` dayal padmanabhan - chitraloka.com | Kannada Movie News, Reviews | Image

dayal padmanabhan

 • ಪ್ರಯೋಗವೂ ಅಲ್ಲ.. ಕಮರ್ಷಿಯಲ್ಲೂ ಅಲ್ಲ.. ಬ್ರಿಡ್ಜ್ ಸಿನಿಮಾ ಪುಟ 109

  dayal's puta 109 rocks again

  ನಿರ್ದೇಶಕ ದಯಾಳ್ ಪದ್ಮನಾಭನ್‍ಗೆ ಪ್ರಯೋಗಾತ್ಮಕ, ವಿಭಿನ್ನ ಚಿತ್ರಗಳ ಭರ್ಜರಿ ಹಿಡಿತ ಸಿಕ್ಕಿಬಿಟ್ಟಿದೆ. ಆ್ಯಕ್ಟರ್ ಚಿತ್ರದಿಂದ ಶುರುವಾದ ವಿಭಿನ್ನ ಕಥೆಗಳನ್ನು ಹೇಳುವ ದಯಾಳ್ ಸೂತ್ರ, ಹಗ್ಗದ ಕೊನೆ, ಆ ಕರಾಳ ರಾತ್ರಿಯಲ್ಲೂ ಮುಂದುವರೆದಿತ್ತು. ಈಗ ಪುಟ 109ರಲ್ಲೂ ದಯಾಳ್ ಆ ವಿಷಯದಲ್ಲಿ ಗೆದ್ದಿದ್ದಾರೆ. ಚಿತ್ರವನ್ನು ನೋಡಿದವರು ಮತ್ತೊಮ್ಮೆ ಥ್ರಿಲ್ಲಾಗಿದ್ದಾರೆ.

  ಇದು ಅನ್‍ಯೂಷುಯಲ್ ಕ್ರೈಂ ಥ್ರಿಲ್ಲರ್. ಪ್ರಯೋಗಾತ್ಮಕ ಚಿತ್ರವೂ ಅಲ್ಲ, ಅತ್ತ ಕಮರ್ಷಿಯಲ್ ಚಿತ್ರವೂ ಅಲ್ಲ. ಬ್ರಿಡ್ಜ್ ಸಿನಿಮಾ ಎನ್ನುತ್ತಾರೆ ದಯಾಳ್. ಆರ್. ಅರವಿಂದ್ ಎಂಬುವವರು ಬರೆದ ಕಥೆಗೆ ಸಂಭಾಷಣೆ ಬರೆದಿರುವುದು ನವೀನ್ ಕೃಷ್ಣ. ಆ ಕರಾಳ ರಾತ್ರಿಯಲ್ಲಿ ಅಚ್ಚರಿ ಮೂಡಿಸಿದ್ದ ಜಿಕೆ, ಈ ಚಿತ್ರದಲ್ಲಿ ಇನ್ನೂ ಎತ್ತರಕ್ಕೇರಿದ್ದಾರೆ. ಜಿಕೆ ಮತ್ತು ನವೀನ್ ಕೃಷ್ಣ ನಡುವಣ ಜುಗಲ್‍ಬಂದಿ ಪ್ರೇಕ್ಷಕರನ್ನು ಥ್ರಿಲ್ಲಾಗಿಸಲಿದೆ ಎಂದಿದ್ದಾರೆ ದಯಾಳ್.

  ಸಿನಿಮಾದ ಹೈಲೈಟ್ ಏನ್ ಗೊತ್ತಾ..? 70 ನಿಮಿಷಗಳ ಒಂದೇ ದೃಶ್ಯ. ಆದರೆ ಒಂದು ಕ್ಷಣವೂ ಬೋರ್ ಆಗಲ್ಲ. ಪ್ರೇಕ್ಷಕ ಸೀಟಿನ ತುತ್ತತುದಿಯಲ್ಲಿ ಕುಳಿತು ಥ್ರಿಲ್ ಅನುಭವಿಸ್ತಾನೆ ಅನ್ನೋದು ದಯಾಳ್ ಭರವಸೆ. 

  ಚಿತ್ರದ ನಾಯಕಿ ವೈಷ್ಣವಿ ಮೆನನ್, ಈ ಚಿತ್ರದಲ್ಲಿ ಮಾರ್ಡನ್ ಹೆಂಡತಿಯಾಗಿ ಮಿಂಚಿದ್ದಾರೆ. ಅಂದಹಾಗೆ ಸಿನಿಮಾ ಶುರುವಾದ ಕೆಲವೇ ನಿಮಿಷಗಳಲ್ಲಿ ಅವರು ಕೊಲೆಯಾಗಿ ಹೋಗ್ತಾರೆ. ಥ್ರಿಲ್ ಶುರುವಾಗುವುದೇ ಆಗ. ಪುಟ 109 ಥಿಯೇಟರುಗಳಲ್ಲಿದೆ.

 • ಪ್ರಿಯಾಂಕಾ ಉಪೇಂದ್ರ ಸುಪಾರಿ ಕೊಲೆಗೆ ಜಾಕ್ ಮಂಜು, ದಯಾಳ್ 

  priyanka upendra aceepts supari kole

  ಪ್ರಿಯಾಂಕಾ ಉಪೇಂದ್ರ ಸುಪಾರಿ ಕೊಲೆಗೆ ದಯಾಳ್ ಪದ್ಮನಾಭನ್ ಮುಂದಾಗಿದ್ದಾರೆ. ಇದು ದಯಾಳ್ ನಿರ್ದೇಶಿಸಲು ಹೊರಟಿರುವ ಹೊಸ ಸಿನಿಮಾ. ಅದು ಶಿವಕುಮಾರ್ ಮಾವಲಿ ಎಂಬುವವರ ನಾಟಕ ಆಧರಿಸಿದ ಸಿನಿಮಾ. ಚಿತ್ರದ ಕಥೆ ಕೇಳಿ ಪ್ರಿಯಾಂಕಾ ಥ್ರಿಲ್ಲಾಗಿದ್ದಾರಂತೆ.

  ಆ್ಯಕ್ಟರ್ ಮತ್ತು ಕರಾಳ ರಾತ್ರಿ ಚಿತ್ರಗಳ ನಂತರ ದಯಾಳ್ ಪದ್ಮನಾಭನ್ ವಿಭಿನ್ನ ಕಥೆಗಳ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರದಲ್ಲೂ ಅಷ್ಟೆ, ಗಂಡನ ಕೊಲೆಗೆ ಸುಪಾರಿ ನೀಡುವ ಪತ್ನಿ, ಜೊತೆಯಲ್ಲೇ ತನ್ನ ಕೊಲೆಗೂ ಸುಪಾರಿ ಕೊಡುತ್ತಾಳೆ. ಪ್ರಿಯಾಂಕಾ ಉಪೇಂದ್ರ ಅವರನ್ನು ಥ್ರಿಲ್ಲಾಗಿಸಿರುವುದೇ ಅದು.

  ದಯಾಳ್ ನಿರ್ದೇಶನದ ಚಿತ್ರಕ್ಕೆ ನಿರ್ಮಾಪಕರಾಗುತ್ತಿರುವುದು ಜಾಕ್ ಮಂಜು. ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ನಂತರ ಜಾಕ್ ಮಂಜು ನಿರ್ಮಿಸುತ್ತಿರುವ ಸಿನಿಮಾ, ಮುಂದಿನ ವರ್ಷ ಸೆಟ್ಟೇರಲಿದೆ.

 • ಬಿಗ್‍ಬಾಸ್ ಮನೆಯಲ್ಲಿ ಬಿತ್ತಿದ ಬೀಜ ಕರಾಳ ರಾತ್ರಿ

  karala ratri started in big boss house

  ಆ ಕರಾಳ ರಾತ್ರಿ. ಈ ಚಿತ್ರ ಮೊಳಕೆಯೊಡೆದಿದ್ದೇ ಬಿಗ್‍ಬಾಸ್ ಮನೆಯಲ್ಲಿ. ಬಿಗ್‍ಬಾಸ್ ಮನೆಯಲ್ಲಿದ್ದಾಗ ದಯಾಳ್, ತಮ್ಮೊಂದಿಗಿದದ ಅನುಪಮಾ ಮತ್ತು ಜಯಕೀರ್ತಿಗೆ ಈ ಕಥೆ ಹೇಳಿದ್ದರಂತೆ. ಬಿಗ್‍ಬಾಸ್ ಮನೆಯಿಂದ ಹೊರಬಂದ ಮೇಲೆ ಚಿತ್ರಕ್ಕೆ ನೀವೇ ಹೀರೋ, ಹೀರೋಯಿನ್ ಎಂದಿದ್ದರಂತೆ. ಜೆಕೆಗೆ ಇಷ್ಟವಾಗಿದ್ದುದು ಆ ಕರಾಳ ರಾತ್ರಿ ಕಥೆ.

  ಕಥೆ ಡಿಫರೆಂಟ್ ಆಗಿತ್ತು. ಆದರೆ, ದಯಾಳ್ ಸಿನಿಮಾ ಮಾಡ್ತಾರಾ ಅನ್ನೋ ಅನುಮಾನವೂ ಇತ್ತು. ಆದರೆ, ಬಿಗ್‍ಬಾಸ್‍ನಿಂದ ಬಂದ ಮೇಲೆ ನನಗೇ ಗೊತ್ತಿಲ್ಲದಂತೆ ಸಿನಿಮಾ ಅನೌನ್ಸ್ ಮಾಡಿ ಸರ್‍ಪ್ರೈಸ್ ಕೊಟ್ಟರು ಎಂದಿದ್ದಾರೆ ಜೆಕೆ.

  ಚಿತ್ರಕ್ಕಾಗಿ ಇದೇ ಮೊದಲ ಬಾರಿಗೆ ಜೆಕೆ ಗೆಟಪ್ ಬದಲಾಗಿದೆ. ರೆಟ್ರೊ ಲುಕ್‍ನಲ್ಲಿ ಲಾಂಗ್ ಹೇರ್, ದಪ್ಪ ಮೀಸೆ, ಕಾಸ್ಟ್ಯೂಮ್ ಬದಲಿಸಿಕೊಂಡಿದ್ದಾರೆ. ಚಿತ್ರದ ಪ್ರತಿ ಡೈಲಾಗ್‍ನ್ನೂ ಎಂಜಾಯ್ ಮಾಡಿದ್ದೇನೆ. ಡೈಲಾಗುಗಳು ವಿಭಿನ್ನವಾಗಿವೆ. ದಯಾಳ್ ಚಿತ್ರದ ಸ್ಕ್ರಿಪ್ಟ್ ಕೊಟ್ಟಾಗ ನನ್ನಿಂದ ಇಂಥ ಸಿನಿಮಾ ಸಾಧ್ಯವಾ ಎಂಬ ಅನುಮಾನ ಮೂಡಿತ್ತು. ಆದರೆ, ಚಿತ್ರವನ್ನು ತುಂಬಾ ಇಷ್ಟಪಟ್ಟು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಕಿರುತೆರೆಯ ಸೂಪರ್‍ಸ್ಟಾರ್ ಜೆಕೆ ಅಲಿಯಾಸ್ ಜಯಕೀರ್ತಿ.

 • ಮಾರ್ಚ್ ಕೊನೆಗೆ ಮತ್ತೆ ರಾಘಣ್ಣ 

  raghavendra rajkumar in theaters this march

  ಅಮ್ಮನ ಮನೆ ಸಿನಿಮಾ ಮಾರ್ಚ್ ಆರಂಭದಲ್ಲಿ ರಿಲೀಸ್ ಆಗಿತ್ತು. ಮಹಿಳಾ ದಿನದಂದೇ ಬಿಡುಗಡೆಯಾಗಿರುವ ಅಮ್ಮನ ಮನೆ ಸಿನಿಮಾ ವಿಮರ್ಶಕರ ಮೆಚ್ಚುಗೆ ಗಳಿಸಿದೆ. ಚಿತ್ರದ ಟಾರ್ಗೆಟ್ ಪ್ರೇಕ್ಷಕರನ್ನು ಯಶಸ್ವಿಯಾಗಿ ರೀಚ್ ಆಗಿದೆ ಅಮ್ಮನ ಮನೆ. ಕ್ಲಾಸ್ ವರ್ಗದ ಪ್ರೇಕ್ಷಕರು ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

  14 ವರ್ಷಗಳ ನಂತರ ತೆರೆಗೆ ಬಂದಿರೋ ರಾಘವೇಂದ್ರ ರಾಜ್‍ಕುಮಾರ್, ಇದೇ ತಿಂಗಳ ಕೊನೆಗೆ ಮತ್ತೊಮ್ಮೆ ಬರುತ್ತಿದ್ದಾರೆ. ಡಫರೆಂಟ್ ಚಿತ್ರಗಳ ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶನದ ತ್ರಯಂಬಕಂ ಸಿನಿಮಾ, ಮಾರ್ಚ್ 29ಕ್ಕೆ ಬಿಡುಗಡೆಯಾಗುತ್ತಿದೆ. 

  ಆ್ಯಕ್ಟರ್ ಚಿತ್ರದಿಂದ ವಿಭಿನ್ನ ಚಿತ್ರಗಳ ನಿರ್ದೇಶಕ ಎಂದೇ ಗುರುತಿಸಿಕೊಂಡ ದಯಾಳ್, ಅದಾದ ನಂತರ ಹಗ್ಗದ ಕೊನೆ, ಪುಟ 109, ಆ ಕರಾಳ ರಾತ್ರಿ ಚಿತ್ರಗಳ ಮೂಲಕ ನಿರೀಕ್ಷೆ ಹೆಚ್ಚಿಸುತ್ತಲೇ ಹೋಗಿದ್ದಾರೆ. ಇದೊಂದು ಮೈಥಾಲಜಿಕಲ್ ಥ್ರಿಲ್ಲರ್ ಸೈಕಲಾಜಿಕಲ್ ಚಿತ್ರ. 

 • ಮೂರನೇ ಕಣ್ಣು..ನವಪಾಶಾಣ..ಶ್ರೀಕೃಷ್ಣದೇವರಾಯ..5000 ವರ್ಷ.. ಏನಿದರ ರಹಸ್ಯ..?

  trayambakam has lot of thrilling elements

  ತ್ರಯಂಬಕಂ ಎಂದರೆ ಶಿವನ ಮೂರನೇ ಕಣ್ಣು ಎಂದರ್ಥ. ಅಮರಕೋಶ ಓದಿದವರಿಗೆ ಇದು ಖಂಡಿತಾ ಗೊತ್ತಿರುತ್ತೆ. ಚಿತ್ರದ ಹೆಸರು ಹೀಗಿದ್ದರೆ, ಚಿತ್ರದಲ್ಲಿರೋದು ನವಪಾಶಾಣದ ಕಥೆ. ಭಾರತದಲ್ಲಿ ಒಂದಾನೊಂದು ಕಾಲದಲ್ಲಿ ಅಸ್ಥಿತ್ವದಲ್ಲಿ ವೈದ್ಯಕೀಯ ಪದ್ಧತಿ ಮತ್ತು ಔಷಧದ ಕಥೆ. ಸುಮಾರು 5000 ವರ್ಷಗಳ ಹಿಂದಿನ ಕಥೆ. ಇದುವರೆಗೂ ಅದನ್ನು ಯಾರೂ ಟಚ್ ಮಾಡುವ ಸಾಹಸಕ್ಕೂ ಹೋಗಿರಲಿಲ್ಲ.

  ಆಗಿನ ಆ ಕಥೆಗೂ, ಈಗಿನ ಈ ನವಮಾನಸಕ್ಕೂ ಎತ್ತಣಿಂದೆತ್ತಣ ಸಂಬಂಧ..? ಚಿತ್ರದ ಹೆಸರಷ್ಟೇ ಅಲ್ಲ, ಇಡೀ ಚಿತ್ರ ನಿಮ್ಮನ್ನು ಸೀಟಿನ ತುದಿಯಲ್ಲಿಯೇ ಕೂರಿಸುತ್ತೆ. ಕೌತುಕ ಅಂಶಗಳಿವೆ. ಒಂದು ಪರಿಪೂರ್ಣ ಸಸ್ಪೆನ್ಸ್ ಥ್ರಿಲ್ಲರ್ ಅನ್ನೋ ಭರವಸೆ ಕೊಡ್ತಾರೆ ಅನುಪಮಾ ಗೌಡ.

  ಕರಾಳ ರಾತ್ರಿಯಲ್ಲಿ ಗಟ್ಟಿಗಿತ್ತಿಯಾಗಿ ನಟಿಸಿ ಮೆಚ್ಚುಗೆ ಗಿಟ್ಟಿಸಿದ್ದ ಅನುಪಮಾಗೆ ಇಲ್ಲಿ ಜರ್ನಲಿಸ್ಟ್ ಪಾತ್ರ. ಇವರ ತಂದೆಯಾಗಿ ನಟಿಸಿರೋದು ರಾಘವೇಂದ್ರ ರಾಜ್‍ಕುಮಾರ್. ರಾಘಣ್ಣನ 2ನೇ ಇನ್ನಿಂಗ್ಸ್‍ನಲ್ಲಿ ಬರುತ್ತಿರುವ 2ನೇ ಸಿನಿಮಾ ಇದು.

  ದಯಾಳ್ ಪದ್ಮನಾಭನ್ ಈ ನವಪಾಶಾಣದ ಕಥೆಯನ್ನು ಶ್ರೀಕೃಷ್ಣ ದೇವರಾಯನನ್ನು ಈಗಿನ ಕಾಲಕ್ಕೆ ತಂದಿದ್ದು ಹೇಗೆ ಅನ್ನೋದೇ ಒಂದು ದೊಡ್ಡ ರಹಸ್ಯ. ಆ ರಹಸ್ಯ ಥಿಯೇಟರುಗಳಲ್ಲಿ ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ.

 • ರಂಗನಾಯಕಿ ಬೆನ್ನು ಹತ್ತಿದ ದಯಾಳ್

  dayal's next film is ranganayaki

  ದಯಾಳ್ ಪದ್ಮನಾಭನ್, ಕಡಿಮೆ ಬಜೆಟ್‍ನ ಉತ್ತಮ ಕಥೆಯ ಚಿತ್ರಗಳಿಗೆ ಹೆಸರುವಾಸಿ. ಒಂದರ ಹಿಂದೊಂದು ವಿಭಿನ್ನ ಸಿನಿಮಾ ನೀಡುತ್ತಿರುವ ದಯಾಳ್ ಈ ಬಾರಿ ರಂಗನಾಯಕಿ ಬೆನ್ನು ಹತ್ತಿದ್ದಾರೆ.

  ರಂಗನಾಯಕಿ ಎಂದ ತಕ್ಷಣ ಕಣ್ಣ ಮುಂದೆ ಬರುವುದು ಆರತಿ ಮತ್ತು ಪುಟ್ಟಣ್ಣ ಕಣಗಾಲ್. ಕನ್ನಡದ ಮಾಸ್ಟರ್ ಪೀಸ್ ಚಿತ್ರಗಳಲ್ಲೊಂದು. ಆ ಟೈಟಲ್ ಇಟ್ಟುಕೊಂಡು ಹೊಸ ಸಿನಿಮಾ ಮಾಡಲು ರೆಡಿಯಾಗಿದ್ದಾರೆ ದಯಾಳ್.

  ರಂಗನಾಯಕಿಯಾಗಿ ಆದಿತಿ ಪ್ರಭುದೇವ ಅವರನ್ನು ಸೆಲೆಕ್ಟ್ ಮಾಡಿದ್ದಾರೆ. ಬಜಾರ್ ಚಿತ್ರದಿಂದ ಗುರುತಿಸಿಕೊಂಡ ಆದಿತಿ ಅವರಿಗೆ ಚಿತ್ರದಲ್ಲಿ ದಿಟ್ಟ ಹೆಣ್ಣುಮಗಳ ಪಾತ್ರ. 

  ಬಜಾರ್ ನಂತರ ಸಿಂಗ, ತೋತಾಪುರಿ ಚಿತ್ರಗಳಲ್ಲಿ ನಟಿಸುತ್ತಿರುವ ಆದಿತಿ, ಈಗ ನಾಯಕಿ ಪ್ರಧಾನ ಚಿತ್ರದಲ್ಲಿ ಬ್ಯುಸಿ. 

 • ರಂಗನಾಯಕಿ.. ಟೀಸರ್ ಬಂತು.. ಕಾದಂಬರಿಯೂ ರೆಡಿ

  ranganayaki teaser out

  ದಯಾಳ್ ಪದ್ಮನಾಭನ್ ನಿರ್ದೇಶನದ 17ನೇ ಸಿನಿಮಾ ರಂಗನಾಯಕಿ. ಈ ಚಿತ್ರದ ನಾಯಕಿ ಆರತಿಯಲ್ಲ.. ಆದಿತಿ. ಈಗ ಚಿತ್ರದ ಟೀಸರ್, ಫಸ್ಟ್‍ಲುಕ್ ಹೊರಬಿದ್ದಿದೆ. ಆದಿತಿ ಪ್ರಭುದೇವ ಪ್ರಧಾನ ಪಾತ್ರದಲ್ಲಿರೋ ಚಿತ್ರದ ಟೀಸರ್ ಕುತೂಹಲ ಹುಟ್ಟಿಸುವಲ್ಲಿ ಗೆದ್ದಿದೆ. 

  52 ಸೆಕೆಂಡ್‍ಗಳ ಟೀಸರ್‍ನಲ್ಲಿ ಆದಿತಿ, ಶ್ರೀನಿ, ತ್ರಿವಿಕ್ರಮ್ ಇದ್ದಾರೆ. ಒಂದೇ ಒಂದು ಡೈಲಾಗ್ ಇಲ್ಲ. ಎಸ್.ವಿ.ನಾರಾಯಣ್ ನಿರ್ಮಾಣದ ಚಿತ್ರಕ್ಕೆ ಸುಮಾರು 7 ವರ್ಷಗಳಿಂದ ರೆಡಿಯಾಗಿದ್ದಾರಂತೆ ದಯಾಳ್. ಹೀಗಾಗಿಯೇ ಇದೇ ಕಥೆಯನ್ನಿಟ್ಟುಕೊಂಡು ಕಾದಂಬರಿ ಬರೆದು, ನಂತರ ಆ ಕಥೆಯನ್ನು ಸಿನಿಮಾ ಮಾಡುತ್ತಿದ್ದಾರೆ. ನಿರೀಕ್ಷೆ ಭರ್ಜರಿಯಾಗಿಯೇ ಇದೆ.

 • ರಾಘಣ್ಣ ಕಂ ಬ್ಯಾಕ್ - ಅಪ್ಪು ಹೇಳಿದ್ದೇನು..?

  puneeth rjkumar talks about trayambakam

  ಅದು ತ್ರಯಂಬಕಂ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ. ಅಪ್ಪಟ ಶಿವನಂತೆ ಢಮರುಗ ಬಾರಿಸಿ ಟ್ರೇಲರ್ ರಿಲೀಸ್ ಮಾಡಿದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಅಣ್ಣ ಮತ್ತೆ ಬಣ್ಣ ಹಚ್ಚಿರುವ ಬಗ್ಗೆ ಮಾತನಾಡುತ್ತಾ ಹೋದ ಪುನೀತ್ ``ನಂಗೆ ಶಿವಣ್ಣ ಮತ್ತು ರಾಘಣ್ಣ ಇಬ್ಬರೂ ಪಿಲ್ಲರ್‍ಗಳಿದ್ದಂತೆ. ರಾಘಣ್ಣ ಮತ್ತೆ ನಟಿಸುತ್ತಿದ್ದಾರೆ ಎನ್ನುವುದೇ ನನಗೆ ಖುಷಿ. ನಾಲ್ಕೈದು ವರ್ಷಗಳ ಹಿಂದೆ ರಾಘಣ್ಣ ಆರೋಗ್ಯ ಹದಗೆಟ್ಟಾಗ, ಅವರು ಮತ್ತೆ ಬಣ್ಣ ಹಚ್ಚುತ್ತಾರೆ ಎಂಬ ಕಲ್ಪನೆಯೂ ನಮಗಿರಲಿಲ್ಲ.

  ಅಣ್ಣನಿಗೆ ಎಷ್ಟು ಖುಷಿಯಾಗಿದ್ಯೋ ಅದರ 10 ಪಟ್ಟು ಖುಷಿ ನನಗಾಗಿದೆ'' ಎಂದಿದ್ದಾರೆ ಪುನೀತ್.

 • ರಾಘಣ್ಣನ ಸಿನಿಮಾದಲ್ಲಿ ಕೃಷ್ಣದೇವರಾಯನ ಕಥೆ..!

  dayal's trayambakam has a murder mystery

  ದಯಾಳ್ ನಿರ್ದೇಶನದ ತ್ರಯಂಬಕಂ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ನಟಿಸುತ್ತಿರುವುದು ಗೊತ್ತಿರುವ ವಿಷಯವೇ. ಆ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್‍ಗೆ ಮಗಳಾಗಿ ನಟಿಸುತ್ತಿರುವುದು ಅನುಪಮಾ ಗೌಡ. ರಾಘವೇಂದ್ರ ರಾಜ್‍ಕುಮಾರ್ ಜೊತೆ ಮಾತನಾಡಿದ ಮೇಲೆ, ಅವರೊಂದಿಗೆ ನಟಿಸುವುದಕ್ಕೆ ಇದ್ದ ಭಯ ನಿವಾರಣೆಯಾಯ್ತು. ಈಗ ಚಿತ್ರೀಕರಣಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ಅನುಪಮಾ ಗೌಡ. 

  ಚಿತ್ರದ ಇನ್ನೊಂದು ವಿಶೇಷವೆಂದರೆ, ಕೃಷ್ಣದೇವರಾಯನ ಕಥೆ. ಸಿನಿಮಾದಲ್ಲಿ ಸುಮಾರು 15 ನಿಮಿಷಗಳ ಕಾಲ ಕೃಷ್ಣದೇವರಾಯನ ಕಥೆ ಬರಲಿದೆ. ಕೊಲೆ, ಮಿಸ್ಟರಿ ಸಿನಿಮಾಕ್ಕೂ, ಕೃಷ್ಣದೇವರಾಯನ ಕಥೆಗೂ ಏನು ಸಂಬಂಧ ಎಂದು ಕೇಳಬೇಡಿ. ಅದು ಚಿತ್ರದ ಕಥೆಯೊಳಗೆ ಅದ್ಭುತವಾಗಿ ಬೆರೆತುಕೊಂಡಿದೆ ಎಂದು ಭರವಸೆ ನೀಡುತ್ತಾರೆ ದಯಾಳ್.

  ತ್ರಯಂಬಕಂ ಎಂದರೆ ಮೂರು ಕಣ್ಣುಳ್ಳವನು ಎಂದರ್ಥ. ಮೂರು ಕಣ್ಣುಳ್ಳವನು ಶಿವ. ಹೀಗೆ ವಿಭಿನ್ನ ಟೈಟಲ್, ವಿಭಿನ್ನ ಕಥಾ ಹಂದರದ ಚಿತ್ರಕ್ಕೆ ಸಂಭಾಷಣೆ ಬರೆದಿರುವುದು ನವೀನ್ ಕೃಷ್ಣ. ಐವರು ಟೆಕ್ಕಿಗಳು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

 • ವಿಜಯ್ ರಾಘವೇಂದ್ರ ಹೀಗೆ ಮಾಡಬಾರದಿತ್ತು

  dayal upset over vijay raghavendra's absence for toss promotions

  ವಿಜಯ್ ರಾಘವೇಂದ್ರ ನಟಿಸಿರುವ ಟಾಸ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆದರೆ, ಚಿತ್ರದ ಪ್ರಚಾರಕ್ಕೆ ನಾಯಕ ನಟ ವಿಜಯ್ ರಾಘವೇಂದ್ರ ಬರುತ್ತಿಲ್ಲ ಎನ್ನವುದು ನಿದೇಶಕ ದಯಾಳ್ ಬೇಸರ. ವಿಜಯ್ ರಾಘವೇಂದ್ರ ಫೋನ್‍ಗೂ ಸಿಗುತ್ತಿಲ್ಲ.

  ಭೇಟಿಗೂ ಸಿಗುತ್ತಿಲ್ಲ ಎಂದು ಬೇಸರಗೊಂಡಿದ್ದಾರೆ ದಯಾಳ್. ದಯಾಳ್ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ, ಇಷ್ಟು ಹೊತ್ತಿಗೆ ದೊಡ್ಡ ವಿವಾದವಾಗುತ್ತಿತ್ತೇನೋ.. ಆದರೆ, ದಯಾಳ್ ಹಾಗಲ್ಲ. ಸಮಸ್ಯೆ ಏನಿದೆಯೋ ಹೇಳಲಿ, ಮೌನವಾಗಿದ್ದರೆ ಗೊತ್ತಾಗೋದು ಹೇಗೆ ಅನ್ನೋದು ಅವರ ಪ್ರಶ್ನೆ.

  ಅದಕ್ಕೂ ವಿಜಯ್ ರಾಘವೇಂದ್ರ ಉತ್ತರಿಸಿಲ್ಲ. ವಿಜಯ್ ರಾಘವೇಂದ್ರ ಬೇಸರಕ್ಕೆ ಅವರೇ ಕಾರಣವನ್ನೂ ಊಹಿಸಿದ್ದಾರೆ. ಏಕೆಂದರೆ, ಟಾಸ್ ವರ್ಷಗಳ ಹಿಂದೆಯೇ ರಿಲೀಸ್ ಅಗಬೇಕಿತ್ತು. ಏನೇನೋ ಕಾರಣಗಳಿಂದ ಮುಂದೆ ಹೋಗ್ತಾ ಇತ್ತು. ಈಗ ಎಲ್ಲವನ್ನೂ ಬಗೆಹರಿಸಿಕೊಂಡು ಚಿತ್ರದ ಬಿಡುಗಡೆಗೆ ಸಿದ್ಧವಾದಾಗ ಸಹಕರಿಸಿದರೆ ಒಳ್ಳೆಯದು ಎಂಬುದಷ್ಟೇ ದಯಾಳ್ ಮನವಿ.

  ಆ್ಯಕ್ಟರ್ ಮೂಲಕ ಕ್ಲಾಸ್ ವರ್ಗದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ದಯಾಳ್ ನಿರ್ದೇಶನದ ಟಾಸ್ ಬಗ್ಗೆ ವಿಬಿನ್ನ ಕುತೂಹಲವಿದೆ.

  Related Articles :-

  Dayal's Toss To Release On July 21st

   

 • ವ್ಹಾವ್.. ವಾಟ್ ಎ ಫಿಲಂ.. ಇದು ಕಿಚ್ಚನ ಕರಾಳ ರಾತ್ರಿ ವಿಮರ್ಶೆ

  kiccha sudeep appreciates karala ratri

  ಕರಾಳ ರಾತ್ರಿ. ದಯಾಳ್ ಪದ್ಮನಾಭ್ ನಿರ್ದೇಶನದ ಸಿನಿಮಾ ಸೈಲೆಂಟ್ ಆಗಿ ಹಿಟ್ ಆದ ಚಿತ್ರ. ಜಯಕೀರ್ತಿ, ಅನುಪಮಾ ಗೌಡ, ರಂಗಾಯಣ ರಘು ನಟಿಸಿದ್ದ ಚಿತ್ರ, ಬಿಡುಗಡೆಯಾದ ಮೇಲೆ ಹಂತ ಹಂತವಾಗಿ ಪ್ರೇಕ್ಷಕರ ಹೃದಯ ಗೆಲ್ಲುತ್ತಾ ಹೋಯ್ತು. ಈಗ 25 ದಿನಗಳ ಯಶಸ್ವೀ ಪ್ರದರ್ಶನ ಮುಗಿಸಿ ಮುನ್ನುಗ್ಗುತ್ತಿದೆ.

  ಜೆಕೆ, ಕಿಚ್ಚ ಸುದೀಪ್‍ರ ಆತ್ಮೀಯ ಗೆಳೆಯ. ಗೆಳೆಯನ ಚಿತ್ರವೊಂದು ಸಕ್ಸಸ್ ಕಾಣುತ್ತಿರುವ ಖುಷಿಗೆ, ಚಿತ್ರವನ್ನು ನೋಡಿರುವ ಸುದೀಪ್, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 

  ಜೆಕೆ, ಸಿನಿಮಾವನ್ನು ನನಗೆ ತೋರಿಸಲು ಇಷ್ಟಪಟ್ಟಿದ್ದರು. ಸಮಯ ಹೊಂದಿಸಿಕೊಳ್ಳೋಕೆ ಆಗಲಿಲ್ಲ. ಚಿತ್ರವನ್ನು ನೋಡಿದಾಗ ಥ್ರಿಲ್ ಆಗಿ ಹೋದೆ. ಅತ್ಯಂತ ಕಡಿಮೆ ಪಾತ್ರಗಳು, ಪ್ರತಿಕ್ಷಣವೂ ನಮ್ಮನ್ನು ಚಿತ್ರದೊಳಗೆ ಕೂರಿಸಿಕೊಳ್ಳುವ ಚಿತ್ರಕಥೆ, ಸತ್ಯ ಗೊತ್ತಾದಾಗ ನಮ್ಮನ್ನು ಬೆಚ್ಚಿಬೀಳಿಸುತ್ತೆ. ಸೀಟ್‍ನ ತುದಿಗೆ ಕೂರುವಂತೆ ಮಾಡುತ್ತೆ.ಇಂಥಾದ್ದೊಂದು ಚಿತ್ರದಲ್ಲಿ ನಟಿಸಿದ ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಎಲ್ಲರಿಗೂ ಹ್ಯಾಟ್ಸಾಫ್.

  ರಂಗಾಯಣ ರಘು, ಕನ್ನಡ ಚಿತ್ರರಂಗಕ್ಕೆ ದೊಡ್ಡದೊಂದು ಉಡುಗೊರೆ. ಅದು ಈ ಚಿತ್ರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ವೀಣಾ ಸುಂದರ್ ಅಭಿನಯವಂತೂ ವಂಡರ್‍ಫುಲ್. ಅನುಪಮಾ ಅವರದ್ದಂತೂ 100 ಚಿತ್ರಗಳಲ್ಲಿ ನಟಿಸಿರುವ ಕಲಾವಿದರಂತೆ ಪ್ರಬುದ್ಧರಾಗಿ ನಟಿಸಿದ್ದಾರೆ. ಮೊದಲ ಚಿತ್ರದಲ್ಲೇ ಕಠಿಣ ಸವಾಲು ಸ್ವೀಕರಿಸಿ ಗೆದ್ದಿದ್ದಾರೆ. ಆಕೆಗೆ ಅತ್ಯುತ್ತಮ ಭವಿಷ್ಯವಿದೆ. ಇನ್ನು ಜೆಕೆ, ಈ ಚಿತ್ರದಲ್ಲಿ ನನಗೂ ಸರ್‍ಪ್ರೈಸ್ ಕೊಟ್ಟಿದ್ದಾರೆ. ಅವರ ಇನ್‍ವಾಲ್ವ್‍ಮೆಂಟ್, ಪಾತ್ರಕ್ಕೆ ತಮ್ಮನ್ನು ಒಗ್ಗಿಸಿಕೊಂಡಿರುವ ರೀತಿ ಅಮೋಘ.

  ನಿರ್ದೇಶಕ ದಯಾಳ್.. ಅವರಂತೂ ಎಕ್ಸಲೆಂಟ್. ಬೂದುಗನ್ನಡಿ ಹಾಕಿಕೊಂಡು ತಪ್ಪು ಹುಡುಕೋಣ ಎಂದು ಕೊಂಡೆ. ಝೂಮ್ ಲೆನ್ಸ್ ಫೇಲ್ ಆಯ್ತು. ಕಂಗ್ರಾಟ್ಸ್ ದಯಾಳ್. ನಾರಾಯಣ್ ಅವರ ಹಿನ್ನೆಲೆ ಸಂಗೀತವಂತೂ ಅದ್ಭುತ.

  ಯಾವುದೇ ಸಿನಿಮಾ ನೋಡಿದಾಗ ಅದು ಕಂಪ್ಲೀಟ್ ಎನಿಸುವುದಿಲ್ಲ. ಯಾವುದಾದರೊಂದು ಸಣ್ಣ ತಪ್ಪಾದರೂ ಕಾಣಿಸುತ್ತೆ. ಆದರೆ, ಈ ಚಿತ್ರವನ್ನು ನೋಡಿ. ವ್ಹಾವ್.. ವ್ಹಾಟ್ ಎ ಫಿಲ್ಮ್ ಅಂತೀರಿ.

  ಇದು ಕಿಚ್ಚ ಸುದೀಪ್ ಕರಾಳ ರಾತ್ರಿಗೆ ಬರೆದಿರುವ ವಿಮರ್ಶೆ. ಸಿನಿಮಾ ನಿಜಕ್ಕೂ ಥ್ರಿಲ್ಲಿಂಗ್ ಆಗಿದೆ ಅನ್ನೋದು ಸುದೀಪ್ ಮಾತು. 

 • ಶರಣ್ ಕಾಮಿಡಿ ಟೈಮಿಂಗ್‍ಗೆ ರಿಯಾಕ್ಷನ್ ಕಷ್ಟ ಕಷ್ಟ..!

  bhavana rao shares experience

  ಸತ್ಯ ಹರಿಶ್ಚಂದ್ರ. ಶರಣ್ ಅಭಿನಯದ ಈ ಸಿನಿಮಾ ದೀಪಾವಳಿಗೆ ನಗೆ ಪಟಾಕಿ ಹಚ್ಚೋಕೆ ಬರ್ತಾ ಇದೆ. ಶರಣ್ ಚಿತ್ರ ಎಂದ ಮೇಲೆ ಕಾಮಿಡಿ ಇರಲಬೇಕು. ಈ ಚಿತ್ರದಲ್ಲಿ ಶರಣ್ ಪಾತ್ರದ ಹೆಸರು ಸತ್ಯ ಹರಿಶ್ಚಂದ್ರ. ಆದರೆ, ಹೇಳೋದೆಲ್ಲ ಸುಳ್ಳು. ಶರಣ್‍ಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಅದರಲ್ಲಿ ಒಬ್ಬರು ಭಾವನಾ ರಾವ್.

  ಚಿತ್ರದ ಶೂಟಿಂಗ್ ಅನುಭವ ಹೇಳಿಕೊಂಡಿರೋ ಭಾವನಾ ರಾವ್, ಶರಣ್ ಕಾಮಿಡಿ ಟೈಮಿಂಗ್ ಅದ್ಭುತ ಎಂದಿದ್ದಾರೆ. ಶರಣ್ ಅವರ ಟೈಮಿಂಗ್‍ಗೆ ಸರಿಯಾಗಿ ನಾವು ರಿಯಾಕ್ಷನ್ ಕೊಡಬೇಕು. ಅದು ಬಹಳ ಕಷ್ಟವಾಗಿತ್ತು. ಶೂಟಿಂಗ್‍ನಲ್ಲಿ ಅದನ್ನು ಕಲಿತುಕೊಂಡೆ ಎಂದು ಅನುಭವ ಹಂಚಿಕೊಂಡಿದ್ದಾರೆ ಭಾವನಾ ರಾವ್.

  ಅಳಿಸೋದು ಸುಲಭ..ನಗಿಸೋದು ಕಷ್ಟ ಅನ್ನೋದು ಭಾವನಾ ರಾವ್ ಅನುಭವದ ಮಾತು. ಆ ಕಷ್ಟವನ್ನು ದಯಾಳ್ ಪದ್ಮನಾಭನ್ ತಾಳ್ಮೆಯಿಂದ ಹೇಳಿಕೊಟ್ಟು ಸುಲಭವಾಗಿಸಿದರು ಎಂದಿದ್ದಾರೆ ಭಾವನಾ ರಾವ್.

 • ಶೂಟಿಂಗ್‍ಗಿಂತ ಮ್ಯೂಸಿಕ್ಕಿಗೇ ಹೆಚ್ಚು ಸಮಯ

  dayal is dedicationg more time to music

  ಆ ಕರಾಳ ರಾತ್ರಿ.. ದಯಾಳ್ ಪದ್ಮನಾಭ್ ನಿರ್ದೇಶನದ ಚಿತ್ರ. ಶೂಟಿಂಗ್‍ಗೆ ಹೋಗುವಾಗಲೇ ಮನಸ್ಸಿನಲ್ಲಿ ಇಡೀ ಸಿನಿಮಾವನ್ನು ಎಡಿಟಿಂಗ್ ಮಾಡಿಕೊಂಡಂತೆ ಪ್ಲಾನ್ ಮಾಡಿಕೊಳ್ಳುವ ದಯಾಳ್, ಇಡೀ ಚಿತ್ರದ ಶೂಟಿಂಗ್‍ನ್ನು 13 ದಿನಗಳಲ್ಲೇ ಮುಗಿಸಿಬಿಟ್ಟಿದ್ದಾರೆ. ಆದರೆ, ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡೋಕೆ ಶೂಟಿಂಗ್‍ಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ಏಕೆಂದರೆ, ಇದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ನಡು ನಡುವೆ ಭಾವನಾತ್ಮಕ ದೃಶ್ಯಗಳೂ ಇವೆಯಂತೆ.

  ಜೆಕೆ ಮತ್ತು ಅನುಪಮಾ ಗೌಡ ಪ್ರಧಾನ ಪಾತ್ರದಲ್ಲಿರುವ ಚಿತ್ರದಲ್ಲಿ ರಂಗಾಯಣ ರಘು ಹಾಗೂ ವೀಣಾ ಸುಂದರ್ ಕೂಡಾ ನಟಿಸಿದ್ದಾರೆ. 4 ಪಾತ್ರಗಳ ಸುತ್ತಲೇ ಸುತ್ತುವ ಸಿನಿಮಾ, ನಾಟಕವೊಂದರನ್ನು ಆಧರಿಸಿ ಸಿದ್ಧವಾಗಿರೋದು ವಿಶೇಷ. 

 • ಸದಾ ಸುಳ್ಳು ಹೇಳುವವನೇ ಸತ್ಯ ಹರಿಶ್ಚಂದ್ರ..!

  satya harishchandra is irony to its name

  ಸತ್ಯ ಹರಿಶ್ಚಂದ್ರ ಚಿತ್ರದ ಕಥೆ ಏನು..? ಅಣ್ಣಾವ್ರ ಆ ಚಿತ್ರಕ್ಕೂ, ಶರಣ್‍ರ ಈ ಚಿತ್ರಕ್ಕೂ ಎಲ್ಲಾದರೂ ಹೋಲಿಕೆಯಿದೆಯೇ..? ಇಂಥ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಚಿತ್ರದಲ್ಲಿ ಶರಣ್ ಅವರದ್ದು ಎನ್‍ಆರ್‍ಐ ಪಾತ್ರ. ಆತ ಬಾಯ್ಬಿಟ್ಟರೆ ಹೇಳೋದು ಸುಳ್ಳು. ಆ ಸುಳ್ಳೇ ಒಂದ್ಸಲ ಆತನ ಜೀವಕ್ಕೇ ಅಪಾಯ ತಂದುಬಿಡುತ್ತೆ. ಅದರಿಂದ ತಪ್ಪಿಸಿಕೊಳ್ಳಲು ಆತ ಏನು ಮಾಡ್ತಾನೆ..? ಸುಳ್ಳು ಹೇಳೋದ್ರಿಂದ ಉದ್ಭವವಾಗುವ ಸಮಸ್ಯೆಗಳು ಎಂಥವು..? ಇವುಗಳನ್ನೆಲ್ಲ ಪ್ರೇಮಕಥೆಯ ಮಸಾಲೆ ಜೊತೆ ಅದ್ಬುತವಾಗಿ ಹೇಳಿದ್ದಾರಂತೆ ದಯಾಳ್ ಪದ್ಮನಾಭನ್.

  ಇದು ಸಿಂಗಾರ್ ವರ್ಸಸ್ ಕೌರ್ ಎಂಬ ಪಂಜಾಬಿ ಚಿತ್ರದ ರೀಮೇಕ್. ಚಿತ್ರದಲ್ಲಿ ಸಂಚಿತಾ ಪಡುಕೋಣೆ ಹಾಗೂ ಭಾವನಾ ರಾವ್ ನಾಯಕಿಯರು. ಭಾವನಾ ಅವರದ್ದು ಮುಗ್ಗ ಹುಡುಗಿಯ ಪಾತ್ರ. ಫೇಸ್‍ಬುಕ್‍ನಲ್ಲೇ ಲವ್ವಾಗಿ ಅವನನ್ನು ಹುಡುಕಿಕೊಂಡು ಯೂರೋಪ್‍ಗೆ ಹೋಗುವ ಪಾತ್ರ. ಚಿತ್ರದ ಕಥಾ ಹಂದರವಂತೂ ಕುತೂಹಲ ಹುಟ್ಟಿಸುತ್ತಿದೆ.

 • ಸಿನಿಮಾ ಇನ್ ಟಾಕೀಸ್.. ಡೈರೆಕ್ಟರ್ ಇನ್ ಬಿಗ್‍ಬಾಸ್

  cinema in theater, dayal in big boss

  ಸತ್ಯ ಹರಿಶ್ಚಂದ್ರ. ಈತ ಮೊದಲೇ ಸುಳ್ಳು ಹೇಳೋ ಸತ್ಯ ಹರಿಶ್ಚಂದ್ರ. ಶರಣ್, ಸಂಚಿತಾ ಪಡುಕೋಣೆ, ಭಾವನಾ ರಾವ್ ಅಭಿನಯದ ಸತ್ಯ ಹರಿಶ್ಚಂದ್ರ ಇವತ್ತೇ ಥಿಯೇಟರಿಗೆ ಕಾಲಿಟ್ಟಿದೆ. ಆದರೆ, ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭ್ ಇಲ್ಲಿಲ್ಲ. 

  ದಯಾಳ್, ಬಿಗ್‍ಬಾಸ್ ಮನೆ ಸೇರಿದ್ದಾರೆ. ನಿರ್ದೇಶಕರೇ ಇಲ್ಲದೆ ಚಿತ್ರದ ಪ್ರಚಾರ ಮಾಡುತ್ತಿದೆ ಚಿತ್ರತಂಡ. ಸಿನಿಮಾವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟು, ಚಿತ್ರವನ್ನು ಥಿಯೇಟರಿಗೆ ಸೇರಿಸುವವರೆಗೂ ಕೆಲಸ ಮಾಡಿದ್ದ ದಯಾಳ್, ಸಿನಿಮಾ ರಿಲೀಸ್ ಆಗುವ ಕೆಲವೇ ದಿನಗಳ ಮುನ್ನ ಬಿಗ್‍ಬಾಸ್ ಮನೆ ಸೇರಿದ್ದಾರೆ. 

  ಹಾಗೆಂದು ಚಿತ್ರಕ್ಕೇನೂ ಸಮಸ್ಯೆಯಾಗಿಲ್ಲ. ಚಿತ್ರ ಒಂದು ಹವಾ ಎಬ್ಬಿಸಿದೆ. ಥಿಯೇಟರಿಗೆ ನುಗ್ಗುತ್ತಿದೆ. ಪ್ರೇಕ್ಷಕರು ಥಯ್ಯಕುದಾ.. ಥಕತಯ್ಯೇ ಕುದಾ ಅನ್ನಬೇಕಷ್ಟೆ..

 • ಹೆಂಡ್ತಿ ಕೊಲೆ ರಹಸ್ಯಕ್ಕೆ ಉತ್ತರ.. ಪುಟ 109ರಲ್ಲಿ 

  puta 109 is all about murder mystery

  ಪುಟ 109. ದಯಾಳ್ ಪದ್ಮನಾಭನ್ ಮತ್ತು ನವೀನ್ ಕೃಷ್ಣ ಕಾಂಬಿನೇಷನ್ನಿನ ಸಿನಿಮಾ. ಆ್ಯಕ್ಟರ್, ಆ ಕರಾಳ ರಾತ್ರಿ ನಂತರ ಇಬ್ಬರೂ ಒಟ್ಟಿಗೇ ಕೆಲಸ ಮಾಡಿರುವ ಸಿನಿಮಾ. ಇತ್ತೀಚೆಗೆ ದಯಾಳ್ ನಿರ್ದೇಶನದ ಸಿನಿಮಾ ಎಂದರೆ, ಅಲ್ಲಿ ನವೀನ್ ಕೃಷ್ಣ ಚಿತ್ರಕಥೆ-ಸಂಭಾಷಣೆ ಖಾಯಂ ಎಂಬಂತಾಗಿ ಹೋಗಿದೆ. ಇದರ ಜೊತೆ ದಯಾಳ್ ಚಿತ್ರದಲ್ಲಿ ನವೀನ್ ಕೃಷ್ಣ, ಖಾಯಮ್ಮಾಗಿ ಒಂದು ಪಾತ್ರವೂ ಅಗಿರುತ್ತಾರೆ.

  ಪುಟ 109ರಲ್ಲಿ ನವೀನ್ ಕೃಷ್ಣ ಅವರದ್ದು ಕಾದಂಬರಿಕಾರನ ಪಾತ್ರ. ಅದರಲ್ಲೂ ಅವರು ಕ್ರೈಂ ಕಾದಂಬರಿಕಾರ. ಅವರ ಪತ್ನಿ ವೈಷ್ಣವಿ ಮೆನನ್. ಅವರ ಕೊಲೆಯಿಂದ ಓಪನ್ ಆಗುವ ಸಿನಿಮಾ, ಕ್ಷಣ ಕ್ಷಣವೂ ಎದೆಬಡಿತ ಹೆಚ್ಚಿಸುತ್ತಾ, ಕುತೂಹಲ ಹುಟ್ಟಿಸುತ್ತಾ ಹೋಗುತ್ತೆ. ಮನಸ್ಸಿನಲ್ಲಿ ಸಾವಿರಾರು ಪ್ರಶ್ನೆಗಳು ಮೂಡುತ್ವೆ. ಅವುಗಳಿಗೆಲ್ಲ ಉತ್ತರ ಸಿಗೋದು ಪುಟ 109ರಲ್ಲಿ.

  ಪುಟ 109ರಲ್ಲಿ ಸಿಗುವ ಆ ಕ್ಲೂ ಏನು ಅನ್ನೋದನ್ನ ನೀವು ತೆರೆಯ ಮೇಲೇ ನೋಡಿ ಥ್ರಿಲ್ಲಾಗಬೇಕು. ಈ ಹಿಂದಿನ ಎರಡೂ ಚಿತ್ರಗಳ ನಿರೂಪಣೆಯಲ್ಲಿ ಸೂಪರ್ ಸಕ್ಸಸ್ ಕಂಡಿದ್ದ ದಯಾಳ್, ಮತ್ತೊಮ್ಮೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

Adi Lakshmi Purana Movie Gallery

Rightbanner02_butterfly_inside

Yaana Movie Gallery