itself. That is what the Congress wants her to contest from sources said. But nothing is confirmed yet. 

  • Shivarajakumar Launches The Official Website Of 'Kabza'

    upendra launches the official website of kaba

    Actor Shivarajakumar recently launched the official website of Kannada film 'Kabza' starring Upendra. The website which is called www.kabzamovie.com contains information and photos of artists and technicians.

    The launch was attended by politician M T B Nagaraj who is also presenting the film. Shivarajakumar launched the website and wished the team a huge success.

     

  • ಅಪ್ಪು ಅಭಿಮಾನಿಗಳಿಗೆ ಡಿಕೆಶಿ ಸಾಂತ್ವನ

    dk shivkumar says dobt worry to appu fans

    ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮನೆ ಇರೋದು ಸದಾಶಿವ ನಗರದಲ್ಲಿ. ಅದೇ ಮನೆಯ ಪಕ್ಕ ಇರೋದು ಪೊಲಿಟಿಕಲ್ ಪವರ್ ಸ್ಟಾರ್ ಡಿ.ಕೆ.ಶಿವಕುಮಾರ್ ಮನೆ. ಪುನೀತ್ ಮನೆಯಲ್ಲಿ ಐಟಿ ಅಧಿಕಾರಿಗಳು ಬೀಡುಬಿಟ್ಟಿರುವಾಗ ಅಭಿಮಾನಿಗಳು ಮನೆ ಬಳಿ ಜಮಾಯಿಸಿದ್ದರು. ಆಗ ಮನೆಗೆ ಹೋಗಲು ಬಂದ ಡಿ.ಕೆ.ಶಿವಕುಮಾರ್, ಪುನೀತ್ ಮನೆ ಬಳಿ ಕಾರು ನಿಲ್ಲಿಸಿ ``ಇನ್ನೂ ಮುಗಿದಿಲ್ವಾ'' ಎಂದು ಅಭಿಮಾನಿಗಳನ್ನೇ ಪ್ರಶ್ನಿಸಿದ್ದಾರೆ. 

    ಇನ್ನೂ ಇಲ್ಲ ಸಾರ್. ನೀವೇ ಏನಾದ್ರೂ ಮಾಡಿ ಎಂದು ಕೇಳಿಕೊಂಡ ಅಭಿಮಾನಿಗಳಿಗೆ, ಇದೆಲ್ಲ ಕಾನೂನು ಕಣ್ರಪ್ಪಾ.. ಡೋಂಟ್ ವರಿ.. ಏನೂ ಆಗಲ್ಲ ಎಂದು ಸಮಾಧಾನಿಸಿ ಮನೆಗೆ ತೆರಳಿದ್ದಾರೆ ಡಿಕೆ ಶಿವಕುಮಾರ್. ಇದೆಲ್ಲ ನಡೆದದ್ದು ಗುರುವಾರ ರಾತ್ರಿ. ಮುಂಜಾನೆ ಕೂಡಾ ಪುನೀತ್ ಮನೆಯಲ್ಲಿ ಪರಿಶೀಲನೆ ನಡೆಯುತ್ತಿದೆ.

    Related Articles :-

    ದೇಶದಲ್ಲೇ ನಡೆದಿರಲಿಲ್ಲ ಇಂಥಾದ್ದೊಂದು ಸಿನಿಮಾ ಐಟಿ ರೇಡ್..!

    IT Shock For Sandalwood, Raids On The Houses Of Producers And Star Actors

  • ಕಾಂಗ್ರೆಸ್ ಕದ ತಟ್ಟಿದ ಎಸ್.ನಾರಾಯಣ್

    ಕಾಂಗ್ರೆಸ್ ಕದ ತಟ್ಟಿದ ಎಸ್.ನಾರಾಯಣ್

    ಕಲಾ ಸಾಮ್ರಾಟ್ ಎಂದೇ ಖ್ಯಾತರಾಗಿರುವ ನಟ, ನಿರ್ದೇಶಕ, ನಿರ್ಮಾಪಕ ಎಸ್.ನಾರಾಯಣ್ ರಾಜಕೀಯಕ್ಕೆ ಬರುತ್ತಿದ್ದಾರೆ. ಎಸ್. ನಾರಾಯಣ್ ಅವರಿಗೆ ರಾಜಕೀಯ ನಾಯಕರ ಪರಿಚಯ ಹೊಸದಲ್ಲ. ಹೆಚ್.ಡಿ.ಕುಮಾರಸ್ವಾಮಿ ನಾರಾಯಣ್ ಅವರಿಗೆ ಆತ್ಮೀಯರು. ಹಲವು ರಾಜಕೀಯ ನಾಯಕರೊಂದಿಗೆ ಆತ್ಮೀಯ ಒಡನಾಟವೂ ಇದೆ. ಇದೆಲ್ಲದರ ಹೊರತಾಗಿಯೂ ರಾಜಕೀಯಕ್ಕೆ ಹೊರಟಿರುವ ನಾರಾಯಣ್ ಅವರಿಗೆ ಕಾಂಗ್ರೆಸ್ ಇಷ್ಟವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಳಿ ಇದನ್ನು ಹೇಳಿಕೊಂಡಿದ್ದಾರಂತೆ.

    ನಾರಾಯಣ್ ಅವರು ನಮ್ಮ ಪಕ್ಷದ ಸಿದ್ಧಾಂತ, ಆದರ್ಶಗಳಿಂದ ಪ್ರೇರಿತರಾಗಿ ಕಾಂಗ್ರೆಸ್ ಸೇರುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಿದೆ ಎಂದು ಸ್ವತಃ ಡಿಕೆಶಿ ಹೇಳುವ ಮೂಲಕ ನಾರಾಯಣ್ ಅವರ ರಾಜಕೀಯ ಪ್ರವೇಶ ಅಧಿಕೃತಗೊಳಿಸಿದ್ದಾರೆ.

    ಅಲ್ಲಿಗೆ ನಾರಾಯಣ್ ಕಾಂಗ್ರೆಸ್‍ನಲ್ಲಿರೋ ಜಯಮಾಲಾ, ಸಾ.ರಾ.ಗೋವಿಂದು, ಉಮಾಶ್ರೀ, ರಮ್ಯಾ.. ಮೊದಲಾದವರ ಲಿಸ್ಟಿಗೆ ಸೇರಲಿದ್ದಾರೆ.

  • ಕಾಂಗ್ರೆಸ್ ಸೇರಿದ ಸಾಧುಕೋಕಿಲ : ಜವಾಬ್ದಾರಿ ಏನು ಗೊತ್ತಾ?

    ಕಾಂಗ್ರೆಸ್ ಸೇರಿದ ಸಾಧುಕೋಕಿಲ : ಜವಾಬ್ದಾರಿ ಏನು ಗೊತ್ತಾ?

    ಕನ್ನಡ ಚಿತ್ರರಂಗದ ಕಾಮಿಡಿಯ ಅರಸ.. ಸಂಗೀತದಲ್ಲೂ ಮೋಡಿ ಮಾಡಿದ್ದ, ನಿರ್ದೇಶನದಲ್ಲೂ ಸೌಂಡು ಮಾಡಿದ್ದ ಸಾಧುಕೋಕಿಲ ಇದೀಗ ಅಧಿಕೃತವಾಗಿ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಸಾಧುಕೋಕಿಲ ತಮ್ಮ ರಾಜಕೀಯ ಪ್ರವೇಶವನ್ನು ಮುಚ್ಚಿಟ್ಟಿರಲಿಲ್ಲ. ಕಾಂಗ್ರೆಸ್ ಸೇರಲಿದ್ದಾರೆ ಎನ್ನುವುದು ಗೊತ್ತಿತ್ತು. ಕಾಂಗ್ರೆಸ್‍ನ ಹಲವು ಸಮಾರಂಭಗಳಲ್ಲಿ ಭಾಗವಹಿಸಿದ್ದರು ಕೂಡಾ. ಇದೀಗ ಅಧಿಕೃತವಾಗಿದೆ, ಅಷ್ಟೆ.

    ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ಶಲ್ಯವನ್ನು ಹಾಕಿ ಹಾಗೂ ಹೂಗುಚ್ಛ ನೀಡಿ ಸಾಧುಕೋಕಿಲ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ಸಾಧು ಕೋಕಿಲ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

     ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. ತಾವುಗಳು ತಕ್ಷಣ ತಮಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು, ಕೆಪಿಸಿಸಿಯ ಮಾರ್ಗದರ್ಶನದಲ್ಲಿ ಮತ್ತು ರಾಜ್ಯದ ನಾಯಕರ ಸಹಕಾರದೊಂದಿಗೆ ಸಾಂಸ್ಕೃತಿಕ ಘಟಕದ ಮೂಲಕ ಸಂಘಟನೆಗೆ ಮುಂದಾಗಬೇಕು. ಆ ಮೂಲಕ ಪಕ್ಷದ ಬಲವರ್ಧನೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕೋರಿದೆ. ಈ ದಿಸೆಯಲ್ಲಿ ತಮಗೆ ಹೆಚ್ಚಿನ ಯಶಸ್ಸು ಲಭಿಸಲೆಂದು ಶುಭ ಕೋರುತ್ತೇನೆ ಎಂದು ಕೆಪಿಸಿಸಿ ಆದೇಶ ಪತ್ರದಲ್ಲಿದೆ.

    ಅಂದಹಾಗೆ ಸಾಧುಕೋಕಿಲ ಅವರಿಗೆ ಕೋವಿಡ್ ಕುರಿತಂತೆ ರಾಜ್ಯ ಸರ್ಕಾರ ಮಾಡಿದ ಅನಾಹುತಗಳ ಬಗ್ಗೆ ಡಾಕ್ಯುಮೆಂಟರಿ ಮಾಡಬೇಕಿರುವುದು ಮೊದಲ ಟಾಸ್ಕ್. ಆರಂಭದಲ್ಲಿ ಸಿನಿಮಾ ಮಾಡಲು ಉತ್ಸುಕರಾಗಿದ್ದ ಡಿಕೆ ಶಿವಕುಮಾರ್, ರಾಮ್ ಗೋಪಾಲ್ ವರ್ಮಾ ಅವರನ್ನು ಕಾಂಟ್ಯಾಕ್ಟ್ ಮಾಡಿದ್ದರಂತೆ. ಆದರೆ ವರ್ಮಾ ಅವರ ಬಜೆಟ್ ಕೇಳಿ ಸಿನಿಮ ಮಾಡುವ ಇಂಟ್ರೆಸ್ಟ್ ಕೈಬಿಟ್ಟರಂತೆ. ಆದರೆ ಎಲೆಕ್ಷನ್ ವೇಳೆ ಕೋವಿಡ್ ಕುರಿತು ಜನರಿಗೆ ನೆನಪಿಸುವುದರಿಂದ ಕಾಂಗ್ರೆಸ್ಸಿಗೆ ಲಾಭವಿದೆ ಎಂಬ ಕಾರಣಕ್ಕೆ ಡಾಕ್ಯುಮೆಂಟರಿಗಳನ್ನು ಮಾಡಲು ಸಾಧುಕೋಕಿಲ ಅವರಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

  • ಗೀತಾ ಶಿವರಾಜ್ ಕುಮಾರ್ ಅವರಿಗಾಗಿ ಬಲೆಯನ್ನೇ ಬೀಸಬೇಕಾಯ್ತು : ಡಿಕೆ ಶಿವಕುಮಾರ್

    ಗೀತಾ ಶಿವರಾಜ್ ಕುಮಾರ್ ಅವರಿಗಾಗಿ ಬಲೆಯನ್ನೇ ಬೀಸಬೇಕಾಯ್ತು : ಡಿಕೆ ಶಿವಕುಮಾರ್

    ಶಿವಣ್ಣ ಅವರೂ ಕೂಡಾ ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರೆ. ಸೊರಬದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಅವರೇ ಈ ಮಾತು ಹೇಳಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಮಧು ಬಂಗಾರಪ್ಪ ಈ ಮಾತು ಹೇಳಿರುವುದು ವಿಶೇಷ.

    ನಾನು ನನ್ನ ಪತ್ನಿಯ ನಿರ್ಧಾರಕ್ಕೆ ಬೆಂಬಲವಾಗಿರುತ್ತೇನೆ ಎಂದಿದ್ದಾರೆ ಶಿವಣ್ಣ. ಶಿವಣ್ಣ ಕೂಡಾ ಪ್ರಚಾರಕ್ಕೆ ಹೋಗುತ್ತಿದ್ದು, ಗೀತಾ ಜೊತೆಯಲ್ಲೇ ಪ್ರಚಾರ ಮಾಡಲಿದ್ದಾರೆ. ಗೀತಾ ಅವರು ಕಾಂಗ್ರೆಸ್ಸಿಗೆ ಸೇರಿರುವುದರಿಂದ, ಕಾಂಗ್ರೆಸ್ ಪರವೇ ಪ್ರಚಾರ ಮಾಡಬೇಕಾಗಿ ಬರಬಹುದು.

    ಕಳೆದ ಕೆಲವು ವರ್ಷಗಳಿಂದ ಗೀತಾ ಅವರು ಶಕ್ತಿಧಾಮಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯಕ್ಕೆ ಸೇರುವುದರಿಂದ ಅವರ ಇನ್ನಷ್ಟು ಒಳ್ಳೆಯ ಕೆಲಸಗಳಿಗೆ, ಯೋಜನೆಗಳಿಗೆ ಶಕ್ತಿ ಬರಲಿದೆ ಎಂದಿದ್ದಾರೆ ಶಿವಣ್ಣ.

