` akshay kumar - chitraloka.com | Kannada Movie News, Reviews | Image

akshay kumar

 • Puneeth meets Akshay Kumar! - Exclusive

  akshay kumar, puneeth rajkumar image

  Puneeth Rajkumar and Bollywood star Akshay Kumar met today and sources said it was just a courtesy call as the latter was visiting Bengaluru. Sandalwood director Nanda Kishore of Victory and Ranna fame has also met Akshay Kumar, in Bengaluru today. Also spotted were top designer Ramesh Dembla.

  Nanda Kishore met Akshay Kumar on a professional basis it is learnt. Nanda is said to be planning a film to be made in Kannada and Hindi. Akshay has acted in two Kannada films early in his career with Dr Vishnuvardhan. Is he returning to Sandalwood is the million dollar question that is kept a secret for now.

 • ಅಕ್ಷಯ್ ಕುಮಾರ್ ಗೆ ಗೂಗ್ಲಿ ಹೀರೋಯಿನ್

  kriti kharbanda in akhsay kumar's housefull 3

  ಅಕ್ಷಯ್ ಕುಮಾರ್, ಸದ್ಯಕ್ಕೆ ಬಾಲಿವುಡ್‍ನ ಸೂಪರ್ ಸ್ಟಾರ್. ಸತತ ಹಿಟ್‍ಗಳನ್ನು ನೀಡುತ್ತಲೇ ಇರುವ ಅಕ್ಷಯ್, ಕಾಮಿಡಿ, ಆ್ಯಕ್ಷನ್, ಸಾಮಾಜಿಕ ಸಂದೇಶ ಸಾರುವ ಗಂಭೀರ ಚಿತ್ರಗಳು.. ಹೀಗೆ ಪ್ರತಿ ಚಿತ್ರದಲ್ಲೂ ವಿಭಿನ್ನತೆ ಕಾಯ್ದುಕೊಂಡು ಬರುತ್ತಿರುವ ನಟ. ಅವರು ಹೌಸ್‍ಫುಲ್ ಸಿರೀಸ್‍ನ ಮತ್ತೊಂದು ಕಾಮಿಡಿಗೆ ರೆಡಿಯಾಗುತ್ತಿದ್ದಾರೆ.

  ಅಷ್ಟೇ ಆಗಿದ್ದರೆ ಅದು ಬಾಲಿವುಡ್ ಸುದ್ದಿಯಾಗುತ್ತಿತ್ತು. ಆದರೆ, ಹೌಸ್‍ಫುಲ್ 4ಗೆ ನಾಯಕಿಯಾಗಿ ಆಯ್ಕೆಯಾಗಿರೋದು ಕೃತಿ ಕರಬಂದ. ಕೃತಿ, ಮೂಲತಃ ಕನ್ನಡತಿಯಲ್ಲದೇ ಹೋದರೂ, ಗುರುತಿಸಿಕೊಂಡಿದ್ದು ಕನ್ನಡ ಚಿತ್ರಗಳ ಮೂಲಕ. ಚಿರಂಜೀವಿ ಸರ್ಜಾ ಅವರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಕೃತಿ ಕರಬಂದ, ದೊಡ್ಡ ಹೆಸರು ಮಾಡಿದ್ದು ಗೂಗ್ಲಿ ಚಿತ್ರದಲ್ಲಿ. ಕನ್ನಡದಲ್ಲಿ ಯಶ್, ಶಿವರಾಜ್‍ಕುಮಾರ್, ಜೋಗಿ ಪ್ರೇಮ್, ನೆನಪಿರಲಿ ಪ್ರೇಮ್, ಚಿರಂಜೀವಿ ಸರ್ಜಾ ಮೊದಲಾದವರ ಜೊತೆ ನಟಿಸಿರುವ ಕೃತಿ ಕರಬಂದ, ತಮಿಳು, ತೆಲುಗಿನಲ್ಲೂ ಹೆಸರು ಮಾಡಿರುವ ನಟಿ.

  ಹಿಂದಿಯಲ್ಲಿ ಈಗಾಗಲೇ ಇಮ್ರಾಜ್ ಹಶ್ಮಿ ಜೊತೆ ನಟಿಸಿರುವ ಕೃತಿ, ಈಗ ಅಕ್ಷಯ್ ಚಿತ್ರದಲ್ಲಿ ನಟಿಸೋಕೆ ಆಯ್ಕೆಯಾಗಿದ್ದಾರೆ. ಆ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ರಿತೇಶ್ ದೇಶ್‍ಮುಖ್, ಬಾಬಿ ಡಿಯೋಕ್ ಕೂಡಾ ಇದ್ದಾರೆ. ಇವರೆಲ್ಲರಲ್ಲಿ ಕೃತಿ ಯಾರಿಗೆ ನಾಯಕಿ..? ಅದು ಸಸ್ಪೆನ್ಸ್.

 • ಕ್ಷಮೆ ಕೇಳಿದ್ದೇಕೆ ಅಕ್ಷಯ್ ಕುಮಾರ್?

  ಕ್ಷಮೆ ಕೇಳಿದ್ದೇಕೆ ಅಕ್ಷಯ್ ಕುಮಾರ್?

  ಅಕ್ಷಯ್ ಕುಮಾರ್. ಬಾಲಿವುಡ್‍ನ ಸ್ಟಾರ್ ನಟ. ವರ್ಷಕ್ಕೆ ಮೂರರಿಂದ ನಾಲ್ಕು ಚಿತ್ರಗಳನ್ನು ಕೊಡುವ ಹಾಗೂ ಆ ನಾಲ್ಕೂ ಚಿತ್ರಗಳನ್ನು ಗೆಲ್ಲುವಂತೆ ನೋಡಿಕೊಳ್ಳೋ ಏಕೈಕ ನಟ. ಅವುಗಳಲ್ಲಿ ವಿಭಿನ್ನತೆಯನ್ನೂ ಕಾಪಾಡಿಕೊಳ್ಳೋ ಅಕ್ಷಯ್ ಕುಮಾರ್ ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು.

  ಸೈನ್ಯಾಧಿಕಾರಿಗಳ ಕಥೆ (ರುಸ್ತುಂ), ದೇಶವನ್ನು ದುರಂತದಿಂದ ಪಾರು ಮಾಡಿದವರ ಕಥೆ (ಏರ್‍ಲಿಫ್ಟ್, ), ಗೂಢಚಾರರ ಸ್ಟೋರಿಗಳು  (ಸ್ಪೆಷಲ್ 26, ಬೇಬಿ, ಬೆಲ್‍ಬಾಟಂ), ಸಾಮಾಜಿಕ ಜಾಗೃತಿ ಮೂಡಿಸುವ, ಸ್ಫೂರ್ತಿಯುಕ್ತ ಕಥೆ (ಟಾಯ್ಲೆಟ್ ಏಕ್ ಪ್ರೇಮ್‍ಕಥಾ, ಪ್ಯಾಡ್‍ಮ್ಯಾನ್, ಗೋಲ್ಡ್, ಕೇಸರಿ, ಮಿಷನ್ ಮಂಗಳ್).. ಹೀಗೆ ಪಟ್ಟಿ ದೊಡ್ಡದಾಗಿಯೇ ಇದೆ. ಇದರ ನಡುವೆ ಕಮರ್ಷಿಯಲ್ ಚಿತ್ರಗಳಲ್ಲೂ ಗೆಲ್ಲುತ್ತಿದ್ದ ಅಕ್ಷಯ್ ಕುಮಾರ್ ಇತ್ತೀಚೆಗೆ ವಿವಾದಕ್ಕೆ ಗುರಿಯಾಗಿದ್ದರು.

  ವಿಮಲ್ ಗುಟ್ಕಾ ಕಂಪೆನಿಯ ಜಾಹೀರಾತಿನಲ್ಲಿ ನಟಿಸಿದ್ದ ಅಕ್ಷಯ್ ಅವರನ್ನು ಅಭಿಮಾನಿಗಳೇ ತರಾಟೆಗೆ ತೆಗೆದುಕೊಂಡಿದ್ದರು. ಇದರ ಜೊತೆಗೆ 2018ರಲ್ಲಿ ಸ್ವಚ್ಛ ಭಾರತಕ್ಕಾಗಿ ಗುಟ್ಕಾ ಜಾಹೀರಾತಿನಲ್ಲಿ ನಟಿಸಲ್ಲ ಎಂದಿದ್ದ ಅಕ್ಷಯ್ ಅವರ ಹಳೆ ವಿಡಿಯೋ ಕೂಡಾ ವೈರಲ್ ಆಗಿತ್ತು. ಅಭಿಮಾನಿಗಳ ಆಕ್ರೋಶಕ್ಕೆ ಮಣಿದಿರೋ ಅಕ್ಷಯ್ ಈಗ ಕ್ಷಮೆ ಕೋರಿದ್ದಾರೆ. ಹಾಗೆಂದು ಜಾಹೀರಾತು ತಕ್ಷಣದಿಂದ ನಿಲ್ಲೋದಿಲ್ಲ. ಹಣ ಪಡೆದುಕೊಂಡಿರೊ ಕಾರಣಕ್ಕೆ ಆ ಅವಧಿ ಮುಗಿಯುವವರೆಗೆ ಜಾಹೀರಾತು ಮುಂದುವರೆಯುತ್ತೆ. ಆ ಹಣವನ್ನು ಸಾಮಾಜಿಕ ಕೆಲಸಗಳಿಗೆ ಬಳಸುತ್ತೇನೆ. ನಾನು ತಪ್ಪು ಮಾಡಿದ್ದೇನೆ. ಕ್ಷಮಿಸಿ ಎಂದಿದ್ದಾರೆ ಅಕ್ಷಯ್ ಕುಮಾರ್.

  ಅಂದಹಾಗೆ ಅದೇ ಜಾಹೀರಾತಿನಲ್ಲಿ ಅಜಯ್ ದೇವಗನ್, ಶಾರೂಕ್ ಖಾನ್ ಕೂಡಾ ನಟಿಸಿದ್ದಾರೆ. ಮತ್ತೊಂದು ಕಂಪೆನಿಯ ಗುಟ್ಕಾ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್, ರಣ್‍ವೀರ್ ಸಿಂಗ್ ಕೂಡಾ ನಟಿಸಿದ್ದಾರೆ. ಅವರ್ಯಾರಿಗೂ ವ್ಯಕ್ತವಾಗದ ಆಕ್ರೋಶ ಅಕ್ಷಯ್ ಅವರಿಗಷ್ಟೇ ವ್ಯಕ್ತವಾಗಿದೆ. ಕಾರಣವೇನೆಂದು ಹುಡುಕಿದರೆ ಉತ್ತರ ಅಕ್ಷಯ್ ಅವರ ಸಿನಿಮಾಗಳಲ್ಲಿಯೇ ಇದೆ.

 • ಡಿಟೆಕ್ಟಿವ್ ದಿವಾಕರ್ ಅಕ್ಷಯ್ ಕುಮಾರ್..?

  will akshay kumar cast in bell bottom

  ಈ ವರ್ಷದ ಸೂಪರ್ ಹಿಟ್ ಚಿತ್ರ ಬೆಲ್‌ಬಾಟಂ ಹಿಂದಿಗೆ ರೀಮೇಕ್ ಆಗುತ್ತಿದೆ. ಮೂಲಗಳ ಪ್ರಕಾರ ಈ ಚಿತ್ರಕ್ಕೆ ನಿಖಿಲ್ ಅಡ್ವಾಣಿ ಬಂಡವಾಳ ಹೂಡಲಿದ್ದಾರಂತೆ. ಎಲ್ಲವೂ ಪ್ಲಾನ್ ಪ್ರಕಾರವೇ ನಡೆದರೆ, ಅಕ್ಷಯ್ ಕುಮಾರ್ ಡಿಟೆಕ್ಟಿವ್ ದಿವಾಕರ ಆಗಲಿದ್ದಾರೆ.

  ಒಂದರ ಹಿಂದೊAದು ಹಿಟ್ ನೀಡುತ್ತಲೇ ಇರುವ ಅಕ್ಷಯ್ ಕುಮಾರ್, ಈ ವರ್ಷವೂ ಮೂರು ಹಿಟ್ ಸಿನಿಮಾ ಕೊಟ್ಟಿದ್ದಾರೆ.

  ಬಾಲಿವುಡ್‌ನ ಇತರೆ ಸ್ಟಾರ್‌ಗಳಂತಲ್ಲ. ವರ್ಷಕ್ಕೆ ಮಿನಿಮಮ್ ೩ ಸಿನಿಮಾ ಮಾಡುವ ಅಕ್ಷಯ್ ಕುಮಾರ್, ಸದ್ಯಕ್ಕೆ ಸೂರ್ಯವಂಶಿ, ಲಕ್ಷಿö್ಮÃಬಾಂಬ್, ಗುಡ್ ನ್ಯೂಸ್ ಚಿತ್ರಗಳಲ್ಲಿ ಬ್ಯುಸಿ. ೨೦೨೦ರ ಆರಂಭದಲ್ಲಿ ಬೆಲ್ ಬಾಟಂ ರೀಮೇಕ್ ಚಿತ್ರದ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ.

 • ದತ್ತಣ್ಣನಿಗೆ ತಲೆಬಾಗಿದ ಅಕ್ಷಯ್ ಕುಮಾರ್, ಸೋನಾಕ್ಷಿ ಸಿನ್ಹಾ..

  akshay kumar, sonakshi sinha praises dattanna

  ದತ್ತಾತ್ರೇಯ ಸ್ಯಾಂಡಲ್‍ವುಡ್‍ನಲ್ಲಿ ದತ್ತಣ್ಣ ಎಂದೇ ಫೇಮಸ್. ಅವರೀಗ ಬಾಲಿವುಡ್‍ಗೂ ಕಾಲಿಟ್ಟಿದ್ದಾರೆ. ಚಂದ್ರಯಾನ-2 ಉಡ್ಡಯನದ ಸಮಯದಲ್ಲೇ ಮಿಷನ್ ಮಂಗಲ್ ಸಿನಿಮಾ ರಿಲೀಸ್ ಆಗುತ್ತಿದೆ. ಇದು ಸೈನ್ಸ್ ಆಧರಿತ ಸಿನಿಮಾ. ಅಕ್ಷಯ್ ಕುಮಾರ್, ಸೋನಾಕ್ಷಿ ಸಿನ್ಹಾ ಪ್ರಧಾನ ಪಾತ್ರದಲ್ಲಿದ್ದಾರೆ. ಆದರೆ ಅವರೆಲ್ಲರನ್ನೂ ಅಚ್ಚರಿಗೊಳಿಸಿರುವುದು ದತ್ತಣ್ಣ ಅವರ ಸಾಧನೆ.

  ದತ್ತಣ್ಣ ಈಗಾಗಲೇ 3 ರಾಷ್ಟ್ರಪ್ರಶಸ್ತಿ ತೆಗೆದುಕೊಂಡಿದ್ದಾರೆ ಎಂದು ತಿಳಿದೇ ಅಚ್ಚರಿಗೊಂಡಿರುವ ಅಕ್ಷಯ್ ಮತ್ತು ಸೋನಾಕ್ಷಿಗೆ.. ದತ್ತಣ್ಣ ಎಚ್‍ಎಎಲ್ ಹಾಗೂ ಏರ್‍ಫೋರ್ಸ್‍ನಲ್ಲಿ ಕೆಲಸ ಮಾಡಿದವರು ಎಂದು ತಿಳಿದು ಇನ್ನಷ್ಟು ಅಚ್ಚರಿಗೊಂಡಿದ್ದಾರೆ.

  ಅಕ್ಷಯ್ ಕುಮಾರ್ ಚಿತ್ರದ ಸುದ್ದಿಗೋಷ್ಟಿಯಲ್ಲಿ ದತ್ತಣ್ಣನವರ ಸಾಧನೆಯನ್ನು ಹೆಮ್ಮೆಯಿಂದ ಹೇಳಿದ್ದಾರೆ. ಇಡೀ ಚಿತ್ರತಂಡ ಹಾಗೂ ಮಾಧ್ಯಮದವರು ಎದ್ದು ನಿಂತು ಚಪ್ಪಾಳೆ ತಟ್ಟಿ ದತ್ತಣ್ಣರನ್ನು ಅಭಿನಂದಿಸಿದ್ದಾರೆ. ದತ್ತಣ್ಣ ಕೀರ್ತಿ ಈಗ ಕರ್ನಾಟಕದ ಆಚೆಗೂ ಹಬ್ಬತೊಡಗಿದೆ.

 • ರಜನಿಗೆ ಓಪನ್ ಚಾಲೆಂಜ್ ಮಾಡಿ ಶಾಕ್ ಕೊಟ್ಟ ರಾಕರ್ಸ್

  rajinikanth shocked by tamil rockers

  ಎಲ್ಲ ದೇಶಗಳ, ಎಲ್ಲ ಭಾಷೆಗಳ ಚಿತ್ರಗಳಿಗೂ ಕಾಡುತ್ತಿರುವ ಅತಿದೊಡ್ಡ ಭೂತ ಪೈರಸಿ. ರಜನಿಕಾಂತ್ ಸಿನಿಮಾಗಳನ್ನೂ ಅದು ಬಿಟ್ಟಿಲ್ಲ. ಅದರಲ್ಲೂ ಈ ಬಾರಿ ಓಪನ್ ಚಾಲೆಂಜ್ ಮಾಡಿ ಗೆದ್ದಿದ್ದಾರೆ ಪೈರಸಿ ಕಿರಾತರಕು.

