` censor nagendra swamy, - chitraloka.com | Kannada Movie News, Reviews | Image

censor nagendra swamy,

 • Censor Board Inside Story 2 - Writes SM Patil

  kiragoorina gayyaligalu image

  ಹಿಂದೆ ಸಿ.ಆರ್, ಚಂದ್ರಶೇಖರ್, ನಾಗರಾಜ್, ನಾಗೇಂದ್ರ ಸ್ವಾಮಿಯಂಥಾ ಸಾಹಿತ್ಯಾಸಕ್ತರು, ಕನ್ನಡವನ್ನು ಸ್ಪಷ್ಟವಾಗಿ ಬಲ್ಲವರು, ನಮ್ಮ ನಾಡಿನ ಪ್ರಾದೇಶಿಕ ಸಂಸ್ಕøತಿ, ಸಂಸ್ಕಾರ, ಪರಂಪರೆಯ ಜ್ನಾನವಿದ್ದವರು ಅಧಿಕಾರಿಗಳಾಗಿ ಬಂದು ಸೆನ್ಸಾರ್ ಬೋರ್ಡಿನ ಘನತೆ ಗೌರವ ಹೆಚ್ಚಿಸಿದ ಈ ಹುದ್ದೆಗೆ ಅದ್ಯಾವುದರ ಗಂಧ ಗಾಳಿಯೂ ಇಲ್ಲದೆ ಬಂದ ನತಾಷಾ ಊಟ ಊಟವೇ ತಿಥಿಯದಾದ್ರೇನು, ಮದ್ವೆಯದ್ದಾದರೇನು ಎಲ್ಲಾ ಒಂದೇ ಕೂತು ತಿಂದೆದ್ದು ಹೊಗಿ ಎಂಬಂತೆ ವರ್ತಿಸತೊಡಗಿದ್ದು ಚಿತ್ರರಂಗದ ಮಂದಿಯ ಹುಬ್ಬೇರಿಸುತ್ತಿದೆ. 

  Censor Board Inside Story - 1 Writes SM Patil

  ಸಿರಗೂರಿನ ಗಯ್ಯಾಳಿಗಳು ಎಂಬ ಚಿತ್ರಕ್ಕೆ ಸರ್ಟೀಫಿಕೇಟನ್ನು ನೀಡಿ ಗಯ್ಯಾಳಿಗಳು ಅಂದ್ರೇನೆಂದು ಇನ್ನೂ ತೆಲೆ ಕೆರೆದುಕೊಳ್ಳುತ್ತಿರುವ ನತಾಷಾಗೆ ಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ಮೆಡಂ ಅದು ಪೂರ್ಣಚೆಂದ್ರ ತೇಜಸ್ವಿಯವರ ಕಾದಂಬರಿ ಎಂದಾಗ ಇನ್ನೂ ಗಾಭರಿಯಾಗಿ ಇವಳು ಯಾರದ್ದೊ ಅಂಕಲ್ ಇನ್ಫ್ಲು ಯೆನ್ಸ್ ಬೇರೆ ಯೂಸ್ ಮಾಡುತ್ತಿದ್ದಾಳೆಂದು ಕೋಪಿಸಿಕೊಂಡು ‘ನೋ ಡಿಸ್ಕಶನ್’ ಎಂದುತ್ತರಿಸಿ ಎದ್ದು ಹೊಗಿದ್ದಾಗಿದೆ. ಕೆರಳಿ ಕೆಂಡಾಮಂಡಲವಾದ ಜನ ಈಗ ಚಡ್ಡಿ ತೋರಿಸುವ ತೀರ್ಮಾನ ಮಾಡಿದ್ದೂ ಆಗಿದೆ!  

  Censor Officer's 6 Wrongs

  censor_officers1.jpg

  ಇಷ್ಟೆಲ್ಲಾ ನಾನು ಬರೆಯುತ್ತಿರುವುದಕ್ಕೆ ಕಾರಣ ನಾನು, 2008 ರಿಂದ 2010ರ ವರೆಗೆ ಮತ್ತು 2012 ರಿಂದ 2016ರ ವರೆಗೆ ಸುಮಾರು ಆರು ವರ್ಷಗಳು ಇದೇ ಸೆನ್ಸಾರ್ ಮಂಡಳಿಯಲ್ಲಿ ಸದಸ್ಯನಾಗಿದ್ದೆ.

  ಈ ಆರು ವರ್ಷಗಳಲ್ಲಿ ಮೂರು ಉತ್ತಮ ಅಧಿಕಾರಿಗಳನ್ನು ಕಂಡ ನನಗೆ ಈ ನತಾಷಾ ವಿಚಿತ್ರ ಅಧಿಕಾರಿಯಾಗಿ ಗೊಚರಿಸಿದ್ದು ಅದನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುವ ಉದ್ದೇಶದಿಂದ ಈ ಲೇಖನ ಬರೆಯುತ್ತಿದ್ದೇನೆ. 

  censor_patil_natasha.jpg

  ಹೊದವರ್ಷ 2015ರ ಡಿಸೆಂಬರ್ 9 ನೇ ತಾರೀಖಿಗೆ ಬಂದ ಈ ಸೌಮ್ಯ ಮುಖದ ಅಧಿಕಾರಿ ನನ್ನಲ್ಲಿ ಅಪಾರ ಗೌರವ ಹುಟ್ಟು ಹಾಕಿದ್ದು ಸತ್ಯ. ‘ಮೇಡಂ ಸಂಭಾವಿತೆ’ ಎಂಬ ಭಾವನೆ ಹುಟ್ಟುವಷ್ಟರಲ್ಲೇ ಕನ್ನಡವೇ ಗೊತ್ತಿಲ್ಲ ಎಂಬ ಗುಟ್ಟು ಗೊತ್ತಾಗಿ ಆ ಭಾವನೆ ಹಾಗೇ ಹೊಗೆ ಹಾಕಿಕೊಂಡಿದ್ದೂ ಅಷ್ಟೇ ದೊಡ್ಡ ಸತ್ಯ!

  ಅದು ಡಿಸೆಂಬರ್. ಪ್ರತೀ ವರ್ಷದಂತೆ ಆ ತಿಂಗಳೂ ಸೆನ್ಸಾರ್ ಮಾಡಬೇಕಾದ ಚಿತ್ರಗಳ ಸಂಖ್ಯ 50 ದಾಟಿತ್ತು. ಅದೇ ವರ್ಷದ ಸರ್ಟಿಫಿಕೇಟನ್ನು ತೆಗೆದುಕೊಳ್ಳಲು ನಿರ್ಮಾಪಕರು ಮುಗಿಬಿದ್ದಿದ್ದರು. ಗಾಭರಿಯಾದ ಮೆಡಂ, ದಿನವೊಂದಕ್ಕೆ ಐದು ಚಿತ್ರ ವೀಕ್ಷಣೆ ಅಸಾಧ್ಯ ಎಂದು ಹೆದರಿ ಕೆಲವಕ್ಕೆ ತಾವು ಮತ್ತು ಇನ್ನು ಕೆಲವು ಚಿತ್ರಗಳಿಗೆ ಕೇವಲ ಸದಸ್ಯರುಗಳನ್ನು ಕಳಿಸುವುದರ ಮುಖಾಂತರ ಸೆನ್ಸಾರ್ ಮಾಡಿ ಕೈ ತೊಳೆದುಕೊಂಡರು. ಇದೂ ಸಹ ಸೆನ್ಸಾರ್ ಮಂಡಳಿಯ ಕಾರ್ಯ ವೈಖರಿಗೆ ವಿರೋಧವಾಗಿದ್ದು ಪ್ರಶ್ನಿಸುವವರಿಲ್ಲದೆ ಮೆಡಂ ಪಾರಾದರು!

  chitraloka_group1.gif

  ಮಂಡಳಿ ಸದಸ್ಯರು ಯಾರೊಬ್ಬರೂ ಚಿತ್ರದ ನಿರ್ಮಾಪಕ ನಿರ್ದೇಶಕರ ಜೊತೆಗೆ ಚಿತ್ರದ ಬಗ್ಗೆ ಚೆರ್ಚಿಸುವ ಹಾಗಿಲ್ಲ. ಮೆಡಂಗೆ ಕನ್ನಡ ಬರದ ಕಾರಣ, ಎಷ್ಟೊ ನಿರ್ಮಾಪಕ, ನಿರ್ದೇಶಕರಿಗೆ ಇಂಗ್ಲೀಶು ಬರದ ಕಾರಣ ಇದೀಗ ಚಿತ್ರ ವೀಕ್ಷೆಣೆಯ ನಂತರ ಅವರ ಜೊತೆಗೆ ಚರ್ಚಿಸುವ ಹೊಣೆ ಸದಸ್ಯರ ಮೇಲೆ ಬಿದ್ದಿದೆ. ಕತ್ತರಿಸುವ ದೃಷ್ಯಗಳ ಬಗ್ಗೆ, ನೀಡುವ ಸರ್ಟಿಫಿಕೇಟಿನ ಬಗ್ಗೆ ಚಿತ್ರ ವೀಕ್ಷಣೆಯ ನಂತರ ಅಧಿಕಾರಿಯೇ ಸಂಬಂಧ ಪಟ್ಟ ನಿರ್ದೇಶಕ ನಿರ್ಮಾಪಕರಿಗೆ ತಿಳಿಸಬೇಕು. ಅವರ ಆಕ್ಷೇಪಣೆ ಆಲಿಸಿ, ಅವರ ವಾದ ಅರ್ಥೈಸಿಕೊಳ್ಳಬೇಕು. ಅದು ಸರಿ ಎನಿಸಿದಲ್ಲಿ ತಮ್ಮ ತೀರ್ಮಾನವನ್ನು ಬದಲಿಸಬೇಕು. ಇಲ್ಲವಾದಲ್ಲಿ ಅವರಿಗೆ ತಮ್ಮ ತೀರ್ಮಾನ ಮನವರಿಕೆ ಮಾಡಿಕೊಡಬೇಕು. ಇಲ್ಲೀಗ ಅದೆಲ್ಲಾ ನಿಂತು ಹೊಗಿದ್ದು ಕೊಟ್ಟದ್ನ ತಗೊಂಡು ಹೊಗಿ ಎಂದು ಹೇಳಿ ಕಳಿಸಲಾಗುತ್ತಿದೆ. ಅದರಿಂದಾಗ ಸದಸ್ಯರುಗಳಿಗೂ ನಿರ್ಮಾಪಕ ನಿರ್ದೇಶಕರುಗಳಿಗೂ ಜಟಾಪಟಿ ನಡೆಯುತ್ತಿದೆ. ಹಿಂದೆಂದೂ ಇಂಥಾ ಘಟನೆ ನಡೆದಿಲ್ಲ! 

  ಇದೆಲ್ಲಾ ನೋಡಿ ರೋಸಿದ ನಾನು ಗೌರವದಿಂದಲೇ ಹೇಳಿದ್ದೆ ‘ಮ್ಯಾಮ್ ಯಾಸ್ ಪಾಸಿಬಲ್ ಯಾಸ್ ಅರ್ಲಿ ಯೂ ಹ್ಯಾವ್ ಟು ಲರ್ನ್ ಟು ಸ್ಪೀಕ್ ಕನ್ನಡ. ಅದರ್ ವೈಸ್ ಇಟ್ ವಿಲ್ ಕ್ರಿಯೇಟ್ ಲಾಟ್ಸ್ ಆಫ್ ಪ್ರಾಬ್ಲಮ್ಸ್’ [ಮೆಡಂ, ಆದಷ್ಟು ಬೇಗ ನೀವು ಕನ್ನಡ ಮಾತಾಡುವುದನ್ನು ಕಲಿಯಿರಿ ಇಲ್ಲದಿದ್ದರೆ ಬಹಳಷ್ಟು ತೊಂದರೆಯಾಗುತ್ತದೆ] ಮೆಡಂ ಸಹ ಅದಕ್ಕೆ ‘ಎಸ್ ಎಸ್ ಐ ವಿಲ್’ ಅಂದಿದ್ದರು. ಆದದ್ದೇನು ಗೊತ್ತಾ? ನನಗೆ ಮತ್ತೆ ಕರೆಯಲೇ ಇಲ್ಲ. ತಿಂಗಳ ಬಳಿಕ ಅಚ್ಚರಿಗೊಂಡ ನಾನು ವಿಚಾರಿಸಿದಾಗ ಬಂದ ಉತ್ತರ ‘ಯೂ ಆರ್ ರಿಮೂವ್ಡ್’ ಅಂತ. ಎಲಾ ಇವಳ! ಎಂಬ ಕೋಪ ಭುಗಿಲೆದ್ದಿತ್ತು. ಹಿರಿಯ ಎಲ್ಲಾ ಸದಸ್ಯರನ್ನು ತೆಗೆದು ಹಾಕಲು ಮೇಲಿನಿಂದ ಆದೇಶ ಬಂದಿದೆ ಎಂದು ಹೇಳಿದ ಅವರ ಕ್ರಮವನ್ನು ವಿರೋಧಿಸಿದ ನಾನು ನನಗೆ ಮಾತಿನ ಮೂಲಕ ತಿಳಿಸಿದರೆ ನಡೆಯದು, ಲಿಖಿತ ಆದೇಶ ಕೊಡಿ ಅಥವಾ ತೋರಿಸಿ ಎಂದಾಗ ಆದೇಶ ಲಿಖಿತ ರೂಪದಲ್ಲಿ ನೀಡಿಲ್ಲ ಎಂದು ಹಾರಿಕೆಯ ಉತ್ತರ ಕೊಟ್ಟು ಪಾರಾದರು. ಆಗಲೇ ನನಗೆ ಗೊತ್ತಾಗಿದ್ದು ಇದೇ ರೀತಿ ನತಾಷಾ ಒಟ್ಟು ಆರು ಜನ ಸದಸ್ಯರನ್ನು ತೆಗೆದು ಹಾಕಿದ್ದಾರೆ ಎಂಬ ವಿಷಯ. 

  (To be Continued)

  Pls Note

  The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

  Also See

  Censor Board Inside Story - 1 Writes SM Patil

   

  Censor certification Stops in Bengaluru? - Exclusive

  Censor Officer's 6 Wrongs

  Censor Chief Walks Out of Chamber

  Kiragooru moves to KFCC on Monday

  Protest Against Censor over Kiragoorina Mutes

  Kiragoorina Gayyaligalu Movie Review - 4/5

  We Never Asked for Apology - Censor RO

  Did Censor Seek RGV's Apology? - Exclusive

  Revising Committee clears 3Bittawaru Oorige Doddawaru

  Anti Superstition Film Denied Censor Certificate - Exclusive

  Mumbai Censor Doors Closed For Kannada - Exclusive

  Kannada Films Affected With Censor New Rules - Exclusive

  Censor Guidelines

 • Censor Officer Appointment Challenged - Exclusive

  nagendra swamy, srinivasappa image

  There is a case pending in the Central Administrative Tribunal or CAT against the appointment of the Regional Censor Officer DN Sreenivasappa according to sources. The case has been filed by none other than former Regional Censor Officer Nagendra Swamy. 

  Sources tell Chitraloka that the case has been running for several months now. Swamy was the RCO in a term before another censor officer Natasha. According to sources when the central government department called for qualified central government officer to apply for the post, three central government officers applied for this. This included Nagendra Swamy and Sreenivasappa. Another woman officer had also applied. The woman officer however did not attend the selection meeting. Sources say that without calling for an interview of the other two candidates Srinivasappa was selected as the censor officer. This is the allegation made before the CAT by Swamy sources told Chitraloka. CAT is yet to decide on the case and the verdict is expected any time.

 • Censor Officer Letter To Government

  m nagendra swamy image

  Censor borad officer M Nagendra Swamy has written the letter to Government on 12/1/15 giving suggestions for the quality improvement of Kannada films. Will Kannada movie producers accept his suggestions.

  Following is the matter what Nagendra Swamy has written

  To The Principal

  Secretary

  Department of Information and Public Releations

  Government of Karnataka

  Bangalore

  Madam,

  Sub : Suggestions to Subsidy scheme to promote Qualitative Kannada Films and new talent

  1. The SUBSIDY and AWARDS scheme of Karnataka government is very useful for overall development of the film industry based in Karnataka specially for promoting qualitative kannada films and also the scheme is serving as a boost to art and kannada culture. As you are kindly aware obtaining CBFC Certificate within 31st of December every year is the primary eligibility for any film to apply for subsidy and awards.

  2. In this regard to help all kannada films aspiring to get subsidy and awards this year the undersigned streamlined the procedure and removed delivery agencies like Qube and UFP from footagae certification and gave powers of footage certification to studios based in Karnataka. As a result each Kannada film producers are benefitted by minimum of Rs 1 lakh and also their time and related expenses as they need not camp in Chennai to get Qube letter hence forth. Further it is also a major boost to studios in Karnataka.

  3. Because of the above procedural change in last December, the film producers could screen their films immediately using Blu-ray or hard disk for Film certification. Though it put lot of pressure on CBFC, however the Bangalore office responded to the demand and successfully certified 202 films which is a record by examining 6 films daily in the mothe of December 2014.

  4. Almost all the films (except 6) are certified as they are fulfilling CBFC Rules and guidelines but quality and standard of majority of ilms examined in December were not Satisfactory and they were made keeping in ind subsidy offered by the Govt. There are reports that three films were made in just 7 days. These films are bringing down the overall quality of Kannada film industry and are defeating the efforts of the Karnataka Govt. and also CBFC in promoting aesthetic value and good cinematic standard films and qualitative Kannada cinema as envisaged in Subsidy and Award policy of Karnataka Govt.

  5. In view of the above it is humbly suggested to consider the following rules to the subsidy policy of the Karnataka Govt.

  i) The film claiming subsidy has to be released in at leat 10 theaters in 4 major centers including Bangalore.

  or

  ii) The film claiming subsidy should have participated in one of the recognized film festivals in India (IFFI, BIFES, MAMI etc)

  AND

  iii) All producers and production houses are eligible for only 2 subsidies in their life time.

   

  6. if the above guidelines and rules are adopted I am sure it fits

  has the following benefits

  i) it improves the overall quality by eliminating non serious film productions.

  ii) it will be a biggest encouragement to New Talents and New experiments in Karnataka

  iii) every new producer and production House is assured of subsidy for his film

  iv) The present allocation is sufficient to increase the subsidy amount to minimum of Rs 25 lakhs from the present Rs 10 Lakhs

  v) For the Govt. the yearly allocation for subsidy remains same. No additional financial burden

  vi) The system of the same people getting subsidy every year is sliminated

  vii) it will helf CBFC to provide quality time to each film and certify all films timely.

  viii) Ultimately our people will get to see good cinema and it will promote Kannada art, culture, new talent and overall growth of Kannada film industry.

   

  7, It is therefore respectfully submitted for consideration by Karnataka Governement.

  Thanking You

  Yours Faithfully,

  (M Nagendra Swamy)

  RO, CBFC

   

  Also See

  Censor Nagendra Swamy Clarifies

  Censor Officer Nagendra Swamy Writes

  Film Festival At Censor Board! – Exclusive

  Censor Officer On Election Duty Again - Exclusive

  Mumbai Censor Doors Closed For Kannada - Exclusive

  Censor notice to Style King - Exclusive

  Krishna upset over Censor Board

  New Censor Officer M Nagendra Swamy Appointed - Exclusive

 • Censor Officer Nagendra Swamy Writes

  censor nagendra swamy, girish kasaravalli image

  ಕೆಲವು ಪತ್ರಿಕೆಗಳಲ್ಲಿ ಅವರು ತಿಳಿಸಿರುವಂತೆ ಸೆನ್ಸಾರ್ ಮಂಡಳಿಯ ಅಧ್ಯಕ್ಷರಿಂದ ಅವರ ಚಾರಿತ್ರ್ಯವಧೆಯಾಗಿಲ್ಲ. ಬದಲಿಗೆ ಅವರು ಇನ್ನೂ ಮರುಪರಿಶೀಲನಾ ಸಮಿತಿ(ರಿವೈಸ್ ಕಮಿಟಿ) ಮುಂದಿರುವ ಸಿನಿಮಾ ಬಗ್ಗೆ ಇದೊಂದು ಭಿನ್ನ ಪ್ರಯೋಗ ಎಂಬ ಹೇಳಿಕೆ ನೀಡಿ ಪ್ರಭಾವ ಬೀರಲೆತ್ನಿಸಿ ಮತ್ತು ನನಗೆ ಟಿವಿ ಮಾಧ್ಯಮದ ಮೂಲಕ ಅಧಿಕಪ್ರಸಂಗತನ ಎಂಬ ಆರೋಪ ಹೊರಿಸುವ ಮೂಲಕ ತಮ್ಮ ಅಂತರಾಷ್ಟ್ರೀಯ ಖ್ಯಾತಿಯ ಚಾರಿತ್ರ್ಯ ವಧೆಯನ್ನು ತಾವೇ ಮಾಡಿಕೊಂಡಿರುತ್ತಾರೆ. ಈ ಕೂಡಲೇ ಅವರು ಆ ಸಿನಿಮಾ ಬಗ್ಗೆ ಹೇಳಿಕೆ ಕೊಡುವುದನ್ನು ನಿಲ್ಲಿಸಿ ಅಧಿಕಪ್ರಸಂಗಿತನ ಎಂದು ನನ್ನನ್ನು ಹೀಯಾಳಿಸಿರುವುದಕ್ಕೆ ಮಾಧ್ಯಮಗಳ ಮೂಲಕ  ಕ್ಷಮೆ ಯಾಚಿಸಬೇಕು.

  ಇಲ್ಲಿ ಕೆಲವು ವಿಷಯಗಳನ್ನು ತಮ್ಮೆಲ್ಲರ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಯಾವುದೇ ಚಿತ್ರ ಪರಿಶೀಲನಾ ಸಮಿತಿ ಮುಂದೆ ಬಂದ ನಂತರ ಅದರ ನಿರ್ಧಾರವನ್ನು ಪ್ರಕಟಪಡಿಸಿದ ಮೇಲೆ ಸಂಬಂಧಪಟ್ಟ ನಿರ್ಮಾಪಕರು ಅಥವಾ ನಿರ್ದೇಶಕರು ಅದನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಇಲ್ಲ. ಅದನ್ನು ಮರುಪರಿಶೀಲನಾ ಸಮಿತಿಗೆ ಒಪ್ಪಿಸಿಸಬೇಕೇ ವಿನಃ ಮಾಧ್ಯಮದ ಮೂಲಕ ಅವರಾಗಲೀ ಅವರ ಕಡೆಯವರಾಗಲೀ ಹೇಳಿಕೆಗಳನ್ನು ನೀಡಿ ಮರುಪರಿಶೀಲನಾ ಸಮಿತಿಯ ಸದಸ್ಯರುಗಳ ಮೇಲೆ ಪ್ರಭಾವ ಬೀರುವಂತಿಲ್ಲ. ಇದು ವಸ್ತುನಿಷ್ಟವಾಗಿ ಒಂದು ಚಿತ್ರವನ್ನು ಪರಿಶೀಲಿಸಲು ಮಾಡಿರುವ ವ್ಯವಸ್ಥೆ. ಇಂಥ ಸನ್ನಿವೇಶದಲ್ಲಿ ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರು ಆ ಚಿತ್ರಕ್ಕೆ ತಮ್ಮ ಸರ್ಟಿಫಿಕೇಟ್ ಕೊಡುವುದರ ಜೊತೆಗೆ ಸೆನ್ಸಾರ್ ಮಂಡಳಿಯ ಸದಸ್ಯರ ಮೇಲೆ ಜಗತ್ತಿನ ಸಿನಿಮಾಗಳಲ್ಲಿ ನಡೆಯುತ್ತಿರುವ ಪ್ರಯೋಗಗಳನ್ನು ಗಮನಿಸಬೇಕು ಎಂಬ ಉಪದೇಶದ ಜೊತೆಗೆ ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ತಕರಾರು ಎಂದು ಮೂದಲಿಸಿರುವುದು ದುರದೃಷ್ಟಕರ. ಇವರಿಗೆ ತಮ್ಮ ಇಂತಹ ಹೇಳಿಕೆಯಿಂದ ಮರುಪರಿಶೀಲನಾ ಸಮಿತಿ ಸದಸ್ಯರ ಮೇಲೆ ಪ್ರಭಾವ ಮತ್ತು ಒತ್ತಡ ಹೇರಿದಂತಾಗುತ್ತದೆ ಎಂಬ ಸೂಕ್ಷ್ಮಪ್ರಜ್ಞೆ ಇಲ್ಲದಿರುವುದು ಆಶ್ಚರ್ಯಕರವಾಗಿದೆ. ಮರುಪರಿಶೀಲನಾ ಸಮಿತಿಯ ನಿರ್ಧಾರದ ನಂತರ ಅವರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಲು ಸ್ವತಂತ್ರರಾಗಿರುತ್ತಾರೆ. ಇದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲ ಬದಲಾಗಿ ಸಮಯಪ್ರಜ್ಞೆಯ ವಿಚಾರವಷ್ಟೇ.

  ಇನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಸಿಬಿಎಫ್ ಸಿ ಯನ್ನು ಸೆನ್ಸಾರ್ ಮಂಡಳಿಯೇ ಅಲ್ಲ ಎನ್ನುತ್ತಾ ಅದರ ವ್ಯಾಪ್ತಿಯ ಬಗ್ಗೆ ತಪ್ಪುಕಲ್ಪನೆ ಹೊಂದಿದ್ದಾರೆ ಮತ್ತು ಅದರ ವ್ಯಾಪ್ತಿಯನ್ನು ಸೀಮಿತಗೊಳಿಸಿ ವ್ಯಂಗ್ಯವಾಡಿದ್ದಾರೆ. ಇಲ್ಲಿ ಸ್ಪಷ್ಟಪಡಿಸುವುದೇನೆಂದರೆ, ೧೯೮೩ ರಲ್ಲಿ ಸೆನ್ಸಾರ್ ಬೋರ್ಡ್ ಅಂತ ಇದ್ದುದನ್ನು ಕೇಂದ್ರ ಚಲನಚಿತ್ರ ವಾಣಿಜ್ಯ ಮಂಡಳಿ ಎಂದು ಮರುನೇಮಕ ಮಾಡಲಾಯಿತು. ಇದನ್ನು ನಾನು ನನ್ನ ಅಧಿಕಾರವಹಿಸಿಕೊಂಡ ಮೊದಲನೇ ದಿನವೇ ಮಾಧ್ಯಮದ ಮೂಲಕ ಎಲ್ಲರಿಗೂ ಸ್ಪಷ್ಟಪಡಿಸಿದ್ದೆ. ಇಲ್ಲಿ ಗಮನಿಸಬೇಕಾದುದೇನೆಂದರೆ, ಹೆಸರಷ್ಟೇ ಬದಲಾಯಿತೇ ವಿನಃ ಇವತ್ತಿಗೂ ಸಾವಿರದ ಒಂಬೈನೂರ ಐವತ್ತೆರಡರ ಸಿನಿಮಾಟಾಗ್ರಾಫ್ ಕಾಯಿದೆ ಮತ್ತು ಅದರ ನಿಯಮಾವಳಿಗಳ ಪ್ರಕಾರವೇ ಕಾರ್ಯನಿರ್ವಹಿಸ ಬೇಕಾಗಿದೆ. (ಸೆನ್ಸಾರ್ ಅನ್ನುವುದು ಒಂದು ರೀತಿ ಕತ್ತರಿಪ್ರಯೋಗ ಎಂಬ ನೆಗೆಟಿವ್ ಧೋರಣೆ ಬಿಂಬಿಸುತ್ತದೆ ಎನ್ನುವ ಸದುದ್ದೇಶದಿಂದ ಹೆಸರನ್ನು ಬದಲಾಯಿಸಲಾಯಿತು.) ಅದರಂತೆ ಸೆಕ್ಷನ್ ೫ಬಿ ನೋಟಿಫಿಕೇಶನ್ ೧ಇ ಪ್ರಕಾರ ಯಾವುದೇ ಚಿತ್ರವೂ ಈಸ್ತೆಟಿಕ್ ವ್ಯಾಲ್ಯೂ ಮತ್ತು ಸಿನಿಮ್ಯಾಟಿಕಲಿ ಗುಡ್ ಸ್ಟಾಂಡರ್ಡ್ ಇರಬೇಕು. ಈ ಗೈಡ್ ಲೈನ್ ಪ್ರಕಾರ ಆ ಸಿನಿಮಾವನ್ನು ತಿರಸ್ಕರಿಸಲಾಯಿತು. ಇಲ್ಲಿ ಈ ತೀರ್ಮಾನ ಅವರಿಗೆ ಒಪ್ಪಿಗೆಯಾಗದಿದ್ದಲ್ಲಿ ಅದನ್ನು ಮರುಪರಿಶೀಲನಾ ಸಮಿತಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅವಕಾಶವನ್ನೂ ಕಾಯಿದೆಯೇ ಮಾಡಿಕೊಟ್ಟಿದೆ. ಕಾಯಿದೆಯಲ್ಲಿ ಡಾಕ್ಯುಮೆಂಟರಿ ಮತ್ತು ಫೀಚರ್ ಫಿಲಂ  ಎಂದಷ್ಟೇ ವರ್ಗೀಕರಣವಿರುವುದು. ಇವರಿಗೆ ಪ್ರಯೋಗಾತ್ಮಕ ಚಿತ್ರ ಬೇಕಿದ್ದರೆ ಮೊದಲು ಅವರು ಕಾನೂನನ್ನು ಬದಲಿಸಿ ಅದರಲ್ಲಿ ಭಿನ್ನ ಪ್ರಯೋಗದ ಚಿತ್ರಗಳ ಬಗ್ಗೆ ಪ್ರತ್ಯೇಕ ಕ್ಲಾಸಿಫಿಕೇಶನ್ ಸೇರಿಸಲು ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಮಂಡಳಿಯ ಸದಸ್ಯರ ಮೇಲೆ ಹರಿಹಾಯುವುದು ಎಷ್ಟು ಸರಿ?

  ಇನ್ನು ಸಬ್ಸಿಡಿಯ ಬಗ್ಗೆ ನಾನು ಮಾತನಾಡಿರುವುದನ್ನು ಗಿರೀಶ್ ಕಾಸರವಳ್ಳಿ ಅಧಿಕಪ್ರಸಂಗತನ ಎಂದು ಕರೆದಿರುವುದು ನಿಜಕ್ಕೂ ಹಾಸ್ಯಾಸ್ಪದ. ಈ ದೇಶದ ಯಾವುದೇ ಸಾಮಾನ್ಯಪ್ರಜೆಯೂ ಸರ್ಕಾರದ ಹಣ ದುರುಪಯೋಗವಾಗುವಾಗ ಅದನ್ನು ಸರಿಯಾದ ರೀತಿ ಬಳಸಲು ಸಲಹೆ ಕೊಡುವ ಹಕ್ಕು ಇದೆ. ಅದರಲ್ಲೂ ನಾನು ಮಂಡಳಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುವಾಗ ನನ್ನ ಗಮನಕ್ಕೆ ಬಂದ ಅಂಶಗಳನ್ನು ಸಲಹೆಯರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಲು ಸ್ವತಂತ್ರನಿದ್ದೇನೆ ಮತ್ತು ಅದು ನನ್ನ ಜವಾಬ್ದಾರಿಯೂ ಹೌದು. ಆದರೆ ಆ ಸಲಹೆಗಳನ್ನು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವುದು ಸರ್ಕಾರಕ್ಕೆ ಬಿಟ್ಟ ವಿಷಯ. ಇಷ್ಟು ಸಣ್ಣ ವಿಷಯ ಅಂತರರಾಷ್ಟ್ರೀಯ ಖ್ಯಾತಿಯ ನಿರ್ದೇಶಕರಿಗೆ ತಿಳಿಯಲಿಲ್ಲವೇ?

  ಇನ್ನು ಗಾಳಿಬೀಜ ಸಿನಿಮಾಕ್ಕೆ ಸಂಬಂಧಿಸಿದಂತೆ ಅರ್ಥವಾಗಲಿಲ್ಲ ಎಂದು ನಾನು ಎಲ್ಲಿಯೂ ಹೇಳಲಿಲ್ಲ. ಅದರಲ್ಲಿ ಅರ್ಥ ಇಲ್ಲ ಎಂದೇ ಹೇಳಿರುವುದು. ಇದನ್ನು ತಿರುಚಿ ನಮಗೆ ಅರ್ಥ ಮಾಡಿಕೊಳ್ಳಲು ಅಸಮರ್ಥರು ಎಂಬಂತೆ ಮಾತನಾಡಿರುವುದು ಅವರ ಅಹಂ ಅನ್ನು ತೋರಿಸುತ್ತದೆ. ಅವರ ದೃಷ್ಟಿಯಲ್ಲಿ ವಾಣಿಜ್ಯಸಿನಿಮಾಗಳು ಮತ್ತು ಅದನ್ನು ನೋಡುವವರನ್ನು ಅಪಮೌಲ್ಯಗೊಳಿಸುವ ಒಂದು ದನಿಯಿದೆ. ವಸ್ತುಸ್ಥಿತಿ ಎಂದರೆ  ಈ ದಿನ ಸಿನಿಮಾ ಉದ್ಯಮ ನಿಂತಿರುವುದು ಬೆಳೆಯುತ್ತಿರುವುದು ಸಾವಿರಾರು ಜನಕ್ಕೆ ಅನ್ನ ನೀಡುತ್ತಿರುವುದು ಈ ವಾಣಿಜ್ಯ ಸಿನಿಮಾಗಳೇ. ಅಂದ ಮಾತ್ರಕ್ಕೆ ಕಲಾಸಿನಿಮಾಗಳ ಬಗ್ಗೆ ನನ್ನ ಅಭಿಮತವಿಲ್ಲ ಎಂದಲ್ಲ. ನನಗೂ ಎಷ್ಟೋ ವರುಷಗಳಿಂದ ಎಲ್ಲಾ ಭಾಷೆಯ ಕಲಾ ಸಿನಿಮಾಗಳ ಹಲವು ಹತ್ತು ಭಿನ್ನ ಪ್ರಯೋಗಗಳನ್ನು ನೋಡಿದ ಅನುಭವವಿದೆ.  ಆದರೆ ಒಂದು ಸಂಸ್ಕೃತಿಯನ್ನು ಬೆಳೆಸಲು ಕಲಾಸಿನಿಮಾದ ಪಾತ್ರವಿದ್ದಂತೆ ವಾಣಿಜ್ಯಸಿನಿಮಾಗಳ ಪಾತ್ರವನ್ನೂ ಅಲ್ಲಗಳೆಯಲಾಗುವುದಿಲ್ಲ. ಇನ್ನು ಗಾಳಿಬೀಜದ ಬಗ್ಗೆ ಒಂದು ಮಾತು-ಇದನ್ನು ನಾನು ಮಂಡಳಿಯ ಅಧಿಕಾರಿಯಾಗಿ ಹೇಳುತ್ತಿಲ್ಲ ಸಾಮಾನ್ಯ ಸಿನಿಮಾ ಪ್ರೇಕ್ಷಕನಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಇದೊಂದು ಛಿದ್ರಛಿದ್ರ ಚಿತ್ರಗಳ ಮತ್ತು ಅಸಮರ್ಪಕ ಸಂಭಾಷಣೆಯ ಚಿತ್ರ. ಇಡೀ ಚಿತ್ರದಲ್ಲಿ ಹದಿನೈದರಿಂದ ಇಪ್ಪತ್ತು ಡೈಲಾಗ್ ಇರಬಹುದು. ನನ್ನ ಸಲಹೆ ಏನೆಂದರೆ ಅಷ್ಟೂ ಸಂಭಾಷಣೆಗಳನ್ನು ತೆಗೆದು ಚಿತ್ರ ನೋಡಿದರೆ  ಪ್ರಾಯಶಃ ಅಲ್ಲಿಯ ಛಿದ್ರ ಛಿದ್ರ ಚಿತ್ರಗಳಿಗೆ ಒಂದು ಆಯಾಮ ದೊರೆತು  ಅರ್ಥಪೂರ್ಣವಾಗುತ್ತದೆ. ಜೊತೆಗೆ ಸಂಭಾಷಣೆಯೇ ಇಲ್ಲದೆ   ದೃಶ್ಯ ಮತ್ತು ಶಬ್ದಗಳ ಮೂಲಕವೇ ಸಂವಹಿಸುವ ವಿಭಿನ್ನ ಸಿನಿಮಾವಾಗುತ್ತಿತ್ತು. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಇವರಿಗೆ ಸಿನಿಮಾಗಳ ಜ್ಞಾನವೇ ಇಲ್ಲ ಮತ್ತು ಜಗತ್ತಿನ ಸಿನಿಮಾಗಳ ಪ್ರಯೋಗ ಗೊತ್ತಿಲ್ಲ ಎಂದಿರುವುದಕ್ಕೆ ಕ್ರಿಯಾಶೀಲ ಸಲಹೆ ಅಷ್ಟೆ. ಹಾಗಾಗಿ ಚಿತ್ರ ಅರ್ಥವಾಗದಿರುವಷ್ಟು ಅಪ್ರಬುದ್ಧರಲ್ಲ ಎನ್ನುವುದು ಅವರಿಗೆ ತಿಳಿಯಲಿ ಮತ್ತು ಯಾವುದೇ ಸಂದರ್ಭದಲ್ಲೂ ಮಂಡಳಿಯು ಕನ್ನಡ ಸಿನಿಮಾಗಳ ಬೆಳವಣಿಗೆ ಮತ್ತು ಗುಣಮಟ್ಟಕ್ಕೆ ಶ್ರಮಿಸುತ್ತದೆ. ಅಲ್ಲದೆ ನಿರ್ಮಾಪಕರು ಮತ್ತು ನಿರ್ದೇಶಕರ ಒತ್ತಾಸೆಗೆ ಪೂರಕವಾಗಿಯೇ ಕಾರ್ಯನಿರ್ವಹಿಸುತ್ತದೆಯೇ ಹೊರತು ಯಾವುದೇ ರೀತಿಯ ಪ್ರಯೋಗಗಳಿಗೆ ಅಡ್ಡಿ ಆಗಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ.


  M NAGENDRASWAMY
  REGIOAL OFFICER

 • ಸೆನ್ಸಾರ್ ಆಫೀಸರ್ಸ್ ಕಲರವ

  censor officer appointment challenged

  ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿ ಅಧಿಕಾರಿ ಡಿ.ಎನ್. ಶ್ರೀನಿವಾಸಪ್ಪ, ವಿವಾದದಿಂದ ಸುದ್ದಿಯಾಗಿದ್ದರು. ಕಾನೂನು ಪುಸ್ತಕದಲ್ಲಿ ಇಲ್ಲದ ರೂಲ್ಸುಗಳನ್ನೆಲ್ಲ ಸೇರಿಸಿ, ನಿರ್ಮಾಪಕರಿಂದ ಪ್ರಮಾಣಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಿರುವುದು ಸುದ್ದಿಯಾಗಿತ್ತು. ಈಗಿರುವಾಗಲೇ ಇನ್ನೊಂದು ಹೊಸ ವಿವಾದ ಬೆಳಕಿಗೆ ಬಂದಿದೆ.

  ಇದೇ ಶ್ರೀನಿವಾಸಪ್ಪನವರ ವಿರುದ್ಧ ಸಿಎಟಿಯಲ್ಲಿ ದೂರು ದಾಖಲಾಗಿದ್ದು, ಅವರ ನೇಮಕಾತಿಯನ್ನೇ ಪ್ರಶ್ನಿಸಲಾಗಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿ ಶ್ರೀನಿವಾಸಪ್ಪನವರ ನೇಮಕಾತಿ ಪ್ರಶ್ನಿಸಿ ದೂರು ನೀಡಿರುವುದು, ಇದೇ ಪ್ರಾದೇಶಿಕ ಸೆನ್ಸಾರ್ ಮಂಡಳಿಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ನಾಗೇಂದ್ರ ಸ್ವಾಮಿ.

  ಚಿತ್ರಲೋಕಕ್ಕೆ ಲಭ್ಯವಾದ ಮಾಹಿತಿಗಳ ಪ್ರಕಾರ, ನಾಗೇಂದ್ರ ಸ್ವಾಮಿ ನಂತರ ನತಾಶಾ ಅಧಿಕಾರಿಯಾಗಿ ಬಂದಿದ್ದರು. ಇವರ ನಂತರ, ನೇಮಕಾತಿಗೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಿತ್ತು. ಅರ್ಹ ಹಾಗೂ ಅನುಭವೀ ಅಧಿಕಾರಿಗಳಿಂದ ಅರ್ಜಿ ಕರೆಯಲಾಗಿತ್ತು. ಆ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಧಿಕಾರಿಗಳು ಮೂವರು. ಒಬ್ಬರು ಈ ಶ್ರೀನಿವಾಸಪ್ಪ, ಮತ್ತೊಬ್ಬರು ಇವರ ವಿರುದ್ಧ ಈಗ ದೂರು ನೀಡಿರುವ ನಾಗೇಂದ್ರ ಸ್ವಾಮಿ. ಹಾಗೂ ಮೂರನೆಯ ವ್ಯಕ್ತಿ ಒಬ್ಬ ಮಹಿಳಾ ಅಧಿಕಾರಿ.

  ಒಂದು ಹುದ್ದೆಗೆ ಮೂವರು ಅರ್ಜಿ ಹಾಕಿದಾಗ, ಮೂವರೂ ಅಭ್ಯರ್ಥಿಗಳ ಸಂದರ್ಶನ, ಮೌಖಿಕ ಪರೀಕ್ಷೆಗಳೆಲ್ಲ ನಡಯಬೇಕು ತಾನೇ.. ವಿವಾದ ಇರುವುದೇ ಇಲ್ಲಿ. ಸಂದರ್ಶನವೇ ನಡೆಯದೆ ಶ್ರೀನಿವಾಸಪ್ಪ ಆಯ್ಕೆಯಾಗಿರುವುದೇ ವಿವಾದದ ಮೂಲ. ಮೂಲಗಳ ಪ್ರಕಾರ, ಶ್ರೀನಿವಾಸಪ್ಪ ಅವರ ನೇಮಕದ ವೇಳೆ, ನಾಗೇಂದ್ರ ಸ್ವಾಮಿಯವರ ಸಂದರ್ಶನವೇ ನಡೆದಿಲ್ಲ. ಇದನ್ನೇ ಪ್ರಶ್ನಿಸಿ ನಾಗೇಂದ್ರ ಸ್ವಾಮಿ ಸಿಎಟಿ ಮೊರೆ ಹೋಗಿದ್ದಾರೆ. 

  ಸಿಎಟಿಯಲ್ಲಿ ಹಲವು ತಿಂಗಳುಗಳಿಂದ ವಿಚಾರಣೆ ನಡೆಯುತ್ತಿದೆ. ಯಾವುದೇ ದಿನ ತೀರ್ಪು ಹೊರಬೀಳಬಹುದು. ಸೆನ್ಸಾರ್ ಮಂಡಳಿಯಲ್ಲಿ ಏನೇನೆಲ್ಲ ನಡೆಯುತ್ತಿದೆ ಅನ್ನೋದಕ್ಕೆ ಇದೊಂದು ಸಣ್ಣ ಉದಾಹರಣೆ ಮಾತ್ರ.

  Related Articles :-

  Censor Officer Appointment Challenged - Exclusive

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery