ಭಜರಂಗಿ 2. ಸಿನಿಮಾ ರಿಲೀಸ್ ಆದ ದಿನ ಚಿತ್ರವನ್ನು ನೋಡಿದವರೆಲ್ಲ ಮೆಚ್ಚಿದ್ದರು. ಆದರೆ, ಆ ದಿನವೇ ಪುನೀತ್ ಅವರ ಅಗಲಿಕೆಯೊಂದಿಗೆ ಸಿನಿಮಾಗೆ ಹೊಡೆತ ಬಿದ್ದಿತ್ತು. ಒಂದು ಹಂತಕ್ಕೆ ಗೆದ್ದರೂ, ದೊಡ್ಡ ಮಟ್ಟದ ಗೆಲುವು ದೂರ ಸರಿದುಬಿಟ್ಟಿತು. ಆದರೆ ಒಟಿಟಿಯಲ್ಲಿ ಭಜರಂಗಿ 2 ದೊಡ್ಡ ಮಟ್ಟದ ದಾಖಲೆ ಬರೆಯುತ್ತಿದೆ.
16+ ದಿನಗಳಲ್ಲಿ ಭಜರಂಗಿಯನ್ನು ಒಟಿಟಿಯಲ್ಲಿ ಜನ 10 ಕೋಟಿ ನಿಮಿಷ ನೋಡಿದ್ದಾರೆ. ಕನ್ನಡದ ಚಿತ್ರವೊಂದು ಒಟಿಟಿಯಲ್ಲಿ ಕಡಿಮೆ ಅವಧಿಯಲ್ಲಿ ಇಷ್ಟು ನಿಮಿಷಗಳ ವೀಕ್ಷಣೆ ಪಡೆದಿರುವುದೂ ಒಂದು ದಾಖಲೆ.
ಶಿವಣ್ಣ, ಹರ್ಷ ಮತ್ತು ಜಯಣ್ಣ ಭೋಗೇಂದ್ರ ಕಾಂಬಿನೇಷನ್ನಿನ ಭಜರಂಗಿ 2 ಭರ್ಜರಿ ಗೆಲುವನ್ನೇ ಕಂಡಿದೆ.