` mufti - chitraloka.com | Kannada Movie News, Reviews | Image

mufti

  • ಯಶ್ ಚಿತ್ರಕ್ಕೆ ಮಫ್ತಿ ನರ್ತನ್ ಡೈರೆಕ್ಷನ್..?

    yash's next movie with mufti narthan

    ಯಶ್ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರಂತೆ. ಆ ಚಿತ್ರಕ್ಕೆ ತಮನ್ನಾ ನಾಯಕಿಯಂತೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿಬಿಟ್ಟಿದೆ. ನಿರ್ಮಾಪಕರೂ ರೆಡಿ, ನಿರ್ದೇಶಕರು ರೆಡಿ ಎನ್ನುತ್ತಿದ್ದರಾದರೂ, ಯಾರವರು ಎಂಬುದು ಮಾತ್ರ ಪಕ್ಕಾ ಆಗುತ್ತಿಲ್ಲ. ಹಾಗೆ ಕೇಳಿಬಂದ ನಿರ್ದೇಶಕರ ಹೆಸರಲ್ಲಿ ಮಫ್ತಿ ನರ್ತನ್ ಹೆಸರೂ ಇದೆ. ಹೌದಾ ಎಂದಾಗ ನರ್ತನ್ ಹೇಳಿರೋದು ಇಷ್ಟು.

    `ಯಶ್ ನನಗೆ ಅಣ್ಣನಿದ್ದಂತೆ. ಕಥೆ ಮಾಡಿಕೊಂಡು ಬಾ ಎಂದಿದ್ದಾರೆ. ಕೆಜಿಎಫ್ ನಂತರ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೀಗಾಗಿ ಜವಾಬ್ದಾರಿ ಹೆಚ್ಚು. ಅದಕ್ಕೆ ತಕ್ಕಂತೆ ಕಥೆ ಮಾಡುತ್ತಿದ್ದೇನೆ' ಎಂದಿದ್ದಾರೆ.

    ಹಾಗಂತ ಅದು ಫೈನಲ್ ಅಲ್ಲ. ಏಕೆಂದರೆ ನರ್ತನ್ ಅವರ ಬಳಿ ಇನ್ನೂ ಕಥೆ ಕಂಪ್ಲೀಟ್ ಸಿದ್ಧವಾಗಿಲ್ಲ. ಆ ಕಥೆಯನ್ನು ಯಶ್‍ಗೆ ಹೇಳಿಯೂ ಇಲ್ಲ. ಹೀಗಾಗಿ ಈಗ ಹರಿದಾಡುತ್ತಿರುವ ಯಶ್ ಹೊಸ ಚಿತ್ರ, ತಮನ್ನಾ ನಾಯಕಿ ಎಂಬ ಸಿನಿಮಾದ ನಿರ್ದೇಶಕ ನರ್ತನ್ ಅವರಲ್ಲದೆಯೂ ಇರಬಹುದು. ಗಾಳಿಸುದ್ದಿಗಳಿಗೆಲ್ಲ ಗುದ್ದು ಕೊಟ್ಟು ಇದೇ ಕರೆಕ್ಟ್ ಎಂದು ಹೇಳಬೇಕಿರುವುದು ಯಶ್ ಮಾತ್ರ.

  • 'Mufti' 50 Days Celebrations In Shivarajakumar's Residence

    mufti 50 days celebrations

    Shivarajakumar and Murali starrer 'Mufti' has successfully completed 50 days across Karnataka and to mark the occasion, the fans of Shivarajakumar have decided to hold the celebrations in a grand style.

    The 50 days celebrations of the film has been organised by Shivarajakumar fans. Dr Shivarajakumar Sena Samithi and Gandugali Dr Shivarajakumar Fans Association has jointly organised the function. The event will be held at Shivarajkumar's residence at Nagavara today evening 6 PM.

    The event will be attended by Shivarajakumar, Murali, director Narthan, producers Jayanna and Bhogendra and the star cast and technicians of the film will be honoured during the occasion.

  • 'Mufti' To Release In Urvashi And Rex

    mufto to release in urvashi and rex

    Shivarajakumar-Murali starrer 'Mufti' being directed by debutante Narthan is all set to be release tomorrow in 400 all over India.

    One of the highlights is, the film will be releasing in Urvashi, Rex and other theaters in Bangalore. The theaters are known for other language films and now 'Mufti' will be releasing in those theaters. 

    'Mufti' is being written and directed by Narthan and is being produced by Jayanna and Bhogendra under Jayanna Films banner, Ravi Basrur is in charge of the music, while Naveen of 'Kabira' fame is the cinematographer of the film. The film stars Shivarajakumar, Murali, Sanvi Srivatsav and others in prominent roles.

  • Mufti And Kanaka To Clash At Box Office 

    mufti and kanaka clash

    Two big films are set to release on the same day after a long while. Multistarrer Mufti starring Shivarajkumar and Srimurali and Kanaka starring Duniya Vijay and directed by R Chandru are set to release on December 1. Sources confirmed that the makers of both the films have planned to release the films in the first week of December.

    The last time two big films released the same day was during last year's Deepavali when the multistarrer Mukunda Murari and Santu Straight Forward clashed. One year later there is all possibility of a repeat of such a clash. Both the films are awaiting clearance from Censor Board and cannot announce their dates before getting the certificate.

    But since they are big films preparations for release begins much earlier. Sources say release plans for December 1 is being worked out for both.

