` shylaja nag - chitraloka.com | Kannada Movie News, Reviews | Image

shylaja nag

 • ದರ್ಶನ್ ಯಜಮಾನನ ಈ ಮ್ಯಾಜಿಕ್.. ಬಾಕ್ಸಾಫೀಸ್‍ಗಿಂತ ಗ್ರೇಟ್

  this magix of yajamana will make everyone proud

  ದರ್ಶನ್ ಅಭಿನಯದ ಯಜಮಾನ ಸಿನಿಮಾ ಬಾಕ್ಸಾಫೀಸ್‍ನ್ನು ಚಿಂದಿ ಉಡಾಯಿಸಿದೆ. ರಿಲೀಸ್ ಆದ ಪ್ರತಿಯೊಂದು ಸೆಂಟರ್‍ನಲ್ಲೂ ಭರ್ಜರಿ ಬೆಲೆ ತೆಗೆಯುತ್ತಿದೆ. ಅದಕ್ಕಿಂತಲೂ ಯಜಮಾನ ಟೀಂ ಖುಷಿ ಪಡೋ ವಿಚಾರ ಇನ್ನೊಂದಿದೆ. ಸಿನಿಮಾ ನೋಡಿದ ಕೆಲವರು ಸಿಟಿ ಬಿಟ್ಟು ಹಳ್ಳಿಗೆ ಹೋಗಿ ಬ್ರಾಂಡ್ ಕಟ್ಟೋಕೆ ರೆಡಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್‍ಗೆ ಟ್ಯಾಗ್ ಮಾಡಿ ಹಳ್ಳಿಯಲ್ಲೇ ದುಡಿದು, ನಮ್ಮದೇ ಬ್ರ್ಯಾಂಡ್ ಕಟ್ಟುತ್ತೇವೆ. ನಮಗೆ ನಾವೇ ಯಜಮಾನರಾಗುತ್ತೇ. ವಿಲ್ ಬ್ಯಾಕ್ ಟು ವಿಲೇಜ್ ಎಂದು ಹೇಳಿ ಹೊರಟು ನಿಂತಿದ್ದಾರೆ.

  ನಿಮಗೆ ಗೊತ್ತಿರಬೇಕು. ಬಂಗಾರದ ಮನುಷ್ಯ ಸಿನಿಮಾ ನೋಡಿ ಸಿಟಿ ಬಿಟ್ಟು ಹಳ್ಳಿಗೆ ಹೋಗಿ ರೈತರಾದವರಿದ್ದಾರೆ. ಹಾಲು ಜೇನು ಸಿನಿಮಾ ನೋಡಿ ಡೈವೋರ್ಸ್‍ಗೆ ಅರ್ಜಿ ಹಾಕಿದ್ದ ದಂಪತಿ ಒಂದಾದ ಉದಾಹರಣೆ ಇದೆ. ಜೀವನ ಚೈತ್ರ ಚಿತ್ರವಂತೂ ಮದ್ಯಪಾನದ ವಿರುದ್ಧ ಹೋರಾಟವನ್ನೇ ರೂಪಿಸಿಬಿಟ್ಟಿತ್ತು. ರಾಜ್-ಅಂಬಿ ಅಭಿನಯದ ಒಡಹುಟ್ಟಿದವರು, ವಿಷ್ಣು ಅಭಿನಯದ ಯಜಮಾನ ಚಿತ್ರಗಳು ದೂರವಾಗಿದ್ದ ಅಣ್ಣ ತಮ್ಮಂದಿರನ್ನು ಒಂದು ಮಾಡಿದ್ದವು. ಭೂತಯ್ಯನ ಮಗ ಅಯ್ಯು ಸಿನಿಮಾ ನೋಡಿ ಕೋರ್ಟಿನಲ್ಲಿ ಹೋರಾಡುತ್ತಿದ್ದವರು ಕೇಸು ವಾಪಸ್ ತೆಗೆದುಕೊಂಡಿದ್ದರು. ಇತ್ತೀಚೆಗೆ ಆ ಮೋಡಿ ಮಾಡಿದ್ದ ಸಿನಿಮಾ ರಾಜಕುಮಾರ. ವೃದ್ಧಾಶ್ರಮಕ್ಕೆ ಬಿಟ್ಟಿದ್ದ ಹೆತ್ತವರನ್ನು ಮಕ್ಕಳೇ ಮನೆಗೆ ವಾಪಸ್ ಕರೆದುಕೊಂಡು ಹೋಗಿದ್ದರು. ಈಗ.. ದರ್ಶನ್ ಯಜಮಾನ ಈ ಮೋಡಿ ಮಾಡಿದೆ.

  ಸಿನಿಮಾ ಸಕ್ಸಸ್ ಎನ್ನವುದು ಗಲ್ಲಾಪೆಟ್ಟಿಗೆಯಲ್ಲಿ ಅಲ್ಲ, ಇಂತಹವುಗಳಲ್ಲಿ ಅಡಗಿದೆ. ನಿರ್ಮಾಪಕಿ ಶೈಲಜಾ ನಾಗ್, ಬಿ. ಸುರೇಶ್, ನಿರ್ದೇಶಕ ಹರಿಕೃಷ್ಣ-ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇದು ಸಿನಿಮಾ ಸಕ್ಸಸ್ಸಿಗಿಂತ ದೊಡ್ಡ ಖುಷಿ ಕೊಟ್ಟಿರೋದ್ರಲ್ಲಿ ಎರಡು ಮಾತಿಲ್ಲ.

 • ದರ್ಶನ್ ಯಜಮಾನನ ನಿರ್ದೇಶಕ ಯಾರು..?

  composer v harikrishna turns director for yajamana

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ನಿರ್ದೇಶಕ ಯಾರು..? ಅರೇ.. ಇದೇನಿದು.. ಪಿ.ಕುಮಾರ್ ಅಲ್ವಾ.. ಅಂತೀರೇನೋ.. ಹೌದು. ಪಿ.ಕುಮಾರ್ ನಿರ್ದೇಶನದ ಚಿತ್ರಕ್ಕೆ ಈಗ ಇನ್ನೊಬ್ಬರು ಸೇರಿಕೊಂಡಿದ್ದಾರೆ. ಅದು ವಿ.ಹರಿಕೃಷ್ಣ. ಚಿತ್ರದ ಟೈಟಲ್ ಕಾರ್ಡ್‍ನಲ್ಲಿ ವಿ.ಹರಿಕೃಷ್ಣ ಹಾಗೂ ಪೊನ್ನು ಕುಮಾರ್ ಇಬ್ಬರ ಹೆಸರನ್ನೂ ನಿರ್ದೇಶಕರೆಂದು ತೋರಿಸಲಾಗಿದೆಯಂತೆ.

  ಯಜಮಾನ ಚಿತ್ರ ಶುರುವಾದಾಗಿನಿಂದ ಚಿತ್ರದ ಪ್ರತಿ ಹಂತದಲ್ಲೂ ವಿ.ಹರಿಕೃಷ್ಣ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರಂತೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ.. ಹೀಗೆ ಪ್ರತಿಯೊಂದರಲ್ಲೂ ತೊಡಗಿಸಿಕೊಂಡಿದ್ದ ಹರಿಕೃಷ್ಣ ಅವರಿಗೆ ನಿರ್ದೇಶಕನ ಕ್ರೆಡಿಟ್ ನೀಡಿದ್ದೇವೆ ಎಂದಿದ್ದಾರೆ ನಿರ್ಮಾಪಕಿ ಶೈಲಜಾ ನಾಗ್.

  ಅಂದಹಾಗೆ ಹರಿಕೃಷ್ಣ ಮತ್ತು ದರ್ಶನ್ ಕಾಂಬಿನೇಷನ್‍ನ 25ನೇ ಚಿತ್ರ ಯಜಮಾನ. ಸಂಗೀತ ನಿರ್ದೇಶನದ ಜೊತೆ ಜೊತೆಯಲ್ಲಿ ನಿರ್ದೇಶಕನ ಜವಾಬ್ದಾರಿಯನ್ನೂ ಹೊತ್ತಿರುವ ಹರಿಕೃಷ್ಣ, ನಿರ್ದೇಶಕರಾಗಬೇಕು ಎಂಬ ತಮ್ಮ ಕನಸನ್ನು ಯಜಮಾನ ಚಿತ್ರದ ಮೂಲಕ ನನಸು ಮಾಡಿಕೊಂಡಿದ್ದಾರೆ.

