` haripriya - chitraloka.com | Kannada Movie News, Reviews | Image

haripriya

 • ಬೆಲ್‍ಬಾಟಂ ಹರಿಕಥೆ ಸ್ಪೆಷಲ್

  bellbottom trailer has harikathe special

  ಬೆಲ್‍ಬಾಟಂ. ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಅಭಿನಯದ ಸಿನಿಮಾ. ಸಿನಿಮಾದಲ್ಲಿರೋದು 80ರ ದಶಕದ ಸ್ಟೋರಿ. ರಿಷಬ್ ಪತ್ತೇದಾರನಾಗಿ, ಪೊಲೀಸ್ ಆಗಿ ನಟಿಸಿರುವ ಚಿತ್ರ. ಇನ್ನು ಹರಿಕಥೆ. ಇದು ಬಹುತೇಕ ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಇರುವ ಜನಪದ ಸಂಪ್ರದಾಯ. ಹರಿಕಥೆ ಹೇಳುವ ಶೈಲಿಯೇ ವಿಭಿನ್ನ. ವಿಶೇಷ ಅಂದ್ರೆ ಇವರೆಡನ್ನೂ ಬೆಲ್‍ಬಾಟಂ ಸಿನಿಮಾ ಮಿಕ್ಸ್ ಮಾಡಿಕೊಂಡು ಬಂದಿದೆ.

  ಬೆಲ್‍ಬಾಟಂ ಟ್ರೇಲರ್ ಗಮನ ಸೆಳೆಯುತ್ತಿರುವುದೇ ಈ ಕಾರಣಕ್ಕೆ. ತುಸು ತಮಾಷೆಯಾಗಿಯೇ ಶುರುವಾಗುವ ಟ್ರೇಲರ್, ಹರಿಕಥೆಯಿಂದಾಗಿ ಗಮನ ಸೆಳೆಯುತ್ತದೆ. ಕನ್ನಡಿಗರ ಜೇಮ್ಸ್‍ಬಾಂಡ್ ಸಿಐಡಿ 999 ಡಾ.ರಾಜ್, ಹೀರೋಗೆ ಪತ್ತೇದಾರನಾಗಲು ಸ್ಫೂರ್ತಿಯಾಗುತ್ತಾರೆ ಅನ್ನೋದು ಟ್ರೇಲರ್‍ನಲ್ಲಿಯೇ ಗೊತ್ತಾಗಿಬಿಡುತ್ತೆ. ಇನ್ನು ರಿಷಬ್ ಶೆಟ್ಟಿ, ಗುಂಡಿಯಲ್ಲಿ ಬಿದ್ದು ಹಾಗೇಕೆ ಇರುತ್ತಾರೆ..? ಪೊಲೀಸ್ ಕಾನ್‍ಸ್ಟೇಬಲ್ ಮತ್ತು ಪತ್ತೇದಾರ.. ಎರಡೂ ಹೇಗೆ..? ಟ್ರೇಲರ್ ಹುಟ್ಟಿಸುವ ಕುತೂಹಲಗಳಿವು.

  ಮುದ್ದು ಮುದ್ದಾಗಿ ಕಾಣುವ ಹರಿಪ್ರಿಯಾ ಸೈಲೆಂಟಾಗಿ ನಗೆಯುಕ್ಕಿಸುತ್ತಾರೆ. ಪೊಲೀಸ್ ಠಾಣೆಯಿಂದ 5 ಲಕ್ಷ ನಾಪತ್ತೆ ಎನ್ನುವ ಬ್ರೇಕಿಂಗ್ ನ್ಯೂಸ್ ಜೊತೆ ಟ್ರೇಲರ್ ಮುಗಿಯುತ್ತೆ. 

  ಸಿನಿಮಾದ ಟ್ರೇಲರ್ ಚಿಕ್ಕದಾಗಿರಬೇಕು. ಕುತೂಹಲ ಹುಟ್ಟಿಸಬೇಕು. ಎರಡನ್ನೂ ಸರಿಯಾಗಿ ನಿರ್ವಹಿಸಿ ಗೆದ್ದಿದ್ದಾರೆ ನಿರ್ದೇಶಕ ಜಯತೀರ್ಥ. ಚಿತ್ರಕ್ಕೆ ಸಂತೋಷ್ ಕುಮಾರ್ ನಿರ್ಮಾಪಕ.

 • ಬೆಲ್‍ಬಾಟಂ ಹಿಂದಿ ರೈಟ್ಸ್ ಮುಕ್ಕಾಲು ಕೋಟಿಗೆ ಸೇಲ್

  bell bottoms remake rights sold

  ಬಾಕ್ಸಾಫೀಸ್‍ನಲ್ಲಿ ಮಾಯೆ ಸೃಷ್ಟಿಸಿದ ಬೆಲ್‍ಬಾಟಂ ಚಿತ್ರದ ರೀಮೇಕ್ ಹಕ್ಕುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದುಬಿಟ್ಟಿದೆ. ಕಾರಣ, ಚಿತ್ರದ ಕಥೆ. ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ ಚಿತ್ರಕ್ಕೆ ಜಯತೀರ್ಥ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ.. ಎಲ್ಲದರಲ್ಲೂ ಇದ್ದ ಹೊಸತನ ಚಿತ್ರವನ್ನು ಗೆಲ್ಲಿಸಿದೆ. 

  ಹೀಗೆ ಸಂಭ್ರಮದ ತುತ್ತತುದಿಯಲ್ಲಿರುವಾಗಲೇ ಚಿತ್ರದ ರೀಮೇಕ್ ರೈಟ್ಸ್‍ಗಳಿಗೆ ವ್ಯಾಪಾರ ಕುದುರಿದೆ. ಮುಂಬೈನ ಪ್ರತಿಷ್ಠಿತ ಕೆ.ಎನ್.ಎಂಟರ್‍ಟೈನ್‍ಮೆಂಟ್ ಸಂಸ್ಥೆ ಬೆಲ್‍ಬಾಟಂನ ಹಿಂದಿ ಮತ್ತು ತೆಲುಗು ರೈಟ್ಸ್‍ಗಳನ್ನು 75 ಲಕ್ಷ ಕೊಟ್ಟ ಖರೀದಿಸಿದೆ ತೆಲುಗು ಮತ್ತು ಹಿಂದಿ ಎರಡರಲ್ಲೂ ಇದೇ ಸಂಸ್ಥೆ ಚಿತ್ರ ನಿರ್ಮಾಣ ಮಾಡಲಿದೆಯಂತೆ.

 • ಬೆಲ್‍ಬಾಟಮ್‍ನಲ್ಲಿ ಮುಳುಗಿ ಹೋಗಿದ್ದಾರೆ ಹರಿಪ್ರಿಯಾ

  bellbottom team bus with working on script

  ಹರಿಪ್ರಿಯಾ ಈಗ ಸಿಕ್ಕಾಪಟ್ಟೆ ಬ್ಯುಸಿ ನಟಿ. ಅವರ ಸಂಹಾರ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಇನ್ನೊಂದು ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ ಶೂಟಿಂಗ್‍ನ ಕೊನೆಯ ಹಂತದಲ್ಲಿದೆ. ಸೂಜಿದಾರ ಚಿತ್ರ ಪ್ರೊಡಕ್ಷನ್ ಹಂತದಲ್ಲಿದೆ. ತೆಲುಗಿನಲ್ಲಿ ನಟಿಸಿದ್ದ ಜೈಸಿಂಹ, ಭರ್ಜರಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಬೆಲ್‍ಬಾಟಮ್ ಚಿತ್ರಕ್ಕೆ ರೆಡಿಯಾಗಿದ್ದಾರೆ ಹರಿಪ್ರಿಯಾ.

  ಬೆಲ್‍ಬಾಟಮ್ ಚಿತ್ರದ ಬಗ್ಗೆ ಹರಿಪ್ರಿಯಾ ಖುಷಿ ಪಡೋಕೆ ಕಾರಣಗಳಿವೆ. ಏಕೆಂದರೆ, ಇಡೀ ಚಿತ್ರದ ಸ್ಕ್ರಿಪ್ಟ್ ಅವರ ಕೈಲಿದೆ. ಇಷ್ಟು ವರ್ಷಗಳಲ್ಲಿ ಈ ರೀತಿ ಚಿತ್ರದ ಇಡೀ ಸ್ಕ್ರಿಪ್ಟ್ ನೋಡುತ್ತಿರುವುದು ಅವರಿಗೂ ಮೊದಲ ಅನುಭವ. ರಿಷಬ್ ಶೆಟ್ಟಿ ನಾಯಕರಾಗಿರುವ ಚಿತ್ರಕ್ಕೆ ಜಯತೀರ್ಥ ನಿರ್ದೇಶಕ.

  80ರ ದಶಕದ ಕಥೆ. ವಸ್ತ್ರ ವಿನ್ಯಾಸ, ಡೈಲಾಗ್ ಪ್ರತಿಯೊಂದೂ ವಿಭಿನ್ನವಾಗಿದೆ. ಚಿತ್ರದ ಮೇಲೆ ಭಾರಿ ವಿಶ್ವಾಸ ಇಟ್ಟುಕೊಂಡಿದ್ದಾರೆ.

 • ಮಾತೇ ಇಲ್ಲದ ಪಾತ್ರಕ್ಕೆ ಹರಿಪ್ರಿಯಾ ಡಬ್ಬಿಂಗ್..!

  haripriya dubs for her silent role in katha sangama

  ಕಥಾ ಸಂಗಮ. ೭ ನಿರ್ದೇಶಕರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಈ ಚಿತ್ರದಲ್ಲಿ ಹರಿಪ್ರಿಯಾ ಮತ್ತು ರಿಷಬ್ ಶೆಟ್ಟಿ ಮತ್ತೆ ಜೊತೆಯಾಗಿದ್ದಾರೆ. ಇದರಲ್ಲಿ ಹರಿಪ್ರಿಯಾ ಪಿಹೆಚ್‌ಡಿ ವಿದ್ಯಾರ್ಥಿನಿಯಾದರೆ, ರಿಷಬ್ ಶೆಟ್ಟಿಯದ್ದು ಮಾನಸಿಕ ಅಸ್ವಸ್ಥ ಭಿಕ್ಷÄಕನ ಪಾತ್ರ. ಜೊತೆಯಲ್ಲಿ ಒಂದ ನಾಯಿಯೂ ಇದೆ. ಇಷ್ಟೆಲ್ಲ ಇದ್ದರೂ, ಇಬ್ಬರ ಪಾತ್ರಕ್ಕೂ ಮಾತಿಲ್ಲ.. ಕಥೆಯಿಲ್ಲ. ಮೌನಂ ಶರಣಂ ಪಾತ್ರಾಮಿ.. ಆದರೂ ಈ ಪಾತ್ರಕ್ಕೆ ಹರಿಪ್ರಿಯಾ ಡಬ್ ಮಾಡಿದ್ದಾರಂತೆ.

  ನಿರ್ದೇಶಕರು ಒಂದು ದಿನ ಫೋನ್ ಮಾಡಿ ಡಬ್ಬಿಂಗ್‌ಗೆ ಬನ್ನಿ ಎಂದಾಗ ಆಶ್ಚರ್ಯವಾಯಿತು. ಸಂಭಾಷಣೆಯೇ ಇಲ್ಲದ ಪಾತ್ರಕ್ಕೆ ಯಾವ ಡಬ್ಬಿಂಗ್ ಎಂದುಕೊAಡೆ. ಆದರೆ, ಕೆಲವು ಉಸಿರು, ಶಬ್ಧಗಳನ್ನು ನನ್ನ ಧ್ವನಿಯಲ್ಲೇ ತೆಗೆದುಕೊಂಡರು. ಮಾತೇ ಇಲ್ಲದ ಈ ಪಾತ್ರದಲ್ಲಿ ನಾನು, ರಿಷಬ್ ಕಣ್ಣು, ಮುಖದಲ್ಲೇ ಭಾವನೆಗಳನ್ನು ವ್ಯಕ್ತಪಡಿಸಿದ್ದೇವೆ ಎನ್ನುತ್ತಾರೆ ಹರಿಪ್ರಿಯಾ.

  ೨೯೭೬ರಲ್ಲಿ ಪುಟ್ಟಣ್ಣ ಕಣಗಾಲ್ ೩ ಕಥೆಗಳನ್ನಿಟ್ಟುಕೊಂಡು ಕಥಾಸಂಗಮ ಚಿತ್ರ ಮಾಡಿದ್ದರು. ಅವರ ಪ್ರೇರಣೆಯಿಂದಲೇ ಶುರುವಾದ ಈ ಕಥಾಸಂಗಮ ಚಿತ್ರದ ಟ್ರೇಲರ್‌ನ್ನು ಪುಟ್ಟಣ್ಣನವರ ಪತ್ನಿ ಲಕ್ಷಿö್ಮÃ ಕಣಗಾಲ್ ಅವರಿಂದ ರಿಲೀಸ್ ಮಾಡಿಸುತ್ತಿದೆ ಕಥಾಸಂಗಮ ಟೀಂ.

 • ಮೇ ತಿಂಗಳ ಹೀರೋಯಿನ್ ಹರಿಪ್ರಿಯಾ 

  haripriya steals the whole may month

  ವರ್ಷದ ಮೊದಲ ಹಿಟ್ ಕೊಟ್ಟು ಬೊಗಸೆ ಕಂಗಳಲ್ಲಿ ಗೆಲುವಿನ ನಗು ಚೆಲ್ಲುತ್ತಿರುವ ಹರಿಪ್ರಿಯಾ, ಮೇ ತಿಂಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮೇ ತಿಂಗಳಲ್ಲಿ ಹರಿಪ್ರಿಯಾ ನಾಯಕಿಯಾಗಿ ನಟಿಸಿರುವ ಎರಡು ಚಿತ್ರಗಳು ತೆರೆಗೆ ಬರುತ್ತಿವೆ.  ಬೆಲ್‍ಬಾಟಂ ಹಿಟ್ ಆದ ನಂತರ ತೆರೆಗೆ ಬರುತ್ತಿರುವ ಚಿತ್ರಗಳಿವು.

  ಮೇ 10ರಂದು ಸೂಜಿದಾರ ತೆರೆ ಕಾಣಲಿದೆ. ಅದು ರಂಗಭೂಮಿ ಖ್ಯಾತಿಯ ಮೌನೇಶ್ ಬಡಿಗೇರ್ ನಿರ್ದೇಶನದ ಚಿತ್ರ. ಮೇ 24ರಂದು ಡಾಟರ್ ಆಫ್ ಪಾರ್ವತಮ್ಮ ತೆರೆಗೆ ಬರಲಿದೆ. ಸೂಜಿದಾರದ ಗೃಹಿಣಿ ಹರಿಪ್ರಿಯಾ, ಪಾರ್ವತಮ್ಮ ಡಾಟರ್‍ನಲ್ಲಿ ಕಂಪ್ಲೀಟ್ ತದ್ವಿರುದ್ಧ. ತನಿಖಾಧಿಕಾರಿಯ ಪಾತ್ರವದು. ಸುಮಲತಾ, ಪಾರ್ವತಮ್ಮನ ಮದರ್. 

  ಹೀಗಾಗಿಯೇ ಮೇ ತಿಂಗಳು ಹರಿಪ್ರಿಯಾ ಮಾಸವಾಗಲಿದೆ.

 • ಲೈಫ್ ಈಸ್ ಬ್ಯೂಟಿಫುಲ್

  life is beautiful

  ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಒನ್‍ಲೈನ್ ಸ್ಟೋರಿ ಏನು..? ನಿರ್ದೇಶಕರು ಹೇಳೋದು ಒಂದೇ ವರ್ಡ್ ಉತ್ತರ. ಲೈಫ್ ಈಸ್ ಬ್ಯೂಟಿಫುಲ್. ಚಿತ್ರದ ಕಥೆ ಇರುವುದು ಹಾಗೂ ಚಿತ್ರಕಥೆಯೊಳಗಿನ ಹೂರಣ ಇದೆ..

  ಜೀವನವನ್ನು ನಾವು ಇಷ್ಟಪಟ್ಟಂತೆ ಬದುಕಬೇಕು ಎಂದು ಕನಸು ಕಾಣುವ ನಾಯಕಿ. ಕಟ್ಟುಪಾಡುಗಳನ್ನೆಲ್ಲ ಧಿಕ್ಕರಿಸಿ ಹೊರಡುವ ಅವಳಿಗೆ, ಯಾವುದೋ ಕಾರಣದಿಂದಾಗಿ ಒಂದು ಸೆಲ್ಫಿಗೆ ಒಂದಾಗ್ತಾರೆ. ಅವರು ಸೆಲ್ಫಿಗೆ ಒಂದಾಗೋದು ಏಕೆ ಅನ್ನೋದೇ ಇಂಟ್ರೆಸ್ಟಿಂಗ್ ಆಗಿದ್ಯಂತೆ. 

  ಬೋಲ್ಡ್ ಹುಡುಗಿಯಾಗಿ ಹರಿಪ್ರಿಯಾ, ಕೋಟ್ಯಧಿಪತಿಯಾಗಿ ಪ್ರಜ್ವಲ್ ದೇವರಾಜ್, ನಿರ್ದೇಶಕನಾಗುವ ಕನಸು ಹೊತ್ತ ಹುಡುಗನಾಗಿ ಪ್ರೇಮ್ ನಟಿಸಿದ್ದಾರೆ. ಇವರೆಲ್ಲರನ್ನೂ ಒಟ್ಟಿಗೇ ನಿಲ್ಲಿಸಿ ಸೆಲ್ಫಿ ತಗೊಂಡಿರೋದು ದಿನಕರ್ ತೂಗುದೀಪ್. ಸೆಲ್ಫಿ ಹೆಂಗಿದ್ಯೋ.. ಇದೇ ವಾರ ನೋಡಿ ಹೇಳಿ.

 • ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಹೀರೋ ಯಾರು..?

  prajwal devaraj, hari priya, nenapirali prem in life jothondu selfi

  ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದಲ್ಲಿ ಆನ್‍ಸ್ಕ್ರೀನ್ ಮೇಲೆ ಇಬ್ಬರು ಹೀರೋಗಳಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್. ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್. ಹೀರೋಯಿನ್ ಹರಿಪ್ರಿಯಾ. ಇನ್ನು ಡೈರೆಕ್ಟರ್ ದಿನಕರ್ ತೂಗುದೀಪ್ ಕೂಡಾ ಚಿತ್ರದ ಇನ್ನೊಬ್ಬ ಹೀರೋನೇ. ತಮ್ಮ ಹೆಸರಿನಲ್ಲೇ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರುವ ಶಕ್ತಿಯಿರುವ ಕನ್ನಡದ ಕೆಲವೇ ನಿರ್ದೇಶಕರಲ್ಲಿ ದಿನಕರ್ ಕೂಡಾ ಒಬ್ಬರು. ಆದರೆ, ನಟ ಪ್ರೇಮ್ ಪ್ರಕಾರ ಇವರಲ್ಲಿ ಯಾರೊಬ್ಬರೂ ಚಿತ್ರದ ಹೀರೋ ಅಲ್ಲ. ಹಾಗಾದರೆ ಹೀರೋ ಯಾರು..?

  ಚಿತ್ರದ ಹೀರೋ ಕಥೆ. ಕಥೆ ಎಷ್ಟು ಫ್ರೆಶ್ ಆಗಿದೆ, ಚಿತ್ರದಲ್ಲ ಪ್ರತಿಯೊಬ್ಬರೂ ಹೈಲೈಟ್ ಆಗುತ್ತಾರೆ. ಕಥೆಯೇ ಹೀರೋ ಅಂತಾರೆ ಪ್ರೇಮ್. ಚಿತ್ರಕ್ಕೆ ಕಥೆ ಬರೆದಿರುವುದು ದಿನಕರ್ ಅವರ ಪತ್ನಿ ದಿವ್ಯಾ.

  ನಮಗೆ ಇಷ್ಟವಾದವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತೇವೆ. ಒಳ್ಳೆಯ ಬ್ಯಾಕ್‍ಗ್ರೌಂಡ್ ಕಂಡಾಗ ಅದರ ಹಿನ್ನೆಲೆಯಲ್ಲಿ ಸೆಲ್ಫಿ ತೆಗೆದುಕೊಳ್ತೇವೆ. ಸುಮ್ಮನೆ ಎಲ್ಲಿ ಅಂದ್ರೆ ಅಲ್ಲಿ ಸೆಲ್ಫಿ ತೆಗೆದುಕೊಳ್ಳಲ್ಲ. ಲೈಫ್ ಕೂಡಾ ಹಾಗೇನೆ ಅನ್ನೋದು ಚಿತ್ರದ ಥೀಮ್. ಹಾಗಾದರೆ ಸೆಲ್ಫಿ.. ಅದರಲ್ಲೂ ಲೈಫ್ ಜೊತೆಗೆ ಹೇಗಿರಬಹುದು. ಅದೊಂದು ಅದ್ಭುತ ಜರ್ನಿ. ಡೋಂಟ್ ಮಿಸ್ ಅಂತಾರೆ ಪ್ರೇಮ್.

 • ವಿದೇಶಕ್ಕೆ ಎಲ್ಲಿದ್ದೆ ಇಲ್ಲೀ ತನಕ

  ellidhe illitanaka foreign tour

  ಸೃಜನ್ ಲೋಕೇಶ್ ಅಭಿನಯದ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ಫಾರಿನ್ನಿಗೆ ಹೋಗಿದೆ. 25ನೇ ದಿನದತ್ತ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಚಿತ್ರ ಈ ವಾರ ವಿದೇಶಗಳಲ್ಲಿ ರಿಲೀಸ್ ಆಗಿದೆ. ಸೃಜನ್ ಲೋಕೇಶ್, ಹರಿಪ್ರಿಯಾ ಅಭಿನಯದ ಈ ಚಿತ್ರಕ್ಕೆ ತೇಜಸ್ವಿ ಆ್ಯಕ್ಷನ್ ಕಟ್ ಹೇಳಿದ್ದರು. ತಿಳಿ ಹಾಸ್ಯದ ಎಳೆಯಿದ್ದ ಲವ್ ಸ್ಟೋರಿ ಪ್ರೇಕ್ಷಕರ ಮನ ಗೆದ್ದಿದೆ.

  ಈ ವಾರದಿಂದ ಆಸ್ಟ್ರೇಲಿಯಾದ ಸಿಡ್ನಿ, ಮೆಲ್ಬೋರ್ನ್, ಪರ್ತ್ ಮತ್ತು ನ್ಯೂಜಿಲ್ಯಾಂಡ್‍ನಲ್ಲಿ ಎಲ್ಲಿದ್ದೆ ಇಲ್ಲಿ ತನಕ ರಿಲೀಸ್ ಆಗಿದೆ.

 • ಸಂನ್ಯಾಸಿನಿ ಹರಿಪ್ರಿಯಾ..!

  Sanyasini Haripriya

  ಕಾಷಾಯ ವಸ್ತ್ರ, ಋಷಿ ಪತ್ನಿಗಳ ಶೈಲಿಯ ಕೇಶವಿನ್ಯಾಸ, ರುದ್ರಾಕ್ಷಿ ಮಾಲೆ.. ಇದು ಹರಿಪ್ರಿಯಾ ಅವರ ಹೊಸ ವೇಷ. ಅರೆ.. ಹರಿಪ್ರಿಯಾ ಸಂನ್ಯಾಸಿನಿಯಾಗಿಬಿಟ್ಟರಾ ಎಂದುಕೊಳ್ಳಬೇಡಿ. ಸಂನ್ಯಾಸಿನಿಯೇನೂ ಆಗಿಲ್ಲವಾದರೂ ಯೋಗಿನಿಯಾಗಿದ್ದಾರೆ.ದೇವತೆಯಾಗಿದ್ದಾರೆ.


  ಇದು ಕನ್ನಡದ ಸಂಘರ್ಷ ಧಾರಾವಾಹಿಯಲ್ಲಿ ಅವರು ಮಾಡುತ್ತಿರುವ ಪಾತ್ರದ ವಿಶೇಷತೆ. ಈ ಮೂಲಕ ಕಿರುತೆರೆಗೂ ಎಂಟ್ರಿ ಕೊಟ್ಟಿರೋ ಹರಿಪ್ರಿಯಾ, ಧಾರಾವಾಹಿಯಲ್ಲಿ ದೇವತೆಯಾಗಿದ್ದಾರಂತೆ. 4 ಅವತಾರಗಳಲ್ಲಿ ಕಾಣಿಸಿಕೊಳ್ಳುವ ಪಾತ್ರ. ನವರಾತ್ರಿ ಹಿನ್ನೆಲೆಯಲ್ಲಿ ರೂಪಿಸಿರುವ ಅವತಾರ ನನ್ನದು ಎಂದಿರುವ ಹರಿಪ್ರಿಯಾ, ತಮ್ಮ ಪಾತ್ರಗಳ ಶೂಟಿಂಗ್ ಮುಗಿಸಿದ್ದಾರೆ.

 • ಸಂಹಾರದಲ್ಲಿ ನಿರ್ಮಾಪಕರ ಪುತ್ರನ ಪಾತ್ರವೇನು..?

  samhara producer son manu gowda

  ಸಂಹಾರ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಚಿರಂಜೀವಿ ಸರ್ಜಾರ ಅಂಧನ ಪಾತ್ರ, ಹರಿಪ್ರಿಯಾರ ವಿಲನ್ ಪಾತ್ರ ಹಾಗೂ ಚಿಕ್ಕಣ್ಣರ ಕಾಮಿಡಿ ರೋಲ್. ಆದರೆ, ಇವರೆಲ್ಲರ ನಿರ್ಮಾಪಕ ವೆಂಕಟೇಶ್ ಅವರ ಪುತ್ರ ಮನುಗೌಡ ಅಷ್ಟೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಡೀ ಸಿನಿಮಾದಲ್ಲಿ ಮನುಗೌಡ, ನಾಯಕಿ ಹರಿಪ್ರಿಯಾ ಜೊತೆಯಲ್ಲಿರುತ್ತಾರೆ.

  ಯಾರೋ ಮಾಡಬೇಕಿದ್ದ ಪಾತ್ರ, ಅನಿವಾರ್ಯವಾಗಿ ನಾನು ನಟಿಸಿದೆ. ಮೊದಲ ಬಾರಿ ಕ್ಯಾಮೆರಾ ಎದುರಿಸುವಾಗ ಆತಂಕಗಳಿದ್ದುದು ನಿಜ. ಆದರೆ, ಹರಿಪ್ರಿಯಾ ಪ್ರತಿಯೊಂದನ್ನು ತಿದ್ದಿ ತೀಡಿ ಹೇಳಿಕೊಟ್ರು. ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎಂದು ಹೇಳಿಕೊಂಡಿದ್ದಾರೆ ಮನುಗೌಡ.

  ಮಗನ ಅಭಿನಯದ ಬಗ್ಗೆ ಅಪ್ಪ ವೆಂಕಟೇಶ್ ಕೂಡಾ ತೃಪ್ತಿಯಾಗಿದ್ದಾರೆ. ಚಿತ್ರದ ಬಗ್ಗೆಯೂ ಖುಷಿಯಾಗಿದ್ದಾರೆ. ನಿರ್ದೇಶಕ ಗುರು ದೇಶಪಾಂಡೆ, ತಾವು ಹೇಳಿದಂತೆಯೇ ಸಿನಿಮಾ ಮಾಡಿಕೊಟ್ಟಿದ್ದಾರೆ ಎನ್ನುವ ತೃಪ್ತಿ ನಿರ್ಮಾಪಕರದ್ದು. ಚಿತ್ರ ಈ ಶುಕ್ರವಾರದಿಂದ ತೆರೆಯಲ್ಲಿ ಮಿನುಗಲಿದೆ.

   

   

   

 • ಸಾಕ್ಷಿ ಇಲ್ಲಿದೆ ; ಬಾಲಿವುಡ್ ಮಂದಿ ಬೆಲ್‌ಬಾಟಂ ಕಥೆ ಕದ್ದರಾ..?

  did bollywood copy kananda bellbottom's story

  ಬೆಲ್‌ಬಾಟಂ ಈ ವರ್ಷದ ಸೂಪರ್ ಹಿಟ್ ಸಿನಿಮಾ. ವಿಭಿನ್ನ ಕಥೆ, ವಿಶೇಷ ಟ್ರೀಟ್‌ಮೆಂಟ್‌ನಿAದಾಗಿ ಹಿಟ್ ಆದ ಚಿತ್ರವಿದು. ರಿಷಬ್ ಶೆಟ್ಟಿ, ಹರಿಪ್ರಿಯಾ ನಟಿಸಿದ್ದ ಚಿತ್ರಕ್ಕೆ ಜಯತೀರ್ಥ ನಿರ್ದೇಶಕ. ಬೆಂಕಿಪಟ್ಣ ದಯಾನಂದ್ ಕಥೆಗಾರ. ಇದೇ ಹೆಸರಿನಲ್ಲಿ ಹಿಂದಿಯಲ್ಲಿ ಬೆಲ್‌ಬಾಟಂ ಅನ್ನೋ ಚಿತ್ರ ಶುರುವಾಯ್ತು. ಇತ್ತೀಚೆಗೆ. ಅಕ್ಷಯ್ ಕುಮಾರ್ ಹೀರೋ ಆಗಿರುವ ರೆಟ್ರೋ ಸ್ಟೆöÊಲ್‌ನ ಪೋಸ್ಟರ್ ಭರ್ಜರಿ ಸದ್ದು ಮಾಡಿತ್ತು. ಆದರೆ, ಶಾಕ್ ಆಗಿದ್ದು ಆಮೇಲೆ.

  ಇದು ಯಾವುದೇ ಚಿತ್ರದ ರೀಮೇಕ್ ಅಲ್ಲ ಎಂದು ಅಕ್ಷಯ್ ಕುಮಾರ್ ಸ್ಪಷ್ಟನೆ ಕೊಟ್ಟಾಗ. ಇದು ಸ್ವತಃ ಬೆಲ್‌ಬಾಟಂ ಟೀಂಗೂ ಶಾಕ್ ಆಗಿತ್ತು. ಎಲ್ಲರಿಗಿಂತ ಹೆಚಚು ಶಾಕ್ ಆದವರು ರವಿವರ್ಮ. ಚಿತ್ರವನ್ನು ಹಿಂದಿಯಲ್ಲಿ ರೀಮೇಕ್ ಮಾಡಲು ಹಕ್ಕು ಖರೀದಿಸಿದ್ದ ರವಿವರ್ಮ, ರೈಟರ್ ಅಸೋಸಿಯೇಷನ್‌ನಲ್ಲಿ ಕನ್ನಡದ ಬೆಲ್‌ಬಾಟಂ ಸಿನಿಮಾದ ಕೆಲವು ಪ್ರಧಾನ ಅಂಶಗಳ ಸಮೇತ ಕೇಸು ಹಾಕಿದ್ದಾರೆ. ವಿಷಯ ಅಷ್ಟಕ್ಕೇ ನಿಂತಿಲ್ಲ. ಕೇಸು ಹಾಕಿದ ತಕ್ಷಣ ಸ್ವತಃ ಅಕ್ಷಯ್ ಕುಮಾರ್ ಮಾತುಕತೆಗೆ ಕರೆದಿದ್ದಾರೆ. ಅಲ್ಲಿಗೆ..

  ಇಷ್ಟಕ್ಕೂ ಆಗಿದ್ದೇನೆಂದರೆ, ಚಿತ್ರದ ಸಿಡಿಯನ್ನು ರವಿವರ್ಮ ಅವರೇ ನಿಖಿಲ್ ಅಡ್ವಾಣಿಗೆ ಕೊಟ್ಟಿದ್ದರಂತೆ. ಅಕ್ಷಯ್ ಕುಮಾರ್ ಜೊತೆಯಲ್ಲಿ ಸಿನಿಮಾ ಮಾಡೋಣ, ನೋಡಿ ಎಂದಿದ್ದರAತೆ. ಆದರೆ, ನಿಖಿಲ್ ಅಡ್ವಾಣಿ ಬೆಲ್‌ಬಾಟಂ ಚಿತ್ರವನ್ನು ಶುರು ಮಾಡಿದರಾದರೂ, ರವಿವರ್ಮಗೆ ಶಾಕ್ ಕೊಟ್ಟಿದ್ದಾರೆ. ಈಗಲೂ ಅಷ್ಟೆ, ರವಿವರ್ಮ ಹಠಕ್ಕೇನೂ ಬಿದ್ದಿಲ್ಲ. ಮಾತುಕತೆ ಯಶಸ್ವಿಯಾದರೆ, ಕಥೆಯನ್ನು ಮಾರಲು ಅವರೂ ರೆಡಿಯಿದ್ದಾರೆ.

 • ಸಿದ್ದಾಂಬೆ ರಾಣಿ ಹರಿಪ್ರಿಯಾ

  haripriya as chitradurga queen in bicchugathi movie

  ಇಡೀ ವರ್ಷ ಸುದ್ದಿಯಲ್ಲಿದ್ದ ತಾರೆ ಹರಿಪ್ರಿಯಾ. ಬೆಲ್‍ಬಾಟಂನ ಕಳ್ಳಭಟ್ಟಿ ಕುಸುಮಾ, ಕುರುಕ್ಷೇತ್ರದ ಮಾಯಾ, ಸೂಜಿದಾರದ ಮಧ್ಯಮ ವರ್ಗದ ಗೃಹಿಣಿ, ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಆ್ಯಕ್ಷನ್ ಕ್ವೀನ್.. ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹರಿಪ್ರಿಯಾ, ಬಿಚ್ಚುಗತ್ತಿ ಚಿತ್ರದಲ್ಲಿ ಸಿದ್ಧಾಂಬೆ ಎನ್ನುವ ರಾಣಿಯ ಪಾತ್ರ ಮಾಡುತ್ತಿದ್ದಾರೆ.

  ರಾಣಿ ಎಂದರೆ ಅರಮನೆಯ ರಾಣಿಯಲ್ಲ. ಕಿತ್ತೂರು ಚೆನ್ನಮ್ಮ, ಬಭ್ರುವಾಹನ ಚಿತ್ರದಲ್ಲಿ ಬಿ.ಸರೋಜಾದೇವಿ ನಿರ್ವಹಿಸಿದ್ದರಲ್ಲ. ಹೋರಾಟಗಾರ್ತಿ ರಾಣಿಯ ಪಾತ್ರ.. ಆ ರೀತಿಯ ಪಾತ್ರವಿದು.

  ರಾಜ, ರಾಜ್ಯ ಉಳಿಸಿಕೊಳ್ಳಲು ಹೋರಾಡುವ ಪಾತ್ರ ನನ್ನದು. ಕತ್ತಿವರಸೆ, ಕುದುರೆ ಸವಾರಿ ಎಲ್ಲವೂ ಇದೆ. ಯುದ್ಧದ ಸನ್ನಿವೇಶಗಳಿವೆ. ನಿರ್ದೇಶಕ ಸಂತು ಅಪಾರ ಶ್ರಮವಹಿಸುತ್ತಿದ್ದಾರೆ. ಪಾತ್ರಕ್ಕಾಗಿ ನಾನು ತರಬೇತಿ ಪಡೆದಿದ್ದೇನೆ ಎಂದಿದ್ದಾರೆ ಹರಿಪ್ರಿಯಾ.

 • ಸೃಜನ್ ಎಲ್ಲೋ.. ನಾನಲ್ಲೆ.. - ದರ್ಶನ್

  darshan feels happy after watching ellidhe illitanaka

  ಸೃಜನ್ ಲೋಕೇಶ್ ಅಭಿನಯದ ಎಲ್ಲಿದ್ದೆ ಇಲ್ಲೀ ತನಕ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ ಸಿಕ್ಕಿದೆ. ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದ ಗೆಳೆಯ ದರ್ಶನ್, ಚಿತ್ರವನ್ನು ವೀಕ್ಷಿಸಿ ಸೃಜನ್ರನ್ನು ಮೆಚ್ಚಿಕೊಂಡಿದ್ದಾರೆ.

  ಚಿತ್ರದಲ್ಲಿ ಸುರೇಶ್ (ಸೃಜನ್ ಲೋಕೇಶ್ ಪಾತ್ರದ ಹೆಸರು) ಲವ್ವಿಗೆ ಬೀಳೋದು, ಶ್ರೀಮತಿ ಸುರೇಶ್ (ಹರಿಪ್ರಿಯಾ) ಪಾತ್ರ ಸಖತ್ತಾಗಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಇಷ್ಟವಾಯ್ತು ಎಂದಿದ್ದಾರೆ ದರ್ಶನ್.

  ಸಿನಿಮಾ ಹಿಟ್ ಆಗಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿದೆ ಎಂದಿರುವ ದರ್ಶನ್, ಸೃಜನ್ ಲೋಕೇಶ್ ಅವರಿಗೆ ಶುಭ ಕೋರಿದ್ದಾರೆ. ಚಿತ್ರದಲ್ಲಿ ದರ್ಶನ್ ಅತಿಥಿ ನಟರಾಗಿ ನೋಡಲು ಕಾಯುತ್ತಿದ್ದರು ಎಂಬ ಪ್ರಶ್ನೆಗೆ ನಾನು ಸೃಜನ್ ಜೊತೆ ಸದಾ ಇರುತ್ತೇನೆ. ಅವನೆಲ್ಲಿರುತ್ತಾನೋ.. ನಾನೂ ಅಲ್ಲಿರುತ್ತೇನೆ. ಸಿನಿಮಾದಲ್ಲಷ್ಟೇ ಅಲ್ಲ, ಎಲ್ಲ ಕಡೆಯೂ ನಾನಿರುತ್ತೇನೆ ಎಂದಿದ್ದಾರೆ ದರ್ಶನ್.

  ದರ್ಶನ್ ಪ್ರತಿಕ್ರಿಯೆಯಷ್ಟೇ ಮಜವಾದ ಪ್ರತಿಕ್ರಿಯೆ ಸಿಕ್ಕಿರೋದು ಪ್ರೇಕ್ಷಕರಿಂದ. ತೇಜಸ್ವಿಯವರ ನಿರ್ದೆಶನಕ್ಕೆ ಭರಪೂರ ಮೆಚ್ಚುಗೆ ಸಿಕ್ಕಿದೆ. ಒಂದು ಸುಳ್ಳು ಸಾವಿರ ಸುಳ್ಳಾಗಿ ಬದಲಾಗಿ ಸೃಷ್ಟಿಸುವ ನಗೆ ತಾಂಡವ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸಿದೆ. ಸೃಜನ್ ಗೆದ್ದಿದ್ದಾರೆ.

 • ಸ್ವಿಟ್ಜರ್'ಲ್ಯಾಂಡ್‍ಗೆ ಲಗಾಮ್

  ಸ್ವಿಟ್ಜರ್'ಲ್ಯಾಂಡ್‍ಗೆ ಲಗಾಮ್

  ಉಪೇಂದ್ರ ಮತ್ತು ಹರಿಪ್ರಿಯಾ ಇದೇ ಮೊದಲ ಬಾರಿ ಜೊತೆಗೂಡಿರುವ ಸಿನಿಮಾ ಲಗಾಮ್. ಈಗಾಗಲೇ 2 ಹಂತದ ಶೂಟಿಂಗ್‍ನ್ನೂ ಮುಗಿಸಿರುವ ಸಿನಿಮಾ, ಈಗ 3ನೇ ಹಂತಕ್ಕೆ ಸ್ವಿಟ್ಜರ್‍ಲ್ಯಾಂಡ್ ಹೋಗೋಕೆ ಪ್ಲಾನ್ ಮಾಡುತ್ತಿದೆ.

  ಚಿತ್ರದ ಕಥೆಯ ಪ್ರಕಾರ ವಿದೇಶದ ಅಗತ್ಯ ಇದೆ. ಹೀಗಾಗಿ ನ್ಯೂಜಿಲ್ಯಾಂಡ್‍ಗೆ ಹೋಗೋಕೆ ಅನುಮತಿ ಕೇಳುತ್ತಿದ್ದೇವೆ. ಇನ್ನೂ 50 ದಿನ ಶೂಟಿಂಗ್ ಬಾಕಿ ಇದೆ ಎಂದಿದ್ದಾರೆ ನಿರ್ದೇಶಕ ಮಾದೇಶ್.

  ಸಾಯಿಕುಮಾರ್, ಸಾಧುಕೋಕಿಲ, ರಂಗಾಯಣ ರಘು ಕೂಡಾ ನಟಿಸುತ್ತಿರುವ ಲಗಾಮ್ ಚಿತ್ರ 2021ರ ಮೊದಲ ಭಾಗದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

 • ಹರಿಪ್ರಿಯಾ As ಹರಿಪ್ರಿಯಾ In ಲೈಫ್ ಜೊತೆ ಒಂದ್ ಸೆಲ್ಫಿ

  haripriya's reel character resembles real character

  ಲೈಫ್ ಜೊತೆ ಒಂದು ಸೆಲ್ಫಿ ಚಿತ್ರದ ನಾಯಕಿ ಹರಿಪ್ರಿಯಾ. ಚಿತ್ರದಲ್ಲಿನ ಅವರ ಪಾತ್ರ, ಹರಿಪ್ರಿಯಾಗೆ ಖುಷಿ ಕೊಡೋಕೆ ಕಾರಣಗಳಿವೆ. ಏಕೆಂದರೆ, ರಿಯಲ್ ಹರಿಪ್ರಿಯಾಗೂ, ಸೆಲ್ಫಿ ಚಿತ್ರದ ರೀಲ್ ಹರಿಪ್ರಿಯಾಗೂ ಸಾಕಷ್ಟು ಹೋಲಿಕೆಗಳಿವೆ. ಹರಿಪ್ರಿಯಾಗೆ ಖುಷಿ ಕೊಟ್ಟಿರುವುದೇ ಅದು.

  ಹರಿಪ್ರಿಯಾ ಸಿಕ್ಕಾಪಟ್ಟೆ ಮಾತಾಡ್ತಾರೆ. ಅಷ್ಟೇ ಫನ್ನಿ ಫನ್ನಿಯಾಗಿರ್ತಾರೆ. ತಮಾಷೆ ಮಾಡ್ಕೊಂಡ್ ಕಾಲ ಕಳೀತಾರೆ. ಅಷ್ಟೆಲ್ಲದರ ಮಧ್ಯೆ ಅಷ್ಟೇ ಸೀರಿಯಸ್ ಆಗಿ ಯೋಚನೆಯನ್ನೂ ಮಾಡ್ತಾರೆ. ರಿಯಲ್ ಹರಿಪ್ರಿಯಾಗೂ, ರೀಲ್ ರಶ್ಮಿ ಪಾತ್ರಕ್ಕೂ ಇರುವುದು ಇಂಥವೇ ಹೋಲಿಕೆ. ಹರಿಪ್ರಿಯಾಗೆ ಸುತ್ತೋದು, ಟ್ರಾವೆಲ್ ಮಾಡೋದು ಅಂದ್ರೆ ತುಂಬಾ ಇಷ್ಟ. ಚಿತ್ರದ ರಶ್ಮಿ ಪಾತ್ರವೂ ಹಾಗೆಯೇ.. ಟ್ರಾವೆಲ್ ಮಾಡ್ತಾನೆ ಇರುತ್ತೆ. ಸೆಲ್ಫಿ ಚಿತ್ರದ ಪಾತ್ರದಂತೆಯೇ ರಿಯಲ್ ಹರಿಪ್ರಿಯಾ ಕೂಡಾ ಮಾನಸಿಕವಾಗಿ ಧೈರ್ಯವಂತೆ.

  ಒಟ್ಟಿನಲ್ಲಿ ಈ ಸಿನಿಮಾದಲ್ಲಿ ನಾನು, ನಾನಾಗಿಯೇ ಕಾಣಿಸಿಕೊಂಡಿದ್ದೇನೆ. ಮಾನಸ ತೂಗುದೀಪ್, ಚೆಂದದ ಕಥೆ ಮಾಡಿಕೊಂಡಿದ್ದರು. ಅದರ ಹಿನ್ನೆಲೆಯೇ ಸೊಗಸಾಗಿತ್ತು. ದಿನಕರ್ ಬಂದು ನನಗೆ ನನ್ನ ಪಾತ್ರದ ಬಗ್ಗೆ ಮಾತ್ರ ಹೇಳಿದ್ರು. ನನಗೂ ಅದು ನನ್ನ ಬದುಕಿಗೆ ಹತ್ತಿರ ಎನಿಸಿ ಒಪ್ಪಿಕೊಂಡೆ ಎಂದು ಹೇಳಿಕೊಂಡಿದ್ದಾರೆ ಹರಿಪ್ರಿಯಾ. ಹರಿಪ್ರಿಯಾಗೆ ಪ್ರಜ್ವಲ್ ಮತ್ತು ಪ್ರೇಮ್ ಜೋಡಿಯಾಗಿದ್ದಾರೆ. ಚಿತ್ರ ತೆರೆಗೆ ಬರೋಕೆ ಸಿದ್ಧವಾಗಿದೆ.

 • ಹರಿಪ್ರಿಯಾ ಇನ್ಮುಂದೆ ಡ್ಯಾನ್ಸ್ ಶೋ ಜಡ್ಜ್

  ಹರಿಪ್ರಿಯಾ ಇನ್ಮುಂದೆ ಡ್ಯಾನ್ಸ್ ಶೋ ಜಡ್ಜ್

  ಚಿತ್ರರಂಗದಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಸಕ್ರಿಯವಾಗಿರುವ ನಟಿ ಹರಿಪ್ರಿಯಾ ಇದೇ ಮೊದಲ ಬಾರಿಗೆ ರಿಯಾಲಿಟಿ ಶೋವೊಂದರ ಜಡ್ಜ್ ಆಗಿದ್ದಾರೆ. ಹರಿಪ್ರಿಯಾಗೆ ಕಿರುತೆರೆ ಹೊಸದಲ್ಲ. ಈ ಹಿಂದೆ ಧಾರಾವಾಹಿಯೊಂದರಲ್ಲಿ ಅತಿಥಿಯಾಗಿ ನಟಿಸಿದ್ದವರು. ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದವರು. ಆದರೆ, ಜಡ್ಜ್ ಆಗುತ್ತಿರುವುದು ಹೊಸದು.

  ಸ್ಟಾರ್ ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಹರಿಪ್ರಿಯಾ ಜಡ್ಜ್ ಆಗುತ್ತಿದ್ದಾರೆ.

 • ಹರಿಪ್ರಿಯಾ ಉಡುಗೊರೆಗಳ ಸುರಿಮಳೆ..!

  haripriya gets her birthday gift

  ಹರಿಪ್ರಿಯಾಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಬಾರಿಯ ಹುಟ್ಟುಹಬ್ಬವಂತೂ ಅವರಿಗೆ ತುಂಬಾನೇ ಸ್ಪೆಷಲ್. ಈ ಬಾರಿ ಅವರು 25ನೇ ಚಿತ್ರದ ಸಂಭ್ರಮದಲ್ಲಿದ್ದಾರೆ. ಕೈತುಂಬಾ ಸಿನಿಮಾಗಳಿವೆ. ಉಡುಗೊರೆಗಳ ಸುರಿಮಳೆಯೇ ಆಗುತ್ತಿದೆ.

  ಹರಿಪ್ರಿಯಾರ 25ನೇ ಸಿನಿಮಾ ಡಾಟರ್ ಆಫ್ ಪಾರ್ವತಮ್ಮ ಚಿತ್ರತಂಡ, ಹರಿಪ್ರಿಯಾ ಬುಲೆಟ್ ಓಡಿಸುತ್ತಿರುವ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ್ದರೆ, ಸೂಜಿದಾರ, ಬೆಲ್‍ಬಾಟಂ, ಕನ್ನಡ್ ಗೊತ್ತಿಲ್ಲ ಚಿತ್ರತಂಡಗಳೂ ಸ್ಪೆಷಲ್ ಗಿಫ್ಟ್ ನೀಡಿವೆ.

  ಹುಟ್ಟುಹಬ್ಬ ಮುಗಿಸಿಕೊಂಡು 10 ದಿನ ಇಡೀ ಕುಟುಂಬದೊಂದಿಗೆ ಸುತ್ತುವ ಪ್ಲಾನ್ ಹಾಕಿಕೊಂಡಿದ್ದಾರೆ ಹರಿಪ್ರಿಯಾ. ಹ್ಯಾಪಿ ಬರ್ತ್ ಡೇ ಹರಿಪ್ರಿಯಾ.

 • ಹರಿಪ್ರಿಯಾ ಬಿಡಿಸಿದ ಚುಕ್ಕಿ ರಂಗೋಲಿ

  haripriya enjoys village life style

  ಚಿತ್ರತಾರೆಯರು ಎಂದರೆ, ಡ್ಯಾನ್ಸು, ಡ್ರೆಸ್ಸುಗಳದ್ದೇ ಹವಾ. ಆದರೆ, ಹರಿಪ್ರಿಯಾ ಸ್ವಲ್ಪ ಡಿಫರೆಂಟು. ಅವರು ಈ ಬಾರಿ ಪಕ್ಕಾ ಹಳ್ಳಿ ಹುಡುಗಿಯ ರೀತಿ ರಂಗೋಲಿ ಬಿಡಿಸಿದ್ದಾರೆ. ಅದೂ ಚುಕ್ಕಿ ರಂಗೋಲಿ.

  ಸಿನಿಮಾಗಳಲ್ಲಷ್ಟೇ ರಂಗೋಲಿ ಬಿಡಿಸುವ ನಟಿಯಲ್ಲ ಹರಿಪ್ರಿಯಾ. ಚಿಕ್ಕಬಳ್ಳಾಪುರದ ಈ ಚೆಲುವೆ, ಹಳ್ಳಿಯಲ್ಲಿ ಮಣ್ಣಿನ ನೆಲದ ಮೇಲೆ ಚುಕ್ಕಿಯಿಟ್ಟು, ರಂಗೋಲಿ ಬಿಡಿಸಿದ್ದಾರೆ.

  ಹರಿಪ್ರಿಯಾ ಅವರನ್ನು ರಂಗೋಲಿ ಸ್ಪರ್ಧೆಗೆ ಕಳಿಸಬಹುದು ಬಿಡಿ ಎಂದು ಕೆಲವು ಅಭಿಮಾನಿಗಳು ಹೇಳಿದರೆ, ಒಲಿಂಪಿಕ್ಸ್‍ನಲ್ಲಿ ರಂಗೋಲಿ ಸೇರಿಸಿದ್ರೆ, ನಿಮಗೇ ಗೋಲ್ಡ್ ಎಂದು ಇನ್ನೊಂದಷ್ಟು ಅಭಿಮಾನಿಗಳು ತಮಾಷೆ ಮಾಡಿದ್ದಾರೆ.

 • ಹರಿಪ್ರಿಯಾ ಮದುವೆಗೆ ರೆಡಿ. ಒಳ್ಳೆ ಹುಡುಗರೇ ಎಲ್ಲಿದ್ದೀರಾ..?

  haripriya all set to get married

  ಎಲ್ಲಿದ್ದೆ ಇಲ್ಲಿ ತನಕ ಚಿತ್ರದ ಬಹುಪಾಲು ಸೀನ್ ನಡೆಯೋದು ಮದುವೆ ಮಂಟಪದಲ್ಲಿ. ಮದುವೆಯಲ್ಲಿ ನಡೆಯೋ ಮೆಹಂದಿ ಶಾಸ್ತ್ರ, ಬಳೆ ಶಾಸ್ತ್ರ, ಅರಿಶಿಣ ಸ್ನಾನ.. ಹೀಗೆ ಪ್ರತಿಯೊಂದನ್ನೂ ಡೀಟೈಲ್ ಆಗಿ ಮಾಡಲಾಗಿದೆ. ಇದನ್ನೆಲ್ಲ ಹೇಳಿಕೊಂಡ ಮೇಲೆ ಹರಿಪ್ರಿಯಾರನ್ನು ಅವರ ಮದುವೆ ಬಗ್ಗೆ ಕೇಳದೇ ಇದ್ರೆ ಹೇಗೆ..? ಸೃಜನ್ ಅವರಿಗೆ ಮದುವೆಯಾಗಿ ಮಗುವೂ ಇದೆ. ಹರಿಪ್ರಿಯಾ ಸ್ಟಿಲ್ ಅವಿವಾಹಿತೆ. ಮದ್ವೆ ಯಾವಾಗ ಅಂದ್ರೆ ಹರಿಪ್ರಿಯಾ ಹೇಳಿರೋದು ಇಷ್ಟು..

  ``ಅಯ್ಯೋ ನಾನಿನ್ನೂ 27 ಮುಗಿದು 28ಕ್ಕೆ ಕಾಲಿಡುತ್ತಿದ್ದೇನೆ. 16 ವರ್ಷಕ್ಕೇ ಇಂಡಸ್ಟಿಗೆ ಬಂದೆ. 12 ವರ್ಷ ಕಳೆದೋಯ್ತು. ನಂಗಂತೂ ಕೆಲಸ ಮಾಡ್ತಿದ್ದರಷ್ಟೇ ಆರಾಮ್ ಎನ್ನಿಸುತ್ತೆ. ಇಲ್ಲದೇ ಹೋದ್ರೆ ಟೈಂ ವೇಸ್ಟ್ ಮಾಡ್ತಿದ್ದೀನಿ ಅನ್ನಿಸೋಕೆ ಶುರುವಾಗುತ್ತೆ. ನಂಗಿನ್ನೂ ಟೈಂ ಇದೆ. ಆಗೋವಾಗ ಆಗುತ್ತೆ. ಯಾರೂ ನಿಲ್ಸೋಕ್ಕಾಗಲ್ಲ'' ಎನ್ನುತ್ತಾರೆ ಹರಿಪ್ರಿಯಾ.

  ಹಾಗಂದ್ರೆ ಅವರಮ್ಮ ಬಿಡ್ತಾರಾ.. ಯಾವಾಗ್ಲೂ ಕೆಲಸ ಕೆಲಸ ಅಂತಾ ಬ್ಯುಸಿ ಇರ್ತೀಯಾ, ಯಾರನ್ನೂ ಲವ್ ಮಾಡೋಕೂ ಟೈಂ ಇಲ್ಲ ನಿಂಗೆ. ಸುಮ್ನೆ ಬ್ರೇಕ್ ತಗೋ.. ಮದುವೆ ಆಗು ಎನ್ನುತ್ತಿದ್ದಾರಂತೆ.

  ಫೈನಲಿ.. ಇನ್ನು ಮುಂದೆ ಆದ್ರೂ ಒಳ್ಳೆ ಹುಡುಗನ್ನ ಹುಡುಕಬೇಕು. ಇಷ್ಟು ದಿನ ಸ್ಕ್ರಿಪ್ಟ್ ನೋಡಿದ್ದೇ ಆಯ್ತು. ಇನ್ನು ಮುಂದೆ ಹುಡುಗನನ್ನೂ ನೋಡಬೇಕು. ಒಳ್ಳೆ ಹುಡುಗ ಸಿಕ್ರೆ ಮದುವೆ ನಾನ್ ರೆಡಿ ಎಂದಿದ್ದಾರೆ ಹರಿಪ್ರಿಯಾ. ಮುಂದಾ..

 • ಹರಿಪ್ರಿಯಾ-ಸೃಜನ್.. ಎಲ್ಲಿದ್ದೆ ಇಲ್ಲೀ ತನಕ

  haripriya and srujan pair up for a movie

  ಎಲ್ಲಿದ್ದೆ ಇಲ್ಲೀ ತನಕ.. ಎಲ್ಲಿಂದ ಬಂದ್ಯವ್ವ.. ನಿನ್ನ ಕಂಡೂ ನಾನ್ಯಾಕೆ ಕರಗಿದೆನೂ.. ಈ ಹಾಡು ಕೇಳಿದರೆ ಥಟ್ಟನೆ ನೆನಪಾಗುವುದು ಲೋಕೇಶ್. ಎಲ್ಲಿಂದಲೋ ಬಂದವರು ಚಿತ್ರದ ಈ ಹಾಡು. ಆ ಚಿತ್ರದ ನಿರ್ದೇಶಕ ಪಿ.ಲಂಕೇಶ್. ಈ ಹಾಡಿನ ಸಾಹಿತ್ಯವೂ ಅವರದ್ದೇ. ಲೋಕೇಶ್ ಅವರಿಗೆ ಹೊಸದೊಂದು ಇಮೇಜ್ ಸೃಷ್ಟಿಸಿದ್ದ ಆ ಹಾಡು ಈಗ ಸಿನಿಮಾ ಆಗುತ್ತಿದೆ.

  ಸೃಜನ್ ಲೋಕೇಶ್, ತಾವೇ ನಿರ್ಮಾಪಕರಾಗಿ ಎಲ್ಲಿದ್ದೆ ಇಲ್ಲೀ ತನಕ ಅನ್ನೋ ಸಿನಿಮಾ ಶುರು ಮಾಡುತ್ತಿದ್ದಾರೆ. ಸೃಜನ್ ಲೋಕೇಶ್‍ಗೆ ಹರಿಪ್ರಿಯಾ ನಾಯಕಿ.

  ಮಜಾ ಟಾಕೀಸ್ ತಂಡದ ತೇಜಸ್ವಿ, ಚಿತ್ರದ ನಿರ್ದೇಶಕ. ಅದೇ ಟೀಂನ ಅರುಣ್ ಅವರದ್ದು ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ಇದೆ. ಪ್ರೀತಿಗಾಗಿ ಒಬ್ಬ ಹುಡುಗ ಏನೆಲ್ಲ ಸಾಹಸ ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ. ಅರ್ಜುನ್ ಜನ್ಯ ಸಂಗೀತವಿದ್ದು, ಡಿಸೆಂಬರ್ 9ರಂದು ಚಿತ್ರದ ಮುಹೂರ್ತ ನಡೆಯಲಿದೆ. ಇದೊಂದು ಕಂಪ್ಲೀಟ್ ಔಟ್ & ಔಟ್ ಕಾಮಿಡಿ ಸಿನಿಮಾ ಎಂದಿದೆ ಚಿತ್ರತಂಡ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery