` sathish neenasam, - chitraloka.com | Kannada Movie News, Reviews | Image

sathish neenasam,

  • ಪೆಟ್ರೋಮ್ಯಾಕ್ಸ್.. ಪಿಚ್ಚು..ವಿಕೆಟ್ಟು..ಅಶ್ಲೀಲ.. ಆಟ ಶುರು..

    ಪೆಟ್ರೋಮ್ಯಾಕ್ಸ್.. ಪಿಚ್ಚು..ವಿಕೆಟ್ಟು..ಅಶ್ಲೀಲ.. ಆಟ ಶುರು..

    ಮಂಚದ ಮೇಲೆ ಅವರಿಬ್ಬರೂ ಅರೆಬೆತ್ತಲೆ.. ಆಟ ಮುಗಿದ ಸೂಚನೆ.. ಅವಳದ್ದು ಸಿಂಗಲ್ ಮೀನಿಂಗ್ ಪ್ರಶ್ನೆ.. ಇವನದ್ದು ಅಷ್ಟೇ ಸಿಂಗಲ್ ಮೀನಿಂಗ್ ಉತ್ತರ.. ಮುಗಿದ ಕೂಡಲೇ ಶ್ಲೀಲ..ಅಶ್ಲೀಲದ ವೇದಾಂತ..ಕೊನೆಯಲ್ಲೊಂದು ಡಬಲ್ ಮೀನಿಂಗ್ ಡೈಲಾಗು..ಅರ್ಥವಾದವರ ಕಿವಿ ಪಾವನ.. ಟ್ರೇಲರಿನ ಆರಂಭದಲ್ಲಿ ಕಣ್ಣು.. ಟ್ರೇಲರುದ್ದಕ್ಕೂ ಕಿವಿ ತಣಿಸುವ ಸಂಭಾಷಣೆಗಳೊಂದಿಗೆ ಟ್ರೇಲರ್ ಬಿಟ್ಟಿದ್ದಾರೆ ಡೈರೆಕ್ಟರ್ ವಿಜಯ್ ಪ್ರಸಾದ್. ಪೆಟ್ರೋಮ್ಯಾಕ್ಸ್ ಬೆಳಕು ಜೋರಾಗಿಯೇ ಇರುವಂತಿದೆ.

    ಜುಲೈ 15ಕ್ಕೆ ರಿಲೀಸ್ ಆಗುತ್ತಿರೋ ಪೆಟ್ರೋಮ್ಯಾಕ್ಸ್ ಸತೀಶ್ ಪಿಕ್ಚರ್ಸ್ ಮತ್ತು ಸ್ಟುಡಿಯೋ 18 ನಿರ್ಮಾಣದ್ದು. ನೀನಾಸಂ ಸತೀಶ್, ಹರಿಪ್ರಿಯಾ, ನಾಗಭೂಷಣ್, ಕಾರುಣ್ಯ ರಾಮ್, ಅರುಣ್ ಕುಮಾರ್, ಅಚ್ಯುತ್ ಕುಮಾರ್, ಸುಮನ್ ರಂಗನಾಥ್, ವಿಜಯಲಕ್ಷ್ಮಿ ಸಿಂಗ್, ಪದ್ಮಜಾ ರಾವ್, ಮಿಮಿಕ್ರಿ ಗೋಪಿ.. ಎಲ್ಲರೂ ಪೆಟ್ರೋಮ್ಯಾಕ್ಸ್ ಬೆಳಕಲ್ಲಿ ಅದ್ಭುತವಾಗಿ ಕಾಣಿಸಲಿದ್ದಾರೆ ಅನ್ನೋದಂತೂ ಪಕ್ಕಾ. ಪೆಟ್ರೋಮ್ಯಾಕ್ಸ್ ನೋಡೋಕೆ ಜುಲೈ 15ಕ್ಕೆ ಸಿದ್ಧರಾಗಿ. ಇದು ಖಂಡಿತವಾಗಿಯೂ ಅದಲ್ಲ ಅನ್ನೋದು ವಿಜಯ್ ಪ್ರಸಾದ್ ಭರವಸೆ.

  • ಫೈನಲ್ ಸ್ಟೇಜ್`ನಲ್ಲಿ ಪೆಟ್ರೋಮ್ಯಾಕ್ಸ್

    ಫೈನಲ್ ಸ್ಟೇಜ್`ನಲ್ಲಿ ಪೆಟ್ರೋಮ್ಯಾಕ್ಸ್

    ನೀನಾಸಂ ಸತೀಶ್, ಹರಿಪ್ರಿಯಾ ಮತ್ತು ನೀರ್‍ದೋಸೆ ವಿಜಯ್ ಪ್ರಸಾದ್ ಕಾಂಬಿನೇಷನ್ನಿನ ಹೊಸ ಸಿನಿಮಾ ಪೆಟ್ರೋಮ್ಯಾಕ್ಸ್. ಮೈಸೂರು ದಸರಾ ವೇಳೆ ಚಿತ್ರೀಕರಣ ಶುರು ಮಾಡಿದ್ದ ಚಿತ್ರತಂಡ, ವರ್ಷದ ಕೊನೆಯ ಹೊತ್ತಿಗೆ ಫೈನಲ್ ಸ್ಟೇಜ್ ತಲುಪಿದೆ.

    2 ಶೆಡ್ಯೂಲ್ ಶೂಟಿಂಗ್ ಪ್ಲಾನ್ ಮಾಡಿದ್ದ ಪೆಟ್ರೋಮ್ಯಾಕ್ಸ್ ಟೀಂ, ಈಗ ಕೊನೆಯ ಹಂತದ ಚಿತ್ರೀಕರಣ ಶುರು ಮಾಡಿದೆ. ಅದು ಮುಗಿದರೆ ಡೈರೆಕ್ಟ್ ಪೋಸ್ಟ್ ಪ್ರೊಡಕ್ಷನ್.

    ಸತೀಶ್ ಮತ್ತು ಹರಿಪ್ರಿಯಾ ಇದೇ ಮೊದಲ ಬಾರಿಗೆ ಜೊತೆಯಾಗಿರುವ ಚಿತ್ರದಲ್ಲಿ ಅರುಣ್, ಕಾರುಣ್ಯ ರಾಮ್ ಮೊದಲಾದವರು ನಟಿಸಿದ್ದಾರೆ. ಸತೀಶ್ ಪಿಕ್ಚರ್ಸ್ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರೋ ಚಿತ್ರವಿದು.

  • ಬಾಕ್ಸಾಫೀಸ್‍ನಲ್ಲಿ ಅಯೋಗ್ಯನ ಆರ್ಭಟ

    ayogya running successfully

    ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್ ಅಭಿನಯದ ಅಯೋಗ್ಯ ಸಿನಿಮಾಗೆ ಅದ್ಭುತ ಓಪನಿಂಗ್ ಸಿಕ್ಕಿದೆ. ಇದೇ ಶುಕ್ರವಾರ ರಿಲೀಸ್ ಆಗಿರುವ ಸಿನಿಮಾ, ಮೂರೇ ದಿನಕ್ಕೆ 4 ಕೋಟಿ ಗಳಿಕೆ ಮಾಡಿದೆಯಂತೆ. ಹಳೇ ಮೈಸೂರು ಭಾಗದಲ್ಲಂತೂ ಚಿತ್ರ ಮಂದಿರಗಳು ತುಂಬಿ ತುಳುಕಿವೆ.

    ರಾಜ್ಯಾದ್ಯಂತ 280 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾಗೆ ಎಲ್ಲೆಡೆ ಹೌಸ್‍ಫುಲ್ ಪ್ರದರ್ಶನದ ಭಾಗ್ಯ ಸಿಕ್ಕಿದೆ. ಮಂಡ್ಯ ಸೊಗಡಿನ ಚಿತ್ರಕ್ಕೆ ಉತ್ತರ ಕರ್ನಾಟಕ ಭಾಗದಲ್ಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಮಕ್ ಸಿನಿಮಾದಲ್ಲೂ ಗೆಲುವಿನ ಮ್ಯಾಜಿಕ್ ಮಾಡಿದ್ದ ನಿರ್ಮಾಪಕ ಚಂದ್ರಶೇಖರ್, ಅಯೋಗ್ಯ ಚಿತ್ರದಲ್ಲೂ ಯೋಗ ಕಂಡಿದ್ದಾರೆ.

  • ಬಾಂಬ್ ಬ್ಲಾಸ್ಟ್ - ನಟ ನೀನಾಸಂ ಸತೀಶ್​ಗೆ ಗಾಯ

    sathish neenasam injured

    ಗೋದ್ರಾ ಚಿತ್ರದ ಚಿತ್ರೀಕರಣದ ವೇಳೆ ನಟ ನೀನಾಸಂ ಸತೀಶ್ ಗಾಯಗೊಂಡಿದ್ದಾರೆ. ಬಾಂಬ್ ಬ್ಲಾಸ್ಟ್  ದೃಶ್ಯದ ಚಿತ್ರೀಕರಣದ ವೇಳೆ ಜೀಪ್ ಕಿಟಕಿ ಗಾಜು ಒಡೆದು ನಟ ಸತೀಶ್​ಗೆ ಗಾಯಗೊಂಡಿದ್ದಾರೆ. ಕುಕ್ಕೆ ಸುಬ್ರಮಣ್ಯದಲ್ಲಿ  ಗೋದ್ರಾ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ವಿನೋದ್ ಮಾಸ್ಟರ್ ನಿರ್ದೇಶನದಲ್ಲಿ ಸಾಹಸ ದೃಶ್ಯಗಳನ್ನು ಶೂಟ್ ಮಾಡಲಾಗುತ್ತಿತ್ತು. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತಾದರೂ, ಅವಘಡ ಸಂಭವಿಸಿದೆ.

    ಅದು ಜೀಪ್​ನಲ್ಲಿ ಸತೀಶ್ ಡ್ರೈವ್ ಮಾಡಿಕೊಂಡು ಹೋಗುವಾಗ ಬಾಂಬ್ ಸ್ಫೋಟಿಸುವ ದೃಶ್ಯದ ಚಿತ್ರೀಕರಣ. ಬ್ಲಾಸ್ಟ್ ಆದಾಗ ಜೀಪ್ ಕಿಟಕಿ ಗಾಜು ಹೊಡೆದು ಸತೀಶ್  ಬಲಭಾಗದ ಹೊಟ್ಟೆಗೆ ಚುಚ್ಚಿಕೊಂಡಿದೆ. ನೀನಾಸಂ ಸತೀಶ್ ಸದ್ಯ ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡ್ಯೂಪ್ ಬಳಸಿಕೊಳ್ಳುವ ಅವಕಾಶವಿದ್ದರೂ, ಡ್ಯೂಪ್ ಇಲ್ಲದೆ ಸಾಹಸದಲ್ಲಿ ಪಾಲ್ಗೊಂಡಿದ್ದು ಕೂಡಾ ಅಪಘಾತಕ್ಕೆ ಕಾರಣ. ನೀನಾಸಂ ಸತೀಶ್​ಗೆ ಯಾವುದೇ ತೀವ್ರ ಅಪಾಯ ಸಂಭವಿಸಿಲ್ಲ.

  • ಬ್ರಹ್ಮಚಾರಿ : ಜಾಸ್ತಿ ಸೀರಿಯಸ್.. ಸ್ವಲ್ಪ ಪೋಲಿ.. ಅದೇ ವೀಕ್ನೆಸ್

    bramhachari trailer relased

    ಬ್ರಹ್ಮಚಾರಿ ಟೀಸರ್ ರಿಲೀಸ್ ಆಗಿದೆ. ಟೀಸರ್ ತುಂಬಾ ಕಚಗುಳಿಯಿಡುವ ಡೈಲಾಗ್ಸ್ ಇವೆ. ಬ್ರಹ್ಮಚಾರಿ ಟೀಸರ್ ಸ್ಪೆಷಾಲಿಟಿ ಏನೆಂದರೆ, ಅಲ್ಲಿ ನೀನಾಸಂ ಸತೀಶ್ ಪಾತ್ರ ನರಳುತ್ತಿದ್ದರೆ, ನೋಡುವವರು ನಗುತ್ತಿರುತ್ತಾರೆ. ಬ್ರಹ್ಮಚಾರಿ ಟೀಸರ್ ತುಸು ಪೋಲಿತನದಿಂದಲೇ ಶುರುವಾದರೂ, ಅಲ್ಲೇನೋ ಸೀರಿಯಸ್ ಪ್ರಾಬ್ಲಂ ಇದೆ.

    ಡಬಲ್ ಮೀನಿಂಗ್ ಇಲ್ಲವೇ ಇಲ್ಲ. ಎಲ್ಲವೂ ನೇರಾನೇರ. ಹಾಗಂತ ಕೆಟ್ಟಾ ಕೊಳಕ ಭಾಷೆಯೇನೂ ಇಲ್ಲ. ನೀನಾಸಂ ಸತೀಶ್ ಜೊತೆ ಮಾತನಾಡುವ ಪ್ರತಿಯೊಂದು ಪಾತ್ರವೂ ಸೀರಿಯಸ್ಸಾಗಿಯೇ ಮಾತನಾಡುತ್ತೆ. ಆದಿತಿಯೂ ಸೇರಿದಂತೆ.. ಕೇಳುವವರು ಕೆಟ್ಟದಾಗಿ ಕೇಳಿಸಿಕೊಂಡ್ರೆ ನಿರ್ದೇಶಕರು ಪಾಪ ಏನ್ ಮಾಡೋಕಾಗುತ್ತೆ.

    ಮದುವೆಯಾಗೋ ಬ್ರಹ್ಮಚಾರಿಗೆ ಅದೊಂದೇ ವೀಕ್ನೆಸ್. ಅದರ ಸುತ್ತಲೇ ಇದೆ ಟೀಸರ್. ಸತೀಶ್, ಆದಿತಿ ಪ್ರಭುದೇವ ಹಿಡ್ಕ ಹಿಡ್ಕ ಸಾಂಗಿನ ಝಲಕ್ಕೂ ಇರೋ ಟೀಸರಿನಲ್ಲಿ ದತ್ತಣ್ಣ ಡಾಕ್ಟರ್ ಆಗಿ, ಶಿವರಾಜು, ಅಶೋಕ್ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಆದಿತಿಯ ತಾಯಿಯಾಗಿ ಪದ್ಮಜಾ ರಾವ್, ಸರ್ಕಾರಿ ನೌಕರನಾಗಿ ಅಚ್ಯುತ್ ಕುಮಾರ್ ಇದ್ದಾರೆ.

    ಉದಯ್ ಕೆ.ಮೆಹ್ತಾ ನಿರ್ಮಾಣದ ಚಿತ್ರಕ್ಕೆ ಚಂದ್ರ ಮೋಹನ್ ಡೈರೆಕ್ಟರ್.

  • ಬ್ರಹ್ಮಚಾರಿ ಮಾಡೋಕೆ ಧೈರ್ಯ ಬೇಕು - ನೀನಾಸಂ ಸತೀಶ್

    bramhachari is a darin experiment

    ಬ್ರಹ್ಮಚಾರಿ, ಇದೇ ವಾರ ರಿಲೀಸ್ ಆಗುತ್ತಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಚಿತ್ರದ ಸಬ್ಜೆಕ್ಟ್ ಹೇಗಿದೆಯೆಂದರೆ, ಇಂತಹ ಸಿನಿಮಾ ಮಾಡೋಕೆ ಧೈರ್ಯ ಬೇಕು ಅಂತಾರೆ ನೀನಾಸಂ ಸತೀಶ್.

    ಇಮೇಜ್‌ಗಳನ್ನೆಲ್ಲ ಪಕ್ಕಕ್ಕಿಟ್ಟು ಹೊಸ ಸಾಹಸಕ್ಕೆ ಕೈ ಹಾಕುವುದು ಅಷ್ಟು ಸುಲಭ ಅಲ್ಲ. ಹಾಗೆ ಸಿನಿಮಾ ಮಾಡಿ, ಜನ ಮೆಚ್ಚುವಂತೆ ಮಾಡುವುದೂ ಸುಲಭವಲ್ಲ. ಜನ ಮೆಚ್ಚಿರುವ ಯಾವುದೇ ಮಾದರಿಯ ಸಿನಿಮಾ ಮಾಡುವುದು ಸುಲಭ. ಆದರೆ, ಇದು ಬೇರೆಯದೇ ದಾರಿ. ರಿಸ್ಕ್ ತೆಗೆದುಕೊಂಡಿದ್ದೇವೆ. ಗೆಲ್ಲುವ ವಿಶ್ವಾಸವೂ ಇದೆ ಅಂತಾರೆ ಸತೀಶ್.

    ಒಂದು ಸಣ್ಣ ವಿಷಯ ಡೈವೋರ್ಸ್ವರೆಗೆ ಹೋಗುತ್ತೆ. ಇಂಥವು ಸಾಮಾನ್ಯವಾಗಿ ಎಲ್ಲರ ಫ್ಯಾಮಿಲಿಗಳಲ್ಲೂ ಆಗುತ್ತೆ. ಸೆಕ್ಷÄವಲ್ ಪ್ರಾಬ್ಲಂ ಕಥೆ, ಆದರೆ ಎಲ್ಲಿಯೂ ಅದನ್ನು ನೇರವಾಗಿ ಹೇಳೋದೇ ಇಲ್ಲ. ನೋಡುವವರು ನಗುತ್ತಾರೆಯೇ ಹೊರತು, ಮಜುಗರಪಡುವುದಿಲ್ಲ ಎನ್ನುವ ಕಾನ್ಫಿಡೆನ್ಸ್ ಸತೀಶ್ ಅವರದ್ದು.

    ಸತೀಶ್, ಆದಿತಿ ಕೌಂಟರ್ ಆ್ಯಕ್ಟಿಂಗ್ ಚಿತ್ರದ ಹೈಲೈಟ್. ಚಂದ್ರಮೋಹನ್ ಒಂದು ಸೂಕ್ಷö್ಮ ಸಬ್ಜೆಕ್ಟ್ನ್ನು ತುಂಬಾ ಚೆನ್ನಾಗಿ ಹ್ಯಾಂಡಲ್ ಮಾಡಿದ್ದಾರೆ ಎನ್ನುವ ಸತೀಶ್, ನಿರ್ಮಾಪಕ ಉದಯ್ ಕುಮಾರ್ ಅವರ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.

  • ಬ್ರಹ್ಮಚಾರಿ, ಫಸ್ಟ್ ನೈಟಲ್ಲೇ ರನೌಟ್..!!!

    bramhachari teaser brings smile

    ನೀನಾಸಂ ಸತೀಶ್ ಹುಟ್ಟುಹಬ್ಬದ ದಿನವೇ ರನೌಟ್ ಆಗಿ ಪ್ರೇಕ್ಷಕರ ಮುಖದಲ್ಲಿ ನಗು ಅರಳಿಸಿದ್ದಾರೆ. ಬ್ರಹ್ಮಚಾರಿ ಚಿತ್ರದ ಟೀಸರ್ ಅಷ್ಟರಮಟ್ಟಿಗೆ ನಗು ಉಕ್ಕಿಸಿದೆ. ಚಿತ್ರದ ಕಥೆ ಏನಿರಬಹುದು..? ಹೇಗಿರಬಹುದು.? ಎಂಬ ಕುತೂಹಲಕ್ಕೂ ಟೀಸರ್‍ನಲ್ಲಿ ಚಿಕ್ಕ ಉತ್ತರ ಸಿಕ್ಕಿದೆ. ಇನ್ನು ಬಾಯಿಚಪ್ಪರಿಸಿಕೊಂಡು, ಕಿವಿ ಅಗಲಿಸಿಕೊಂಡು ಚಿತ್ರಕ್ಕೆ ವೇಯ್ಟ್ ಮಾಡುವವರ ಸಂಖ್ಯೆಯೂ ಹೆಚ್ಚಿದೆ.

    ಉದಯ್ ಮೆಹ್ತಾ ಬ್ಯಾನರ್‍ನಲ್ಲಿ ಸತೀಶ್ ನಟಿಸುತ್ತಿರುವ ಬ್ರಹ್ಮಚಾರಿ ಚಿತ್ರದ ಟೀಸರ್‍ನಲ್ಲಿ ಕಾಮಿಡಿಯ ಟಚ್ ಇದೆ. ಫಸ್ಟ್ ನೈಟ್ ದಿನವೇ ಆದಿತಿ ಪ್ರಭುದೇವ ಎದುರು ರನೌಟ್ ಆಗುವ ಸತೀಶ್, ಡಾಕ್ಟರ್ ದತ್ತಣ್ಣನ ಬಳಿ ಕಷ್ಟ ಹೇಳಿಕೊಳ್ಳುವ ಪುಟ್ಟ ಬಿಟ್ ಟೀಸರ್‍ನಲ್ಲಿದೆ. ನಾಯಕನ ಕಷ್ಟ ಹೇಳೋದು ಶಿವರಾಜ್ ಕೆಆರ್ ಪೇಟೆ.

    ಇದು ಬಾಂಬೆ ಮಿಠಾಯಿ, ಡಬಲ್ ಎಂಜಿನ್ ಚಿತ್ರಗಳನ್ನು ನಿರ್ದೇಶಿಸಿದ್ದ ಚಂದ್ರಮೋಹನ್ ನಿರ್ದೇಶನದ ಸಿನಿಮಾ.

  • ಮಂಡ್ಯದ ಗಂಡು ಕಲಾ.. ಕನ್ನಡದ ಆಸ್ತಿ ಕಲಾ.. ಹಾಡಿದ್ದು ನೀನಾಸಂ ಸತೀಶ್ ಕಲಾ..

    sathish ninasam sings a song for ambi's birthday

    ಮಂಡ್ಯದ ಗಂಡು ಕಲಾ.. ಕನ್ನಡದ ಆಸ್ತಿ ಕಲಾ.. ದೋಸ್ತೀಗೆ ಬ್ರಾಂಡು ಕಲಾ.. ನಮ್ ಜಲೀಲ..

    ಪಕ್ಕಾ ಮಂಡ್ಯ ಸ್ಟೈಲ್ ಕನ್ನಡದಲ್ಲಿ ಅಂಬಿ ಹುಟ್ಟುಹಬ್ಬಕ್ಕಾಗಿಯೇ ಹಾಡಿರೋದು ನಟ ನೀನಾಸಂ ಸತೀಶ್. ಜಲೀಲನ ಬುಲ್ ಬುಲ್ ಡೈಲಾಗ್್ನಿಂದ ಶುರುವಾಗುವ ಹಾಡಿನ ಮಧ್ಯೆ ಮಧ್ಯೆ ಅಂಬಿಯ ಹೇಳ್ರಪಾ.. ನೋ ವೇ.. ಚಾನ್ಸೇ ಇಲ್ಲ. ನಿಮಗ್ಯಾಕ್ ಬೇಕ್ರೋ ಅದು.. ತಿಕಾ ಮುಚ್ಕೊಂಡ್ ಹೋಗ್ರಲೇ.. ಅನ್ನೋ ಅಣಿಮುತ್ತುಗಳೂ ಇವೆ. ಕುತ್ತೇ.. ಕನ್ವರ್ ನಹೀ.. ಕನ್ವರ್ ಲಾಲ್ ಬೋಲೋ.. ಅನ್ನೋ ಡೈಲಾಗ್ನೊಂದಿಗೆ ಹಾಡು ಕೊನೆಯಾಗುತ್ತದೆ.

    ಇಷ್ಟಕ್ಕೂ ಈ ಹಾಡಿಗೆ ಸಾಹಿತ್ಯ ಬರೆದವರು ಭರ್ಜರಿ ಚೇತನ್ ಕುಮಾರ್. ಸಂತೋಷ್ ವೆಂಕಿ ಸಂಗೀತ ನೀಡಿರೋ ಹಾಡು, ಈಗ ಅಂಬಿ ಅಭಿಮಾನಿಗಳ ಹೃದಯದಲ್ಲಿ ವೈರಲ್ ಆಗಿದೆ.

  • ಮದುವೆಯಾದ 80% ಜನರ ಕಥೆ : ಬ್ರಹ್ಮಚಾರಿ ಫ್ಯಾಮಿಲಿ ಸ್ಟೋರಿ

    80 percent of couples problems in brmhachari

    ಬ್ರಹ್ಮಚಾರಿ ಚಿತ್ರಕ್ಕೆ ಯು/ಎ ಸೆನ್ಸಾರ್ ಪತ್ರ ಸಿಕ್ಕಿದೆ. ಇದೇ ವಾರ ರಿಲೀಸ್ ಕೂಡಾ ಆಗ್ತಿದೆ. ಆದರೆ, ಚಿತ್ರದ ಟ್ರೇಲರ್, ಹಾಡು ನೋಡಿದವರು ಇದು ಸೆಕ್ಸ್ ಕಾಮಿಡಿ ಚಿತ್ರನಾ ಎಂಬ ಡೌಟಿಗೆ ಬಿದ್ದಿದ್ದಾರೆ. ಆದರೆ, ರಿಯಾಲಿಟಿ ಅದಲ್ಲ. ಚಿತ್ರದಲ್ಲಿ ಮದುವೆಯಾದ 80% ಜನ ಎದುರಿಸುವ ಸೂಕ್ಷö್ಮ ಸಮಸ್ಯೆಯೊಂದರ ಸುತ್ತ ಕಥೆ ಇದೆ. ಎಲ್ಲಿಯೂ ಅಶ್ಲೀಲತೆಯಿಲ್ಲ. ಬದಲಿಗೆ ಅದನ್ನು ಕಾಮಿಡಿಯಾಗಿ ಹೇಳಿದ್ದೇವೆ. ವಲ್ಗಾರಿಟಿ ಇಲ್ಲ ಎಂದು ವಿಶ್ವಾಸದಿಂದ ಹೇಳ್ತಾರೆ ನಿರ್ದೇಶಕ ಚಂದ್ರಮೋಹನ್.

    ಇನ್ನು ಚಿತ್ರದ ನಾಯಕಿ ಆದಿತಿ ಪ್ರಭುದೇವಗೆ, ನೀನಾಸಂ ಸತೀಶ್ ಅವರನ್ನು ನೋಡಿದರೇನೇ ನಗು ಬರುತ್ತಿತ್ತಂತೆ. ಅಷ್ಟರಮಟ್ಟಿಗೆ ಅವರು ಇನ್ವಾಲ್ವ್ ಆಗಿದ್ದರು. ತುಂಬಾ ಕಡೆ ಕೋಡ್ ವರ್ಡ್ ಸಂಭಾಷಣೆ ಇದೆ ಎನ್ನುವ ಆದಿತಿ, ನೋ ವಲ್ಗಾರಿಟಿ ಎನ್ನುತ್ತಾರೆ.

    ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಇದುವರೆಗೆ ಫ್ಯಾಮಿಲಿ ಸಬ್ಜೆಕ್ಟ್ಗಳನ್ನೇ ಸಿನಿಮಾ ಮಾಡಿದವರು  ಮತ್ತು ಪ್ರತಿ ಬಾರಿಯೂ ಗೆದ್ದವರು. ಹೀಗಾಗಿ ಅಶ್ಲೀಲತೆಯ ಸೋಂಕು ಇರಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ಸ್ಸೋ.. ಗೋ ವಿತ್ ಫ್ಯಾಮಿಲಿ.

  • ಮುತ್ತು ಕೊಡೋಕೆ ರೆಡಿಯಾದ್ರು ನೀನಾಸಂ ಸತೀಶ್

    ayogya heads towards 100 days

    ಅಯೋಗ್ಯ.. ಮಹೇಶ್ ನಿರ್ದೇಶನದ ಮೊದಲ ಸಿನಿಮಾ. ಚಂದ್ರಶೇಖರ್ ನಿರ್ಮಾಣದ ಚಿತ್ರ ಸೂಪರ್ ಹಿಟ್ ಆಗಿ ಈಗಲೂ ಪ್ರದರ್ಶನ ಕಾಣುತ್ತಿದೆ. ಈಗ ಅಯೋಗ್ಯ, ದಾಖಲೆ ಬರೆಯಲು ರೆಡಿಯಾಗಿದೆ. ಸಿನಿಮಾ ಶತದಿನೋತ್ಸವ ಸಮೀಪಿಸಿದೆ.

    100ಕ್ಕೆ ಮುತ್ತು ಕೊಡುವ ಸಮಯ ಹತ್ತಿರವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ನೀನಾಸಂ ಸತೀಶ್ 100ರ ಮುತ್ತಿನ ಸಂಭ್ರಮದ ಸುಳಿವು ಕೊಟ್ಟಿದ್ದಾರೆ. ರಚಿತಾ ರಾಮ್ ನಾಯಕಿಯಾಗಿರುವ ಸಿನಿಮಾ ನೀನಾಸಂ ಸತೀಶ್ ವೃತ್ತಿ ಜೀವನದ ಸೂಪರ್ ಹಿಟ್ ಸಿನಿಮಾ ಆಗಿದೆ.

  • ಮೂವರು ಬೇಡ ಎಂದಿದ್ದು ನೀನಾಸಂಗೆ ಸಿಕ್ಕಿತು..!

    tiger ninasam gets iger galli

    ಟೈಗರ್ ಗಲ್ಲಿ. ನೀನಾಸಂ ಸತೀಶ್ ಅಭಿನಯದ ಸಿನಿಮಾ. ಇದೇ ಅಕ್ಟೋಬರ್ 27ಕ್ಕೆ ರಿಲೀಸ್ ಆಗುತ್ತಿದೆ. ನೀನಾಸಂ ಸತೀಶ್‍ರ ಮಾಸ್ ಲುಕ್ ಹಾಗೂ ಚಿತ್ರವನ್ನು ನೋಡಿ ಮೆಚ್ಚಿಕೊಂಡಿರುವ ಸುದೀಪ್, ಸ್ವತಃ ಚಿತ್ರವನ್ನು ಪ್ರಮೋಟ್ ಮಾಡುತ್ತಿರುವುದು ಚಿತ್ರದ ನಿರೀಕ್ಷೆ ಹೆಚ್ಚಿಸಿದೆ.

    ಆದರೆ, ಈ ಚಿತ್ರ ನೀನಾಸಂ ಪಾಲಗೆ ದಕ್ಕಿದ್ದರ ಹಿಂದೊಂದು ಕಥೆಯಿದೆ. ಚಿತ್ರದ ಕಥೆಯನ್ನು ರೆಡಿ ಮಾಡಿಕೊಂಡು ನಿರ್ಮಾಪಕ ಎನ್.ಎಂ. ಕುಮಾರ್ ಅವರಿಗೆ ಹೇಳಿದಾಗ, ಅವರು ಕಥೆಗೆ ಓಕೆ ಹೇಳಿದರಂತೆ. ಇನ್ನು ನಾಯಕನನ್ನು ಸೆಲೆಕ್ಟ್ ಮಾಡು. ಆದರೆ, ಯಾವುದೇ ಕಾರಣಕ್ಕೂ ಕಥೆ ಬದಲಾಯಿಸಬೇಡ ಎಂದರಂತೆ. ಆದರೆ, ರವಿ ಶ್ರೀವತ್ಸ ಸಂಪರ್ಕಿಸಿದ ಮೂವರು ಹೀರೋಗಳೂ ಕಥೆಯಲ್ಲಿ ಬದಲಾವಣೆಯಾಗಬೇಕು.. ತನ್ನ ಪಾತ್ರವೇ ಹೈಲೈಟ್ ಆಗಬೇಕು ಎಂದು ಹೇಳಿದಾಗ, ರವಿ ಶ್ರೀವತ್ಸ ಅವರ ತಲೆಗೆ ಹೊಳೆದಿದ್ದು ನೀನಾಸಂ ಸತೀಶ್.

    ಈಗ ರವಿ ಶ್ರೀವತ್ಸ ಅವರಿಗೆ ನೀನಾಸಂ ಅಭಿನಯ ನೋಡಿದ ಮೇಲೆ, ನನ್ನ ಆಯ್ಕೆ ಸರಿಯಾಗಿದೆ ಎನಿಸಿದೆ. ಸಿನಿಮಾ ನೋಡಿದ ಮೇಲೆ ಆ ಮೂವರೂ ಹೀರೋಗಳು ಅಯ್ಯೋ.. ನಾನು ಈ ಸಿನಿಮಾ ಮಿಸ್ ಮಾಡಿಕೊಂಡೆ ಎಂದು ಹೇಳಿಯೇ ಹೇಳ್ತಾರೆ ಅನ್ನೋ ಆತ್ಮವಿಶ್ವಾಸ ರವಿ ಶ್ರೀವತ್ಸಗೆ ಇದೆ.

  • ಮೈ ನೇಮ್ ಈಸ್ ಸಿದ್ದೇಗೌಡ - ನೀನಾಸಂ ಸತೀಶ್ ಪಿಕ್ಚರ್

    sathish's debut movie is my name is siddegowda

    ಅಯೋಗ್ಯ ಚಿತ್ರದ ಟೈಟಲ್ ಕ್ಯಾರೆಕ್ಟರ್ ನೆನಪಿದೆಯಲ್ಲವೇ.. ಸಿದ್ದೇಗೌಡ. ಈಗ ಅದೇ ಹೆಸರಿನ ಸಿನಿಮಾವನ್ನು ನಿರ್ದೇಶನ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಅಯೋಗ್ಯ ನೀನಾಸಂ ಸತೀಶ್. ಹಾಗಂತ ಇದು ಅಯೋಗ್ಯ ಚಿತ್ರದ ಸೀಕ್ವೆಲ್ ಅಲ್ಲ ಅನ್ನೋದು ಸತೀಶ್ ಸ್ಪಷ್ಟನೆ.

    ನಿರ್ದೇಶನ ಮಾಡಬೇಕು ಎಂದು ಕಥೆ ಸಿದ್ಧಪಡಿಸಿದ್ದೆ. ಮೊದಲು ಚಿತ್ರಕ್ಕೆ ಮೈ ನೇಮ್ ಈಸ್ ಬೋರೇಗೌಡ ಎಂದು ಇಟ್ಟುಕೊಂಡಿದ್ದೆ. ಅಯೋಗ್ಯ ಚಿತ್ರ ಸಕ್ಸಸ್ ಆದ ನಂತರ, ಜನ ಸಿದ್ದೇಗೌಡನ ಪಾತ್ರವನ್ನು ಮೆಚ್ಚಿಕೊಂಡ ನಂತರ ಚಿತ್ರದ ಟೈಟಲ್‍ನ್ನು ಬದಲಿಸಿದೆ ಎಂದಿದ್ದಾರೆ ಸತೀಶ್.

    ಚಿತ್ರದ ಶೂಟಿಂಗ್ ಮಾರ್ಚ್‍ನಿಂದ ಶುರುವಾಗಲಿದ್ದು, ಇದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಂತೆ. ಸಿದ್ದೇಗೌಡ ಎನ್ನುವವನು ಹೇಗೆ ಜಾತಿ, ಧರ್ಮ ಮೀರಿ ಬೆಳೆಯುತ್ತಾನೆ ಎನ್ನುವುದು ಚಿತ್ರದ ಕಥೆ. ಹೀರೋಯಿನ್ ಮತ್ತಿತರ ವಿವರಗಳೆಲ್ಲ ಶೀಘ್ರದಲ್ಲೇ ಬಹಿರಂಗವಾಗಲಿದೆ.

  • ಮೈ ನೇಮ್ ಈಸ್ ಸಿದ್ದೇಗೌಡ ಮುಂದಿನ ವರ್ಷಕ್ಕೆ ಪಕ್ಕಾ

    my name is siddesh postponed to next year

    ನೀನಾಸಂ ಸತೀಶ್, ಸಿಕ್ಕಾಪಟ್ಟೆ ಬ್ಯುಸಿಯಾಗಿ ಹೋಗಿದ್ದಾರೆ. ಕೈತುಂಬಾ ಸಿನಿಮಾಗಳಿವೆ. ಬ್ರಹ್ಮಚಾರಿ, ಗೋದ್ರಾ, ಪರಿಮಳ ಲಾಡ್ಜ್.. ಕ್ಯೂನಲ್ಲಿವೆ. ಹೀಗಾಗಿ.. ಸತೀಶ್ ತಮ್ಮ ಕನಸಿನ, ತಮ್ಮ ಡೈರೆಕ್ಷನ್ನಿನ ಚಿತ್ರವನ್ನೇ ಮುಂದೆ ಹಾಕಿದ್ದಾರೆ.

    ಮೈ ನೇಮ್ ಈಸ್ ಸಿದ್ದೇಗೌಡ ಚಿತ್ರವನ್ನು ನೀನಾಸಂ ಸತೀಶ್ ನಿರ್ದೇಶಿಸುತ್ತಿದ್ದಾರೆ. ಕಥೆ, ನಿದೇಶನ ಮತ್ತು ನಿರ್ಮಾಣದ ಹೊಣೆಯೂ ಅವರದ್ದೇ. ಇಷ್ಟೊತ್ತಿಗೆ ಶುರುವಾಗಬೇಕಿದ್ದ ಸಿನಿಮಾವನ್ನು ಬಿಡುವಿಲ್ಲದ ಚಿತ್ರಗಳಿಂದಾಗಿ ಮುಂದೂಡಿದ್ದೇನೆ. 2020ಕ್ಕೆ ಸಿನಿಮಾ ಖಂಡಿತಾ ಶುರುವಾಗಲಿದೆ ಎಂದಿದ್ದಾರೆ ಸತೀಶ್.

    ಅಯೋಗ್ಯ ಚಿತ್ರದ ಸೀಕ್ವೆಲ್ ಇದು ಎನ್ನಲಾಗುತ್ತಿದೆ. ಏಕೆಂದರೆ, ಅಯೋಗ್ಯ ಚಿತ್ರದ ಹೀರೋ ಹೆಸರು ಸಿದ್ದೇಗೌಡ. 

  • ಮೊದಲು ಅಯೋಗ್ಯ.. ಆಮೇಲೆ ಯೋಗ್ಯ..

    ayogya releasing today

    ಅಯೋಗ್ಯ ಅನ್ನೋ ಟೈಟಲ್ ಕೇಳಿದವರಿಗೆ, ಏನಿದು.. ಚಿತ್ರಕ್ಕೇಕೆ ಇಂಥಾ ನೆಗೆಟಿವ್ ಟೈಟಲ್ ಇಟ್ಟರು ಅನ್ನೋ ಪ್ರಶ್ನೆ ಮೂಡದೇ ಇರದು. ಆದರೆ ಸಿನಿಮಾ ನೋಡಿದ ಮೇಲೆ ಕಥೆಗೆ ಅದೇ ಟೈಟಲ್ ಸೂಕ್ತ ಅಂತಾ ಪ್ರತಿಯೊಬ್ಬರೂ ಹೇಳ್ತಾರೆ. ಅದು ಕಥೆಯ ಶಕ್ತಿ ಅನ್ನೋದು ನಾಯಕ ನಟ ನೀನಾಸಂ ಸತೀಶ್ ವಿಶ್ವಾಸ. ರಿಲೀಸ್ ಆಗುವ ಮುನ್ನ ಅವರೇ ಚಿತ್ರವನ್ನು 15ಕ್ಕೂ ಹೆಚ್ಚು ಸಲ ನೋಡಿದ್ದಾರಂತೆ.

    ಒಬ್ಬ ಹಳ್ಳಿ ಹುಡುಗ. ಪುಂಡ. ಆದರೆ ಅವನ ಬಳಿ ಹಳ್ಳಿಯ ಎಷ್ಟೋ ಸಮಸ್ಯೆಗಳಿಗೆ ಪರಿಹಾರಗಳಿವೆ. ಅವನ ಮಾತುಗಳನ್ನು ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ. ಆದರೆ, ಹೋಗ್ತಾ ಹೋಗ್ತಾ ಅವನೇ ಕರೆಕ್ಟ್ ಅನ್ನಿಸೋಕೆ ಶುರುವಾಗುತ್ತೆ. ಅಲ್ಲೊಂದು ಪ್ರೀತಿ ಹುಟ್ಟಿ ಖುಷಿಯಾಗುತ್ತೆ. ಸಿನಿಮಾ ಕಲರ್‍ಫುಲ್. ಹಾಸ್ಯದ ಮೂಲಕವೇ ಇಡೀ ಸಿನಿಮಾ ಕಟ್ಟಿಕೊಟ್ಟಿದ್ದೇವೆ ಅಂತಾರೆ ನಿರ್ದೇಶಕ ಮಹೇಶ್. ಅವರಿಗೆ ಇದು ಚೊಚ್ಚಲ ಸಿನಿಮಾ.

    ಇದುವರೆಗೆ ತಮ್ಮ ಗುಳಿಕೆನ್ನೆಯಿಂದ, ನಗುವಿನಿಂದ ಮೋಡಿ ಮಾಡಿದ್ದ ರಚಿತಾ ರಾಮ್, ಈ ಚಿತ್ರದಲ್ಲಿ ಕಣ್ಣುಗಳಲ್ಲೇ ಕೊಲ್ತಾರಂತೆ. ಅವರ ಕಣ್ಣುಗಳೇ ಅವರ ಪ್ಲಸ್ ಪಾಯಿಂಟ್ ಅನ್ನೋದು ಸತೀಶ್ ಕೊಟ್ಟಿರುವ ಸರ್ಟಿಫಿಕೇಟ್.

    ನಿರ್ಮಾಪಕ ಟಿ.ಆರ್. ಚಂದ್ರಶೇಖರ್ ಸಿನಿಮಾವನ್ನು ಅದ್ಧೂರಿಯಾಗಿ ರಿಲೀಸ್ ಮಾಡುತ್ತಿದ್ದಾರೆ. ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರ, 60 ದೇಶಗಳಲ್ಲಿ ರಿಲೀಸ್ ಆಗುತ್ತಿದೆ. 

  • ರಚಿತಾಗೆ ಪ್ರೇಮದ ಗೆಜ್ಜೆ ಕಟ್ಟಿದ ಸತೀಶ್

    ರಚಿತಾಗೆ ಪ್ರೇಮದ ಗೆಜ್ಜೆ ಕಟ್ಟಿದ ಸತೀಶ್

    ಅಯೋಗ್ಯ ಚಿತ್ರದ ನಂತರ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಮತ್ತೊಮ್ಮೆ ಒಂದಾಗಿರುವ ಚಿತ್ರ ಮ್ಯಾಟ್ನಿ. ಪ್ರೇಮಿಗಳ ದಿನಕ್ಕಾಗಿ ಚಿತ್ರದ ಪುಟ್ಟ ಟೀಸರ್ ಬಿಡುಗಡೆಯಾಗಿದ್ದು, ಟೀಸರ್‍ನಲ್ಲಿ ರಚಿತಾಗೆ ಗೆಜ್ಜೆ ಕಟ್ಟಿದ್ದಾರೆ ಸತೀಶ್. ಒಂದು ಪುಟ್ಟ ಕವನದೊಂದಿಗೆ..

    ಪಾರ್ವತಿ ಎಸ್.ಗೌಡ ನಿರ್ಮಾಣದ ಚಿತ್ರಕ್ಕೆ ಮನೋಹರ್ ಕಂಪಳ್ಳಿ ನಿರ್ದೇಶಕರಾಗಿದ್ದಾರೆ. ಈ ರೀತಿ ಕವಿತೆಗಳ ಮೂಲಕ ಕನ್ನಡ ಟೀಸರ್ ಬಿಟ್ಟಿರುವ ರೀತಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಟೀಸರ್ ಲವ್ಲಿಯಾಗಿದೆ.

  • ರಾಮನು ಕಾಡಿಗಲ್ಲ.. ಆರು ತಿಂಗಳ ನಂತರ ಶೂಟಿಂಗ್

    rama kadige hodha in trouble

    ರಾಮನು ಕಾಡಿಗೆ ಹೋದನು, ತನ್ನ ವಿಭಿನ್ನ ಟೈಟಲ್ನಿಂ ದಾಗಿಯೇ ಗಮನ ಸೆಳೆದಿದ್ದ ಸಿನಿಮಾ. ನೀನಾಸಂ ಸತೀಶ್ ಅವರ ಸತೀಶ್ ಪಿಕ್ಚರ್ ಹೌಸ್ ಬ್ಯಾನರ್ನಟಲ್ಲಿ ಶುರುವಾಗಿದ್ದ ಚಿತ್ರ. ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆಯಾಗಿತ್ತು. ಆದರೆ, ಈಗ ಚಿತ್ರವೇ ನೆನೆಗುದಿಗೆ ಬಿದ್ದಿದೆಯಂತೆ ಎಂಬ ಸುದ್ಧಿ ಚಲಾವಣೆಯಲ್ಲಿದೆ.

    ಇದರ ಬಗ್ಗೆ ಸತೀಶ್ ಅವರನ್ನು ಚಿತ್ರಲೋಕ ಸಂಪರ್ಕಿಸಿದಾಗ ಅವರು ಅದೆಲ್ಲಾ ಗಾಸಿಪ್. ಈಗಾಗಲೇ ಅರ್ಧ ಶೂಟಿಂಗ್ ಮುಗಿದಿದೆ. ನನ್ನ ಗೆಟಪ್ ಚೇಂಜ್ ಆಗಿರುವುದರಿಂದ ಆರು ತಿಂಗಳ ಕಾಲ ಚಿತ್ರವನ್ನು ಮುಂದಕ್ಕೆ ಹಾಕಲಾಗಿದೆ ಎಂದರು.

     

  • ರಿಲೀಸ್‍ಗೂ ಮುನ್ನ ಅಯೋಗ್ಯನ ಸಂಭ್ರಮ

    ayogya film team happy before release

    ಅಯೋಗ್ಯ ಚಿತ್ರ ರಿಲೀಸ್ ಆಗೋಕೆ ಶುರುವಾಗಿದೆ. ಚಿತ್ರದ ಕ್ರೇಜ್ ಹೆಚ್ಚಿಸಿರುವುದು ಚಿತ್ರದ ಹಾಡುಗಳು. ಅಪ್ಪಟ ಮಂಡ್ಯ ಸ್ಟೈಲ್‍ನಲ್ಲಿ ಮೂಡಿ ಬಂದಿರುವ ಹಾಡುಗಳನ್ನು ಅಂಬರೀಷ್, ಶ್ರೀಮುರಳಿ, ಪುನೀತ್, ಧ್ರುವ ಸರ್ಜಾರಿಂದ ರಿಲೀಸ್ ಮಾಡಿಸಿ ಸೆನ್ಸೇಷನ್ ಸೃಷ್ಟಿಸಿದ್ದ ಚಿತ್ರತಂಡ, ಈಗ ರಿಲೀಸ್‍ಗೂ ಮೊದಲೇ ಸಂಭ್ರಮದಲ್ಲಿದೆ. 

    ಚಿತ್ರದ ಡಬ್ಬಿಂಗ್ ರೈಟ್ಸ್ 80 ಲಕ್ಷಕ್ಕೆ ಮಾರಾಟವಾಗಿದೆಯಂತೆ. ಇದು ನನ್ನ ಚಿತ್ರಗಳಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿರುವ ಸಿನಿಮಾ ಅನ್ನೋದು ನೀನಾಸಂ ಸತೀಶ್ ಖುಷಿ. 

    ರಚಿತಾ ರಾಮ್ ಮಂಡ್ಯ ಹುಡುಗಿಯಾಗಿ ಕಣ್ಣಲ್ಲೇ ಕೊಲ್ತಾರೆ. ನಗೆಯ ಕಿಕ್ ಕೊಡೋಕೆ ರವಿಶಂಕರ್ ಇದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ಹಾಡುಗಳು ಅಬ್ಬರಿಸುತ್ತಿವೆ. ಯೋಗರಾಜ್ ಭಟ್ಟರ ಶಿಷ್ಯ ಮಹೇಶ್ ಕುಮಾರ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ನಿರ್ಮಾಪಕ ಟಿ.ಆರ್.ಚಂದ್ರಶೇಖರ್.. ಮತ್ತೊಂದು ಗೆಲುವು ಎದುರು ನೋಡುತ್ತಿದ್ದಾರೆ.

  • ಲಾಯರ್ ಕೃಷ್ಣಮೂರ್ತಿ..ಅಗರಬತ್ತಿ ಮಾದಪ್ಪ..ಬ್ಯೂಟಿಷಿಯನ್ ಕವಿತಾ ಪೆಟ್ರೋಮ್ಯಾಕ್ಸ್ ಜೊತೆ ಜೊತೆಯಲಿ

    ಲಾಯರ್ ಕೃಷ್ಣಮೂರ್ತಿ..ಅಗರಬತ್ತಿ ಮಾದಪ್ಪ..ಬ್ಯೂಟಿಷಿಯನ್ ಕವಿತಾ ಪೆಟ್ರೋಮ್ಯಾಕ್ಸ್ ಜೊತೆ ಜೊತೆಯಲಿ

    ಪೋಲಿ ತುಂಟರ ಗುರು ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ರಿಲೀಸ್ ಆಗುವುದಕ್ಕೆ ತಯಾರಾಗಿರುವಾಗಲೇ ಚಿತ್ರದ ಒಂದೊಂದೇ ಪಾತ್ರಗಳನ್ನು ಪರಿಚಯಿಸಲು ಶುರು ಮಾಡಿದ್ದಾರೆ ಡೈರೆಕ್ಟರ್. ನೀನಾಸಂ ಸತೀಶ್ ಹೀರೋ ಆಗಿರುವ ಚಿತ್ರದಲ್ಲಿ ನಾಗಭೂಷಣ್, ಅರುಣ್ ಮತ್ತು ಕಾರುಣ್ಯರಾಮ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಲ್ಲರೂ ಅನಾಥರೇ. ಅವರೆಲ್ಲರ ಪಾತ್ರಗಳ ಪುಟ್ಟ ಪುಟ್ಟ ಕಥೆ ಹೇಳಿದ್ದಾರೆ ವಿಜಯ್ ಪ್ರಸಾದ್.

    ಲಾಯರ್ ಕೃಷ್ಣಮೂರ್ತಿ ಪಾತ್ರದಲ್ಲಿರೋದು ನಾಗಭೂಷಣ್.  ಲಾಯರ್ ಆಗಬೇಕೆಂದು ಪ್ರಾಕ್ಟೀಸ್ ಮಾಡುವ ಹುಡುಗ. ಇಡೀ ಚಿತ್ರದಲ್ಲಿ ಪಾಯಿಂಟ್ ಮೇಲೆ ಪಾಯಿಂಟ್ ಹಾಕ್ತಾನೇ ಇರ್ತಾರಂತೆ.

    ಅಗರಬತ್ತಿ ಮಾದಪ್ಪ ಅರುಣ್ ನಟಿಸಿದ್ದರೆ ಹೀರೋ ನೀನಾಸಂ ಸತೀಶ್ ಊದುಬತ್ತಿ ಶಿವಪ್ಪನಾಗಿದ್ದಾರೆ. ಇವರೂ ಅನಾಥರೇ. ಇವರನ್ನು ಅನಾಥಾಶ್ರಮಕ್ಕೆ ತಂದುಬಿಟ್ಟವರ ಹೆಸರನ್ನೇ ಇವರಿಗೆ ಇಟ್ಟಿರ್ತಾರೆ.

    ಬ್ಯೂಟಿ ಪಾರ್ಲರಿನಲ್ಲಿ ಕೆಲಸ ಮಾಡುವ ಕವಿತಾ ಕೃಷ್ಣಮೂರ್ತಿ ಪಾತ್ರದಲ್ಲಿ ಕಾರುಣ್ಯ ರಾಮ್ ನಟಿಸಿದ್ದಾರೆ.

    ವಿಜಯಲಕ್ಷ್ಮಿ ಸಿಂಗ್ ಅವರ ಮೂಲಕ ಪೆಟ್ರೋಮ್ಯಾಕ್ಸ್ ಟೈಟಲ್ ಸೀಕ್ರೆಟ್ ಗೊತ್ತಾಗಲಿದೆ. ಸುಮನ್ ರಂಗನಾಥ್ ಸುಬ್ಬುಲಕ್ಷ್ಮಿಯಾಗಿ ನಟಿಸಿದ್ದಾರಂತೆ. ಅನಾಥಾಶ್ರಾಮದಿಂದ ಹೊರ ಬಂದ ನಂತರವೂ ಒಟ್ಟಿಗೇ ಬದುಕೋಣ ಎಂದು ಹೊರಡುವ ಅನಾಥ್ ಕತೆ ಪೆಟ್ರೋಮ್ಯಾಕ್ಸ್. ಆದರೆ ಸಿನಿಮಾ ಅಷ್ಟೇ ಇರಲ್ಲ.. ಸಂಥಿಂಗ್ ಸ್ಪೆಷಲ್ ಇರುತ್ತೆ. ಗೊತ್ತಾಗೋಕೆ ಪೆಟ್ರೋಮ್ಯಾಕ್ಸ್ ಹೊತ್ತಿಕೊಳ್ಳೋವರೆಗೂ ಕಾಯಬೇಕಷ್ಟೆ.

  • ವೈತರಣಿ ಅಲ್ಲ.. ದಸರಾ : ಅಭಿಮಾನಿಗಳಿಗೆ ಹುಳ ಬಿಟ್ಟ ನೀನಾಸಂ ಸತೀಶ್

    sathish ninasam's next is dasara

    ಶರ್ಮಿಳಾ ಮಾಂಡ್ರೆ ಮತ್ತು ನೀನಾಸಂ ಸತೀಶ್ ಹೊಸದೊಂದು ಸಿನಿಮಾ ಮಾಡುತ್ತಿದ್ದಾರೆ. ಲಂಡನ್ ಬೇಸ್‍ನಲ್ಲಿ ಸಿದ್ಧವಾಗುತ್ತಿರುವ ಚಿತ್ರಕ್ಕೆ ಶರ್ಮಿಳಾ ಮಾಂಡ್ರೆಯೇ ನಿರ್ಮಾಪಕಿ. ಅರವಿಂದ ಶಾಸ್ತ್ರಿ ನಿರ್ದೇಶನದ ವೈತರಣಿ, ಮರ್ಡರ್ ಮಿಸ್ಟರಿ ಎನ್ನಲಾಗಿದೆ. ಆದರೆ ಈಗ ಚಿತ್ರದ ಟೈಟಲ್ ಬದಲಾಗಿದೆ.

    ಟೈಟಲ್ ಹೇಳೋಕೂ ಮೊದಲು ಅಭಿಮಾನಿಗಳ ತಲೆಗೆ ಒಂದು ಹುಳ ಬಿಟ್ಟರು ನೀನಾಸಂ ಸತೀಶ್. ಲಂಡನ್ ಸ್ಟ್ರೀಟ್ ಫೋಟೋ ಹಾಕಿ, ನನ್ನ ಹೊಸ ಸಿನಿಮಾ ವೈತರಣಿ ಅಲ್ಲ, ಚಿತ್ರದ ಟೈಟಲ್ ಈ ಸ್ಟ್ರೀಟ್‍ನಲ್ಲಿದೆ. ಕಂಡುಹಿಡಿಯಿರಿ. ಅಭಿಮಾನಿಗಳು ಸೇರಿಗೆ ಸವ್ವಾಸೇರು ಎನ್ನುವಂತೆ ಕೆಲವೇ ಕ್ಷಣಗಳಲ್ಲಿ ಚಿತ್ರದ ಟೈಟಲ್ ದಸರಾ ಅನ್ನೋದನ್ನ ಗುರುತಿಸಿಯೇ ಬಿಟ್ಟರು.

    ಈಗ ಕನ್ಫರ್ಮ್ ಆಗಿದೆ. ಚಿತ್ರದ ಟೈಟಲ್ ದಸರಾ.

  • ಶಿವಣ್ಣನಿಗೆ ಅವಾಜ್ ಹಾಕಿದ್ದಕ್ಕೆ ಟೈಗರ್ ಗಲ್ಲಿಗೆ ಎಂಟ್ರಿ..

    how did sathish get tiger galli

    ಟೈಗರ್ ಗಲ್ಲಿ, ನೀನಾಸಂ ಸತೀಶ್ ಪಾಲಿಗೆ ಮಹತ್ವದ ಸಿನಿಮಾ. ಅಪಾರ ನಿರೀಕ್ಷೆಗಳನ್ನಿಟ್ಟುಕೊಂಡು ಮಾಡಿದ್ದ ರಾಕೆಟ್ ಸಿನಿಮಾ ಸೋತ ನಂತರ, ಸತೀಶ್ ಕಂಗಾಲಾಗಿ ಹೋಗಿದ್ದರಂತೆ. ಮನೆ, ಆಫೀಸಿಗೆ ಬೀಗ ಹಾಕಿ ಏಕಾಂಗಿಯಾಗಿದ್ದರಂತೆ. ಕೆಲವು ದಿನಗಳ ನಂತರ ಇದು ಅಸಾಧ್ಯ ಎಂದೆನ್ನಿಸಿದ ಸಮಯದಲ್ಲಿಯೇ ಕಾಣಿಸಿಕೊಂಡವರು ರವಿ ಶ್ರೀವತ್ಸ.

    ಹಲವರಿಗೆ ನೆನಪಿದೆಯೋ..ಇಲ್ಲವೋ.. ನೀನಾಸಂ ಸತೀಶ್ ಮೊದಲು ಬಣ್ಣ ಹಚ್ಚಿದ ಚಿತ್ರ ಮಾದೇಶ. ಅದು ರವಿ ಶ್ರೀವತ್ಸ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಚಿತ್ರ. ಆ ಚಿತ್ರದಲ್ಲಿ ಸತೀಶ್‍ಗೆ ಶಿವರಾಜ್ ಕುಮಾರ್‍ಗೆ ಅವಾಜ್ ಹಾಕುವ ದೃಶ್ಯದಲ್ಲಿ ಪುಟ್ಟ ಪಾತ್ರ ಕೊಟ್ಟಿದ್ದರು ರವಿ ಶ್ರೀವತ್ಸ.

    ಮೊದಲ ಬಾರಿಗೆ ಬಣ್ಣ ಹಚ್ಚಿದ ಚಿತ್ರದಲ್ಲೇ ಶಿವಣ್ಣ ಎದುರಿಗೆ ನಿಂತು ಅವರಿಗೆ ಅವಾಜ್ ಹಾಕುವ ಪಾತ್ರದಲ್ಲಿ ನಟಿಸುವಾಗ ಕೈಕಾಲೇ ಅದುರಿತ್ತಂತೆ. ಆಮೇಲೆ ಸಂಭಾಳಿಸಿಕೊಂಡು ನಟಿಸಿದ್ದೂ ಆಯ್ತು. ಶಿವಣ್ಣನ ಮೆಚ್ಚುಗೆಯೂ ಸಿಕ್ತು. ಈಗ ಇಡೀ ಚಿತ್ರದಲ್ಲಿ ಅಂಥದ್ದೇ ಪಾತ್ರ ನಿಭಾಯಿಸಿದ್ದಾರೆ ನೀನಾಸಂ ಸತೀಶ್.

    ಮೊದಲ ಬಾರಿಗೆ ಬಣ್ಣ ಹಚ್ಚುವ ಅವಕಾಶ ಕೊಟ್ಟಿದ್ದ ರವಿ ಶ್ರೀವತ್ಸ, ಈಗ ನಾಯಕನಾಗುವ ಅವಕಾಶ ಕೊಟ್ಟಿದ್ದಾರೆ. ಮೊದಲು ಮೇಕಪ್ ಹಚ್ಚಿಕೊಂಡಾಗ, ಶಿವರಾಜ್ ಕುಮಾರ್ ಎದುರು ಕೆಲವು ನಿಮಿಷಗಳ ಕಾಲ ಅಬ್ಬರಿಸಿದ್ದ ಸತೀಶ್, ಈಗ ಇಡೀ ಚಿತ್ರದಲ್ಲಿ ಅಬ್ಬರಿಸಿದ್ದಾರೆ.