` TN seetharam - chitraloka.com | Kannada Movie News, Reviews | Image

TN seetharam

 • Kaafi Thota Releasing On August 18th

  kaafi thota releasing on aug 18th

  TN Seetharam's most anticipated movie 'Kaafi Thota' is all set to release on August 18th. Kaafi Thota is TN Seetharam has directed this movie after 10 years.

  'Coffee Thota' stars Raghu Mukherjee, Radhika Chethan, Samyuktha Hornad, B C Patil, Achyuth Kumar, Sudha Belawadi, Sundarraj, Hanumanthegowda and others in prominent roles. Ashok Kashyap is the cameraman of the film, while Mithun Mukundan and Anup Seelin has composed the music for the film.

  The film is being produced under the Manvanthara Chitra banner.

 • Kaafi Thota Teaser Today

  kaafi thota image

  The teaser of TN Seetharam directed film Kaafi Thota will be released at 5 pm today. Real Star Upendra and writer-journalist Jogi will be releasing the teaser. The  movie is expected to release on August 18th.

  The film stars Raghu Mukherjee, Radhika Chetan, Samyukta Hornad among others. The audio of the film released in April and is one of the most successful film albums of the year with the songs having already become super hits.

 • Raghu, Samyukta And Radhika Chethan In Kabandha

  tn seetharaman image

  Well known actor-director T N Seetharam who has carved a niche for himself in the small screen is all set to make a comeback to big screen almost a decade after. T N Seetharam had directed 'Meera Madhava Raghava' almost ten years back and is planning to do a film tentatively titled 'Kabandha'.

  The new film stars Raghu Mukherjee, Samyukta Hornad and Radhika Chethan in prominent roles and TNS who is fondly known as in filmi and small screen circuit is on the lookout for other artistes and technicians.

  TNS has given a hint that the film will be a crowd funding film. More details about the film are still awaited.

 • T N Seetharam And Yogaraj Bhatt To Do A Film Together - Exclusive

  yograj bhatt, t n seetharam image

  Well known actor-director T N Seetharam who has carved a niche for himself in the small screen is all set to make a comeback to big screen almost a decade after. T N Seetharam had directed 'Meera Madhava Raghava' almost ten years back and was waiting for a come back.

  Now the actor-director has written in the face book page that he will be back with a new film. Though TNS has not divulged any news about his directorial film, he has written that he himself has written the story, while Yogaraj Bhatt is in charge of the screenplay. The film will be about marriage, divorce and court case.

  TNS has given a hit that the film will be a crowd funding film as he and his team has not much money to produce a film.

  More details about the film are still awaited.

 • ಒಂದು ಕಪ್ ಕಾಫಿಯಲ್ಲಿದೆ ಕಾಫಿತೋಟದ ಥ್ರಿಲ್..!

  coffee thota movie image

  ಸೀತಾರಾಮ್ ಧಾರಾವಾಹಿಗಳಲ್ಲಿ ಅಪರಾಧಗಳು ಮತ್ತು ಅವುಗಳನ್ನು ಅವರು ಬಿಚ್ಚಿ ಇಡುವ ಸ್ಟೈಲ್, ವೀಕ್ಷಕರ ತಲೆಗೂ ಕೆಲಸ ಕೊಡುತ್ತಿತ್ತು. ಅದರಲ್ಲೂ ಕೋರ್ಟ್ ಸೀನ್​ಗಳಲ್ಲಿ ಸೀತಾರಾಮ್​ ಅಪರಾಧಗಳ ನಿಗೂಢತೆಯನ್ನು ಬಿಚ್ಚಿಡುತ್ತಿದ್ದ ಶೈಲಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಆ ಅನುಭವವೇ ಈಗ ಕಾಫಿತೋಟ ಸಿನಿಮಾ ಆಗಿದೆ.

  ಚಿತ್ರ ಇದೇ ಆಗಸ್ಟ್ 18ಕ್ಕೆ ಬರುತ್ತಿದೆ. ಕಾಫಿತೋಟದ ಓನರ್ ರಾಧಿಕಾ ಚೇತನ್. ರಂಗಿತರಂಗ ಖ್ಯಾತಿಯ ನಾಯಕಿ. ಹೀರೋ ಸವಾರಿ ಖ್ಯಾತಿಯ ರಘು ಮುಖರ್ಜಿ. ಸಂಯುಕ್ತಾ ಹೊರನಾಡು ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.

  ಕಾಫಿ ಎಸ್ಟೇಟ್​ನಲ್ಲಿ ನಡೆಯುವ ಅಪರಾಧದ ಕಥೆಯೇ ಚಿತ್ರ. ಎ ಲಾಟ್ ಕ್ಯಾನ್ ಹ್ಯಾಪನ್ ಓವರ್ ಕಾಫಿ ಎಂಬ ಫೇಮಸ್ ಟ್ಯಾಗ್​ಲೈನ್ ಕೂಡಾ ಇದೆ. ಹಾಗಾದರೆ, ಒಂದು ಕಪ್ ಕಾಫಿಯೇ  ಚಿತ್ರದ ಪ್ರಮುಖ ತಿರುವಾ..? ಏನಿರುತ್ತೆ..? ಟ್ಯಾಗ್​ಲೈನ್​ನಲ್ಲೇ ಚಿತ್ರ ಕುತೂಹಲ ಹುಟ್ಟಿಸುತ್ತಿದೆ.

  ಒಂದು ಅಪರಾಧ ಹೇಗೆಲ್ಲ ಸಂಬಂಧಗಳನ್ನು ಬದಲಾಯಿಸಲಿದೆ ಎಂಬುದನ್ನು ಕುತೂಹಲಭರಿತವಾಗಿ ಹೇಳಿದ್ದಾರಂತೆ ಸೀತಾರಾಮ್. ಅವರ ಬಳಿಯೇ ಇದ್ದ ಅತ್ಯುತ್ತಮ ಕಥೆಯನ್ನು ಸಿನಿಮಾ ಮಾಡಿದ್ದಾರೆ. ಸೀತಾರಾಮ್ ಯಾವತ್ತಿಗೂ ಕಥೆಗಷ್ಟೇ ನಿಷ್ಟರಾದವರು. ನಂತರ ಮಿಕ್ಕಿದ್ದು. ಹಾಗಾಗಿ ಅದ್ಭುತ ಕಥೆಯಂತೂ ಕಾಫಿತೋಟ ಚಿತ್ರದಲ್ಲಿರತ್ತೆ. ಮಿಸ್ ಮಾಡ್ಕೋಬೇಡಿ.

 • ಮತದಾನದಿಂದ ಕಾಫಿತೋಟ - 17 ವರ್ಷಗಳ ಗ್ಯಾಪ್​ನಲ್ಲಿ - ಟಿ.ಎನ್. ಸೀತಾರಾಮ್ ಸ್ಪೆಷಾಲಿಟಿ

  tn seetharam

  ಟಿ.ಎನ್. ಸೀತಾರಾಮ್. ಕನ್ನಡ ಪ್ರೇಕ್ಷಕರಿಗೆ ಲಾಯರ್ ಸಿಎಸ್​ಪಿಯಾಗಿಯೇ ಹೆಚ್ಚು ಪರಿಚಿತ. ಅವರ ಹೆಸರಿನ ಹಿಂದಿನ ಅಡ್ಡ ಹೆಸರುಗಳು ಕಾಲ ಕಾಲಕ್ಕೆ ಬದಲಾಗಿವೆ. ಮಾಯಾಮೃಗ ಸೀತಾರಾಮ್, ಮನ್ವಂತರ ಸೀತಾರಾಮ್, ಮುಕ್ತ ಸೀತಾರಾಮ್,  ಮುಕ್ತ ಮುಕ್ತ ಸೀತಾರಾಮ್.. ಹೀಗೆ.. ಇವೆಲ್ಲವೂ ಅವರೇ ನಿರ್ದೇಶಿಸಿದ ಧಾರಾವಾಹಿಗಳು. ತಮ್ಮ ಕೃತಿಗಳ ಮೂಲಕವೇ ಹೆಸರು, ಖ್ಯಾತಿ ಪಡೆದಿದ್ದು ಸೀತಾರಾಮ್ ಸಾಧನೆ.

  ಸೀತಾರಾಮ್ ಅವರ ಮೊದಲ ಚಿತ್ರಕ್ಕೂ ಮೂರನೇ ಚಿತ್ರಕ್ಕೂ ನಡುವೆ 17 ವರ್ಷಗಳ ಅಂತರವಿದೆ. ಸೀತಾರಾಮ್ ನಿರ್ದೇಶಿಸಿದ ಮೊದಲ ಚಿತ್ರ ಮತದಾನ. ರಾಷ್ಟ್ರಪ್ರಶಸ್ತಿಯನ್ನೂ ಪಡೆದ ಆ ಚಿತ್ರ ರಿಲೀಸ್ ಆಗಿದ್ದು 2001ರಲ್ಲಿ. ಈಗ ಅವರ ಮೂರನೇ ಚಿತ್ರ ಕಾಫಿತೋಟ ಬರುತ್ತಿದೆ.     2007ರಲ್ಲಿ ಮೀರಾ ಮಾಧವ ರಾಘವ ಚಿತ್ರ ಬಂದಿತ್ತು. ಮೊದಲ ಚಿತ್ರಕ್ಕೂ, ಎರಡನೇ ಚಿತ್ರಕ್ಕೂ 7 ವರ್ಷ ಗ್ಯಾಪ್ ತೆಗೆದುಕೊಂಡಿದ್ದ ಸೀತಾರಾಮ್, ಮೂರನೇ ಚಿತ್ರಕ್ಕೆ ನಿರ್ದೇಶಕನ ಕ್ಯಾಪ್ ತೊಟ್ಟಿರುವುದು 9 ವರ್ಷಗಳ ನಂತರ.

  ಈ ಚಿತ್ರದ ಇನ್ನೂ ಒಂದು ವಿಶೇಷವೆಂದರೆ, ಇದು ಥ್ರಿಲ್ಲರ್ ಸಿನಿಮಾ. ಸಸ್ಪೆನ್ಸ್, ರಾಜಕೀಯ ವಿಡಂಬನೆ ಮತ್ತು ಮಧ್ಯಮ ವರ್ಗದ ಅಷ್ಟೂ ತಲ್ಲಣಗಳ ದರ್ಶನ ಚಿತ್ರದಲ್ಲಿದೆ ಎನ್ನುತ್ತಿದ್ಧಾರೆ ಸೀತಾರಾಮ್. ಚಿತ್ರ ಇದೇ 18ನೇ ತಾರೀಕಿನಂದು ಬಿಡುಗಡೆಯಾಗುತ್ತಿದೆ. ರಾಧಿಕಾ ಚೇತನ್ ಪ್ರಮುಖ ಪಾತ್ರದಲ್ಲಿರುವ ಚಿತ್ರ, ಕನ್ನಡದಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳಲ್ಲಿ ಒಂದು. 

 • ಸಾಕಪ್ಪಾ ಸಾಕು, ವಜ್ರ ವಿಧಾನಸೌಧದ ಸಹವಾಸ - ಸೀತಾರಾಮ್

  seetharam is desperate

  ಟಿ.ಎನ್. ಸೀತಾರಾಮ್. ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ. ಹಿಟ್ ಮತ್ತು ಫ್ಲಾಪ್ ಚಿತ್ರಗಳೆರಡನ್ನೂ ಕೊಟ್ಟಿದ್ದಾರೆ. ಸೀರಿಯಲ್ ಲೋಕದಲ್ಲಂತೂ ಮೈದಾಸ. ಸೋತಿದ್ದೇ ಇಲ್ಲ. ರಂಗಭೂಮಿಯಲ್ಲೂ ಯಶಸ್ವಿ ಇತಿಹಾಸ ಹೊಂದಿರುವ ಸೀತಾರಾಮ್, ತಮ್ಮ ಇಷ್ಟು ವರ್ಷಗಳ ವೃತ್ತಿ ಬದುಕಿನಲ್ಲಿ ಇಂಥಾ ಟೀಕೆಗಳನ್ನು ಯಾವತ್ತೂ ಎದುರಿಸಿಲ್ಲವೇನೋ.. ಅಂದಹಾಗೆ ಇವತ್ತು ವಿಧಾನಸೌಧದ ವಜ್ರಮಹೋತ್ಸವ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಸೀತಾರಾಮ್ ಅವರ ಸಾಕ್ಷ್ಯಚಿತ್ರಗಳು ಇಷ್ಟು ಹೊತ್ತಿಗೆ ಮುಕ್ತಾಯ ಹಂತದಲ್ಲಿರುತ್ತಿದ್ದವು. ಆದರೆ, ಸಾಕ್ಷ್ಯಚಿತ್ರ ನಿರ್ಮಾಣಕ್ಕೆ 1.58 ಕೋಟಿ ಪಡೆಯುತ್ತಿದ್ದಾರೆ ಎನ್ನುವುದು ಟೀಕಾಕಾರರಿಗೆ ಸರಕಾಯಿತು. ಸಾಕ್ಷ್ಯಚಿತ್ರದ ಸಹವಾಸವೇ ಸಾಕು ಎಂದು ಹೊರಬಂದ ಸೀತಾರಾಮ್, ತಮ್ಮ ವಿರುದ್ಧದ ಆರೋಪಗಳೆಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. 

  ಟೀಕಾಕಾರರು ಹೇಳುತ್ತಿರುವಂತೆ 1.58 ಕೋಟಿಯಲ್ಲಿ ನಿರ್ಮಾಣವಾಗುತ್ತಿದ್ದುದು ಒಂದು ಸಾಕ್ಷ್ಯಚಿತ್ರವಲ್ಲ. 7 ಸಾಕ್ಷ್ಯಚಿತ್ರಗಳು. ಒಟ್ಟು 240 ನಿಮಿಷಗಳ ಸಾಕ್ಷ್ಯಚಿತ್ರ ಸಿದ್ಧ ಮಾಡಬೇಕಿತ್ತು. 136 ವರ್ಷಗಳ ಇತಿಹಾಸ ಹೇಳುವ ಸವಾಲು ನಮ್ಮ ಮುಂದಿತ್ತು.

  ಡಾಕ್ಯುಮೆಂಟರಿಯನ್ನು ಫೋಟೋ ಮತ್ತು ಹಿನ್ನೆಲೆ ಧ್ವನಿಯಲ್ಲಿ ಹೇಳುವ ಕಾನ್ಸೆಪ್ಟ್ ಕೈಬಿಟ್ಟು, ಮರುಸೃಷ್ಟಿ ಮಾಡುವ ಸಾಹಸಕ್ಕೆ ಕೈ ಹಾಕಿದ್ದೆವು. 

  ಡಾಕ್ಯುಮೆಂಟರಿ ಮಾಡುವುದು ಸುಲಭವಲ್ಲ. ಅದಕ್ಕಾಗಿ 7 ಲಕ್ಷ ಪುಟಗಳ ದಾಖಲೆಗಳನ್ನು ಓದಬೇಕಿತ್ತು. ನೂರಾರು ಶಾಸಕರು, ಸಂಸದರನ್ನು ಮಾತನಾಡಿಸಬೇಕಿತ್ತು. ಅದು ಸುಲಭದ ಕೆಲಸವೇನೂ ಆಗಿರಲಿಲ್ಲ. ಇದಕ್ಕಾಗಿ 8 ಜನರ ತಂಡ 5 ತಿಂಗಳಿಂದ ಕೆಲಸ ಮಾಡುತ್ತಿತ್ತು.

  ರಾಜ್ಯಸಭೆಗೆ ಶ್ಯಾಮ್‍ಬೆನಗಲ್ ನಿರ್ದೇಶಿಸಿದ್ದ ಸಂವಿಧಾನ್ ಸಾಕ್ಷ್ಯಚಿತ್ರದ ಮಾದರಿಯಲ್ಲಿ ಡಾಕ್ಯುಮೆಂಟರಿ ಮಾಡುವ ಯೋಜನೆ ರೂಪಿಸಿದ್ದೆವು. ಈಗಾಗಲೇ 2 ಸಾಕ್ಷ್ಯಚಿತ್ರಗಳು ಪೂರ್ಣಗೊಂಡಿದ್ದವು.

  ಈ ಸಾಕ್ಷ್ಯಚಿತ್ರಗಳಿಗಾಗಿ ನಾನು ನನ್ನ ನಿರ್ದೇಶನದ ಚಿತ್ರದ ಪ್ರಚಾರದಿಂದ ದೂರ ಉಳಿಯಬೇಕಾಯ್ತು. ಡ್ರಾಮಾ ಜ್ಯೂನಿಯರ್ಸ್ ಜಡ್ಜ್ ಸ್ಥಾನದಿಂದ ಹಿಂದೆ ಸರಿಯಬೇಕಾಯ್ತು. 

  ಹೀಗೆ ಕಾರಣಗಳನ್ನು ಹೇಳುತ್ತಾ ಹೋಗಿರುವ ಸೀತಾರಾಮ್, ನನಗೆ ಸಾಕ್ಷ್ಯಚಿತ್ರಗಳ ಸಹವಾಸವೇ ಬೇಡ ಎಂಬ ಸ್ಥಿತಿಗೆ ಬಂದುಬಿಟ್ಟಿದ್ದಾರೆ. ಸಿದ್ಧವಾರಿರುವ ಎರಡು ಸಾಕ್ಷ್ಯಚಿತ್ರಗಳು ಹಾಗೂ ಶೂಟ್ ಮಾಡಿರುವ ಫುಟೇಜ್‍ಗಳನ್ನು ಸರ್ಕಾರಕ್ಕೆ ನೀಡಿ ಕೈಮುಗಿಯಲು ನಿರ್ಧರಿಸಿದ್ದಾರೆ. ಸಾರ್ವಜನಿಕರ ಹಣದ ವಿಚಾರದಲ್ಲಿ ಅನುಮಾನಗಳೆದ್ದಾಗ ಮುಂದುವರೆಯುವುದು ಸರಿಯಲ್ಲ. ನೋವಾಗಿದೆ ನಿಜ. ಆದರೆ, ಹಿಂದೆ ಸರಿಯುವ ನನ್ನ ನಿರ್ಧಾರವೂ ಸರಿಯಾಗಿದೆ ಎನ್ನುತ್ತಾರೆ ಸೀತಾರಾಮ್.

  ಅಂದಹಾಗೆ ಒಂದು ಇತಿಹಾಸ ನಿಮ್ಮ ನೆನಪಿನಲ್ಲಿರಲಿ. ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಕೂಡಾ ಅದೇ ವಿಧಾನಸೌಧ ಕಟ್ಟಡ ನಿರ್ಮಾಣ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸಿದ್ದವರು. ವಿಧಾನಸೌಧದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಎಂಜಿನಿಯರ್‍ನನ್ನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹಾಲಿನ ಮೇಲೆ ಪ್ರಮಾಣ ಮಾಡಿಸಿದ್ದ ಹನುಮಂತಯ್ಯನವರನ್ನೂ ಈ ಭ್ರಷ್ಟಾಚಾರದ ಆರೋಪ ಬಿಟ್ಟಿರಲಿಲ್ಲ. ಸೀತಾರಾಮ್ ಕೂಡಾ ಹಾಗೆಯೇ ಆರೋಪ ಎದುರಿಸಿದ್ದಾರೆ ಅಷ್ಟೆ.

 • ಸಿನಿಮಾ ಮಾಡುವ ಆಸೆ ಇದೆಯಾ..?  ಕಾಫಿ ತೋಟದ ಸ್ಫೂರ್ತಿಯ ಕಥೆ ತಿಳಿದುಕೊಳ್ಳಿ..!

  kaafi thota image

  ನಾನೂ ಒಂದು ಸಿನಿಮಾ ಮಾಡಬೇಕು ಎಂದು ಗಾಂಧಿನಗರಕ್ಕೆ ಬರುವವರ ಸಂಖ್ಯೆಗೇನೂ ಕೊರತೆಯಿಲ್ಲ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಸಂಗೀತ, ಸಾಹಿತ್ಯ.. ಎಲ್ಲ ಗೊತ್ತಿದ್ದರೂ.. ನಿರ್ಮಾಪಕರೇ ಸಿಕ್ಕೋದಿಲ್ಲ. ನಿಮ್ಮ ಮೇಲೆ ನಿಮಗೆ ನಂಬಿಕೆ ಇದೆ. ಆದರೆ, ಜೇಬಲ್ಲಿ ಹಣ ಇರೋಲ್ಲ. ಏನ್ ಮಾಡೋದು..? ಅಂಥವರು ಒಮ್ಮೆ ಕಾಫಿತೋಟ ನಿರ್ಮಾಣವಾದ ಕಥೆ ತಿಳಿದುಕೊಳ್ಳಬೇಕು.

  ಸೀತಾರಾಮ್ ಆಗಷ್ಟೇ ಸೀರಿಯಲ್ಲೊಂದನ್ನು ಮುಗಿಸಿ ಕುಳಿತಿದ್ದರು. ಬಿಡುವಿನಲ್ಲಿದ್ದ ಸಮಯದಲ್ಲಿ ನಾನೊಂದು ಸಿನಿಮಾ ಮಾಡಬೇಕು ಎನ್ನಿಸೋಕೆ ಶುರುವಾಯಿತು. ಕಥೆ ಬರೆಯೋಕೆ ಶುರುವಿಟ್ಟುಕೊಂಡರು. ಕೆಲವು ಕಥೆಗಳು ಸಿದ್ಧವಾದವು. ಆ ಸಮಯದಲ್ಲೇ ನಿರ್ದೇಶಕ ಯೋಗರಾಜ್ ಭಟ್, ಸೀತಾರಾಮ್ ಮನೆಗೆ ಹೋದರು. ಕಥೆ ಕೇಳಿ ಥ್ರಿಲ್ಲಾದ ಭಟ್ಟರು, ನಿರ್ಮಾಪಕರನ್ನು ಕ್ಯೂ ನಿಲ್ಲಿಸಿಬಿಡುತ್ತೇನೆ ಎಂದರಂತೆ. ಅದು ಸೀತಾರಾಮ್​ಗೆ ಸಿಕ್ಕ ಮೊದಲ ಸ್ಫೂರ್ತಿ.

  ಅದಾದ ನಂತರ ಸೀತಾರಾಮ್, ತಮ್ಮದೇ ಫೇಸ್​ಬುಕ್​ನಲ್ಲಿ ನಾನೊಂದು ಸಿನಿಮಾ ಮಾಡಲು ಹೊರಟಿದ್ದೇನೆ. ಯೋಗರಾಜ್ ಭಟ್ಟರು ನನ್ನ ಜೊತೆ ಇರುತ್ತಾರೆ.ಯಾರಾದರೂ ದುಡ್ಡು ಹಾಕಬಹುದು ಎಂಬ ಒಂದು ಸ್ಟೇಟಸ್ ಹಾಕಿದರು. ಇನ್​ಬಾಕ್ಸ್​ನಲ್ಲಿ ನಿರ್ಮಾಪಕರಾಗಲು ಕ್ಯೂ ಸಿದ್ಧವಾಯ್ತು. ಸುಮಾರು 600ರಿಂದ 700 ಜನ ಹಣ ಹಾಕಲು ಮುಂದೆ ಬಂದರು. ಅದು ಎರಡನೇ ಸ್ಫೂರ್ತಿ.

  ಆದರೆ, ಸೀತಾರಾಮ್​ಗೆ ಒಳಗೊಳಗೇ ಸಣ್ಣದೊಂದು ಆತಂಕ. ಅಕಸ್ಮಾತ್ ನಷ್ಟವಾದರೆ.. ಆಗ ಸೀತಾರಾಮ್, ಒಬ್ಬರ ಬಳಿ ಬೇಡ. ತುಂಬಾ ಜನರಾದರೆ, ಅಕಸ್ಮಾತ್ ನಷ್ಟವಾದರೂ ಚಿಂತೆಯಿಲ್ಲ ಎಂದು ಯೋಚಿಸಿದರು. ಆಯ್ದು ಆಯ್ದು ಕೆಲವು ನಿರ್ಮಾಪಕರನ್ನು ಆಯ್ಕೆ ಮಾಡಿದರು. ಅಂದಹಾಗೆ ಕಾಫಿತೋಟ ಚಿತ್ರಕ್ಕೆ ಒಟ್ಟು 29 ಜನ ನಿರ್ಮಾಪಕರು. ದೊಡ್ಡ ಮೊತ್ತ ಹಾಕಿರುವವರು ರಾಮಚಂದ್ರ.

  ರಾಮಚಂದ್ರ ಎಂಬ ನಿರ್ಮಾಪಕ ಸಿಕ್ಕಿದ್ದೂ ಅಷ್ಟೇ ಸ್ವಾರಸ್ಯಕಾರಿ ಕಥೆ. ಅವರು ಸಿಕ್ಕಿದ್ದು ಪುಸ್ತಕದಂಗಡಿಯಲ್ಲಿ. ಮೊದಲಿನಿಂದ ಪರಿಚಯವಿದ್ದವರೇನೂ ಅಲ್ಲ. ಪುಸ್ತಕದಂಗಡಿಯಲ್ಲಿ ಸಿಕ್ಕು ಮಾತನಾಡಿದ ಮೇಲೆ ರಾಮಚಂದ್ರ, ಮತದಾನ ಚಿತ್ರದ ಕುರಿತು ಮಾತನಾಡಿದರಂತೆ. ನಿಮ್ಮ ಮುಂದಿನ ಸಿನಿಮಾಗೆ ನಾನೇ ದುಡ್ಡು ಹಾಕುತ್ತೇನೆ ಎಂದರಂತೆ. ಹೀಗೆ  ಶುರುವಾಯ್ತು ಸಿನಿಮಾ ನಿರ್ಮಾಣ.

  ಮೊದಲು ಇದ್ದ 80 ಲಕ್ಷದ ಬಜೆಟ್, 3 ಕೋಟಿ ದಾಟಿತು. 50 ಸಾವಿರ ಹಣ ಹಾಕುತ್ತೇನೆ ಎಂದಿದ್ದವರು 10 ಲಕ್ಷದವರೆಗೆ ಹಣ ಹಾಕಿದರು. ಎಲ್ಲರೂ ಗೆಳೆಯರೇ. ನಷ್ಟವಾದರೂ ಯೋಚನೆ ಮಾಡಬೇಡಿ. ನಿಮ್ಮ ಮೇಲಿನ ಅಭಿಮಾನದಿಂದ ಹಣ ಹಾಕಿದ್ದೇವೆ ಎಂದಿದ್ದಾರೆ ನಿರ್ಮಾಪಕರು.

  ಚಿತ್ರ ಸಿದ್ಧವಾಗಿದೆ. ಆಗಸ್ಟ್ 18ಕ್ಕೆ ಥಿಯೇಟರುಗಳಲ್ಲಿ ಕಾಫಿತೋಟ ಇರುತ್ತೆ. ಸೀತಾರಾಮ್ ಜೊತೆ ಯೋಗರಾಜ್ ಭಟ್ಟರು, ಜಯಂತ್ ಕಾಯ್ಕಿಣಿ, ಜೋಗಿ ಹಾಡು ಬರೆದಿದ್ದಾರೆ. ಅನೂಪ್ ಸೀಳಿನ್ ಸಂಗೀತ ಕುತೂಹಲ ಹುಟ್ಟಿಸುವ ಹಾಗಿದೆ. ಸೀತಾರಾಮ್, ಕಾಫಿತೋಟದಲ್ಲಿ ಒಂದೊಳ್ಳೆ ಕಾಫಿ ಕುಡಿಸುತ್ತಾರೆ ಎಂಬ ನಂಬಿಕೆಯೊಂದಿಗೆ ಥಿಯೇಟರಿಗೆ ನುಗ್ಗಬಹುದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery