` mass leader - chitraloka.com | Kannada Movie News, Reviews | Image

mass leader

  • ಶಿವಣ್ಣನ ಮಾಸ್‍ಲೀಡರ್‍ಗೆ ಮೊದಲ ಪ್ರೇಕ್ಷಕರಾದ ಕಿಚ್ಚ ಸುದೀಪ್ 

    sudeep becomes first audience for mass leader

    ಕಿಚ್ಚ ಸುದೀಪ್ ಸುಮ್ಮನೆ ಕೂರುವವರೇ ಅಲ್ಲ. ಏನಾದರೊಂದು ಮಾಡುತ್ತಲೇ ಇರುತ್ತಾರೆ. ಅವರಿಗೆ ಇಷ್ಟವಾಗಬೇಕಷ್ಟೆ. ಈಗಲೂ ಅಷಞÉ್ಟ. ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದ ಟ್ರೇಲರ್ ಮತ್ತು ಶಿವಣ್ಣನ ಲುಕ್ ಸುದೀಪ್‍ಗೆ ಇಷ್ಟವಾಗಿದೆ. ಇಷ್ಟವಾದ ನಂತರ ತಡ ಮಾಡಿಲ್ಲ. ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಿಯೇಬಿಟ್ಟಿದ್ದಾರೆ. ತಮ್ಮ ಮನೆಯಲ್ಲೇ. 

    ಸುದೀಪ್ ಮನೆಯಲ್ಲಿ ಮಾಸ್ ಲೀಡರ್ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಿರುವ ಸುದೀಪ್, ಚಿತ್ರವನ್ನು ನೋಡೋಕೆ ಶಿವರಾಜ್ ಕುಮಾರ್ ಅವರನ್ನೂ ಆಹ್ವಾನಿಸಿದ್ರು. ಪತ್ನಿ ಗೀತಾ ಜೊತೆ ಸುದೀಪ್ ಮನೆಯಲ್ಲಿ ತಮ್ಮದೇ ಸಿನಿಮಾ ನೋಡಿದರು ಶಿವರಾಜ್ ಕುಮಾರ್.

    ಅಪ್ಪ ಹೇಗೋ.. ಸುದೀಪ್ ಕೂಡಾ ಹಾಗೆ.. - ಶಿವಣ್ಣ

    ಸುದೀಪ್ ನನಗೆ ಸಹೋದರನಿದ್ದ ಹಾಗೆ. ಅಪ್ಪು ಹೇಗೋ, ಸುದೀಪ್ ಕೂಡಾ ಹಾಗೆ. ಆಗಾಗ್ಗೆ ಬರುತ್ತಲೇ ಇರುತ್ತೇವೆ. ಇದೇನೂ ಹೊಸದಲ್ಲ ಎಂದರು ಶಿವರಾಜ್ ಕುಮಾರ್. ಸುದೀಪ್ ಫೋನ್ ಮಾಡಿ ಸಿನಿಮಾ ನೋಡಬೇಕು ಎಂದಿದ್ದು ಸಂತೋಷವಾಯಿತು ಎಂದಿದ್ದಾರೆ ಶಿವಣ್ಣ.

    ಗೀತಕ್ಕಂಗೆ ಸ್ಪೆಷಲ್ ಥ್ಯಾಂಕ್ಸ್ - ಸುದೀಪ್

    ಶಿವಣ್ಣ ಸಿನಿಮಾವನ್ನು ನನ್ನ ಮನೆಯಲ್ಲಿ ನೋಡಿದ್ದು ತುಂಬಾ ಖುಷಿ ಕೊಟ್ಟಿದೆ.ಇದಕ್ಕೆಲ್ಲ ಕಾರಣ ಗೀತಕ್ಕ. ಗೀತಕ್ಕಂಗೆ ಸ್ಪೆಷಲ್ ಥ್ಯಾಂಕ್ಸ್ ಎಂದರು ಸುದೀಪ್.

    ದಿ ವಿಲನ್ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿರುವ ಶಿವರಾಜ್ ಕುಮಾರ್ ಮತ್ತು ಸುದೀಪ್ ಸ್ನೇಹ ಸಂಬಂಧ, ಚಿತ್ರರಂಗಕ್ಕೂ ಖುಷಿ...ಅಭಿಮಾನಿಗಳಿಗೂ ಖುಷಿ..