  ತಮಿಳ್ ರಾಕರ್ಸ್ ಎಂಬ ವೆಬ್‍ಸೈಟ್‍ನವರು ರಜನಿಕಾಂತ್‍ಗೆ ಓಪನ್ ಚಾಲೆಂಜ್ ಮಾಡಿದ್ದರು. ನೀವು ಅದ್ಯಾವುದೇ ಸೆಕ್ಯುರಿಟಿ ತೆಗೆದುಕೊಳ್ಳಿ, ಅದೆಂಥದ್ದೇ ಟೆಕ್ನಾಲಜಿ ಅಳವಡಿಸಿಕೊಳ್ಳಿ.. ನಿಮ್ಮ ಸಿನಿಮಾ ರಿಲೀಸ್ ಆದ 24 ಗಂಟೆಯೊಳಗೆ ನಾವು ಪೈರಸಿ ಬಿಡುತ್ತೇವೆ ಎಂಬ ಚಾಲೆಂಜ್ ಮಾಡಿದ್ದರು. ತಮಿಳ್ ರಾಕರ್ಸ್ ಅಟ್ಟಹಾಸವನ್ನು ಅರಿತಿದ್ದ ಚಿತ್ರತಂಡ, ತಕ್ಷಣ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತು. ಇಡೀ ಪ್ರಕರಣವನ್ನು ವಿವರಿಸಿತ್ತು. ಮದ್ರಾಸ್ ಹೈಕೋರ್ಟ್ ತಮಿಳ್ ರಾಕರ್ಸ್‍ನ 2000 ವೆಬ್‍ಸೈಟ್‍ಗಳೂ ಸೇರಿದಂತೆ, ಒಟ್ಟು 12,564 ವೆಬ್‍ಸೈಟ್‍ಗಳನ್ನು ಬ್ಲಾಕ್ ಮಾಡಿಸಿತ್ತು. ಇದೆಲ್ಲವನ್ನೂ ದಾಟಿ ತಮಿಳ್ ರಾಕರ್ಸ್ 2.0 ಚಿತ್ರದ ಪೈರಸಿ ಬಿಟ್ಟಿದ್ದಾರೆ. ರಜನಿ ಸೋತಿದ್ದಾರೆ.

 • ರಶ್ಮಿಕಾ ಮಂದಣ್ಣ ಸಿನಿಮಾ ಎಂಟ್ರಿಗೆ ಕಾರಣ, ಅಕ್ಕಿ ಜೊತೆಗಿದ್ದ ಆ ಫೋಟೋ..!

  photo with akshay kumar helped rashmikaget roles

  ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಮೋಸ್ಟ್ ಬ್ಯುಸಿ ಹೀರೋಯಿನ್. ತೆಲುಗಿನಲ್ಲಂತೂ ಆಕೆ ಸದ್ಯಕ್ಕೆ ನಂ.1. ಇಂತಹ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಬಂದಿದ್ದು ಹೇಗೆ..? ಕಿರಿಕ್ ಪಾರ್ಟಿ ಮೂಲಕ ಎಂಟ್ರಿ ಅನ್ನೋದು ಗೊತ್ತು. ಆದರೆ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಕಣ್ಣಿಗೆ ಬಿದ್ದಿದ್ದು ಹೇಗೆ..? ಅದಕ್ಕೆಲ್ಲ ಕಾರಣವಾಗಿದ್ದು ಒಂದು ಫೋಟೋ.

  2014ರಲ್ಲಿ ಫ್ರೆಶ್ ಫೇಸ್ ಆಫ್ ಇಂಡಿಯಾ ಅನ್ನೋ ಒಂದು ಸ್ಪರ್ಧೆ ನಡೆದಿತ್ತು. ಆಗ ಫ್ರೆಶ್ ಫೇಸ್ ಆಗಿ ಆಯ್ಕೆಯಾಗಿದ್ದವರು ರಶ್ಮಿಕಾ ಮಂದಣ್ಣ. ಹಾಗೆ ಪ್ರಶಸ್ತಿ ಗೆದ್ದ ರಶ್ಮಿಕಾರಿಗೆ ಅವಾರ್ಡ್ ಕೊಟ್ಟಿದ್ದವರು ಅಕ್ಷಯ್ ಕುಮಾರ್ ಮತ್ತು ರಾಣಾ ದಗ್ಗುಬಾಟಿ.

  ಆ ಫೋಟೋ ನೋಡಿಯೇ ರಕ್ಷಿತ್ ಮತ್ತು ರಿಷಬ್ ರಶ್ಮಿಕಾರನ್ನು ಕಾಂಟ್ಯಾಕ್ಟ್ ಮಾಡಿದ್ದು. ಅಭಿಮಾನಿಯೊಬ್ಬರ ಪ್ರಶ್ನೆಗೆ ರಶ್ಮಿಕಾ ಕೊಟ್ಟಿರೋ ಉತ್ತರ ಇದು.

 • ಹಿಂದಿಯ ಬೆಲ್‌ಬಾಟಂ ಕನ್ನಡದ ರೀಮೇಕ್ ಅಲ್ಲ..!

  akshay's bellbottom is not a remke of kannada film bellbottom

  ಕನ್ನಡದ ಸೂಪರ್ ಹಿಟ್ ಸಿನಿಮಾ ಬೆಲ್‌ಬಾಟಂ ಹಿಂದಿಗೆ ರೀಮೇಕ್ ಆಗುತ್ತಿದೆ. ಅದರಲ್ಲಿ ಅಕ್ಷಯ್ ಕುಮಾರ್ ಡಿಟೆಕ್ಟಿವ್ ದಿವಾಕರ್ ಪಾತ್ರ ಮಾಡಲಿದ್ದಾರೆ ಎನ್ನಲಾಗಿತ್ತು. ಅದಕ್ಕೆ ತಕ್ಕಂತೆ ಅಕ್ಷಯ್ ಕುಮಾರ್ ಅಭಿನಯದ ಬೆಲ್‌ಬಾಟಂ ಚಿತ್ರದ ಪೋಸ್ಟರ್ ಕೂಡಾ ರಿಲೀಸ್ ಆಗಿತ್ತು. ರೆಟ್ರೋ ಸ್ಟೆöÊಲಿನಲ್ಲಿದ್ದ ಅಕ್ಷಯ್ ಕುಮಾರ್ ಗೆಟಪ್ ನೋಡಿದವರು, ಇದು ಪಕ್ಕಾ ಬೆಲ್‌ಬಾಟಂ ರೀಮೇಕ್ ಎಂದುಕೊAಡಿದ್ದರೆ ಆಶ್ಚರ್ಯವಿಲ್ಲ. ಆದರೆ, ಈಗ ಹಿಂದಿ ಚಿತ್ರತಂಡದವರಿAದಲೇ ಅಧಿಕೃತ ಸುದ್ದಿ ಹೊರಬಿದ್ದಿದೆ.

  ಬೆಲ್‌ಬಾಟಂ, ರೀಮೇಕ್ ಚಿತ್ರವಲ್ಲ. ಸಂಪೂರ್ಣ ಸ್ವಮೇಕ್ ಸಿನಿಮಾ ಎಂದಿದ್ದಾರೆ ಅಕ್ಷಯ್ ಕುಮಾರ್. ಕೆಲವು ಸತ್ಯಘಟನೆಗಳನ್ನಾಧರಿಸಿದ ಸಿನಿಮಾ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಅಕ್ಷಯ್.

  ಇತ್ತೀಚೆಗೆ ಒಂದು ಮೊಟ್ಟೆಯ ಕಥೆ ರೀಮೇಕ್ ತೆರೆ ಕಂಡಿತ್ತು. ಆದರೆ, ಕಥೆಯ ಥೀಮ್ ಮಾತ್ರ ಉಳಿಸಿಕೊಂಡಿದ್ದ ಚಿತ್ರತಂಡ, ಚಿತ್ರಕಥೆಯನ್ನು ಬದಲಿಸಿಕೊಂಡಿತ್ತು. ಕ್ರೆಡಿಟ್‌ನ್ನು ಕೂಡ ಕೊಟ್ಟಿರಲಿಲ್ಲ. ಬೆಲ್‌ಬಾಟಂ ಕೂಡಾ ಹಾಗೆಯೇ ಮಾಡುತ್ತಾ..?