` mayuri - chitraloka.com | Kannada Movie News, Reviews | Image

mayuri

  • Nataraja Service Trailer Is Trending In You Tube

    nataraja service movie image

    The Trailer of Nataraja Service trailer is trending in YouTube and is becoming very popular day by day. Movie is produced by NS RajaKumar and directed by Pavan Wodeyar. 

    'Nataraja Service' stars Sharan, Ravishankar, Mayuri, Ravishankar and others in prominent roles. Anup Seelin has composed the songs of the film. A couple of songs including 'Allah Allah' has already become huge hits.

    Movie premier will be held on 20th October.

     

  • Nataraja Service Trailer Released; Movie Releasing On Oct 21st

    nataraja servce movie image

    The trailer of Sharan starrer 'Nataraja Service' directed by Pavan Wodeyar was released on Monday on the occasion on Ayudha Pooja festival.

    'Nataraja Service' stars Sharan, Ravishankar, Mayuri, Ravishankar and others in prominent roles and is produced by N S Rajakumar. Anup Seelin has composed the songs of the film. A couple of songs including 'Allah Allah' has already become huge hits.

    Earlier, the film was said to release on the 20th of October. However, the film will premier on that day and will be releasing on the 21st of October.

    Related Articles:-

    Nataraja Service Censored Clean - Releasing On 20th

    Nataraja Service To Be Released On October 21st

    Fake Posters Trouble Nataraja Service

    Puneeth Rajakumar Releases The CDs Of Nataraja Service

    Puneeth Sings For Nataraja Service

    Nataraja Service Shooting completes

    Nataraja Service Launched

    Nataraja Service To Be launched on October 22nd

    Mayuri is Sharan's Heroine in Nataraja Service

  • No Hurdles For Nataraja Service Release Says Pavan Wodeyar

    nataraja service movie image

    Director Pavan Wodeyar says the hurdles for the release of his latest directorial venture 'Nataraja Service' has been cleared and the film is all set to release on the 17th of November.

    Earlier, a few Muslim associations objected for the release of the film because of the 'Allah Allah' songs. Some associations expressed fear that the film might shed bad light on their beliefs. However, the team has shown the film to them and the associations have given green signal for the release of the film.

    'Nataraja Service' stars Sharan, Ravishankar, Mayuri, Ravishankar and others in prominent roles and is produced by N S Rajakumar. Anup Seelin has composed the songs of the film

  • Ravichandran to Judge Dancing Star 2

    dancing star 2 image

    Actor-director Ravichandran is all set to make his small screen entry by judging the second season of the popular reality show 'Dancing Star 2'. The shooting for the programme will be starting from today and the programme is scheduled to be aired from 07th of February.

    There was news that Ravichandran will be making his small screen debut for a while and the news has turned to reality finally. Ravichandran along with actress Priyamani and choreographer Mayuri Upadhya (W/O Raghu Deekshith) will be the judges of this show. Akul Balaji who had hosted the first season of the 'Dancing Star' will be hosting this season also.

    There are 12 contestants who are participating in this season.Actor Aniruddh, Master Anand, Mythrea Gowda, Harshika Poonachcha, Chandrika, Rapid Rashmi, singer Sinchan Deekshith, Vijay Surya of 'Agni Sakshi', Rajani of 'Amruthavarshini', Karthik of 'Yashode', Sukrutha of 'Agni Sakshi' and Master Ashwik of 'Punar Vivaha' will be contesting in this season.

  • ಅಂಧ ಸೆಕ್ಸ್ ವರ್ಕರ್.. ವಿಕಲಚೇತನ ಹುಡುಗ ಲವ್ ಸ್ಟೋರಿ : ಕಥೆ ಹುಟ್ಟಿದ್ದೆಲ್ಲಿ..?

    ಅಂಧ ಸೆಕ್ಸ್ ವರ್ಕರ್.. ವಿಕಲಚೇತನ ಹುಡುಗ ಲವ್ ಸ್ಟೋರಿ : ಕಥೆ ಹುಟ್ಟಿದ್ದೆಲ್ಲಿ..?

    ಅವಳಿಗೆ ಕಣ್ಣು ಕಾಣಲ್ಲ. ಮನೆಯ ಬಡತನದಿಂದಾಗಿ ವೇಶ್ಯಾವೃತ್ತಿಗೆ ಇಳಿದಿದ್ದಾಳೆ. ಇವನಿಗೆ ವಿಚಿತ್ರ ಕಾಯಿಲೆ. ದೇಹದ ಕೆಳಭಾಗ ಮತ್ತು ಕೈಗಳು ಮೂವ್ ಮೆಂಟ್ ಆಗಲ್ಲ.

    ಕಾಮ ಪ್ರೇಮ ಎರಡನ್ನೂ ಅರಸಿ ವೇಶ್ಯಾಗೃಹಕ್ಕೆ ಹೋಗುವ ನಾಯಕ.. ಮಗನನ್ನು ಅಲ್ಲಿಗೆ ಕರೆದುಕೊಂಡು ಹೋಗುವ ತಂದೆ. ಅಲ್ಲಿ ಶುರುವಾಗುವ ಅವಳು ಮತ್ತು ಅವನ ಪ್ರೀತಿ.

    ಕಥೆ ಕೇಳಲಿಕ್ಕೇ ವ್ಹಾವ್ ಎನಿಸಿದರೆ.. ಅದರಲ್ಲಿರೋ ವಿಭಿನ್ನತೆಯೇ ಕಾರಣ. ಅಂದಹಾಗೆ ನಿರ್ದೇಶಕ ನಟರಾಜ್ ಅವರಿಗೆ ಈ ಕಥೆ ಹೊಳೆದಿದ್ದು ಹೇಗೆ?

    ನ್ಯಾಷನಲ್ ಜಿಯಾಗ್ರಫಿಯಲ್ಲಿ ಒಂದು ಡಾಕ್ಯುಮೆಂಟರಿ ನೋಡುತ್ತಿದ್ದೆ. ಅದರಲ್ಲಿ ತಂದೆಯೊಬ್ಬ ಮಗನನ್ನು ವೇಶ್ಯಾಗೃಹಕ್ಕೆ ಕರೆದೊಯ್ಯುತ್ತಾನೆ. ಮಗನಿಗೆ ಲೈಂಗಿಕ ಅನುಭವ ಸಿಗಲಿ ಎಂಬ ಕಾರಣಕ್ಕೆ ಹಾಗೆ ಮಾಡುವ ಆ ದೃಶ್ಯ ಬೆರಗು ಹುಟ್ಟಿಸಿತು. ಅದನ್ನು ನಮ್ಮಲ್ಲಿ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಆ ದೃಶ್ಯ ನನ್ನನ್ನು ಕಾಡೋಕೆ ಶುರು ಮಾಡಿತು. ಆಗ ಹುಟ್ಟಿದ ಎಳೆಯೇ ಈ ಕಥೆ. ಒಂದು ಮನಕಲಕುವ ಕಥೆಗೆ ಹಾಸ್ಯದ ಸ್ಪರ್ಶ ಕೊಟ್ಟು ಸಿದ್ಧ ಮಾಡಿದ ಕಥೆಯೇ ವೀಲ್‍ಚೇರ್ ರೋಮಿಯೋ ಎನ್ನುತ್ತಾರೆ ನಟರಾಜ್.

    ರಾಮ್ ಚೇತನ್, ಮಯೂರಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲಾ ನಾಣಿ, ಗಿರೀಶ್.. ಹೀಗೆ ಚಿತ್ರದಲ್ಲಿರೋ ಪ್ರತಿಯೊಬ್ಬರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಗಿಸುತ್ತಲೇ ಕಣ್ಣಲ್ಲಿ ನೀರು ತುಂಬಿಸೋ ನನ್ನ ಚಿತ್ರಕ್ಕಿದೆ ಎನ್ನುವ ಕಾನ್ಫಿಡೆನ್ಸ್ ನಟರಾಜ್ ಅವರದ್ದು. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.

  • ಆಂಟಿಯಾಗೋ ಉತ್ಸಾಹದಲ್ಲಿದ್ದಾರೆ ವಿಸ್ಮಯ ಮಯೂರಿ

    mayuri to become aunt as she is geared up to welcome her sisters child

    ಇದೇ ವಾರ ತೆರೆ ಕಾಣುತ್ತಿರುವ ನನ್ನ ಪ್ರಕಾರ ಚಿತ್ರದಲ್ಲಿ ಮಯೂರಿ ಅವರದ್ದು ವಿಸ್ಮಯ ಅನ್ನೋ ಹೆಸರಿನ ಪಾತ್ರ. ಸಿಗರೇಟು ಸೇದುವ, ಹುಕ್ಕಾ ಹೊಡೆಯುವ ಇನ್ನೋಸೆಂಟ್ ಗರ್ಲ್. ಪಾತ್ರವೇ ಒಂದು ವಿಸ್ಮಯ. `ನಾನು ರಿಯಲ್ ಲೈಫ್‍ನಲ್ಲಿ ಏನಲ್ಲವೋ.. ಅದನ್ನು ಈ ಪಾತ್ರದಲ್ಲಿ ಮಾಡಿದ್ದೇನೆ' ಎನ್ನುವ ಮಯೂರಿ, ನನ್ನ ಪ್ರಕಾರ ರಿಲೀಸ್ ಆದ ನಂತರ ಇನ್ನೊಂದು ಎಕ್ಸೈಟ್‍ಮೆಮಟ್‍ಗೆ ಕಾಯುತ್ತಿದ್ದಾರೆ.

    ಸಿನಿಮಾ ಪ್ರಮೋಷನ್ ಮುಗಿಸಿಕೊಂಡು ಜರ್ಮನಿಗೆ ಹೋಗಬೇಕಿದೆ. ಅಲ್ಲಿ ನನ್ನ ಅಕ್ಕ ತಾಯಿಯಾಗುತ್ತಿದ್ದಾರೆ. ಅವಳಿ ಜವಳಿ ಮಕ್ಕಳ ಹೆರಿಗೆ. ಅಮ್ಮನೂ ಹೋಗಿದ್ದಾರೆ. ಆ ಖುಷಿಯಲ್ಲಿ ನಾನಿರಬೇಕು. ನಾನು ಆಂಟಿಯಾಗುತ್ತಿದ್ದೇನೆ. ಎಕ್ಸೈಟ್‍ಮೆಂಟ್‍ನಲ್ಲಿದ್ದೇನೆ ಎನ್ನುವ ಮಯೂರಿ, ಜರ್ಮನಿಗೆ ಟಿಕೆಟ್ ಬುಕ್ ಮಾಡಿಸಿ ಆಗಿದೆ.

    ಇತ್ತ ಇದೇ ವಾರ ಪ್ರಿಯಾಮಣಿ, ಕಿಶೋರ್ ಪ್ರಧಾನ ಪಾತ್ರದಲಿರುವ ಮಯೂರಿ ಕೇಂದ್ರ ಬಿಂದುವಾಗಿರುವ ನನ್ನ ಪ್ರಕಾರ ರಿಲೀಸ್ ಆಗುತ್ತಿದೆ. ಟ್ರೇಲರ್ ಮೂಲಕವೇ ಗಮನ ಸೆಳೆದಿರುವ ನನ್ನ ಪ್ರಕಾರ ಹಾಲಿವುಡ್ ಸ್ಟೈಲ್‍ನಲ್ಲಿದೆ.

  • ಕಣ್ಣಿಲ್ಲದ ವೇಶ್ಯೆಯನ್ನು ಪ್ರೀತಿಸುವ ಕಾಲಿಲ್ಲದ ಹುಡುಗ : ಇವನೇ ವೀಲ್‍ಚೇರ್ ರೋಮಿಯೋ

    ಕಣ್ಣಿಲ್ಲದ ವೇಶ್ಯೆಯನ್ನು ಪ್ರೀತಿಸುವ ಕಾಲಿಲ್ಲದ ಹುಡುಗ : ಇವನೇ ವೀಲ್‍ಚೇರ್ ರೋಮಿಯೋ

    ಒನ್ ಲೈನ್ ಕಥೆಯೇ ವಿಚಿತ್ರ ಎನಿಸುವ ಸಿನಿಮಾ ಇದು. ಚಿತ್ರದ ನಾಯಕನಿಗೆ ಕಾಲಿಲ್ಲ. ವೀಲ್‍ಚೇರ್`ನಲ್ಲೇ ಓಡಾಡುತ್ತಾನೆ. ನಾಯಕಿಗೆ ಕಣ್ಣಿಲ್ಲ. ಮೈಮಾರಿ ಬದುಕುತ್ತಾಳೆ. ಅವರಿಬ್ಬರ ಮಧ್ಯೆ ಪ್ರೀತಿಯಾದರೆ.. ಇಂತಹದ್ದೊಂದು ವಿಭಿನ್ನ ಕಾನ್ಸೆಪ್ಟ್‍ನ್ನೇ ಸಿನಿಮಾ ಮಾಡಿ ತೆರೆಗೆ ತರುತ್ತಿದ್ದಾರೆ ನಟರಾಜ್. ಹೀರೋ ಪಾತ್ರದಲ್ಲಿ ರಾಮ್ ಚೇತನ್ ನಟಿಸಿದ್ದರೆ, ನಾಯಕಿಯಾಗಿರೋದು ಮಯೂರಿ. ಚಿತ್ರದಲ್ಲಿ ಎಕ್ಸ್‍ಪೋಸ್ ಇಲ್ಲ. ಆದರೆ ಎದೆಗೇ ಚಾಕು ಹಾಕುವಂತ ಡೈಲಾಗುಗಳಿವೆ.

    ಲಂಚ ಕೇಳುವ ಪೊಲೀಸ್‍ಗೆ ನಾಯಕಿ ಕೇಳ್ತಾಳೆ. ನೀವು ಕೈಚಾಚಿ ಬದುಕ್ತೀರಾ.. ನಾವು ಮೈಚಾಚಿ ಬದುಕ್ತೀವಿ. ಅಷ್ಟೆ..

    ಮೈಮಾರುವವಳನ್ನ ಹೆಂಡ್ತಿ ಅಂತಾ ಒಪ್ಪಿಕೊಳ್ತೀರಲ್ಲ.. ಎನ್ನುವ ನಾಯಕಿಗೆ ನಾಯಕ ಕೇಳ್ತಾನೆ. ದೇಶ ಮಾರುವವರನ್ನ ಮಂತ್ರಿ ಅಂತಾ ಒಪ್ಪಿಕೊಳ್ತೀವಿ, ದೇಹ ಮಾರಿಕೊಂಡೋಳನ್ನ ಹೆಂಡ್ತಿ ಅಂತಾ ಒಪ್ಪಿಕೊಳ್ಳೋಕಾಗಲ್ವಾ..?

    ಇಂತಹ ಡೈಲಾಗುಗಳ ಹಿಂದಿರೋದು ಡೈರೆಕ್ಟರ್ ನಟರಾಜ್. ಅವರು ಸಂಭಾಷಣೆಕಾರರಾಗಿದ್ದವರು. ರೋಮಿಯೋ, ಜೂಮ್, ಆರೇಂಜ್ ಚಿತ್ರಗಳಿಗೆ ಡೈಲಾಗ್ ಬರೆದಿದ್ದವರು. ಮಠ ಗುರು ಪ್ರಸಾದ್, ಪಿ.ಸಿ.ಶೇಖರ್, ಪ್ರಶಾಂತ್ ರಾಜ್ ಜೊತೆ ಕೆಲಸ ಮಾಡಿದ್ದವರು. 15 ವರ್ಷದ ಅನುಭವದ ಹಿನ್ನೆಲೆಯಿರೋ ನಟರಾಜ್ ಅವರ ವಿಚಿತ್ರ ಲವ್ ಸ್ಟೋರಿಗೆ ಬಂಡವಾಳ ಹೂಡಿರುವುದು ತಿಮ್ಮಪ್ಪ ವೆಂಕಟಾಚಲಯ್ಯ ಮತ್ತು ಭಾರತಿ ವೆಂಕಟೇಶ್.

    ಜಾಕ್ ಮಾಮನಾಗಿ ರಂಗಾಯಣ ರಘು, ವೇಶ್ಯೆ ಮನೆಗೆ ಮಗನನ್ನು ಕರೆದುಕೊಂಡು ಹೋಗುವ ತಂದೆಯಾಗಿ ಸುಚೇಂದ್ರ ಪ್ರಸಾದ್, ತಬಲಾ ನಾಣಿ.. ಮೊದಲಾದವರು ನಟಿಸಿರೋ ಚಿತ್ರ ಇದೇ ಮೇ 27ರಂದು ರಿಲೀಸ್ ಆಗುತ್ತಿದೆ.

     

  • ಗಿರ್‍ಮಿಟ್‍ಗೆ ಫಿದಾ ಆದ ಕಿಚ್ಚ

    mayuri, sudeep image

    ಬಿಗ್‍ಬಾಸ್‍ನಲ್ಲಿ ಕಿಚ್ಚನ್ ಕಿಚನ್ ವೀಕೆಂಡ್‍ನಲ್ಲಿ ಫೇಮಸ್ ಆಗುತ್ತಿದೆ. ಆದರೆ, ಈ ಕಿಚ್ಚನ್ ಕಿಚನ್‍ನಲ್ಲಿ ಕಿಚ್ಚ ಸುದೀಪ್ ತಮ್ಮ ಗಿರ್‍ಮಿಟ್ ಪ್ರೇಮವನ್ನು ಬಹಿರಂಗಪಡಿಸಿದ್ದಾರೆ. ಅದನ್ನು ಅವರು ಹೇಳಿಕೊಂಡಿರೋದು ಕಿಚ್ಚನ್ ಕಿಚನ್‍ಗೆ ಅತಿಥಿಯಾಗಿ ಬಂದಿದ್ದ ನಟಿ ಮಯೂರಿ ಅವರ ಜೊತೆ.

    ಅತಿಥಿಯಾಗಿದ್ದ ಮಯೂರಿ, ಸುದೀಪ್ ಅವರಿಗೆ ಗಿರ್‍ಮಿಟ್ ಮಾಡಿಕೊಟ್ರು. ಇದನ್ನು ಬಾಯ್ತುಂಬಾ ಸವಿದ ಸುದೀಪ್, ತಾವು ಉ.ಕರ್ನಾಟಕಕ್ಕೆ ಹೋದಾಗ ಗಿರ್‍ಮಿಟ್‍ನ್ನು ಮಿಸ್ ಮಾಡಿಕೊಳ್ಳೋದಿಲ್ಲ ಎನ್ನುವುದನ್ನು ಹೇಳಿಕೊಂಡ್ರು. ಗಿರ್‍ಮಟ್‍ಗೆ ಬೇಕಾಗುವ ಚುರುಮುರಿ ಸೇರಿದಂತೆ, ಎಲ್ಲವನ್ನೂ ಮನೆಯಿಂದಲೇ ತಂದಿದ್ದ ಮಯೂರಿ, ಗಿರ್‍ಮಿಟ್ ಮಾಡೋದು ಹೇಗೆ ಅನ್ನೋದನ್ನು ಸುದೀಪ್ ಅವರಿಗೆ ಹೇಳಿಕೊಟ್ರು.

  • ಡಾ. ಪ್ರಿಯಾಮಣಿ ಸತ್ಯಾನ್ವೇಷಣೆ

    Actress Priyamani Image

    ಪ್ರಿಯಾಮಣಿ ಯಾವಾಗ ಡಾಕ್ಟರ್ ಆದ್ರು.. ಅವರು ಡಿಗ್ರಿ ತೆಗೆದುಕೊಂಡಿರೋದು ಬಿಎ ಸೈಕಾಲಜಿಯಲ್ಲಿ. ಡಾಕ್ಟರ್ ಹೇಗಾದ್ರು ಅನ್ನೋ ಕನ್‍ಫ್ಯೂಸ್ ಬೇಡ. ಅವರು ಡಾಕ್ಟರ್ ಆಗಿರೋದು ನನ್ನ ಪ್ರಕಾರ ಸಿನಿಮಾದಲ್ಲಿ. ಡಾ.ಅಮೃತಾ ಎಂಬ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ ಪ್ರಿಯಾಮಣಿ.

    ಕ್ಲಿಷ್ಟಕರವಾಗಿರೋ ಕೇಸ್‍ವೊಂದಕ್ಕೆ ತಿರುವು ನೀಡೋ ಡಾಕ್ಟರ್ ಪಾತ್ರ ನನ್ನದು. ಚಿತ್ರದಲ್ಲಿ ಒಟ್ಟು 4 ಕಥೆಗಳಿವೆ. ಒಂದೊಂದು ಕಥೆಗೂ ತಿರುವುಗಳಿವೆ. ಹೊಸ ಬಗೆಯ ಕಥೆ, ಮೇಕಿಂಗ್ ಹಾಗೂ ಕಥೆ ಹೇಳುವ ಶೈಲಿ ವಿಭಿನ್ನವಾಗಿದೆ ಎನ್ನುತ್ತಾರೆ ಪ್ರಿಯಾಮಣಿ.

    ಚಿತ್ರಕ್ಕೆ ವಿನಯ್ ಬಾಲಾಜಿ ನಿರ್ದೇಶಕ. ಮೊದಲ ಪ್ರಯತ್ನದಲ್ಲೇ ಹೊಸ ಪ್ರಯೋಗ ಮಾಡಿದ್ದಾರೆ ವಿನಯ್ ಬಾಲಾಜಿ. ಕಿಶೋರ್, ಮಯೂರಿ ನಟಿಸಿರುವ ಥ್ರಿಲ್ಲರ್ ಸಿನಿಮಾ ನನ್ನ ಪ್ರಕಾರ.

  • ಧ್ರುವ ಸರ್ಜಾ ಎದುರು ಮಯೂರಿ ಪೊಗರು

    mayuri joins pogaru team

    ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ ಮತ್ತೊಂದು ತಾರೆ ಸೇರಿಕೊಂಡಿದೆ. ಮಯೂರಿ ಚಿತ್ರದ ತಾರಾಬಳಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಶೂಟಿಂಗ್‍ನಲ್ಲಿ ಮಯೂರಿ ಭಾಗಿಯಾಗಿದ್ದಾರೆ. ಚಿತ್ರದಲ್ಲಿ ಮಯೂರಿಯದ್ದು ಧ್ರುವ ಸರ್ಜಾ ತಂಗಿ ಪಾತ್ರವಂತೆ. ಈಗಾಗಲೇ ಶಿವಣ್ಣನಿಗೆ ತಂಗಿಯಾಗಿ ನಟಿಸಿರುವ ಮಯೂರಿ, ಈಗ ಧ್ರುವ ಸರ್ಜಾಗೂ ತಂಗಿಯಾಗಿದ್ದಾರೆ.

    ಪೊಗರು ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್, ಜಗಪತಿ ಬಾಬು, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದು, ಸ್ಟಾರ್ ಸಿನಿಮಾ ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪೊಗರಿನ ಖದರು ಜೋರಾಗುತ್ತಲೇ ಇದೆ.

  • ನಟಿ ಮಯೂರಿಯ ಕನ್ಯಾದಾನ ಮಾಡಿದ್ದು ಜೆಕೆ ಅಪ್ಪ ಅಮ್ಮ

    actress mayuri's kanyadhaana was performed by jk's parents

    ಜಯಕೀರ್ತಿ ಅಲಿಯಾಸ್ ಜೆಕೆ ಮತ್ತು ಮಯೂರಿ, ಇಬ್ಬರೂ ಸ್ಟಾರ್ ಆಗಿದ್ದು ಅಶ್ವಿನಿ ನಕ್ಷತ್ರ ಧಾರಾವಾಹಿಯಿಂದ. ಆ ಸ್ನೇಹ ಅದೆಷ್ಟು ಗಾಢವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದ್ದು ಇತ್ತೀಚೆಗೆ ನಡೆದ ಮಯೂರಿ ವಿವಾಹ. ಗೆಳೆಯ ಅರುಣ್ ಜೊತೆ ಇತ್ತೀಚೆಗೆ ಮಯೂರಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆ ಮದುವೆಯಲ್ಲಿ ಮಯೂರಿಯ ಕನ್ಯಾದಾನ ಮಾಡಿದ್ದು ಬೇರಾರೋ ಅಲ್ಲ, ಜೆಕೆ ಅವರ ತಂದೆ ತಾಯಿ.

    ಅದಕ್ಕೆ ಕಾರಣವೂ ಇತ್ತು. ಮಯೂರಿಗೆ ತಂದೆ ಇಲ್ಲ. ತಾಯಿಯೊಬ್ಬರೇ. ಹಾಗಾದರೆ ಕನ್ಯಾದಾನ ಶಾಸ್ತ್ರ ಮಾಡುವುದು ಯಾರು ಎಂಬ ಚಿಂತೆ ಶುರುವಾಗಿತ್ತು. ಲಾಕ್ ಡೌನ್ ಇದ್ದ ಕಾರಣ, ಹುಬ್ಬಳ್ಳಿಯಲ್ಲಿದ್ದ ಹತ್ತಿರದ ಬಂಧುಗಳೂ ಅಲ್ಲಿಯೇ ಬಂಧಿಯಾಗಿದ್ದರು. ಆಗ ವಿಷಯ ತಿಳಿದ ಜೆಕೆ ಅವರ ತಂದೆ ತಾಯಿ, ನಾವಿರುವಾಗ ಏಕೆ ಚಿಂತೆ ಮಾಡ್ತೀರಿ. ಅವಳು ನಮಗೂ ಮಗಳೇ ಎಂದರು.

    ರಾತ್ರಿ 11 ಗಂಟೆಗೆ ಬಂದು, ಮುಂಜಾನೆ 3 ಗಂಟೆಗೆ ನಡೆದ ಬ್ರಾಹ್ಮೀ ಮುಹೂರ್ತದಲ್ಲಿ ಖುದ್ದು ನಿಂತು ಮಯೂರಿಯನ್ನು ಕನ್ಯಾದಾನ ಮಾಡಿಕೊಟ್ಟರು.

  • ನನ್ನ ಪಾತ್ರವೇ ಒಂದು ವಿಸ್ಮಯ - ಮಯೂರಿ

    mayuri thrilled about her role in nanna prakara

    ಪ್ರಿಯಾಮಣಿ, ಕಿಶೋರ್ ಕಾಂಬಿನೇಷನ್ ಸಿನಿಮಾ ನನ್ನ ಪ್ರಕಾರದಲ್ಲಿ ಅತ್ಯಂತ ಪ್ರಮುಖ ಪಾತ್ರ ಮಾಡಿರುವುದು ಮಯೂರಿ. ವಿಸ್ಮಯ ಅನ್ನೋ ಆಕೆಯ ಪಾತ್ರದ ಸುತ್ತಲೇ ಇಡೀ ಕಥೆ ಸುತ್ತುತ್ತದೆ. ಕಥೆಯ ಕೇಂದ್ರಬಿಂದುವೇ ವಿಸ್ಮಯ.

