` sathish neenasam, - chitraloka.com | Kannada Movie News, Reviews | Image

sathish neenasam,

  • ಆಗ ಪುನೀತ್.. ಈಗ ಚಂಬಲ್.. ಅದೇ ಜೇಕಬ್ ವರ್ಗಿಸ್

    prithvi then, sathish now.. its jacob verghese

    ಚಂಬಲ್, ಡಿ.ಕೆ.ರವಿ ಅವರ ಬಯೋಪಿಕ್ ಅಂತೆ.. ಎನ್ನುವ ಕಾರಣಕ್ಕೇ ವಿಚಿತ್ರ ಕುತೂಹಲ ಹುಟ್ಟಿಸಿರುವ ಸಿನಿಮಾ. ಜೊತೆಗೆ ಚಿತ್ರದ ಮೇಕಿಂಗ್ ಕೂಡಾ ಗಮನ ಸೆಳೆಯುತ್ತಿದೆ. ಅಂದಹಾಗೆ ಚಿತ್ರದ ನಿರ್ದೇಶಕ ಜೇಕಬ್ ವರ್ಗಿಸ್.

    ಹಲವು ವರ್ಷಗಳ ಹಿಂದೆ, ಜೇಕಬ್ `ಪೃಥ್ವಿ' ಸಿನಿಮಾ ಮಾಡಿದ್ದರು. ಗಣಿಗಾರಿಕೆಯ ವಿರುದ್ಧ ಹೋರಾಡುವ ಜಿಲ್ಲಾಧಿಕಾರಿಯಾಗಿ ನಟಿಸಿದ್ದವರು ಪುನೀತ್ ರಾಜ್‍ಕುಮಾರ್. ಆಗ, ರೆಡ್ಡಿಗಳು ಮೆರೆಯುತ್ತಿದ್ದ ಕಾಲ. ಸ್ವತಃ ದೇವೇಗೌಡರೇ ನೋಡಿ ಮೆಚ್ಚಿಕೊಂಡಿದ್ದ ಚಿತ್ರವದು.

    ಈಗ ಮತ್ತೊಮ್ಮೆ ಜಿಲ್ಲಾಧಿಕಾರಿ ಕಥೆ ಕೈಗೆತ್ತಿಕೊಂಡಿರುವ ಜೇಕಬ್ ವರ್ಗಿಸ್, ನೀನಾಸಂ ಸತೀಶ್ ಅವರನ್ನು ಜಿಲ್ಲಾಧಿಕಾರಿ ಮಾಡಿದ್ದಾರೆ. ಇದೇ ವಾರ ತೆರೆಗೆ ಬರುತ್ತಿರುವ ಚಂಬಲ್, ಕುತೂಹಲ ಹೆಚ್ಚುತ್ತಲೇ ಹೋಗುತ್ತಿದೆ.

  • ಆಗ ಲೂಸಿಯಾ.. ಈಗ ಚಂಬಲ್.. ಅದೇ ಅದೃಷ್ಟ..

    then lucia.. now chambal in movieland

    2013.. ನೀನಾಸಂ ಸತೀಶ್ ಪಾಲಿಗೆ ಅದೃಷ್ಟದ ವರ್ಷ. ಸತೀಶ್ ನಾಯಕರಾಗಿದ್ದು ಅದೇ ವರ್ಷ. ಲೂಸಿಯಾ ಚಿತ್ರದ ಮೂಲಕ ಮನೆ ಮಾತಾದವರು ನೀನಾಸಂ ಸತೀಶ್.

    2018.. ಸತೀಶ್ ಪಾಲಿಗೆ ಮತ್ತೊಂದು ಮಹತ್ವದ ವರ್ಷ. ಅವರ ಚಂಬಲ್ ಸಿನಿಮಾ ಬಿಡುಗಡೆಯಾಗುತ್ತಿದೆ. ಅಯೋಗ್ಯ ಚಿತ್ರದ ಸೂಪರ್ ಸಕ್ಸಸ್ ಗುಂಗಿನಲ್ಲಿರುವ ಸತೀಶ್‍ಗೆ ಚಂಬಲ್ ಮಹತ್ವದ ಸಿನಿಮಾ. ಇಲ್ಲಿಯೇ ಅವರನ್ನು ಅದೃಷ್ಟದೇವತೆ ಕಾಯುತ್ತಿರುವುದು.

    2013ರಲ್ಲಿ ಲೂಸಿಯಾ ರಿಲೀಸ್ ಆಗಿದ್ದ ಅದೇ ಮೂವಿಲ್ಯಾಂಡ್ ಥಿಯೇಟರಿನಲ್ಲಿ ಚಂಬಲ್ ತೆರೆ ಕಾಣುತ್ತಿದೆ. ಲೂಸಿಯಾ, ಮೂವಿಲ್ಯಾಂಡ್‍ನಲ್ಲಿ 70 ದಿನ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಬಾರಿ ಚಂಬಲ್, 100 ದಿನ ಪ್ರದರ್ಶನ ಕಾಣಲಿ ಅನ್ನೋದು ಅಭಿಮಾನಿಗಳ ಹಾರೈಕೆ.

    ಚಂಬಲ್, ಇದೇ ವಾರ ರಾಜ್ಯದಾದ್ಯಂತ 200ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಪ್ರದರ್ಶನ ಕಾಣಲಿದೆ.

    Related Articles :-

    Then Lucia, Now Chambal for Movieland

  • ಏನಮ್ಮಿ.. ಏನಮ್ಮಿ.. ಧ್ರುವ ಸರ್ಜಾರಿಂದ..

    dhruva sarja to release ayogya songs

    ಅಯೋಗ್ಯ. ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ರಿಲೀಸ್‍ಗೂ ಮೊದಲೇ ಖುಷಿಯಾಗೋಕೆ ಕಾರಣ, ಚಿತ್ರದ ಆಡಿಯೋ ರೈಟ್ಸ್ ಒಳ್ಳೆಯ ರೇಟ್‍ಗೆ ಸೇಲ್ ಅಗಿರೋದು. ಚಿತ್ರದ ಹಾಡುಗಳನ್ನು ಇಷ್ಟಪಟ್ಟು ಆನಂದ್ ಆಡಿಯೋದವರು ಒಳ್ಳೆಯ ಮೊತ್ತಕ್ಕೆ ಖರೀದಿಸಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ಹಾಡುಗಳು ಮಾಸ್ ಮತ್ತು ಕ್ಲಾಸ್‍ಗೆ ಇಷ್ಟವಾಗುವಂತಿವೆ.

    ಚಿತ್ರದ ಮೊದಲ ಹಾಡು ರಿಲೀಸ್ ಮಾಡುತ್ತಿರುವುದು ಧ್ರುವ ಸರ್ಜಾ. ಹಳ್ಳಿ ಸೊಗಡಿನಲ್ಲಿ ಮೂಡಿ ಬಂದಿರೋ ಏನಮ್ಮಿ.. ಏನಮ್ಮಿ.. ಹಾಡನ್ನು ಧ್ರುವ ಸರ್ಜಾ ಬಿಡುಗಡೆ ಮಾಡಲಿದ್ದಾರೆ. ವಿಜಯ್ ಪ್ರಕಾಶ್ ಮತ್ತು ಪಲಕ್ ಮುಚಾಲ್ ಹಾಡಿರುವ ಹಾಡು, ಸತೀಶ್ ಮತ್ತು ರಚಿತಾ ಮೇಲೆ ಚಿತ್ರೀಕರಿಸಿರುವ ಹಾಡು.

    ಚಮಕ್ ನಂತರ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ನಿರ್ಮಿಸಿರುವ ಸಿನಿಮಾ ಅಯೋಗ್. ಅವರು ಮತ್ತೊಂದು ಹಿಟ್ ಎದುರು ನೋಡುತ್ತಿದ್ದಾರೆ.

  • ಐತಿಹಾಸಿಕ ಚಿತ್ರದಲ್ಲಿ ನೀನಾಸಂ ಸತೀಶ್

    ಐತಿಹಾಸಿಕ ಚಿತ್ರದಲ್ಲಿ ನೀನಾಸಂ ಸತೀಶ್

    ನೀನಾಸಂ ಸತೀಶ್ ಚಿತ್ರಗಳೆಂದರೆ ರೊಮ್ಯಾಂಟಿಕ್, ಕಾಮಿಡಿ ಮತ್ತು ಆ್ಯಕ್ಷನ್ ಚಿತ್ರಗಳು ಅನ್ನೋದು ಪ್ರೇಕ್ಷಕರ ಯೋಚನೆ. ಆದರೆ ಅದನ್ನೂ ಮೀರಿದ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ ಸತೀಶ್. ಐತಿಹಾಸಿಕ ಚಿತ್ರಕ್ಕೆ ಓಕೆ ಎಂದಿದ್ದಾರೆ. ಸಮುದಾಯವೊಂದರ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಸದ್ಯಕ್ಕಿರೋ ಮಾಹಿತಿ.

    ಸತೀಶ್ ಎಂತಹ ಪಾತ್ರಕ್ಕಾದರೂ ಸೈ ಅನ್ನೋದು ಈಗಾಗಲೇ ಗೊತ್ತಾಗಿದೆ. ಡ್ರಾಮಾ, ಲೂಸಿಯಾ, ಬ್ಯೂಟಿಫುಲ್ ಮನಸುಗಳು, ಅಯೋಗ್ಯ.. ಇತ್ಯಾದಿ ಚಿತ್ರಗಳನ್ನು ನೋಡಿದವರಿಗೆ ಸತೀಶ್ ಅವರ ಅಭಿನಯದ ತಾಕತ್ತೇನು ಅನ್ನೋದು ಗೊತ್ತಿದೆ. ರಂಗಭೂಮಿಯಿಂದ ಬಂದವರಾದ್ದರಿಂದ ಭಾಷೆಯ ಮೇಲೆ ಹಿಡಿತವೂ ಅದ್ಭುತವಾಗಿದೆ. ಐತಿಹಾಸಿಕ ಚಿತ್ರಗಳಿಗೆ ಬೇಕಿರೋ ಅತ್ಯಂತ ದೊಡ್ಡ ಶಕ್ತಿ ಅದು, ಸಂಭಾಷಣೆಯನ್ನು ಸರಿಯಾಗಿ ಹೇಳೋದು. ಸ್ಸೋ.. ಸತೀಶ್ ಅವರಿಗೆ ಪಾತ್ರ ಯಾವುದೇ ಆದರೂ ಸವಾಲಿನದ್ದಂತೂ ಆಗಿರೋದಿಲ್ಲ. ಆ ಚಿತ್ರದ ಟೈಟಲ್ ಇದೇ 15ರಂದು ರಿಲೀಸ್ ಆಗುತ್ತಿದೆ.

    ವಿನೋದ್ ವಿ.ದೊಂಡಾಳೆ ಈ ಚಿತ್ರದ ನಿರ್ದೇಶಕರಾಗಿದ್ದು, ನರಹರಿ ನಿರ್ಮಾಪಕರಾಗಿದ್ದಾರೆ. 15ರಂದೇ ಚಿತ್ರದ ಶೀರ್ಷಿಕೆ ಬಹಿರಂಗವಾಗಲಿದೆ. ಸದ್ಯಕ್ಕಂತೂ ಸತೀಶ್ ಕೈತುಂಬಾ ಚಿತ್ರಗಳಿವೆ. ಪೆಟ್ರೋಮ್ಯಾಕ್ಸ್, ದಸರಾ, ಮ್ಯಾಟ್ನಿ, ಗೋದ್ರಾ ರಿಲೀಸ್ ಆಗೋಕೆ ಸಿದ್ಧವಾಗಿವೆ. ತಮಿಳಿನಲ್ಲೂ ಒಂದು ಸಿನಿಮಾ ಕಂಪ್ಲೀಟ್ ಮಾಡಿದ್ದಾರೆ.

  • ಐಶಾನಿ ಶೆಟ್ಟಿಯ ಕಾಜಿಗೆ ಭರಪೂರ ಮೆಚ್ಚುಗೆ

    aishani shetty's kaaji gets good response

    ವಾಸ್ತುಪ್ರಕಾರ, ನಡುವೆ ಅಂತರವಿರಲಿ ಚಿತ್ರಗಳ ಮೂಲಕ ಖ್ಯಾತಿಗೆ ಬಂದಿರುವ ನಟಿ. ನಟಿಯಾಗಿ ಡಿಮ್ಯಾಂಡ್ ಇರುವಾಗಲೇ ನಿರ್ದೇಶನಕ್ಕೆ ಕೈ ಹಾಕಿ ಗೆದ್ದಿದ್ದಾರೆ ಐಶಾನಿ. ಐಶಾನಿ ನಿರ್ದೇಶನದ ಕಾಜಿ ಕಿರುಚಿತ್ರ, ಈಗ ಯೂಟ್ಯೂಬ್‍ನಲ್ಲಿ ಲಭ್ಯವಿದೆ. ಕಾಜಿ ಕಿರುಚಿತ್ರದ ನಿರ್ಮಾಪಕ, ನೀನಾಸಂ ಸತೀಶ್. ಅವರೇ ಈಗ ಚಿತ್ರವನ್ನು ಸತೀಶ್ ಆಡಿಯೋ ಆನ್‍ಲೈನ್ ಪೇಜ್‍ನಲ್ಲಿ ರಿಲೀಸ್ ಮಾಡಿದ್ದಾರೆ.

    ಕಾಜಿ, ಅಮ್ಮಂದಿರ ಕುರಿತಾದ ಕಿರುಚಿತ್ರ. ಈಗಾಗಲೇ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ, ಸೈಮಾ, ಪಿಂಕ್ ಸಿಟಿ ಇಂಟರ್‍ನ್ಯಾಷನಲ್ ಅವಾರ್ಡ್ ಚಿತ್ರೋತ್ಸವಗಳಲ್ಲಿ ಹಲವು ಪ್ರಶಸ್ತಿ ಗೆದ್ದಿದ್ದ ಕಾಜಿ, ಈಗ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಕಿರುಚಿತ್ರದಲ್ಲಿ ಹಿತಾ ಚಂದ್ರಶೇಖರ್, ಇಂಚರಾ, ವಿದ್ಯಾ, ಮಧುರ ಚೆನ್ನಿಗ, ಸುಬ್ಬಣ್ಣ ಮೊದಲಾದವರು ನಟಿಸಿದ್ದಾರೆ.

  • ಕಥೆ ಕೇಳದೆ ಚಂಬಲ್ ಓಕೆ ಅಂದ್ರಂತೆ ಸೋನು ಗೌಡ

    sonu gowda accepted chambal for director

    ಚಂಬಲ್ ಚಿತ್ರದ ನಾಯಕ ನೀನಾಸಂ ಸತೀಶ್. ನಾಯಕಿ ಸೋನು ಗೌಡ. ಸತೀಶ್ ಜಿಲ್ಲಾಧಿಕಾರಿ ಪಾತ್ರದಲ್ಲಿ ನಟಿಸಿದ್ದರೆ, ಸೋನು ಗೌಡ ಡಿಸಿಯ ಪತ್ನಿ ಸುಮ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

    `ನನ್ನದು ಸುಮ ಎಂಬ ಪಾತ್ರ. ಮುಗ್ದ ಹುಡುಗಿ. ಗಂಡ, ಮನೆಯೇ ಅವಳ ಪ್ರಪಂಚ. ಸೀರೆ, ಕುರ್ತಾದಲ್ಲಿಯೇ ಕಾಣಿಸಿಕೊಳ್ಳುವ, ಗಂಡನ ಪ್ರತಿಯೊಂದು ಕೆಲಸಕ್ಕೂ ಬೆನ್ನೆಲುಬಾಗಿ ನಿಲ್ಲುವ ಪಾತ್ರ' ಎಂದಿದ್ದಾರೆ ಸೋನುಗೌಡ.

    ಆದರೆ, ಅವರು ಸಿನಿಮಾಗೆ ಓಕೆ ಎನ್ನುವದಕ್ಕೂ ಮೊದಲು ನಿರ್ದೇಶಕರ ಬಳಿ ಕಥೆಯನ್ನೇ ಕೇಳಲಿಲ್ಲವಂತೆ. ಏಕೆಂದರೆ, ಅವರಿಗೆ ಜೇಕಬ್ ವರ್ಗಿಸ್ ಅವರ ಹಿಂದಿನ ಸಿನಿಮಾಗಳು ಗೊತ್ತಿತ್ತು. ಅವರು ಕಥೆ ಹೇಳುವ ಶೈಲಿಯೂ ಗೊತ್ತಿತ್ತು. ಕೇವಲ ಅದೊಂದು ನಂಬಿಕೆಯಿಂದ ಚಿತ್ರಕ್ಕೆ ಯೆಸ್ ಎಂದೆ. ನಾನೇ ಚಿತ್ರದ ನಾಯಕಿ ಎನ್ನುವುದು ನನಗೆ ಗೊತ್ತಾಗಿದ್ದು ಸೆಟ್‍ಗೆ ಹೋದ ಮೇಲೆ ಎಂದಿದ್ದಾರೆ ಸೋನು ಗೌಡ.

  • ಕನ್ನಡ ದಸರಾಗೆ ತೆಲುಗಿನ ದಸರಾ ವಿಲನ್

    ಕನ್ನಡ ದಸರಾಗೆ ತೆಲುಗಿನ ದಸರಾ ವಿಲನ್

    ದಸರಾ. ಈ ಚಿತ್ರದ ಹೆಸರನ್ನು ನೀವು ಕೇಳಿರುತ್ತೀರಿ. ಇದು ನೀನಾಸಂ ಸತೀಶ್ ಹೀರೋ ಆಗಿರೋ ಸಿನಿಮಾ. ಸತೀಶ್ ಎದುರು ಶರ್ಮಿಳಾ ಮಾಂಡ್ರೆ & ರುಕ್ಮಿಣಿ ವಿಜಯ ಕುಮಾರ್ ನಟಿಸಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಶರ್ಮಿಳಾ ಮಾಂಡ್ರೆ ಅವರೇ ಪ್ರೊಡ್ಯೂಸರ್. ಅರವಿಂದ ಶಾಸ್ತ್ರಿ ನಿರ್ದೇಶಕ. ಈ ಚಿತ್ರಕ್ಕೀಗ ವಿಲನ್ ಆಗಿರೋದು ತೆಲುಗಿನ ದಸರಾ.

    ತೆಲುಗಿನಲ್ಲಿ ನಾನಿ ಅನ್ನೋ ಹೀರೋನ ಚಿತ್ರವೊಂದು ಟೀಸರ್ ರಿಲೀಸ್ ಮಾಡಿದೆ. ತೆಲುಗಿನ ಆ ಚಿತ್ರದ ಟೈಟಲ್ ಕೂಡಾ ದಸರಾ. ಕನಿಷ್ಠ ಕನ್ನಡ ವರ್ಷನ್‍ನಲ್ಲಾದರೂ ಟೈಟಲ್ ಚೇಂಜ್ ಮಾಡದೆ ಗೇಮ್ ಆಡಿದೆ ತೆಲುಗಿನ ದಸರಾ ಟೀಂ.

    ಕನ್ನಡದಲ್ಲಿ 2020ರಲ್ಲಿಯೇ ಶುರುವಾಗಿರುವ ದಸರಾ ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ತೆಲುಗಿನ ದಸರಾ ತಂಡದವರು ಕನಿಷ್ಠ ಕನ್ನಡದಲ್ಲಾದರೂ ಟೈಟಲ್ ಚೇಂಜ್ ಮಾಡುವಂತೆ ಸೂಚಿಸಿ ಎಂದು ಶರ್ಮಿಳಾ ಮಾಂಡ್ರೆ ಫಿಲಂ ಚೇಂಬರ್‍ಗೆ ದೂರು ಕೊಟ್ಟಿದ್ದಾರೆ.

  • ಕನ್ನಡದಲ್ಲಿ ತೆರೆಗೆ ಬರುತ್ತಿದೆ `ಗೋದ್ರಾ' - ಅದು ಗೋದ್ರಾ ಹತ್ಯಾಕಾಂಡದ ಕಥೇನಾ..?

    godhra image

    ಗೋದ್ರಾ ಹತ್ಯಾಕಾಂಡ. ಭಾರತದ ಇತಿಹಾಸದ ಕರಾಳ ಘಟನೆ. ಚಲಿಸುತ್ತಿದ್ದ ರೈಲಿಗೆ ಬೆಂಕಿ ಹಚ್ಚಿ, ರೈಲಿನಲ್ಲಿದ್ದ 50ಕ್ಕೂ ಹೆಚ್ಚು ಆರ್‍ಎಸ್‍ಎಸ್ ಕಾರ್ಯಕರ್ತರನ್ನು ಕೊಲ್ಲಲಾಗಿತ್ತು. ಅದಕ್ಕೆ ಪ್ರತಿಯಾಗಿ ನಡೆದ ಗೋದ್ರೋತ್ತರ ಹಿಂಸಾಚಾರವಂತೂ ಇನ್ನೂ ಭೀಕರವಾಗಿತ್ತು. ಈ ಕುರಿತು ಇದುವರೆಗೆ ಬಾಲಿವುಡ್ ಕೂಡಾ ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿಲ್ಲ. ಅಂಥಾದ್ದರಲ್ಲಿ ಕನ್ನಡದಲ್ಲಿ ಗೋದ್ರಾ ಎಂಬ ಹೆಸರಿನ ಚಿತ್ರವೊಂದು ಸೆಟ್ಟೇರುತ್ತಿದೆ.

    ನೀನಾಸಂ ಸತೀಶ್ ನಾಯಕರಾಗಿರುವ ಚಿತ್ರಕ್ಕೆ ಶ್ರದ್ಧಾ ಶ್ರೀನಾಥ್ ಹೀರೋಯಿನ್. ಜೇಕಬ್ ವರ್ಗಿಸ್ ಅವರ ಬಳಿ ಸಹಾಯಕರಾಗಿದ್ದ ನಂದೀಶ್ ಈ ಚಿತ್ರದ ನಿರ್ದೇಶಕ. ಅವರಿಗಿದು ಮೊದಲ ಪ್ರಯತ್ನ.

    ಗೋದ್ರಾ ಎಂಬ ಹೆಸರಿದ್ದರೂ, ಚಿತ್ರದ ಕಥೆಗೂ, ಗೋದ್ರಾ ಹತ್ಯಾಕಾಂಡಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ ನಂದೀಶ್. ಆದರೆ, ತಮ್ಮ ಚಿತ್ರದ ಕಥೆಗೆ ಈ ಹೆಸರೇ ಸೂಕ್ತ ಎನ್ನುವ ಮೂಲಕ ಸಣ್ಣದೊಂದು ಗೊಂದಲ ಸೃಷ್ಟಿಸುತ್ತಾರೆ.

    ಇದು ಪೊಲಿಟಿಕಲ್ ಡ್ರಾಮಾ ಎನ್ನುತ್ತಾರೆ ಶ್ರದ್ಧಾ. ಇದುವರೆಗೆ ಇಂಥಾದ್ದೊಂದು ಪ್ರಬುದ್ಧ ಪಾತ್ರ ಸಿಕ್ಕಿರಲಿಲ್ಲ ಎನ್ನುತ್ತಾರೆ ನೀನಾಸಂ ಸತೀಶ್. ನೋಡೋಣ.. ಚಿತ್ರದಲ್ಲಿ ಇನ್ನೂ ಏನೇನಿರುತ್ತೋ..?

  • ಗಂಟೆ ಹೊಡೆದ್ರೆ ಶಿವ..ತಮಟೆ ಹೊಡೆದ್ರೆ ಯಮ

    tiger galli

    ಗಂಟೆ ಹೊಡೆದ್ರೆ ಶಿವ..ತಮಟೆ ಹೊಡೆದ್ರೆ ಯಮ. ಇಂಥಾದ್ದೊಂದು ಡೈಲಾಗ್‍ನ್ನು ನೀನಾಸಂ ಸತೀಶ್ ಹೇಳುತ್ತಿದ್ದರೆ, ಆ ಅಬ್ಬರಕ್ಕೆ ಬೆಚ್ಚಿ ಬೀಳಬೇಕು. ಅದು ಟೈಗರ್ ಗಲ್ಲಿ ಸಿನಿಮಾದ ಹೈಲೈಟ್. ತಿಗಳರ ಪೇಟೆಯ ಪೀಡೆಸಂದಿಯಲ್ಲಿ ನಡೆದ ನೈಜಕಥೆಯ ಸುತ್ತ ಹೆಣೆದಿರುವ ಸಿನಿಮಾ, ತನ್ನ ಅಬ್ಬರದಿಂದಲೇ ಅಚ್ಚರಿ ಮೂಡಿಸುತ್ತೆ.

    ಸತೀಶ್, ಬ್ಯೂಟಿಫುಲ್ ಮನಸುಗಳು ನಂತರ ನಟಿಸಿರುವ ಸಿನಿಮಾ ಟೈಗರ್ ಗಲ್ಲಿ. ನಿರ್ದೇಶಕ ರವಿ ಶ್ರೀವತ್ಸ ಅಂತೂ ಎಷ್ಟೋ ಬಾರಿ ಬೆಳಗ್ಗೆ 7ಕ್ಕೆ ಶೂಟಿಂಗ್ ಶುರು ಮಾಡಿ, ರಾತ್ರಿ 2 ಗಂಟೆವರೆಗೂ ಚಿತ್ರೀಕರಣ ನಡೆಸಿದ್ದಾರಂತೆ. ಭಾವನೆಗಳನ್ನು ವ್ಯಕ್ತಪಡಿಸಲು ನನಗೆ ಈ ಚಿತ್ರದಲ್ಲಿ ಸಿಕ್ಕಷ್ಟು ಅವಕಾಶಗಳು ಈ ಹಿಂದಿನ ಯಾವ ಚಿತ್ರದಲ್ಲೂ ಸಿಕ್ಕಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ ಸತೀಶ್.

    ಚಿತ್ರದಲ್ಲಿ ರೊಮ್ಯಾನ್ಸ್, ಅಮ್ಮನ ಸೆಂಟಿಮೆಂಟ್, ರೌಡಿಸಂನ ಅಬ್ಬರ, ಫೈಟ್ಸ್ ಎಲ್ಲವೂ ಇದೆ. ಒಟ್ಟಿನಲ್ಲಿ ಟೈಗರ್ ಗಲ್ಲಿ ಬೆಂಗಳೂರಿನ ವಾಸನೆ ಇರುವ ಚಿತ್ರ ಎನ್ನುವುದು ರವಿ ಶ್ರೀವತ್ಸ ಪ್ರಾಮಿಸ್.

  • ಗೋದ್ರಾಗೆ 4ನೇ ಸಂಗೀತ ನಿರ್ದೇಶಕ ಎಂಟ್ರಿ

    4th music director entera godhra

    ಒಂದು ಚಿತ್ರಕ್ಕೆ ಸಾಮಾನ್ಯವಾಗಿ ಎಷ್ಟು ಸಂಗೀತ ನಿರ್ದೇಶಕರಿರುತ್ತಾರೆ. ಕಾಮನ್ ಆಗಿ ಒಬ್ಬರು ಇರುತ್ತಾರೆ. ವಿಶೇಷ ಚಿತ್ರಗಳಲ್ಲಿ ಹಿನ್ನೆಲೆ ಸಂಗಿತಕ್ಕೇ ಒಬ್ಬರಿದ್ದರೆ, ಹಾಡುಗಳಿಗಾಗಿಯೇ ಮತ್ತೊಬ್ಬರಿರುತ್ತಾರೆ. ಅಫ್‍ಕೋರ್ಸ್.. ಕನ್ನಡದಲ್ಲಿ ಏಳೆಂಟು ಸಂಗೀತ ನಿರ್ದೇಶಕರನ್ನು ಒಂದೇ ಚಿತ್ರದಲ್ಲಿ ಬಳಸಿರುವ ದಾಖಲೆಯೂ ಇದೆ. ಆದರೆ, ಈ ನಿಟ್ಟಿನಲ್ಲಿ ಗೋದ್ರಾ ಡಿಫರೆಂಟ್ ಆಗಿ ಹೆಜ್ಜೆಯಿಟ್ಟಿದೆ. ಆ ಚಿತ್ರಕ್ಕೀಗ 4ನೇ ಸಂಗೀತ ನಿರ್ದೇಶಕ ಎಂಟ್ರಿ ಕೊಟ್ಟಿದ್ದಾರೆ.

    ಗೋದ್ರಾ ಘೋಷಣೆಯಾದಾಗ ಜೂಡಾ ಸ್ಯಾಂಡಿ ಒಬ್ಬರೇ ಮ್ಯೂಸಿಕ್ ಡೈರೆಕ್ಟರ್ ಅನ್ನೋ ಪ್ಲಾನ್ ಇತ್ತು. ಅದಾದ ಮೇಲೆ ಮಾಸ್ ಹಾಡೊಂದಕ್ಕೆ ನವೀನ್ ಸಜ್ಜು ಕೊಟ್ಟ ಮ್ಯೂಸಿಕ್ ಇಷ್ಟವಾಯ್ತು. ನಂತರ ಟೋನಿ ಜೋಸೆಫ್ ಕೇಳಿಸಿದ ಟ್ಯೂನುಗಳು ಇಷ್ಟವಾದವು. ಅದಾದ ಮೇಲೆ ಚಿತ್ರಕ್ಕೆ ಬ್ಯಾಕ್‍ಗ್ರೌಂಡ್ ಮ್ಯೂಸಿಕ್ ರಾ ಇರಬೇಕು ಎನ್ನಿಸಿತು. ಹೀಗಾಗಿ ಕೆಪಿ (ಕೃಷ್ಣಪ್ರಸಾದ್) ಅವರನ್ನು ಕರೆತರಲಾಯ್ತು ಎಂದಿದ್ದಾರೆ ನಿರ್ದೇಶಕ ನಂದೀಶ್.

    ನೀನಾಸಂ ಸತೀಶ್, ಶ್ರದ್ಧಾ ಶ್ರೀನಾಥ್ ಅಭಿನಯದ ಚಿತ್ರದ ಶೂಟಿಂಗ್ ಮುಗಿದಿದ್ದು, ರೀ ರೆಕಾರ್ಡಿಂಗ್ ನಡೆಯುತ್ತಿದೆ. ಪ್ಲಾನ್ ಪ್ರಕಾರವೇ ಎಲ್ಲವೂ ನಡೆದರೆ ಮೇ ತಿಂಗಳಲ್ಲಿ ಗೋದ್ರಾ ರಿಲೀಸ್ ಆಗಬಹುದು.

  • ಗೋದ್ರಾದಲ್ಲಿ ವಾಜಪೇಯಿ ಬಂದಿರೋದೇಕೆ..?

    why was vajpaye's statement mentioned in godhra

    ನೀನಾಸಂ ಸತೀಶ್ ಅಭಿನಯದ ಗೋದ್ರಾ ಚಿತ್ರದ ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಪೋಸ್ಟರ್ ಶುರುವಾಗುವುದೇ ವಾಜಪೇಯಿ ಅವರ ಪ್ರಖ್ಯಾತ ಹೇಳಿಕೆಯೊಂದಿಗೆ. ಜಾತ್ಯತೀತವಾಗಿಲ್ಲದೇ ಇದ್ದರೆ, ಅದು ಭಾರತವೇ ಅಲ್ಲ ಎಂಬ ಘೋಷದೊಂದಿಗೆ.

    ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ಶ್ರದ್ಧಾ ಶ್ರೀನಾಥ್, ಸೋನು ಗೌಡ, ರಕ್ಷಾ ಸೋಮಶೇಖರ್.. ಎಲ್ಲರ ಲುಕ್ ಪರಿಚಯವೂ ಮೋಷನ್ ಪೋಸ್ಟರ್‍ನಲ್ಲಿ ಸಿಗುತ್ತೆ. ಆದರೆ.. ವಾಜಪೇಯಿ ಬಂದಿದ್ದೇಕೆ, ಎಮರ್ಜೆನ್ಸಿ ಪ್ರಸ್ತಾಪ ಏಕೆ.. ಎಂಬ ಕುತೂಹಲಗಳು ಹಾಗೆಯೇ ಉಳಿದುಬಿಡುತ್ತವೆ.

    ಕೆ.ಎಸ್.ನಂದೀಶ್ ನಿರ್ದೇಶನದ ಗೋದ್ರಾ ಚಿತ್ರಕ್ಕೆ ಜಾಕಬ್ ಫಿಲ್ಮ್ಸ್ ಮತ್ತು ಲೀಡರ್ ಫಿಲ್ಮ್ಸ್ ನಿರ್ಮಾಪಕರು.

     

  • ಚಂಬಲ್ ಅನ್ನೋ ಟೈಟಲ್ ಇಟ್ಟಿದ್ದೇಕೆ..?

    there is a reason behind chambal's title

    ಚಂಬಲ್ ಎಂದರೆ ಥಟ್ಟಂತ ನೆನಪಿಗೆ ಬರೋದು ಪೂಲನ್ ದೇವಿ. ಆ ಕಣಿವೆಯ ಡಕಾಯಿತರು. ಚಂಬಲ್ ಕಣಿವೆ ಡಕಾಯಿತಿಗೆ ಫೇಮಸ್. ಅಂತಾದ್ದೊಂದು ಡಕಾಯಿತರೊಂದಿಗೇ ಅಂಟಿಕೊಂಡಿರುವ ಹೆಸರನ್ನು ತಮ್ಮ ಚಿತ್ರದ ಟೈಟಲ್ ಮಾಡಿರುವುದು ಏಕೆ ಅನ್ನೋ ಪ್ರಶ್ನೆ ನೀನಾಸಂ ಸತೀಶ್ ಮತ್ತು ಜೇಕಬ್ ವರ್ಗಿಸ್ ಅವರಿಗೆ ಪದೇ ಪದೇ ಎದುರಾಗಿದೆ.

    ಚಂಬಲ್ ಕಣಿವೆಯಲ್ಲಿ ಒಂದೇ ವೇಷದ ಡಕಾಯಿತರಿದ್ದರು. ಆದರೆ, ಇಲ್ಲಿ.. ಈಗ ಹಲವು ವೇಷದ ಡಕಾಯಿತರಿದ್ದಾರೆ. ವೈಟ್ ಕಾಲರ್ ದರೋಡೆಕೋರರು. ಅವರು ನಮ್ಮ ಪಕ್ಕದಲ್ಲೇ ಇದ್ದುಕೊಂಡು, ಎಲ್ಲವನ್ನೂ ಕಬಳಿಸಿಕೊಂಡು, ನಮ್ಮಿಂದಲೇ ಗೌರವ ಪಡೆಯುತ್ತಿದ್ದಾರೆ. ಅಂತಹವರ ಮಧ್ಯೆ ಹುಲಿಯಂತೆ ನುಗ್ಗಿ ಹೋರಾಡುವ ಅಧಿಕಾರಿಯೊಬ್ಬನ ಕಥೆ ಚಂಬಲ್. ಹೀಗಾಗಿಯೇ ಚಿತ್ರಕ್ಕೆ ಚಂಬಲ್ ಅನ್ನೋ ಟೈಟಲ್ ಕೊಟ್ಟೆವು ಎನ್ನುತ್ತಾರೆ ಸತೀಶ್ ಮತ್ತು ವರ್ಗಿಸ್.

    ನೀನಾಸಂ ಸತೀಶ್ ಜಿಲ್ಲಾಧಿಕಾರಿಯಾಗಿ, ಸೋನು ಗೌಡ ಸತೀಶ್ ಪತ್ನಿಯಾಗಿ ನಟಿಸಿರುವ ಚಿತ್ರ ಪಕ್ಕಾ ಕ್ರೈಂ ಥ್ರಿಲ್ಲರ್. 

  • ಚಂಬಲ್ ಚಿತ್ರಕ್ಕೀಗ ರೋರಿಂಗ್ ಪವರ್

    sri murali releases chambal's mass song

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿ, ಧನುಷ್ ಅವರಿಂದ ಟೀಸರ್ ರಿಲೀಸ್, ನೆಟ್‍ಫ್ಲಿಕ್ಸ್‍ನವರಿಂದ 10 ಕೋಟಿ ಡಿಮ್ಯಾಂಡ್ ಬಂದರೂ ನೋ ಎಂದಿದ್ದ ಚಿತ್ರತಂಡ.. ಹೀಗೆ ಹಲವು ವಿಶೇಷತೆ ಇಟ್ಟುಕೊಂಡಿರುವ ಚಂಬಲ್ ಚಿತ್ರಕ್ಕೆ ಈಗ ರೋರಿಂಗ್ ಸ್ಟಾರ್ ಶ್ರೀಮುರಳಿ ಪವರ್ ಕೂಡಾ ಸಿಕ್ಕಿದೆ.

    ನೀನಾಸಂ ಸತೀಶ್ ಅವರ ಚಂಬಲ್ ಚಿತ್ರದ ಮಾಸ್ ಸಾಂಗ್‍ನ್ನು ರಿಲೀಸ್ ಮಾಡಿರುವ ಶ್ರೀಮುರಳಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದ ಕಥೆ ಸ್ಪೆಷಲ್ಲಾಗಿದೆ. ಹಾಡುಗಳಲ್ಲಿ ಜೋಶ್ ಇದೆ ಎಂದಿದ್ದಾರೆ ಶ್ರೀಮುರಳಿ.

    ನೀನಾಸಂ ಸತೀಶ್ ಅವರಿಗೆ ಸೋನು ಗೌಡ ನಾಯಕಿ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನದ ಸಿನಿಮಾ, ರಿಲೀಸ್‍ಗೆ ರೆಡಿಯಾಗಿದೆ.

  • ಚಂಬಲ್ ತುಂಬಾ ಡ್ರಾಮಾ.. ಡ್ರಾಮಾ.. ಸೀನಿಯರ್ಸ್

    theater artists play major role in chambal

    ಚಂಬಲ್ ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ಚಿತ್ರದ ತಾರಾಬಳಗ ನೋಡಿದವರಿಗೆ ಒಂದು ಅಚ್ಚರಿಯಿದೆ. ಇಡೀ ಚಿತ್ರದಲ್ಲಿ 25ಕ್ಕೂ ಹೆಚ್ಚು ರಂಗಭೂಮಿ ಕಲಾವಿದರೇ ತುಂಬಿ ಹೋಗಿದ್ದಾರೆ. ಹಲವು ಜನರನ್ನು ಇದುವರೆಗೆ ನೀವು ಬೆಳ್ಳಿತೆರೆಯಲ್ಲಿ ನೋಡಿರೋಕೆ ಸಾಧ್ಯವೇ ಇಲ್ಲ. ಎಲ್ಲವೂ.. ಎಲ್ಲರೂ.. ಫ್ರೆಶ್.

    ನಾಯಕ ನಟ ನೀನಾಸಂ ಸತೀಶ್, ರಂಗಭೂಮಿಯಿಂದ ಬಂದವರೇ. ಇನ್ನು ನಿರ್ದೇಶಕ ಜೇಕಬ್ ಕೂಡಾ ರಂಗಭೂಮಿ ನಂಟು ಇರುವವರೇ. ವಿಲನ್ ಆಗಿರುವುದೂ ರಂಗಭೂಮಿಯಿಂದಲೆ ಬಂದಿರುವ ಅಚ್ಯುತ್ ಕುಮಾರ್.

    ಇವರೆಲ್ಲರ ಜೊತೆಗೆ ಜಂಬೆ, ಕೈಲಾಶ್, ಕಿರಣ್ ನಾಯಕ್, ಮಾಂಟೇಶ್, ಸರ್ದಾರ್ ಸತ್ಯ ಮೊದಲಾದವರೆಲ್ಲ ಚಿತ್ರದಲ್ಲಿ ನಟಿಸಿದ್ದಾರೆ. 25ಕ್ಕೂ ಹೆಚ್ಚು ರಂಗಭೂಮಿಯವರೇ ಚಿತ್ರದಲ್ಲಿದ್ದಾರೆ. 

  • ಚಂಬಲ್ ರಿಸ್ಕ್ - ನೀನಾಸಂ ಸತೀಶ್ ಈ ಮಾತು ಲೈಫೇ ಕಷ್ಟ ಎನ್ನುವವರಿಗೆ ಸ್ಫೂರ್ತಿ

    sathish ninsam explains risk management before chambal release

    ಇದೇ ವಾರ ರಿಲೀಸ್ ಆಗುತ್ತಿರುವ ಚಂಬಲ್ ಸಿನಿಮಾ, ನೀನಾಸಂ ಸತೀಶ್ ತೆಗೆದುಕೊಳ್ಳುತ್ತಿರುವ ಅತಿ ದೊಡ್ಡ ರಿಸ್ಕ್ ಹೌದಾ..? ಹೀಗೊಂದು ಪ್ರಶ್ನೆ, ಸತೀಶ್ ಅವರ ಮುಂದಿದೆ. ಅಫ್‍ಕೋರ್ಸ್.. ಈ ರೀತಿಯ ಸಬ್ಜೆಕ್ಟ್, ನೀನಾಸಂ ಸತೀಶ್ ಅವರಿಗೆ ಖಂಡಿತಾ ಹೊಸದು. ಅಷ್ಟೇ ಅಲ್ಲ, ಅವರು ಇದುವರೆಗೆ ಗೆದ್ದಿರುವುದು ಮಂಡ್ಯ ಸ್ಟೈಲ್ ಪಾತ್ರಗಳಿಂದ. ಹೀಗಾಗಿಯೇ ಇಂಥಾದ್ದೊಂದು ಪ್ರಶ್ನೆಯನ್ನ ಸತೀಶ್ ಮುಂದಿಟ್ಟರೆ, ಅವರು ಹೇಳೋದೇನು ಗೊತ್ತಾ..?

    `ಬೆಂಗಳೂರಿನ ಜನರಿಗೆ ಟ್ರಾಫಿಕ್ ನಡುವೆಯೂ ಗಾಡಿ ಓಡಿಸೋದು, ರಸ್ತೆ ದಾಟೋದು ಅತಿ ದೊಡ್ಡ ರಿಸ್ಕ್. ಹಾಗೆಯೇ ಹೀರೋ ಆಗುವುದು ದೊಡ್ಡ ರಿಸ್ಕ್. ಗೆಲುವು ಸಿಕ್ಕಮೇಲೆ ಅದನ್ನು ಕಾಪಾಡಿಕೊಳ್ಳುವುದೂ ಅತಿ ದೊಡ್ಡ ರಿಸ್ಕ್. ಮನೆ ಕಟ್ಟೋದು, ಮದುವೆ, ಮಕ್ಕಳು.. ಪ್ರತಿಯೊಂದು ಕೂಡಾ ಜೀವನದಲ್ಲಿ ನಾವು ತೆಗೆದುಕೊಳ್ಳುವ ರಿಸ್ಕುಗಳೇ. ಪ್ರೇಕ್ಷಕರು ನನ್ನ ಈ ಚಿತ್ರವನ್ನು ಮೆಚ್ಚಿಕೊಂಡರೆ ಅಷ್ಟೇ ಸಾಕು' ಅಂತಾರೆ ಸತೀಶ್.

    ಜೇಕಬ್ ವರ್ಗಿಸ್ ನಿರ್ದೇಶನದ ಚಂಬಲ್ ಸಿನಿಮಾದಲ್ಲಿ ಡಿ.ಕೆ.ರವಿ ಕಥೆಯಿದೆ ಎನ್ನುತ್ತಿದ್ದರೂ, ಅದನ್ನು ಸತೀಶ್ ಒಪ್ಪಿಕೊಳ್ಳಲ್ಲ. ಟ್ರೇಲರುಗಳಲ್ಲಿ ಅಂತಹ ಸುಳಿವು ಸಿಕ್ಕರೂ, ಇದು ಹಲವು ಸತ್ಯಕಥೆಗಳನ್ನಾಧರಿಸಿದ ಸಿನಿಮಾ ಎನ್ನುವ ಸತೀಶ್, ಇದು ಡಿ.ಕೆ. ರವಿ ಲೈಫ್‍ಸ್ಟೋರಿ ಅಲ್ಲ ಎಂದು ನಾನು ಹೇಳಲ್ಲ ಎನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಡ್ತಾರೆ. 

  • ಚಂಬಲ್.. 100% ಡಿಕೆ ರವಿ ಸಿನಿಮಾ..!

    chambal talks about dk ravi's life

    ಡಿ.ಕೆ.ರವಿ, 2015ರ ಮಾರ್ಚ್ 15ರಂದುನಿಗೂಢವಾಗಿ ಸಾವನ್ನಪ್ಪಿದ ಅಧಿಕಾರಿ. 2009ನೇ ಬ್ಯಾಚ್‍ನ ಈ ಐಎಎಸ್ ಅಧಿಕಾರಿಯ ಸಾವು ಹೇಗಾಯ್ತು..? ಏಕಾಯ್ತು..? ಅದು ಕೊಲೆಯಾ..? ಆತ್ಮಹತ್ಯೆಯಾ..? ಎಂಬ ಪ್ರಶ್ನೆಗಳಿಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಡಿಕೆ ರವಿ ಸಾವು, ಕೊಲೆ ಎಂದವರು ಕೂಡಾ ಈಗ ಮಾತನಾಡುತ್ತಿಲ್ಲ. ಮಾರ್ಚ್ 16, 2015. ಆ ದಿನ ಡಿ.ಕೆ.ರವಿ ಶವ, ಅವರದ್ದೇ ಅಪಾರ್ಟ್‍ಮೆಂಟಿನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಿಬಿಐ ತನಿಖೆಯೂ ಯಾವುದೇ ಸುಳಿವು ಕೊಟ್ಟಿಲ್ಲ. 

    ಹೀಗಿರುವಾಗ.. ಅವರ ಸಾವಿನ ಕುರಿತೇ ರೆಡಿಯಾಗಿದೆ ಚಂಬಲ್ ಸಿನಿಮಾ. ಸಿನಿಮಾ ತಂಡದವರು ಈ ಗುಟ್ಟು ಹೇಳುತ್ತಿಲ್ಲ. ಒಪ್ಪಿಕೊಳ್ಳುತ್ತಿಲ್ಲ. ಆದರೆ, ಚಂಬಲ್ ಸಿನಿಮಾದ ಟ್ರೇಲರ್ ನೋಡಿದವರಿಗೆ ಥಟ್ಟಂತ ನೆನಪಾಗೋದು ಡಿ.ಕೆ.ರವಿ ಕಥೆ.

    ನೀನಾಸಂ ಸತೀಶ್ ನಾಯಕರಾಗಿರೋ ಸಿನಿಮಾಗೆ ಜೇಕಬ್ ವರ್ಗಿಸ್ ನಿರ್ದೇಶಕ. ಪುನೀತ್ ರಾಜ್‍ಕುಮಾರ್ ಅವರ ಪೃಥ್ವಿ ಸಿನಿಮಾ ಮಾಡಿದ್ದ ಜೇಕಬ್, ಮತ್ತೊಮ್ಮೆ ಡಿಸಿ ಕಥೆಯನ್ನೇ ಎತ್ತಿಕೊಂಡಿದ್ದಾರೆ. ಸಿನಿಮಾ ಇನ್ನೂ ಯಾವ್ಯಾವ ರಹಸ್ಯ ಸ್ಫೋಟಿಸಲಿದೆಯೋ..?

  • ಚಂಬಲ್‍ನಲ್ಲಿ ಪವರ್ ಸ್ಟಾರ್

    chambal teaser will have powerstar puneeth's voice

    ನೀನಾಸಂ ಸತೀಶ್ ಅಭಿನಯದ ಜೇಕಬ್ ವರ್ಗಿಸ್ ನಿರ್ದೇಶನದ ಚಿತ್ರ ಚಂಬಲ್, ರಿಲೀಸ್‍ಗೆ ರೆಡಿಯಾಗಿದೆ. ಕಾರ್ಪೊರೇಟ್ ಜಗತ್ತಿನ ಕಥೆಯಂತೆ ಕಾಣುತ್ತಿರುವ ಚಂಬಲ್, ಥ್ರಿಲ್ಲರ್ ಸಿನಿಮಾ. ಈ ಸಿನಿಮಾಗೆ ನೆಟ್‍ಫ್ಲಿಕ್ಸ್‍ನವರು 10 ಕೋಟಿ ಕೊಟ್ಟು ಖರೀದಿಸುವ ಆಫರ್ ಕೊಟ್ಟರೂ ಬೇಡ ಎಂದು ತಿರಸ್ಕರಿಸಿ ಥಿಯೇಟರಿಗೆ ಬರುತ್ತಿರುವ ಚಿತ್ರವಿದು. ಈ ಚಿತ್ರಕ್ಕೀಗ ಹೊಸ ಪವರ್ ಸಿಕ್ಕಿದೆ. ಆ ಹೊಸ ಪವರ್ ಕೊಟ್ಟಿರೋದು ಪವರ್‍ಸ್ಟಾರ್ ಪುನೀತ್ ರಾಜ್ ಕುಮಾರ್.

    ಚಂಬಲ್ ಚಿತ್ರಕ್ಕೆ ಪುನೀತ್ ರಾಜ್‍ಕುಮಾರ್ ಕಂಠದಾನ ಮಾಡಿದ್ದು, ಟೀಸರ್‍ನಲ್ಲಷ್ಟೇ ಅಲ್ಲ, ಇಡೀ ಚಿತ್ರದಲ್ಲಿ ಪುನೀತ್ ಧ್ವನಿ ಇರಲಿದೆಯಂತೆ. ರಾಜರಥ ಚಿತ್ರದಲ್ಲಿಯೂ ಹೀಗೆಯೇ ಪುನೀತ್ ಧ್ವನಿ ಬಳಸಿಕೊಳ್ಳಲಾಗಿತ್ತು.

    ಪೃಥ್ವಿ, ಸವಾರಿ ಚಿತ್ರಗಳನ್ನು ಡೈರೆಕ್ಷನ್ ಮಾಡಿದ್ದ ಜೇಕಬ್ ವರ್ಗಿಸ್, ಚಿತ್ರದ ನಿರ್ಮಾಪಕರಲ್ಲೂ ಒಬ್ಬರು. ಸೋನು ಗೌಡ, ಕಿಶೋರ್ ಚಿತ್ರದಲ್ಲಿ ನಟಿಸಿದ್ದಾರೆ.

  • ಟೈಗರ್ ಗಲ್ಲಿಯಲ್ಲಿ 10 ನಿರ್ದೇಶಕರು..!

    tiger galli movie image

    ಬಿಡುಗಡೆಗೆ ಸಿದ್ಧವಾಗಿರುವ ಟೈಗರ್ ಗಲ್ಲಿ ಅಬ್ಬರದಿಂದಲೇ ಬರುತ್ತಿದೆ. ಚಿತ್ರದಲ್ಲಿ ಎಲ್ಲಿ ನೋಡಿದರೂ ಅಬ್ಬರ. ಪ್ರತಿ ಪಾತ್ರದಲ್ಲೂ ಕಾಣಿಸುತ್ತಿರುವುದು ಆಕ್ರೋಶ. ಈ ಚಿತ್ರದ ವಿಶೇಷವೇನು ಗೊತ್ತಾ..? ಈ ಚಿತ್ರದಲ್ಲಿ ಬರೋಬ್ಬರಿ 9 ನಿರ್ದೇಶಕರಿದ್ದಾರೆ. 

    ಹೌದು, ಈ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಒಬ್ಬರೇ. ಆದರೆ, ಚಿತ್ರದಲ್ಲಿ ಕೆಲಸ ಮಾಡಿರುವುದು ಒಟ್ಟು 9 ನಿರ್ದೇಶಕರು. ಶಿವಮಣಿ, ಸಾಯಿಕೃಷ್ಣ, ಅಯ್ಯಪ್ಪ ಪಿ. ಶರ್ಮಾ, ಆನಂದ್, ಗಿರಿರಾಜ್, ಮ್ಯಾಥ್ಯೂ ರಾಜನ್, ಥ್ರಿಲ್ಲರ್ ಮಂಜು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಚಿತ್ರಕಥೆಯಲ್ಲಿ ಕೆ.ವಿ. ರಾಜು ಅವರು ಸಹಾಯ ಮಾಡಿದ್ದಾರೆ. ಅಲ್ಲಿಗೆ ಚಿತ್ರಕ್ಕೆ ದುಡಿದ ನಿರ್ದೇಶಕರ ಒಟ್ಟು ಸಂಖ್ಯೆ 10ಕ್ಕೆ ತಲುಪಿದೆ.

    ಇನ್ನು ಇವರಲ್ಲಿ ಬಹುತೇಕರು ಚಿತ್ರ ನಿರ್ಮಾಣದಲ್ಲೂ ಕೈ ಆಡಿಸಿದವರು. ನಾಯಕ ನೀನಾಸಂ ಸತೀಶ್ ಸೇರಿದಂತೆ ಬಹುತೇಕ ನಿರ್ದೇಶಕರು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದವರೇ. ಒಟ್ಟಿನಲ್ಲಿ ಟೈಗರ್ ಗಲ್ಲಿಯಲ್ಲಿ ಕುತೂಹಲ ಹುಟ್ಟಿಸುವ ಅಂಶಗಳಿಗಂತೂ ಬರವೇ ಇಲ್ಲ.

    Related Articles :-

    ಶಿವಣ್ಣನಿಗೆ ಅವಾಜ್ ಹಾಕಿದ್ದಕ್ಕೆ ಟೈಗರ್ ಗಲ್ಲಿಗೆ ಎಂಟ್ರಿ..

    ಗಂಟೆ ಹೊಡೆದ್ರೆ ಶಿವ..ತಮಟೆ ಹೊಡೆದ್ರೆ ಯಮ

    ಬೆಂಗಳೂರಿನ ಟೈಗರ್ ಗಲ್ಲಿ ಎಲ್ಲಿದೆ ಗೊತ್ತಾ..?

    ಮೂವರು ಬೇಡ ಎಂದಿದ್ದು ನೀನಾಸಂಗೆ ಸಿಕ್ಕಿತು..!

    Tiger Galli On October 27th

    Tiger Galli Postponed To October

  • ಟೈಗರ್ ಗಲ್ಲಿಯಲ್ಲಿ ನಾಲ್ವರು ನಿರ್ಮಾಪಕರ ಮಕ್ಕಳು

    tiger galli

    ಟೈಗರ್ ಗಲ್ಲಿ ಚಿತ್ರದಲ್ಲಿ 10 ನಿರ್ದೇಶಕರು ಒಟ್ಟಿಗೇ ಕೆಲಸ ಮಾಡಿದ್ದಾರೆ ಅನ್ನೋದನ್ನು ಓದಿದ್ದೀರಿ. ಇದು ಅಂಥದ್ದೇ ಇನ್ನೊಂದು ಸ್ವಾರಸ್ಯ. ಈ ಚಿತ್ರದಲ್ಲಿ ಮೂವರು ನಿರ್ಮಾಪಕರ ಮಕ್ಕಳು ಒಟ್ಟಿಗೇ ನಟಿಸಿದ್ದಾರೆ. ಚಿತ್ರದಲ್ಲಿ ನಟಿಸಿರುವ ಯೋಗೇಶ್ ಕುಮಾರ್, ಲಕ್ಷ್ಮೀಕಾಂತ್, ದೀಪು ಹಾಗೂ ದೀಪಕ್ ಕುಮಾರ್ ನಿರ್ಮಾಪಕರ ಮಕ್ಕಳು.

    ನಿಮಾಪಕರಾದ ಎಂ.ಎನ್.ಕುಮಾರ್, ಆರ್.ಎಸ್.ಗೌಡ, ಜಿ.ಜಿ. ಕೃಷ್ಣ ಹಾಘೂ ಶೋಭಾ ರಾಜಣ್ಣ ಅವರ ಮಕ್ಕಳು. ಇವರೆಲ್ಲರೂ ಚಿತ್ರದಲ್ಲಿ ನಟಿಸಿದ್ದರೂ, ವಿಲನ್ ಪಾತ್ರಗಳಲ್ಲೇ ಇದ್ಧಾರೆ. ನಿರ್ಮಾಪಕರ ಮಕ್ಕಳು ಎಂಬ ಕಾರಣಕ್ಕೆ ಯಾವುದೇ ಬಿಲ್ಡಪ್ ಇಲ್ಲ ಎನ್ನುವುದು ವಿಶೇಷ. 

    ಇಡೀ ತಂಡ ಸುನಾಮಿಯಂತೆ. ಆರಂಭದಿಂದ ಅಂತ್ಯದವರೆಗೆ ಬೆಂಕಿ ಉಗುಳುತ್ತಲೇ ಇರುತ್ತೆ. ಒಂದೇ ಒಂದು ಕ್ಷಣವೂ ವಿರಮಿಸುವುದಿಲ್ಲ. ಚಿತ್ರ ನೋಡನೋಡುತ್ತಲೇ ಒಂದು ವಿಚಿತ್ರ ತಲ್ಲಣ, ತಳಮಳ ಸೃಷ್ಟಿಸುತ್ತಲೇ ಇರುತ್ತೆ. ಚಿತ್ರದ ಪ್ರತಿ ಪಾತ್ರವೂ ಬೆಂಕಿ ಉಗುಳುತ್ತೆ ಎಂದಿದ್ದಾರೆ ನಿರ್ದೇಶಕ ರವಿ ಶ್ರೀವತ್ಸ.

  • ಟ್ಯಾಗ್‍ಲೈನ್‍ನ್ನು ಕೊನೆಗೂ ಕೈಬಿಟ್ಟ ಅಯೋಗ್ಯ..

    ayogya tagline changed

    ಅಯೋಗ್ಯ. ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಅಭಿನಯದ ಈ ಸಿನಿಮಾದ ಟೈಟಲ್ ವಿವಾದಕ್ಕೊಳಗಾಗಿತ್ತು. ಅಯೋಗ್ಯ ಚಿತ್ರದ ಜೊತೆ ಗ್ರಾಮ ಪಂಚಾಯ್ತಿ ಸದಸ್ಯ ಎಂಬ ಟ್ಯಾಗ್‍ಲೈನ್ ಇತ್ತು. ಅಯೋಗ್ಯ ಮತ್ತು ಗ್ರಾಮ ಪಂಚಾಯ್ತಿ ಸದಸ್ಯ ಎಂದು ಬದಲಿಸೋಕೆ ಕೂಡಾ ಗ್ರಾಮ ಪಂಚಾಯ್ತಿ ಸದಸ್ಯರು ಒಪ್ಪಿರಲಿಲ್ಲ. ಕೊನೆಗೂ ಈ ವಿವಾದ ಫಿಲಂಚೇಂಬರ್‍ನಲ್ಲೇ ಇತ್ಯರ್ಥವಾಗಿದೆ.

    ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಚಿತ್ರದ ಟ್ಯಾಗ್‍ಲೈನ್‍ಗೆ ವಿರೋಧ ವಯ್ಕ್ತಪಡಿಸಿದರು. ಕೊನೆಗೆ ಚಿತ್ರದ ಶೀರ್ಷಿಕೆಯಲ್ಲಿ ಟ್ಯಾಗ್‍ಲೈನ್ ತೆಗೆದು, ಅಯೋಗ್ಯ ಟೈಟಲ್‍ನ್ನು ಮಾತ್ರ ಉಳಿಸಿಕೊಳ್ಳಲು ಫಿಲಂಚೇಂಬರ್ ಒಪ್ಪಿತು. ಹೀಗಾಗಿ ಚಿತ್ರದ ಪೋಸ್ಟರ್‍ಗಳಲ್ಲಿ, ಟೈಟಲ್ ಕಾರ್ಡ್‍ನಲ್ಲಿ ಅಯೋಗ್ಯ ಎಂದು ಮಾತ್ರ ಇರಲಿದೆ. ಚಂದ್ರಶೇಖರ್ ನಿರ್ಮಾಣದ ಚಿತ್ರಕ್ಕೆ ಮಹೇಶ್ ಕುಮಾರ್ ನಿರ್ದೇಶನವಿದೆ.