ಅಗ್ನಿಸಾಕ್ಷಿ, ಸದ್ಯಕ್ಕೆ ಕನ್ನಡ ಕಿರುತೆರೆಯ ಯಶಸ್ವಿ ಧಾರಾವಾಹಿಗಳಲ್ಲಿ ಒಂದು. ಧಾರಾವಾಹಿಯ ನಾಯಕ ವಿಜಯ್ ಸೂರ್ಯ, ನಾಯಕಿ ವೈಷ್ಣವಿ. ಇವರಿಬ್ಬರ ಮಧ್ಯೆ ಏನೋ ಒಂದು ಕೆಮಿಸ್ಟ್ರಿ ಇದೆ. ಅದು ಕೆಲಸ ಮಾಡ್ತಾ ಇದೆ. ಕ್ಯಾಮೆರಾ ಮುಂದಷ್ಟೇ ಅಲ್ಲ, ಕ್ಯಾಮೆರಾ ಹಿಂದೆಯೂ ಇವರಿಬ್ಬರು ಪ್ರೇಮಿಗಳು ಅನ್ನೋ ಸುದ್ದಿ ಹರಿದಾಡುತ್ತಿದೆ.
ಮೊನ್ನೆ ಮೊನ್ನೆಯಷ್ಟೇ ಚಂದನ್ ಶೆಟ್ಟಿ ಜೊತೆಗಿನ ಎಂಗೇಜ್‍ಮೆಂಟ್ ಗಾಸಿಪ್‍ಗೆ ನೋ ಎಂದಿದ್ದ ವೈಷ್ಣವಿ, ವಿಜಯ್ ಸೂರ್ಯ ಕುರಿತ ಗಾಸಿಪ್‍ಗಳಿಗೆ ಹಲವು ಬಾರಿ ನೋ ಎಂದಿದ್ದಾರೆ. ಆದರೆ, ವಿಜಯ್ ಸೂರ್ಯ ಹೇಳಿರುವುದೇ ವಿಭಿನ್ನ ಅಷ್ಟೇ ಅಲ್ಲ, ಗೊಂದಲಕಾರಿಯೂ ಹೌದು.
ವೈಷ್ಣವಿ ನನಗೆ ಒಳ್ಳೆಯ ಬೆಸ್ಟ್ ಫ್ರೆಂಡ್. ಸದ್ಯಕ್ಕಂತೂ ನಾವಿಬ್ಬರೂ ಕೋ-ಸ್ಟಾರ್‍ಗಳು. ತೆರೆಯ ಮೇಲೆ ಗಂಡಹೆಂಡತಿಯಾಗಿ ನಟಿಸುವಾಗ, ಕಂಫರ್ಟ್ ಆಗಿಯೇ ಇರುತ್ತೇವೆ. ಆದರೆ, ಅದು ರಿಯಲ್ ಬದುಕಿನ ತನಕ ಬಂದಿಲ್ಲ. ಅವರಿಗೆ ಬಹಳ ತಾಳ್ಮೆಯಿದೆ. ಎಷ್ಟೋ ಬಾರಿ ಅವರು ನನಗೆ ಸ್ಫೂರ್ತಿಯಾಗಿದ್ದಾರೆ ಎಂದಿದ್ದಾರೆ ವಿಜಯ್ ಸೂರ್ಯ.
ಇನ್ನು ಲವ್, ಮದುವೆ ಬಗ್ಗೆ ಕೇಳಿದಾಗ ನೀಡಿರುವ ಉತ್ತರ ಸ್ವಲ್ಪ ಹುಬ್ಬೇರಿಸುವಂತೆ ಮಾಡಿರೋದು ಸತ್ಯ. ನಮ್ಮಿಬ್ಬರ ಮಧ್ಯೆ ಭಿನ್ನತೆಗಳಿವೆ. ಸದ್ಯಕ್ಕೆ ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಸದ್ಯಕ್ಕೆ ನಾವಿಬ್ಬರೂ ಆ ಬಗ್ಗೆ ಯೋಚಿಸಿಲ್ಲ. ಮುಂದೇನೋ ಗೊತ್ತಿಲ್ಲ. ರೂಮರ್ ನಿಜವಾದರೂ ಆಗಬಹುದು. ಸುಳ್ಳಾದರೂ ಆಗಬಹುದು.
ವಿಜಯ್ ಸೂರ್ಯ ಅವರ ಈ ಮಾತು, ರೂಮರ್‍ಗಳನ್ನು ಇನ್ನಷ್ಟು ಗಟ್ಟಿ ಮಾಡಿದೆಯೇ ಹೊರತು, ದೂರ ಮಾಡಿಲ್ಲ. ಇದು ರೂಮರ್ ಅಷ್ಟೆ ಎಂದು ಇಬ್ಬರೂ ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಬೇಕೇನೋ..