ಯಾರಿದು ತುಂಟ ಕಂಠೀರವ ಅಂದ್ರೆ ಅನುಮಾನವೇ ಬ್ಯಾಡ.. ಅದು ನಿರ್ದೇಶಕ ವಿಜಯ ಪ್ರಸಾದ್. ಅವರ ನಿರ್ದೇಶನದ ಹೊಸ ಸಿನಿಮಾ ಪರಿಮಳ ಲಾಡ್ಜ್ ಈಗ ನೆಟ್ಟಿನಲ್ಲಿ ಎಲ್ಲರನ್ನೂ ನೆಟ್ಟಗೆ ನಿಂತು ಟೀಕಿಸುವಂತೆ ಮಾಡಿದೆ. ನಾಯಕ ನಟ ನೀನಾಸಂ ಸತೀಶ್ ಸ್ವತಃ ಸ್ಪಷ್ಟೀಕರಣ ಕೊಟ್ಟಿದ್ದರೂ ಟೀಕೆಗಳೇನೂ ನಿಂತಿಲ್ಲ. ಇಷ್ಟಕ್ಕೂ ಟೀಸರ್‍ನಲ್ಲಿ ಅಂಥಾದ್ದೇನಿದೆ..? ಬೇರೇನಿಲ್ಲ.. ಅವರು ಚಿತ್ರತಂಡದ ಪ್ರತಿಯೊಬ್ಬರನ್ನೂ ಒಂದು ಪೋಲಿತನದ ಮೂಲಕವೇ ಪರಿಚಯಿಸಿದ್ದಾರೆ.
ನಾಯಕರಾದ ಸತೀಶ್ ಮತ್ತು ಯೋಗೀಶ್‍ರನ್ನೇ ಅವರು ಪರಿಚಯಿಸೋದು ಸಲಿಂಗಕಾಮಿಗಳೆಂದು. ಅಫ್‍ಕೋರ್ಸ್.. ಅದಕ್ಕೆ ಸತೀಶ್ ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನು ದತ್ತಣ್ಣ, ಸುಮನ್ ರಂಗನಾಥ್, ಬುಲೆಟ್ ಪ್ರಕಾಶ್, ಹೇಮಾದತ್ ಇಲ್ಲಿ ಆಳ ನೋಡಿ ಲಾಳ ಹೊಡೆದವರಾಗ್ತಾರೆ. ಅರೆರೆ.. ಅಂದ್ಕೊಂಡ್ರಾ.. ಅವರು ತಂತ್ರಜ್ಞರಲ್ಲಿ ಒಬ್ಬರನ್ನೂ ಹಾಗೇ ಬಿಟ್ಟಿಲ್ಲ.
ಸ್ಟಿಲ್ ಫೋಟೋಗ್ರಫಿ ಮಾಡೋ ಅನಿಲ್ ಅವರನ್ನು ನೊರೆ ನೋಡಿ ಪೊರೆ ಬಿಟ್ಟವ್ರು ಎಂದು ಪರಿಚಯಿಸೋ ನಿರ್ದೇಶಕರು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್‍ರನ್ನ ಲಾಡಿ ಜೊತೆ ರಾಗಾನೂ ಎಳೆದವ್ರು ಎಂದು ಕಾಲೆಳೆಯುತ್ತಾರೆ.

ಕಾರ್ಯಕಾರಿ ನಿರ್ಮಾಪಕರಾದ ಕುಮಾರ ಸುಂದರಂ, ರಾಜಶೇಖರ್, ನಾರಾಯಣ್ ಪಿಳ್ಳೈ ಬ್ರಾ ನೋಡಿ ಬಾಗ್ಲು ತೆಗೆದವರಾದ್ರೆ, ಮ್ಯಾನೇಜರುಗಳಾದ ರಾಜಣ್ಣ - ನರೇಶ್ ಮೂಗ್‍ಬಟ್ಟು ಸಪ್ಲೈ ಮಾಡಿ ಮಕಾಡೆ ಮಲಗಿಸುವವರಾಗ್ತಾರೆ. ಇದು ಇಷ್ಟಕ್ಕೇ ನಿಲ್ಲಲ್ಲ.. ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿಗೆ ತೊಡೆ ನೋಡಿ ತೋಪ್ಡಾ ಹೊಡೆದವರ ಪಟ್ಟ ಸಿಕ್ಕರೆ, ಸಂಕಲನಕಾರ ಸುರೇಶ್ ಅರಸ್‍ಗೆ ಬ್ಲೂ ಫಿಲಂ ನೋಡಿ ಕಟ್ ಮಾಡಿ ಬರೀ ಫಿಲಂ ಕೊಡೋವ್ರು ಅಂಥಾರೆ. ಕ್ಯಾಮೆರಾಮನ್ ನಿರಂಜನ್ ಬಾಬು ಗುಪ್ತ ಕ್ಯಾಮೆರಾ ಇಟ್ಟು, ಗುನ್ನ ತಿಂದವರಾದ್ರೆ, ತಮ್ಮದೇ ತಂಡದಲ್ಲಿರೋ ವಿನಯ್, ಮಹೇಶ್, ಪ್ರಭು, ಪ್ರಿಯಾರನ್ನ ಮಸಾಜ್ ಮಾಡ್ಸಿ ಮಟಾಶ್ ಆದವ್ರು ಅಂತಾರೆ ವಿಜಯ್ ಪ್ರಸಾದ್. ವರ್ಣಾಲಂಕಾರದ ಬಾಬು ಧರ್ಮೇಂದ್ರ ಜಡೆ ನೋಡಿ ಜಲಕ್ರೀಡೆ ಆಡಿದವರಂತೆ.
ಹೀಗೆ ಎಲ್ಲರನ್ನೂ ಕಾಲೆಳೆದ ನಿರ್ದೇಶಕರು ನಿರ್ಮಾಪಕರನ್ನು ಕಾಸ್ ಬದ್ಲು ಕಾಂಡೊಮ್ ಇಟ್ಟುಕೊಂಡವ್ರು ಎಂದು ಕಿಚಾಯಿಸ್ತಾರೆ. ತಮ್ಮನ್ನು ಇನ್ನೂ ಒಂದು ಹೆಜ್ಜೆ ಮುಂದೆ ತಗೊಂಡ್ ಹೋಗಿ.. ಕಾಚ ತೋರಿಸಿ ಕಥೆ ಮಾಡಿದವ್ರು ಅಂತಾ ಹೇಳ್ಕೊತಾರೆ.
ಇದು ತುಂಟತನವೋ.. ಹಾಸ್ಯದ ಪರಮಾವಧಿಯೋ.. ಅತಿರೇಕವೋ.. ನಿರ್ಧಾರ ಪ್ರೇಕ್ಷಕ ಪ್ರಭುವಿಗೆ ಬಿಟ್ಟಿದ್ದು.