ಅವಕಾಶಕ್ಕಾಗಿ ಹಾಸಿಗೆ ಹಂಚಿಕೊಳ್ಳೋದು. ಕ್ಲೋಸ್ ಆಗಿದ್ದವರಿಗೆ ಮಾತ್ರ ಚಾನ್ಸ್. ಪಾರ್ಟಿ, ಡಿನ್ನರ್‍ಗಳಲ್ಲಿ ಭಾಗವಹಿಸಿದರೆ ಮಾತ್ರ ಆಫರ್. ತಮಗಷ್ಟೇ ಅಲ್ಲ, ತಮಗೆ ಬೇಕದವರಿಗೂ ಸುಖ ಕೊಡಬೇಕು.. ಕಾಸ್ಟಿಂಗ್ ಕೌಚ್.. ಇಂತಹ ಎಲ್ಲ ಪ್ರಕರಣಗಳಲ್ಲೂ ಕೇಳಿಬರೋದು ಮೀಟೂ ಅನ್ನೋ ಹೆಸರು. ಕನ್ನಡದಲ್ಲಿ ಹಲವರು ಮೀಟು ಆರೋಪ ಮಾಡಿದ್ದಾರೆ.
ಇವರಲ್ಲಿ ಶೃತಿ ಹರಿಹರನ್ ಪ್ರಮುಖರು. ಆರೋಪ ಹೊತ್ತಿದ್ದ ಅರ್ಜುನ್ ಸರ್ಜಾ ಕೋರ್ಟಿನಲ್ಲಿ ಗೆದ್ದು ಬಂದಿದ್ದಾರೆ. ಇನ್ನೂ ಹಲವರು ಮೀಟೂ ಆರೋಪ ಮಾಡಿದ್ದಾರಾದರೂ.. ಯಾರು ಮಾಡಿದ್ದರು ಅನ್ನೋದನ್ನು ಮಾತ್ರ ಹೇಳಿಲ್ಲ. ಆ ಸಾಲಿಗೆ ಈಗ ಆಶಿತಾ ಸೇರಿದ್ದಾರೆ.
ನನಗೂ ಮೀಟೂ ಅನುಭವವಾಗಿತ್ತು. ಆರಂಭದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಯಾವಾಗ ಸಿನಿಮಾ ಇಂಡಸ್ಟ್ರಿಗೆ ರಿಯಲ್ ಎಸ್ಟೇಟ್ ಕುಳಗಳು ಬಂದರೋ.. ಆಗ ಪರಿಸ್ಥಿತಿಯೇ ಬದಲಾಗಿ ಹೋಯಿತು. ಅನಾರೋಗ್ಯಕರ ಡಿಮ್ಯಾಂಡ್ ಒಪ್ಪಿಕೊಳ್ಳಲಿಲ್ಲ. ಚಿತ್ರರಂಗವನ್ನೇ ಬಿಟ್ಟುಬಿಟ್ಟೆ ಎಂದಿದ್ದಾರೆ ಆಶಿತಾ. ಶೂಟಿಂಗ್ ಸೆಟ್‍ನಲ್ಲಿ ಅವರೊಂದಿಗೆ ಸಲುಗೆಯಿದ ಇರಬೇಕಿತ್ತು. ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು. ಅದೆಲ್ಲ ಮಾಡಲು ಸಾಧ್ಯವಾಗದೆ ಇಂಡಸ್ಟ್ರಿ ಬಿಟ್ಟೆ ಎನ್ನುವುದು ಆಶಿತಾ ವಾದ. ಅಲ್ಲದೆ ನನ್ನ ವಿದ್ಯಾಭ್ಯಾಸ ಮುಂದುವರೆಸುವ ಉದ್ದೇಶವೂ ಸೇರಿ ಚಿತ್ರರಂಗ ಬಿಟ್ಟೆ ಎಂದಿದ್ದಾರೆ ಆಶಿತಾ.
ಆಶಿತಾ 1998ರಲ್ಲಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟವರು. ಬಾ ಬಾರೋ ರಸಿಕ, ರೋಡ್ ರೋಮಿಯೋ, ಆಕಾಶ್, ತವರಿನ ಸಿರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಆಶಿತಾ ರೋಡ್ ರೋಮಿಯೋ ನಂತರ ಇಂಡಸ್ಟ್ರಿಗೆ ಗುಡ್ ಬೈ ಹೇಳಿದವರು.
ಆದರೆ ಯಾರಿಂದ ಕಿರುಕುಳ ಆಯಿತು.. ವ್ಯಕ್ತಿ ಯಾರು ಎಂಬ ಮಾಹಿತಿಯನ್ನೇನೂ ಆಶಿತಾ ನೀಡಿಲ್ಲ. ಬೇರೆ ಚಿತ್ರರಂಗದಿಂದ ಬಂದು ಕಾಸ್ಟಿಂಗ್ ಕೌಚ್ ಆಫರ್ ನೀಡಿದವರೂ ಇದ್ದರು ಎಂದಿದ್ದಾರೆ.