ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಅಭಿನಯದ ಮೊದಲ ಚಿತ್ರ ಪ್ರೇಮಬರಹವನ್ನು ಪ್ರೇಕ್ಷಕರಷ್ಟೇ ಅಲ್ಲ, ಇಡೀ ಚಿತ್ರರಂಗ ಆತ್ಮೀಯತೆಯಿಂದ ಬರಮಾಡಿಕೊಂಡಿದೆ. ಚಿತ್ರರಂಗದ ಗಣ್ಯಾತಿಗಣ್ಯರೆಲ್ಲ ಸರ್ಜಾ ಮಗಳಿಗೆ ಸ್ವಾಗತ ಕೋರಿದ್ದಾರೆ. ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
ಸಿನಿಮಾ ಬಿಡುಗಡೆಯ ಹಿಂದಿನ ದಿನ ಸರ್ಜಾ ದಂಪತಿಯ ವಿವಾಹ ವಾರ್ಷಿಕೋತ್ಸವವೂ ಇತ್ತು. ಅದೇ ದಿನ ಪ್ರೀಮಿಯರ್ ಶೋ ಹಮ್ಮಿಕೊಂಡಿದ್ದರು ಅರ್ಜುನ್ ಸರ್ಜಾ. ರೆಬಲ್‍ಸ್ಟಾರ್ ಅಂಬರೀಷ್, ಸುಮಲತಾ, ದರ್ಶನ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ತಾರಾ, ಹರಿಪ್ರಿಯ, ಅಮೂಲ್ಯ, ಮೇಘನಾ ರಾಜ್ ಮೊದಲಾದವರು ಪ್ರೀಮಿಷರ್ ಶೋನಲ್ಲಿ ಭಾಗವಹಿಸಿದ್ದರು. ನಟ ಸುದೀಪ್ ಟ್ವಿಟರ್ ಮೂಲಕ ಐಶ್ವರ್ಯಾ ಅವರನ್ನು ಚಿತ್ರರಂಗಕ್ಕೆ ಸ್ವಾಗತಿಸಿದ್ದು ವಿಶೇಷ.
ನಟ ದರ್ಶನ್, ಚಿತ್ರದಲ್ಲಿ ಕೇವಲ ಹಾಡಿನಲ್ಲಿ ನಟಿಸಿಲ್ಲ, ಚಿತ್ರದ ವಿತರಣೆಯನ್ನೂ ತಮ್ಮ ತೂಗುದೀಪ ಸಂಸ್ಥೆಯಿಂದಲೇ ಮಾಡುವ ಮೂಲಕ, ಅರ್ಜುನ್ ಸರ್ಜಾ ಪುತ್ರಿಯ ಮೊದಲ ಚಿತ್ರದ ವಿತರಣೆಯ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ.