` birthday, - chitraloka.com | Kannada Movie News, Reviews | Image

birthday,

  • 70ನೇ ವರ್ಷದ ಸಡಗರದಲ್ಲಿ ಅನಂತ್‍ನಾಗ್

    ananth nag at 70

    ಅದೇ ನಗೆ, ಅದೇ ನಡಿಗೆ, ನಕ್ಕರೆ ಈಗಲೂ ನೋಡುವವರ ಕಣ್ಣಲ್ಲೊಂದು ಮೆಚ್ಚುಗೆ ಇದ್ದೇ ಇರುತ್ತೆ. ಇಂಥ ಅನಂತ್‍ನಾಗ್‍ಗೆ 70 ವರ್ಷವಾಯ್ತಾ..? ಎಪ್ಪತ್ತಾಗಿರುವುದು ಹೌದು. ಅಷ್ಟೇ ಅಲ್ಲ, ಚಿತ್ರರಂಗಕ್ಕೆ ಬಂದು 50 ವರ್ಷವಾಗಿದೆ. ಇದೇ ಕಾರಣಕ್ಕೆ ಗಾಯತ್ರಿ ಅನಂತ್‍ನಾಗ್ ಮತ್ತು ಅನಂತ್‍ನಾಗ್ ವಿಶೇಷ ಪೂಜೆ ಮಾಡಿಸಿದ್ದಾರೆ. ಚಿತ್ರರಂಗದ ತಮ್ಮ ಆತ್ಮೀಯರಿಗೆ ಪುಟ್ಟದೊಂದು ಔತಣಕೂಟ ಏರ್ಪಡಿಸಿ ಸಂಭ್ರಮಿಸಿದ್ದಾರೆ.

    ಅನಂತ್‍ನಾಗ್ ಚಿತ್ರಗಳ ನಿರ್ದೇಶಕರಾದ ಭಗವಾನ್, ಫಣಿ ರಾಮಚಂದ್ರ, ಕೋಡ್ಲು ರಾಮಕೃಷ್ಣ, ಯೋಗರಾಜ್ ಭಟ್, ಹೇಮಂತ್ ರಾವ್, ಪವನ್ ಒಡೆಯರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಹಾಗೂ ಸಂಬಂಧಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅನಂತ್‍ನಾಗ್‍ಗೆ ಶುಭ ಹಾರೈಸಿದರು.

  • R Chandru Celebrated His Birthday With Fans And Family

    r chandru

    Director R Chandru who has just started his new film 'Kanaka' starring 'Duniya' Vijay in lead role celebrated his birthday with fans and family.

    R Chandru is the only other director to celebrate his birthday publicly apart from actor-director 'Jogi' Prem. Earlier, only star artistes used to celebrate their birthdays publicly. However, Prem changed it and he was the first director to celebrate his birthday amongst his fans. Now R Chandru also has joined the bandwagon.

    'Big Boss' winner Pratham visited Chandru's residence and wished the director a happy birthday and a great year ahead.

  • Shivarajakumar Celebrates his 54th Birthday

    shivarajkumar birthday image

    Actor Shivarajakumar on Tuesday celebrated his 54th birthday with his family, fans and friends at his Nagavara residence in Bangalore. From Monday night itself,  the fans of the actor thronged his residence with cakes and gifts.  

    This continued till midnight and from early morning itself,  the fans gathered around his residence to wish the actor.  In the social media also,  many celebrities and fans wished Shivarajakumar a happy birthday and a great year ahead.

  • ಅದ್ಧೂರಿ ಹುಟ್ಟುಹಬ್ಬ ಬೇಡ ಎಂದ ಉಪೇಂದ್ರ

    upendra tweets on his bday

    ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ತಮ್ಮ ಹುಟ್ಟುಹಬ್ಬದ ಅದ್ಧೂರಿ ಆಚರಣೆಗೆ ಬ್ರೇಕ್‌ ಹಾಕಿದ್ದು ನಿಮಗೆಲ್ಲ ಗೊತ್ತೇ ಇದೆ. ಅದರ ಫಲಿತಾಂಶವೂ ಕಣ್ಣ ಮುಂದಿದೆ. ಸುದೀಪ್ ಕರೆಗೆ ಓಗೊಟ್ಟ ನೂರಾರು ಅಭಿಮಾನಿಗಳು ಆ ದಿನ ಅನ್ನಸಂತರ್ಪಣೆ, ರಕ್ತದಾನ, ಅನಾಥ ಮಕ್ಕಳಿಗೆ ಅನುದಾನ ನೀಡುವ ಒಳ್ಳೆಯ ಕೆಲಸಗಳಲ್ಲಿ ತೊಡಗಿಕೊಂಡರು. ಸುದೀಪ್​ ಹುಟ್ಟುಹಬ್ಬವನ್ನು ಸಾರ್ಥಕತೆಯಿಂದ ಆಚರಿಸಿದರು.

    ಅದೇ ಹಾದಿಯನ್ನು ತುಳಿಯುತ್ತಿದ್ದಾರೆ ಉಪೇಂದ್ರ. ಇದೇ ತಿಂಗಳ 18ಕ್ಕೆ ಉಪೇಂದ್ರ ಹುಟ್ಟುಹಬ್ಬವಿದೆ. ಆ ದಿನ ಹೂ-ಮಾಲೆ, ಕೇಕ್‌, ಬ್ಯಾನರ್‌ ಹಾಗೂ ಫ್ಲೆಕ್ಸ್‌ಗಳಿಗೆ ಹಣ ಖರ್ಚು ಮಾಡಬೇಡಿ ಎಂದು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ ಉಪೇಂದ್ರ. ಅದರ ಬದಲು ನೇರವಾಗಿ ನನ್ನನ್ನು ಭೇಟಿ  ಮಾಡಿ ವಿಶ್ ಮಾಡಿದರೆ ಸಾಕು ಎನ್ನುವುದು ಉಪೇಂದ್ರ ಮಾತು. 

  • ಕಾಲವನ್ನು ತಡೆಯೋರು ಯಾರೂ ಇಲ್ಲ - ಕನ್ನಡಿಗರ ಕುಳ್ಳನಿಗೆ 75

    dwarkish 75 years

    ನೆಗೆಟಿವ್ ಆಲೋಚನೆ ಬಿಟ್ಟು, ಪಾಸಿಟಿವ್ ಆಗಿ ಯೋಚಿಸಲು ತೊಡಗಿದರೆ ಏನಾಗಬಹುದು. ಉತ್ತರ : ದ್ವಾರಕೀಶ್

    ತಮ್ಮಲ್ಲಿನ ನ್ಯೂನತೆಗಳನ್ನೇ ಶಕ್ತಿಯಾಗಿಸಿ ಗೆಲ್ಲುವುದು ಹೇಗೆ?. ಉತ್ತರ : ದ್ವಾರಕೀಶ್

    ಎತ್ತರವಿಲ್ಲದ, ಕುಳ್ಳ ದೇಹವನ್ನೇ ತಮ್ಮ ಶಕ್ತಿಯನ್ನಾಗಿಸಿಕೊಂಡು ಕನ್ನಡದ ಕುಳ್ಳನಾಗಿ ಮೆರೆದ ದ್ವಾರಕೀಶ್ ಜೀವನ, ಆತ್ಮವಿಶ್ವಾಸದ ಕೊರತೆಯಿಂದ ನರಳುವವರಿಗೆ ಸ್ಫೂರ್ತಿಯ ಚಿಲುಮೆಯಾಗಬಲ್ಲದು. ಆ ಸ್ಫೂರ್ತಿಯ ಚಿಲುಮೆಗೀಗ 75 ವರ್ಷ.

    ಬಂಗಲ್ ಶ್ಯಾಮರಾವ್ ದ್ವಾರಕಾನಾಥ್ ಎಂಬುದು ಅವರ ಮೂಲ ಹೆಸರು. ಅಪ್ಪ ಹೇಳಿದಂತೆ ಕೇಳಿಕೊಂಡು ಅಂಗಡಿ ನಡೆಸಿಕೊಂಡು ಇದ್ದಿದ್ದರೆ, ಮೈಸೂರಿನಲ್ಲಿ ಆಟೋ ಸ್ಪೇರ್ಸ್ ಮಾರುತ್ತಾ ಬದುಕಿಬಿಡುತ್ತಿದ್ದರೇನೋ. ಆದರೆ, ಸಿನಿಮಾ ನೋಡುವ, ಸಿನಿಮಾ ಸೇರುವ ಹಠ ಬೆನ್ನುಹತ್ತಿತ್ತು. ಮಾವ ಹುಣಸೂರು ಕೃಷ್ಣಮೂರ್ತಿ ಬೆನ್ನು ಹತ್ತಿದ ದ್ವಾರಕೀಶ್, ವೀರಸಂಕಲ್ಪ ಚಿತ್ರದಲ್ಲೊಂದು ಪುಟ್ಟ ಪಾತ್ರ ಗಿಟ್ಟಿಸಿದರು. 

    ಆ ಚಿತ್ರದಲ್ಲಿ ಅವರು ಎದುರಿಸಿದ ಮೊದಲ ಶಾಟ್, ಸಿಂಹಾಸನ ಹತ್ತುವ ದೃಶ್ಯ. ಅದೇನು ಅಮೃತ ಗಳಿಗೆಯೋ.. ದ್ವಾರಕೀಶ್ ಕನ್ನಡಿಗರ ಹೃದಯ ಸಿಂಹಾಸನದ ಮಹಾರಾಜನಾಗಿ ಮೆರೆದರು. ಅವರ ಜೀವನದಲ್ಲಿ ಏರುಪೇರುಗಳಾದವು ನಿಜ. ಆದರೆ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ದ್ವಾರಕೀಶ್ ಸ್ಥಾನ ಅಲುಗಾಡಲಿಲ್ಲ.

    ಹಾಸ್ಯ ನಟನಾದವನು ಹೀರೋ ಆಗಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದೇ ದ್ವಾರಕೀಶ್. ಕನ್ನಡ ಚಿತ್ರಗಳನ್ನು ವಿದೇಶದಲ್ಲಿ ಚಿತ್ರೀಕರಿಸಿದ ಮೊದಲಿಗ ದ್ವಾರಕೀಶ್. ಲಂಡನ್ ಸ್ಟುಡಿಯೋಗಳಲ್ಲಿ ಚಿತ್ರದ ಸಾಂಗ್ ರೆಕಾರ್ಡಿಂಗ್ ಮಾಡಿಸಿದ ಧೀರ ದ್ವಾರಕೀಶ್. 

    ಕನ್ನಡದ ಹೆಮ್ಮೆಯ ನಿರ್ದೇಶಕ ಸಿದ್ದಲಿಂಗಯ್ಯ ನಿರ್ದೇಶಕರಾದದ್ದು ದ್ವಾರಕೀಶ್ ಚಿತ್ರದಿಂದ. ದ್ವಾರಕೀಶ್ ನಿರ್ಮಾಪಕರಾದಾಗ ಅವರಿಗೆ ವಯಸ್ಸಾದರೂ ಎಷ್ಟು..? ಕೇವಲ 23. ಈಗ ಅವರಿಗೆ 75. 52 ವರ್ಷ ನಿರ್ಮಾಪಕರಾಗಿದ್ದ ದ್ವಾರಕೀಶ್ ಸಂಸ್ಥೆಯ 50ನೇ ಚಿತ್ರವೇ ಚೌಕ.

    ಚೌಕ ಚಿತ್ರ ದ್ವಾರಕೀಶ್ ಜೀವನಕ್ಕೆ ಸರಿಯಾಗಿ ಹೊಂದುವ ಹಾಗಿದೆ. ಜೀವನದ ನಾಲ್ಕೂ ಮಗ್ಗುಲುಗಳನ್ನು ಮುಟ್ಟಿ ಬಂದಿದ್ದಾರೆ ದ್ವಾರಕೀಶ್. ಅವಕಾಶಕ್ಕಾಗಿ ಅಲೆಮಾರಿಯಾಗಿದ್ದ ದ್ವಾರಕೀಶ್. ಚಿತ್ರರಂಗದ ಸಾಮ್ರಾಟನಾಗಿ ಮೆರೆದ ದ್ವಾರಕೀಶ್. ಎಲ್ಲವನ್ನೂ ಕಳೆದುಕೊಂಡು, ಏನೂ ಇಲ್ಲದಂತಾಗಿ ಹೋದ ದ್ವಾರಕೀಶ್. ಮತ್ತೆ ಎಲ್ಲವನ್ನೂ ಗಳಿಸಿ, ಬದುಕು ಕಟ್ಟಿಕೊಂಡ ದ್ವಾರಕೀಶ್. ಅದಕ್ಕೇ ಹೇಳಿದ್ದು, ದ್ವಾರಕೀಶ್ ಜೀವನವೆಂಬುದು, ಆತ್ಮವಿಶ್ವಾಸ ಇಲ್ಲದವರು ಓದಲೇಬೇಕಾದ ಲೈಫು. ಅದರಲ್ಲಿ ಸ್ಫೂರ್ತಿಯಿದೆ..ಛಲವಿದೆ. ಆಫ್ರಿಕಾದಲ್ಲಿ ಶೀಲ ಚಿತ್ರ ಮಾಡಿ ಮೈತುಂಬಾ ಸಾಲ ಮಾಡಿಕೊಂಡ ದ್ವಾರಕೀಶ್, ಮತ್ತೊಮ್ಮೆ ಜೀವನದಲ್ಲಿ ಗೆಲುವಿನ ನಗೆ ನಕ್ಕಿದ್ದು ಆಪ್ತಮಿತ್ರನಿಂದಲೇ.

    ದ್ವಾರಕೀಶ್ ಜೀವನದ ಆಪ್ತಮಿತ್ರ ವಿಷ್ಣುವರ್ಧನ್. ಅದೇಕೋ.. ಏನೋ.. ಅವರಿಬ್ಬರ ಸ್ನೇಹ ಎಷ್ಟು ಗಾಢವಾಗಿತ್ತೋ.. ಅಷ್ಟೇ ನಿಗೂಢವಾಗಿ ದೂರವೂ ಆಗಿಹೋಯ್ತು. ಹೀಗೇಕಾಯ್ತು ಎನ್ನುವುದು ದ್ವಾರಕೀಶ್‍ಗೆ ಗೊತ್ತಿಲ್ಲ. ಏನಾಯ್ತು ಎನ್ನುವುದನ್ನು ವಿಷ್ಣುವರ್ಧನ್ ಹೇಳಿ ಹೋಗಲಿಲ್ಲ.

    ಅವರ ಚಿತ್ರಗಳಲ್ಲಿ ರಾಜ್, ವಿಷ್ಣು, ಶಂಕರ್‍ನಾಗ್, ರಜಿನಿಕಾಂತ್, ಶ್ರೀನಾಥ್.. ನಾಯಕರಾಗಿದ್ದರು. ಕನ್ನಡ, ತಮಿಳು, ಹಿಂದಿ.. ಎಲ್ಲ ಭಾಷೆಗೂ ನುಗ್ಗಿದ್ದ ದ್ವಾರಕೀಶ್, ಕನ್ನಡ ಚಿತ್ರರಂಗದಲ್ಲಿ ಊರಿದ್ದು ವಾಮನ ಪಾದ. ಗೆಲುವು ಹತ್ತಿದರೆ, ಹಿಮಾಲಯಕ್ಕೆ ಕೊಂಡೊಯ್ಯುತ್ತೆ. ಸೋಲು ಸುತ್ತಿದರೆ ಪಾತಾಳಕ್ಕೆ ನೂಕಿಬಿಡುತ್ತೆ ಅಂತಾರಲ್ಲ..ಹಾಗೆ ಹಿಮಾಲಯ ಮತ್ತು ಪಾತಾಳ ಎರಡನ್ನೂ ಕಂಡು ಬಂದವರು ದ್ವಾರಕೀಶ್.

    ದ್ವಾರಕೀಶ್ ಲೈಫನ್ನು ಹೇಳುತ್ತಾ ಹೋದರೆ, ಚಿತ್ರರಂಗದ ಇತಿಹಾಸವನ್ನೇ ಹೇಳಿದಂತೆ. ಆದರೆ, ದ್ವಾರಕೀಶ್ ಹಾಸ್ಯನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಗೆದ್ದಿದ್ದು ಸಾಧನೆಯಲ್ಲ. ಅದಕ್ಕಿಂತ ಮಿಗಿಲಾದ ಸಾಧನೆ ಒಬ್ಬ ವ್ಯಕ್ತಿಯಾಗಿ ಸಾಧಿಸಿದ್ದು. ಅವರು ಗುರುತಿಸಿದ ಪ್ರತಿಭೆಗಳನ್ನು ಕನ್ನಡ ಚಿತ್ರರಂಗವನ್ನು ಆಳಿದವು. 

    ಸ್ಫೂರ್ತಿಯ ಕಥೆಗಳಿಗಾಗಿ ಅಮೆರಿಕ, ಬ್ರಿಟನ್, ಹಾಲಿವುಡ್, ಬಾಲಿವುಡ್.. ಹೀಗೆ ಎಲ್ಲೆಲ್ಲೋ ಅಲೆದು, ಅವರಿಗೇ ಗೊತ್ತಿಲ್ಲದ ವಿಶೇಷಣಗಳನ್ನೆಲ್ಲ ತುಂಬಿ, ಅವರನ್ನು ಹೀರೋಗಳಂತೆ ಬಿಂಬಿಸುವವರು ಒಂದ್ಸಲ ದ್ವಾರಕೀಶ್ ಜೀವನ ನೋಡಬೇಕು.

  • ರಾಗದಿ ಬೆಸೆದ ಪದಗಳ ಹಾರ..ಕನ್ನಡ ಸಂಗೀತದ ಮುತ್ತಿನ ಹಾರ - ಹಂಸಲೇಖ ಜನ್ಮದಿನ

    nada bramha hamsalekha

    ಹಂಸಲೇಖ ಎನ್ನುವುದು ಸಂಗೀತಗಾರನ ಹೆಸರಷ್ಟೇ ಅಲ್ಲ. ಆತ ಒಬ್ಬ ಗಾನಮಾಂತ್ರಿಕ. ಹಂಸಲೇಖಗೆ ಸಂಗೀತ ಗೊತ್ತು. ಸಾಹಿತ್ಯ ಗೊತ್ತು. ಆತ ಅನುಭಾವಿ. ಆತ ತುಂಟ. ತತ್ವಪದಗಳು ಗೊತ್ತು. ಇಂಗ್ಲಿಷ್​ನ್ನು ಕಂಗ್ಲಿಷನ್ನಾಗಿಸುವ ಕಲೆಯೂ ಗೊತ್ತು. ಶೃಂಗಾರ ರಸದಲ್ಲಿ ಹಂಸಲೇಖಗೆ ಸಾಟಿಯೇ ಇಲ್ಲ. ಅವರಷ್ಟು ಪೋಲಿ ಇನ್ನೊಬ್ಬರಿಲ್ಲ.

    ‘‘ಬಂತು ಬಂತು ಕರೆಂಟು ಬಂತು..’’ ಅನ್ನೋ ಕ್ಯಾಬರೆ ಹಾಡು ಬರೆದ ಅದೇ ಹಂಸಲೇಖ ‘‘ನೀಡು ಶಿವ ನೀಡದಿರು ಶಿವ.. ಹಾಡಿನಲ್ಲಿ  ‘ಶೃಂಗಾರ ಕೃತಕ ಬಂಗಾರ ಕ್ಷಣಿಕ..ಬಾಳಲ್ಲಿ ಬಡಿವಾರವೇಕೆ?.. ನೀನಿತ್ತ ಕಾಯ...ನಿನ್ನ ಕೈಲಿ ಮಾಯ..ಆಗೋದು ಹೋಗೋದು ನಾ ಕಾಣೆನೆ ಎಂದು ಬರೆಯುತ್ತಾರೆ. 

    ಕೇಳುಗ ಮೋಡಿಗೊಳಗಾಗುವುದೇ ಅಲ್ಲ. ಕ್ಯಾಬರೆ ಹಾಡಿನಲ್ಲಿ (ಈಗಿನ ಐಟಂ ಸಾಂಗ್ ಎಂದುಕೊಳ್ಳಿ) ಜಾತಿ ಜಾತಿ ಸೇರಲ್ಲ..ಭಾಷೆ ಭಾಷೆ ಬೆರೆಯಲ್ಲ..ಹುಡುಗಿ ಅಂದ್ರೆ ಮಂದಿ, ಜಾತಿ ಗೀತಿ ಚಿಂದಿ ಅಂತಾ ಬರೆಯೋ ತಾಕತ್ತಿರೋದು ಹಂಸಲೇಖಗೆ ಮಾತ್ರ. ತಂಗಿ ನಿನ್ನ ಮಗುವಿನಲ್ಲೂ ಒಂದು ನಗುವಿದೆ..ಆ ನಗುವು ನಮ್ಮ ಅಮ್ಮನಂತಿದೆ. ಎನ್ನುವಾಗಲೇ ತಂಗಿಯನ್ನೂ, ತಾಯಿಯನ್ನೂ ಏಕ ಮಾಡಿಬಿಡುತ್ತಾರೆ ಹಂಸಲೇಖ.

    ನೀನಾ ಭಗವಂತ..ಜಗಕುಪಕರಿಸಿ, ನಮಗಪಕರಿಸುವ ಜಗದೋದ್ಧಾರಕ ನೀನೇನಾ..ಎಂದು ಬರೆದೇ ಚಿತ್ರಂಗಕ್ಕೆ ಬಂದ ಹಂಸಲೇಖ, ಮತ್ತೆ ಆ ಹಾಡು ನೆನಪಿಸುವುದು ಮಂಜುನಾಥ ಚಿತ್ರದ ಶಿವನನ್ನು ಬಯ್ಯುವ ಹಾಡಿನಲ್ಲಿ. ಯಾರೋ ಹೆತ್ತೋರ್ ನಿನ್ನ..ಅವರ ಬಾಯಿಗ್ ಹಾಕ್ತಿನ್ ಮಣ್ಣಾ ಎಂದು ಬರೆದಾಗ.

    ಅವರ ಹಾಡುಗಳಲ್ಲಿ ಏನುಂಟು ಎನ್ನುವುದಕ್ಕಿಂತ ಏನಿಲ್ಲ ಎಂದು ಕೇಳುವುದೇ ಸರಿ. ಅವರು ಒಗಟುಗಳನ್ನೂ ಹಾಡಾಗಿಸಿದ್ದಾರೆ. ನುಡಿಗಟ್ಟು, ವ್ಯಾಕರಣ, ಗಣಿತವನ್ನೂ ಹಾಡಲ್ಲಿ ತಂದಿದ್ದಾರೆ.

    ಅವರು ಎಂತೆಂಥಾ ಸನ್ನಿವೇಶಕ್ಕೆಲ್ಲ ಹಾಡು ಸೃಷ್ಟಿಸಿದ್ದಾರೆ ಎನ್ನುವುದನ್ನು ನೋಡಿದರೆ ಸಾಕು, ಹಂಸಲೇಖ ತಾಕತ್ತು ಅರ್ಥವಾಗಿಬಿಡುತ್ತೆ. ಹೀರೋಯಿನ್ ಚುಡಾಯಿಸುವುದಕ್ಕೆ (ಶಾಂತಿ ಕ್ರಾಂತಿ - ಮಧ್ಯರಾತ್ರೀಲಿ) ಕಿಡ್ನಾಪ್ ಮಾಡುವುದುಕ್ಕೆ ( ರಣಧೀರ - ಮೀನಾಕ್ಷಿ ನಿನ್ನ ಕಣ್ಣ ಮೇಲೆ) ಕೋಳಿ ಹಿಡಿಯೋಕೆ (ಸಿಪಾಯಿ - ಕೊಕ್ಕೋ ಕೋಳಿಯೇ..) ನೀರು ಕೇಳೋಕೆ (ಕಿಂದರಿ ಜೋಗಿ - ಗಂಗೆ ಬಾರೆ..) ಮನಸ್ಸು ಬದಲಾಗಿದೆ ಅನ್ನೋದಕ್ಕೆ (ಕೌರವ - ಕುಕ್ಕುಕ್ಕೂ..) ಪ್ರೇಯಸಿಗೆ ಸೀರೆ ಕೊಡೋಕೆ ( ರಣರಂಗ - ಗಾಜನೂರಿನ ಗಂಡು ಕಾಣಮ್ಮೋ) ಹೀಗೆ ಹಾಡೊಂದು ಹಾಡಿದರೆ ಅದು ಚಿರಕಾಲ ಕೇಳಬೇಕು ಎಂದೇ ಹಾಡು ಬರೆದವರು ಹಂಸಲೇಖ.

    ಕಾವೇರಿಗಾಗಿ ಬರೆದ ಕಾವೇರಮ್ಮ..ಕಾಪಾಡಮ್ಮ, ಕನ್ನಡ ನಾಡಿನ ಜೀವನದಿ ಕಾವೇರಿ..ಹಂಸಲೇಖ ಗೀತೆಯಾಗಿ ಉಳಿದಿಲ್ಲ. ಕಾವೇರಿ ಗೀತೆಯಾಗಿವೆ ಎಂಬುದರಲ್ಲೇ ಹಂಸಲೇಖ ಸಾಧನೆಯಿದೆ. ಮಂಡ್ಯದ ಗಂಡು ಹಾಡು, ಅಂಬರೀಷ್​ ಜೀವನಗೀತೆಯಾಗಿದೆ. ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ನಾಡಗೀತೆಯಾಗಿದೆ..ಪ್ರೇಮಗೀತೆಗಳು ಅದೆಷ್ಟೋ ಲೆಕ್ಕವೇ ಇಲ್ಲ.

    ಈ ಜಗವೇ ತಾಯಿಗೇ ತೊಟ್ಟಿಲು..ನಾವೆಲ್ಲ ಮಕ್ಕಳೂ ಎಂದು ಬರೆದ ಹಂಸಲೇಖ, ಸಾಹಿತ್ಯದ ದಾರದಲ್ಲೇ ಪೋಣಿಸಿದ ಮುತ್ತಿನ ಹಾರ ಎಂದರೆ ತಪ್ಪೇನಲ್ಲ. ಎಷ್ಟು ಜನ ಕುಳಿತರೂ ಇನ್ನೊಬ್ಬರು ಕೂರಲು ಜಾಗವಿದ್ದ ಪುಷ್ಪಕ ವಿಮಾನದಂತೆ, ಹಂಸಲೇಖ ಸಾಹಿತ್ಯ ಬರಿದಾಗುವುದಿಲ್ಲ. ಅವರಿಗೀಗ 65ರ ಹುಟ್ಟುಹಬ್ಬದ ಸಂಭ್ರಮ. 

    ಕರೆಯೋಣ..ಮತ್ತೆ ಮತ್ತೆ..ಹಂಸವೇ..ಹಂಸವೇ..ಹಾಡು..ಬಾ.. ಸೃಷ್ಟಿಯ ಸಂಭ್ರಮ ನೋಡು ಬಾ..

    Related Articles :-

    ಹಂಸಲೇಖ ಹುಟ್ಟುಹಬ್ಬಕ್ಕೆ ಬರ್ತಾಳೆ ಶಕುಂತಲಾ

  • ಸೆ.18 - ಕನ್ನಡದ ಮೂರು ವಜ್ರಗಳ ಹುಟ್ಟುಹಬ್ಬ

    3 super stars birthday today

    ಸೆಪ್ಟೆಂಬರ್ 18, ಕನ್ನಡ ಚಿತ್ರರಂಗಕ್ಕೆ ಅಪರೂಪದ ದಿನ. ಇದು ಸ್ಟಾರ್ ಡೇ. ಸಾಹಸ ಸಿಂಹ ವಿಷ್ಣುವರ್ಧನ್​ಗೆ ಇದು 67ನೇ ಹುಟ್ಟುಹಬ್ಬ. ಅವರು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಜೀವಂತ. ಆ ಮಹಾನ್ ಕಲಾವಿದನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

    ಹುಟ್ಟುಹಬ್ಬಕ್ಕಾಗಿ ರಾಜಸಿಂಹ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಅದು ವಿಷ್ಣು ಅವರ ಅಳಿಯ ಅನಿರುದ್ಧ ಅಭಿನಯದ ಚಿತ್ರ. ಆಡುಗೋಡಿಯ ನ್ಯಾಷನಲ್ ಡೈರಿ ರಿಸರ್ಚ್ ಇನ್​ಸ್ಟಿಟ್ಯೂಟ್ 402 ಸಸಿ ನೆಡುವ ಮೂಲಕ ವಿಷ್ಣು ಹುಟ್ಟುಹಬ್ಬದ ಸಡಗರದಲ್ಲಿ ತೊಡಗಿಕೊಳ್ಳುತ್ತಿದೆ. ಅಭಿಮಾನಿಗಳು ಎಂದಿನಂತೆ ಅಭಿಮಾನ್ ಸ್ಟುಡಿಯೋದಲ್ಲಿ ಜನ್ಮ ದಿನ ಆಚರಿಸುತ್ತಿದ್ದಾರೆ. ರಾಜ್ಯದ ನೂರಾರು ವಿಷ್ಣು ಅಭಿಮಾನಿ ಸಂಗಗಳು, ರಕ್ತದಾನ, ಅನ್ನದಾನ ಆಯೋಜಿಸಿವೆ. ಹಲವೆಡೆ ವಿಷ್ನು ಚಿತ್ರಗಳ ಹಾಡುಗಳ ಆರ್ಕೆಸ್ಟ್ರಾ ಮಾಡಲು ಸಿದ್ಧತೆ ನಡೆದಿದೆ.

    ಇನ್ನು, ನಟ, ನಿರ್ದೇಶಕ, ನಿರ್ಮಾಪಕರಾಗಿದ್ದ ಉಪೇಂದ್ರಗೆ, ಇದು 49 ನೇ ಹುಟ್ಟುಹಬ್ಬ. ಈ ಬಾರಿ ಅವರು ರಾಜಕಾರಣಕ್ಕೂ ಪ್ರವೇಶ ಮಾಡಿರುವುದರಿಂದ ಅದು ಇನ್ನೊಂದು ವಿಶೇಷ. ಕತ್ರಿಗುಪ್ಪೆಯ ಮನೆಯಲ್ಲಿ ಸರಳವಾಗಿ ಸಂಭ್ರಮ ನಡೆಯಲಿದೆ. ಕೇಕ್ ತರಬೇಡಿ ಎಂದು ಉಪೇಂದ್ರ ಅವರೇ ಮನವಿ ಮಾಡಿದ್ದರೂ, ಅಭಿಮಾನಿಗಳು ಕೇಕ್​ನೊಂದಿಗೇ ಬರುವ ಸಾಧ್ಯತೆಗಳಿವೆ. 

    ಉಪ್ಪಿ ಮನೆ ಮುಂದೆ ಈಗಾಗಲೇ ಬ್ಯಾನರ್​ಗಳೂ ಬಿದ್ದಿವೆ. ಅವರ ಹುಟ್ಟುಹಬ್ಬಕ್ಕಾಗಿ ಪುಸ್ತಕವೊಂದು ಬಿಡುಗಡೆಯಾಗುತ್ತಿದೆ. ಇನ್ನು ಉಪೇಂದ್ರ ಅಭಿಮಾನಿ ಸಂಘಗಳೂ ಸಮಾಜಮುಖಿ ಕೆಲಸಗಳ ಮೂಲಕ ಉಪ್ಪಿಗೆ ಶುಭಕೋರುತ್ತಿವೆ.

    ಇನ್ನು ಚಿತ್ರನಟಿ ಶೃತಿಗೆ ಇದು 42 ನೇ ಹುಟ್ಟುಹಬ್ಬ. ಕಾಯಕವೇ ಕೈಲಾಸ ಎಂದು ನಂಬಿಕೊಂಡಿರುವ ಶೃತಿ, ಈ ಬಾರಿ  ಸಾಯಿ ಪ್ರಕಾಶ್ ನಿರ್ದೇಶನದ ‘ಅಬ್ಬೆ ತುಮಕೂರು ವಿಶ್ವರಾಧ್ಯರು’ ಚಿತ್ರದ ಸೆಟ್​ನಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಕೆಲವು ಸಮಾಜಮುಖಿ ಕೆಲಸಗಳಲ್ಲೂ ತೊಡಗಿಕೊಳ್ಳುತ್ತಿದ್ದಾರೆ.

     

  • ಹುಟ್ಟುಹಬ್ಬ ಆಚರಿಸದೇ ಇರಲು ಏನು ಕಾರಣ..? - ಕಿಚ್ಚ ಹೇಳಿದ ಸತ್ಯ

    kichcha sudeep does not celebrate birthday

    ದಿ ವಿಲನ್ ಚಿತ್ರದ ಪೋಸ್ಟರ್ ಬಿಡುಗಡೆ ವೇಳೆ ಫೇಸ್‍ಬುಕ್ ಲೈವ್‍ಗೆ ಬಂದಿದ್ದ ಸುದೀಪ್, ಆಗ ಒಂದು ಮಾತು ಹೇಳಿದ್ದರು. ನಾನೇಕೆ ಹುಟ್ಟುಹಬ್ಬ ಆಚರಿಸಲಿಲ್ಲ ಎಂಬುದಕ್ಕೆ ಉತ್ತರ ನೀಡುತ್ತೇನೆ ಎಂದಿದ್ದರು. ಅದಕ್ಕೆ ಉತ್ತರ ಕೊಟ್ಟಿದ್ದಾರೆ ಸುದೀಪ್. ಟ್ವಿಟರ್‍ನಲ್ಲಿ ಲೈವ್‍ಗೆ ಬಂದ ಸುದೀಪ್ ತಾವು ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಕೈಬಿಟ್ಟ ಕಾರಣ ಬಹಿರಂಗಪಡಿಸಿದ್ದಾರೆ.

    ಕಳೆದ ವರ್ಷ ಹುಟ್ಟುಹಬ್ಬ ಆಚರಿಸಿದಾಗ ಸಾವಿರಾರು ಅಭಿಮಾನಿಗಳು ಮನೆಗೇ ಬಂದಿದ್ದರು. ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದರು. ಆದರೆ, ತಿಂದದ್ದಕ್ಕಿಂತ ವೇಸ್ಟ್ ಆಗಿದ್ದೇ ಹೆಚ್ಚು. ಎಷ್ಟೋ ಕೇಕು ರಸ್ತೆಯಲ್ಲೆಲ್ಲ ಚೆಲ್ಲಾಡಿತ್ತು. ಹಾಗೆ ರಸ್ತೆಯಲ್ಲಿ ಬಿದ್ದಿದ್ದ ಕೇಕ್‍ನ್ನು ಪುಟ್ಟ ಹುಡುಗಿಯೊಬ್ಬಳು ಆಯ್ದುಕೊಂಡು ತಿಂದಿದ್ದನ್ನು ನೋಡಿದಾಗ ಸುದೀಪ್‍ಗೆ ತಮ್ಮ ಮಗಳ ನೆನಪಾಗಿದೆ. ಆಗಲೇ ಇನ್ನೆಂದೂ ಈ ರೀತಿ ಹುಟ್ಟುಹಬ್ಬ ಆಚರಿಸಬಾರದು..ಅದರಿಂದ ಜನರಿಗೆ ಉಪಯೋಗವಾಗಬೇಕು ಎಂದು ನಿರ್ಧರಿಸಿದರಂತೆ ಕಿಚ್ಚ ಸುದೀಪ್.

    ನನ್ನ ಹುಟ್ಟುಹಬ್ಬಕ್ಕೆ ಕೇಕ್, ಹಾರಕ್ಕೆಂದು ಖರ್ಚು ಮಾಡುವ ಹಣವನ್ನು ಬೇರೆಯವರ ಕಷ್ಟಕ್ಕೆ ಖರ್ಚು ಮಾಡಿದರೆ, ನನಗೂ ನೆಮ್ಮದಿ ಎನ್ನುವುದು ಸುದೀಪ್ ಮನದಾಳ. ಮನೆ ಮಾಡಬೇಕು..ಕೋಟಿ ಕೋಟಿ ದುಡಿಯಬೇಕು ಎಂಬ ಆಸೆ ನನಗಿಲ್ಲ. ಸಾಯುವ ಒಳಗೆ ನಿಮ್ಮ ಮನಸ್ಸಿನಲ್ಲಿ ಮನೆ ಮಾಡುವ ಆಸೆ ಇದೆ. ಇನ್ನಷ್ಟು ಅಭಿಮಾನ, ಪ್ರೀತಿ ಸಂಪಾದಿಸುವುದೇ ನನ್ನ ಗುರಿ ಎಂದು ಹೇಳಿಕೊಂಡಿದ್ದಾರೆ ಸುದೀಪ್.

    ಹೀಗಾಗಿಯೇ ತಮ್ಮ ಸಮಾಜಸೇವೆಯ ವಿವರಗಳನ್ನೂ ಹೇಳಿರುವ ಸುದೀಪ್, ಈ ಬಾರಿ ಭೇಟಿಯಾಗದೇ ಇರುವುದಕ್ಕೆ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.