` haripriya - chitraloka.com | Kannada Movie News, Reviews | Image

haripriya

 • ಈ ವರ್ಷದ ಮೊದಲ ಸೆಂಚುರಿ ಬೆಲ್‍ಬಾಟಂ

  bell bottom is the first movie to complete 100 days

  ಬೆಲ್‍ಬಾಟಂ, ಈ ವರ್ಷದ ಮೊದಲ ಶತದಿನೋತ್ಸವ ಕಂಡ ಚಿತ್ರವಾಗಿ ಹೊರಹೊಮ್ಮಿದೆ. 2019ರಲ್ಲಿ ಹಲವು ಚಿತ್ರಗಳು ರಿಲೀಸ್ ಆಗಿವೆ. ಯಶಸ್ಸನ್ನೂ ಕಂಡಿವೆ. ಆದರೆ, ಚಿತ್ರಮಂದಿರಗಳಲ್ಲಿ 100 ದಿನ ದಾಟಿದ ಮೊದಲ ಚಿತ್ರವಾಗಿರುವುದು ಬೆಲ್‍ಬಾಟಂ.

  ರಿಷಬ್ ಶೆಟ್ಟಿ ಅಭಿನಯದ ಮೊದಲ ಚಿತ್ರ ಬೆಲ್‍ಬಾಟಂ. ಸಹಜವಾಗಿಯೇ ರಿಷಬ್, ಸಂಭ್ರಮವನ್ನೆಲ್ಲ ಬೊಗಸೆಯಲ್ಲೇ ಹಿಡಿದಿಟ್ಟುಕೊಂಡು ಖುಷಿಪಟ್ಟಿದ್ದಾರೆ. ಚಿತ್ರದ ಗೆಲುವಿನ ಕ್ರೆಡಿಟ್‍ನ್ನು ನಿರ್ದೇಶಕ, ನಿರ್ಮಾಪಕ, ಸಹಕಲಾವಿದರು ಹಾಗೂ ಕಥೆಗಾರರಿಗೆ ಕೊಟ್ಟಿದ್ದಾರೆ.

  ರಿಷಬ್, ಜಯತೀರ್ಥ, ಹರಿಪ್ರಿಯಾ ಸೇರಿದಂತೆ ಇಡೀ ಚಿತ್ರತಂಡದ ಒಟ್ಟು ಶ್ರಮವೇ ಇವತ್ತಿನ ಗೆಲುವಿನ ಗುಟ್ಟು ಎನ್ನುವುದು ನಿರ್ಮಾಪಕ ಸಂತೋಷ್ ಕುಮಾರ್ ವಾದ.

  ಡಿಟೆಕ್ಟಿವ್ ದಿವಾಕರನಾಗಿ ರಿಷಬ್, ಕುಸುಮ ಪಾತ್ರದಲ್ಲಿ ಹರಿಪ್ರಿಯಾ ಪ್ರಧಾನ ಪಾತ್ರಗಳಲ್ಲಿದ್ದರೆ, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಶಿವಮಣಿ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಅಜನೀಶ್ ಲೋಕನಾಥ್ ನಿರ್ದೇಶನದ ಹಾಡುಗಳು ಮೋಡಿ ಮಾಡಿದ್ದವು.

 • ಎಲ್ಲಿದ್ದೆ ಇಲ್ಲಿ ತನಕ ಟೀಸರ್‌ ಬಂತು..

  ellidhe illithanaka teaser lauched

  ಕಿರುತೆರೆಯ ಟಾಕಿಂಗ್ ಸ್ಟಾರ್ ಸೃಜನ್‌ ಲೋಕೇಶ್, ಮತ್ತೊಮ್ಮೆ ಹೀರೋ ಆಗಿರುವ ಸಿನಿಮಾ ಎಲ್ಲಿದ್ದೆ ಇಲ್ಲಿ ತನಕ. ಕೆಲವು ವರ್ಷಗಳ ನಂತರ ಹೀರೋ ರೋಲ್ನಲ್ಲಿ ಕಾಣಿಸಿಕೊಂಡಿರುವ ಚಿತ್ರವಿದು. ಚಿತ್ರಕ್ಕೆ ಅವರೇ ನಿರ್ಮಾಪಕ. ಹರಿಪ್ರಿಯಾ ನಾಯಕಿಯಾಗಿರೋ ಚಿತ್ರವಿದು. ಚಿತ್ರದ ಮೊದಲ ಟೀಸರ್ ಈಗ ಹೊರಬಿದ್ದಿದೆ.

  ಪ್ರತಿ ದಿನ ಚಿತ್ರದ ಒಂದೊಂದೇ ಪಾತ್ರಗಳನ್ನು ಪರಿಚಯಿಸುತ್ತಿದ್ದ ಟೀಂ, ಈಗ ಟೀಸರ್ ಬಿಟ್ಟಿದೆ.ಫಾರಿನ್‌ನಲ್ಲಿ ಶೂಟಿಂಗ್ ಆಗಿರುವ ಹಾಡಿನ ಸೀನ್ನ್ನು ಟೀಸರ್ಗೆ ಬಳಸಿಕೊಳ್ಳಲಾಗಿದೆ. ಸೃಜಾ ಫಾರಿನ್ ಹುಡುಗಿಯರ ಮೇಲೆ ಕಣ್ಣು ಹಾಕುತ್ತಾ ಹಾಡುವ ಡ್ಯಾನ್ಸಿಗೆ ನೀ ನಗೆ ಹಂಚಿ ಮಿಂಚುವ ನಮ್ಮ ಕನ್ನಡದವ.. ಎಂಬ ಚೆಂದದ ಸಾಂಗೂ ಇದೆ.

  ತೇಜಸ್ವಿ ನಿರ್ದೇಶನದ ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತವಿದೆ. ಗಿರಿಜಾ ಲೋಕೇಶ್‌, ಮಂಡ್ಯ ರಮೇಶ್‌, ತಾರಾ, ಅವಿನಾಶ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.

 • ಎಲ್ಲಿದ್ದೆ ಇಲ್ಲೀ ತನಕ.. ಹುಟ್ಟುಹಬ್ಬಕ್ಕೆ ಸೀಮಂತ ಮಾಡೋ ತನಕ..

  ellidhe illitanaka surprise

  ಎಲ್ಲಿದ್ದೆ ಇಲ್ಲಿ ತನಕ.. ಚಿತ್ರ ರಿಲೀಸ್ ಆಗುತ್ತಿದೆ. ಟೀಂನಲ್ಲಿರೋದು ಸೃಜನ್ ಲೋಕೇಶ್, ಹರಿಪ್ರಿಯಾ. ಮಜಾ ಟಾಕೀಸ್ ತೇಜಸ್ವಿಯೇ ಚಿತ್ರಕ್ಕೆ ನಿರ್ದೇಶಕ. ನಕ್ಕು.. ನಗಿಸೋದ್ರಲ್ಲಿ ಎತ್ತಿದ ಕೈ ಆಗಿರೋ ಸೃಜನ್, ಚಿತ್ರದಲ್ಲಿ ನಟಿಸಿರೊ ಗಿರಿಗೆ ಡಿಫರೆಂಟ್ ಹುಟ್ಟುಹಬ್ಬದ ಕಾಣಿಕೆ ಕೊಟ್ಟಿದ್ದಾರೆ.

  ಗಿರಿ ಈ ಚಿತ್ರದಲ್ಲಿ ಪೋಷಕ ನಟರಾಗಿ ನಟಿಸಿದ್ದಾರೆ. ಶೂಟಿಂಗ್ನಲ್ಲಿರೋ ವೇಳೆಯಲ್ಲಿ ಗಿರಿ ಹುಟ್ಟುಹಬ್ಬ ಬಂದಿದೆ. ಹುಟ್ಟುಹಬ್ಬಕ್ಕೆ ಎಲ್ಲರು ಏನ್ ಮಾಡ್ತಾರೆ ಹೇಳಿ.. ಕೇಕ್ ಕಟ್ ಮಾಡಿಸಿ, ತಿನ್ನಿಸಿ, ಮುಖಕ್ಕೆ ಬಳಿದು.. ಸಂಜೆಗೊಂದು ಚಿಯರ್ಸ್ ತಾನೇ.. ಆದರೆ, ಅಲ್ಲಿ ಆಗಿರುವುದೇ ಬೇರೆ.

  ಇಡೀ ಚಿತ್ರತಂಡದವರು ಗಿರಿಯನ್ನು ಚೇರ್ ಮೇಲೆ ಕೂರಿಸಿ, ಶಾಲು ಹೊದಿಸಿ.. ಸಾಲಾಗಿ ಬಂದು ಕೆನ್ನೆಗೆ ಹರಿಶಿಣ ಬಳಿದು.. ಉಡುಗೊರೆ ಕೊಟ್ಟು ಹೋಗಿದ್ದಾರೆ. ಅಫ್ಕೋರ್ಸ್.. ಸಂಜೆಗೆ ಪಾರ್ಟಿ ಕೊಡಿಸಬೇಕು ಅನ್ನೋದನ್ನು ಮರೆತಿಲ್ಲ. ಇಷ್ಟೆಲ್ಲ ಆದ್ರೂ ಗಿರಿ ಇನ್ನೂ ಪಾರ್ಟಿ ಕೊಡಿಸಿಲ್ಲವಂತೆ. ಹುಟ್ಟುಹಬ್ಬಕ್ಕೆ ಪಾರ್ಟಿ ಓಕೆ.. ಸೀಮಂತಕ್ಕೂ ಪಾರ್ಟಿ ಕೊಡ್ಬೇಕಾ ಅಂತಿದ್ದಾರೆ ಗಿರಿ. ರಿಲೀಸ್ ಆದ ಮೇಲೆ ಕೊಡೋ ಪಾರ್ಟಿಯನ್ನೇ ನನ್ನ ಸೀಮಂತದ ಪಾರ್ಟಿ ಅಂತಾ ಹೇಳದಿದ್ರೆ ಸಾಕು..

 • ಕಣ್ಣ ನೋಟದಲ್ಲೇ ಕಿಚ್ಚು ಹಚ್ಚಿದ ಹರಿಪ್ರಿಯಾ

  haripriya's look in soojidhara

  ಹರಿಪ್ರಿಯಾ ಹುಟ್ಟುಹಬ್ಬಕ್ಕೆಂದೇ ವಿಶೇಷವಾಗಿ ಸೂಜಿದಾರ ಚಿತ್ರತಂಡ ಪುಟ್ಟದೊಂದು ಟೀಸರ್ ಹೊರಬಿಟ್ಟಿದೆ. 1 ನಿಮಿಷದ ಟೀಸರ್‍ನಲ್ಲಿ ಹರಿಪ್ರಿಯಾ ಕಣ್ಣ ನೋಟದಲ್ಲೇ ಕಿಚ್ಚು ಹಚ್ಚಿದ್ದಾರೆ. ತಲೆ ಬಾಚಿಕೊಳ್ಳುತ್ತಾ ಹೊರಬರುವ ಹರಿಪ್ರಿಯಾ, ಮಹಡಿ ಮೇಲಿನಿಂಚ ಬಾಚಣಿಗೆ ಬೀಳಿಸುತ್ತಾರೆ. ಯಶವಂತ್ ಶೆಟ್ಟಿ ಬಾಚಣಿಗೆ ಎತ್ತಿ ಕೊಡುತ್ತಾರೆ. ಟೀಸರ್‍ನಲ್ಲಿರೋದು ಇಷ್ಟೆ. ಆದರೆ, ಇದರ ನಡುವೆ ಪುಟ್ಟದಾದ ಒಂದು ಹಾಡು, ಹರಿಪ್ರಿಯಾ ಕಣ್ಣೋಟ ನೋಡುಗರೆದೆಗೆ ಕಿಚ್ಚು ಹಚ್ಚಿದೆ. ಗ್ಲಾಮರಸ್ ಗೃಹಿಣಿಯಾಗಿ, ನಿರಾಭರಣ ಸುಂದರಿಯಾಗಿ ಗೆದ್ದಿದ್ದಾರೆ ಹರಿಪ್ರಿಯಾ.

  ರಂಗಭೂಮಿ ಹಿನ್ನೆಲೆಯಿಂದ ಮೌನೇಶ್ ಬಡಿಗೇರ್ ನಿರ್ದೇಶನದ ಚಿತ್ರಕ್ಕೆ ಅಭಿಜಿತ್ ಕೋಟೆಗಾರ್ ಉಡುಪಿ ಮತ್ತು ಸಚ್ಚಿಂದ್ರ ನಾಯಕ್ ಬೆಳ್ತಂಗಡಿ ನಿರ್ಮಾಪಕರು. 

 • ಕನ್ನಡ್ ಗೊತ್ತಿಲ್ಲ ಹರಿಪ್ರಿಯಾ

  haripriya's new movie is kannad gotilla

  ಎಷ್ಟ್ ಚೆಂದ ಕನ್ನಡ ಮಾತಾಡ್ತಾರೆ. ಯಾರ್ರೀ ಹೇಳಿದ್ದು, ಹರಿಪ್ರಿಯಾಗೆ ಕನ್ನಡ ಗೊತ್ತಿಲ್ಲ ಅಂತಾ ಕೇಳ್ಬೇಡಿ. ಇದು ಹರಿಪ್ರಿಯಾ ಅಭಿನಯದ ಹೊಸ ಕನ್ನಡ ಚಿತ್ರದ ಟೈಟಲ್. ಕನ್ನಡ್ ಗೊತ್ತಿಲ್ಲ.

  ಆರ್‍ಜೆ ಮಯೂರ್ ರಾಘವೇಂದ್ರ ನಿರ್ದೇಶನದ ಹಾರರ್ ಚಿತ್ರಕ್ಕೆ ಕನ್ನಡ್ ಗೊತ್ತಿಲ್ಲ ಅನ್ನೋ ಹೆಸರಿಡಲಾಗಿದೆ. ಕನ್ನಡ್ ಗೊತ್ತಿಲ್ಲ ಅನ್ನೋದು ಸಾಮಾನ್ಯವಾಗಿ ಬೆಂಗಳೂರಿನಲ್ಲಷ್ಟೇ ಕೇಳಿ ಬರೋ ಡೈಲಾಗು. ಬೆಂಗಳೂರಿನಲ್ಲೇ ಎಷ್ಟೋ ವರ್ಷಗಳಿಂದ ಇರುವವರೂ ಕೂಡಾ ಏನಾದರೂ ಕೇಳಿದ್ರೆ, ಕನ್ನಡ್ ಗೊತ್ತಿಲ್ಲ ಅಂತಾ ಸ್ಟೈಲಾಗಿ ಸ್ಮೈಲ್ ಕೊಡ್ತಾರೆ. ಹಾರರ್ ಕಥೆಗೂ, ಈ ಟೈಟಲ್‍ಗೂ ಏನ್ ಸಂಬಂಧ ಅನ್ನೋವ್ರು ಸಿನಿಮಾ ಬರೋವರೆಗೂ ಕಾಯ್ಬೇಕು. 

  ಚಿತ್ರದ ಟೈಟಲ್ ಕೇಳಿ ಕುತೂಹಲ ಹೆಚ್ಚಿತು. ಕಥೆ ಕೇಳಿದೆ. ಸ್ಕ್ರಿಪ್ಟ್ ಥ್ರಿಲ್ ಕೊಟ್ಟಿತು. ಪಾತ್ರಗಳನ್ನು ಸಂಯೋಜಿಸಿರುವ ರೀತಿಯೇ ಅದ್ಭುತ. ಕನ್ನಡ ಬಂದರೂ ಕನ್ನಡ ಮಾತನಾಡದೇ ಇರುವವರು, ಕನ್ನಡ ಗೊತ್ತಿಲ್ಲದಿದ್ದರೂ, ಕನ್ನಡ ಮಾತನಾಡೋಕೆ ಪ್ರಯತ್ನಿಸುವವರು, ಇಲ್ಲಿ ಸಂಪಾದನೆ ಮಾಡಿ ಮತ್ತೆ ತಮ್ಮ ಊರಿಗೆ ವಾಪಸ್ ಆಗುವ ಯೋಚನೆಯಲ್ಲಿರುವ ವಲಸಿಗರ ಸುತ್ತಲೇ ಕಥೆ ಸಾಗುತ್ತೆ ಎಂದು ವಿವರ ಕೊಟ್ಟಿದ್ದಾರೆ ಹರಿಪ್ರಿಯಾ.

  2018, ಹರಿಪ್ರಿಯಾ ಪಾಲಿಗೆ ಸಂಭ್ರಮದ ವರ್ಷ ಎಂದರೆ ತಪ್ಪಾಗಲಿಕ್ಕಿಲ್ಲ. ಈಗಾಗಲೇ ಹರಿಪ್ರಿಯಾ ಅಭಿನಯದ 4 ಚಿತ್ರಗಳು ಬಿಡುಗಡೆಯಾಗಿದ್ದರೆ, 5 ಕ್ಯೂನಲ್ಲಿವೆ. ಈಗ ಆ ಕ್ಯೂಗೆ ಹೊಸ ಸಿನಿಮಾ ಸೇರ್ಪಡೆಗೊಂಡಿದೆ.

 • ಕನ್ನಡ್ ಗೊತ್ತಿಲ್ಲ ಹೀರೋಯಿನ್ ಕನ್ನಡದಲ್ಲಿ ಪತ್ರ..!

  haripriya's kannada letter goes viral

  ನನಗೆ ಕನ್ನಡ ತುಂಬಾ ಚೆನ್ನಾಗಿ ಬರುತ್ತೆ. ಓದಲು, ಮಾತನಾಡಲು ಹಾಗೂ ಬರೆಯಲು ಬರುತ್ತೆ. ಅಂದವಾದ  ಬರವಣಿಗೆಗೆ ಎಕ್ಸ್ಟ್ರಾ ಮಾರ್ಕು ಪಡೆಯುತ್ತಿದೆ ಎಂದು ಸುದೀರ್ಘವಾಗಿ ಅಭಿಮಾನಿಗಳಿಗೊಂದು ಪತ್ರ ಬರೆದಿದ್ದಾರೆ ಹರಿಪ್ರಿಯಾ.

  ಹರಿಪ್ರಿಯಾ ಕನ್ನಡದ ಹುಡುಗಿ. ಅವರು ಈಗ ಕನ್ನಡದಲ್ಲೇ ಪತ್ರ ಬರೆದಿರೋದ್ರಲ್ಲೇನು ವಿಶೇಷ ಅಂತೀರಾ.. ಹರಿಪ್ರಿಯಾ ತಮ್ಮ ಸೋಷಿಯಲ್ ಮೀಡಿಯಾ ಪೇಜುಗಳಲ್ಲಿ ಆಕ್ಟಿವ್ ಆಗಿರುವುದು ಇಂಗ್ಲಿಷ್‍ನಲ್ಲಿ. ನೀವೇಕೆ ಕನ್ನಡ ಬಳಸುತ್ತಿಲ್ಲ ಎಂಬ ಹಲವಾರು ಕನ್ನಡಿಗರ ಪ್ರಶ್ನೆಗೆ ಕನ್ನಡದಲ್ಲಿಯೇ.. ಮುದ್ದಾದ ಅಕ್ಷರಗಳಲ್ಲಿ.. ಪತ್ರ ಬರೆದು ಉತ್ತರ ಕೊಟ್ಟಿದ್ದಾರೆ ಹರಿಪ್ರಿಯಾ.

  ಅಂದಹಾಗೆ ಹರಿಪ್ರಿಯಾ ಅಭಿನಯದ ಚಿತ್ರಗಳಲ್ಲಿ ಕನ್ನಡ್ ಗೊತ್ತಿಲ್ಲ ಎಂಬ ಚಿತ್ರವೂ ಇದೆ. ಆದರೆ, ಇದೆಲ್ಲವನ್ನೂ ಮೀರಿ ಹರಿಪ್ರಿಯಾ ಅವರ ಬರಹ, ಮುದ್ದು ಮುದ್ದಾದ ಅಕ್ಷರ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

 • ಕನ್ನಡ್ ಗೊತ್ತಿಲ್ಲ.. ಟ್ರೇಲರ್ ಬಂತಲ್ಲ.

  kannada gothilla trailer out

  ಸುಧಾರಾಣಿ, ಹರಿಪ್ರಿಯಾ ಅಭಿನಯಿಸಿರುವ ಹೊಸ ಸಿನಿಮಾ ಕನ್ನಡ್ ಗೊತ್ತಿಲ್ಲ. ಒಂದು ಸಸ್ಪೆನ್ಸ್ ಥ್ರಿಲ್ಲರ್. ನಿಗೂಢ ಕಥೆಗೂ.. ಕನ್ನಡ್ ಗೊತ್ತಿಲ್ಲ ಟೈಟಲ್‍ಗೂ ಏನು ಸಂಬಂಧ..? ಸಿನಿಮಾವನ್ನೇ ನೋಡಬೇಕು.

  ಸುಧಾರಾಣಿ ಮತ್ತು ಹರಿಪ್ರಿಯಾ ಇಬ್ಬರೂ ಖಡಕ್ ಆಫೀಸರುಗಳಾಗಿ ಮಿಂಚು ಹರಿಸಿದ್ದಾರೆ. ಹರಿಪ್ರಿಯಾ ಬೋಲ್ಡ್ & ಬ್ಯೂಟಿಫುಲ್ ಖಡಕ್ ಪೊಲೀಸು. ಸಿಗರೇಟು ಎಳೆಯುವ.. ವಿಲನ್ ಕಪಾಳಕ್ಕೆ ಬಾರಿಸುವ ಹರಿಪ್ರಿಯಾ ಪೀಸೂ ಹೌದು. ಪೊಲೀಸೂ ಹೌದು. ಅರರೆ.. ಇದು ಟ್ರೇಲರ್‍ನ ಡೈಲಾಗು.

  ಕುಮಾರ ಕಂಠೀರವ ನಿರ್ಮಾಣದ ಸಿನಿಮಾಗೆ ಆರ್.ಜೆ.ಮಯೂರ್ ನಿರ್ದೇಶಕ.

 • ಕಷ್ಟ ಬಂದೋರೆಲ್ಲ ಸೆಲ್ಫಿ ನೋಡ್ಕಳಿ

  life jothe ondu selfie has a good message about life

  ಲೈಫ್ ಜೊತೆ ಒಂದ್ ಸೆಲ್ಫಿ... ದಿನಕರ್ ಅವರ ಪತ್ನಿ ಮಾನಸಾ ಅವರು ಬರೆದಿರುವ ಕಥೆ. ಪ್ರತಿಯೊಬ್ಬರ ಜೀವನದಲ್ಲೂ ಕಷ್ಟ ಅನ್ನೋದು ಬರುತ್ತೆ. ಒಬ್ಬೊಬ್ಬರೂ ಆ ಕಷ್ಟವನ್ನು ಬೇರೆ ಬೇರೆ ರೀತಿ ಫೇಸ್ ಮಾಡ್ತಾರೆ. ತಾಳ್ಮೆಯೊಂದಿದ್ದರೆ ಎಂಥ ಕಷ್ಟವನ್ನಾದರೂ ಪಳಗಿಸಬಹುದು, ಗೆಲ್ಲಬಹುದು ಅನ್ನೋದೇ ಚಿತ್ರದ ಕಥೆ. 

  ಮಾನಸಾ, ಇದಕ್ಕೂ ಮೊದಲು ಕೆಲವೊಂದಿಷ್ಟು ಕಥೆ ಹೇಳಿದ್ದರು. ಅದೇಕೋ, ಅವು ನನಗೆ ಇಷ್ಟವಾಗಿರಲಿಲ್ಲ. ಈ ಕಥೆ ಕೇಳುತ್ತಿದ್ದಂತೆಯೇ ಥ್ರಿಲ್ ಆಯ್ತು. ಈಗ ಸಿನಿಮಾ ರೆಡಿ ಎನ್ನುತ್ತಾರೆ ದಿನಕರ್.

  ಸಾರಥಿ ನಂತರ ಮತ್ತೆ ನಿರ್ದೇಶನ ವಿಳಂಬವಾಗೋಕೆ ಕಾರಣ, ಚೇಂಜ್. ಹಳೆಯ ಸಿನಿಮಾಗಿಂತ, ನಾನು ಮಾಡುವ ಹೊಸ ಸಿನಿಮಾ ಡಿಫರೆಂಟ್ ಆಗಿರಬೇಕು. ನನಗೆ ಅದು ಹೊಸತೆನಿಸಬೇಕು. ಹೀಗಾಗಿ ಲೇಟ್ ಎನ್ನುತ್ತಾರೆ.

  ಪ್ರಜ್ವಲ್ ಮತ್ತು ಪ್ರೇಮ್ ಜೊತೆ, ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿರೋದು ಹರಿಪ್ರಿಯಾ. ಅಲ್ಲೊಂದು ಬ್ಯೂಟಿಫುಲ್ ಪ್ರೇಮಕಥೆಯಿದೆ. ಅದು ಪ್ರೇಮಕಾವ್ಯ ಎನ್ನುತ್ತಾರೆ ದಿನಕರ್. ಸಿನಿಮಾ ರಿಲೀಸ್‍ಗೆ ರೆಡಿ. ಮುಂದಿನ ವಾರ ಥಿಯೇಟರ್‍ಗೆ ಹೋಗಿ ಲೈಫ್ ಜೊತೆ ಒಂದ್ ಸೆಲ್ಫಿ ತಗೊಳ್ಳಿ.

 • ಕಳ್‍ಭಟ್ಟಿ ಕುಸುಮಾಗೆ ದಿವಾಕರನ ಪರದಾಟ ನೋಡಿ ಮಜಾ ಬಂತು..!

  bellbottom 50 days celebrations

  ಬೆಲ್‍ಬಾಟಂ ಸಿನಿಮಾ 50 ದಿನ ಪೂರೈಸಿ ಶತದಿನೋತ್ಸವದತ್ತ ಮುನ್ನುಗ್ಗುತ್ತಿರುವಾಗಲೇ ಚಿತ್ರತಂಡ 50ನೇ ದಿನದ ಸೆಲಬ್ರೇಷನ್ ಮಾಡಿದೆ. ಚಿತ್ರದ ಪಾತ್ರಧಾರಿಗಳಾದ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾಗೆ ಖುಷಿ ಕೊಟ್ಟಿರುವುದು ಚಿತ್ರ ನೋಡಿದವರೆಲ್ಲ ಅವರನ್ನು ಕಳ್‍ಭಟ್ಟಿ ಕುಸುಮ, ಡಿಟೆಕ್ಟಿವ್ ದಿವಾಕರ ಎಂಬ ಪಾತ್ರದ ಮೂಲಕವೇ ಗುರುತಿಸುತ್ತಿರುವುದು.

  ಆ ಖುಷಿಯನ್ನು ಹಂಚಿಕೊಳ್ಳುತ್ತಲೇ ಹರಿಪ್ರಿಯಾ, ಏತಕೆ.. ಹಾಡಿನ ಶೂಟಿಂಗ್ ವೇಳೆ ರಿಷಬ್ ಶೆಟ್ಟಿ ಡ್ಯಾನ್ಸ್ ಪ್ರಾಕ್ಟೀಸ್ ನೋಡಿ ಮಜಾ ತೆಗೆದುಕೊಂಡಿದ್ದನ್ನು ಹೇಳಿ ಖುಷಿ ಪಟ್ಟರು. ನಾನು ಅನಂತ್‍ನಾಗ್ ಅಭಿಮಾನಿ. ಡ್ಯಾನ್ಸ್ ಬರಲ್ಲ, ಅದಕ್ಕೇ ನಿರ್ದೇಶಕರಿಗೆ ಹೇಳ್ತೇನೆ, ಹೀರೋಯಿನ್ ಡ್ಯಾನ್ಸ್ ಮಾಡುವಾಗ ನಾನು ಬೇಕಾದರೆ ಪಂಚೆಯುಟ್ಟುಕೊಂಡು ಓಡಾಡಿಕೊಂಡಿರುತ್ತೇನೆ ಎಂದು ಹೇಳಿ ನಕ್ಕಿದ್ದಾರೆ.

 • ಕಾಮಿಡಿ ಅಲ್ಲ.. ಸೀರಿಯಸ್ ಚಿಕ್ಕಣ್ಣ

  chikkanna in rajahuli

  ಚಿಕ್ಕಣ್ಣ ಎಂದ ಕೂಡಲೇ ಜನರ ಮುಖದಲ್ಲಿ ನಗು ಅರಳುತ್ತೆ. ಮುಖ ನೋಡಿದರೆ ಹಲ್ಲು ಓಪನ್ ಆಗುತ್ತೆ. ಇನ್ನು ಚಿಕ್ಕಣ್ಣ ಡೈಲಾಗ್ ಹೊಡೆಯೋಕೆ ಶುರು ಮಾಡಿದ್ರೆ, ಗಹಗಹಿಸಿ ನಗುವುದಷ್ಟೇ ಬಾಕಿ. ಅದು ಚಿಕ್ಕಣ್ಣ ಕಾಮಿಡಿಗಿರುವ ಸ್ಪೆಷಾಲಿಟಿ.

  ಆದರೆ, ಅಂಥಾ ಚಿಕ್ಕಣ್ಣ ಈಗ ಸೀರಿಯಸ್ ಪಾತ್ರ ಮಾಡಿದ್ದಾರಂತೆ. ಸಂಹಾರ ಚಿತ್ರದಲ್ಲಿ ಚಿಕ್ಕಣ್ಣ ಅವರದ್ದು ಇನ್ಸ್‍ಪೆಕ್ಟರ್ ಪಾತ್ರ. ಸಿಕ್ಕಾಪಟ್ಟೆ ಸೀರಿಯಸ್ ಆಗಿದೆ ಎಂದಿದ್ದಾರೆ ಚಿಕ್ಕಣ್ಣ.

  ಆದರೆ, ಟ್ರೇಲರ್‍ನಲ್ಲಿ ಕಾಮಿಡಿಯೇ ಇದ್ಯಲ್ಲ ಅಂದ್ರೆ, ಅದು ಸಿಚುಯೇಷನ್ ಕಾಮಿಡಿ ಅಷ್ಟೆ, ಉಳಿದಂತೆ ಸೀರಿಯಸ್ ಪಾತ್ರ ಅಂತಾರೆ ಚಿಕ್ಕಣ್ಣ.

  ಅಂದಹಾಗೆ ಚಿಕ್ಕಣ್ಣಗೆ ಒಬ್ಬ ನಟನಾಗಿ ಇಮೇಜ್ ಸೃಷ್ಟಿಸಿದ್ದು ರಾಜಾಹುಲಿ. ಆ ಚಿತ್ರದ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶನದಲ್ಲಿಯೇ ಚಿಕ್ಕಣ್ಣ ಹೊಸ ಇಮೇಜ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಗುಡ್‍ಲಕ್.

 • ಚಿಕ್ಕೋಳಾಗಿ ಚಿಕ್ಕೋಳಾಗಿ ಹೋದ್ಲು ಸ್ಕೂಲಿಗೆ..

  haripriya becomes school girl again

  ಚಕ್ಕರ್ ಹಾಕು ಚಕ್ಕರ್ ಹಾಕು ನಿನ್ನ ಜಾಬಿಗೆ.. ಚಿಕ್ಕೋಳಾಗಿ ಚಿಕ್ಕೋಳಾಗಿ ಬಾರೆ ಸ್ಕೂಲಿಗೆ ಹಾಡು ನೆನಪಿದ್ಯಾ..? ಚಿಕ್ಕೋವ್ರಾಗಿ ಸ್ಕೂಲಿಗೆ ಹೋಗೋ ಕಲ್ಪನೆಯೇ ಒಂದು ಮಜಾ. ಅಂಥಾದ್ದೊಂದು ಮಜಾ ಅನುಭವಿಸಿರೋದು ಹರಿಪ್ರಿಯಾ.

  ಇತ್ತೀಚೆಗೆ ತೋಟಕ್ಕೆ ಹೋಗಿ ಚುಕ್ಕಿ ರಂಗೋಲಿ ಬಿಡಿಸಿದ್ದ ಈ ಚೆಲುವೆ, ಈಗ ಸ್ಲೇಟು ಹಿಡಿದಿದ್ದಾರೆ.

  ಸ್ಲೇಟು ತೆಗೆದುಕೊಂಡು ಸೀಮೆಸುಣ್ಣ ಹಿಡಿದು, ಚಿಕ್ಕ ಮಕ್ಕಳಾಗಿದ್ದಾಗ ಹೇಗೆ ಚಿತ್ರ ಬರೀತಾ ಇದ್ರೋ ಅದೇ ಸ್ಟೈಲಲ್ಲಿ ಒಂದು ಚಿತ್ರ ಬಿಡಿಸಿ, ಒಂದು ಸ್ಮೈಲು ಬಿಸಾಕಿದ್ದಾರೆ. ಆ ಸ್ಮೈಲು ನೋಡ್ತಾ ಇದ್ರೆ, ಎಲ್ರೂ ಒಂದ್ಸಲ ಚಿಕ್ಕೋವ್ರಾಗ್‍ಬೇಕು ಅನ್ನಿಸೋದು ಸುಳ್ಳಲ್ಲ. 

 • ಚಿರು-ಹರಿಪ್ರಿಯಾ ಮಧ್ಯೆ ಫೈಟಿಂಗ್

  chiru haripriya fighting in samhara

  ಸಂಹಾರ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರದ್ದು ಅಂಧನ ಪಾತ್ರ. ಅಡುಗೆ ಭಟ್ಟನೂ ಹೌದು. ಚಿತ್ರದ ಟ್ರೇಲರ್ ನೋಡುತ್ತಿದ್ದರೆ, ಹರಿಪ್ರಿಯಾ ಚಿರಂಜೀವಿ ಸರ್ಜಾರ ಪ್ರೇಯಸಿ ಎನಿಸುವುದು ನಿಜ. ರಾಕ್ಷಸಿ ಎನಿಸುವುದೂ ನಿಜ. ಒಂದು ವಿಭಿನ್ನ ಪಾತ್ರದ ಜೊತೆಯಲ್ಲೇ ಹರಿಪ್ರಿಯಾ ತಮ್ಮ ಬಹುದಿನ ಕನಸನ್ನೂ ಈಡೇರಿಸಿಕೊಂಡಿದ್ದಾರೆ.

  ಚಿತ್ರದಲ್ಲೊಂದು ಫೈಟಿಂಗ್ ಸೀನ್ ಕೂಡಾ ಇದೆ. ಅದು ಚಿರು ಜೊತೆ. ಆರಂಭದಲ್ಲಿ ಆ ಫೈಟಿಂಗ್ ಸೀನ್ ಮಾಡೋಕೆ ಕಷ್ಟಪಟ್ಟರಂತೆ ಹರಿಪ್ರಿಯಾ. 

  ಒಂದು ಹಂತದಲ್ಲಂತೂ ನಿರ್ದೇಶಕರು ಡ್ಯೂಪ್ ಬಳಸುವ ಯೋಚನೆಯನ್ನೂ ಮಾಡಿದ್ದರಂತೆ. ಕೊನೆಗೆ ನಾನೇ ಡ್ಯೂಪ್ ಇಲ್ಲದೆ ತಾವೇ ಆ ಸಾಹಸ ದೃಶ್ಯ ನಿರ್ವಹಿಸಿದ್ದಾರೆ ಹರಿಪ್ರಿಯಾ.

  ಮಾಡುವಾಗ ಏನೋ ಉತ್ಸಾಹದಿಂದ ಮಾಡಿಬಿಟ್ಟೆವು. ಹಿಂದೆ ಮುಂದೆ ಹಾರುವ ದೃಶ್ಯಗಳನ್ನೆಲ್ಲ ಮಾಡಿಬಿಟ್ಟೆ. ಆಮೇಲೆ ಅನುಭವಿಸಿದ ನೋವಿನದ್ದು ಇನ್ನೊಂದು ಕಥೆ. ಆದರೆ, ಆ ದೃಶ್ಯಗಳನ್ನು ನೋಡಿದಾಗ ಆ ನೋವುಗಳೆಲ್ಲ ಮಾಯವಾಗಿಬಿಡುತ್ತೆ ಎಂದಿದ್ದಾರೆ ಹರಿಪ್ರಿಯಾ.

  ಹರಿಪ್ರಿಯಾಗೆ ಸಾಹಸ ಹೊಸದೇನಲ್ಲ. ಈ ಹಿಂದೆ ರಿಕ್ಕಿ ಚಿತ್ರದಲ್ಲಿ ನಕ್ಸಲೈಟ್ ಪಾತ್ರದಲ್ಲಿ ನಟಿಸಿದ್ದ ಹರಿಪ್ರಿಯಾ, ಈ ಸಿನಿಮಾದಲ್ಲಿ ಅಕ್ಷರಶಃ ಫೈಟರ್ ಆಗಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲ ಆದರೂ ಇದು ಕಮರ್ಷಿಯಲ್ ಸಿನಿಮಾ. ಈ ವಾರ ಥಿಯೇಟರಲ್ಲಿ ಕಂಗೊಳಿಸಲಿದೆ.

 • ಟಾಕೀಸ್‍ನ ಕತ್ತಲಲ್ಲಿ ಕದ್ದುಮುಚ್ಚಿ..

  haripriya watched jaisimha in disguise

  ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ.. ಕುಚ್ಚಿಕುಚ್ಚಿ ಮಾಡೋದು ಗೊತ್ತಿದೆ. ಆದರೆ, ಇದೇನಿದು ಟಾಕೀಸ್ ಕತ್ತಲಲ್ಲಿ ಕದ್ದುಮುಚ್ಚಿ.. ಅದನ್ನು ನೀವು ಹರಿಪ್ರಿಯಾ ಅವರನ್ನೇ ಕೇಳಬೇಕು. ನಿಮಗೆ ಗೊತ್ತಿದೆ. ಸ್ಟಾರ್‍ಗಳು ಸಿನಿಮಾ ಮಾಡಬಹುದು, ಅಭಿಮಾನಿಗಳನ್ನು ರಂಜಿಸಬಹುದು. ಆದರೆ, ಅದೇ ಅಭಿಮಾನಿಗಳ ಮಧ್ಯೆ ಕುಳಿತು ನೆಮ್ಮದಿಯಾಗಿ ಸಿನಿಮಾ ನೋಡುವುದು ಅವರ ಹಣೆಬರಹದಲ್ಲಿ ಇಲ್ಲ. ಅದಕ್ಕೆ ಹರಿಪ್ರಿಯಾ ಕೂಡಾ ಹೊರತಲ್ಲ.

  ತೆಲುಗಿನಲ್ಲಿ ಅವರ ಅಭಿನಯದ ಜೈಸಿಂಹ ಚಿತ್ರ ರಿಲೀಸ್ ಆಗಿದೆ. ಬಾಲಕೃಷ್ಣ ಜೊತೆ ನಟಿಸಿರುವ ಆ ಚಿತ್ರ ಬಾಕ್ಸಾಫೀಸ್‍ನಲ್ಲಿ ಸದ್ದು ಮಾಡುತ್ತಿದೆ. ಆದರೆ, ಆ ಚಿತ್ರವನ್ನು ಥಿಯೇಟರ್‍ನಲ್ಲಿ, ಅಭಿಮಾನಿಗಳ ಮಧ್ಯೆಯೇ ನೋಡಬೇಕು ಎಂದು ಆಸೆಯಾದಾಗ.. ಹರಿಪ್ರಿಯಾ ಕದ್ದುಮುಚ್ಚಿ ಮಾರುವೇಷದಲ್ಲಿ ಹೋಗಬೇಕಾಯ್ತು. ಮುಂಜಾಗ್ರತೆ ವಹಿಸಿದ್ದ ಹರಿಪ್ರಿಯಾ, ಮೈತುಂಬಾ ಶಾಲು ಹೊದ್ದು, ಮುಖ ಕಾಣದಂತೆ ಟೋಪಿ ಹಾಕಿಕೊಂಡು ಥಿಯೇಟರಿಗೆ ನಡೆದೇಬಿಟ್ಟರು. ಮಧ್ಯೆ ಆತಂಕ ಇದ್ದೇ ಇತ್ತು. ಅಕಸ್ಮಾತ್.. ಯಾರಾದರೂ ಒಬ್ಬರೇ ಒಬ್ಬರು ಗುರುತಿಸಿಬಿಟ್ಟರೂ.. ಸಿನಿಮಾ ನೋಡುವ, ಎಂಜಾಯ್ ಮಾಡುವ ಖುಷಿ ಹೋದಂತೆಯೇ ಲೆಕ್ಕ. ಸಿನಿಮಾದಲ್ಲಿ ನಟಿಸುವ ಅವರಿಗೆ ಥಿಯೇಟರ್‍ನಲ್ಲಿ ಅಜ್ಜಿಯಂತೆ ನಟಿಸುವುದೇನೂ ಕಷ್ಟವಾಗಲಿಲ್ಲ.

  `ನನ್ನ ಎಂಟ್ರಿ ಸೀನ್ ಬಂದಾಗ ಜನ ಶಿಳ್ಳೆ ಹೊಡೆದು ಸಂಭ್ರಮಿಸಿದ್ದನ್ನು, ಜನರ ಮಧ್ಯೆಯೇ ಕುಳಿತು ನೋಡಿದಾಗ ಆದ ಥ್ರಿಲ್ಲೇ ಬೇರೆ. ನಮ್ಮ ಪ್ರೇಕ್ಷಕರ ರಿಯಾಕ್ಷನ್ ಯಾವತ್ತೂ ಅದ್ಭುತ ಖುಷಿ ಕೊಡುತ್ತೆ' ಎಂದು ಹೇಳಿಕೊಂಡಿದ್ದಾರೆ ಹರಿಪ್ರಿಯಾ. 

  ಅಭಿಮಾನಿಗಳಿಗೆ ವಿಶೇಷ ಸೂಚನೆ : ಮುಂದಿನ ವಾರ ಚಿರಂಜೀವಿ ಸರ್ಜಾ ನಾಯಕರಾಗಿರುವ, ಹರಿಪ್ರಿಯಾ ನಾಯಕಿಯಾಗಿರುವ ಸಂಹಾರ ಚಿತ್ರ ಬಿಡುಗಡೆಯಾಗುತ್ತಿದೆ. ಯಾವ ಥಿಯೇಟರ್‍ನಲ್ಲಿ ಮಾಸ್ಕ್ ಹಾಕ್ಕೊಂಡು ನಿಮ್ಮ ಮಧ್ಯೆಯೇ ಕುಳಿತುಕೊಳ್ತಾರೋ.. ಯಾರಿಗ್ಗೊತ್ತು. 

   

   

 • ಡಾಟರ್ ಆಫ್ ಪಾರ್ವತಮ್ಮ ಟೀಸರ್, ಮೊಮ್ಮಗನಿಂದ ಲಾಂಚ್

  d/o parvathamma teaser launched by vinay rajkumar

  ಡಾಟರ್ ಆಫ್ ಪಾರ್ವತಮ್ಮ. ಹರಿಪ್ರಿಯಾ ಅಭಿನಯದ 25ನೇ ಸಿನಿಮಾ. ಪಾರ್ವತಮ್ಮನ ಮಗಳಾಗಿ ಹರಿಪ್ರಿಯಾ ನಟಿಸಿದ್ದರೆ, ಪಾರ್ವತಮ್ಮನಾಗಿರೋದು ಸುಮಲತಾ ಅಂಬರೀಷ್. ಟೈಟಲ್‍ನಿಂದಲೇ ಗಮನ ಸೆಳೆದಿದ್ದ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಟೀಸರ್ ಲಾಂಚ್ ಮಾಡಿರೋದು ಮೊಮ್ಮಗ ಆಫ್ ಪಾರ್ವತಮ್ಮ.

  ರಾಘವೇಂದ್ರ ರಾಜ್‍ಕುಮಾರ್ ಅವರ ಪುತ್ರ ವಿನಯ್ ರಾಜ್‍ಕುಮಾರ್, ಚಿತ್ರದ ಟೀಸರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಶಶಿಧರ್ ಕೆ ನಿರ್ಮಾಪಕರಾಗಿದ್ದು, ಚಿತ್ರಕ್ಕೆ ಶಂಕರ್ ಜೆ. ನಿರ್ದೇಶಕರು.ಸೂರಜ್ ಗೌಡ ಹರಿಪ್ರಿಯಾಗೆ ಜೋಡಿಯಾಗಿದ್ದಾರೆ.

  ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರದಲ್ಲಿ ಹರಿಪ್ರಿಯಾ ಇನ್ವೆಸ್ಟಿಗೇಷನ್ ಆಫೀಸರ್ ಆಗಿ ನಟಿಸಿದ್ದಾರೆ. 

 • ಡಿಟೆಕ್ಟಿವ್ ದಿವಾಕರ್ ಲವ್ಸ್ ಕುಸುಮಾ ಹಳೇ ಲವ್ ಸ್ಟೋರಿ

  rishab hari[riya's retro love story

  ರಿಷಬ್ ಶೆಟ್ಟಿ.. ಅಲ್ಲಲ್ಲ ಡಿಟೆಕ್ಟಿವ್ ದಿವಾಕರ.. ಕುಸುಮಾ.. ಅದೇ ರೀ.. ಹರಿಪ್ರಿಯಾ. ಅವರಿಬ್ಬರಿಗೂ ಲವ್ವಾಗಿದೆ. ಇದೆಲ್ಲ ಆಗಿದ್ದು ಹೀಗೆ.. ದಿವಾಕರ್ ಸ್ಕೂಟರಲ್ಲಿ ಹೋಗ್ತಾ ಇದ್ರು. ಹರಿಪ್ರಿಯಾ ಅಲ್ಲೇ ನೀರು ಕುಡೀತಾ ಇದ್ರು. ಅದೇ ಟೈಮಲ್ಲಿ ಇನ್ನೊಬ್ಬ ಬಾಟ್ಲೀಲಿ ಮೀನು ಹಿಡ್ಕೊಂಡು ಬರ್ತಾ ಇದ್ದ. ಬಾಟ್ಲಿ ಹೊಡ್ದೋಯ್ತು. ನೀರು ರೋಡಿಗ್ ಬಿತ್ತು. 

  ರಿಷಬ್ ಓಡೋಡಿ ಬಂದು ಮೀನನ್ನ ಬೊಗಸೆಯಲ್ಲಿಡ್ಕೊಂಡ್ರೆ, ಹರಿಪ್ರಿಯಾ ಬಾಯಲ್ಲಿದ್ದ ನೀರನ್ನ ರಿಷಬ್ ಕೈಗೆ ಉಗಿದು.. ಮೀನನ್ನ ಬದುಕಿಸಿಬಿಟ್ರು. ಲವ್ ಶುರುವಾಗಿದ್ದೇ ಆವಾಗ..

  ಏತಕೆ.. ಬೊಗಸೆ ತುಂಬ ಆಸೆ ನೀಡುವೆ ಎಂದು ಹಾಡು ಶುರುವಾಗಿ ಹೋಯ್ತು. 

  ಇಬ್ಬರಿಗೂ ಹಿಂಗಿಂಗೇ ಲವ್ ಮಾಡ್ಬೇಕು ಅಂತಾ ಲವ್ ಮಾಡ್ಸಿರೋದು ನಿರ್ದೇಶಕ ಜಯತೀರ್ಥ. ನೀವ್ ಲವ್ ಮಾಡೋದಕ್ಕೆ ಖರ್ಚು ನಮ್ದು ಅಂದಿರೋದು ಸಂತೋಷ್ ಕುಮಾರ್. ಇಬ್ಬರ ಪ್ರೀತಿಗೆ ಸಂಗೀತದ ಸ್ಪರ್ಶ ಕೊಟ್ಟಿರೋದು ಅಜನೀಶ್ ಲೋಕನಾಥ್. ಹೇಗಿದೆ ಇಬ್ಬರ ಪ್ರೀತಿ.. ಪ್ರೇಮಿಗಳ ದಿನ ಕಳೆದ ಮಾರನೇ ದಿನವೇ ನೀವೆಲ್ಲ ನೋಡಬಹುದು. ಬೆಲ್‍ಬಾಟಂ ಅವತ್ತೇ ರಿಲೀಸು.

 • ಡಿಟೆಕ್ಟಿವ್ ದಿವಾಕಲ್ ಲವ್ಸ್ ಹರಿಪ್ರಿಯಾ..!

  bell bottom movie image

  ಪತ್ತೇದಾರನಾಗಬೇಕು ಎಂದು ಆಸೆಪಟ್ಟು ಹೊರಟಿರುವ ಹುಡುಗನ ಮೇಲೆ ಹರಿಪ್ರಿಯಾ ಕಣ್ಣು ಹಾಕಿದ್ದಾರೆ. ಹರಿಪ್ರಿಯಾರ ನಗುವಿನ ಮೋಹಕತೆಗೆ ಸಿಲುಕಿರುವ ಪತ್ತೇದಾರನಿಗೂ ಲವ್ವಾಗಿಬಿಟ್ಟಿದೆ. ಈಗಲ್ಲ...80ರ ದಶಕದಲ್ಲಿ. ಇದು ಬೆಲ್‍ಬಾಟಂ ಚಿತ್ರದ ಕಥೆಯ ಒಂದು ಎಳೆ ಮಾತ್ರ.

  ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿರುವುದು ಡಿಟೆಕ್ಟಿವ್ ಪಾತ್ರದಲ್ಲಿ. ಡಾ.ರಾಜ್, ಅನಂತ್‍ನಾಗ್ ಶೈಲಿಯಲ್ಲಿ ಮಿಮಿಕ್ರಿ ಮಾಡುತ್ತಿದ್ದ ರಿಷಬ್ ಶೆಟ್ಟಿಗೆ, ಈ ಚಿತ್ರದಲ್ಲಿ ಆ ಮಿಮಿಕ್ರಿಯೇ ವರವಾಗಿದೆಯಂತೆ. ಡಿಟೆಕ್ಟಿವ್ ಸಿನಿಮಾ ನೋಡಿಕೊಂಡೇ ಚಿತ್ರರಂಗಕ್ಕೆ ಬಂದವನು ನಾನು. ನನ್ನ ಮೊದಲ ಸಿನಿಮಾದಲ್ಲೇ ಡಿಟೆಕ್ಟಿವ್ ಕ್ಯಾರೆಕ್ಟರ್ ಸಿಕ್ಕಿದೆ. ಖುಷಿಯಾಗಿದೆ ಅಂತಾರೆ ರಿಷಬ್.

  ಇಡೀ ಚಿತ್ರದಲ್ಲಿ ಗಮನ ಸೆಳೆಯುತ್ತಿರುವುದು ಕಾಸ್ಟ್ಯೂಮ್. ರಿಷಬ್.. ಆಗಿನ ಕಾಲದ ಕನ್ನಡಕ, ಕ್ಯಾಪ್, ಮಫ್ಲರ್, ಕೋಟು ಧರಿಸಿದ್ದರೆ, ಹರಿಪ್ರಿಯಾ.. ಕಣ್ಣಿಗೆ ಕಾಡಿಗೆ, ಹೂವು, ಸೀರೆಗಳಲ್ಲಿ 80ರ ದಶಕವನ್ನು ನೆನಪಿಸುತ್ತಿದ್ದಾರೆ. ಒಂದು ಕಾಮಿಡಿ, ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾ ಬರುತ್ತಿದೆ.

   

 • ಡಿಸೆಂಬರ್ ಸ್ಟಾರ್ ರಶ್ಮಿಕಾ, ಜನವರಿ ಸ್ಟಾರ್ ಹರಿಪ್ರಿಯಾ

  haripriya's busy january

  ತಿಂಗಳಿಗೊಬ್ಬರು ಸ್ಟಾರ್ ಇರ್ತಾರೇನ್ರೀ.. ತಲಿಗ್ ಎಂಥ ಹುಳ ಬಿಟ್ಟೀರಿ.. ಮರ್ರೆ.. ಸುಮ್ನೆ ಚೊರೆ ಅಂದ್ಕೋಬೇಡಿ..ಇದು ಚೊರೆ ಏನಲ್ಲ. ಡಿಸೆಂಬರ್‍ನಲ್ಲಿ ರಶ್ಮಿಕಾ ಅವರ ಎರಡು ಚಿತ್ರಗಳು ಒಂದರ ಹಿಂದೊಂದರಂತೆ ರಿಲೀಸ್ ಆದವು. ಅಂಜನೀಪುತ್ರ ಭರ್ಜರಿಯಾಗಿ ಅಬ್ಬರಿಸುತ್ತಿದ್ದರೆ, ಚಮಕ್ ಈ ವಾರ ಬರುತ್ತಿದೆ. ತೆಲುಗಿನ ಸಿನಿಮಾ ಕೂಡಾ ರೇಸ್‍ನಲ್ಲಿದೆ.

  ಅಂಥದ್ದೇ ಟ್ರೆಂಡ್ ಮುಂದಿನ ತಿಂಗಳು ಸೃಷ್ಟಿಸ್ತಾ ಇರೋದು ಹರಿಪ್ರಿಯಾ. ಮುಂದಿನ ತಿಂಗಳು ರಿಲೀಸ್‍ಗೆ ರೆಡಿಯಿರುವ ಚಿತ್ರಗಳಲ್ಲಿ ಆರ್.ಚಂದ್ರು ಅವರ ಕನಕ ಇದೆ. ಚಿರಂಜೀವಿ ಸರ್ಜಾ ಜೊತೆಗಿನ ಸಂಹಾರ ಚಿತ್ರವಿದೆ. ಜೊತೆಗೆ ತೆಲುಗಿನ ಜೈಸಿಂಹ ಚಿತ್ರವೂ ಇದೆ. ಮೂರೂ ಚಿತ್ರಗಳು ಬಿಡುಗಡೆಯ ಭಾಗ್ಯ ಕಾಣೋದು ಜನವರಿಯಲ್ಲಿ. ಅಲ್ಲಿಗೆ ಒಂದೇ ತಿಂಗಳಲ್ಲಿ ಹರಿಪ್ರಿಯಾ ಅವರ 3 ಸಿನಿಮಾ ಬಿಡುಗಡೆಯಾದ ಹಾಗೆ. ಹೀಗಾಗಿ ಹರಿಪ್ರಿಯಾ ಅವರನ್ನು ಜನವರಿ ಸ್ಟಾರ್ ಎಂದು ಕರೆಯಬಹುದು.

 • ಡೈರೆಕ್ಟರ್ ದಿನಕರ್ ಜೊತೆ ಒಂದ್ ಸೆಲ್ಫಿ

  dinakar talks about life jothe ondu selfie

  ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರವನ್ನು ರಿಲೀಸ್‍ಗೆ ರೆಡಿ ಮಾಡಿರುವ ದಿನಕರ್ ತೂಗುದೀಪ್ & ಟೀಂ, ಚಿತ್ರದ ಪ್ರಚಾರವನ್ನು ವಿಭಿನ್ನವಾಗಿ ಮಾಡುತ್ತಿದೆ. 7 ವರ್ಷಗಳ ನಂತರ ಸಿನಿಮಾ ನಿರ್ದೇಶನಕ್ಕೆ ಇಳಿದಿರುವ ದಿನಕರ್, ಚಿತ್ರದ ಬಗ್ಗೆ ಮಾತನಾಡಿದ್ದಾರೆ.

  ಚಿತ್ರದಲ್ಲಿ 3 ಪಾತ್ರಗಳೇ ಹೈಲೈಟ್. ಪ್ರಜ್ವಲ್ ವಿರಾಟ್ ಎಂಬ ಹೆಸರಿನ ಮಲ್ಟಿಮಿಲಿಯನೇರ್ ಪಾತ್ರ. ಲೈಫಲ್ಲಿ ಎಲ್ಲ ಇದ್ದರೂ, ಏನೋ ಇಲ್ಲ ಎಂಬ ಕೊರಗಿನಲ್ಲಿರುವ ವ್ಯಕ್ತಿ.

  ಪ್ರೇಮ್ ಅವರದ್ದು ನಕುಲ್ ಎಂಬ ಎಂಎನ್‍ಸಿ ಉದ್ಯೋಗಿಯ ಪಾತ್ರ. ಅವರಿಗೆ ನಿರ್ದೇಶಕನಾಗಬೇಕು ಎಂಬ ಕನಸು.

  ಹರಿಪ್ರಿಯಾ ಅವರದ್ದೂ ಒಂದು ಸಮಸ್ಯೆ ಇರುತ್ತೆ. ಅವರೂ ಒಂದು ಕೊರಗಿನಲ್ಲೇ ಇರ್ತಾರೆ. 

  ಹೀಗೆ ಕೊರಗುವ ಜೀವಗಳೆಲ್ಲ ಒಂದು ಕಡೆ ಸೇರುತ್ತವೆ. ಗೋವಾದಲ್ಲಿ ಪರಿಚಯವಾಗೋ ಮೂವರನ್ನೂ ಕನ್ನಡಿಗರು ಎಂಬ ವಿಷಯ ಒಗ್ಗೂಡಿಸುತ್ತೆ. ಮೊದಲರ್ಧ ಸಮಸ್ಯೆಗಳಾದರೆ, ದ್ವಿತೀಯಾರ್ಧ ಪರಿಹಾರ. ಸಿನಿಮಾ ನೋಡುವಾಗ ಪ್ರತಿಯೊಬ್ಬರೂ ತಮ್ಮ ಜೊತೆ, ತಮ್ಮ ಲೈಫ್ ಜೊತೆ ಒಂದ್ ಸೆಲ್ಫಿ ತಗೋತಾರೆ ಅನ್ನೋ ಕಾನ್ಫಿಡೆನ್ಸ್ ದಿನಕರ್ ಅವರಿಗೆ ಇದೆ.

  ಸಮೃದ್ಧಿ ಮಂಜುನಾಥ್ ನಿರ್ಮಾಣದ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನಿರ್ದೇಶನವಿದೆ.

 • ಡೈರೆಕ್ಟರ್‍ಗೆ ಒಂದ್ ರಾಖಿ ಜೊತೆ ಸೆಲ್ಫಿ

  haripriya ties rakhi to dinakar

  ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಯಶಸ್ಸಿನ ನಡುವೆಯೇ ಚಿತ್ರದ ನಿರ್ದೇಶಕ ತೂಗುದೀಪ್ ದಿನಕರ್‍ಗೆ ಹೊಸ ತಂಗಿ ಸಿಕ್ಕಿದ್ದಾರೆ. ಅವರೇ ಹರಿಪ್ರಿಯಾ.

  ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ನಾಯಕಿಯೂ ಆಗಿರುವ ಹರಿಪ್ರಿಯಾ, ದಿನಕರ್ ಬಗ್ಗೆ, ದಿನಕರ್ ತಮ್ಮ ಚಿತ್ರತಂಡದವರ ವಹಿಸುವ ಕಾಳಜಿಯ ಬಗ್ಗೆ ಮಾತನಾಡಿದ್ದರು. ದಿನಕರ್ ಅವರ ಈ ಗುಣವೇ ಇರಬೇಕು, ಹರಿಪ್ರಿಯಾ ತಮ್ಮ ಪ್ರೀತಿಯ ನಿರ್ದೇಶಕರಿಗೆ ಸೋದರನ ಸ್ಥಾನ ಕೊಟ್ಟು, ರಕ್ಷಾ ಬಂಧನ ಆಚರಿಸಿದ್ದಾರೆ. ದಿನಕರ್‍ಗೆ ರಾಖಿ ಕಟ್ಟಿದ್ದಾರೆ.

 • ದರ್ಶನ್ ಜೊತೆ ಸ್ಪರ್ಧೆ ಇಲ್ಲ - ಬಿಚ್ಚುಗತ್ತಿ ರಾಜವರ್ಧನ್

  bicchugathi hero rajavardhan

  ಒಂದು ಕಡೆ ದರ್ಶನ್ ಮದಕರಿ ನಾಯಕನಾಗಿ ನಟಿಸುತ್ತಿದ್ದರೆ, ಅವರ ಕಟ್ಟಾ ಅಭಿಮಾನಿಯೂ ಆಗಿರುವ ರಾಜವರ್ಧನ್, ಬಿಚ್ಚುಗತ್ತಿಯಲ್ಲಿ ಮದಕರಿ ನಾಯಕನ ನಂಬುಗೆಯ ಬಂಟ ಭರವಣ್ಣನಾಗಿ ನಟಿಸಿದ್ದಾರೆ. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.

  ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ದಳವಾಯಿ ದಂಗೆಗೂ ಮೊದಲಿದ್ದ ಇತಿಹಾಸದ ಸುಳಿವು ಕೊಟ್ಟಿದೆ. ರಾಜವರ್ಧನ್ ಕತ್ತಿ ವರಸೆ, ಹುಲಿ ಜೊತೆ ಕದನ, ಹರಿಪ್ರಿಯಾರ ಕತ್ತಿ ವರಸೆ.. ಎಲ್ಲವೂ ಗಮನ ಸೆಳೆಯುತ್ತಿದೆ.

  ಇದೇ ವೇಳೆ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ದರ್ಶನ್ ಸರ್ ಜೊತೆ ಸ್ಪರ್ಧೆ ಸಾಧ್ಯವಿಲ್ಲ ಎಂದಿದ್ದಾರೆ. ನಾನು ಚಿತ್ರದ ಚಿತ್ರೀಕರಣಕ್ಕೆ ಮೊದಲು ದರ್ಶನ್ ಸರ್ ಅವರಿಂದಲೇ ಟಿಪ್ಸ್ ಪಡೆದಿದ್ದೆ ಎಂದಿರುವ ರಾಜವರ್ಧನ್, ಚಿತ್ರದ ಪ್ರತಿ ಫ್ರೇಮಿನಲ್ಲೂ ಭರಮಣ್ಣನ ಪೌರುಷ ತೋರಿಸಿದ್ದಾರೆ.

  ಈ ಚಿತ್ರಕ್ಕೆ ನಿರ್ದೇಶಕ ಹರಿ ಸಂತೋಷ್. ಕಾಲೇಜು ಕುಮಾರದಂತಹ ಚಿತ್ರ ಮಾಡಿರುವ ಅವರಿಗೆ ಇದು ಮೊದಲನೇ ಐತಿಹಾಸಿಕ ಚಿತ್ರ. ಬಿ.ಎಲ್.ವೇಣು ಅವರ ಕಾದಂಬರಿ ಆಧರಿಸಿರುವ ಚಿತ್ರದ ಮೇಕಿಂಗ್ ಭರ್ಜರಿಯಾಗಿದೆ. ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery