` mahasathi - chitraloka.com | Kannada Movie News, Reviews | Image

mahasathi

 • Shruthi To Introduce Characters In Mahasathi

  shruthi image

  Actress Shruthi who won the third season of Big Boss is all set to play an anchor or ambassador in a new serial called Mahasathi which is being directed by actor-director Sunil Puranik. Mahasathi is a new serial being launched in the Udaya TV from today evening and Shruthi will be introducing the main characters of the serial for the next one week. The serial will be shot in Uttara Karnataka completely.

  The serial is based on a real incident which occurred in Dharwad a few years back and the serial tells a story of widow remarriage. Yashwanth Sardeshapande, Malathi Sardeshapande and others play prominent roles in this serial

 • ಅನುಭವ.. ನನಗೂ ಬೇಕು..ನನಗೂ ಬೇಕು

  anubhava title fight

  ಅನುಭವ ಎಂದರೆ ಕಾಶೀನಾಥ್ ನೆನಪಿಗೆ ಬರುತ್ತಾರೆ. ಅಭಿನಯ, ಉಮಾಶ್ರೀ ಥಟ್ಟನೆ ನೆನಪಾಗುತ್ತಾರೆ. ಆದರೆ, ಈಗ ಅನುಭವ ನೆನಪಿಸಿಕೊಳ್ತಾ ಇರೋದು ಚಿತ್ರರಂಗದ ಹಲವು ನಿರ್ದೇಶಕರು. ಅದೇ ಹೆಸರಲ್ಲಿ ಚಿತ್ರ ಮಾಡೋಕೆ ಹೊರಟವರಿಗೆ ಈಗ ಅನುಭವ ಕಾಡುತ್ತಿದೆ.

  ಇತ್ತೀಚೆಗಷ್ಟೇ ನೀನಾಸಂ ಸತೀಶ್ ಅನುಭವ-2 ಹೆಸರಲ್ಲಿ ಚಿತ್ರ ಮಾಡ್ತಾರೆ ಅನ್ನೋದು ಸುದ್ದಿಯಾಗಿತ್ತು. ನಾಯಕಿ ಸಿಂಧು ಲೋಕನಾಥ್. ಉದಯ್ ಮೆಹ್ತಾ ನಿರ್ಮಾಪಕ ಅನ್ನೋ ಸುದ್ದಿ ಬಂದಿತ್ತು. ಆದರೆ ಸಮಸ್ಯೆಯಾಗಿದ್ದು ಟೈಟಲ್‍ನದ್ದು. ಏಕೆಂದರೆ, ಅನುಭವ ಟೈಟಲ್ ಇರೋದು ನಿರ್ಭಯ್ ಚಕ್ರವರ್ತಿ ಎಂಬುವರ ಬಳಿ.

  ನಿರ್ಭಯ್ ಚಕ್ರವರ್ತಿ ಈಗ ವಿಜಯಾದಿತ್ಯ ಅನ್ನೋ ಸಿನಿಮಾ ಮಾಡ್ತಿದ್ದಾರೆ. ಅದಾದ ಮೇಲೆ ಅನುಭವ-2 ಸಿನಿಮಾವನ್ನ ಕೈಗೆತ್ತಿಕೊಳ್ಳಲಿದ್ದಾರೆ. ಅದಕ್ಕೂ, ಕಾಶೀನಾಥ್‍ರ ಅನುಭವ ಚಿತ್ರಕ್ಕೂ ಸಂಬಂಧ ಇರೋದಿಲ್ಲ. 

  ಹೀಗಾಗಿ ನೀನಾಸಂ ಚಿತ್ರಕ್ಕೆ ಮೊದಲ ಅನುಭವ ಅನ್ನೋ ಹೆಸರಿಡುವ ಚಾನ್ಸ್ ಇದೆ. 

  ಇದು ನೀನಾಸಂ ಕಥೆಯಾದರೆ, ತರ್ಲೆ ನನ್ಮಕ್ಳು ಚಿತ್ರ ಮಾಡಿದ್ದ ರಾಕಿ ಅನ್ನೋ ನಿರ್ದೇಶಕ ಎರಡನೇ ಅನುಭವ ಅನ್ನೋ ಹೆಸರಿನ ಚಿತ್ರಕ್ಕೆ ರೆಡಿಯಾಗ್ತಿದ್ದಾರಂತೆ. ಅದಕ್ಕೆ ಶುಭಾ ಪೂಂಜಾ ನಾಯಕಿಯಂತೆ.

  ಅನುಭವ ಯಾರಿಗೆ ಸಿಗುತ್ತೋ ಏನೋ..

   

 • ಐ ಲವ್ ಅಯೋಗ್ಯ

  ninasam sathish loves ayogya

  ಅಯೋಗ್ಯ ಅಂದ್ರೆ ಏನು..? ಒಂದು ಸಿನಿಮಾಗೆ ಆ ಹೆಸರು ಯಾಕಿಟ್ರು..? ಅದಕ್ಕೆ ನೀನಾಸಂ ಸತೀಶ್ ಕಾರಣ ಕೊಟ್ಟಿದ್ದಾರೆ. ಸರಿಯಾಗಿ ಕೆಲಸ ಮಾಡಿ, ತಿಂಗ್ಳಾ ತಿಂಗ್ಳು ಸಂಬಳ ತೆಗೆದುಕೊಳ್ಳೋವ್ರು ಯೋಗ್ಯರು. ಪಟ್ಟಾಂಗ ಹೊಡ್ಕೊಂಡು ತಿರುಗುವವರು ಅಯೋಗ್ಯರು. ಈ ಚಿತ್ರದಲ್ಲಿ ಅಯೋಗ್ಯ, ಚಿತ್ರದ ಹೀರೋ ನೀನಾಸಂ ಸತೀಶ್.

  ನಾನು ಮಂಡ್ಯ ಸ್ಟೈಲ್‍ನಲ್ಲಿ ಸಿನಿಮಾ ಮಾಡಿದಾಗಲೆಲ್ಲ ಗೆದ್ದಿದ್ದೇನೆ. ಜನ ಗೆಲ್ಲಿಸಿದ್ದಾರೆ. ಹೀಗಾಗಿ ಅಯೋಗ್ಯ ಚಿತ್ರ ಕೂಡಾ ಸ್ಪೆಷಲ್ ಆಗಿ ಇಷ್ಟವಾಗುತ್ತೆ. ರಚಿತಾ ರಾಮ್ ಮತ್ತು ನನ್ನ ಕಾಂಬಿನೇಷನ್‍ನ್ನು ಜನ ಖಂಡಿತಾ ಇಷ್ಟಪಡ್ತಾರೆ ಅನ್ನೋದು ಹೀರೋ ನೀನಾಸಂ ಸತೀಶ್ ಮಾತು.

  ಸಿನಿಮಾ ಮುಂದಿನ ವಾರ ರಿಲೀಸ್ ಆಗುತ್ತಿದೆ. ಸಿನಿಮಾ ರಿಲೀಸ್‍ಗೂ ಮುನ್ನ ಹಾಡುಗಳು ಹಿಟ್ ಆಗಿರುವುದು ಚಿತ್ರತಂಡದ ನಿರೀಕ್ಷೆ ಹೆಚ್ಚಿಸಿದೆ. ಮಹೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಬಂಡವಾಳ ಹೂಡಿರುವುದು ಚಂದ್ರಶೇಖರ್. ಸತತವಾಗಿ ಹಿಟ್ ಕೊಡುತ್ತಾ ಬಂದಿರುವ ಚಂದ್ರಶೇಖರ್, ಈ ಚಿತ್ರದಲ್ಲೂ ಗೆಲುವು ಎದುರು ನೋಡುತ್ತಿದ್ದಾರೆ.

 • ಭಟ್ಟರು ಸತೀಶ್ ಡಿಎನ್‍ಎ ಒಂದಾಯ್ತು..!

  ಭಟ್ಟರು ಸತೀಶ್ ಡಿಎನ್‍ಎ ಒಂದಾಯ್ತು..!

  ನೀನಾಸಂ ಸತೀಶ್ ಭಟ್ಟರ ಕ್ಯಾಂಪಿನ ಹುಡುಗರೇ. ಯೋಗರಾಜ್ ಭಟ್ಟರ ಚಿತ್ರಗಳಿಂದಲೇ ಹೀರೋ ಆದ ನೀನಾಸಂ ಸೀಶ್ ಈಗ ಸ್ಟಾರ್ ನಟ. ಅವರಿಬ್ಬರೂ ಈಗ ಇನ್ನೊಬ್ಬ ಹೊಸ ಪ್ರತಿಭೆಗಾಗಿ ಒಂದಾಗಿರುವುದೇ ಡಿಎನ್‍ಎ ವಿಶೇಷ.

  ಪ್ರಕಾಶ್ ಮೆಹು ರಾಜ್ ಎಂಬುವವರು ನಿರ್ದೇಶಿಸಿರುವ ಸಿನಿಮಾ ಡಿಎನ್‍ಎ. ಚಿತ್ರರಂಗದಲ್ಲಿ 25 ವರ್ಷ ಕೆಲಸ ಮಾಡಿದ ನಂತರ ಈಗ ನಿರ್ದೇಶಕರಾಗಿದ್ದಾರೆ. ಮಾತೃಶ್ರೀ ಬ್ಯಾನರಿನಲ್ಲಿ ಮೈಲಾರಿ ನಿರ್ಮಿಸಿರುವ ಚಿತ್ರದಲ್ಲಿ ಅಚ್ಯುತ್ ಕುಮಾರ್ ಅವರೇ ಹೀರೋ.  ಸಂಬಂಧಗಳ ಕುರಿತು ಇರುವ ಚಿತ್ರವಿದು ಎಂದಿದ್ದಾರೆ ಡೈರೆಕ್ಟರ್.

  ಅಂದಹಾಗೆ ಈ ಚಿತ್ರಕ್ಕೆ ಯೋಗರಾಜ್ ಭಟ್ ನಾವ್ಯಾರು.. ಎಲ್ಲಿಂದ ಬಂದಿದ್ದೀವಿ.. ನಾವ್ಯಾಕೆ ಸ್ವಾಮಿ.. ಹಿಂಗಿದ್ದೀವಿ..

  ಅನ್ನೋ ಹಾಡು ಬರೆದಿದ್ದಾರೆ. ಅವರದ್ದೇ ಸ್ಟೈಲಿನ ಫಿಲಾಸಫಿ ಸಾಹಿತ್ಯದ ಹಾಡು. ಈ ಹಾಡನ್ನು ಹಾಡಿರುವುದು ನೀನಾಸಂ ಸತೀಶ್ ಎನ್ನುವುದು ವಿಶೇಷ.

 • ಲವ್ ಇನ್ ಮಂಡ್ಯ ಜೋಡಿ ಕಮಿಂಗ್ ಬ್ಯಾಕ್

  love in mandya combination will be back soon

  ಲವ್ ಇನ್ ಮಂಡ್ಯ ಎಂದಕೂಡಲೇ ಕರೆಂಟು ಹೋದ ಟೈಮಲಿ.. ಹಾಡಿನ ರೋಮಾಂಚನ ನೆನಪಾಗುತ್ತದೆ. ನೀನಾಸಂ ಸತೀಶ್ ಮತ್ತು ಸಿಂಧು ಲೋಕನಾಥ್ ರಸಿಕರ ಎದೆಯಲ್ಲಿ ಬೆಂಕಿ ಹಚ್ಚಿದ್ದ ಹಾಡು ಅದು. ಆದರೆ, ಈಗ  ವಾಪಸ್ ಬರುತ್ತಿರುವುದು ಸತೀಶ್, ಸಿಂಧು ಜೋಡಿಯಲ್ಲ. ಅದೇ ಚಿತ್ರದ ನಿರ್ಮಾಪಕ, ಹೀರೋ ಕಾಂಬಿನೇಷನ್.

  ಉದಯ್ ಮೆಹ್ತಾ ಮತ್ತೊಮ್ಮೆ ನೀನಾಸಂ ಸತೀಶ್ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. 3 ವರ್ಷದ ನಂತರ. ಅದು ಕಾಮಿಡಿ ಜಾನರ್‍ನ ಫ್ಯಾಮಿಲಿ ಸಿನಿಮಾ. ನಿರ್ದೇಶಕರು ಇನ್ನೂ ಪಕ್ಕಾ ಆಗಿಲ್ಲ. ಏಪ್ರಿಲ್‍ನಲ್ಲಿ ಸಿನಿಮಾ ಶುರು ಎಂದಿದ್ದಾರೆ ನೀನಾಸಂ ಸತೀಶ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery