ಗಂಟೆ ಹೊಡೆದ್ರೆ ಶಿವ..ತಮಟೆ ಹೊಡೆದ್ರೆ ಯಮ. ಇಂಥಾದ್ದೊಂದು ಡೈಲಾಗ್ನ್ನು ನೀನಾಸಂ ಸತೀಶ್ ಹೇಳುತ್ತಿದ್ದರೆ, ಆ ಅಬ್ಬರಕ್ಕೆ ಬೆಚ್ಚಿ ಬೀಳಬೇಕು. ಅದು ಟೈಗರ್ ಗಲ್ಲಿ ಸಿನಿಮಾದ ಹೈಲೈಟ್. ತಿಗಳರ ಪೇಟೆಯ ಪೀಡೆಸಂದಿಯಲ್ಲಿ ನಡೆದ ನೈಜಕಥೆಯ ಸುತ್ತ ಹೆಣೆದಿರುವ ಸಿನಿಮಾ, ತನ್ನ ಅಬ್ಬರದಿಂದಲೇ ಅಚ್ಚರಿ ಮೂಡಿಸುತ್ತೆ.
ಸತೀಶ್, ಬ್ಯೂಟಿಫುಲ್ ಮನಸುಗಳು ನಂತರ ನಟಿಸಿರುವ ಸಿನಿಮಾ ಟೈಗರ್ ಗಲ್ಲಿ. ನಿರ್ದೇಶಕ ರವಿ ಶ್ರೀವತ್ಸ ಅಂತೂ ಎಷ್ಟೋ ಬಾರಿ ಬೆಳಗ್ಗೆ 7ಕ್ಕೆ ಶೂಟಿಂಗ್ ಶುರು ಮಾಡಿ, ರಾತ್ರಿ 2 ಗಂಟೆವರೆಗೂ ಚಿತ್ರೀಕರಣ ನಡೆಸಿದ್ದಾರಂತೆ. ಭಾವನೆಗಳನ್ನು ವ್ಯಕ್ತಪಡಿಸಲು ನನಗೆ ಈ ಚಿತ್ರದಲ್ಲಿ ಸಿಕ್ಕಷ್ಟು ಅವಕಾಶಗಳು ಈ ಹಿಂದಿನ ಯಾವ ಚಿತ್ರದಲ್ಲೂ ಸಿಕ್ಕಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ ಸತೀಶ್.
ಚಿತ್ರದಲ್ಲಿ ರೊಮ್ಯಾನ್ಸ್, ಅಮ್ಮನ ಸೆಂಟಿಮೆಂಟ್, ರೌಡಿಸಂನ ಅಬ್ಬರ, ಫೈಟ್ಸ್ ಎಲ್ಲವೂ ಇದೆ. ಒಟ್ಟಿನಲ್ಲಿ ಟೈಗರ್ ಗಲ್ಲಿ ಬೆಂಗಳೂರಿನ ವಾಸನೆ ಇರುವ ಚಿತ್ರ ಎನ್ನುವುದು ರವಿ ಶ್ರೀವತ್ಸ ಪ್ರಾಮಿಸ್.