    ಗೀತಾ ಅವರನ್ನು ಕಾಂಗ್ರೆಸ್ಸಿಗೆ ಬರಮಾಡಿಕೊಂಡ ಡಿ.ಕೆ.ಶಿವರಾಜ್ ಕುಮಾರ್, ಮಧು ಬಂಗಾರಪ್ಪ ಅವರಿಗಾಗಿ ಗಾಳ ಹಾಕಿದೆ. ಆದರೆ ಗೀತಾ ಅವರನ್ನು ಕಾಂಗ್ರೆಸ್ಸಿಗೆ ಕರೆತರಲು ಬಲೆಯನ್ನೇ ಹಾಕಬೇಕಾಯಿತು. ಅವರು ನನ್ನ ಬಲೆಗೂ ಬೀಳಲಿಲ್ಲ. ಆದರೆ ರಾಹುಲ್ ಗಾಂಧಿ ಅವರು ಘೋಷಿಸಿರುವ ಕಾರ್ಯಕ್ರಮಗಳಿಗೆ ಬಿದ್ದರು ಎಂದಿದ್ದಾರೆ ಡಿಕೆ ಶಿವಕುಮಾರ್.

    ಮೋದಿಯವರು ಕಾಂಗ್ರೆಸ್ ಘೋಷಣೆಗಳಿಗೆ ಗೀತಾ ಉತ್ತರ ನೀಡಿದ್ದಾರೆ. ಡಾ.ರಾಜ್ ಕುಮಾರ್ ಸೊಸೆ, ಶಿವ ರಾಜ್ ಕುಮಾರ್ ಪತ್ನಿ ಹಾಗೂ ನನ್ನ ಗುರುಗಳಾದ ಎಸ್. ಬಂಗಾರಪ್ಪ ಅವರ ಮಗಳು ಗೀತಾ, ಕಾಂಗ್ರೆಸ್ ಸೇರುವ ಮೂಲಕ ಮೋದಿಯ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ ಎನ್ನುವುದು ಡಿಕೆ ಶಿವಕುಮಾರ್ ವಿವರಣೆ.

  • ಡಿಕೆ ಶಿವಕುಮಾರ್ ಐಟಿ ರೈಡ್ - ಸಿನಿಮಾ ಶೂಟಿಂಗ್‍ಗೂ ತಟ್ಟಿದ ಬಿಸಿ

    sudeep image

    ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ, ಸಂಬಂಧಿಕರು ಸೇರಿದಂತೆ ಅವರ ಆಸ್ತಿಪಾಸ್ತಿಗಳ ಮೇಲೆಲ್ಲ ಐಟಿ ರೈಡ್ ಆಗಿದೆ. ದೇಶಾದ್ಯಂತ 39ಕ್ಕೂ ಹೆಚ್ಚು ಕಡೆ, ನೂರಾರು ಅಧಿಕಾರಿಗಳಿಂದ ನಡೆಯುತ್ತಿರುವ ಐಟಿ ರೈಡ್ ಬಿಸಿ, ಸಿನಿಮಾ ಶೂಟಿಂಗ್‍ಗೂ ತಟ್ಟಿದೆ.

    ಬಿಡದಿ ಸಮೀಪದ ಈಗಲ್‍ಟನ್ ರೆಸಾರ್ಟ್‍ನಲ್ಲಿ ಗುಜರಾತ್‍ನ ಶಾಸಕರಿದ್ದಾರೆ. ಅವರ ಆತಿಥ್ಯ ನೋಡಿಕೊಳ್ತಾ ಇರೋದು ಡಿ.ಕೆ. ಶಿವಕುಮಾರ್. ಒಂದು ಕಡೆ ರೈಡ್ ಆಗಿರುವ ಹಿನ್ನೆಲೆಯಲ್ಲಿ ಇಡೀ ರೆಸಾರ್ಟ್‍ಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಈ ಭದ್ರತೆಯ ಬಿಸಿ ತಟ್ಟಿದ್ದು ರಾಜು ಕನ್ನಡ ಮೀಡಿಯಂ ಚಿತ್ರದ ಶೂಟಿಂಗ್‍ಗೆ.

    ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಬೆಳಗ್ಗೆಯೇ ಇಡೀ ಚಿತ್ರತಂಡದ ಕಲಾವಿದರು, ತಂತ್ರಜ್ಞರು ಕ್ಯಾರವಾನ್ ಸಮೇತ ಹೋಗಿದ್ದರು. ಆದರೆ, ಬಿಗಿ ಭದ್ರತೆ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ರೆಸಾರ್ಟ್‍ಗೆ ಹೋಗಲು ಸಾಧ್ಯವಾಗಲಿಲ್ಲ. 

    ಸುಮಾರು ಅರ್ಧಗಂಟೆ ಇಡೀ ತಂಡವನ್ನು ತಪಾಸಣೆಗೊಳಪಡಿಸಿದ ಮೇಲೆ, ಚಿತ್ರತಂಡಕ್ಕೆ ರೆಸಾರ್ಟ್‍ನಲ್ಲಿ ಶೂಟಿಂಗ್ ಮಾಡಿಕೊಳ್ಳಲು ಬಿಟ್ಟುಕೊಟ್ಟಿದ್ದಾರೆ.

  • ನಡುವೆ ಅಂತರವಿರಲಿ.. ಚಿತ್ರಕ್ಕೆ ಡಿಕೆ ಬ್ರದರ್ಸ್ ಮೆಚ್ಚುಗೆ

    dk shivakumar watche naduve antharalvirali movie

    ನಡುವೆ ಅಂತರವಿರಲಿ.. ಹೊಸಬರ ಪ್ರಯತ್ನ. ಐಶಾನಿ ಶೆಟ್ಟಿ, ಪ್ರಖ್ಯಾತ್ ಅಭಿನಯದ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವುದು ರವೀನ್ ಗೌಡ. ಹದಿಹರೆಯದ ಪ್ರೀತಿ, ಪ್ರೇಮ, ಪ್ರಣಯ, ತಲ್ಲಣಗಳನ್ನು ಸುಂದರವಾಗಿ ಹಿಡಿದಿಟ್ಟಿರುವ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಿತ್ರದ ಕ್ಲೈಮಾಕ್ಸ್‍ನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. 

    ಚಿತ್ರವನ್ನು ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಕೂಡಾ ನೋಡಿ ಮೆಚ್ಚಿಕೊಂಡಿರೋದು ಚಿತ್ರ ತಂಡದ ಖುಷಿಗೆ ಕಾರಣವಾಗಿದೆ. ಸಾಮಾನ್ಯ ಪ್ರೇಕ್ಷಕರಂತೆ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡಿದ್ದಾರೆ ಡಿಕೆ ಬ್ರದರ್ಸ್. ಅವರು ಈ ಸಿನಿಮಾ ನೋಡೋಕೆ ಕಾರಣ ಚಿತ್ರದ ಹೀರೋ ಪ್ರಖ್ಯಾತ್ ಪರಮೇಶ್ ಕನಕಪುರದ ಹುಡುಗ.

  • ಮುನಿರತ್ನ ಕುರುಕ್ಷೇತ್ರದ ಮುಹೂರ್ತಕ್ಕೆ ಡಿಕೆ ತಲೆನೋವು

    kurukshtera movie image

    ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ. ಅಲ್ಲಲ್ಲ.. ಅದು ಮುನಿರತ್ನ ಕುರುಕ್ಷೇತ್ರ. ಚಿತ್ರದ ಮುಹೂರ್ತಕ್ಕೆ ಆಗಸ್ಟ್ 6ನೇ ತಾರೀಕು ಡೇಟ್ ಫ{ಇಕ್ಸ್ ಆಗಿರುವುದು ನಿಜವಾದರೂ, ಮುನಿರತ್ನಗೆ ಒಂದು ವಿಚಿತ್ರ ತಲೆನೋವು ಶುರುವಾಗಿದೆ. ಅದು ಡಿಕೆ ತಲೆನೋವು

    ಇನ್ನೇನಿಲ್ಲ, ಮುನಿರತ್ನ ಡಿಕೆ ಶಿವಕುಮಾರ್ ಆಪ್ತರಲ್ಲಿ ಒಬ್ಬರು. ಹೀಗಾಗಿಯೇ ಸಿನಿಮಾ ಮುಹೂರ್ತದ ಆಹ್ವಾನ ಪತ್ರಿಕೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಇಬ್ಬರ ಹೆಸರೂ ಇದೆ. ಆದರೆ ಈಗ ಕಂಪ್ಲೀಟ್ ಐಟಿ ಟೆನ್ಷನ್‍ನಲ್ಲಿರುವ ಡಿಕೆ ಬ್ರದರ್ಸ್, ಮುಹೂರ್ತ ಕಾರ್ಯಕ್ರಮಕ್ಕೆ ಬರುವುದು ಕಷ್ಟಸಾಧ್ಯ. ತನಿಖೆ ಮುಗಿಯಲೇ ಇಲ್ಲದವಾದರೆ ಬರಲು ಆಗುವುದೂ ಇಲ್ಲ. 

    ಈ ಮಧ್ಯೆ ಐಟಿಯವರು ಬೆಂಡೆತ್ತಿರುವಾಗಲೇ ಮುನಿರತ್ನ ಹೋಗಿ ಡಿಕೆ ಸುರೇಶ್ ಅವರಿಗೆ ಆಹ್ವಾನವನ್ನೂ ಕೊಟ್ಟು ಬಂದಿದ್ದಾರೆ. ಒಟ್ಟಿನಲ್ಲಿ ಮುನಿರತ್ನ ಕುರುಕ್ಷೇತ್ರದ ದಿನ ಏನೇ ಸಂಭ್ರಮವಿದ್ದರೂ, ಡಿಕೆ ತಲೆನೋವು ಎಲ್ಲರಿಗೂ ಕಾಡಲಿದೆ.

    Related Articles :-

    ಕುರುಕ್ಷೇತ್ರದ ಮುಹೂರ್ತಕ್ಕೆ ಆಹ್ವಾನ. ಹೇಗಿದ್ದಾರೆ ಗೊತ್ತಾ ದರ್ಶನ್..?

    ಕುರುಕ್ಷೇತ್ರದಲ್ಲಿ ದರ್ಶನ್ ಜೊತೆ ನಟಿಸುತ್ತಿಲ್ಲ - ಕಾರಣ ಹೇಳಿದ ಶಿವರಾಜ್​ ಕುಮಾರ್ 

    ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

    ದುರ್ಯೋಧನ ದರ್ಶನ್​ಗೆ ಸಿಕ್ಕನಾ ಭೀಮ..? - ಬಾಲಿವುಡ್ ಆಂಜನೇಯ ಕುರುಕ್ಷೇತ್ರದ ಭೀಮ?

    Kurukshetra To be Launched on July 30th

    ದರ್ಶನ್ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು

    ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!

    Haripriya Confirmed For Kurukshetra

    Vivek Oberoi in Kurukshetra Say Reports

    Kurukshetra To Be Launched On July 23rd

  • ಸರ್ಕಾರದ ತುಘಲಕ್ ದರ್ಬಾರ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿ

    ಸರ್ಕಾರದ ತುಘಲಕ್ ದರ್ಬಾರ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿ

    ಸ್ಯಾಂಡಲ್ವುಡ್ ಆಗ್ರಹಕ್ಕೆ ಜೊತೆಯಾದ ಡಿ.ಕೆ.ಶಿವಕುಮಾರ್ ಥಿಯೇಟರುಗಳಲ್ಲಿ ಕೋವಿಡ್ ಹೊಸ ರೂಲ್ಸ್ ವಿರುದ್ಧ ಡಿಕೆಶಿ ಗರಂ ಮನೆಯಲ್ಲಿ ಗಂಡ,ಹೆಂಡತಿ, ಮಕ್ಕಳು ಒಟ್ಟಿಗೆ ಇದ್ದರೆ ಸಮಸ್ಯೆ ಇಲ್ಲ 

    ಅದೇ ಕುಟುಂಬ ಥಿಯೇಟರ್ಗೆ ಹೋದರೆ ಬೇರೆ ಬೇರೆ ಕೂರಬೇಕಂತೆ ಬೇರೆ ಬೇರೆ ಕೂರೋದಾದ್ರೆ ಗಂಡ ಹೆಂಡತಿ ಥಿಯೇಟರ್ ಗೆ ಯಾಕೆ ಹೋಗ್ತಾರೆ ?

  • ಸುದೀಪ್ ರಾಜಕೀಯಕ್ಕೆ ಬರುತ್ತಿಲ್ಲ : ಡಿಕೆಶಿವಕುಮಾರ್

    ಸುದೀಪ್ ರಾಜಕೀಯಕ್ಕೆ ಬರುತ್ತಿಲ್ಲ : ಡಿಕೆಶಿವಕುಮಾರ್

    ಪ್ರತಿ ಚುನಾವಣೆ ಬಂದಾಗಲೂ ಕಿಚ್ಚ ಸುದೀಪ್ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿ ಭುಗಿಲೇಳುವುದು ಎಲೆಕ್ಷನ್ ಮುಗಿದ ನಂತರ ತಣ್ಣಗಾಗುವುದು ಇದ್ದಿದ್ದೇ. ಈ ಬಾರಿಯೂ ಹಾಗೆಯೇ ಆಗಿದೆ. ತಿಂಗಳ ಹಿಂದೆ ಹಲವು ರಾಜಕೀಯ ನಾಯಕರು ಸುದೀಪ್ ಅವರನ್ನು ಭೇಟಿ ಮಾಡಿದ್ದರಂತೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಸುದೀಪ್ ಅವರ ಮನೆಗೆ ಖುದ್ದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಿ ಮಾತುಕತೆ ನಡೆಸುವ ಮೂಲಕ ಭಾರಿ ಸುದ್ದಿಯಾಗಿದೆ.

    ಸುದ್ದಿ ಸ್ಫೋಟವಾದ ನಂತರ ಖುದ್ದು ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆ ಹಾಗೂ ಪರಿಹಾರಗಳ ಕುರಿತು ಸುದೀಪ್ ಅವರ ಜೊತೆ ಚರ್ಚೆ ನಡೆಸಿದೆ. ಚುನಾವಣೆಗೆ ಮುನ್ನ ಪ್ರಣಾಳಿಕೆ ಸಿದ್ಧ ಪಡಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಯೂ ಬೇಕಿತ್ತು. ನಮ್ಮ ವಿಶೇಷ ಪ್ರಣಾಳಿಕೆಯಲ್ಲಿ ಚಿತ್ರರಂಗದ ಸಮಸ್ಯೆಗಳ ಕುರಿತು ಪರಿಹಾರ ನೀಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ಡಿಕೆ ಶಿವಕುಮಾರ್.

    ಸುದೀಪ್ ಕಾಂಗ್ರೆಸ್ ಸೇರ್ಪಡೆ ಸುದ್ದಿಯನ್ನು ಈ ಮೂಲಕ ನಿರಾಕರಿಸಿದ್ದಾರೆ. ಸುದೀಪ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗೆ ತೆರೆ ಎಳೆದಿದ್ದಾರೆ. ವಿಶೇಷವೆಂದರೆ ಕಳೆದ ಚುನಾವಣೆಯಲ್ಲಿ ಶ್ರೀರಾಮುಲು, ಸಿದ್ದರಾಮಯ್ಯ ಸೇರಿದಂತೆ ತಮ್ಮ ಕೆಲವು ಪ್ರೀತಿ ಪಾತ್ರ ನಾಯಕರ ಪರವಾಗಿ ಹಾಗೂ ಪಕ್ಷರಹಿತವಾಗಿ ಚುನಾವಣಾ ಪ್ರಚಾರಕ್ಕೆ ಹೋಗಬೇಕಿತ್ತು. ವಿಚಿತ್ರವೆಂದರೆ ಬಾದಾಮಿಯಲ್ಲಿ ಸಿದ್ದರಾಮಯ್ಯ-ಶ್ರೀರಾಮುಲು ಪರಸ್ಪರ ಎದುರಾಳಿಗಳಾಗಿದ್ದರು.

    ಬಾದಾಮಿಯನ್ನು ಬಿಟ್ಟು ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ಮಾಡುವುದು ಹಾಗೂ ಶ್ರೀರಾಮುಲು ಅವರ ಪರವಾಗಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಪ್ರಚಾರ ಮಾಡುವ ಪ್ಲಾನ್ ಇತ್ತು. ಆದರೆ ಇದು ಗೊಂದಲವನ್ನೇ ಸೃಷ್ಟಿಸುವ ಕಾರಣ ಹಾಗೂ ಅಭಿಮಾನಿಗಳು ರಾಜಕೀಯಕ್ಕೆ ಬರಬೇಡಿ ಎಂದು ಪ್ರತಿಭಟಿಸಿದ್ದ ಹಿನ್ನೆಲೆಯಲ್ಲಿ ಸುದೀಪ್ ಪ್ರಚಾರದಿಂದಲೂ ಹಿಂದೆ ಸರಿದಿದ್ದರು. ಅಲ್ಲದೆ ಸುದೀಪ್ ಮತ್ತು ಶ್ರೀರಾಮುಲು ಸಂಬಂಧಿಗಳೂ ಹೌದು. ವೈಯಕ್ತಿಕವಾಗಿ ಸಿದ್ದರಾಮಯ್ಯ ಜೊತೆ ಬಾಂಧವ್ಯ ಚೆನ್ನಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಪ್ರೀತಿಯಿಂದ ಮಾಮ ಎಂದೇ ಕರೆಯುವಷ್ಟು ಆತ್ಮೀಯತೆ ಇದೆ.ಡಿಕೆ ಶಿವಕುಮಾರ್ ಜೊತೆ, ಸುಧಾಕರ್ ಜೊತೆ ಸ್ನೇಹವೂ ಇದೆ. ಕುಮಾರಸ್ವಾಮಿ ಜೊತೆಯಲ್ಲೂ ಉತ್ತಮ ಗೆಳೆತನ ಇರುವ ಸುದೀಪ್, ಮಂಡ್ಯದಲ್ಲಿ ಸುಮಲತಾ ನಿಂತಾಗಲೂ ಪ್ರಚಾರಕ್ಕೆ ಹೋಗಲಿಲ್ಲ. ಸುದೀಪ್ ಅವರಿಗೆ ಎಲ್ಲ ಪಕ್ಷದಲ್ಲೂ ಮಿತ್ರರಿದ್ದಾರೆ. ಇದೀಗ ಸುದೀಪ್ ಅವರ ಕಾಂಗ್ರೆಸ್ ಪ್ರವೇಶದ ಸುದ್ದಿಗೆ ಈ ರೀತಿ ಬ್ರೇಕ್ ಬಿದ್ದಿದೆ

  • ಹಳೆ ಸಂಪ್ರದಾಯಕ್ಕೆ ಮತ್ತೆ ಓಂಕಾರ ಬರೆದರಾ ಡಿಕೆ..?

    dk shivakumar's surprise visit to shivanna's house

    ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮನೆಗೆ ಕೆಪಿಸಿಸಿ ನೂತನ ಸಾರಥಿ ಡಿ.ಕೆ.ಶಿವಕುಮಾರ್ ದಿಢೀರನೆ ಭೇಟಿ ಕೊಟ್ಟಿದ್ದಾರೆ. ಪತ್ನಿ ಗೀತಾ ಚುನಾವಣೆಗೆ ನಿಂತಾಗ ಪ್ರಚಾರ ಮಾಡಿದ್ದು ಬಿಟ್ಟರೆ, ರಾಜಕೀಯದಿಂದ ಶಿವಣ್ಣ ದೂರ ದೂರ. ಪತ್ನಿಯ ಪರವಾಗಿ ಮಾಡಿದ ಪ್ರಚಾರವೂ ತಪ್ಪಾಯ್ತೇನೋ ಎಂಬ ಭಾವನೆ ಕಾಡ್ತಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿರೋ ಶಿವರಾಜ್ ಕುಮಾರ್ ಅವರಿಗೆ ಎಲ್ಲ ಪಕ್ಷಗಳಲ್ಲೂ ಆತ್ಮೀಯ ಮಿತ್ರರಿದ್ದಾರೆ. ಹೀಗಾಗಿಯೇ ಮೈದುನ ಮಧು ಬಂಗಾರಪ್ಪ ಪರವಾಗಲೀ, ಸುಮಲತಾ ಅಂಬರೀಷ್ ಪರವಾಗಲೀ ಪ್ರಚಾರಕ್ಕೆ ಹೋಗಲಿಲ್ಲ.

    ಹೀಗಿರುವಾಗ ಇದ್ದಕ್ಕಿದ್ದಂತೆ ಡಿ.ಕೆ.ಶಿವಕುಮಾರ್ ಶಿವಣ್ಣನ ಮನೆಗೆ ಭೇಟಿ ಕೊಟ್ಟಿರುವುದು ಕುತೂಹಲ ಕೆರಳಿಸಿರುವುದು ನಿಜ. ಮೊದಲೆಲ್ಲ ರಾಜ್ಯದಲ್ಲಿ ಯಾರೇ ಸಿಎಂ ಆಗಲೀ, ಮಂತ್ರಿಯಾಗಲೀ, ಪಕ್ಷದ ನೇತೃತ್ವ ವಹಿಸಲಿ.. ಅಧಿಕಾರ ವಹಿಸಿದವರೆಲ್ಲ ಭೇಟಿ ಕೊಡುವ ಜಾಗಗಳಲ್ಲಿ ರಾಜ್ ಮನೆಯೂ ಇತ್ತು. ರಾಜ್ ಮರೆಯಾಗುವುದರೊಂದಿಗೆ ಆ ಸಂಪ್ರದಾಯಕ್ಕೆ ಬ್ರೇಕ್ ಬಿತ್ತು. ಆ ಹಳೆಯ ಸಂಪ್ರದಾಯಕ್ಕೆ ಡಿಕೆ ಮತ್ತೆ ನಾಂದಿ ಹಾಡುತ್ತಿದ್ದಾರಾ..? ಕುತೂಹಲದ ವಿಷಯ.