     

  • Mufti Audio On 12th November

    mufti image

    The songs of Shivarajakumar-Murali starrer 'Mufti' being directed by debutante Narthan is all set to be released on the 12th of November.

    The songs of the film is composed by Ravi Basrur'. This is the third time Ravi Basrur is composing music for Murali's film in a row after 'Ugram' and 'Rathavara'. 

    'Mufti' is being written and directed by Narthan and is being produced by Jayanna and Bhogendra under Jayanna Films banner. The film stars Shivarajakumar, Murali, Sanvi Srivatsav, Chaya Singh and others in prominent roles.

  • Mufti Censored U/A; Releasing On Dec 1st

    mufti censored

    Shivarajakumar-Murali starrer 'Mufti' being directed by debutante Narthan has been censored U/A and will be releasing on Dec 1st.

    The songs of the film is composed by Ravi Basrur'. This is the third time Ravi Basrur is composing music for Murali's film in a row after 'Ugram' and 'Rathavara'. 

    'Mufti' is being written and directed by Narthan and is being produced by Jayanna and Bhogendra under Jayanna Films banner. The film stars Shivarajakumar, Murali, Sanvi Srivatsav, Chaya Singh and others in prominent roles.

  • Mufti Reviw; Chitraloka Rating 3.5/5

    muftireview

    Mufti is a feast for the fans of Shivarajkumar and Srimurali. It is also a great film for the fans of Kannda films. Mufti is one of a rare kind of cinema where the routine effects of a commercial film are done away with. You get the black and white results with characters which have multiple shades of grey. Whom you think is the enemy turns out to be a friend. Who you think is an enemy may turn out to be your most loyal servant. The uncanny narrative, a story you cannot easily imagine and characterizations that are unusual makes Mufti a very rere kind of film. 

    Srimuruli plays a police officer in the film. But he is in mufti or undercover. He works undercover in the port area. But in the internal badlands of Ronapura there is a don whom the police is unable to even touch. Srimurali is assigned to go to Ronapura to bring down the don. He goes there undercover and joins the gang.

    Srimurali has to try very hard to get near the don. But in so many years only a few people have actually seen his face. How does he manage to crack the gang and get close to the don and gain information needed to trap him? Thus begins a cat and mouse game. The cop has to pledge his life to uncover the truth. But truth is stranger than fiction. He comes to know of things that surprises him. You can enjoy the rest of the story on screen. 

    Director Narthan has written an unusual story. He has also managed to give a narration that is quite unlike what you will see in many films. This is different in the real sense of the word. The highlights of the film are the cinematography by Naveen Kumar, music by Ravi Basrur and Narthan's direction. 

    There is brilliant acting by Shivanna and Srimurali. Shanvi Srivatsava has a small role and is only limited to the bit of romantic scenes and the comedy scenes involving Chikkanna and Sadhu Kokila. The film is a complete package that will warm the hearts of fans and give full entertainment to film lovers. 

  • Mufti To Release On December 1st

    srimurali movie image

    Shivarajakumar-Murali starrer 'Mufti' being directed by debutante Narthan is all set to be released on the 1st of December. 

    Earlier, there were confusions regarding which among the two Shivarajakumar starrer films will be released first. Now everything has been sorted out and 'Mufti' will be releasing first, while 'Tagaru' has been pushed to January next year.

    'Mufti' is being written and directed by Narthan and is being produced by Jayanna and Bhogendra under Jayanna Films banner, Ravi Basrur is in charge of the music, while Naveen of 'Kabira' fame is the cinematographer of the film. The film stars Shivarajakumar, Murali, Sanvi Srivatsav and others in prominent roles.

    Related Articles :-

    Mufti And Kanaka To Clash At Box Office 

    Sanvi Srivastav Is The Heroine Of Mufti

    Murali's New Film Titled Mufti

  • Murali Plays A Special Appearance In Raj-Vishnu

    murali in raj vishnu

    Actor Murali who is looking forward for the shooting of his new film 'Mufti', has silently played a special role in Sharan starrer Raj-Vishnu. Recently, Murali participated in the shooting of the film held in Mysore. Sharan, Chikkanna, senior artiste Srinivasamurthy and others were present at the occasion.

    'Raj-Vishnu' is the remake of Tamil hit 'Rajani Murugan' and stars Sharan, Chikkanna, Ambarish, Ravishankar and others in prominent roles. Marathi actress Vybhavi Shandilya has been roped in as the heroine for Sharan in the film. Ramu is producing the film, while K Madesh is the director.

    Also See

    Sanvi Srivastav Is The Heroine Of Mufti

    Murali's New Film Titled Mufti

    Vyabhi Shandilya is Sharan's Heroine in Raj-Vishnu

  • Raju Kannada Medium To Replace Mufti

    gurunandan in raju kannada medium

    Shivarajakumar-Murali starrer 'Mufti' has successfully completed 35 days run and is all set to complete 50 days soon. Meanwhile, Gurunandan starrer Raju Kannada Medium' will be replacing 'Mufti' once the film completes 50 days in Santhosh and other theaters in Karnataka. 'Raju Kannada Medium' is schedule to release on the 19th of January.

    'Raju KannadaMedium' film is being written and directed by Naresh Kumar who had earlier directed 'Ist Rank Raju'. Avantika Shetty, Angelina and Anusha are the heroines in this film. Actor Sudeep plays a guest role in the film.

    Kiran Ravindranath is the music director, while Shekhar Chandra is the cameraman. K Suresh who had earlier produced 'Shravani Subramanya', 'Shivalinga' and other films has produced the film.

  • Sanvi Srivastav Is The Heroine Of Mufti

    sanvi srivastav image

    Actress Sanvi Srivastav has been selected as the heroine for Murali starrer Mufti which is being directed by Narthan. The shooting has already been started and the team is off to Italy to shoot some major portions for the film.

    Mufti is being written and directed by Narthan and is being produced by Jayanna and Bhogendra under Jayanna Films banner, Ravi Basrur is in charge of the music, while Naveen of 'Kabira' fame is the cinematographer of the film.

    Shivarajakumar also plays an important role in the film.

  • ಜ.19ರ ಶುಕ್ರವಾರಕ್ಕೆ ಮಫ್ತಿ ಅರ್ಧಶತಕ

    mufti 50 days celebrations today

    ಬಾಕ್ಸಾಫೀಸ್‍ನಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಶಿವರಾಜ್ ಕುಮಾರ್, ಶ್ರೀಮುರಳಿ ಅಭಿನಯದ ಮಫ್ತಿ ಚಿತ್ರ ಅರ್ಧಶತಕ ಬಾರಿಸುತ್ತಿದೆ. ನರ್ತನ್ ನಿರ್ದೇಶನದ ಚಿತ್ರ, ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿರುವುದು ನಿಜ. ಹೀಗಾಗಿ ಅಭಿಮಾನಿಗಳೆಲ್ಲ ಸೇರಿ ಶುಕ್ರವಾರ ಶಿವರಾಜ್ ಕುಮಾರ್ ಮನೆಯಲ್ಲೇ ಸಂಭ್ರಮಿಸಲು ನಿರ್ಧರಿಸಿದ್ದಾರೆ.

    ನಿರ್ಮಾಪಕರಾದ ಜಯಣ್ಣ, ಭೋಗೇಂದ್ರ, ಶಿವರಾಜ್ ಕುಮಾರ್, ಶ್ರೀಮುರಳಿ, ಶಿವರಾಜ್ ಕುಮಾರ್ ಸೇನಾ ಸಮಿತಿ ಅಧ್ಯಕ್ಷ ಕೆ.ಪಿ.ಶ್ರೀಕಾಂತ್, ಗೌರವಾಧ್ಯಕ್ಷ ತ್ಯಾಗರಾಜ್, ರಾಜ್ಯಾಧ್ಯಕ್ಷ ಟಿ. ನಾರಾಯಣ್, ಎಂ. ಮಲ್ಲ, ಎಂ.ನಾಗರಾಜ್ ಸೇರಿದಂತೆ ಎಲ್ಲರೂ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಿದ್ಧಾರೆ. 

    ಇಡೀ ಸಂಭ್ರಮದ ಮೂಲ ಸೃಷ್ಟಿಕರ್ತರು ಅಖಿಲ ಕರ್ನಾಟಕ ಡಾ.ಶಿವರಾಜ್ ಕುಮಾರ್ ಸೇವಾ ಸಮಿತಿ ಹಾಗೂ ಗಂಡುಗಲಿ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಕಾರ್ಯಕರ್ತರು, ಶಿವಣ್ಣನ ಅಭಿಮಾನಿಗಳು.

  • ಡಿ.1ಕ್ಕೆ ಬರ್ತಾನೆ ಕನಕ. ಶಿವಣ್ಣ ಬಂದರೆ..?

    kanaka movie image

    `ಕನಕ'. ಆರ್. ಚಂದ್ರು ನಿರ್ಮಾಣ ಮತ್ತು ನಿರ್ದೇಶನದ, ದುನಿಯಾ ವಿಜಿ ಅಭಿನಯದ ಚಿತ್ರ ತೆರೆಗೆ ಬರೋಕೆ ಸಿದ್ಧವಾಗಿದೆ. ರಾಜ್ಯೋತ್ಸವಕ್ಕೆ ಅದ್ಧೂರಿ ಟ್ರೇಲರ್‍ನ್ನು ಉಡುಗೊರೆಯಾಗಿ ಕೊಟ್ಟಿದ್ದರು ಆರ್.ಚಂದ್ರು. ಡಾ. ರಾಜ್ ಅಭಿಮಾನಿ ಹಾಗೂ ಆಟೋ ಚಾಲಕನ ಪಾತ್ರದಲ್ಲಿರುವ ವಿಜಯ್ ಡೈಲಾಗ್ ಭಾರಿ ಸದ್ದು ಮಾಡಿತ್ತು. ಸಿನಿಮಾ ನೋಡಿದರೆ, ಚಪ್ಪಾಳೆ, ಶಿಳ್ಳೆ ಹೊಡೆಯುವಂತಹ ಸೀನ್‍ಗಳು ಹಲವಾರಿವೆ ಎನ್ನುವುದು ಚಂದ್ರು ಭರವಸೆ.

    ಅಂದಹಾಗೆ ತಮ್ಮ ಚಿತ್ರವನ್ನು ಡಿ.1ಕ್ಕೆ ತೆರೆಗೆ ತರುವುದಾಗಿ ಘೋಷಿಸಿದ್ದಾರೆ ಚಂದ್ರು. ಅದೇ ದಿನ ಮಫ್ತಿ ರಿಲೀಸ್ ಆಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಅದು ಇನ್ನೂ ಪಕ್ಕಾ ಆಗಿಲ್ಲ. ಮಫ್ತಿ ಕೂಡಾ ಅದೇ ದಿನ ಬಂದರೆ ಏನ್ ಮಾಡ್ತೀರಿ ಅನ್ನೋ ಪ್ರಶ್ನೆಗೆ ಚಂದ್ರು ಅಭಿಮಾನದ ಉತ್ತರ ಕೊಟ್ಟಿದ್ದಾರೆ.

    ನಾನು ಶಿವಣ್ಣನ ಅಭಿಮಾನಿ. ಮಫ್ತಿ ಚಿತ್ರ ಡಿ.1ರಂದೇ ರಿಲೀಸ್ ಆಗಲಿದೆ ಎನ್ನುವುದು ಕನ್‍ಫರ್ಮ್ ಆಗಿಲ್ಲ. ಅಕಸ್ಮಾತ್, ಮಫ್ತಿ ಅದೇ ದಿನಕ್ಕೆ ರಿಲೀಸ್ ಆಗಲಿದೆ ಎನ್ನುವುದು ಕನ್‍ಫರ್ಮ್ ಆದರೆ, ನಾನೇ ಒಂದು ವಾರ ಮುಂದಕ್ಕೆ  ಹೋಗುತ್ತೇನೆ ಎಂದಿದ್ದಾರೆ ಚಂದ್ರು. ಅದಕ್ಕೆ ಕಾರಣ, ಚಂದ್ರು ಕೂಡಾ ಶಿವಣ್ಣನ ಅಭಿಮಾನಿ.

  • ತೆಲುಗು ಮಫ್ತಿಯಲ್ಲಿ ಬಾಲಕೃಷ್ಣ..!

    mufti in telugu

    ಮಫ್ತಿ, ಇತ್ತೀಚೆಗಿನ ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ಅದರಲ್ಲಿಯೂ ಶಿವರಾಜ್ ಕುಮಾರ್, ಇಡೀ ಸಿನಿಮಾದಲ್ಲಿ ಕಣ್ಣುಗಳ ಮೂಲಕವೇ ಆಟವಾಡಿದ್ದರು. ಭೈರತಿ ರಣಗಲ್ಲು ಎಂಬ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿಬಿಟ್ಟಿದ್ದರು. ಈಗ ತೆಲುಗಿಗೆ ರೀಮೇಕ್ ಆಗುತ್ತಿರುವ ಮಫ್ತಿಯಲ್ಲಿ ಶಿವಣ್ಣ ಪಾತ್ರವನ್ನು ಬಾಲಕೃಷ್ಣ ಮಾಡಲಿದ್ದಾರಂತೆ.

    ತೆಲುಗು ರೀಮೇಕ್ ರೈಟ್ಸ್ ಈ ಹಿಂದೆಯೇ ಮಾರಾಟವಾಗಿದ್ದು, ಚಿತ್ರ ಟೇಕಾಫ್ ಆಗಿರಲಿಲ್ಲ. ತೆಲುಗು ಮಫ್ತಿಗೆ ಕನ್ನಡದಲ್ಲಿ ಕವಚ ಸಿನಿಮಾ ಮಾಡುತ್ತಿರುವ ನಿರ್ದೇಶಕ ಜಿವಿಆರ್ ವಾಸು, ನಿರ್ದೇಶಕರಾಗಲಿದ್ದಾರೆ ಎಂಬ ಮಾತುಗಳಿವೆ. ಶೀಘ್ರದಲ್ಲೇ ತೆಲುಗು ಮಫ್ತಿಯ ಕಂಪ್ಲೀಟ್ ಚಿತ್ರಣ ಸಿಗಲಿದೆ.

     

  • ಬೈರತಿ ರಣಗಲ್ ಸಿನಿಮಾಗೆ ಯೆಸ್ ಎಂದ ಶಿವಣ್ಣ

    ಬೈರತಿ ರಣಗಲ್ ಸಿನಿಮಾಗೆ ಯೆಸ್ ಎಂದ ಶಿವಣ್ಣ

    ಮಫ್ತಿ. ಶಿವಣ್ಣ ಅವರ ಕೆರಿಯರಿನಲ್ಲಿ ವಿಭಿನ್ನ ಸಿನಿಮಾ. ಡೈಲಾಗುಗಳಿಲ್ಲದೆ.. ಕಣ್ಣಲ್ಲೇ ಅಭಿಮಾನಿಗಳನ್ನು ಗೆದ್ದಿದ್ದರು ಶಿವಣ್ಣ. ಶ್ರೀಮುರಳಿ ಹೀರೋ ಆಗಿದ್ದರೂ ಶಿವಣ್ಣ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದರು. ನರ್ತನ್ ನಿರ್ದೇಶನದ ಚಿತ್ರ ಭರ್ಜರಿ ಹಿಟ್ ಆಗಿತ್ತು. 2017ರಲ್ಲಿ ಬಂದಿದ್ದ ಸಿನಿಮಾ ತಮಿಳಿಗೆ ರೀಮೇಕ್ ಕೂಡಾ ಆಗಿದೆ. ಭೈರತಿ ರಣಗಲ್ ಹೆಸರಿನಲ್ಲಿ ಚಿತ್ರ ಮಾಡುವ ಬಗ್ಗೆ ಹಲವು ಬಾರಿ ಕೇಳಿ ಬಂದಿತ್ತಾದರೂ ಹೆಸರು ಹೇಳುವಷ್ಟಕ್ಕೆ ಮಾತ್ರವೇ ಸೀಮಿತವಾಗಿತ್ತು. ಈಗ ಅದು ಅಧಿಕೃತವಾಗಿದೆ. ಇತ್ತೀಚೆಗೆ ವೇದ ಚಿತ್ರವನ್ನು ತೆಲುಗುನಲ್ಲಿ ರಿಲೀಸ ಮಾಡುವ ಮುನ್ನ ನಡೆದ ಈವೆಂಟ್‍ನಲ್ಲಿ ಸ್ವತಃ ಶಿವರಾಜ್ ಕುಮಾರ್ ಅವರೇ ಈ ವಿಷಯ ಹೇಳಿಕೊಂಡಿದ್ದಾರೆ.

    ನರ್ತನ್ ಕಥೆ ಹೇಳಿದ್ದಾರೆ. ಕಥೆ ಚೆನ್ನಾಗಿ ಮೂಡಿ ಬಂದಿದೆ. ಇದು ಸೀಕ್ವೆಲ್ ಅಲ್ಲ. ಪ್ರೀಕ್ವೆಲ್. ಬೈರತಿ ರಣಗಲ್ ಯಾಕೆ ಬದಲಾದ? ಯಾವ ಕಾರಣಕ್ಕೆ ಅಪರಾಧ ಜಗತ್ತಿನ ದೊರೆಯಾದ ಎಂಬುದರ ಸುತ್ತ ಕಥೆ ಇದೆ. ಸ್ಕ್ರಿಪ್ಟ್ ಲಾಕ್ ಆಗಿದೆ ಎಂದು ಹೇಳಿಕೊಂಡಿದ್ದಾರೆ ಶಿವಣ್ಣ. ಮಫ್ತಿ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಬೈರತಿ ರಣಗಲ್ ಪಾತ್ರ ಜೈಲಿಗೆ ಹೋಗುತ್ತೆ. ಜೈಲಿನಲ್ಲಿರು ದೃಶ್ಯದೊಂದಿಗೇ ಚಿತ್ರ ಮುಗಿಯುತ್ತೆ. ಅಲ್ಲಿಂದ ಶುರುವಾಗುವ ಕಥೆ ಬೈರತಿ ರಣಗಲ್ ಹೇಗೆ ಉದ್ಭವವಾದ ಅನ್ನೋ ಕಥೆಯನ್ನ ಹೊಸ ಚಿತ್ರದಲ್ಲಿ ಹೇಳುವ ಪ್ರಯತ್ನ ಚಿತ್ರತಂಡದ್ದು.

    ಚಿತ್ರ ಈಗಲೇ ಶುರುವಾಗುತ್ತಾ? ಸಾಧ್ಯವಿಲ್ಲ. ಸದ್ಯಕ್ಕೆ ಶಿವಣ್ಣ ಸಿಕ್ಕಾಪಟ್ಟೆ ಅಂದ್ರೆ ಸಿಕ್ಕಾಪಟ್ಟೆ ಬ್ಯುಸಿ. ಯೋಗರಾಜ್ ಭಟ್ಟರ ಕರಟಕ ದಮನಕ, ಶ್ರೀನಿ ನಿರ್ದೇಶನದ ಘೋಸ್ಟ್, ರಜನಿಕಾಂತ್ ಜೊತೆಗಿನ ಜೈಲರ್, ವಿಶಾಲ್ ಜೊತೆಗಿನ ಕ್ಯಾಪ್ಟನ್ ಮಿಲ್ಲರ್ ಸದ್ಯಕ್ಕೆ ಫ್ಲೋರ್ ಮೇಲಿರುವ ಚಿತ್ರಗಳು.

    ಇನ್ನು ನೀ ಸಿಗೋವರೆಗೂ.. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅರ್ಜುನ್ ಜನ್ಯ ಜೊತೆ 45 ಚಿತ್ರ ಟೇಕಾಫ್ ಆಗಬೇಕಿದೆ. ಅಶ್ವತ್ಥಾಮ, ಸತ್ಯಮಂಗಲ. ಎಸ್.ಆರ್.ಕೆ., ಆರ್.ಡಿ.ಎಕ್ಸ್. ಚಿತ್ರಗಳು ಘೋಷಣೆಯಾಗಿವೆ. ಟೈಟಲ್ ಇಡದ ಚಿತ್ರಗಳೂ ಲಿಸ್ಟಿನಲ್ಲಿವೆ. ಇವೆಲ್ಲದರ ಮಧ್ಯೆ ಮಫ್ತಿ 2 ಚಿತ್ರದ ಕಥೆ ಲಾಕ್ ಆಗಿದೆ. ಅಂದಹಾಗೆ ಮಫ್ತಿ ಚಿತ್ರದ ಪ್ರೀಕ್ವೆಲ್`ಗೂ ಜಯಣ್ಣ-ಭೋಗೇಂದ್ರ ಅವರೇ ನಿರ್ಮಾಪಕರಾಗ್ತಾರಾ? ಗೊತ್ತಿಲ್ಲ. ಕೆ.ಪಿ.ಶ್ರೀಕಾಂತ್ ಕೂಡಾ ಉತ್ಸಾಹದಲ್ಲಿದ್ದಾರೆ. ಫೈನಲ್ ಆಗುವುದಕ್ಕೆ ಸ್ವಲ್ಪ ಸಮಯ ಬೇಕು.

  • ಭೈರತಿ ರಣಗಲ್ ಪಾತ್ರದಲ್ಲಿ ಸಿಂಬು

    mufti remkae in tamil

    ಕನ್ನಡದ ಸೂಪರ್ ಹಿಟ್ ಸಿನಿಮಾ ಮಫ್ತಿ, ತಮಿಳಿಗೆ ರೀಮೇಕ್ ಆಗುತ್ತಿದೆ. ಮಫ್ತಿಯ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ನರ್ತನ್ ಅವರೇ, ತಮಿಳಿನಲ್ಲೂ ಡೈರೆಕ್ಟ್ ಮಾಡುತ್ತಿದ್ದಾರೆ. ಆರ್ಡಿನರಿ ಲುಂಗಿಯ ಕಾಸ್ಟ್ಯೂಮ್, ಬೆಂಕಿ ಕಾರುವ ಕಣ್ಣುಗಳ ಮೂಲಕವೇ ಚಿತ್ರವನ್ನು ಆವರಿಸಿಕೊಂಡಿದ್ದರು ಶಿವಣ್ಣ. ಶಿವರಾಜ್‍ಕುಮಾರ್‍ಗೆ ಸರಿಸಾಟಿಯಾಗಿ ಅಭಿನಯಿಸಿ ಗೆದ್ದಿದ್ದರು ಶ್ರೀಮುರಳಿ. ಹಲವು ವರ್ಷಗಳ ನಂತರ ದೇವರಾಜ್, ಮತ್ತೊಮ್ಮೆ ಖಳನಟನಾಗಿ ಅಬ್ಬರಿಸಿದ್ದರು.

    ತಮಿಳಿನಲ್ಲಿ ಸಿದ್ಧವಾಗುತ್ತಿರುವ ಮಫ್ತಿ ರೀಮೇಕ್‍ಗೆ ವೇದಿಕೆ ಸಿದ್ಧವಾಗಿದೆ. ಭೈರತಿ ರಣಗಲ್ ಪಾತ್ರದಲ್ಲಿ ಸಿಂಬು ನಟಿಸುತ್ತಿದ್ದಾರೆ. ಶ್ರೀಮುರಳಿ ರೋಲ್‍ನಲ್ಲಿ ಗೌತಮ್ ಕಾರ್ತಿಕ್ ನಟಿಸುತ್ತಿದ್ದಾರೆ. ಮಫ್ತಿಗೆ ಅದ್ಭುತ ಕ್ಯಾಮೆರಾ ವರ್ಕ್ ಮಾಡಿದ್ದ ನವೀನ್ ಕುಮಾರ್ ಅವರೇ, ತಮಿಳಿನಲ್ಲೂ ಕ್ಯಾಮೆರಾಮನ್. ತೆಲುಗು ರೈಟ್ಸ್ ಕೂಡಾ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದು, ಶೀಘ್ರದಲ್ಲೆ ತೆಲುಗಿನಲ್ಲೂ ಸಿನಿಮಾ ಟೇಕಾಫ್ ಆಗಲಿದೆ.

  • ಭೈರತಿ ರಣಗಲ್ಲು ಪಾತ್ರ ಸೃಷ್ಟಿಯಾಗಿದ್ದು ಹೇಗೆ..?

    story behinf byrathi ranagallu

    ಭೈರತಿ ರಣಗಲ್ಲು. ಶಿವಣ್ಣ ತಮ್ಮ ಚಿತ್ರಜೀವನದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದು ಬಹುಶಃ ಇದೇ ಮೊದಲಿರಬೇಕು. ರೌಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರಾದರೂ, ಅವುಗಳಲ್ಲಿ ಶಿವರಾಜ್ ಕುಮಾರ್ ಹೀರೋ ಆಗಿದ್ದರು ಅನ್ನೋದು ವಿಶೇಷ. ಆದರೆ, ಮಫ್ತಿ ಹಾಗಲ್ಲ. ಶಿವರಾಜ್ ಕುಮಾರ್ ವಿಲನ್. ಆದರೆ, ಒಳ್ಳೆಯ ವಿಲನ್, ಅಷ್ಟೆ.

    ಚಿತ್ರದ ಕಥೆ ಹಾಗೂ ಚಿತ್ರಕಥೆ ಬರೆಯುವಾಗ, ಭೈರತಿ ರಣಗಲ್ಲು ಪಾತ್ರಕ್ಕೆ ಕಣ್ಣುಗಳಲ್ಲೇ ಅಭಿನಯಿಸಬಲ್ಲ, ಕಣ್ಣಿನಲ್ಲೇ ಪವರ್ ಇರುವ ನಟ ಬೇಕು ಎನಿಸಿತು. ಆ ನಂತರ ನನ್ನ ಕಣ್ಣ ಮುಂದೆ ಬಂದಿದ್ದು ಶಿವರಾಜ್ ಕುಮಾರ್ ಮಾತ್ರ. ನನ್ನ ಅದೃಷ್ಟ, ಕಥೆ ಕೇಳಿದ ತಕ್ಷಣ ಒಪ್ಪಿಕೊಂಡುಬಿಟ್ಟರು ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ನರ್ತನ್.

    ವಿಲನ್ ಒಳ್ಳೆಯವನಾದರೆ, ಜನ ಬೇಗ ಒಪ್ಪಿಕೊಳ್ಳಲ್ಲ. ಆದರೆ ಹೀರೋ ವಿಲನ್ ಆಗಿ ನಟಿಸಿ, ನಂತರ ಒಳ್ಳೆಯವನಾಗಿ ಬದಲಾದರೆ, ಅದು ಜನರಿಗೆ ಇಷ್ಟವಾಗುತ್ತೆ. ಹೀಗಾಗಿಯೇ ಆ ಪಾತ್ರಕ್ಕೆ ಶಿವಣ್ಣ ಅವರನ್ನು ಆಯ್ಕೆ ಮಾಡಿಕೊಂಡೆವು ಎಂದಿದ್ದಾರೆ ನರ್ತನ್.

  • ಮಫ್ತಿಯ ಮಹಾ ರಹಸ್ಯ ಏನು..?

    mufti movie image

    ಮಫ್ತಿ. ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಕಾಂಬಿನೇಷನ್‍ನ ಚಿತ್ರ ಹೆಸರು, ಟ್ರೇಲರ್‍ನಿಂದಲೇ ಸದ್ದು ಮಾಡಿದ ಚಿತ್ರ. ಆ ಚಿತ್ರದ ಕಥೆಯೇನು..? ಅದೇ ದೊಡ್ಡ ರಹಸ್ಯ. ಮೇಲ್ನೋಟಕ್ಕೆ ಅದು ಉಗ್ರಂ, ರಥಾವರ ಚಿತ್ರದಂತೆ ಕಂಡರೂ, ಇದು ಅದಲ್ಲ ಎನ್ನಿಸಿಬಿಡುತ್ತೆ. 

    ಮಫ್ತಿ ಎಂದರೆ ಪೊಲೀಸ್ ಭಾಷೆಯಲ್ಲಿ ಅಂಡರ್ ಕವರ್ ಅಂತಾ. ಈ ಚಿತ್ರದಲ್ಲಿ ಮಫ್ತಿಯಲ್ಲಿ ಇರೋವ್ರು ಯಾರು..? ಡಾನ್ ಯಾರು..? ಅನ್ನೋದೇ ಅಸಲಿ ಕಥೆ. ಪ್ರತಿಯೊಬ್ಬನಲ್ಲೂ ಎರಡು ಮುಖಗಳಿರುತ್ತವೆ. ರಾಮ ಹಾಗೂ ರಾವಣ ಒಬ್ಬನಲ್ಲೇ ಇರುತ್ತಾನೆ. ಅವರಿಗೆ, ಅವರು ಮಾಡುತ್ತಿರುವುದು ಸರಿಯಾಗಿಯೇ ಕಾಣುತ್ತೆ. ಈ ಭಾವನೆಗಳ ಜೊತೆ ಜೊತೆಯಲ್ಲಿಯೇ ಚಿತ್ರದ ಕಥೆ ಸಾಗಲಿದೆ.

    ಹಾಗಾದರೆ, ಪೊಲೀಸ್ ಯಾರು..? ಡಾನ್ ಯಾರು..? ಶಿವರಾಜ್ ಕುಮಾರ್ ಅಥವಾ ಶ್ರೀಮುರಳಿ. ಕುತೂಹಲಕ್ಕೆ ಉತ್ತರ ಬೇಕೆಂದರೆ, ಚಿತ್ರಮಂದಿರಕ್ಕೇ ಹೋಗಿ ನೋಡಿ. 

    ಸಿನಿಮಾ ದಾಖಲೆಯೆಂಬಂತೆ ಸುಮಾರು 400 ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಜಯಣ್ಣ ಭೋಗೇಂದ್ರ ಜೋಡಿಯ ಈ ಚಿತ್ರಕ್ಕೆ ನಿರ್ದೇಶಕರು ಹೊಸಬರು. ನಿರ್ದೇಶಕ  ನರ್ತನ್‍ಗೆ ಇದು ಮೊದಲ ಚಿತ್ರ, ಮೊದಲ ಚಿತ್ರದಲ್ಲೇ ಸ್ಟಾರ್‍ಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ನರ್ತನ್, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

     

  • ವಿಜಯ್‍ಗೆ ಹೊಟ್ಟೆಕಿಚ್ಚು ಹುಟ್ಟಿಸಿದ ಕನ್ನಡ ಸಿನಿಮಾ ಯಾವುದು..?

    vijay devarakinda at chamak audio rel

    ಅರ್ಜುನ್ ರೆಡ್ಡಿ ಚಿತ್ರದ ಮೂಲಕ ತೆಲುಗಿನಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿರುವ ವಿಜಯ್ ದೇವರಕೊಂಡ ಅವರಿಗೆ ಕನ್ನಡ, ಕರ್ನಾಟಕ ಎಂದರೆ ತುಂಬಾ ಇಷ್ಟವಂತೆ. ಚಮಕ್ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದ ವಿಜಯ್ ದೇವರಕೊಂಡ, ತಮ್ಮ ಕನ್ನಡ, ಕರ್ನಾಟಕ ಅಭಿಮಾನದ ಬಗ್ಗೆ ಹೇಳಿಕೊಂಡಿದ್ದಾರೆ.

    ಬೆಂಗಳೂರು ಎಂದರೆ ನೆನಪಾಗೋದು ಇಲ್ಲಿನ ಕ್ರಿಕೆಟರ್ಸ್. ಅದರಲ್ಲೂ ವೆಂಕಟೇಶ್ ಪ್ರಸಾದ್ ಎಂದರೆ ಬಹಳ ಇಷ್ಟ. ಸಿನಿಮಾ ವಿಚಾರಕ್ಕೆ ಬಂದರೆ, ಅವರು ಇತ್ತೀಚೆಗೆ ನೋಡಿದ ಕನ್ನಡ ಚಿತ್ರ ಮಫ್ತಿ. 

    ಮಫ್ತಿ ಸಿನಿಮಾ ನೋಡಿ ಹೊಟ್ಟೆಕಿಚ್ಚು ಶುರುವಾಯ್ತು. ಇಂಥಾ ಸಿನಿಮಾನ ನಾವು ಮಾಡಬೇಕು, ಇಲ್ಲವೆಂದರೆ ಇಂತಹ ಚಿತ್ರದಲ್ಲಿ ಪಾತ್ರವನ್ನಾದರೂ ಮಾಡಬೇಕು ಎಂಬ ಆಸೆಯಾಯಿತು. ಚಿತ್ರದ ಮೇಕಿಂಗ್ ಅಂತೂ ಅದ್ಭುತ ಎಂದು ಹೊಗಳಿದ್ದಾರೆ ವಿಜಯ್ ದೇವರಕೊಂಡ.

    ಚಮಕ್ ಆಡಿಯೋ ರಿಲೀಸ್‍ನಲ್ಲಿ ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಹಾಡಿನ ಪಲ್ಲವಿಯನ್ನೂ ಹಾಡಿದ ವಿಜಯ್, ಕಿರಿಕ್ ಪಾರ್ಟಿ ಸಿನಿಮಾವನ್ನೂ ನೋಡಿದ್ದಾರಂತೆ. ಆದರೆ, ಮಫ್ತಿ ಚಿತ್ರ ವಿಜಯ್‍ಗೆ ಥ್ರಿಲ್ ಮೂಡಿಸಿರುವುದು ನಿಜ.

  • ಶಿವಣ್ಣನಿಂದ ಶ್ರೀಮುರಳಿ ಕಲಿತ ಪಾಠವೇನು..?

    srimurali, shivanna in mufti

    ಮಫ್ತಿ, ಶಿವರಾಜ್ ಕುಮಾರ್ ಹಾಗೂ ಶ್ರೀಮುರಳಿ ಅಭಿನಯದ ಸಿನಿಮಾ. ಸಿನಿಮಾ ಥಿಯೇಟರ್‍ಗೆ ಬರಲು ಸಿದ್ಧವಾಗಿದೆ. ಒಂಟಿ ಸಲಗದಂತೆ ಶ್ರೀಮುರಳಿ ಕಾಣಿಸಿಕೊಂಡಿದ್ದರೆ, ಡಾನ್ ಗೆಟಪ್‍ನಲ್ಲಿದ್ದಾರೆ ಶಿವರಾಜ್ ಕುಮಾರ್. ಚಿತ್ರದ ಟ್ರೇಲರ್ ಮಾಮೂಲಿ ಸ್ಟೈಲ್‍ಗಿಂತ ಭಿನ್ನವಾಗಿದ್ದುದು ಇಡೀ ಚಿತ್ರರಂಗದ ಗಮನ ಸೆಳೆದಿತ್ತು.

    ಗಣೇಶ್, ಯಶ್,ರಕ್ಷಿತ್ ಶೆಟ್ಟಿ, ಚಿರಂಜೀವಿ ಸರ್ಜಾ ಸೇರಿದಂತೆ ಹಲವು ನಟರು, ಚಿತ್ರದ ಟ್ರೇಲರ್‍ಗೆ ಮೆಚ್ಚುಗೆ ಸೂಚಿಸಿದ್ದರು. ಚಿತ್ರದ ಶೂಟಿಂಗ್ ಅನುಭವ ಹೇಳಿಕೊಂಡಿರುವ ಮುರಳಿ, ಶಿವಣ್ಣ ಶೂಟಿಂಗ್‍ನಲ್ಲಿದ್ದಾಗ ನಿಂತ ಕಡೆ ನಿಲ್ಲೊದಿಲ್ಲ, ಕುಂತ ಕಡೆ ಕೂರೋದಿಲ್ಲ. ಸದಾ ಆ್ಯಕ್ಟಿವ್ ಇರುತ್ತಾರೆ. ಒಂದು ನಿಮಿಷವನ್ನೂ ವೇಸ್ಟ್ ಮಾಡಲ್ಲ ಎಂದಿದ್ದಾರೆ.

    ಅವರಿಗೆ ಹೋಲಿಸಿದ್ರೆ, ನಾವೇ ಸೋಮಾರಿಗಳು ಎಂದಿದ್ದಾರೆ ಶ್ರೀಮುರಳಿ. ಸಿನಿಮಾ ಸೂಪರ್ ಆಗಿ ಮೂಡಿಬಂದಿದೆ. ಉಗ್ರಂನಂತೆಯೇ ಇದೂ ಕೂಡಾ ಡಿಫರೆಂಟ್ ಅನುಭವ ನೀಡಲಿದೆ ಎಂಬ ಭರವಸೆಯಲ್ಲಿದ್ದಾರೆ ಶ್ರೀಮುರಳಿ.