 • ದರ್ಶನ್ ಸಿನಿಮಾ ಮಾಡ್ತೀರಾ.. ಮುಗೀತು ನಿಮ್ ಕಥೆ ಎಂದಿದ್ದರಂತೆ..!

  darshan shocked over these rumors

  ದರ್ಶನ್ ಇದುವರೆಗೆ 50 ಸಿನಿಮಾ ಮಾಡಿದ್ದಾರೆ. ಸೂಪರ್ ಹಿಟ್ಸ್ ಕೊಟ್ಟಿದ್ದಾರೆ. ಸೋಲನ್ನೂ ಕಂಡಿದ್ದಾರೆ. ಸೋಲು ಕಂಡ ನಿರ್ಮಾಪಕರಿಗೆ ಮತ್ತೆ ಕಾಲ್‍ಶೀಟ್ ಕೊಟ್ಟಿದ್ದಾರೆ. ನೆರವಾಗಿದ್ದಾರೆ. ಚಿತ್ರರಂಗದಲ್ಲಿ ಬೇರೆಯವರ ಕಷ್ಟಗಳಿಗೆ ಹೆಗಲಾಗಿದ್ದಾರೆ. ಹೊಸಬರ ಚಿತ್ರಗಳನ್ನು ಪ್ರೋತ್ಸಾಹಿಸುತ್ತಾರೆ. ಇಷ್ಟೆಲ್ಲ ಇರುವಾಗ ಇಡೀ ಗಾಂಧಿನಗರದಲ್ಲಿ ದರ್ಶನ್ ಬಗ್ಗೆ ಒಳ್ಳೆಯ ಮಾತುಗಳಷ್ಟೇ ಇವೆ ಎಂದುಕೊಂಡರೆ.. ನಿಮ್ಮ ನಿರೀಕ್ಷೆ ಸುಳ್ಳು. ಅಫ್‍ಕೋರ್ಸ್.. ಅದು ಗೊತ್ತಾದಾಗ ದರ್ಶನ್ ಕೂಡಾ ಶಾಕ್ ಆಗಿದ್ದರಂತೆ.

  ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಮತ್ತು ಬಿ.ಸುರೇಶ್. ಇಬ್ಬರೂ ಇದೇ ಮೊದಲ ಬಾರಿಗೆ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದಾರೆ. ಪ್ರತಿಯೊಂದನ್ನೂ ಪ್ಲಾನ್ ಮಾಡಿಕೊಂಡು ಅಚ್ಚುಕಟ್ಟಾಗಿ ಮಾಡುವುದು ಅವರ ಸ್ಟೈಲ್. ಹೀಗಿರುವ ಶೈಲಜಾ ನಾಗ್ ಶೂಟಿಂಗ್ ಅರ್ಧ ಮುಗಿದ ಮೇಲೆ ಒಂದು ದಿನ ದರ್ಶನ್ ಬಳಿ ನಿಮಗೊಂದು ವಿಷಯ ಹೇಳಬೇಕು, ಬೇಸರ ಮಾಡಿಕೊಳ್ಳಬಾರದು ಎಂದರಂತೆ.

  ಏನಮ್ಮ.. ಏನ್ ವಿಷ್ಯ ಎಂದು ಗಾಬರಿಗೊಂಡ ದರ್ಶನ್, ನಾನೇನಾದರೂ ತಪ್ಪು ಮಾಡಿದ್ದೀನಾ ಎಂದೆಲ್ಲ ಯೋಚಿಸಿದ್ರಂತೆ. ಆಗ ಶೈಲಜಾ ನಾಗ್ ತಾವು ದರ್ಶನ್ ಕುರಿತು ಕೇಳಿದ ಕಥೆಗಳನ್ನೆಲ್ಲ ಹೇಳಿದ್ದಾರೆ.

  ಗಾಂಧಿನಗರದ ಕೆಲವು ಮಂದಿ, ಓಹೋ.. ದರ್ಶನ್ ಸಿನಿಮಾ ಮಾಡ್ತಿದ್ದೀರಾ.. ಮುಗೀತು ಬಿಡಿ ನಿಮ್ ಕಥೆ.. ಈ ಸಿನಿಮಾ ಆದ್ಮೇಲೆ ನೀವು ಮತ್ತೆ ಚಿತ್ರರಂಗಕ್ಕೇ ಬರಲ್ಲ. ಇಂಡಸ್ಟ್ರಿಯನ್ನೇ ಬಿಟ್ಟು ಹೋಗ್ತೀರಿ. ದರ್ಶನ್ ಕಾಟ ಹಂಗಿರುತ್ತೆ ಎಂದಿದ್ದರಂತೆ. ಅದನ್ನೆಲ್ಲ ದರ್ಶನ್ ಬಳಿ ಹೇಳಿದ ಶೈಲಜಾ ನಾಗ್, ನಾನು ಕೇಳಿದ್ದೆಲ್ಲ ಸುಳ್ಳು ಅನ್ನೋದು ಕೆಲಸ ಮಾಡ್ತಾ ಮಾಡ್ತಾ ಗೊತ್ತಾಯ್ತು ಎಂದು ದರ್ಶನ್ ಬಳಿಯೇ ಹೇಳಿದ್ದಾರೆ.

  ನನ್ನ ಬೆನ್ನ ಹಿಂದೆ ಹೀಗೆಲ್ಲ ಆಗುತ್ತಾ ಎಂದು ಅಚ್ಚರಿಪಟ್ಟಿದ್ದಾರೆ ದರ್ಶನ್. ಅಷ್ಟೆ ಅಲ್ಲ, ನನಗೆ ಹೇಳೋದೇ ಒಂದು, ಮಾಡೋದೇ ಒಂದು ಎಂಬ ನಿರ್ಮಾಪಕರಿಗೆ ನಾನು ಕಿರಿಕ್ ಕೊಟ್ಟಿರೋದು ನಿಜ ಎಂದಿದ್ದಾರೆ. 

  ಫೈನಲ್ ವಿಷಯ ಏನ್ ಗೊತ್ತಾ..? ಯಜಮಾನ ಚಿತ್ರದ ಸಂಭಾವನೆಯನ್ನೆಲ್ಲ ಚುಕ್ತಾ ಮಾಡಿದ ಶೈಲಜಾ ನಾಗ್, ಮತ್ತೊಂದು ಸಿನಿಮಾಗೆ ಅಡ್ವಾನ್ಸ್ ಕೊಟ್ಟಿದ್ದಾರಂತೆ. ಹಾಗೆ ನನಗೆ ಒಂದು ಸಿನಿಮಾ ಮುಗಿಯುತ್ತಿದ್ದಂತೆಯೇ ಇನ್ನೊಂದು ಸಿನಿಮಾಗೆ ಅಡ್ವಾನ್ಸ್ ಕೊಟ್ಟ ಮೊದಲ ನಿರ್ಮಾಪಕಿ ಶೈಲಜಾ ನಾಗ್ ಎಂದು ಹೇಳಿಕೊಂಡಿದ್ದಾರೆ ದರ್ಶನ್.

 • ಯಜಮಾನ 800+

  yajamana to release in more than 800 screens

  ದರ್ಶನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಯಜಮಾನ ಸಿನಿಮಾ ರಿಲೀಸ್‍ಗೆ ಕ್ಷಣಗಣನೆ ಶುರುವಾಗಿದೆ. ದರ್ಶನ್ ಚಿತ್ರ ಮಾರ್ಚ್ 1ರಂದು 800ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತಿದೆ. ಅದು ದರ್ಶನ್ ಕ್ರೇಜ್.

  ಕಲಾತ್ಮಕ ಚಿತ್ರಗಳ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಿರ್ಮಾಪಕರಾದ ಶೈಲಜಾ ನಾಗ್, ಬಿ.ಸುರೇಶ್ ಇದೇ ಮೊದಲ ಬಾರಿಗೆ ಕಮರ್ಷಿಯಲ್ ಸಿನಿಮಾ ಮಾಡಿದ್ದಾರೆ. ಹರಿಕೃಷ್ಣ, ಕುಮಾರ್ ಜಂಟಿ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್ ನಾಯಕಿಯರು. ದೇವರಾಜ್, ಧನಂಜಯ್, ರವಿಶಂಕರ್, ಸಾಧುಕೋಕಿಲ ನಸಿರುವ ಯಜಮಾನ, ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

 • ಯಜಮಾನ ಚಿತ್ರದಲ್ಲಿ ನರೇಂದ್ರ ಮೋದಿ ಸಂದೇಶ..!

  does yajamana movie have modi;'s make in india concept

  ಸಿನಿಮಾ ರಿಲೀಸ್‍ಗೂ ಮೊದಲೆ ಚಿತ್ರದಲ್ಲಿ ಮನರಂಜನೆ ಜೊತೆಗೆ ಸಂದೇಶವೂ ಇದೆ ಎಂದಿದ್ದರು ದರ್ಶನ್. ಅಷ್ಟೇ ಅಲ್ಲ, ಚಿತ್ರದ ಕಥೆ ಡಿಫರೆಂಟ್ ಎಂದಿದ್ದರು. ಹಾಗೆಯೇ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ಪ್ರಬಲ ಸಂದೇಶವಿದೆ. ಅದು ಮೇಕ್ ಇನ್ ಇಂಡಿಯಾ. 

  ಚಿತ್ರದಲ್ಲಿ ದರ್ಶನ್, ಸ್ವೀಟ್ ಬ್ರಾಂಡ್ ಕಂಪೆನಿಯ ಓನರ್. ಆ ಬ್ರಾಂಡ್ ಕಸಿದುಕೊಳ್ಳೋಕೆ ನಡೆಯುವ ಸಂಚಿನ ವಿರುದ್ಧ ಹೋರಾಡುತ್ತಾನೆ. ಅದು ಮೋದಿಯ ಮೇಕ್ ಇನ್ ಇಂಡಿಯಾ ಕಾನ್ಸೆಪ್ಟಿಗೆ ಹತ್ತಿರವಾಗಿದೆ ಅನ್ನೋದು ದರ್ಶನ್ ಮತ್ತು ಮೋದಿ.. ಇಬ್ಬರಿಗೂ ಅಭಿಮಾನಿಗಳಾಗಿರುವವರ ಮಾತು. 

 • ಯಜಮಾನ ರೈತರ ಕಥೆನಾ..?

  is yajamana stor about farmers

  ಯಜಮಾನ ಚಿತ್ರದಲ್ಲಿರೋದು ರೈತರ ಕಥೆನಾ..? ಅಂಥಾದ್ದೊಂದು ನಿರೀಕ್ಷೆ ಚಿತ್ರದಲ್ಲಿದೆ. ಚಿತ್ರದಲ್ಲಿ ಅಂತಹುದ್ದೇನಿದೆ ಅನ್ನೋ ಮಾತಿಗೆ ದರ್ಶನ್ ಕೊಟ್ಟಿರೋ ಉತ್ತರ ಅದು. ರೈತನೊಬ್ಬ ಕಷ್ಟಪಟ್ಟು ದುಡೀತಾನೆ. ಬೆವರು ಬಸೀತಾನೆ. ಆದರೆ, ಬೆವರನ್ನೇ ಸುರಿಸದ ಮಧ್ಯವರ್ತಿ ಅದರ ಲಾಭ ಪಡೀತಾನೆ. ಇತ್ತ, ಅದೇ ರೈತ ಬೆಂಗಳೂರಿನ ಹೋಟೆಲ್ಲು, ಮಾರ್ಕೆಟ್ಟುಗಳಲ್ಲಿ ಕೂಲಿಯಾಗ್ತಾನೆ. ರೈತನಿಗೆ ನ್ಯಾಯ ಎಲ್ಲಿ ಸಿಗುತ್ತೆ.. ಇಂಥ ಪ್ರಶ್ನೆಯನ್ನ ನಮ್ಮ ಸಿನಿಮಾ ಎತ್ತಿ ಹೇಳುತ್ತೆ ಎಂದಿದ್ದಾರೆ.

  ಸ್ವಲ್ಪ ನೆನಪಿಸಿಕೊಳ್ಳಿ, ಸಾರಥಿ ಚಿತ್ರದ ರೇಷ್ಮೆ ಬೆಳೆಯುವ ರೈತ ಮತ್ತು ಪೊಲೀಸ್ ದೃಶ್ಯವನ್ನು ಕಣ್ಣ ಮುಂದೆ ತಂದುಕೊಳ್ಳಿ. ಆ ಸೀನ್ ಅದೆಷ್ಟು ವೈರಲ್ ಎಂದರೆ, ಈಗಲೂ ಆಗಾಗ್ಗೆ ವಾಟ್ಸಪ್ಪು, ಫೇಸ್‍ಬುಕ್‍ಗಳಲ್ಲಿ ಮೆರೆದಾಡುತ್ತೆ. ಹಾಗಾದರೆ, ಹರಿಕೃಷ್ಣ ಯಜಮಾನನಲ್ಲಿ ಅದೇ ಕಥೆ ಹೇಳಿದ್ದಾರಾ..?

  ಇಷ್ಟೆ ದಿನ ಕಾದಿದ್ದೀವಂತೆ.. ಇನ್ನೊಂದು ದಿನ ಕಾಯೋಕಾಗಲ್ವಾ..? ಯಜಮಾನ ನಾಳೆಯೇ ರಿಲೀಸ್.

 • ಯಜಮಾನನ 4 ಪದಗಳಲ್ಲಿ ಇಷ್ಟೆಲ್ಲ ಕಥೆ ಇದ್ಯಾ..?

  yajamana four words has many meanings

  ಯಜಮಾನ. ಇರೋದು 4 ಅಕ್ಷರ. ಈ ನಾಲ್ಕು ಅಕ್ಷರಗಳಲ್ಲಿ ಇಷ್ಟೆಲ್ಲ ಕಥೆ ಇದ್ಯಾ ಅನ್ನಿಸುವಂತೆ ಮಾಡೋದು ಕವಿಗಳು. ಮೊದಲೇ ಗಾದೆ ಇದ್ಯಲ್ಲ.. ರವಿ ಕಾಣದ್ದನ್ನು ಕವಿ ಕಂಡ ಅಂತಾ. ಇಲ್ಲಿ ಸ್ವಲ್ಪ ಚೇಂಜ್ ಮಾಡ್ಕೊಳಿ, ನಿರ್ಮಾಪಕರು, ನಿರ್ದೇಶಕರು, ನಾಯಕ ನಟ, ಕಲಾವಿದ, ತಂತ್ರಜ್ಞರಾರೂ ಕಾಣದ ವಿಶೇಷಗಳನ್ನು ದರ್ಶನ್ ಅವರ ಅಭಿಮಾನಿಯೂ ಆಗಿರುವ ಕವಿ ಕವಿರಾಜ್ ಕಂಡಿದ್ದಾರೆ.  ಯಜಮಾನ ಚಿತ್ರದ 4 ಅಕ್ಷರಗಳನ್ನೇ ಒಡೆದಿದ್ದಾರೆ ಕವಿರಾಜ್.

  ಜನ : ಜನ ಈ ಸಿನಿಮಾ ನೋಡ್ತಾರೆ.

  ಜಯ : ಈ ಸಿನಿಮಾಗೆ ಜಯ ಗ್ಯಾರಂಟಿ.

  ಜಮಾ : ನಿರ್ಮಾಪಕರ ಖಾತೆಗೆ ಲಾಭ ಜಮಾ ಆಗುತ್ತೆ.

  ಜಮಾನ : ಈ ಜಮಾನ ಯಜಮಾನನ್ನು ಮೆಚ್ಚಿಕೊಳ್ಳುತ್ತೆ.

  ಅಂದಹಾಗೆ ದರ್ಶನ್, ಯಜಮಾನ ಚಿತ್ರದ ಒಂದು ಮುಂಜಾನೆ ಹಾಡು ಬರೆದಿದ್ದಾರೆ. ಕವಿರಾಜ್ ಬರೆದಿದ್ದ 50 ಪಲ್ಲವಿಗಳನ್ನು ಸೈಡಿಗಿಟ್ಟು, ನಿರ್ದೇಶಕ ಹರಿಕೃಷ್ಣ ಈ ಪಲ್ಲವಿ ಎತ್ತಿಕೊಂಡರಂತೆ.

 • ಸಂಕ್ರಾಂತಿಗೆ ದರ್ಶನ್ ಶಿವನಂದಿ ಕಾಣಿಕೆ

  shivanandi song on sankranthi

  ಸಂಕ್ರಾಂತಿಯಲ್ಲಿ ಚಿತ್ರರಂಗದಿಂದ ಸಹಜವಾಗಿಯೇ ವಿಶೇಷ ಕಾಣಿಕೆಗಳಿರುತ್ತವೆ. ಅದು ಅಭಿಮಾನಿಗಳಿಗಾಗಿ. ಹೀಗಾಗಿಯೇ ಈ ಬಾರಿ ದರ್ಶನ್ ಸಂಕ್ರಾಂತಿಗೆ ವಿಶೇಷ ಉಡುಗೊರೆ ಕೊಡುತ್ತಿದ್ದಾರೆ. ದರ್ಶನ್ ಅವರ ಯಜಮಾನ ಚಿತ್ರದ ಶಿವನಂದಿ ಹಾಡು ಸಂಕ್ರಾಂತಿಗೇ ರಿಲೀಸ್ ಆಗುತ್ತಿದೆ. 

  ಪಿ.ಕುಮಾರ್ ಮತ್ತು ಹರಿಕೃಷ್ಣ ನಿರ್ದೇಶನದ ಯಜಮಾನ ಚಿತ್ರದ ಈ ಹಾಡಿಗೆ ಸಾಹಿತ್ಯ ಬರೆದಿರುವುದು ಬಹದ್ದೂರ್ ಚೇತನ್. ಶೈಲನಾ ನಾಗ್ ಮತ್ತು ಬಿ.ಸುರೇಶ್ ನಿರ್ಮಾಣದ ಚಿತ್ರವಿದು. ದರ್ಶನ್ ಸಿನಿಮಾಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿರುವ ಅಭಿಮಾನಿಗಳಿಗೆ ಇದು ಊಟಕ್ಕೆ ಮೊದಲಿನ ಉಪ್ಪಿನಕಾಯಿ.

 • ಹತ್ ರುಪಾಯ್‍ಗೊಂದು ಯಜಮಾನ..

  one more song from yajamana goes viral

  ಬಾಳೊಂದು ಹರಳೆಣ್ಣೆ ಪೇಟೆ..ಇಲ್ಲಿ ಒಬ್ಬೊಬ್ಬಂದ್ ಒಂದೊಂದು ತೀಟೆ... ಎಂದು ಶುರುವಾಗುತ್ತೆ ಹಾಡು. ಆಗೋಯ್ತು ಮರ್ಯಾದೆ ಸಸ್ತಾ ಮಾಲು.. ಎಂದು ಪಲ್ಲವಿ ಮುಗಿಯುತ್ತೆ. ಹಾಡಿರೋದು ವಿಜಯ್ ಪ್ರಕಾಶ್. ಬರೆದಿರೋದು ಭಟ್ಟರು. ಕುಣಿದಿರೋದು ದರ್ಶನ್ನು. ಈ ಎಲ್ಲರನ್ನೂ ಒಟ್ಟುಗೂಡಿಸಿರೋದು ಡೈರೆಕ್ಟರ್ ಹರಿಕೃಷ್ಣ ಮತ್ತು ನಿರ್ಮಾಪಕಿ ಶೈಲಜಾ ನಾಗ್.

  ಹತ್ ರುಪಾಯ್‍ಗೊಂದ್..ಹತ್ ರುಪಾಯ್‍ಗೊಂದ್..ಹತ್ ರುಪಾಯ್‍ಗೊಂದ್..ಹತ್ ರುಪಾಯ್‍ಗೊಂದ್..

  ಈಗಾಗಲೇ ಯಜಮಾನ ಚಿತ್ರದ ನಂದಿ.. ಶಿವನಂದಿ, ಬಸಣ್ಣಿ.. ಹೀಗೆ 4 ಹಾಡು ಹಿಟ್ ಆಗಿವೆ. 5ನೇ ಹಾಡು.. ಆ ದಾಖಲೆಗಳನ್ನೆಲ್ಲ ಚಿಂದಿ ಉಡಾಯಿಸಿ ಕಿಕ್ಕೇರಿಸುತ್ತಿದೆ. ಇನ್ನೊಂದ್ ದಿನ ಅಷ್ಟೆ.. ಮಾರ್ಚ್ 1ಕ್ಕೆ ಆ ಎಲ್ಲ ಕುತೂಹಲಕ್ಕೂ ಉತ್ತರ ಸಿಕ್ಕಿಬಿಡುತ್ತೆ.

Shivarjun Movie Gallery

KFCC 75Years Celebrations and Logo Launch Gallery