ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ. ಇದೇ ಫೆಬ್ರವರಿ 22ರಿಂದ ಮಾರ್ಚ್ 1ರವರೆಗೆ ನಡೆಯಲಿದೆ. ಅಂದಹಾಗೆ ಈ ಸಿನಿಮೋತ್ಸವದಲ್ಲಿ ಕನ್ನಡದ 2017ರ ಜನಪ್ರಿಯ ಸಿನಿಮಾಗಳ ಪಟ್ಟಿಯೇ ಇದೆ. ಅವುಗಳಲ್ಲಿ ನಿಮಗೆ ಇಷ್ಟವಾದ ಸಿನಿಮಾ ಯಾವುದು ಅನ್ನೋದನ್ನು ನೀವೇ ಆಯ್ಕೆ ಮಾಡಬೇಕು. ಆಯ್ಕೆ ಮಾಡಬೇಕಾದವರು ನೀವೇ.
ಅಂದಹಾಗೆ ಪಟ್ಟಿಯಲ್ಲಿರೋ ಸಿನಿಮಾಗಳು ಇವು. ಧ್ರುವ ಸರ್ಜಾ ಅಭಿನಯದ ಭರ್ಜರಿ, ಗಣೇಶ್ ಅಭಿನಯದ ಚಮಕ್, ಹರಿ ಅಭಿನಯದ ಕಾಲೇಜ್ ಕುಮಾರ, ಸುದೀಪ್ ಅಭಿನಯದ ಹೆಬ್ಬುಲಿ, ಶಿವಣ್ಣ, ಶ್ರೀಮುರಳಿ ಕಾಂಬಿನೇಷನ್‍ನ ಮಫ್ತಿ, ರಾಜ್ ಬಿ ಶೆಟ್ಟಿ ಅಭಿನಯದ ಒಂದು ಮೊಟ್ಟೆಯ ಕಥೆ, ಪುನೀತ್ ಅಭಿನಯದ ರಾಜಕುಮಾರ, ದರ್ಶನ್ ಅಭಿನಯದ ತಾರಕ್ ರೇಸ್‍ನಲ್ಲಿವೆ.