ಶ್ರೀಮುರಳಿ ಅಭಿನಯದ ಭರಾಟೆಗೆ ಅದೆಂಥಾ ಓಪನಿಂಗ್ ಕೊಡೋಕೆ ಅಭಿಮಾನಿಗಳು ಮುಂದಾಗಿದ್ದಾರೆ ಎಂದರೆ, ಊಹೆಗೂ ನಿಲುಕದ ರೀತಿಯಲ್ಲಿ. ಆ ದಿನ ಭರಾಟೆ ರಿಲೀಸ್ ಆಗುತ್ತಿದೆ. ಅದು ನಭೂತೋ ನಭವಿಷ್ಯತಿ ಎಂಬಂತೆ ಹಬ್ಬವಾಗುತ್ತಿದೆ. ಸುಮ್ಮನೆ ಅಂದಿನ ಭರಾಟೆ ಉತ್ಸವದ ವಿಶೇಷಗಳನ್ನೊಮ್ಮೆ ನೋಡಿ.
ಭರಾಟೆ ಉತ್ಸವ ಸ್ಪೆಷಲ್ ನಂ.1 :
ವೀರಗಾಸೆ, ಡೊಳ್ಳು ಕುಣಿತ, ನಗಾರಿ, ತಮಟೆಗಳ ಭರಾಟೆಯೊಂದಿಗೆ ಶ್ರೀಮುರಳಿಯನ್ನು ಹೂವಿನ ಸುರಿಮಳೆಯಲ್ಲಿ ನರ್ತಕಿ ಚಿತ್ರಮಂದಿರಕ್ಕೆ ಕರೆತರಲಾಗುವುದು
ಭರಾಟೆ ಉತ್ಸವ ಸ್ಪೆಷಲ್ ನಂ.2 :
ಪಟಾಕಿ, ಸಿಡಿಮದ್ದುಗಳು ಕಿವಿಗಡಚಿಕ್ಕುವಂತೆ ಸದ್ದು ಮಾಡಲಿವೆ
ಭರಾಟೆ ಉತ್ಸವ ಸ್ಪೆಷಲ್ ನಂ.3 :
ಸಿನಿಮಾ ನೋಡಲು ಬಂದ ಅಭಿಮಾನಿಗಳು ಊಟಕ್ಕೆ ಪರದಾಡಬೇಕಿಲ್ಲ. ಇಡೀ ದಿನ ಅನ್ನಸಂತರ್ಪಣೆ ಇದೆ.
ಭರಾಟೆ ಉತ್ಸವ ಸ್ಪೆಷಲ್ ನಂ.4 :
ಶ್ರೀಮುರಳಿಯವರ 82 ಅಡಿ ಕಟೌಟ್ ಮಾಡಲಾಗಿದೆ. ಅದಕ್ಕೆ ಭಾರಿ ಹೂವಿನ ಹಾರ ಹಾಕುವ ಕಾರ್ಯಕ್ರಮವೂ ಇದೆ.
ಭರಾಟೆ ಉತ್ಸವ ಸ್ಪೆಷಲ್ ನಂ.5 :
ಲಡ್ಡು, ಮೈಸೂರ್ ಪಾಕ್ ಸಿಹಿ ವಿತರಣೆ ಇದೆ
ಭರಾಟೆ ಉತ್ಸವ ಸ್ಪೆಷಲ್ ನಂ.6 :
ಶ್ರೀಮುರಳಿ, ಶ್ರೀಲೀಲಾ, ಭರ್ಜರಿ ಚೇತನ್ ಹಾಗೂ ನಿರ್ಮಾಪಕ ಸುಪ್ರೀತ್ ಅವರು 25 ಕೆಜಿ ತೂಕದ ಕೇಕ್ ಕಟ್ ಮಾಡಿ ಸಂಭ್ರಮಿಸಲಿದ್ದಾರೆ
ಇದೆಲ್ಲವೂ ಆ ದಿನ ಬೆಳಗ್ಗೆ 9ರಿಂದಲೇ ಶುರುವಾಗಲಿದೆ.