` sathish neenasam, - chitraloka.com | Kannada Movie News, Reviews | Image

sathish neenasam,

 • ಶ್ರದ್ಧಾ ಜೊತೆ ನೀನಾಸಂ ಸತೀಶ್ ಡ್ಯಾನ್ಸ್

  godhra movie shooting completed

  ನೀನಾಸಂ ಸತೀಶ್ ಅಭಿನಯದ ಗೋದ್ರಾ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಸುದೀರ್ಘ ಅವಧಿಯವರೆಗೆ ನಡೆದ ಶೂಟಿಂಗ್‍ನ್ನು ಮುಗಿಸಿದ ಸಿನಿಮಾ, ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಆಂಧ್ರಪ್ರದೇಶದಲ್ಲಿ ಚಿತ್ರದ ಹಾಡಿನ ಚಿತ್ರೀಕರಣ ಮುಗಿಸಿದ್ದಾರೆ ನಿರ್ದೇಶಕ ನಂದೀಶ್.

  ಚಿತ್ರದಲ್ಲಿ ಸತೀಶ್ ನಕ್ಸಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶ್ರದ್ಧಾ ಶ್ರೀನಾಥ್ ನೀನಾಸಂ ಸತೀಶ್‍ಗೆ ಜೋಡಿಯಾಗಿದ್ದಾರೆ. 

 • ಸತೀಶ್ ಜೊತೆ ರಚಿತಾ ಮ್ಯಾಟ್ನಿ ರೊಮ್ಯಾನ್ಸ್

  ಸತೀಶ್ ಜೊತೆ ರಚಿತಾ ಮ್ಯಾಟ್ನಿ ರೊಮ್ಯಾನ್ಸ್

  ಅಯೋಗ್ಯದ ಸಕ್ಸಸ್ ಜೋಡಿ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಮತ್ತೆ ಜೊತೆಯಾಗಿರುವ ಸಿನಿಮಾ ಮ್ಯಾಟ್ನಿ. ಒಂದರ ಹಿಂದೊಂದು ರಿಲೀಸ್ ಮತ್ತು ಶೂಟಿಂಗ್ ಎರಡರಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ರಚಿತಾ ರಾಮ್ ಇತ್ತೀಚೆಗೆ ಅನಾರೋಗ್ಯಕ್ಕೊಳಗಾಗಿದ್ದರು. ಚೇತರಿಸಿಕೊಂಡಿರುವ ರಚಿತಾ ಮತ್ತೆ ಚಿತ್ರೀಕರಣಕ್ಕೆ ಬಂದಿದ್ದಾರೆ. ಮ್ಯಾಟ್ನಿ ರೊಮ್ಯಾನ್ಸ್‍ಗೆ.

  ಉಪ್ಪಿ ರೆಸಾಟ್ರ್ಸ್‍ನಲ್ಲಿ ಮ್ಯಾಟ್ನಿ ಚಿತ್ರದ ಲವ್ ಸೀನ್‍ಗಳ ಚಿತ್ರೀಕರಣ ಶುರುವಾಗಿದೆ. ಮನೋಹರ್ ಕಂಪಲ್ಲಿ ನಿರ್ದೇಶನದ ಮ್ಯಾಟ್ನಿ, ರೊಮ್ಯಾಂಟಿಕ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿದೆ.

 • ಸತೀಶ್ ನೀನಾಸಂ ಚಿತ್ರಕ್ಕೆ ರಮ್ಯಾ ಪ್ರಮೋಷನ್

  ಸತೀಶ್ ನೀನಾಸಂ ಚಿತ್ರಕ್ಕೆ ರಮ್ಯಾ ಪ್ರಮೋಷನ್

  ನಟ ಸತೀಶ್ ನೀನಾಸಂ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ತಮಿಳಿನ ಖ್ಯಾತ ನಟ ಶಶಿಕುಮಾರ್ ಅಭಿನಯದ ಪಗೈವನುಕು ಅರುಳ್ವೈ ಮೂಲಕ ತಮಿಳು ಚಿತ್ರರಂಗದಲ್ಲಿ ಹೆಜ್ಜೆಯಿಟ್ಟಿದ್ದಾರೆ. ಈ  ಸಿನಿಮಾದಲ್ಲಿ ಸತೀಶ್‌, ಆಡುದೊಡ್ಡಿ ರವಿ ಎಂಬ ಪಾತ್ರ ಮಾಡಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ರಮ್ಯಾ ಸತೀಶ್ ಚಿತ್ರಕ್ಕೆ ಪ್ರಮೋಷನ್ ಕೊಟ್ಟಿದ್ದಾರೆ.

  ಚಿತ್ರದ ಪೋಸ್ಟರ್ ರಿಲೀಸ್ ಮಾಡಿರುವ ರಮ್ಯಾ ನಮ್ಮ ಕನ್ನಡದ ನಟರೊಬ್ಬರು ತಮಿಳಿನಲ್ಲಿ ನಟಿಸುತ್ತಿರುವುದು ಹೆಮ್ಮೆ ಎಂದಿದ್ದಾರೆ.  ಶೇಕ್ಸ್ಪಿಯರ್ ಅವರ ಮ್ಯಾಕ್ಬೆತ್ ನಾಟಕದ ಸ್ಫೂರ್ತಿಯಲ್ಲಿ ತಯಾರಾಗಿರುವ ಚಿತ್ರವಿದು. ರಮ್ಯಾ ಅಷ್ಟೇ ಅಲ್ಲ, ತಮಿಳಿನ ಸ್ಟಾರ್ ನಿರ್ದೇಶಕ ಸಮುದ್ರಕಿಣಿ ಚಿತ್ರದ ಪೋಸ್ಟರ್ ರಿವೀಲ್ ಮಾಡಿದ್ದಾರೆ. ಅನೀಸ್ ಎಂಬುವವರು ನಿರ್ದೇಶನ ಮಾಡಿರುವ ಚಿತ್ರ ಈಗಾಗಲೇ ಚಿತ್ರೀಕರಣ ಪೂರೈಸಿದೆ.

  ಆಡುದೊಡ್ಡಿ ರವಿ ಎಂಬ ಖೈಊದಿಯ ಪಾತ್ರದಲ್ಲಿ ನಟಿಸರುವ ಸತೀಶ್, ರಿಯಲ್ ಖೈದಿಗಳ ಜೊತೆ ನಟಿಸಿರುವುದು ವಿಶೇಷ. ಕೊಲೆ, ಸುಲಿಗೆ ಮಾಡಿ ಜೈಲಿಗೆ ಹೋಗಿ ಬಂದ 17 ಖೈದಿಗಳು ಈ ಚಿತ್ರದಲ್ಲಿ ನನ್ನೊಂದಿಗೆ ನಟಿಸಿದ್ದಾರೆ. ಚಿತ್ರದಲ್ಲಿ ನನಗೆ ಎರಡು ಶೇಡ್ಗಳಿವೆ. ಸಿನಿಮಾ ಚೆನ್ನಾಗಿ ಬಂದಿದೆ ಎಂದಿದ್ದಾರೆ ಸತೀಶ್.

 • ಸಂಸಾರಿ ಆದ್ರೂ ಬ್ರಹ್ಮಚಾರಿಯಾಗಿ ಇರೋದೇಕೆ..?

  bramhachari waiting to reveal all his problems

  ಬ್ರಹ್ಮಚಾರಿ ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಇತ್ತೀಚೆಗೆ ಬರುತ್ತಿರುವ ಕಾಮಿಡಿ ಜಾನರ್ ಚಿತ್ರಗಳಲ್ಲೇ ಅತಿ ಹೆಚ್ಚು ಕುತೂಹಲ ಹುಟ್ಟಿಸಿರುವ ಸಿನಿಮಾ, ಟ್ರೇಲರ್, ಹಾಡಿನಿಂದಲೇ ಭರ್ಜರಿ ಸದ್ದು ಮಾಡಿದೆ. ಟ್ರೇಲರ್ ವೀಕ್ಷಿಸಿದವರ ಸಂಖ್ಯೆ ೧೧ ಲಕ್ಷ ದಾಟಿದ್ದರೆ, ಹಿಡ್ಕ ಹಿಡ್ಕ ಸಾಂಗ್ ನೋಡಿದವರ ಸಂಖೆ ೧೦ ಲಕ್ಷ ದಾಟಿದೆ.

  ಒಂದೊಳ್ಳೆ ಲವ್ ಸ್ಟೋರಿಯಿಂದ ಸಿನಿಮಾ ಶುರುವಾಗುತ್ತೆ. ಮದುವೆಯಾಗುತ್ತೆ. ಗೃಹಸ್ಥನಾದರೂ ಬ್ರಹ್ಮಚಾರಿಯಾಗಿಯೇ ಇರುತ್ತಾನೆ ನಾಯಕ. ಏಕೆ ಅನ್ನೋದನ್ನೇ ನಿರ್ದೇಶಕರು ಮಜವಾಗಿ ಹೇಳಿದ್ದಾರೆ ಎನ್ನುವ ನೀನಾಸಂ ಸತೀಶ್, ಸದ್ಯಕ್ಕೆ ಲಂಡನ್‌ನಲ್ಲಿದ್ದಾರೆ. ರಿಲೀಸ್ ಹೊತ್ತಿಗೆ ಭಾರತಕ್ಕೆ ವಾಪಸ್ ಬರುವ ಸಾಧ್ಯತೆ ಇದೆ.

  ಸತೀಶ್ ಜೊತೆ ಸೊಂಟ ಬಳುಕಿಸಿರುವುದು ಆದಿತಿ ಪ್ರಭುದೇವ. ನಿರ್ದೇಶನ ಚಂದ್ರಮೋಹನ್ ಅವರದ್ದು. 

 • ಹಳ್ಳಿಯನ್ನು ದತ್ತು ಪಡೆದ ನೀನಾಸಂ ಸತೀಶ್

  sathish ninasam adopts a village

  ಸೆಲಬ್ರಿಟಿಗಳು ಸಮಾಜಸೇವೆಯತ್ತ ಮುಖಮಾಡುವುದು ಹೊಸದೇನೂ ಅಲ್ಲ. ಹಲವು ಕಲಾವಿದರು, ಅನಾಥಾಶ್ರಮಗಳು, ವೃದ್ಧಾಶ್ರಮಗಳಿಗೆ ನೆರವು ನೀಡುವ, ಕೆಲವರು ಸ್ವತಃ ನಡೆಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಶಾಲೆಗಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಕುಡಿಯುವ ನೀರು ಪೂರೈಕೆ, ಕೆರೆಗಳ ಅಭಿವೃದ್ದಿಗೆ ಮುಂದಾಗುತ್ತಾರೆ.ಆದರೆ, ನೀನಾಸಂ ಸತೀಶ್, ಸಮಾಜ ಸೇವೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಹಳ್ಳಿಯೊಂದನ್ನು ದತ್ತು ಪಡೆದಿದ್ದಾರೆ.

  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಳ್ಳೆಗಾಲ ಅನ್ನೋ ಹಳ್ಳಿಯನ್ನ ನೀನಾಸಂ ಸತೀಶ್ ದತ್ತು ಪಡೆದುಕೊಂಡಿದ್ದಾರೆ. ಮುಂದಿನ ಯೋಜನೆಗಳನ್ನು ಇನ್ನು ಮುಂದಷ್ಟೇ ಮಾಡಬೇಕಿದೆ. ಸದ್ಯಕ್ಕೆ ಗ್ರಾಮಸ್ಥರ ಜೊತೆ ಚರ್ಚೆಗಳು ಶುರುವಾಗಿವೆ. ಅಯೋಗ್ಯ ಚಿತ್ರದ ಚಿತ್ರೀಕರಣಕ್ಕೆ ಮಂಡ್ಯ ಸುತ್ತಮುತ್ತಲ ಹಳ್ಳಿಗಳನ್ನು ಸುತ್ತಿದ್ದ ಸತೀಶ್, ಸ್ವತಃ ಹಳ್ಳಿಯೊಂದನ್ನು ಪಡೆದಿರುವುದು ಮೆಚ್ಚುವ ವಿಷಯವೇ ಸರಿ.

  ಮೂಲತಃ ಮಂಡ್ಯ ಜಿಲ್ಲೆಯವರೇ ಆದ ನೀನಾಸಂ ಸತೀಶ್, ಹಳ್ಳಿಯೊಂದನ್ನು ದತ್ತು ಪಡೆದು ಹೊಸ ಹೆಜ್ಜೆ ಇಟ್ಟಿದ್ದಾರೆ. ಕನ್ನಡದಲ್ಲಿ ಹೀಗೆ ಹಳ್ಳಿಯೊಂದನ್ನು ದತ್ತು ಪಡೆದಿರುವ ಮತ್ತೊಬ್ಬ ನಟ ಪ್ರಕಾಶ್ ರೈ ಮಾತ್ರ. ಈಗ ನೀನಾಸಂ ಸತೀಶ್ ಅದೇ ಹಾದಿ ತುಳಿದಿದ್ದಾರೆ.

 • ಹಿಡ್ಕ.. ಹಿಡ್ಕ.. ತಡ್ಕ.. ತಡ್ಕ.. ಸುರ್ವಾತು ಹಬ್ಬ..

  bramhachari hidke hidke song goes rending

  ಬ್ರಹ್ಮಚಾರಿ ಚಿತ್ರದ ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ.. ತಡ್ಕ ತಡ್ಕ ತಡ್ಕ ವಸಿ ತಡ್ಕ ತಡ್ಕ ತಡ್ಕ.. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಹಾಡಿನ ಮೇಕಿಂಗ್ ದೃಶ್ಯಗಳೂ ಇರೋ ಹಾಡಿನಲ್ಲಿ ಬಿಂದಾಸ್ ಆಗಿ ಕುಣಿದಿರೋದು ನೀನಾಸಂ ಸತೀಶ್ ಮತ್ತು ಆದಿತಿ ಪ್ರಭುದೇವ.

  ಪಡ್ಡೆಗಳ ಹಾರ್ಟಿಗೇ ಬೆಂಕಿಯಿಡುವಂತಿರುವ ಹಾಡಿದು. ಅಬ್ಬರ ಶುರುವಾಗಿದೆ. ಹಾಡಿನ ಸಾಹಿತ್ಯ ನೋಡುತ್ತಿದ್ರೆ.. ಇದು ಇನ್ನೊಂದು ಟಿಕ್ ಟಾಕ್ ಟ್ರೆಂಡ್ ಆಗೋ ಎಲ್ಲ ಲಕ್ಷಣಗಳೂ ಇವೆ. ಭರಾಟೆ ಚೇತನ್ ಸಾಹಿತ್ಯಕ್ಕೆ ಧರ್ಮ ವಿಶ್ ಸಂಗೀತವಿದೆ. ಶ್ಯಾನೆ ಟಾಪಾಗವ್ಳೆ ಹಾಡಿನಲ್ಲಿ ಶ್ಯಾನೆ ಕಿಕ್ ಕೊಟ್ಟಿದ್ದ ಧರ್ಮ ವಿಶ್.. ಇಲ್ಲಿ ತಡ್ಕೊಳ್ಳೋಕೆ ಆಗದಂತಾ ಕಿಕ್ ಕೊಟ್ಟಿದ್ದಾರೆ.

  ಉದಯ್ ಕೆ.ಮೆಹ್ತಾ ನಿರ್ಮಾಣದ ಚಿತ್ರಕ್ಕೆ ಚಂದ್ರ ಮೋಹನ್ ನಿರ್ದೇಶನವಿದೆ. ನವೀನ್ ಸಜ್ಜು ಪಿಂಕಿ ಮೈದಾಸನಿ, ಭಾರ್ಗವಿ ಪಿಳ್ಳೈ ಮಾದಕ ಧ್ವನಿಯ ಹಾಡಿನ ಕಿಕ್ಕನ್ನು ಮಾತ್ರ ಹಿಡ್ಯೋಕೂ ಆಗಲ್ಲ.. ತಡ್ಯೋಕೂ ಆಗಲ್ಲ.