ಕನ್ನಡದಲ್ಲಿ ಸಾಯಿಕುಮಾರ್ ಹೀರೋ ಆಗಿ ನಟಿಸಿದ ಮೊದಲ ಚಿತ್ರ ಕುಂಕುಮ ಭಾಗ್ಯ. ಆ ಚಿತ್ರದಲ್ಲಿ ಸುಧಾರಾಣಿ, ಸಾಯಿಕುಮಾರ್‍ಗೆ ನಾಯಕಿ. ಈಗ ಸಾಯಿಕುಮಾರ್‍ಗೆ ಸುಧಾರಾಣಿ ತಂಗಿಯಾಗಿದ್ದಾರೆ. ಅವತಾರ್ ಪುರುಷ ಚಿತ್ರದಲ್ಲಿ.
ಅವತಾರ್ ಪುರುಷ ಸಿನಿಮಾದಲ್ಲಿ ಸಾಯಿಕುಮಾರ್ ಅವರದ್ದು ರಾಮಾ ಜೋಯಿಸ್ ಎನ್ನುವ ಆಯುರ್ವೇದಿಕ್ ಪಂಡಿತನ ಪಾತ್ರ. ಅವರಿಗೆ ತಂಗಿಯಾಗಿರುವುದು ಸುಧಾರಾಣಿ. ಸಾಯಿಕುಮಾರ್‍ಗೆ ಭವ್ಯ ಜೋಡಿ.
ರಂಗಿತರಂಗ ನಂತರ ಒಂದೊಳ್ಳೆ ವಿಶೇಷ ಪಾತ್ರ ಸಿಕ್ಕಿದೆ ಎನ್ನುವ ಖುಷಿಯಲ್ಲಿರುವ ಸಾಯಿಕುಮಾರ್‍ಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಭಲೇ ಇಷ್ಟವಾಗಿದ್ದಾರೆ. ಕಾರಣ ಇಷ್ಟೆ..
ಚಿತ್ರದ ಪೋಷಕ ನಟನ ಪಾತ್ರಕ್ಕೂ ಲಾಂಚಿಂಗ್ ಸಂಭ್ರಮ ಮಾಡುತ್ತಿರುವ ಸಂಭ್ರಮ. ಸಾಯಿಕುಮಾರ್ ಹುಟ್ಟುಹಬ್ಬಕ್ಕೆ ಪುಷ್ಕರ್ ನೀಡಿದ ಸ್ಪೆಷಲ್ ಕಾಣಿಕೆ. ಅಫ್‍ಕೋರ್ಸ್, ಅದು ಪುಷ್ಕರ್ ಅವರ ಪ್ಯಾಷನ್.
ಸಿಂಪಲ್ ಸುನಿ ನಿರ್ದೇಶನದ ಚಿತ್ರದಲ್ಲಿ ಶರಣ್ ನಾಯಕ, ಅಶಿಕಾ ರಂಗನಾಥ್ ನಾಯಕಿ.
ಅಂದಹಾಗೆ ಶರಣ್ ಚಿತ್ರಗಳಲ್ಲಿ ಸಾಯಿಕುಮಾರ್ ತಮ್ಮ ರವಿಶಂಕರ್ ಭಲೇ ಜೋಡಿ. ಅಣ್ಣನೊಂದಿಗೆ ಶರಣ್ ನಟಿಸ್ತಿರೋದು ಇದೇ ಫಸ್ಟ್ ಟೈಮು.