` haripriya - chitraloka.com | Kannada Movie News, Reviews | Image

haripriya

  • ಹರಿಪ್ರಿಯಾ, ಸೃಜನ್ ಲೋಕೇಶ್ ಲಿಪ್ ಲಾಕ್

    haripriya srujan's lip lock in ellidhe illitanaka

    ಕನ್ನಡದಲ್ಲಿ ಲಿಪ್ ಲಾಕ್ ದೃಶ್ಯಗಳು ಈಗ ಮಾಮೂಲಾಗಿದ್ದರೂ, ಲೀಡಿಂಗ್ ನಟ, ನಟಿಯರು ಇಂತಹ ದೃಶ್ಯದಲ್ಲಿ ನಟಿಸುವುದು ಅಪರೂಪ. ಆದರೆ, ಸೃಜನ್ ಲೋಕೇಶ್ ಮತ್ತು ಹರಿಪ್ರಿಯಾ ಈಗ ಆ ಸಾಹಸಕ್ಕೆ ಕೈ ಹಾಕಿದ್ದಾರೆ. ಸೃಜನ್ ಅವರೇ ನಿರ್ಮಿಸಿರುವ ಎಲ್ಲಿದ್ದೆ ಇಲ್ಲೀ ತನಕ ಚಿತ್ರದ ಹಾಡಿನಲ್ಲಿ ತುಟಿ ಚುಂಬನ ಮಾಡಿದ್ದಾರೆ.

    ಸಿನಿಮಾದ ಟೈಟಲ್ ಟ್ರ್ಯಾಕ್ ಹಾಡಿನಲ್ಲಿ ಸೃಜನ್ ಮತ್ತು ಹರಿಪ್ರಿಯಾ ಲಿಪ್ ಲಾಕ್ ಮಾಡಿದ್ದಾರೆ. ಆದರೆ, ಸಭ್ಯತೆಯ ಎಲ್ಲೆ ಮೀರಿಲ್ಲ ಎನ್ನುವುದು ಪ್ಲಸ್ ಪಾಯಿಂಟ್.

    ತೇಜಸ್ವಿ ನಿರ್ದೇಶನದ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಈ ಹಾಡಿಗೆ ಕವಿರಾಜ್ ಸಾಹಿತ್ಯ ಬರೆದಿದ್ದರೆ, ಸೋನು ನಿಗಮ್ ಹಾಡಿದ್ದಾರೆ.

  • ಹರಿಪ್ರಿಯಾಗೆ ಅಮ್ಮ ಕೊಟ್ಟ ಬೆಚ್ಚನೆಯ ಕಾಣಿಕೆ

    haripriya's blanket

    ನಟಿ ಹರಿಪ್ರಿಯಾರನ್ನು ಅವರ ತಾಯಿ ಮತ್ಸಕನ್ಯೆ ಮಾಡಿಬಿಟ್ಟಿದ್ದಾರೆ. ಮೀನನ್ನು ಹೋಲುವ ಬ್ಲಾಂಕೆಟ್‍ನ್ನು ಸ್ವತಃ ಕೈಯಾರೆ ಹೆಣೆದು ಮಗಳಿಗೆ ಕೊಟ್ಟಿದ್ದಾರೆ.`ಈ ಚಳಿಗಾಲದಲ್ಲಿ ಮರ್ಮೈಡ್ ಬ್ಲಾಂಕೆಟ್ ಅಷ್ಟೇ ನಮ್ಮನ್ನು ಬೆಚ್ಚಗಿಡಲು ಸಾಧ್ಯ. ಇದನ್ನು ಹೆಣೆಯಲು ಸಮಯ ಬೇಕು. ತಾಳ್ಮೆ ಬೇಕು. ನನ್ನ ಬೆಸ್ಟ್ ಮಮ್ಮಿ ಇದನ್ನು ಹೆಣೆದು ಕೊಟ್ಟಿದ್ದಾರೆ. ನನ್ನ ಅಮ್ಮನಿಗೆ ಬೆಸ್ಟ್ ಯಾವುದು ಅಂತ ಗೊತ್ತು' ಎಂದು ಖುಷಿಯಾಗಿ ಖುಷಿ ಹಂಚಿಕೊಂಡಿದ್ದಾರೆ.

  • ಹೆಂಡತಿ ಎದುರು ರೊಮ್ಯಾನ್ಸ್ ಮಾಡೋದು ಕಷ್ಟ - ರಿಷಬ್ ಶೆಟ್ಟಿ

    rishab shetty;s romance problem

    ನಟಿಸಬೇಕು, ನಾಯಕನಾಗಬೇಕು ಎಂದುಕೊಂಡೇ ಚಿತ್ರರಂಗಕ್ಕೆ ಬಂದವನು ನಾನು. ಆದರೆ, ನಿರ್ದೇಶಕನಾದೆ. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದೆ. ಹೀಗಿರುವಾಗಲೇ ಬಂದ ಅವಕಾಶ ಬೆಲ್‍ಬಾಟಂ. ಕಥೆ ಇಷ್ಟವಾಯ್ತು. ಓಕೆ ಎಂದೆ ಎಂದು ಹೇಳುವ ರಿಷಬ್ ಶೆಟ್ಟಿ, ತಮ್ಮ ಚೊಚ್ಚಲ ನಾಯಕತ್ವದ ಸಿನಿಮಾ ಬಿಡುಗಡೆ ಸಂಭ್ರಮದಲ್ಲಿದ್ದಾರೆ. ಇಷ್ಟಕ್ಕೂ ಇಡೀ ಚಿತ್ರದಲ್ಲಿ ಅವರಿಗೆ ಕಷ್ಟವಾಗಿದ್ದಾದರೂ ಏನು..? ಓದಿ ನೋಡಿ.. ಸಖ್ಖತ್ ಫನ್ನಿಯಾಗಿದೆ.

    `ಚಿತ್ರದಲ್ಲಿ ಎಲ್ಲ ದೃಶ್ಯಗಳಲ್ಲೂ ನಟಿಸಬಹುದು. ಆದರೆ, ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವುದೇ ಕಷ್ಟ. ಸುತ್ತಮುತ್ತ ಕ್ಯಾಮೆರಾ, ನಿರ್ದೇಶಕರು, ಸೆಟ್‍ನ ಹುಡುಗರು ಇರುತ್ತಾರೆ. ಆಗೆಲ್ಲ ರೊಮ್ಯಾನ್ಸ್ ಮಾಡೋವಾಗ ತುಂಬಾನೇ ನಾಚಿಕೆಯಾಗುತ್ತಿತ್ತು' ಎಂದು ರೊಮ್ಯಾನ್ಸ್ ಕಷ್ಟ ಹೇಳಿಕೊಂಡಿದ್ದಾರೆ ರಿಷಬ್.

    ಅದಕ್ಕಿಂತ ಪ್ರಾಬ್ಲಂ ಎಂದರೆ, ಹೆಂಡತಿ ಸೆಟ್‍ನಲ್ಲಿದ್ದಾಗ. ರಿಷಬ್ ಪತ್ನಿ ಸೆಟ್‍ಗೆ ಬಂದಾಗ ರೊಮ್ಯಾನ್ಸ್ ದೃಶ್ಯಗಳ ಶೂಟಿಂಗ್ ಇದ್ದರೆ, ಹೋಗು ಹೋಗು.. ಚೆನ್ನಾಗಿ ರೊಮ್ಯಾನ್ಸ್ ಮಾಡು ಎಂದು ಹೇಳಿ, ಕಿಚಾಯಿಸಿ ಕಳುಹಿಸಿತ್ತಿದ್ದರಂತೆ. 

    ಇಷ್ಟಿದ್ದರೂ.. ಹರಿಪ್ರಿಯಾ ಜೊತೆಗಿನ ರೊಮ್ಯಾಂಟಿಕ್ ದೃಶ್ಯಗಳು ಚೆನ್ನಾಗಿ ಮೂಡಿ ಬಂದಿವೆ ಅನ್ನೋದೇ ರೊಮ್ಯಾಂಟಿಕ್ ಸತ್ಯ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery