` haripriya - chitraloka.com | Kannada Movie News, Reviews | Image

haripriya

 • ದಿನಕರ್ ಅಂದ್ರೆ ಹರಿಪ್ರಿಯಾಗೆ ಲಕ್ಕಿ..!

  dinakar is lucky for haripriya

  ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ಪ್ರಜ್ವಲ್ ದೇವರಾಜ್, ಪ್ರೇಮ್ ಮತ್ತು ಹರಿಪ್ರಿಯಾ ಕಾಂಬಿನೇಷನ್‍ನ ಸಿನಿಮಾ, ಬಿಡುಗಡೆಗೆ ಮೊದಲೇ ಕ್ರೇಜ್ ಹುಟ್ಟಿಸಿರುವ ಚಿತ್ರ. ಸತತ ಹಿಟ್ ಕೊಟ್ಟಿರುವ ದಿನಕರ್, 7 ವರ್ಷದ ನಂತರ ನಿರ್ದೇಶನ ಮಾಡಿರುವ ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ. ಚೌಕ ನಂತರ, ಪ್ರೇಮ್ ಮತ್ತು ಪ್ರಜ್ವಲ್ ಒಟ್ಟಿಗೇ ನಟಿಸಿರುವ ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ. ಪ್ರಜ್ವಲ್ ಜೊತೆ ನಟಿಸಿರುವ 3ನೇ ಸಿನಿಮಾ. ಇಷ್ಟೆಲ್ಲ ಇದ್ದರೂ, ಹರಿಪ್ರಿಯಾಗೆ ದಿನಕರ್ ಲಕ್ಕಿ ಅನ್ನಿಸೋಕೆ ಇನ್ನೂ ಒಂದು ಕಾರಣ ಇದೆ.

  ಹರಿಪ್ರಿಯಾಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಉಗ್ರಂ. ದೊಡ್ಡ ಹೆಸರನ್ನೂ ಕೊಟ್ಟ ಚಿತ್ರ ನೀರ್‍ದೋಸೆ. ಆ ಎರಡೂ ಚಿತ್ರಗಳ ವಿತರಣೆಗೆ ದಿನಕರ್ ಸಾಥ್ ಕೊಟ್ಟಿದ್ದರಂತೆ. ಈಗ.. ಅವರದ್ದೇ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಸಿನಿಮಾ ಕೂಡಾ ಹಿಟ್ ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಹರಿಪ್ರಿಯಾ.

  ಚಿತ್ರದಲ್ಲಿನ ನನ್ನ ಪಾತ್ರ ರಿಯಲ್ ಲೈಫ್‍ಗೆ ಹತ್ತಿರವಾಗಿದೆ.  ಹೀಗಾಗಿ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇದೆ ಎಂದು ಹೇಳಿಕೊಂಡಿದ್ದಾರೆ ಹರಿಪ್ರಿಯಾ. ದಿನಕರ್ ಅವರ ಪತ್ನಿ ಮಾನಸ ಅವರು ಬರೆದಿರುವ ಕಥೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ ದಿನಕರ್.

 • ದಿನಕರ್ ತೂಗುದೀಪ ಚಿತ್ರಕ್ಕೆ ಹರಿಪ್ರಿಯಾ ಹೀರೋಯಿನ್

  haripriya image
  ದಿನಕರ್ ತೂಗುದೀಪ ಮತ್ತೆ ಡೈರೆಕ್ಷನ್‍ಗೆ ಇಳಿದಿರುವುದು, ಅವರ ಪತ್ನಿ ಬರೆದ ಕಥೆಯನ್ನೇ ಸಿನಿಮಾ ಮಾಡುತ್ತಿರುವ ಸುದ್ದಿಯನ್ನು ಈಗಾಗಲೇ ತಿಳಿದುಕೊಂಡಿದ್ದೀರಿ. ಇದು ಆ ಚಿತ್ರದ ಅಪ್‍ಡೇಟ್ ಸುದ್ದಿ.  ಲೈಫ್ ವಿತ್ ಒಂದ್ ಸೆಲ್ಫಿ ಚಿತ್ರಕ್ಕೆ ಈಗ ಹೀರೋಯಿನ್ ಆಯ್ಕೆಯಾಗಿದೆ. ಚಿತ್ರದ ಹೀರೋಯಿನ್ ಹರಿಪ್ರಿಯಾ.
   
  ನೀರ್‍ದೋಸೆಯಂತಹ ಹಿಟ್ ಕೊಟ್ಟ ಮೇಲೆ ಸ್ವಲ್ಪ ಕಾಲ ಸೈಲೆಂಟ್ ಆಗಿದ್ದ ಹರಿಪ್ರಿಯಾ, ಈಗ ಸಿಕ್ಕಾಪಟ್ಟೆ ಬ್ಯುಸಿಯಾಗುತ್ತಿದ್ಧಾರೆ. ಭರ್ಜರಿ, ಸಂಹಾರ, ಕನಕ ಚಿತ್ರಗಳ ಶೂಟಿಂಗ್ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ತಮಿಳು ಚಿತ್ರವೊಂದು ಕೂಡಾ ಬಿಡುಗಡೆಗೆ ರೆಡಿಯಾಗುತ್ತಿದೆ. ಈ ಮಧ್ಯೆ ಕುರುಕ್ಷೇತ್ರ, ಆಂಜನಿಪುತ್ರ ಚಿತ್ರಗಳಲ್ಲ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹರಿಪ್ರಿಯಾ, ಲೈಫ್ ವಿತ್ ಒಂದ್ ಸೆಲ್ಫಿ ಚಿತ್ರಕ್ಕೆ ನಾಯಕಿ.
   
  ಪ್ರಜ್ವಲ್ ದೇವರಾಜ್ ಹಾಗೂ ಪ್ರೇಮ್ ನಾಯಕರಾಗಿರುವ ಚಿತ್ರದಲ್ಲಿ ಹರಿಪ್ರಿಯಾ ಒಬ್ಬರೇ ಹೀರೋಯಿನ್. ಅದೊಂದು ರೊಮ್ಯಾಂಟಿಕ್ ಜರ್ನಿ ಸ್ಟೋರಿಯಾಗಿದ್ದು, ಹರಿಪ್ರಿಯಾ ಪಾತ್ರಕ್ಕೆ ತುಂಬಾ ಮಹತ್ವವಿದೆಯಂತೆ.
 • ನಗಿಸುವುದೇ ನಮ್ ಧರ್ಮ : ಎಲ್ಲಿದ್ದೆ ಇಲ್ಲೀ ತನಕ ಮನರಂಜನೆಯ ಸೃಜಪಾಕ

  ellidhe illitanaka is full of comedy

  ಸೃಜನ್ ಲೋಕೇಶ್, ಹರಿಪ್ರಿಯಾ, ತಬಲಾ ನಾಣಿ, ಗಿರಿ, ತಾರಾ, ಸಾಧುಕೋಕಿಲ, ಸಿಹಿಕಹಿ ಚಂದ್ರು, ಮಂಡ್ಯ ರಮೇಶ್, ಅವಿನಾಶ್.. ಇವರೆಲ್ಲರ ಜೊತೆ ಗಿರಿಜಾ ಲೋಕೇಶ್. ನಗಿಸುವವರ ಸೈನ್ಯವೇ ಚಿತ್ರದಲ್ಲಿದೆ. ಜೊತೆಗೆ ಚಿತ್ರತಂಡ ಹೇಳುತ್ತಿರುವುದು ಒಂದೇ ಮಾತು. ಇದೊಂದು ಅಪ್ಪಟ ಮನರಂಜನೆಯ ಸಿನಿಮಾ. ನಗಿಸುವುದೇ ನಮ್ಮ ಧರ್ಮ.

  ಎಲ್ಲ ವಯಸ್ಸಿನವರಿಗೂ ಇಷ್ಟವಾಗುವಂತ ಮಜವಾದ ಕಥೆ ಚಿತ್ರದಲ್ಲಿದೆ. ಥಿಯೇಟರಿಗೆ ಎಂಟ್ರಿ ಕೊಟ್ಟವರು ಆರಂಭದಿಂದ ಕೊನೆಯವರೆಗೆ ನಗುತ್ತಾ ನಗುತ್ತಾ ಹೋಗುತ್ತಾರೆ ಎಂಬ ಅಪ್ಪಟ ಪ್ರಾಮಿಸ್ ಮಾಡಿದ್ದಾರೆ ಸೃಜನ್ ಲೋಕೇಶ್.

  ಚಿತ್ರದ ನಿರ್ದೇಶಕ ತೇಜಸ್ವಿಗೆ ಇದು ಮೊದಲ ಸಿನಿಮಾ. ಸೃಜನ್ ಅವರು ಒಂದು ದೃಶ್ಯವನ್ನು ಹಲವು ರೀತಿಯಲ್ಲಿ ಪ್ರೇಕ್ಷಕರಿಗೆ ತಲುಪಿಸುತ್ತಾರೆ. ಅವರೊಬ್ಬ ಪರ್ಫೆಕ್ಟ್ ಆ್ಯಕ್ಟರ್ ಎಂದಿದ್ದಾರೆ ತೇಜಸ್ವಿ.

 • ನಾಯಕಿ ನಾನೇ.. ಖಳನಾಯಕಿ ನಾನೇ..

  samhara heroine and villain is haripriya

  ಸಂಹಾರ ಚಿತ್ರದ ನಾಯಕಿ ಯಾರು..? ಹರಿಪ್ರಿಯಾ. ಖಳನಾಯಕಿ ಯಾರು..? ಹರಿಪ್ರಿಯಾ. ಎರಡೂ ಹೇಗೆ ಸಾಧ್ಯ..? ಸಿನಿಮಾ ನೋಡಿ. ನಿಮಗೇ ಗೊತ್ತಾಗುತ್ತೆ. ಇದು ಹರಿಪ್ರಿಯಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿರೋ ಮಾತು.

  ಸಿನಿಮಾದಲ್ಲಿ ಹರಿಪ್ರಿಯಾ ಅವರು ಎರಡು ಶೇಡ್‍ಗಳಲ್ಲಿ ಕಾಣಿಸಿಕೊಳ್ತಾರಂತೆ. ಮೊದಲರ್ಧದಲ್ಲಿ ಎಷ್ಟು ಕ್ಯೂಟ್ ಪಾತ್ರವೆಂದರೆ, ಸಿಕ್ಕರೆ ಇಂಥಾ ಹುಡುಗಿ ನಮಗೂ ಸಿಗಬೇಕು ಎನ್ನಿಸುವಷ್ಟು ಒಳ್ಳೆಯ ಹುಡುಗಿ. ಮಧ್ಯಂತರದ ನಂತರ ಕಥೆಯೇ ಉಲ್ಟಾ. ಅಕ್ಷರಶಃ ರಾಕ್ಷಸಿ.

  ಮಾಮೂಲಿ ಪಾತ್ರಗಳಿಗಿಂತ ಇದು ಎಷ್ಟು ಡಿಫರೆಂಟ್ ಎಂದರೆ, ಕಥೆ ಮತ್ತು ಪಾತ್ರ ಕೇಳಿದ ತಕ್ಷಣ ಒಪ್ಪಿಕೊಂಡುಬಿಟ್ಟೆ. ಇದು ರೆಗ್ಯುಲರ್ ಹೀರೋಯಿನ್ ಪಾತ್ರಗಳಿಗಿಂತ ಕಂಪ್ಲೀಟ್ ಡಿಫರೆಂಟ್ ಅನ್ನೋದು ಹರಿಪ್ರಿಯಾ ನುಡಿ.

  ನೀರ್‍ದೋಸೆ ನಂತರ ಬೇರೆಯೇ ಇಮೇಜ್ ಪಡೆದುಕೊಂಡಿದ್ದ ಹರಿಪ್ರಿಯಾ, ಈಗ ಸಂಹಾರ ನಂತರ ಆ ಇಮೇಜ್ ಮತ್ತೊಂದು ಮಗ್ಗುಲು ಬದಲಿಸುವ ಸಾಧ್ಯತೆಯ ನಿರೀಕ್ಷೆಯಲ್ಲಿದ್ದಾರೆ.

   

   

 • ನಿಗೂಢ ಸಂಹಾರ.. ವಿಭಿನ್ನತೆಯ ಸಂಚಾರ

  samhara is a suspense thriller

  ಚಿರಂಜೀವಿ ಸರ್ಜಾ ಹಾಗೂ ಹರಿಪ್ರಿಯಾ ಅಭಿನಯದ ಸಂಹಾರದ ಕಥೆ ಏನು..? ಅದು ನಿಗೂಢ. ಗುರುದೇಶಪಾಂಡೆ ಚಿತ್ರದ ಕಥೆಯ ಎಳೆಯನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಆದರೆ, ಚಿರಂಜೀವಿ ಸರ್ಜಾ ಈ ಚಿತ್ರದಲ್ಲಿ ಕಣ್ಣು ಕಾಣದ ಕುರುಡ. ಅಂಧ. ಹಾಗೆಯೇ ಅಡುಗೆ ಭಟ್ಟ. ಇದು ಹೇಗೆ ಸಾಧ್ಯ ಎನ್ನುವವರಿಗೆ ಚಿತ್ರದಲ್ಲಿಯೇ ಉತ್ತರ ಸಿಗುತ್ತೆ.

  ನಾಯಕಿಯಾಗಿರೋದು ಹರಿಪ್ರಿಯಾ. ಅವರು ಇಲ್ಲಿ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೆಗೆಟಿವ್ ರೋಲ್ ಇರಬಹುದಾ ಅಥವಾ ಫ್ಯಾಮಿಲಿ ಓರಿಯೆಂಟೆಡ್ ಪಾತ್ರವಾ..? ಅದು ಸೀಕ್ರೆಟ್.

  ಇನ್ನು ಕಾವ್ಯಾಶೆಟ್ಟಿ, ಈ ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರ. ಹಿಂದಿನ ಚಿತ್ರದಲ್ಲಿ ಟಿವಿ ಚಾನೆಲ್ ಮಾಲಕಿಯಾಗಿದ್ದ ಕಾವ್ಯಾಶೆಟ್ಟಿ, ಈ ಚಿತ್ರದಲ್ಲಿ ರಿಪೋರ್ಟರ್. 

  ನಟ ಚಿಕ್ಕಣ್ಣ ಅವರದ್ದು ರಾಜಾಹುಲಿ ಸ್ಟೈಲ್‍ನ ಇನ್ಸ್‍ಪೆಕ್ಟರ್ ಪಾತ್ರ. ಅದು ಸೇಡಿನ ಕಥೆಯಾ..? ಗೊತ್ತಿಲ್ಲ. ಸಸ್ಪೆನ್ಸ್ ಕಾಯ್ದಿಟ್ಟಿರುವ ಗುರುದೇಶಪಾಂಡೆ, ಸಂಪೂರ್ಣ ಕುತೂಹಲ ತಣಿಸುವುದು ಈ ವಾರದ ಕೊನೆಯಲ್ಲಿ. 

   

   

 • ಪತ್ರಕರ್ತೆಯಾದ ಹರಿಪ್ರಿಯಾ

  ಪತ್ರಕರ್ತೆಯಾದ ಹರಿಪ್ರಿಯಾ

  ಹರಿಪ್ರಿಯಾಗೆ ಇತ್ತೀಚೆಗೆ ವಂಡರ್ ಎನಿಸುವಂತಾ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಅಥವಾ.. ಅಂತಹ ವಿಭಿನ್ನ ಪಾತ್ರಗಳನ್ನಷ್ಟೇ ಆಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಅವರು ಜರ್ನಲಿಸ್ಟ್ ಆಗುತ್ತಿದ್ದಾರೆ. ಲಗಾಮ್ ಚಿತ್ರದಲ್ಲಿ.

  ಕಸ್ತೂರಿ ಬಾ, ಅಮೃತಮತಿಯಂತಾ ಪಾತ್ರಗಳಲ್ಲಿ ನಟಿಸಿರೋ ಹರಿಪ್ರಿಯಾಗೆ ಇನ್ವೆಸ್ಟಿಗೇಷನ್ ಜರ್ನಲಿಸ್ಟ್ ಪಾತ್ರ ಹೊಸದು. ನನಗೆ ಜರ್ನಲಿಸ್ಟ್‍ಗಳು ಪರಿಚಯವಿದ್ದಾರೆ. ಅವರ ಹಾವಭಾವಗಳನ್ನು ಹತ್ತಿರದಿಂದ ನೋಡಿದ್ದೇನೆ. ಅದೊಂಥರಾ ಥ್ರಿಲ್ಲಿಂಗ್ ಜಾಬ್. ಅವೆಲ್ಲವನ್ನೂ ಈ ಪಾತ್ರದಲ್ಲಿ ಅಳವಡಿಸಿಕೊಳ್ತೇನೆ ಎಂದಿದ್ದಾರೆ ಹರಿಪ್ರಿಯಾ.

  ಮಾದೇಶ್ ನಿರ್ದೇಶನದ ಲಗಾಮ್ ಚಿತ್ರದಲ್ಲಿ ಉಪೇಂದ್ರ ಹೀರೋ. ಉಪ್ಪಿ ಜೊತೆ ಹರಿಪ್ರಿಯಾ ನಟಿಸುತ್ತಿರೋ ಮೊದಲ ಚಿತ್ರವಿದು. 

 • ಪಾರ್ವತಮ್ಮನ ಮಗಳಾಗಿ ಹರಿಪ್ರಿಯಾ @25

  haripriya's 25th film

  ಹರಿಪ್ರಿಯಾ d/o ಪಾರ್ವತಮ್ಮ. ಅರೆ.. ಇದ್ಯಾವಾಗ ಆಯ್ತು ಅಂದ್ಕೋಬೇಡಿ. ಇದು ಹರಿಪ್ರಿಯಾ ನಟಿಸಲಿರುವ ಹೊಸ ಸಿನಿಮಾದ ಟೈಟಲ್. ಅಂದಹಾಗೆ ಅದು ಹರಿಪ್ರಿಯಾ ಅಭಿನಯದ 25ನೇ ಸಿನಿಮಾ.

  ಹರಿಪ್ರಿಯಾ ಪಾರ್ವತಮ್ಮನಾಗಿದ್ದರೆ, ಪಾರ್ವತಮ್ಮನಾಗಿರೋದು ಸುಮಲತಾ ಅಂಬರೀಶ್. ಚಿತ್ರದಲ್ಲಿ ಹರಿಪ್ರಿಯಾ ಡಿಟೆಕ್ಟಿವ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟೈಟಲ್‍ನಲ್ಲಿ ಪಾರ್ವತಮ್ಮ ಎಂಬ ಹೆಸರಿದೆಯಾದರೂ, ರಾಜ್‍ಕುಮಾರ್ ಫ್ಯಾಮಿಲಿಗೂ, ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಅನ್ನೋದು ಹರಿಪ್ರಿಯಾ ಅವರೇ ಕೊಟ್ಟಿರುವ ಸ್ಪಷ್ಟನೆ.

  ಸಿನಿಮಾದಲ್ಲಿರೋದು ಪತ್ತೇದಾರಿಕೆಯ ಕಥೆ. ಪತ್ತೇದಾರಿಕೆ ಮತ್ತು ತಾಯಿ-ಮಗಳ ಬಾಂಧವ್ಯದ ಕಥೆ ಚಿತ್ರದಲ್ಲಿದೆ. ಚಿತ್ರಕ್ಕೆ ಶಂಕರ್ ಎಂಬುವವರು ನಿರ್ದೇಶಕರು. ಶಂಕರ್ ಈ ಹಿಂದೆ ಪವನ್ ಒಡೆಯರ್ ಅವರ ಬಳಿ ಸಹನಿರ್ದೇಶಕರಾಗಿದ್ದವರು. ಚಿತ್ರದ ಕಥೆ ಚೆನ್ನಾಗಿದೆ. ಇದೇ ಮೊದಲ ಬಾರಿಗೆ ಇನ್‍ವೆಸ್ಟಿಗೇಷನ್ ಆಫೀಸರ್ ಆಗಿ ನಟಿಸುತ್ತಿದ್ದೇನೆ. ಕೆಲವು ನೈಜ ಘಟನೆಗಳನ್ನಿಟ್ಟುಕೊಂಡು ಕಥೆ ಹೆಣೆಯಲಾಗಿದೆ ಎಂದು ಚಿತ್ರದ ಗುಟ್ಟು ಬಿಟ್ಟುಕೊಟ್ಟಿದ್ದಾರೆ ಹರಿಪ್ರಿಯಾ.

 • ಪೆಟ್ರೋಮ್ಯಾಕ್ಸ್`ಗೆ ಕಾರುಣ್ಯ ರಾಮ್

  Karunya Ram Joins 'Petromax' Team

  ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಅವರ ನಿರ್ದೇಶನದ ಹೊಸ ಸಿನಿಮಾ ಪೆಟ್ರೋಮ್ಯಾಕ್ಸ್`ಗೆ ಈಗ ವಜ್ರಕಾಯ ಬೆಡಗಿಯೂ ಸೇರಿಕೊಂಡಿದ್ದಾರೆ. ನಟಿ ಕಾರುಣ್ಯ ರಾಮ್ ಚಿತ್ರದ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಈಗಾಗಲೇ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಹರಿಪ್ರಿಯಾ ಕೂಡಾ ಇರೋದು ವಿಶೇಷ.

  ಮೂವರು ಹುಡುಗರು, ಒಬ್ಬಳೇ ಹುಡುಗಿ.. ಅವರ ಜೀವನದ ಕಥೆ.. ವಿಜಯ್ ಪ್ರಸಾದ್ ಕಥೆ ಹೇಳೋ ವಿಶೇಷತೆ.. ಹೀಗೆ ಸ್ಪೆಷಲ್ಲಾಗಿರೋ ಈ ಕಥೆಯಲ್ಲಿ ಕಾರುಣ್ಯ ರೋಲ್ ಏನು ಅನ್ನೋದು ಸದ್ಯಕ್ಕೆ ಗೊತ್ತಿಲ್ಲ.

  ಲಾಕ್ ಡೌನ್ ನಂತರ ನಾನು ಕ್ಯಾಮೆರಾ ಎದುರಿಸ್ತಿರೋ ಮೊದಲ ಸಿನಿಮಾ. ಹರಿಪ್ರಿಯಾ ಇದ್ದರೂ, ವಿಜಯ್ ಪ್ರಸಾದ್ ಚಿತ್ರಗಳಲ್ಲಿ ಕಥೆಯೇ ಪ್ರಧಾನವಾಗಿರುತ್ತೆ, ಹೀಗಾಗಿ ನೋ ಟೆನ್ಷನ್. ನನ್ನ ಪಾತ್ರ ಪ್ರಮುಖವಾಗಿದೆ ಎಂದಿದ್ದಾರೆ ಕಾರುಣ್ಯ. ನೀನಾಸಂ ಸತೀಶ್ ನಾಯಕರಾಗಿರೋ ಚಿತ್ರವಿದು.

 • ಪೋಸ್ಟರ್‍ಗಳಿಂದಲೇ ಸದ್ದು ಮಾಡಿದ ಬೆಲ್‍ಬಾಟಂ

  bellbottom poster attracts audience

  ಎ ಚಿತ್ರದ ಪೋಸ್ಟರ್ ನೆನಪಿದೆಯಲ್ಲವೇ.. ಉಪೇಂದ್ರ ಚಿತ್ರದ್ದು. ಉಪ್ಪಿ ನಿರ್ದೇಶನದ ಉಪ್ಪಿ2 ಚಿತ್ರದ ಪೋಸ್ಟರ್. ಹೀಗೆ ಪೋಸ್ಟರ್‍ಗಳ ಮೂಲಕವೇ ತಲೆಗೆ ಹುಳ ಬಿಟ್ಟು ಗೆದ್ದವರು ಉಪೇಂದ್ರ. ತಲೆಗೆ ಹುಳ ಬಿಡದೆ.. ಹಳೆಯ ದಿನಗಳನ್ನೆಲ್ಲ ನೆನಪಿಸಿ ನೆನಪಿಸಿ ಪ್ರಚಾರ ಮಾಡುತ್ತಿರುವುದು ಬೆಲ್‍ಬಾಟಂ.

  ಇದೇ ಫೆಬ್ರವರಿ 15ಕ್ಕೆ ರಿಲೀಸ್ ಆಗುತ್ತಿರುವ ಬೆಲ್‍ಬಾಟಂ ಚಿತ್ರದ ಪೋಸ್ಟರ್‍ಗಳು ತಮ್ಮ ವಿಭಿನ್ನತೆಯಿಂದಲೇ ಗಮನ ಸೆಳೆದಿವೆ. 78-80ರ ದಶಕದ ಜಾಹೀರಾತುಗಳಿದ್ದವಲ್ಲ. ಅಟ್ಲಾಸ್ ಸೈಕಲ್ಲು, ಇಮಾಮಿ, ಬೀಡಿಗಳು, ಹಳೇ ಟಿವಿ.. ಹೀಗೆ ಎಲ್ಲವೂ ಹಳೆಯ ಸ್ಟೈಲ್. ಆ ಸ್ಟೈಲ್ ಮೂಲಕವೇ ಪ್ರಚಾರ ಮಾಡಿ ಗೆದ್ದಿದ್ದಾರೆ ನಿರ್ದೇಶಕ ಜಯತೀರ್ಥ.

  ರಿಷಬ್ ಶೆಟ್ಟಿ, ಹರಿಪ್ರಿಯಾ ಜೋಡಿಯ ಚಿತ್ರ ರೆಟ್ರೋ ಸ್ಟೈಲ್ ಸಿನಿಮಾ. ನಿರ್ದೇಶಕ ಯೋಗರಾಜ್ ಭಟ್ ಕೂಡಾ ಪ್ರಧಾನ ಪಾತ್ರದಲ್ಲಿರುವ ಬೆಲ್‍ಬಾಟಂ ಇದೇ ವಾರ ತೆರೆಗೆ ಬರುತ್ತಿದೆ.

 • ಪ್ರಕಾಶ್ ರೈ, ರಜನಿಕಾಂತ್, ಉಪೇಂದ್ರಗೆ ಮಿಸ್ಸಾಗಿದ್ದ ಮುದ್ದಣ್ಣ.. ಪ್ರಭಾಕರನಿಗೆ ಒಲಿದ

  bicchugathi dalayavi muddanna

  ದಳವಾಯಿ ಮುದ್ದಣ, ಕನ್ನಡ ಚಿತ್ರರಂಗದಲ್ಲಿ ಪದೇ ಪದೇ ಪ್ರಸ್ತಾಪವಾಗುತ್ತಿದ್ದ ಐತಿಹಾಸಿಕ ಪಾತ್ರದ ಹೆಸರು. ಆತ ದುರ್ಗದ ಪಾಳೆಯಗಾರರಲ್ಲೇ ಪರಮ ಕ್ರೂರಿ ನಾಯಕ. ಆ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಹಲವರು ಚಿತ್ರ ನಿರ್ಮಿಸುವ ಯೋಜನೆ ರೂಪಿಸಿದ್ದರು. ಅಂತಹವರಲ್ಲಿ ಪ್ರಮುಖರು ಟಿ.ಎಸ್.ನಾಗಾಭರಣ.

  ನಾಗಮಂಡಲದ ಹೊತ್ತಲ್ಲಿ ಅದು ಪ್ರಕಾಶ್ ರೈ ಬಳಿಗೆ ಹೋಗಿತ್ತು. ಒಂದಷ್ಟು ತೆರೆಮರೆಯ ಕೆಲಸಗಳೂ ಆಗಿ ಅದೇಕೋ ಪ್ರಾಜೆಕ್ಟ್ ಅರ್ಧಕ್ಕೇ ನಿಂತುಬಿಟ್ಟಿತ್ತು. ಅದಾದ ಮೇಲೆ ಆ ಪಾತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ರಿಯಲ್ ಸ್ಟಾರ್ ಉಪೇಂದ್ರ ಹೆಸರೂ ಕೇಳಿಬಂತು. ಈಗ ಅವರೆಲ್ಲರ ಆಸೆ ಆಸೆಯಾಗಿಯೇ ಉಳಿದುಹೋಯ್ತು.

  ಅಂತಹ ಘಟಾನುಘಟಿ ಸ್ಟಾರ್ಗಳ ಕೈ ತಪ್ಪಿದ್ದ ದಳವಾಯಿ ಮುದ್ದಣ್ಣನ ಪಾತ್ರ ಕಾಲಕೇಯ ಪ್ರಭಾಕರ್ ಪಾಲಾಗಿದ್ದೇ ವಿಶೇಷ. ಬಿಚ್ಚುಗತ್ತಿ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದ್ದು, ಬಿಚ್ಚುಗತ್ತಿ ಭರಮಣ್ಣನಾಗಿ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಕಾಣಿಸಿಕೊಂಡಿದ್ದಾರೆ. ಇದುವರೆಗೆ ಕಮರ್ಷಿಯಲ್ ಚಿತ್ರಗಳನ್ನೇ ನಿರ್ದೇಶಿಸಿದ್ದ ಹರಿ ಸಂತೋಷ್, ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರ ಮಾಡಿದ್ದಾರೆ. ಹರಿಪ್ರಿಯಾ ಸಿದ್ದಾಂಬೆಯಾಗಿ ಕಂಗೊಳಿಸಿದ್ದಾರೆ. ಇಡೀ ಚಿತ್ರ ತಂಡಕ್ಕೆ ಬೆಂಬಲವಾಗಿ ನಿಂತಿರೋ ಹಂಸಲೇಖ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಓಂ ಸಾಯಿ ಪ್ರೊಡಕ್ಷನ್ಸ್ ಚಿತ್ರವನ್ನು ನಿರ್ಮಾಣ ಮಾಡಿದೆ.

 • ಫಸ್ಟ್ ರ್ಯಾಂಕ್ ರಾಜುಗೆ ಹರಿಪ್ರಿಯಾ ಜೋಡಿ..?

  haripriya in gurunandan's movie ?

  ಕನ್ನಡದ ಬಹುಬೇಡಿಕೆಯ ನಾಯಕಿಯಾಗಿರುವ ಹರಿಪ್ರಿಯಾ, ಗುರುನಂದನ್ ಚಿತ್ರಕ್ಕೆ ನಾಯಕಿಯಾಗುತ್ತಾರಾ..? ಹರಿಪ್ರಿಯಾ ಎದುರು ಆ ರೀತಿಯ ಪ್ರಪೋಸಲ್ ಅಂತೂ ಇದೆ. ಗುರುನಂದನ್ ನಾಯಕಿಯಾಗಿರುವ ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ನಿರ್ಮಾಪಕರು. ರಾಮ್‍ಲೀಲಾ, ಸಿಂಗ ಖ್ಯಾತಿಯ ವಿಜಯ್ ಕಿರಣ್, ಈ ಚಿತ್ರಕ್ಕೆ ನಿರ್ದೇಶಕ.

  ಲವ್ ಕಮ್ ಕಾಮಿಡಿ ಜಾನರ್‍ನ ಕಥೆ ಹರಿಪ್ರಿಯಾಗೂ ಇಷ್ಟವಾಗಿದೆಯಂತೆ. ಒಂದು ಹಂತದ ಮಾತುಕತೆ ಮುಗಿದಿದ್ದು, ಫೈನಲ್ ಹಂತದಲ್ಲಿದೆ. 

 • ಫೈನಲ್ ಸ್ಟೇಜ್`ನಲ್ಲಿ ಪೆಟ್ರೋಮ್ಯಾಕ್ಸ್

  ಫೈನಲ್ ಸ್ಟೇಜ್`ನಲ್ಲಿ ಪೆಟ್ರೋಮ್ಯಾಕ್ಸ್

  ನೀನಾಸಂ ಸತೀಶ್, ಹರಿಪ್ರಿಯಾ ಮತ್ತು ನೀರ್‍ದೋಸೆ ವಿಜಯ್ ಪ್ರಸಾದ್ ಕಾಂಬಿನೇಷನ್ನಿನ ಹೊಸ ಸಿನಿಮಾ ಪೆಟ್ರೋಮ್ಯಾಕ್ಸ್. ಮೈಸೂರು ದಸರಾ ವೇಳೆ ಚಿತ್ರೀಕರಣ ಶುರು ಮಾಡಿದ್ದ ಚಿತ್ರತಂಡ, ವರ್ಷದ ಕೊನೆಯ ಹೊತ್ತಿಗೆ ಫೈನಲ್ ಸ್ಟೇಜ್ ತಲುಪಿದೆ.

  2 ಶೆಡ್ಯೂಲ್ ಶೂಟಿಂಗ್ ಪ್ಲಾನ್ ಮಾಡಿದ್ದ ಪೆಟ್ರೋಮ್ಯಾಕ್ಸ್ ಟೀಂ, ಈಗ ಕೊನೆಯ ಹಂತದ ಚಿತ್ರೀಕರಣ ಶುರು ಮಾಡಿದೆ. ಅದು ಮುಗಿದರೆ ಡೈರೆಕ್ಟ್ ಪೋಸ್ಟ್ ಪ್ರೊಡಕ್ಷನ್.

  ಸತೀಶ್ ಮತ್ತು ಹರಿಪ್ರಿಯಾ ಇದೇ ಮೊದಲ ಬಾರಿಗೆ ಜೊತೆಯಾಗಿರುವ ಚಿತ್ರದಲ್ಲಿ ಅರುಣ್, ಕಾರುಣ್ಯ ರಾಮ್ ಮೊದಲಾದವರು ನಟಿಸಿದ್ದಾರೆ. ಸತೀಶ್ ಪಿಕ್ಚರ್ಸ್ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರೋ ಚಿತ್ರವಿದು.

 • ಬಿಚ್ಚುಗತ್ತಿ ಟ್ರೇಲರ್ ವ್ಹಾರೆವಾಹ್

  bicchugathi trailer

  ಬಿಚ್ಚುಗತ್ತಿ ಭರಮಣ್ಣನ ಕಥೆಯ ಟ್ರೇಲರ್ ಹೊರಬಿದ್ದಿದೆ. ಟೀಸರ್‍ನಲ್ಲಿ ಬೆರಗು ಹುಟ್ಟಿದ್ದ ಬಿಚ್ಚುಗತ್ತಿ, ಟ್ರೇಲರ್‍ನಲ್ಲಿ ಏಳು ಸುತ್ತಿನ ಕೋಟೆಯ ರಕ್ತಸಿಕ್ತ ಕಥೆ ಹೇಳುತ್ತಿದ್ದೇವೆ ಎಂಬ ಸುಳಿವು ಕೊಟ್ಟಿದೆ.

  ಭರಮಣ್ಣನಾಗಿ ರಾಜವರ್ಧನ್, ಸಿದ್ಧಾಂಬೆಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಹರಿಪ್ರಿಯಾಗೆ ಕೂಡಾ ಆ್ಯಕ್ಷನ್ ಸೀನ್‍ಗಳಿವೆ. ಹರಿ ಸಂತೋಷ್ ನಿರ್ದೇಶನದ ಚಿತ್ರ ರಿಲೀಸ್‍ಗೆ ರೆಡಿಯಾಗಿದ್ದು, ಬಿ.ಎಲ್.ವೇಣು ಅವರ ಕಥೆ ಚಿತ್ರಕ್ಕಿದೆ. 

 • ಬಿಚ್ಚುಗತ್ತಿ ಡಬ್ಬಿಂಗ್ ರೈಟ್ಸ್‍ಗೆ ಭಾರಿ ಡಿಮ್ಯಾಂಡ್

  bicchugatthi hindi dubbing rights gets huge demnd

  ಚಿತ್ರದುರ್ಗದ ಏಳು ಸುತ್ತಿನ ಕೋಟೆ ಸುತ್ತಿದರೆ, ಅಲ್ಲಿ ಕೇವಲ ಮದಕರಿ ನಾಯಕ, ಓಬವ್ವನ ಕಥೆಯಷ್ಟೇ ಅಲ್ಲ, ವೀರ ದಳವಾಯಿಗಳ ಕಥೆಯನ್ನೂ ಅಲ್ಲಿನ ಬಂಡೆಗಳು ಹೇಳುತ್ತವೆ. ಅಂತಹ ಒಬ್ಬ ವೀರನ ಕಥೆ ಬಿಚ್ಚುಗತ್ತಿ.

  ಮದಕರಿ ನಾಯಕನ ನಂಬುಗೆಯ ಬಂಟನಾಗಿದ್ದ ಬಿಚ್ಚುಗತ್ತಿ  ಭರಮಣ್ಣನ ಕಥೆಯಿದು. ಹರಿ ಸಂತೋಷ್ ನಿರ್ದೇಶನದ ಚಿತ್ರದಲ್ಲಿ ರಾಜವರ್ಧನ್, ಹರಿಪ್ರಿಯಾ ಪ್ರಧಾನ ಪಾತ್ರಗಳಲ್ಲಿದ್ದಾರೆ. ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚ ಸುದೀಪ್ ಆಡಿಯೋ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಇದರ ನಡುವೆ ಚಿತ್ರರಂಗಕ್ಕೆ ಸಿಕ್ಕಿರೋ ಗುಡ್ ನ್ಯೂಸ್ ಎಂದರೆ ಡಬ್ಬಿಂಗ್‍ಗೆ ಸಿಗುತ್ತಿರುವ ಡಿಮ್ಯಾಂಡ್.

  ಬಿಚ್ಚುಗತ್ತಿಯ ಹಿಂದಿ ಡಬ್ಬಿಂಗ್ ರೈಟ್ಸ್‍ಗೆ 3 ಕೋಟಿ 20 ಲಕ್ಷದ ಡಿಮ್ಯಾಂಡ್ ಬಂದಿದೆಯಂತೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ.

 • ಬಿಚ್ಚುಗತ್ತಿ ಭರಮಣ್ಣ : ಕನ್ನಡ ನೆಲದ ಗಂಡುಗಲಿಯ ಕಥೆ

  bicchugathi a movie with proud karnataka history

  ಬಿಚ್ಚುಗತ್ತಿ ಭರಮಣ್ಣ. ದುರ್ಗದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿರುವ ಸಾಹಸಿ. ಈತನ ಕುರಿತ ದಂತಕತೆಗಳು ಒಂದೆರಡಲ್ಲ. ಅಪ್ರತಿಮ ವೀರನಾಗಿದ್ದ ಬಿಚ್ಚುಗತ್ತಿ ಭರಮಣ್ಣ, ಕನ್ನಡ ನೆಲದ ಗಂಡುಗಲಿ. ಈತನ ಇತಿಹಾಸ ತಿಳಿದುಕೊಳ್ಳಬೇಕಾದ್ದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರೂ ತಪ್ಪಲ್ಲ.

  ಇತಿಹಾಸದ ಪ್ರಕಾರ, ವೀರ ಮದಕರಿ ನಾಯಕನಿಗೂ ಮೊದಲು ಚಿತ್ರದುರ್ಗವನ್ನು ಆಳಿದ್ದ ನಾಯಕರಲ್ಲಿ ಭರಮಣ್ಣ ನಾಯಕ ಪ್ರಮುಖ. ಮಹಾ ಪರಾಕ್ರಮಿ. ಇವರು ಮದಕರಿ ನಾಯಕರ ಅಜ್ಜ. ದನ ಕಾಯುತ್ತಿದ್ದ ಭರಮಣ್ಣನನ್ನು ಅರಮನೆಯ ಆನೆ ಹಾರ ಹಾಕಿ, ರಾಜನನ್ನಾಗಿಸಿದ್ದು ಇತಿಹಾಸ. ಅಧಿಕಾರಕ್ಕೆ ಬಂದ ದಿನದಿಂದ ಕೊನೆಯವರೆಗೂ ಸದಾ ಯುದ್ಧ ಮಾಡಬೇಕಾದ ಅನಿವಾರ್ಯತೆ ಭರಮಣ್ಣ ನಾಯಕನಿಗಿತ್ತು.

  ದನ ಕಾಯುತ್ತಿದ್ದ ಭರಮಣ್ಣನ ತಲೆ ಮೇಲೆ ಹಾವೊಂದು ನೆರಳು ಕೊಟ್ಟಿತ್ತಂತೆ. ಅದನ್ನು ಕಂಡ ಸಂತರೊಬ್ಬರು ನೀನು ರಾಜನಾಗುತ್ತೀಯ ಎಂದು ಹೇಳಿದ್ದರಂತೆ. ಆಗ ನಕ್ಕಿದ್ದ ಭರಮಣ್ಣ, ಅನಿರೀಕ್ಷಿತವಾಗಿ ಪಟ್ಟಕ್ಕೇರಿದಾಗ ಆ ಸಂತರನ್ನು ಹುಡುಕಿಸಿದನಂತೆ. ಅವರು ಪುಣೆಯ ಸಮೀಪ ಕಂಡಾಗ ಅವರನ್ನು ದುರ್ಗಕ್ಕೆ ಬರಬೇಕು, ಇದು ರಾಜಾಜ್ಞೆ ಎಂದರಂತೆ ಭರಮಣ್ಣನ ಸೇವಕರು. ನನಗೆ ಆಜ್ಞೆ ಮಾಡುವ ರಾಜ ಯಾರೂ ಇಲ್ಲ. ಶಿವನೊಬ್ಬನೇ ನನ್ನ ರಾಜ ಎಂದಾಗ, ಸೇವಕರ ಮಾತಿನ ತಪ್ಪು ಅರಿತ ಭರಮಣ್ಣ, ಸ್ವತಃ ಹೋಗಿ ಸಂತರನ್ನು ಕರೆತಂದನಂತೆ.

  ಆದರೆ, ತಾವು ಒಂದು ದಿನ ಶಿವ ಪೂಜೆ ಮಾಡಿದ ಜಾಗದಲ್ಲಿ ಮತ್ತೊಂದು ದಿನ ಶಿವ ಪೂಜೆ ಮಾಡಲಾರೆವು ಎಂದಾಗ, ಅವರಿಗಾಗಿ ದುರ್ಗದಲ್ಲಿ 360 ಲಿಂಗ ಸ್ಥಾಪನೆ ಮಾಡಿದ ಎನ್ನುತ್ತವೆ ಜಾನಪದ ಕಥೆಗಳು. ದುರ್ಗದ ಸುತ್ತ 21 ಕೆರೆಗಳು, 30 ದೇವಾಲಯ ಕಟ್ಟಿಸಿದ ಕೀರ್ತಿ ಭರಮಣ್ಣ ನಾಯಕನದ್ದು. ಬೃಹನ್ಮಠದ ರೂವಾರಿ, ಸಂತೆಹೊಂಡದ ಸೃಷ್ಟಿಕರ್ತ ಭರಮಣ್ಣ ನಾಯಕ.

  ರಾಜನಾದ ಕ್ಷಣದಿಂದ ಹೋರಾಟದಲ್ಲೇ ಕಾಲ ಕಳೆದ ಭರಮಣ್ಣ, ವೀರಗತ್ತಿಯನ್ನು ಒರೆಯಲ್ಲಿಡಲು ಆಗಲೇ ಇಲ್ಲ. ಹೀಗಾಗಿಯೇ ಅವರಿಗೆ ಬಿಚ್ಚುಗತ್ತಿ ಭರಮಣ್ಣ ನಾಯಕ ಎಂಬ ಹೆಸರು ಬಂತು ಎನ್ನುತ್ತದೆ ಇತಿಹಾಸ. ಇತಿಹಾಸದ ಈ ರೋಚಕ ಕಥೆಯನ್ನು ತೆರೆಗೆ ತರುತ್ತಿದ್ದಾರೆ ಹರಿ ಸಂತೋಷ್. ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಾಯಕನಾಗಿರುವ ಚಿತ್ರದಲ್ಲಿ ಹರಿಪ್ರಿಯಾ ಸಿದ್ದಾಂಬೆಯಾಗಿ ನಟಿಸಿದ್ದಾರೆ. ಚಿತ್ರ ಇದೇ ವಾರ ತೆರೆಗೆ ಬರುತ್ತಿದ್ದು, ಕನ್ನಡ ನೆಲದ ಗಂಡುಗಲಿಯ ಕಥೆಯನ್ನು ಮರೆಯದೆ ನೋಡಲು ಕನ್ನಡಿಗರೂ ಕಾತುರದಿಂದಿದ್ದಾರೆ. 1721ರಲ್ಲಿ ಇವರು ನಿಧನರಾದರೆಂದು ಇತಿಹಾಸ ಹೇಳುತ್ತದೆ. ಮೇಲುದುರ್ಗದಲ್ಲಿ ಇವರ ಸಮಾಧಿ ಇದೆ.

  ಓಂ ಸಾಯಿ ಕೃಷ್ಣ ಲಾಂಛನದಲ್ಲಿ ನಿರ್ಮಾಣವಾಗಿರುವ ಬಿಚ್ಚುಗತ್ತಿ ಚಿತ್ರಕ್ಕೆ ನಿಶಾಂತ್, ಜ್ಞಾನೇಶ್ ಬಾಬು ಬಂಡವಾಳ ಹೂಡಿದ್ದಾರೆ.

 • ಬೆಟ್ಟ ಹತ್ತಿ ಬೆಟ್ಟದ ತಾಯಿ ದರ್ಶನ ಪಡೆದ ಹರಿಪ್ರಿಯಾ

  haripriya climb chamundi hills

  ಹರಿಪ್ರಿಯಾ ದೈವಭಕ್ತೆ. ತಿರುಪತಿಯನ್ನೂ ಕೂಡಾ ಬರಿಗಾಲಿನಲ್ಲೇ ಬೆಟ್ಟ ಹತ್ತಿ ದರ್ಶನ ಪಡೆಯುವ ಹರಿಪ್ರಿಯಾ, ಮೈಸೂರಿನಲ್ಲಿ ಚಾಮುಂಡಿ ಬೆಟ್ಟವನ್ನು ಕೂಡಾ ಬರಿಗಾಲಿನಲ್ಲೇ ಹತ್ತಿ ಚಾಮುಂಡಮ್ಮನ ದರ್ಶನ ಪಡೆದಿದ್ದಾರೆ. 

  ಚಾಮುಂಡಿ ಬೆಟ್ಟಕ್ಕೆ 1001 ಮೆಟ್ಟಿಲುಗಳಿವೆ. ಬೆಟ್ಟವನ್ನು ಹತ್ತಿ ಹೋಗಿ ತಾಯಿಯ ದರ್ಶನ ಪಡೆದರೆ ಅದೇನೋ ಒಂದು ತೃಪ್ತಿ ಸಿಗುತ್ತೆ. ಇದು 2ನೇ ಬಾರಿ ನಾನು ಬೆಟ್ಟವನ್ನು ಹತ್ತುತ್ತಿರುವುದು ಎಂದು ಹೇಳಿದ್ದಾರೆ ಹರಿಪ್ರಿಯಾ. ಯುವದಸರಾ ಕಾರ್ಯಕ್ರಮಕ್ಕೆಂದ ಮೈಸೂರಿಗೆ ಬಂದಿದ್ದ ಹರಿಪ್ರಿಯಾ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಯನ್ನೂ ನೆರವೇರಿಸಿದ್ದಾರೆ.

 • ಬೆರಗು ಹುಟ್ಟಿಸಿತು ಬಿಚ್ಚುಗತ್ತಿ ಟೀಸರ್

  bicchugathi first teaser out

  ಬಿಚ್ಚುಗತ್ತಿ. ದುರ್ಗದ ಪಾಳೇಗಾರರ ಕಥೆ. ಮದಕರಿ ನಾಯಕನ ನಂಬುಗೆಯ ಬಂಟನಾಗಿದ್ದ ಬಿಚ್ಚುಗತ್ತಿಯ ಕುರಿತ ಐತಿಹಾಸಿಕ ಕಥಾ ಹಂದರ ಹೊಂದಿರುವ ಬಿಚ್ಚುಗತ್ತಿಯ ಟೀಸರ್ ರಿಲೀಸ್ ಆಗಿದೆ. ಬಿಚ್ಚುಗತ್ತಿ ಹೇಗಿರಬಹುದು ಎಂಬ ಕುತೂಹಲಕ್ಕೆ ಸಿಕ್ಕಿರುವ ಮೊದಲ ಉತ್ತರ ಈ ಟೀಸರ್.

  ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಬಿಚ್ಚುಗತ್ತಿಯಾಗಿ ನಟಿಸಿದ್ದರೆ, ಹರಿಪ್ರಿಯಾ, ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಶರತ್ ಲೋಹಿತಾಶ್ವ ಅವರ ಗಡಸು ಧ್ವನಿಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ಟೀಸರ್ ದುರ್ಗದ ಸಿಂಹಾಸನಕ್ಕಾಗಿ ದಳವಾಯಿಗಳ ನಡುವೆ ನಡೆದ ಆಂತರಿಕ ದಂಗೆಯ ಕಥೆ ಹೇಳುತ್ತದೆ. ಅಂದಹಾಗೆ ಇದು 2 ಭಾಗಗಳಲ್ಲಿ ಬರಲಿದ್ದು, ಬಿಚ್ಚುಗತ್ತಿ ದಳವಾಯಿ ದಂಗೆಯ ಮೊದಲ ಭಾಗ. ಹರಿ ಸಂತೋಷ್ ನಿರ್ದೇಶನದ ಚಿತ್ರವನ್ನು ಓಂ ಸಾಯಿಕೃಷ್ಣ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಸುದೀರ್ಘ ಗ್ಯಾಪ್ ನಂತರ ಹಂಸಲೇಖ ಸಂಗೀತ ನೀಡಿರುವ ಚಿತ್ರ ಬಿಚ್ಚುಗತ್ತಿ.

 • ಬೆರಗು ಹುಟ್ಟಿಸಿತು ಬಿಚ್ಚುಗತ್ತಿ ಟೀಸರ್

  bicchugathi first teaser out

  ಬಿಚ್ಚುಗತ್ತಿ. ದುರ್ಗದ ಪಾಳೇಗಾರರ ಕಥೆ. ಮದಕರಿ ನಾಯಕನ ನಂಬುಗೆಯ ಬಂಟನಾಗಿದ್ದ ಬಿಚ್ಚುಗತ್ತಿಯ ಕುರಿತ ಐತಿಹಾಸಿಕ ಕಥಾ ಹಂದರ ಹೊಂದಿರುವ ಬಿಚ್ಚುಗತ್ತಿಯ ಟೀಸರ್ ರಿಲೀಸ್ ಆಗಿದೆ. ಬಿಚ್ಚುಗತ್ತಿ ಹೇಗಿರಬಹುದು ಎಂಬ ಕುತೂಹಲಕ್ಕೆ ಸಿಕ್ಕಿರುವ ಮೊದಲ ಉತ್ತರ ಈ ಟೀಸರ್.

  ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಬಿಚ್ಚುಗತ್ತಿಯಾಗಿ ನಟಿಸಿದ್ದರೆ, ಹರಿಪ್ರಿಯಾ, ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಶರತ್ ಲೋಹಿತಾಶ್ವ ಅವರ ಗಡಸು ಧ್ವನಿಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ಟೀಸರ್ ದುರ್ಗದ ಸಿಂಹಾಸನಕ್ಕಾಗಿ ದಳವಾಯಿಗಳ ನಡುವೆ ನಡೆದ ಆಂತರಿಕ ದಂಗೆಯ ಕಥೆ ಹೇಳುತ್ತದೆ. ಅಂದಹಾಗೆ ಇದು 2 ಭಾಗಗಳಲ್ಲಿ ಬರಲಿದ್ದು, ಬಿಚ್ಚುಗತ್ತಿ ದಳವಾಯಿ ದಂಗೆಯ ಮೊದಲ ಭಾಗ. ಹರಿ ಸಂತೋಷ್ ನಿರ್ದೇಶನದ ಚಿತ್ರವನ್ನು ಓಂ ಸಾಯಿಕೃಷ್ಣ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಸುದೀರ್ಘ ಗ್ಯಾಪ್ ನಂತರ ಹಂಸಲೇಖ ಸಂಗೀತ ನೀಡಿರುವ ಚಿತ್ರ ಬಿಚ್ಚುಗತ್ತಿ.

 • ಬೆಲ್ ಬಾಟಂ  ಫಾರಿನ್ ಟೂರ್

  bellbottom will release soon

  ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಬೆಲ್‍ಬಾಟಂ ಸಿನಿಮಾ, ಈಗ ಫಾರಿನ್ ಟೂರ್ ಹೊರಟಿದೆ.  ಫೆಬ್ರವರಿ 22ರಿಂದ ಅಮೆರಿಕ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಸೇರಿದಂತೆ ಹಲವು ಕಡೆ ಬಿಡುಗಡೆಯಾಗುತ್ತಿದೆ. ಕಿರಿಕ್ ಪಾರ್ಟಿ,ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರಗಳ ಮೂಲಕ, ವಿದೇಶದಲ್ಲಿಯೂ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರೋ ರಿಷಬ್ ಶೆಟ್ಟಿಗೆ, ಬೆಲ್‍ಬಾಟಂ ಮೇಲೆ ಹೊಸದೇ ನಿರೀಕ್ಷೆ ಇದೆ.

  ಸ್ಯಾಂಡಲ್‍ವುಡ್ ಗೆಳೆಯರ ಬಳಗ ಅಮೆರಿಕದ 30ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ.  ಇತ್ತ, ರಾಜ್ಯದ ಹಲವು ಕಡೆ ಥಿಯೇಟರುಗಳ ಸಂಖ್ಯೆ ಹೆಚ್ಚುತ್ತಿದೆ. ಮಲ್ಟಿಪ್ಲೆಕ್ಸುಗಳಲ್ಲಿ ಶೋಗಳ ಸಂಖ್ಯೆಯೂ ಹೆಚ್ಚುತ್ತಿದೆ.

  ರಿಷಬ್ ಶೆಟ್ಟಿಗೆ ಹರಿಪ್ರಿಯಾ ಜೋಡಿಯಾಗಿದ್ದು, ಜಯತೀರ್ಥ ನಿರ್ದೇಶನ ಮಾಡಿದ್ದಾರೆ.

 • ಬೆಲ್‍ಬಾಟಂ ಅಪ್ಪಟ ಶುದ್ಧ ಕಾಮಿಡಿ ಸಿನಿಮಾ.

  healthy comedy and no vulgarity n bell bottom

  ನಾಳೆ ರಿಲೀಸ್ ಆಗುತ್ತಿರುವ ಬೆಲ್‍ಬಾಟಂ ಸಿನಿಮಾ, ಅಪ್ಪಟ ಕಾಮಿಡಿ ಥ್ರಿಲ್ಲರ್. ರಿಷಬ್ ಶೆಟ್ಟಿ, ಹರಿಪ್ರಿಯಾ ನಟಿಸಿರುವ ಚಿತ್ರದಲ್ಲಿ ಕಾಮಿಡಿಗೆ ಕೊರತೆಯಿಲ್ಲ. ಆದರೆ, ಇಲ್ಲೇ ಒಂದು ವಿಭಿನ್ನತೆಯಿದೆ. ಇತ್ತೀಚೆಗೆ ಕಾಮಿಡಿ ಸಿನಿಮಾಗಳೆಂದರೆ, ಅಲ್ಲೊಂದಿಷ್ಟು ಡಬಲ್ ಮೀನಿಂಗ್, ತ್ರಿಬ್ಬಲ್ ಮೀನಿಂಗ್, ಡೈರೆಕ್ಟ್ ಮೀನಿಂಗ್ ಡೈಲಾಗುಗಳು ತುಂಬಿ ತುಳುಕುತ್ತವೆ. ಆದರೆ, ಬೆಲ್‍ಬಾಟಂ ಹಾಗಲ್ಲ. ಅಲ್ಲಿರುವುದು ಶುದ್ಧ, ಸ್ವಚ್ಚ ಕಾಮಿಡಿ.

  ಡಿಟೆಕ್ಟಿವ್ ಸಿನಿಮಾ ಅಂದಾಕ್ಷಣ, ಇದು ಗಂಭೀರವಾದ ಕಥೆಯಲ್ಲ. ಕಾಮಿಡಿ ಜಾನರ್‍ನಲ್ಲಿಯೇ ಸಾಗುವ ಸಿನಿಮಾ. ಕಾಮಿಡಿ ಎಂದಾಕ್ಷಣ, ಅಲ್ಲಿ ಅಶ್ಲೀಲತೆ, ಮುಜುಗರ ತರಿಸುವ ಸಂಭಾಷಣೆ ಯಾವುದೂ ಇಲ್ಲ. ಇದು ಅಪ್ಪಟ ಕೌಟುಂಬಿಕ ಸಿನಿಮಾ ಎಂದು ಭರವಸೆ ನೀಡಿದ್ದಾರೆ ನಿರ್ದೇಶಕ ಜಯತೀರ್ಥ. ಸಂತೋಷ್ ಕುಮಾರ್ ನಿರ್ಮಾಣದ ಚಿತ್ರದಲ್ಲಿ ಯೋಗರಾಜ್ ಭಟ್, ಶಿವಮಣಿ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery