ಗೋಧಿ ಬಣ್ಣ ಸಾಧಾರಣ ಮೈಕಟ್ಟು.. ತನ್ನ ವಿಭಿನ್ನ ಟೈಟಲ್‍ನಿಂದಾಗಿಯೇ ಗಮನ ಸೆಳೆದಿದ್ದ ಚಿತ್ರ, ವಿಶಿಷ್ಟ ಕಥೆ, ಅನಂತ್‍ನಾಗ್, ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್ ಅವರ ಅಭಿನಯ, ಹೇಮಂತ್ ರಾವ್ ಅವರ ಅಚ್ಚುಕಟ್ಟಾದ ನಿರ್ದೇಶನದಿಂದ ಕನ್ನಡಿಗರ ಮನ ಗೆದ್ದಿತ್ತು. ಹೀಗೆ ಕನ್ನಡಿಗರ ಮನಗೆದ್ದಿದ್ದ ಚಿತ್ರ, ಈಗ ಬಾಲಿವುಡ್‍ಗೆ ಹೊರಟಿದೆ.
ಸುಮಾರು ದಿನಗಳಿಂದ ಮಾತುಕತೆ ನಡೆಯುತ್ತಿತ್ತು. ಈಗ ಫೈನಲ್ ಆಗಿದೆ. ಕನ್ನಡದ ಚಿತ್ರವೊಂದು ಹಿಂದಿಗೆ ರೀಮೇಕ್ ಆಗಲಿದೆ. ನನ್ನ ಚಿತ್ರವೇ ರೀಮೇಕ್ ಆಗಲಿದೆ ಎನ್ನುವುದು ಹೆಮ್ಮೆಯ ವಿಚಾರ ಎಂದು ಖುಷಿ ಹಂಚಿಕೊಂಡಿದ್ದಾರೆ ಹೇಮಂತ್ ರಾವ್.
ಗೋಧಿಬಣ್ಣದ ನಿರ್ಮಾಪಕರಾದ ಪುಷ್ಕರ್, ರಕ್ಷಿತ್ ಶೆಟ್ಟಿ ಎಲ್ಲರೂ ಗೋಧಿ ಬಣ್ಣಕ್ಕೆ ಸಿಕ್ಕ ಮನ್ನಣೆ ನೋಡಿ ಖುಷಿಗೊಂಡಿದ್ದಾರೆ. ಹಿಂದಿಯಲ್ಲಿ ತಯಾರಾಗುತ್ತಿರುವ ಗೋಧಿ ಬಣ್ಣದ ತಾರಾಬಳಗ, ತಂತ್ರಜ್ಞರ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ.