` priya sudeep - chitraloka.com | Kannada Movie News, Reviews | Image

priya sudeep

 • Sudeep and Priya Makes a Public Appearance Together

  sudeep family image

  Sudeep and his wife Priya had a family dispute due to some reasons. Meanwhile, the estranged couple appeared before the public together during the audio release of 'Jigar Thanda' which is produced by Sudeep and SRV.

  sudeep_priya2.jpg

  Sudeep had arrived along with Ravishankar for the audio release of the film. Later, Priya Sudeep along with daughter Sanvi entered the event. Sudeep greeted both of them and made way for them to sit. He sat with Ravichandran silently in an other sofa. After some time, due to the insistence of his daughter, Sudeep came and sat along with Sanvi and Priya.

  Later, Sudeep and Priya went to the stage and wished the team a huge success.

 • ಅ ದೃಶ್ಯದಲ್ಲಿ ನಾಯಕಿ ಜಾಗದಲ್ಲಿ ನಾನಿರಬೇಕಿತ್ತು - ಪ್ರಿಯಾ ಸುದೀಪ್

  priya sudeep wished she was in that particular scene instaed of heroine

  ಪೈಲ್ವಾನ್ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಇದೊಂದು ಸ್ಫೂರ್ತಿದಾಯಕ ಚಿತ್ರ ಎಂದು ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಸುದೀಪ್-ಆಕಾಂಕ್ಷಾ ಜೋಡಿಯೂ ಇಷ್ಟವಾಗಿದೆ. ಆದರೆ ಇಡೀ ಚಿತ್ರದಲ್ಲಿ ಸುದೀಪ್ ಅವರ ಪತ್ನಿ ಪ್ರಿಯಾಗೆ ಇಷ್ಟವಾದ ದೃಶ್ಯ ಯಾವುದು ಗೊತ್ತೇ..?

  `ಪೈಲ್ವಾನ್ ಚಿತ್ರದಲ್ಲಿ ಮದುವೆ ಮನೆಗೆ ಸುದೀಪ್ ಎಂಟ್ರಿ ಕೊಡುವ ದೃಶ್ಯ ನನ್ನ ಫೇವರಿಟ್. ಏನ್ ಸ್ಟೈಲಿಷ್ ಆಗಿ ಎಂಟ್ರಿ ಕೊಡ್ತಾರೆ ಸುದೀಪ್. ನನಗಂತೂ ಆ ದೃಶ್ಯ ನೋಡುವಾಗ ನಾಯಕಿ ಅಂದರೆ ವಧು ಇದ್ದ ಜಾಗದಲ್ಲಿ ನಾನಿರಬೇಕಿತ್ತು ಎನ್ನಿಸಿಬಿಟ್ಟಿ' ಎಂದು ಹೇಳಿಕೊಂಡಿದ್ದಾರೆ.

  ಅಂದಹಾಗೆ ಸುದೀಪ್ ಮತ್ತು ಪ್ರಿಯಾ ಅವರದ್ದು ಲವ್ ಮ್ಯಾರೇಜ್. ಸಹಜವಾಗಿಯೇ ಪ್ರಿಯಾಗೆ ಅವರ ಪ್ರೀತಿಯ ದಿನಗಳು, ಮದುವೆಯ ದಿನಗಳು ನೆನಪಾಗಿದ್ದಾರೆ ಅಚ್ಚರಿಯಿಲ್ಲ. ಎಲ್ಲ ಓಕೆ.. ಚಿತ್ರದಲ್ಲಿ ನಿಮಗಿಷ್ಟವಾದ ಸೀನ್ ಯಾವುದು..? ಪ್ರಿಯಾ ಕೇಳುತ್ತಿದ್ದಾರೆ. ಹೇಳ್ತೀರಾ..

 • ಆತ್ಮಸಂಗಾತಿಗೆ ಕಿಚ್ಚನ ಹೃದಯಗೀತೆ

  sudeep wishes his wife priya

  ನನ್ನ ಜೀವನದ ಶಕ್ತಿ, ಸ್ಫೂರ್ತಿ, ನನ್ನ ತಾಳ್ಮೆಯ ಹಿಂದಿನ ಪ್ರೇರಣೆ, ನನ್ನ ಗೌರವ, ನನ್ನ ಹೆಮ್ಮೆಯ ಆತ್ಮಸಂಗಾತಿಯೇ ನಿನಗೆ ಶುಭವಾಗಲಿ. ಹುಟ್ಟುಹಬ್ಬದ ಶುಭಾಶಯಗಳು. ಸದಾ ಪ್ರೀತಿಸೋಣ

  ಕಿಚ್ಚ ಸುದೀಪ್ ಇಂಥಾದ್ದೊಂದು ಹೃದಯಗೀತೆಯಂತ ಶುಭ ಹಾರೈಕೆ ನೀಡಿರುವುದು ತಮ್ಮ ಪತ್ನಿ ಪ್ರಿಯಾಗೆ. ಇಂದು ಕಿಚ್ಚು ಸುದೀಪ್ ಅವರ ಮನ ಮೆಚ್ಚಿದ ಮಡದಿಯ ಹುಟ್ಟುಹಬ್ಬ. ಶುಭಾಶಯಗಳು.

 • ಈ ಪೈಲ್ವಾನ್ ಎದುರು ಡಲ್ ಆಗಲೇಬೇಕು ಕಿಚ್ಚ..!

  make way for pailwan's wife

  ಹತ್ತೂರ ಸರದಾರನಾದರೂ.. ಊರು ಕಾಯೋ ಪೈಲ್ವಾನ್ ಆದರೂ ಹೆಂಡತಿ ಎದುರು ಗಂಡ ಗಂಡಾನೇ.. ಅದಕ್ಕೆ ಸುದೀಪ್ ಅವರೂ ಹೊರತಲ್ಲ. ಪತಿ ಸುದೀಪ್ ಪೈಲ್ವಾನ್ ಆಗಿ.. ದೇಹವನ್ನೆಲ್ಲ ಹುರಿಗೊಳಿಸಿ.. ಮೈಕಟ್ಟು, ಮಾಂಸಖಂಡಗಳೆಲ್ಲ ಕಾಣುವಂತೆ ತೋರಿಸಿ.. ಅಭಿಮಾನಿಗಳೆಲ್ಲ ವ್ಹಾವ್ ಎನ್ನುವಂತೆ ಮಾಡಿದ್ದಾರೆ.

  ಆದರೆ, ಇವರು ಅದೇ ಸುದೀಪ್ ಬೆನ್ನ ಹಿಂದೆ ನಿಂತು.. ಪೈಲ್ವಾನ್ ಸ್ಟೈಲಲ್ಲಿ ರೆಟ್ಟೆ ತೋರಿಸಿ.. ಹೆಂಗೆ ಎಂದಿದ್ದಾರೆ. ನಂಗಿಂತ ನೀನೇ ಪವರ್‍ಫುಲ್ ಎನ್ನಲೇಬೇಕು ಕಿಚ್ಚ. ಎಷ್ಟೆಂದರೂ.. ಅವರು ಪ್ರಿಯಾ ಸುದೀಪ್. 

 • ಕಿಚ್ಚನ ಚಾಲೆಂಜ್ ಸ್ವೀಕರಿಸಿದ ಯಶ್, ಪ್ರಿಯಾ ಸುದೀಪ್

  sudeep's fitness challenge

  ಕಿಚ್ಚ ಸುದೀಪ್ ಹಾಕಿದ್ದ ಫಿಟ್‍ನೆಸ್ ಚಾಲೆಂಜ್‍ನ್ನು ಯಶ್ ಮತ್ತು ಪ್ರಿಯಾ ಸ್ವೀಕರಿಸಿದ್ಧಾರೆ. ಯಶ್‍ರದ್ದು ಒಂಥರಾ ಡಿಫರೆಂಟ್. ಅವರು ತಾವು ವ್ಯಾಯಾಮ ಮಾಡುವ ವಿಡಿಯೋ ಹಾಕೋದ್ರ ಬದಲು, ತಮ್ಮ ಗೆಳೆಯ ಚಕ್ಲಿ ಅಲಿಯಾಸ್ ಚೇತನ್‍ರನ್ನು ವ್ಯಾಯಾಮಕ್ಕೆ ಎಳೆದು ತಂದಿದ್ದಾರೆ. ಲೈಫಲ್ಲೇ ವ್ಯಾಯಾಮ ಮಾಡೋಕೆ ಆಗಲ್ಲ ಎನ್ನುತ್ತಿದ್ದ ಗೆಳೆಯನನ್ನು ಜಿಮ್‍ಗೆ ತಳ್ಳಿದ್ದಾರೆ.

  ಹಾಯ್ ಸುದೀಪ್, ನೀವು ನನಗೆ ಚಾಲೆಂಜ್ ಕೊಟ್ಟಿದ್ದೀರ. ಥ್ಯಾಂಕ್ಯೂ. ನಾವು ಆ್ಯಕ್ಟರ್‍ಗಳು ಯಾವಾಗಲೂ ಫಿಟ್ನೆಸ್ ಚಾಲೆಂಜ್ ಮಾಡ್ತನೇ ಇರ್ತೇವೆ. ಹಾಗಾಗಿ ಒಂದು ಟ್ವಿಸ್ಟ್ ಕೊಟ್ಟಿದ್ದೇನೆ. ಲೈಫಲ್ಲಿ ಫಿಟ್ ಆಗೋಕೆ ಸಾಧ್ಯವಿಲ್ಲ ಎನ್ನುವ ನನ್ನ ಬಾಲ್ಯದ ಗೆಳೆಯ ಚೇತನ್ ಅಲಿಯಾಸ್ ಚಕ್ಲಿಯ ಮೂಲಕ ನಿಮ್ಮ ಚಾಲೆಂಜ್ ಮಾಡಿಸುತ್ತೇನೆ ಎಂದು ಹೇಳಿರುವ ಯಶ್, ತಮ್ಮ ಗೆಳೆಯನ ಫಿಟ್ನೆಸ್ ವಿಡಿಯೋ ಅಪ್‍ಲೋಡ್ ಮಾಡಿದ್ದಾರೆ.

  ಸುದೀಪ್ ತಮ್ಮ ಪತ್ನಿ ಪ್ರಿಯಾ ಅವರಿಗೂ ಫಿಟ್‍ನೆಸ್ ಚಾಲೆಂಜ್ ಹಾಕಿದ್ದರು. ಪತಿಯ ಚಾಲೆಂಜ್ ಸ್ವೀಕರಿಸಿದ ಪ್ರಿಯಾ, ವೇಯ್ಟ್ ಲಿಫ್ಟ್ ಮಾಡುವ ವಿಡಿಯೋ ಹಾಕಿದ್ದಾರೆ. 

  ಇನ್ನು ಸುದೀಪ್ ಹಾಕಿರುವ ಚಾಲೆಂಜ್‍ನಲ್ಲಿ ಬಾಕಿ ಉಳಿದಿರೋದು ಶಿವರಾಜ್ ಕುಮಾರ್ ಮಾತ್ರ.

 • ಬೈ ಟೂ ಟೀ ಕುಡ್ಯೋಕ್ ಆಗಲ್ವಾ ಕಿಚ್ಚನಿಗೆ..?

  kiccha's old promise still pending

  ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 23 ವರ್ಷಗಳಾದವರು. ಸುದೀಪ್ ಆರ್ಥಿಕವಾಗಿ ಬಡವರೇನೂ ಆಗಿರಲಿಲ್ಲ. ಆದರೆ, ಸ್ವಾಭಿಮಾನಿ. ತಂದೆ ತಾಯಿಯ ಬಳಿಯೂ ಹಣ ಕೇಳದಷ್ಟು ಸ್ವಾಭಿಮಾನಿ. ಆಗೆಲ್ಲ ಅವರಿಗೆ ಫುಲ್ ಪೆಟ್ರೋಲ್ ತುಂಬಿಸಿದ ಸ್ಕೂಟಿ ಮತ್ತು ಕೈತುಂಬಾ ದುಡ್ಡು ಕೊಡುತ್ತಿದ್ದವರು ಪ್ರಿಯಾ.

  ಅದು ಅವರ ಪ್ರೇಮಗೀತೆಯ ಕಾಲ. ಪ್ರೇಮಗೀತೆ ಮುಗಿದು ದಾಂಪತ್ಯ ಗೀತೆ ಶುರುವಾಗಿ ಮಗಳಾಗಿದ್ದರೂ ಅದೊಂದು ಪ್ರಾಮಿಸ್ ಹಾಗೆಯೇ ಉಳಿಸಿಕೊಂಡುಬಿಟ್ಟಿದ್ದಾರೆ ಕಿಚ್ಚ.

  ವಿಶ್ರಾಂತಿಯಲ್ಲೊಂದು ಬೈಟು ಟೀ ಕುಡಿಯೋದು. ಈ ಬಾರಿ ಅದನ್ನು ಈಡೇರಿಸ್ತಾರಂತೆ. ಅಫ್‍ಕೋರ್ಸ್.. ಈ ಬಾರಿ ಜೀವದ ಗೆಳತಿಯ ಜೊತೆ ಜೀವಕ್ಕೆ ಜೀವವಾದ ಮಗಳೂ ಇರುತ್ತಾರೆ ಅವರ ಜೊತೆ. ಬೈ ಟೂ ಚಾಯ್ ಕುಡಿಯೋಕೆ. 

 • ಸುದೀಪ್, ಪ್ರಿಯಾ ಸ್ನೇಹಕ್ಕೆ ಬೆಳ್ಳಿ ಹಬ್ಬದ ಸಂಭ್ರಮ

  sudeep priya celebrates 25 years of friendship

  ಸುದೀಪ್.. ನಮ್ಮಿಬ್ಬರ ಸ್ನೇಹಕ್ಕೆ 25 ವರ್ಷ. ನಮ್ಮ ಮದುವೆ ಆ ಸ್ನೇಹವನ್ನು ಹಾಳು ಮಾಡಲಿಲ್ಲ. ಹ್ಯಾಪಿ ಫ್ರೆಂಡ್‍ಶಿಪ್ ಡೇ.. ಹಾಗೆಂದು ಹೇಳಿದವರು ಪ್ರಿಯಾ ರಾಧಾಕೃಷ್ಣನ್. ಸುದೀಪ್ ಅವರ ಪ್ರಿಯ ಪತ್ನಿ.

  ಸನ್ನಿವೇಶ, ಸಂದರ್ಭ ಯಾವುದೇ ಇರಲಿ. ಈ 25 ವರ್ಷಗಳಲ್ಲಿ ನನ್ನ ಜೊತೆಯಿರುವ ಅದ್ಭುತ ಗೆಳತಿ ನೀವು. ಮದುವೆ, ನಮ್ಮಿಬ್ಬರ ಸ್ನೇಹವನ್ನು ಹಾಳು ಮಾಡಲಿಲ್ಲ ಎನ್ನುವುದು ಖುಷಿಯ ಸಂಗತಿ. 25 ವರ್ಷಗಳ ಸ್ನೇಹಕ್ಕೆ ಥ್ಯಾಂಕ್ಸ್... ಊಫ್.. 25 ವರ್ಷ ತುಂಬಾ ದೊಡ್ಡ ಟೈಮೇ.. ಅದ್ಸರಿ.. ನನ್ನನ್ನು ಹೇಗೆ ಸಹಿಸಿಕೊಂಡಿರಿ.. ಎಂದು ಸ್ಮೈಲ್ ಕೊಟ್ಟಿದ್ದಾರೆ ಕಿಚ್ಚ ಸುದೀಪ್.

  ಪತಿ, ಪತ್ನಿ.. ಇಬ್ಬರೂ ಸ್ನೇಹಿತರಾಗಿದ್ದರೆ.. ವ್ಹಾವ್.. ಅದೇ ಶಾಂತಿನಿವಾಸ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery