` sathish neenasam, - chitraloka.com | Kannada Movie News, Reviews | Image

sathish neenasam,

  • ಅಕ್ಟೋಬರ್ 18ರವರೆಗೆ ಹಿಡ್ಕ ಹಿಡ್ಕ ವಸಿ ತಡ್ಕ ತಡ್ಕ

    bramachari songs to release on oct 18th

    ಬ್ರಹ್ಮಚಾರಿ 100% ವರ್ಜಿನ್ ಚಿತ್ರ ರಿಲೀಸ್ ಆಗುವ ಸಮಯ ಹತ್ತಿರವಾಗುತ್ತಿದ್ದಂತೆ. ಚಿತ್ರದ ಒಂದು ಲಿರಿಕಲ್ ವಿಡಿಯೋ ಬಿಡುಗಡೆಗೆ ಚಿತ್ರತಂಡ ಮುಂದಡಿಯಿಟ್ಟಿದೆ. ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ..  ತಡ್ಕ ತಡ್ಕ ವಸಿ ತಡ್ಕ ತಡ್ಕ.. ಹಾಡು. ನೀನಾಸಂ ಸತೀಶ್ ಮತ್ತು ಆದಿತಿ ಪ್ರಭುದೇವ ಹೆಜ್ಜೆ ಹಾಕಿರುವ ಅರ್ಧಪೋಲಿ ಗೀತೆ ಎನ್ನುವ ಸುಳಿವು ಇದೆ.

    ಧರ್ಮ ವಿಶ್ ಅವರಿಗೆ ಇದು ಕೂಡಾ ತಮ್ಮ ಶ್ಯಾನೆ ಟಾಪಾಗವ್ಳೆ ಶೈಲಿಯಲ್ಲಿ ಹಿಟ್ ಆಗತ್ತೆ ಅನ್ನೋ ನಂಬಿಕೆಯಿದೆ. ಮುರಳಿ ಮಾಸ್ಟರ್ ಕೊರಿಯೋಗ್ರಫಿ ಇದೆ. ಅವರ ಜೊತೆ ನಾನು ಮಾಡಿದ ಹಾಡುಗಳೆಲ್ಲ ಹಿಟ್ ಎಂದು ನೆನಪಿಸಿಕೊಳ್ತಾರೆ ಸತೀಶ್.

    ಡ್ರಾಮಾ ಚಿತ್ರದ ತುಂಡೈಕ್ಳ ಸಾವಾಸ, ಲೂಸಿಯಾದ ಜುಮ್ಮ ಜುಮ್ಮ, ಲವ್ ಇನ್ ಮಂಡ್ಯದ ಎಲ್ಲ ಹಾಡು, ಅಯೋಗ್ಯ ಚಿತ್ರದ ಇಂಟ್ರೊಡಕ್ಷನ್ ಸಾಂಗ್.. ಹೀಗೆ ಎಲ್ಲ ಹಾಡುಗಳೂ ಹಿಟ್. ಇದೂ ಹಿಟ್ ಆಗಲಿದೆ ಎನ್ನುವುದು ಸತೀಶ್ ನಂಬಿಕೆ.

    ಭರಾಟೆ ಚಿತ್ರ ರಿಲೀಸ್ ಆಗುವ ದಿನ ಅಕ್ಟೋಬರ್ 18ರಂದು ಅದೇ ಚಿತ್ರದ ನಿರ್ದೇಶಕ ಚೇತನ್ ಬರೆದಿರುವ ಈ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ. ಇದು ಬರಹಗಾರನಿಗೆ ನಿರ್ಮಾಪಕ ಉದಯ್ ಕೆ. ಮೆಹ್ತಾ, ನಿರ್ದೇಶಕ ಚಂದ್ರಮೋಹನ್ ನೀಡುತ್ತಿರುವ ಕೊಡುಗೆ ಎನ್ನಬಹುದು.

  • ಅಗಲಿದ ಗೆಳೆಯ : ಸಂಭ್ರಮವನ್ನೆಲ್ಲಾ ದೂರವಿಟ್ಟ ನೀನಾಸಂ ಸತೀಶ್

    ಅಗಲಿದ ಗೆಳೆಯ : ಸಂಭ್ರಮವನ್ನೆಲ್ಲಾ ದೂರವಿಟ್ಟ ನೀನಾಸಂ ಸತೀಶ್

    ನೀನಾಸಂ ಸತೀಶ್ ಮತ್ತು ಸಂಚಾರಿ ವಿಜಯ್ ಇಬ್ಬರೂ ಪರಮಾಪ್ತ ಗೆಳೆಯರು. ವಿಜಯ್ ಅಂತಿಮ ಕ್ಷಣಗಳಲ್ಲಿ ಜೊತೆಯಲ್ಲಿ ನಿಂತಿದ್ದ ಸತೀಶ್, ಗೆಳೆಯನ ಅಗಲಿಕೆಯ ನೋವಿನಿಂದ ಹೊರಬಂದಿಲ್ಲ. ವಿಜಯ್ ಅಗಲಿಕೆ ಬೆನ್ನಲ್ಲೇ ಅವರ ಹುಟ್ಟುಹಬ್ಬವೂ ಇತ್ತು. ಜೂನ್ 20ರಂದು ಸತೀಶ್ ಅವರ ಹುಟ್ಟುಹಬ್ಬ.

    ಸತೀಶ್ ಅವರ ಹುಟ್ಟುಹಬ್ಬಕ್ಕೆಂದೇ ಅವರ ಚಿತ್ರಗಳ ತಂಡದವರು ಸ್ಪೆಷಲ್ ಪ್ಲಾನ್ ಮಾಡಿಕೊಂಡಿದ್ದರು. ಪೆಟ್ರೋಮ್ಯಾಕ್ಸ್ ಚಿತ್ರದ ಟೀಸರ್ ರಿಲೀಸ್ ಆಗಬೇಕಿತ್ತು. ಬೇರೆ ಬೇರೆ ಚಿತ್ರಗಳ ತಂಡದವರೂ ವಿಶೇಷ ಯೋಜನೆ ರೂಪಿಸಿಕೊಂಡಿದ್ದರು. ಅವೆಲ್ಲಕ್ಕೂ ಸತೀಶ್ ಬ್ರೇಕ್ ಹಾಕಿದ್ದಾರೆ. ಹುಟ್ಟುಹಬ್ಬದ ಆಚರಣೆಯನ್ನೂ ನಿಲ್ಲಿಸಿದ್ದಾರೆ. ಜೂನ್ 20ರಂದು ಸತೀಶ್, ಹರಿಪ್ರಿಯಾ, ವಿಜಯ್ ಪ್ರಸಾದ್ ಕಾಂಬಿನೇಷನ್‍ನ ಪೆಟ್ರೋಮ್ಯಾಕ್ಸ್ ಟೀಸರ್ ರಿಲೀಸ್ ಆಗುತ್ತಿಲ್ಲ. 

  • ಅಡೆತಡೆ ಗೆದ್ದ ಅಯೋಗ್ಯ, ಆಂಧ್ರ ಸವಾರಿಗೆ ರೆಡಿ

    ayogya to release in andhra

    ಅಯೋಗ್ಯ. ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್ ಅಭಿನಯದ ಸಿನಿಮಾ. ಕಳೆದೊಂದು ವಾರದಿಂದ ಬಾಕ್ಸಾಫೀಸ್‍ನಲ್ಲಿ ಮ್ಯಾಜಿಕ್ ಮಾಡಿರುವ ಅಯೋಗ್ಯ, ಈಗ ಆಂಧ್ರಪ್ರದೇಶಕ್ಕೂ ಕಾಲಿಟ್ಟಿದೆ. ಅದೂ ಅಡೆತಡೆಗಳನ್ನು ದಾಟಿ ಹೈದರಾಬಾದ್‍ನಲ್ಲಿ ತೆರೆ ಕಾಣುತ್ತಿದೆ.

    ನಿರ್ಮಾಪಕ ಟಿ.ಆರ್.ಚಂದ್ರಶೇಖರ್, ಸಿನಿಮಾವನ್ನು ಹೈದರಾಬಾದ್‍ನ ಮಲ್ಟಿಪ್ಲೆಕ್ಸ್‍ಗಳಲ್ಲಿ ರಿಲೀಸ್ ಮಾಡೋಕೆ ರೆಡಿಯಾಗಿದ್ದರು. ಆದರೆ, ಅಲ್ಲಿನ ಫಿಲಂ ಚೇಂಬರ್, ಹೈದರಾಬಾದ್‍ನಲ್ಲಿ ಕನ್ನಡ ಸಿನಿಮಾ ಬಿಡುಗಡೆಗೆ ಒಪ್ಪಿಗೆ ಕೊಡಬೇಕಿತ್ತು. ಈ ಹೊಸ ತಕರಾರಿನ ವಿರುದ್ಧ ಚಿತ್ರತಂಡ ಗರಂ ಆಗಿತ್ತು. ಸತೀಶ್, ಬಹಿರಂಗವಾಗಿಯೇ ಆಂಧ್ರಪ್ರದೇಶ ಫಿಲಂಚೇಂಬರ್ ವಿರುದ್ಧ ಸಿಟ್ಟಾಗಿದ್ದರು. ಅವರ ಸಿನಿಮಾಗಳನ್ನು ನಮ್ಮಲ್ಲಿ ಇಷ್ಟಬಂದಂತೆ ಬಿಡುಗಡೆ ಮಾಡ್ತಾರೆ. ಆದರೆ, ನಮ್ಮ ಸಿನಿಮಾಗಳನ್ನು ಅಲ್ಲಿ ಬಿಡುಗಡೆ ಮಾಡೋಕೆ ಇಲ್ಲದ ಷರತ್ತು ಹಾಕ್ತಾರೆ ಎಂದು ಆಕ್ರೋಶಗೊಂಡಿದ್ದರು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಪ್ರವೇಶದಿಂದ ವಿವಾದ ಬಗೆಹರಿದಿದ್ದು, ಮುಂದಿನ ವಾರದಿಂದ ಹೈದರಾಬಾದ್ ಮಲ್ಟಿಪ್ಲೆಕ್ಸುಗಳಲ್ಲಿ 6 ಸ್ಕ್ರೀನುಗಳಲ್ಲಿ ಅಯೋಗ್ಯ ಚಿತ್ರ ಪ್ರದರ್ಶನಗೊಳ್ಳಲಿದೆ. ಒಂದು ಯಶಸ್ವಿ ಚಿತ್ರವನ್ನು ಹೊರರಾಜ್ಯದಲ್ಲಿ ಬಿಡುಗಡೆ ಮಾಡೋಕೆ ಎದುರಾಗುವ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ ನಿರ್ದೇಶಕ ಮಹೇಶ್ ಕುಮಾರ್.

  • ಅದ್ಧೂರಿ ಅಯೋಗ್ಯ 

    ayogya is sathish's biggest film

    ನೀನಾಸಂ ಸತೀಶ್ ಅವರ ಈ ಹಿಂದಿನ ಎಲ್ಲ ಚಿತ್ರಗಳಿಗಿಂತ ಅಯೋಗ್ಯ ಸ್ಪೆಷಲ್. ಏಕೆ ಗೊತ್ತಾ..? ಇಷ್ಟು ದೊಡ್ಡ ಮಟ್ಟದಲ್ಲಿ ಸತೀಶ್ ಅವರ ಹಿಂದಿನ ಯಾವ ಸಿನಿಮಾಗಳೂ ತೆರೆ ಕಂಡಿರಲಿಲ್ಲ. 

    ಕರ್ನಾಟಕದಲ್ಲೇ 300ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಅಯೋಗ್ಯ ರಿಲೀಸ್ ಆಗುತ್ತಿದೆ. ದೇಶದ 16 ರಾಜ್ಯಗಳಲ್ಲಿ ಹಾಗೂ 66 ದೇಶಗಳಲ್ಲಿಏಕಕಾಲಕ್ಕೆ ರಿಲೀಸ್ ಆಗುತ್ತಿರುವುದು ಅಯೋಗ್ಯನ ದಾಖಲೆ.

    ಸಿನಿಮಾ ಶುರುವಾಗಿ ಹೆಚ್ಚೂ ಕಡಿಮೆ 1 ವರ್ಷವಾಗಿದೆ. ಚಿತ್ರದ 4 ಹಾಡುಗಳೂ ಹಿಟ್ ಆಗಿವೆ. ಸಾಮಾನ್ಯವಾಗಿ ಸಿನಿಮಾದ ಒಂದು ಹಾಡು ಹಿಟ್ ಆದರೆ ಸಾಕು, ಚಿತ್ರತಂಡ ಹ್ಯಾಪಿಯಾಗಿಬಿಡುತ್ತೆ. ಆದರೆ, ಅಯೋಗ್ಯನ 4 ಹಾಡುಗಳೂ ಹಿಟ್ ಆಗಿರುವುದು ಚಿತ್ರತಂಡಕ್ಕೆ ಡಬಲ್ ಖುಷಿ. ಜೊತೆಗೆ ಚಿತ್ರದ ಮೂಲಕ ಸತೀಶ್, ಮತ್ತೊಮ್ಮೆ ಮಂಡ್ಯ ಸ್ಟೈಲ್‍ಗೆ ವಾಪಸ್ ಆಗಿದ್ದಾರೆ.

    ಸಿನಿಮಾದಲ್ಲಿರೋದು ಹಳ್ಳಿಯ ಕಥೆ. ಬಚ್ಚೇಗೌಡ ಮತ್ತು ಸಿದ್ದೇಗೌಡ ಎಂಬ ಇಬ್ಬರ ಫೈಟಿಂಗ್ ಸ್ಟೋರಿ. ರವಿಶಂಕರ್ ಮತ್ತು ನೀನಾಸಂ ಸತೀಶ್... ಮುಖಾಮುಖಿಯಾಗಿರೋದು ಇದೇ ಮೊದಲು. ರಚಿತಾ ರಾಮ್ ಜೊತೆ ನೀನಾಸಂ ಸತೀಶ್ ಕೂಡಾ ಇದೇ ಮೊದಲು. ನಿರ್ದೇಶಕ ಮಹೇಶ್ ಕುಮಾರ್‍ಗೆ ಇದು ಫಸ್ಟ್ ಸಿನಿಮಾ. 

    ನಿರ್ಮಾಪಕ ಟಿ.ಆರ್.ಚಂದ್ರಶೇಖರ್, ಅಯೋಗ್ಯ ಚಿತ್ರದ ಕಥೆಯನ್ನು ಇಷ್ಟಪಟ್ಟು, ಅದ್ಧೂರಿಯಾಗಿ ನಿರ್ಮಿಸಿರುವ ಜೊತೆಯಲ್ಲೇ ಅದ್ಧೂರಿಯಾಗಿ ತೆರೆಗೂ ತರುತ್ತಿದ್ದಾರೆ.

  • ಅದ್ಭುತ ದೇಹಸಿರಿಗಾಗಿ ಅಯೋಗ್ಯನ ಕಸರತ್ತು

    sathish ninasam's intense workouts

    ನಿನಾಸಂ ಸತೀಶ್ ಎಂದರೆ ತಕ್ಷಣ ನೆನಪಾಗೋದು ನೀಳಕಾಯದ ನಗುಮೊಗ. ಫೈಟಿಂಗ್, ಸ್ಟಂಟುಗಳಿಗೆ ಹೇಳಿ ಮಾಡಿಸಿದ ದೇಹವಲ್ಲ. ನಟನೆಯ ವಿಚಾರ ಬೇರೆ. ಈಗ ಅದನ್ನೂ ಚಾಲೆಂಜ್ ಆಗಿ ಸ್ವೀಕರಿಸಿರುವ ಸತೀಶ್, ದೇಹವನ್ನು ಹುರಿಗಟ್ಟಿಸುತ್ತಿದ್ದಾರೆ.

    ಪ್ರತಿದಿನ ಜಿಮ್‍ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುತ್ತಿರುವ ಸತೀಶ್, ಇದನ್ನೆಲ್ಲ ಮಾಡ್ತಿರೋದು ಅಯೋಗ್ಯ ಚಿತ್ರಕ್ಕಾಗಿ. ಏಕೆಂದರೆ, ಅಯೋಗ್ಯ ಚಿತ್ರದಲ್ಲಿ ಸತೀಶ್ ಎದುರು ವಿಲನ್ ಆಗಿರುವುದು ರವಿಶಂಕರ್.

    ರವಿಶಂಕರ್ ಅವರ ಆಳ್ತನ, ಅಬ್ಬರದ ಎದುರು ಗರ್ಜಿಸೋಕೆ ನಟನೆಯೊಂದೇ ಸಾಲದು. ಅದಕ್ಕೆ ತಕ್ಕಂತೆ ದೇಹಸಿರಿಯ ಸಪೋರ್ಟ್ ಕೂಡಾ ಬೇಕು. ಹೀಗಾಗಿಯೇ ಇಷ್ಟೆಲ್ಲ ಕಸರತ್ತು ಮಾಡ್ತಿದ್ದೇನೆ ಅಂತಾರೆ ಸತೀಶ್.

    ರಚಿತಾ ರಾಮ್ ನಾಯಕಿಯಾಗಿರುವ ಚಿತ್ರದಲ್ಲಿ ನಿನಾಸಂ ಸತೀಶ್ ಮತ್ತು ರವಿಶಂಕರ್ ರಾಜಕಾರಣಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಚಮಕ್ ಚಂದ್ರಶೇಖರ್ ನಿರ್ಮಾಪಕರು.

  • ಅಪ್ಪನಾಗಿ 6 ವರ್ಷವಾದ ಮೇಲೆ ಅಭಿಮಾನಿಗಳಿಗೆ ಶರಣಾದ ಸತೀಶ್

    ಅಪ್ಪನಾಗಿ 6 ವರ್ಷವಾದ ಮೇಲೆ ಅಭಿಮಾನಿಗಳಿಗೆ ಶರಣಾದ ಸತೀಶ್

    ನೀನಾಸಂ ಸತೀಶ್ ತಮ್ಮ ಪರ್ಸನಲ್ ಮತ್ತು ಸಿನಿಮಾ ಲೈಫ್ ಎರಡರ ಮಧ್ಯೆ ಒಂದು ಅಂತರವಿಟ್ಟುಕೊಂಡೇ ಇದ್ದಾರೆ. ಸುಪ್ರೀತಾರನ್ನು ಮದುವೆಯಾಗಿ ಮಗುವಾಗಿ 6 ವರ್ಷವಾಗಿದೆ. ಆದರೆ ಎಲ್ಲಿಯೂ ಮಗುವಿನ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿರಲಿಲ್ಲ. ಈಗ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮಗಳ ಫೋಟೋ ಹೊರಬಿಟ್ಟಿದ್ದಾರೆ ನೀನಾಸಂ ಸತೀಶ್.

    ಮಗಳು ಮನಸ್ವಿತಳ ಪ್ರೈವೆಸಿ ಕಾರಣಕ್ಕೆ ಫೋಟೋ, ವಿಡಿಯೋ ಹಂಚಿಕೊಂಡಿರಲಿಲ್ಲ. ಅಭಿಮಾನಿಗಳು ಮತ್ತು ಸ್ನೇಹಿತರ ಒತ್ತಾಯದ ಮೇಲೆ ಈ ಚಿತ್ರ ಹಾಕುತ್ತಿದ್ದೇನೆ ಎಂದಿರುವ ಸತೀಶ್ 6 ವರ್ಷದ ಮಗಳು ಮನಸ್ವಿತಳ ಮೊದಲ ವರ್ಷದ ಚಿತ್ರವನ್ನಷ್ಟೇ ಹಾಕಿದ್ದಾರೆ.

  • ಅಯೋಗ್ಯ ನಿರ್ದೇಶಕರು ಹೇಳಿದ ಭಯಾನಕ ಕಥೆ

    ayogya director reveals shocking story

    ಅಯೋಗ್ಯ... ನಿರ್ದೇಶಕ ಮಹೇಶ್ ಕುಮಾರ್‍ಗೆ ಮೊದಲ ಸಿನಿಮಾ. ನೀನಾಸಂ ಸತೀಶ್, ರಚಿತಾ ರಾಮ್ ಕಾಂಬಿನೇಷನ್‍ನ ಮೊದಲ ಚಿತ್ರ. ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವ ಚಿತ್ರದ ಹಿಂದಿನ ಕಥೆ ಯಾವ ಸಿನಿಮಾಗೂ ಕಮ್ಮಿಯಿಲ್ಲ. ಬೆಚ್ಚಿಬೀಳಿಸುವ ಹಾಗಿದೆ. ನಂಬಿಕೆ, ವಿಶ್ವಾಸ, ವಂಚನೆ, ದ್ರೋಹ, ಆತಂಕ.. ಎಲ್ಲವೂ ಮುಗಿದ ಮೇಲೆ ಸುಖಾಂತ್ಯ. ಅಷ್ಟೂ ಕತೆ ಚಿತ್ರದ ಹಿಂದಿದೆ.

    ಅಯೋಗ್ಯ ಚಿತ್ರಕ್ಕೆ ಮೊದಲಿಗೆ ಚಿತ್ರದ ನಿರ್ಮಾಪಕರಾಗಿದ್ದವರು ಟಿ.ಆರ್. ಚಂದ್ರಶೇಖರ್ ಅಲ್ಲ. ಬೇರೊಬ್ಬರು. ಚಿತ್ರಕ್ಕೆ ಮುಹೂರ್ತವೂ ಆಗಿ, ಇನ್ನೇನು ಶೂಟಿಂಗ್ ಶುರುವಾಗಬೇಕು. ಅಷ್ಟು ಹೊತ್ತಿಗೆಆ ನಿರ್ಮಾಪಕರು ಫೋನ್ ಮಾಡಿ, ಶೂಟಿಂಗ್ ಮಾಡಕ್ಕೆ ದುಡ್ಡಿಲ್ಲ ಅಂದುಬಿಟ್ರಂತೆ. ಅದಕ್ಕೂ ಮೊದಲು, ಕಾಸ್ಟ್ಯೂಮ್ ಮಾಡೋಕೆ ನಮ್ಮೂರಿಂದ್ಲೇ ಜನ ಬರ್ತಾರೆ. ಲೈಟಿಂಗೂ ಅವರೇ ಮಾಡ್ತಾರೆ. ಊಟ ಬಡಿಸೋದು, ಸೆಟ್ ಕೆಲಸ ಮಾಡೋದು ಎಲ್ಲ ನಮ್ಮೂರ್ ಹುಡುಗ್ರೇ.. ಎಂದು ಷರತ್ತು ಹಾಕಿದ್ದ ನಿರ್ಮಾಪಕ ಆತ. 

    ಚಿತ್ರದ ನಾಯಕ ನೀನಾಸಂ ಸತೀಶ್ ಹತ್ತಿರಾನೇ 50 ಲಕ್ಷ ರೂಪಾಯಿ ಸಾಲ ಕೇಳಿದ್ದ ಆ ನಿರ್ಮಾಪಕ ಕೈ ಎತ್ತಿಬಿಟ್ಟಾಗ ಆತ್ಮಹತ್ಯೆಗೂ ಯೋಚಿಸಿದ್ದರಂತೆ ಮಹೇಶ್. ಆಗ ಸಮಾಧಾನ ಹೇಳಿದ್ದು ಇದೇ ಸತೀಶ್. ಅವರು ಧೈರ್ಯ ಹೇಳಿ, ನಿರ್ಮಾಪಕ ಚಂದ್ರಶೇಖರ್ ಅವರನ್ನು ಪರಿಚಯ ಮಾಡಿಸಿ, ಅವರೂ ಕಥೆ, ತಾರಾಗಣ, ತಂತ್ರಜ್ಞರು.. ಎಲ್ಲದಕ್ಕೂ ಓಕೆ ಎಂದ ಮೇಲೆ, ಹಳೆಯ ನಿರ್ಮಾಪಕರು ಮತ್ತೊಮ್ಮೆ ಕಿರಿಕ್ ಶುರು ಹಚ್ಚಿಕೊಂಡರಂತೆ. ನಾನು ಖರ್ಚು ಮಾಡಿರುವ ಎಲ್ಲ ಹಣ ವಾಪಸ್ ಕೊಡಿ ಎಂದ. ನನಗೆ ಬೇರೆ ದಾರಿಯೇ ಇರಲಿಲ್ಲ. ಸತೀಶ್ ಟೇಬಲ್ ಮೇಲೆ ಆತ್ಮಹತ್ಯೆ ಪತ್ರ ಬರೆದಿಟ್ಟು ಹೋಗಿಬಿಟ್ಟೆ. ಅದು ಅಲ್ಲಿಗೇ ಮುಗಿಯಲಿಲ್ಲ. ಹಳೆಯ ನಿರ್ಮಾಪಕರ ಟೀಂನವರು ಬಂದು ಕಿಡ್ನಾಪ್ ಮಾಡಿ, ದುಡ್ಡಿಗೆ ಡಿಮ್ಯಾಂಡ್ ಇಟ್ರು. ಆಗ ಸತೀಶ್ ಅವರೇ ಬಂದು ಫಿಲಂ ಚೇಂಬರ್‍ಗೆ ಕರೆದುಕೊಂಡು ಹೋಗಿ ಪಂಚಾಯಿತಿ ಮಾಡಿಸಿ ಇತ್ಯರ್ಥ ಮಾಡಿಸಿದ್ರು. ಇದು ಮಹೇಶ್ ಹೇಳಿರುವ ಕಥೆ.

    ಅಫ್‍ಕೋರ್ಸ್.. ಈಗ ವಿವಾದ ಮುಗಿದಿದೆ. ನಿರ್ಮಾಪಕ ಚಂದ್ರಶೇಖರ್ ಹೀರೋನಂತೆ ಎಂಟ್ರಿ ಕೊಟ್ಟು, ಸಿನಿಮಾದ ಕ್ಲೈಮಾಕ್ಸ್‍ನಲ್ಲಿ ಎಲ್ಲವೂ ಸುಖಾಂತ್ಯವಾಗಿ ಶುಭಂ ಎಂದು ಬರುವಂತೆಯೇ ಚಿತ್ರತಂಡಕ್ಕೂ ಆಗಿದೆ. ಇನ್ನೇನಿದ್ರೂ ಸಂಭ್ರಮದ ಸಮಯ. ಈ ವಾರ ಸಿನಿಮಾ ರಿಲೀಸ್.

  • ಅಯೋಗ್ಯ ಬ್ರಹ್ಮಚಾರಿ ಈಗ ಸ್ಟೂಡೆಂಟ್

    sathish ninasam is rebel student in godhra

    ಹೈಸ್ಕೂಲು ದಾಟದ ಅಯೋಗ್ಯನಾಗಿ, ಬ್ರಹ್ಮಚಾರಿಯಾಗಿ.. ಅಷ್ಟೇ ಏಕೆ.. ಐಎಎಸ್ ಅಧಿಕಾರಿಯೂ ಛಾಪು ಮೂಡಿಸಿದ್ದ ಸತೀಶ್ ನೀನಾಸಂ, ಈಗ ಸ್ಟೂಡೆಂಟ್ ಆಗಿದ್ದಾರೆ. ಇನ್ನೇನು ಶೀಘ್ರದಲ್ಲೇ ರಿಲೀಸ್ ಆಗಲು ರೆಡಿಯಾಗಿರುವ ಗೋದ್ರಾ ಚಿತ್ರದಲ್ಲಿ ಸತೀಶ್ ಅವರದ್ದು ರ್ಯಾಂಕ್ ಸ್ಟೂಡೆಂಟ್ ಪಾತ್ರ.

    ಪ್ರತಿಭಾವಂತ ವಿದ್ಯಾರ್ಥಿ ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ನಿಲ್ಲುತ್ತಾನೆ. ಆಗ ಸೃಷ್ಟಿಯಾಗುವ ಕಥೆಯೇ ಗೋದ್ರಾ. ಇದರಲ್ಲೊಂದು ಪೊಲಿಟಿಕಲ್ ಥ್ರಿಲ್ಲರ್ ಮತ್ತು ಸೊಗಸಾದ ಲವ್ ಸ್ಟೋರಿ ಇದೆ ಎನ್ನುತ್ತಾರೆ ಸತೀಶ್.

    ನಂದೀಶ್ ನಿರ್ದೇಶನದ ಗೋದ್ರಾದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿ. ಒಂದು ಔಟ್ & ಔಟ್ ಕಾಮಿಡಿ ಸಿನಿಮಾ ಕೊಟ್ಟಿದ್ದ ಸತೀಶ್, ಅದರ ಬೆನ್ನಲ್ಲೇ ಸಿಕ್ಕಾಪಟ್ಟೆ ಸೀರಿಯಸ್ ಮೂಲಕ ಪ್ರತ್ಯಕ್ಷವಾಗುತ್ತಿದ್ದಾರೆ.

  • ಅಯೋಗ್ಯ ಮಹೇಶ್‍ಗೆ ನೀನಾಸಂ ಸತೀಶ್ ಡಿಮ್ಯಾಂಡ್ ಒಂದೇ..

    sathish ninasam's only demand to director

    ಯಾರಿದು ಅಯೋಗ್ಯ ಮಹೇಶ್ ಅನ್ನೋ ಕನ್‍ಫ್ಯೂಸ್ ಬೇಡ. ಅವರು ಅಯೋಗ್ಯ ಚಿತ್ರದ ಡೈರೆಕ್ಟರ್. ಅವರಿಗೆ ಇದು ಮೊದಲ ಸಿನಿಮಾ. ಭಟ್ಟರ ಗರಡಿಯಲ್ಲಿ ಪಳಗಿದವರು. ಅವರು ಮೊದಲು ಕಥೆ ಹೇಳಿದ್ದು ನೀನಾಸಂ ಸತೀಶ್‍ಗೆ. ಕಥೆ ಕೇಳಿದ ಸತೀಶ್, ಮಹೇಶ್ ಮುಂದಿಟ್ಟ ಷರತ್ತು ಒಂದೇ.. ನೀವು ಈಗ ಏನು ಕಥೆ ಹೇಳಿದ್ದೀರೋ.. ಆ ಕಥೆಯನ್ನು ಅಷ್ಟೇ ಕರೆಕ್ಟ್ ಆಗಿ ತೆರೆಗೆ ತರಬೇಕು. ಯಾವುದೇ ಬದಲಾವಣೆ ಮಾಡಬಾರದು. ಈ ಕಂಡೀಷನ್ ಮೇಲೆ ಒಪ್ಪಿಕೊಂಡ ಸಿನಿಮಾ ಅಯೋಗ್ಯ. ಈಗ ರೆಡಿಯಾಗಿ ನಿಂತಿದೆ.

    ಹಾಗಂತ ಸತೀಶ್, ಮಹೇಶ್‍ಗೆ ಹೊಸಬರೇನೂ ಅಲ್ಲ. ಅವರೂ ಭಟ್ಟರ ಟೀಂನಲ್ಲಿ ಬೆಳೆದವರೇ. ಮನಸಾರೆ, ಡ್ರಾಮಾ ಚಿತ್ರಗಳಲ್ಲಿಲ ಮಹೇಶ್ ಮತ್ತು ಸತೀಶ್ ಪರಸ್ಪರ ಪರಿಚಯವಾಗಿತ್ತು. ನನ್ನ ಬಳಿ ಒಂದು ಕಥೆ ಇದೆ ಎಂದಾಗ, ಸತೀಶ್ ಕಥೆ ಕೇಳೋಕೆ ನ್ನನ್ನು ಕರೆದರು. ಆದರೆ, ಟೈಟಲ್ ಕೇಳಿದ ಕ್ಷಣವೇ ಅರ್ಧ ಉತ್ಸಾಹ ಇಳಿದಿತ್ತು. ಆದರೆ, ಕಥೆ ಕೇಳುತ್ತಾ ಹೋದಂತೆ ಇಂಪ್ರೆಸ್ ಆಗುತ್ತಾ ಹೋದ್ರು. ಆಮೇಲೆ ಅವರಿಟ್ಟ ಒಂದೇ ಒಂದು ಡಿಮ್ಯಾಂಡ್.. ನನಗೆ ಹೇಗೆ ಹೇಳಿದ್ದೀರೋ, ಸಿನಿಮಾವನ್ನು ಹಾಗೆಯೇ ಮಾಡಬೇಕು. ಅಪ್ಪಿತಪ್ಪಿಯೂ ಬದಲಾಯಿಸಬಾರದು ಅಂತಾ.

    ಹೀಗೆ ಅಯೋಗ್ಯ ಹುಟ್ಟಿದ ಕಥೆ ಹೇಳ್ತಾರೆ ಮಹೇಶ್ ಕುಮಾರ್.  ಇನ್ನು ಚಿತ್ರದ ನಿರ್ಮಾಪಕರು ಬದಲಾಗಿ, ಚಂದ್ರಶೇಖರ್ ಸಿನಿಮಾ ನಿರ್ಮಾಣ ವಹಿಸಿಕೊಂಡಿದ್ದು.. ಎಲ್ಲವೂ ಸಿನಿಮಾ ನಡೆದಂತೆಯೇ ನಡೆದು ಹೋಯ್ತು ಎನ್ನುವ ಮಹೇಶ್ ಕುಮಾರ್, ಚಿತ್ರದಲ್ಲಿ ನಾಯಕನನ್ನು ಎಲ್ಲರೂ ಅಯೋಗ್ಯ ಎಂದೇ ತಿಳಿದಿರುತ್ತಾರೆ. ಆದರೆ, ಅವನೇ ಊರಿಗೆ ಒಳ್ಳೆಯದನ್ನು ಮಾಡ್ತಾನೆ. ಅದನ್ನು ರಂಜನೀಯವಾಗಿ ಚಿತ್ರದಲ್ಲಿ ತೋರಿಸಲಾಗಿದೆ. ಪ್ರತಿ ಕ್ಷಣವನ್ನೂ ನೀವು ಎಂಜಾಯ್ ಮಾಡ್ತೀರಿ ಎನ್ನುವ ಭರವಸೆ ಕೊಡ್ತಾರೆ ಮಹೇಶ್.

    ಹಾಡುಗಳು ಈಗಾಗಲೇ ಹಿಟ್ ಆಗಿದ್ದು, ಮಂಡ್ಯ ಹುಡುಗಿಯಾಗಿ ರಚಿತಾ ರಾಮ್ ಗಮನ ಸೆಳೆಯುತ್ತಿದ್ದಾರೆ. ಇದೇ ವಾರ ರಿಲೀಸ್ ಆಗುತ್ತಿರುವ ಸಿನಿಮಾ, ದೊಡ್ಡ ಹಿಟ್ ಆಗುವ ನಿರೀಕ್ಷೆಯಲ್ಲಿದೆ.

  • ಅಯೋಗ್ಯ.. ಹಿಂದೆ ಹಿಂದೆ ಹೋಗು..

    ayogya's second song released by puneeth

    ಮುಂದೆ ಬನ್ನಿ, ಮುಂದೆ ಬನ್ನಿ ಅಂದೋರು ಕಮಲ್ ಹಾಸನ್. ಹಿಂದೆ ಹಿಂದೆ ಹೋಗು ಅಂತಿರೋವ್ರು ನೀನಾಸಂ ಸತೀಶ್. ಯೆಸ್, ಇದು ಅಯೋಗ್ಯ ಚಿತ್ರದ ಹಾಡು.

    ಏನಮ್ಮಿ.. ಏನಮ್ಮಿ ಹಾಡಿನ ಮೂಲಕ ಅದ್ಭುತ ಸದ್ದು ಮಾಡುತ್ತಿರುವ ಅಯೋಗ್ಯ ಚಿತ್ರತಂಡ, 2ನೇ ಹಾಡನ್ನೂ ಬಿಡುಗಡೆ ಮಾಡಿದೆ. ಈ ಹಾಡಿನ ಅರಂಭದ ಸಾಹಿತ್ಯವೇ ಇದು, ಹಿಂದೆ ಹಿಂದೆ ಹೋಗು.. ಮಕ್ ಉಗುದ್ರು ಹಿಂದೆ ಹೋಗು.. ಅಂತಾ. ಹಾಡನ್ನು ಬಿಡುಗಡೆ ಮಾಡಿದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಟೈಟಲ್ ಸಾಂಗ್‍ನ್ನು ರೆಬಲ್‍ಸ್ಟಾರ್‍ರಿಂದ ರಿಲೀಸ್ ಮಾಡಿಸಿದ್ದ ನಿರ್ಮಾಪಕ  ಚಮಕ್ ಚಂದ್ರಶೇಖರ್, ಈ ಹಾಡನ್ನು ಪವರ್‍ಸ್ಟಾರ್‍ರಿಂದ ರಿಲೀಸ್ ಮಾಡಿಸಿದ್ದಾರೆ.

    ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್ ಪ್ರಮುಖ ಪಾತ್ರದಲ್ಲಿರೋ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರೋದು ಎಸ್. ಮಹೇಶ್ ಕುಮಾರ್.

  • ಅಯೋಗ್ಯ... ಮತ್ತೆ ಮುಹೂರ್ತ

    ayogya muhurtha again

    ಒಂದೇ ಚಿತ್ರಕ್ಕೆ ಎರಡು ಬಾರಿ ಮುಹೂರ್ತವಾಗೋದು ಅಪರೂಪ. ಕಾರಣಗಳು ಏನೇ ಇರಲಿ, ಅಂಥಾದ್ದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ ಅಯೋಗ್ಯ. ಇತ್ತೀಚೆಗಷ್ಟೇ ಮುಹೂರ್ತ ಮಾಡಿಕೊಂಡಿದ್ದ ಅಯೋಗ್ಯ ಚಿತ್ರಕ್ಕೆ, ನವೆಂಬರ್ 27ರಂದು ಮತ್ತೊಮ್ಮೆ ಮುಹೂರ್ತ ನಡೆಯುತ್ತಿದೆ.

    ಕಾರಣ ಇಷ್ಟೆ, ನಿರ್ಮಾಪಕರು ಬದಲಾಗಿದ್ದಾರೆ. ಮೊದಲು ನಿರ್ಮಾಪಕರಾಗಿದ್ದವರು ಸುರೇಶ್. ಅನಿವಾರ್ಯ ಕಾರಣಗಳಿಂದ ಚಿತ್ರದಿಂದ ಹೊರಬಂದಿದ್ದಾರೆ. ನಿರ್ಮಾಣದ ಹೊಣೆ ಈಗ ಟಿ.ಆರ್. ಚಂದ್ರಶೇಖರ್ ಹೆಗಲೇರಿದೆ. ಜಾನ್ ಸೀನ, ಚಮಕ್, ಬೀರ್‍ಬಲ್ ಚಿತ್ರಗಳ ನಿರ್ಮಾಣಕ್ಕೆ ಬಂಡವಾಳ ಹೂಡಿರುವ ಚಂದ್ರಶೇಖರ್, ಈಗ ಅಯೋಗ್ಯಕ್ಕೂ ನಿರ್ಮಾಪಕರಾಗುತ್ತಿದ್ದಾರೆ.

    ಬದಲಾಗಿರುವುದು ನಿರ್ಮಾಪಕರು ಮಾತ್ರ. ನಾಯಕ ನೀನಾಸಂ ಸತೀಶ್, ನಾಯಕಿ ರಚಿತಾ ರಾಮ್, ನಿರ್ದೇಶಕ ಮಹೇಶ್ ಕುಮಾರ್.. ಸೇರಿದಂತೆ ಕಲಾವಿದರು, ತಂತ್ರಜ್ಞರೆಲ್ಲ ಅವರೇ. ಡಿಸೆಂಬರ್ 1ರಿಂದ ಚಿತ್ರೀಕರಣ ಶುರುವಾಗಲಿದೆ. ಒಂದೇ ಶೆಡ್ಯೂಲ್‍ನಲ್ಲಿ ಚಿತ್ರದ ಚಿತ್ರೀಕರಣ ಮುಗಿಸಲು ಚಿತ್ರತಂಡ ಯೋಜನೆ ರೂಪಿಸಿದೆ.

  • ಅಯೋಗ್ಯನ 25ನೇ ದಿನದ ಸಂಭ್ರಮ

    ayogya celebrates 25 days

    ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್ ಅಭಿನಯದ ಅಯೋಗ್ಯ ಸಿನಿಮಾ ಭರ್ಜರಿ ಗೆಲುವು ಸಾಧಿಸಿದೆ. ಚಿತ್ರಮಂದಿರಗಳಲ್ಲಿ, ಬಾಕ್ಸಾಫೀಸ್‍ನಲ್ಲಿ ಯಶಸ್ವಿಯಾಗಿ ಮುನ್ನುಗ್ಗಿ, 25 ದಿನ ಪೂರೈಸಿದೆ. ಟಿ.ಆರ್. ಚಂದ್ರಶೇಖರ್ ನಿರ್ಮಾಣದ ಅಯೋಗ್ಯ ಚಿತ್ರದ ಈ ಸಂಭ್ರಮಾಚರಣೆ ನರ್ತಕಿ ಚಿತ್ರಮಂದಿರದಲ್ಲಿ ನಡೆಯಿತು.

    ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ನೀನಾಸಂ ಸತೀಶ್, ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಿದರು. ಎಸ್.ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ಶತದಿನೋತ್ಸವ ಆಚರಿಸಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

  • ಅಯೋಗ್ಯನ ಅಮ್ಮನಾಗಿ ಸರಿತಾ

    saritha in Ayogya

    ಸರಿತಾ, ಕೇರಳದ ಈ ಕಲಾವಿದೆಯ ಹೆಸರು ಕೇಳಿದ ತಕ್ಷಣ ಕಾಮನಬಿಲ್ಲು, ಹೊಸಬೆಳಕು, ಎರಡು ರೇಖೆಗಳು, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ..ಹೀಗೆ ಹಲವು ಚಿತ್ರಗಳು ನೆನಪಾಗುತ್ತವೆ. ಆದರೆ, ಅದೇಕೋ ಏನೋ, ಕನ್ನಡ ಚಿತ್ರರಂಗದಿಂದ ದೂರವೇ ಆಗಿದ್ದ ಸರಿತಾ, ಈಗ ಮತ್ತೆ ಬರುತ್ತಿದ್ದಾರೆ.

    ನೀನಾಸಂ ಸತೀಶ್ ನಾಯಕರಾಗಿರುವ ಅಯೋಗ್ಯ ಚಿತ್ರದಲ್ಲಿ ಮಂಡ್ಯದ ಹೆಣ್ಣುಮಗಳಾಗಿ ನಟಿಸುತ್ತಿದ್ದಾರೆ. 15 ವರ್ಷಗಳ ನಂತರ ಕನ್ನಡದಲ್ಲಿ ನಟಿಸುತ್ತಿದ್ದರೂ, ಸರಿತಾ ಕನ್ನಡವನ್ನು ಮರೆತಿಲ್ಲ. ಈಗಲೂ  ಅಷ್ಟೇ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. 

    ಇಷ್ಟು ದಿನ ಏಕೆ ನಟಿಸಲಿಲ್ಲ ಎಂಬ ಪ್ರಶ್ನೆಗೆ ಒಳ್ಳೆಯ ಪಾತ್ರ ಸಿಕ್ಕಲಿಲ್ಲ ಎಂಬ ಉತ್ತರ ಸರಿತಾ ಅವರದ್ದು. ಕನ್ನಡ ಬರುತ್ತೆ ಎನ್ನುವುದೇನೋ ನಿಜ, ಆದರೆ, ಮಂಡ್ಯದ ಕನ್ನಡದ ಶೈಲಿಯೇ ಬೇರೆ. ಅದನ್ನು ಸ್ವಲ್ಪ ಅಭ್ಯಾಸ ಮಾಡಬೇಕು ಎನ್ನುವ ಸರಿತಾಗೆ ಚಿತ್ರದಲ್ಲಿ ನೀನಾಸಂ ಸತೀಶ್ ಅವರ ತಾಯಿಯ ಪಾತ್ರವಿದೆ.

  • ಅಯೋಗ್ಯನ ಅರ್ಧ ಶತಕ...

    sathish's ayogya

    ಅಯೋಗ್ಯ ಸಿನಿಮಾ 50 ದಿನ ಪೂರೈಸಿದೆ. ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ ಸಿನಿಮಾದ ಮೂಲಕ ಮತ್ತೊಮ್ಮೆ ಗೆದ್ದಿದ್ದಾರೆ ನಿರ್ಮಾಪಕ ಚಮಕ್ ಚಂದ್ರಶೇಖರ್. ನೀನಾಸಂ ಸತೀಶ್‍ಗೆ ಬಹುದಿನಗಳಿಂದ ಕಾಯುತ್ತಿದ್ದ ಹಿಟ್ ಸಿಕ್ಕಿದ್ದರೆ, ಡಿಂಪಲ್ ಕ್ವೀನ್ ಮತ್ತೊಮ್ಮೆ ತಾನು ಲಕ್ಕಿ ಸ್ಟಾರ್ ಎಂದು ಸಾಬೀತು ಪಡಿಸಿದ್ದಾರೆ. 

    50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅಯೋಗ್ಯ ಅರ್ಧಶತಕ ಬಾರಿಸಿದೆ. ನಿರ್ದೇಶಕ ಮಹೇಶ್ ಕುಮಾರ್ ಚೊಚ್ಚಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಈ ಗೆಲುವಿನ ನಡುವೆ ನೀನಾಸಂ ಸತೀಶ್‍ಗೆ ಸಂತೋಷ ಇಮ್ಮಡಿಯಾಗಿರುವುದು ಮಂಡ್ಯದಲ್ಲಿ. 

    ಮಂಡ್ಯದ ಸಂಜಯ ಟಾಕೀಸ್‍ನಲ್ಲಿ ಅಯೋಗ್ಯ 50 ದಿನ ಪೂರೈಸಿದ್ದರೆ, ಅದರ ಪಕ್ಕದಲ್ಲೇ ಇರೋ ಸಿದ್ಧಾರ್ಥ ಚಿತ್ರಮಂದಿರದಲ್ಲಿ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಒಂದು ಕಾಲದಲ್ಲಿ ಅಂಬಿಯಣ್ಣನ ಸಿನಿಮಾಗಳನ್ನು ನೋಡೋಕೆ ಇದೇ ಥಿಯೇಟರ್‍ನಲ್ಲಿ ಕ್ಯೂ ನಿಲ್ಲುತ್ತಿದೆ. ಈಗ.. ಅವರ ಕಟೌಟ್ ಪಕ್ಕದಲ್ಲೇ ನನ್ನ ಕಟೌಟ್ ಕೂಡಾ ಇದೆ. ಅವರ ಸಿನಿಮಾ ಜೊತೆಯಲ್ಲೇ ನನ್ನ ಸಿನಿಮಾ ಪ್ರದರ್ಶನ ಕಾಣುತ್ತಿದೆ. ನನ್ನ ವೃತ್ತಿ ಬದುಕಿನ ಶ್ರೇಷ್ಟ ದಿನವಿದು. ಅಣ್ಣನಿಗೆ ಜೈ ಎಂದಿದ್ದಾರೆ ನೀನಾಸಂ ಸತೀಶ್

  • ಅಯೋಗ್ಯನ ಜೋಡಿಯಾದ ಬುಲ್‍ಬುಲ್ ರಚಿತಾ

    rachith ram in ayogya

    ಅಯೋಗ್ಯ - ಗ್ರಾಮ ಪಂಚಾಯಿತಿ ಸದಸ್ಯ. ಇದು ನೀನಾಸಂ ಅಭಿನಯಿಸುತ್ತಿರುವ ಚಿತ್ರ. ಈ ಚಿತ್ರಕ್ಕೆ ಈಗ ನಾಯಕಿಯಾಗಿ ರಚಿತಾ ರಾಮ್ ಆಯ್ಕೆಯಾಗಿದ್ದಾರೆ. ಸತೀಶ್ ನೀನಾಸಂ ಜೊತೆ ರಚಿತಾಗೆ ಇದು ಮೊದಲ ಚಿತ್ರ.

    ಚಿತ್ರದಲ್ಲಿ ರಚಿತಾ ಪಕ್ಕಾ ಮಂಡ್ಯ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಗ್ರಾಜ್ಯುಯೇಟ್ ಹುಡುಗಿ ಬೇರೆ. ಯೋಗರಾಜ್ ಭಟ್‍ರ ಶಿಷ್ಯೆಸ್. ಮಹೇಶ್ ನಿರ್ದೇಶಿಸುತ್ತಿರುವ ಚಿತ್ರ, ಮಾಮೂಲಿ ಸ್ಟೈಲ್ ಚಿತ್ರಗಳಿಗಿಂತ ಡಿಫರೆಂಟ್ ಸಿನಿಮಾ ಎನ್ನಲಾಗ್ತಿದೆ.

    ಇತ್ತೀಚೆಗೆ ರಚಿತಾ ರಾಮ್, ದುನಿಯಾ ವಿಜಯ್ ಜೊತೆಗಿನ ಕನಕ ಮತ್ತು ಜಾನಿ ಜಾನಿ ಯೆಸ್ ಪಪ್ಪಾ ಚಿತ್ರಕ್ಕೆ ಆಯ್ಕೆಯಾಗಿದ್ದರು. ನಂತರ ಭರ್ಜರಿ ಚಿತ್ರದ ಪ್ರಮೋಷನ್‍ಗೆ ತೊಂದರೆಯಾಗುತ್ತೆ ಎಂದು ಹೇಳಿ ಎರಡೂ ಚಿತ್ರಗಳಿಂದ ಹೊರಬಂದಿದ್ದರು. ಸದ್ಯಕ್ಕೆ ರಚಿತಾ ಉಪ್ಪಿರುಪ್ಪಿ ಮತ್ತು ಭರ್ಜರಿ ಚಿತ್ರಗಳನ್ನು ಹೊರತುಪಡಿಸಿ ಒಪ್ಪಿಕೊಂಡಿರುವ ಚಿತ್ರ ಇದೊಂದೇ.

     

  • ಅಯೋಗ್ಯನ ಟೈಟಲ್ ಚೇಂಜ್

    ayogya tagline will be changed

    ಅಯೋಗ್ಯ. ನೀನಾಸಂ ಸತೀಶ್, ರಚಿತಾ ರಾಮ್ ಅಭಿನಯದ ಸಿನಿಮಾ. ಅಯೋಗ್ಯ ಚಿತ್ರದ ಜೊತೆಗೆ ಗ್ರಾಮ ಪಂಚಾಯ್ತಿ ಸದಸ್ಯ ಎಂಬ ಟ್ಯಾಗ್‍ಲೈನ್ ಇತ್ತು. ಗ್ರಾಮ ಪಂಚಾಯಿತಿ ಸದಸ್ಯರನ್ನೇ ಅಯೋಗ್ಯ ಎಂಬಂತೆ ಚಿತ್ರಿಸಲಾಗಿದೆ ಎಂದು ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅಯೋಗ್ಯ ಟೈಟಲ್ಲೇ ಬೇರೆ, ಟ್ಯಾಗ್‍ಲೈನ್ ಬೇರೆ ಎಂಬ ಚಿತ್ರತಂಡದ ವಾದಕ್ಕೆ ಕಿವಿಗೊಟ್ಟಿರಲಿಲ್ಲ.

    ಈಗ ಚಿತ್ರತಂಡವೇ ಸಂಘಟನೆಗಳ ಆಗ್ರಹಕ್ಕೆ ಮಣಿದಿದೆ. ಅಯೋಗ್ಯ ಚಿತ್ರದ ಟೈಟಲ್ ಹಾಗೂ ಟ್ಯಾಗ್‍ಲೈನ್ ಮಧ್ಯೆ ಮತ್ತು ಎಂದು ಸೇರಿಸಿದೆ. ಈಗ ಚಿತ್ರದ ಟೈಟಲ್ ಅಯೋಗ್ಯ.. ಗ್ರಾಮ ಪಂಚಾಯ್ತಿ ಸದಸ್ಯ ಅಲ್ಲ, ಅಯೋಗ್ಯ ಮತ್ತು ಗ್ರಾಮ ಪಂಚಾಯ್ತಿ ಸದಸ್ಯ.

    ಕೆಲವರು ಚಿತ್ರದ ಟೈಟಲ್ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ನಮ್ಮ ಉದ್ದೇಶವೇ ಬೇರೆ. ಹೋರಾಟ ಪಡೆಯುತ್ತಿರುವ ರೂಪವೇ ಬೇರೆ. ಹೀಗಾಗಿ ಇದು ರಾಜ್ಯಾದ್ಯಂತ ವ್ಯಾಪಿಸದಂತೆ ತಡೆಯುವ ಸಲುವಾಗಿ ನಾವೇ ಚಿತ್ರದ ಟೈಟಲ್ ಮತ್ತು ಟ್ಯಾಗ್‍ಲೈನ್‍ನಲ್ಲಿ ಮಾರ್ಪಾಡು ಮಾಡಿದ್ದೇವೆ ಎಂದು ತಿಳಿಸಿದ್ದಾರೆ ನಿರ್ಮಾಪಕ ಚಂದ್ರಶೇಖರ್.

    ಚಿತ್ರದ ಟೈಟಲ್ ಮತ್ತು ಟ್ಯಾಗ್‍ಲೈನ್‍ಗೆ ಸಂಬಂಧವಿದೆ. ಹಾಗಾಗಿ ಚಿತ್ರದ ಅಡಿಬರಹ ಬದಲಿಸಿಲ್ಲ. ಬದಲಿಗೆ ಮತ್ತು ಎಂಬ ಪದ ಸೇರಿಸಿದ್ದೇವೆ ಎಂದಿ ತಿಳಿಸಿರುವ ನಾಯಕ ಸತೀಶ್, ಚಿತ್ರದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರನ್ನು ಅವಹೇಳನಕಾರಿಯಾಗಿ ತೋರಿಸಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

  • ಅಯೋಗ್ಯನ ಹಾಡುಗಳಿಗೆ ಅದ್ಭುತ ರೆಸ್ಪಾನ್ಸ್

    ayogya songs get good response

    ಅಯೋಗ್ಯ. ನೀನಾಸಂ ಸತೀಶ್, ರಚಿತಾ ರಾಮ್ ಕಾಂಬಿನೇಷನ್ನಿನ ಸಿನಿಮಾ ಶೂಟಿಂಗ್ ಮುಗಿಸಿ ಬಿಡುಗಡೆಗೆ ರೆಡಿಯಾಗಿದೆ. ಹೀಗಿರುವಾಗಲೇ ಚಿತ್ರತಂಡಕ್ಕೆ ಒಂದು ಶುಭ ಸುದ್ದಿ. ಚಿತ್ರದ ಹಾಡುಗಳು ಆನ್‍ಲೈನ್‍ನಲ್ಲಿ ಸೂಪರ್ ಹಿಟ್ ಆಗಿವೆ. 1 ಮಿಲಿಯನ್‍ಗೂ ಹೆಚ್ಚು ಜನ ಚಿತ್ರದ ಹಾಡುಗಳನ್ನ ಇಷ್ಟಪಟ್ಟಿದ್ದಾರೆ.

    ಅಯೋಗ್ಯ ಚಿತ್ರದ ಏನಮ್ಮಿ ಏನಮ್ಮಿ ಎಂಬ ವಿಜಯ್ ಪ್ರಕಾಶ್ ಹಾಡಿರುವ ಟಪ್ಪಾಂಗುಚ್ಚಿ  ಹಾಡು ಭರ್ಜರಿ ಸೌಂಡು ಮಾಡ್ತಿದೆ. ನನ್ನ ಸಿನಿಮಾದ ಹಾಡೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ನನಗೆ ಹೊಸ ಅನುಭವ. ಇಂಥದ್ದೇ ಯಶಸ್ಸು ಚಿತ್ರಕ್ಕೂ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಸತೀಶ್.

    ಅಷ್ಟೇ ಅಲ್ಲ, ಟಗರು ಚಿತ್ರದ ಟೈಟಲ್ ಸಾಂಗ್ ಹಾಡಿದ್ದ ಆಂಥೋನಿ, ಅಯೋಗ್ಯ ಚಿತ್ರದ ಟೈಟಲ್ ಸಾಂಗ್‍ಗೂ ಧ್ವನಿಯಾಗಿದ್ದಾರೆ. ಆ ಹಾಡು ಕೂಡಾ ಸೂಪರ್ ಹಿಟ್.

    ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಮತ್ತು ನಿರ್ದೇಶಕ ಚೇತನ್ ಮಹೇಶ್ ಪ್ರೇಕ್ಷಕರ ಸ್ವಾಗತಕ್ಕೆ ಖುಷಿಯಾಗಿದ್ದಾರೆ.

  • ಅಯೋಗ್ಯನಿಗೆ ಅರ್ಜುನ್ ಜನ್ಯ ಏನ್ ಹೇಳಿದ್ರು ಗೊತ್ತಾ..?

    sathish ninasam has high hope from ayogya

    ಅಯೋಗ್ಯ.. ನೀನಾಸಂ ಸತೀಶ್-ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ಸಿನಿಮಾ. ಈ ಸಿನಿಮಾದ ಹಾಡುಗಳ ಬಗ್ಗೆ ಸತೀಶ್ ಆರಂಭದಲ್ಲಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದರಂತೆ. ಆಗ ಅರ್ಜುನ್ ಜನ್ಯಾ ``ಸತೀಶ್, ನೀವು ಆರಾಮವಾಗಿರಿ, ತಲೆ ಕೆಡಿಸಿಕೊಳ್ಳಬೇಡಿ. ಹಾಯಾಗಿ ನಿದ್ದೆ ಮಾಡಿ'' ಎಂದಿದ್ದರಂತೆ. ಅವರು ಅಷ್ಟು ಕಾನ್ಫಿಡೆನ್ಸ್ ಆಗಿ ಹೇಳಿದ್ದು ಹೇಗೆ ಅನ್ನೋದು  ಗೊತ್ತಾಗಿದ್ದು ಹಾಡುಗಳು ಹೊರಬಂದ ಮೇಲೆ. ಏಕೆಂದರೆ, ಅಯೋಗ್ಯ ಚಿತ್ರದ ಹಾಡುಗಳೆಲ್ಲ ದಾಖಲೆ ಬರೆಯುತ್ತಿವೆ.

    ಏನಮ್ಮಿ ಏನಮ್ಮಿ ಹಾಡು.. ಡಬ್‍ಸ್ಮಾಶ್‍ನಲ್ಲೂ ದಾಖಲೆ ಬರೆದಿದೆ. ಹಿಂದೆ ಹಿಂದೆ ಹೋಗು ಹಾಡು ಕೂಡಾ ಸೂಪರ್ ಡ್ಯೂಪರ್ ಹಿಟ್. ಟಾಪ್ 10 ಹಾಡುಗಳ ಲಿಸ್ಟ್‍ನಲ್ಲಿ ಅಯೋಗ್ಯನ ಹಾಡುಗಳು ಖಾಯಂ ಆಗಿವೆ.

    ಹಾಡು ಹಿಟ್ ಆಗಿರುವುದು ಖುಷಿ ಕೊಟ್ಟಿದೆ. ಈ ಹಿಂದೆ ನನ್ನ ಬೇರ್ಯಾವ ಚಿತ್ರದ ಮೇಲೂ ನಾನು ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಹಾಡು ಹಿಟ್ ಆಗಿರೋದು ನೋಡಿದ್ರೆ, ಈ ಸಿನಿಮಾ ಪವಾಡ ಸೃಷ್ಟಿಸಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಅಂತಾರೆ ಸತೀಶ್.

    ಚಮಕ್ ಚಂದ್ರಶೇಖರ್ ನಿರ್ಮಾಣದ ಚಿತ್ರಕ್ಕೆ ಮಹೇಶ್ ಕುಮಾರ್ ನಿರ್ದೇಶನವಿದೆ. ಪ್ರತಿಯೊಬ್ಬರೂ ಈ ಸಿನಿಮಾ ನೋಡುವಾಗ ತಮಗೆ ತಾವೇ ಕನೆಕ್ಟ್ ಆಗುತ್ತಾರೆ ಅನ್ನೋದು ಸತೀಶ್ ವಿಶ್ವಾಸ.

  • ಅಯೋಗ್ಯನಿಗೆ ಗ್ರಾಮ ಪಂಚಾಯ್ತಿ ಸದಸ್ಯರ ಕಾಟ

    sathish ninamsam's ayogya movie

    ಅಯೋಗ್ಯ, ನೀನಾಸಂ ಸತೀಶ್, ರಚಿತಾ ರಾಮ್ ಅಭಿನಯ ಚಿತ್ರ. ಚಿತ್ರೀಕರಣ ಬಿರುಸಿನಿಂದ ಸಾಗುತ್ತಿರುವಾಗಲೇ, ಚಿತ್ರಕ್ಕೊಂದು ಸಮಸ್ಯೆ ಸೃಷ್ಟಿಯಾಗಿದೆ. ಆ ಸಮಸ್ಯೆಗೆ ಕಾರಣವಾಗಿರೋದು ಚಿತ್ರದ ಟ್ಯಾಗ್‍ಲೈನ್. 

    ಅಯೋಗ್ಯ ಚಿತ್ರದ ಟ್ಯಾಗ್‍ಲೈನ್‍ನಲ್ಲಿ ಗ್ರಾಮಪಂಚಾಯ್ತಿ ಸದಸ್ಯ ಎಂದಿದೆ. ಸಮಸ್ಯೆಗೆ ಇದೇ ಕಾರಣ. ಇದು ಗ್ರಾಮಪಂಚಾಯ್ತಿ ಸದಸ್ಯರಿಗೆ ಮಾಡುತ್ತಿರುವ ಅವಮಾನ ಎನ್ನುವುದು ಮೈಸೂರಿನ ಕನ್ನಡ ಕ್ರಾಂತಿದಳದ ತೇಜಸ್ವಿನಿ ಕುಮಾರ್ ಎಂಬುವವರ ಆರೋಪ. ಈ ಕುರಿತು ಫಿಲಂ ಚೇಂಬರ್‍ಗೆ ಪತ್ರವನ್ನೂ ಬರೆದಿರುವ ತೇಜಸ್ವಿನಿ ಕುಮಾರ್, ಟ್ಯಾಗ್‍ಲೈನ್ ತೆಗೆಯುವಂತೆ ಆಗ್ರಹಿಸಿದ್ದಾರೆ. ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಪ್ರಕಾರ, ಚಿತ್ರತಂಡ ಅನುಮತಿ ಪಡೆದಿರುವುದು ಅಯೋಗ್ಯ ಚಿತ್ರಕ್ಕೇ ಹೊರತು, ಟ್ಯಾಗ್‍ಲೈನ್‍ಗೆ ಅಲ್ಲ ಎಂದಿದ್ದಾರೆ.

    ಇನ್ನು ಚಿತ್ರದ ನಿರ್ದೇಶಕ ಮಹೇಶ್, ಚಿತ್ರದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರನ್ನು ನಾವೇನೂ ಅವಹೇಳನಕಾರಿಯಾಗಿ ತೋರಿಸಿಲ್ಲ. ಚಿತ್ರದಲ್ಲೇನಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಚಿತ್ರ ಬಿಡಗಡೆಯಾಗುವವರೆಗೆ ಕಾಯಿರಿ ಎಂದಿದ್ದಾರೆ. ಜುಲೈ 15ರಂದು ಚಿತ್ರದ ಎಲ್ಲ ಕೆಲಸಗಳೂ ಮುಗಿಯಲಿವೆ. ಆ ನಂತರ ಬೇಕಾದರೆ ಯಾರಿಗೆ ಬೇಕಾದರೂ ಚಿತ್ರ ತೋರಿಸುತ್ತೇವೆ ಎಂದಿದ್ದಾರೆ ಮಹೇಶ್.

  • ಅಶೋಕ ಬ್ಲೇಡ್ : ಟೈಟಲ್ ಹಿಂಗೆ.. ಕಥೆ..?

    ಅಶೋಕ ಬ್ಲೇಡ್ : ಟೈಟಲ್ ಹಿಂಗೆ.. ಕಥೆ..?

    ಎಲ್ಲ ಯುದ್ಧಗಳೂ ರಣರಂಗದಲ್ಲೇ ನಡೆಯೋದಿಲ್ಲ..

    ಅನ್ನೋ ಟ್ಯಾಗ್‍ಲೈನ್ ಕೊಟ್ಟು ಐತಿಹಾಸಿಕ ಚಿತ್ರ ಎಂಬ ಸುಳಿವು ಕೊಟ್ಟಿದ್ದ ನೀನಾಸಂ ಸತೀಶ್ ಅವರ ಹೊಸ ಚಿತ್ರದ ಹೆಸರು ಅಶೋಕ ಬ್ಲೇಡ್. ಇದು 70ರ ದಶಕದ ಕಥೆಯಂತೆ.

    ಅಶೋಕ ಬ್ಲೇಡ್ ಜೊತೆ ಭಾರತೀಯರಿಗೆ ಒಂದು ವಿಚಿತ್ರ ಸಂಬಂಧ ಇದೆ. ಈಗ ಎರಡು.. ಮೂರು ಬ್ಲೇಡ್‍ಗಳ ರೇಜರ್‍ಗಳು ಬಂದಿವೆ. ಆದರೆ.. ಬ್ಲೇಡುಗಳ ಆರಂಭದ ಕಾಲದಲ್ಲಿ ಒಂದು ಜನರೇಷನ್ನಿನ ಅವಿಭಾಜ್ಯ ಅಂಗವೇ ಆಗಿದ್ದುದು ಅಶೋಕ ಬ್ಲೇಡ್. ಅದನ್ನು ತಮ್ಮ ಚಿತ್ರದ ಟೈಟಲ್ ಆಗಿಸಿರೋ ನೀನಾಸಂ ಸತೀಶ್ ಚಿತ್ರದ ಬಗ್ಗೆ ಒಂದು ಸಖತ್ ಕುತೂಹಲವನ್ನಂತೂ ಹುಟ್ಟುಹಾಕಿದ್ದಾರೆ.

    ವಿನೋದ್ ವಿ ದೊಂಡಲಾಯ್ ಅನ್ನೋ ಹೊಸ ನಿರ್ದೇಶಕರ ಹೊಸ ಪ್ರಯತ್ನ ಅಶೋಕ ಬ್ಲೇಡ್. ಪೋಸ್ಟರ್ ಹೊರಬಿದ್ದಿದೆ. 70ರ ದಶಕದ ಐಷಾರಾಮಿ ಕಾರಿನ ಮೇಲೆ ಅಶೋಕ ಬ್ಲೇಡುಗಳ ಸುರಿಮಳೆಯನ್ನೇ ಪೋಸ್ಟರ್‍ನಲ್ಲಿ ತೋರಿಸಿದ್ದಾರೆ. ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ಸತೀರ್ಶ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಸತೀಶ್ ಜೊತೆಗೆ ವರ್ದನ್ ಹರಿ ಎಂಬುವವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅಂದಹಾಗೆ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಬೆಲ್‍ಬಾಟಂ ಖ್ಯಾತಿಯ ಟಿ.ಕೆ.ದಯಾನಂದ್ ಅವರದ್ದು.