    ನನ್ನ ಪ್ರಕಾರ ವಿಸ್ಮಯ ಅನ್ನೋ ಪಾತ್ರವೇ ಒಂದು ಮ್ಯಾಜಿಕ್. ನನಗೆ ಆ ಪಾತ್ರ ಸಿಕ್ಕಿದ್ದು ಕೂಡಾ ಒಂದು ಮ್ಯಾಜಿಕ್. ಮೊದಲು ನಾನು ಈ ಪಾತ್ರ ಮಾಡಬಹುದಾ ಎಂದು ಯೋಚಿಸಿ, ಆಮೇಲೆ ಖುಷಿಯಿಂದ ಮಾಡಿದೆ. ಪಾತ್ರದಲ್ಲಿ ತುಂಬಾ ಹೊಸತನವಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ಮಯೂರಿ.

    ವಿನಯ್ ಬಾಲಾಜಿ ನಿರ್ದೇಶನದ ಚೊಚ್ಚಲ ಸಿನಿಮಾವಿದು. ಮಲ್ಟಿಲೇಯರ್ ಥ್ರಿಲ್ಲರ್ ಸಿನಿಮಾದ ಟ್ರೇಲರ್ ಕುತೂಹಲ ಹುಟ್ಟಿಸಿದೆ. ಆಗಸ್ಟ್ 23ರಂದು ಸಿನಿಮಾ ರಿಲೀಸ್ ಆಗುತ್ತಿದೆ.

     

     

  • ಬ್ಯುಸಿಯಾದರು ಮಯೂರಿ

    mayuri busy again

    ಮಯೂರಿ. ಕಿರುತೆರೆಯ ಮೂಲಕ ಬೆಳ್ಳಿತೆರೆಗೆ ಬಂದ ಚೆಲುವೆ. ಅಭಿನಯಿಸಿದ ಮೊದಲ ಸಿನಿಮಾ ಕೃಷ್ಣಲೀಲಾ. ಆ ಸಿನಿಮಾ ಸೂಪರ್ ಹಿಟ್ ಆದ ಮೇಲೆ ಕೆಲವು ಚಿತ್ರಗಳಲ್ಲಿ ನಟಿಸಿದರೂ ದೊಡ್ಡ ಮಟ್ಟದ ಯಶಸ್ಸು ಸಿಗಲಿಲ್ಲ. ಕಳೆದ ವರ್ಷ ಮಯೂರಿ ಅವರ ಕರಿಯಾ2 ಬಿಟ್ಟರೆ ಬೇರೆ ಸಿನಿಮಾ ಬರಲಿಲ್ಲ. ಆದರೆ, ಈ ವರ್ಷ ಹಾಗಿರೋದಿಲ್ಲ. ಮಯೂರಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ.

    ಶಿವರಾಜ್‍ಕುಮಾರ್ ಅಭಿನಯದ ರುಸ್ತುಂ ಚಿತ್ರದ ಇಬ್ಬರು ನಾಯಕಿಯರಲ್ಲಿ ಮಯೂರಿ ಒಬ್ಬರು. ನನ್ನ ಪ್ರಕಾರ ಸಿನಿಮಾ ಚಿತ್ರೀಕರಣದಲ್ಲಿದ್ದರೆ, 8ಎಂಎಂ ಚಿತ್ರದ ಚಿತ್ರೀಕರಣ ಮುಗಿದು ಎಡಿಟಿಂಗ್ ಟೇಬಲ್ ಮೇಲಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಶೂಟಿಂಗ್ ಕೂಡಾ ಮುಗಿದಿದೆ.

    ಶುರುವಾಗಬೇಕಿರುವುದು ರುಸ್ತುಂ ಹಾಗೂ ಮೌನಂ ಚಿತ್ರಗಳು. ಒಳ್ಳೊಳ್ಳೆಯ ಅವಕಾಶಗಳು ಬರುತ್ತಿವೆ. ಆದರೆ, ಪರ್ಫಾರ್ಮೆನ್ಸ್‍ಗೆ ಅವಕಾಶ ಇರುವ ಪಾತ್ರಗಳನ್ನೇ ಒಪ್ಪಿಕೊಳ್ಳುತ್ತಿದ್ದೇನೆ. ಪಾತ್ರ ಚೆನ್ನಾಗಿರಬೇಕು ಅಷ್ಟೆ ಎಂದಿದ್ದಾರೆ ಮಯೂರಿ.

  • ಬ್ರಾಹ್ಮೀ ಮುಹೂರ್ತದಲ್ಲಿ ಮಯೂರಿ ಮದುವೆ

    actress mayuri ties knot with arun

    ಅಶ್ವಿನಿ ನಕ್ಷತ್ರ ಧಾರಾವಾಹಿಯಿಂದ ಖ್ಯಾತರಾದ, ಕೃಷ್ಣಲೀಲಾ ಚಿತ್ರದಿಂದ ಚಿತ್ರರಂಗದಲ್ಲೂ ಮಿನುಗಿದ ನಟಿ ಮಯೂರಿ ಕೆಟಾರಿ, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಅಂದಹಾಗೆ ಮಯೂರಿ ಅವರನ್ನು ವಿವಾಹವಾದ ಹುಡುಗನ ಹೆಸರು ಅರುಣ್. ಅರುಣ್ ಮತ್ತು ಮಯೂರಿ ಅವರದ್ದು ಸುಮಾರು 10 ವರ್ಷಗಳ ಲವ್ ಸ್ಟೋರಿ. ಮಯೂರಿ ಅವರ ಅಕ್ಕ ಜರ್ಮನಿಯಲ್ಲಿದ್ದು, ಈಗ ಭಾರತಕ್ಕೆ ಬಂದಿದ್ದರು. ಮತ್ತೆ ಜರ್ಮನಿಗೆ ತೆರಳಲಿರುವ ಅಕ್ಕನ ಸಲುವಾಗಿ ಈ ಮದುವೆ ನಡೆದಿದೆ. ಒಂಥರಾ ಇದು ಲವ್ ಕಮ್ ಅರೇಂಜ್ ಮ್ಯಾರೇಜ್. ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ  ಸರಳವಾಗಿ ನಡೆದ  ಮದುವೆಯಲ್ಲಿ ಕುಟುಂಬಸ್ಥರಷ್ಟೇ ಭಾಗವಹಿಸಿದ್ದರು. ಮುಂಜಾನೆ 2.30ರಿಂದ 3 ಗಂಟೆಯ ನಡುವಿನ ಬ್ರಾಹ್ಮೀ ಮುಹೂರ್ತದಲ್ಲಿ ಅರುಣ್, ಮಯೂರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಮಯೂರಿ ಕೃಷ್ಣಲೀಲಾ, ನಟರಾಜ ಸರ್ವಿಸ್, ಕರಿಯ 2, ಇಷ್ಟಕಾಮ್ಯ, ರುಸ್ತುಂ, ನನ್ನ ಪ್ರಕಾರ.. ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ರಿಲೀಸ್ ಆಗೋಕೆ ರೆಡಿಯಿರುವ ಪೊಗರು ಚಿತ್ರದಲ್ಲಿ ಮಯೂರಿ ವಿಭಿನ್ನ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಹೀಗಿರುವಾಗಲೇ ಮಯೂರಿ ದಿಢೀರ್ ಆಗಿ ವಿವಾಹಿತೆಯಾಗಿದ್ದಾರೆ. ಮದುವೆಯ ನಂತರವೂ ನಟನೆ ಮುಂದುವರಿಸೋದಾಗಿ ತಿಳಿಸಿದ್ದಾರೆ. ಮಯೂರಿ-ಅರುಣ್ ವೈವಾಹಿಕ ಜೀವನಕ್ಕೆ ಚಿತ್ರಲೋಕವತಿಯಿಂದ ಶುಭಾಶಯಗಳು.

  • ಮಗನ `ಆ' ಆಸೆ ಪೂರೈಸಲು ಅಪ್ಪನೇ ಹೊರಟಾಗ..

    ಮಗನ `ಆ' ಆಸೆ ಪೂರೈಸಲು ಅಪ್ಪನೇ ಹೊರಟಾಗ..

    ಪ್ರತಿಯೊಬ್ಬರಿಗೂ ಆಸೆಗಳಿರುತ್ತವೆ. ವಯಸ್ಸಿಗೆ ತಕ್ಕಂತೆ ಲೈಂಗಿಕ ಆಸೆಗಳೂ ಮೂಡುತ್ತವೆ. ಅದು ತಪ್ಪೂ ಅಲ್ಲ. ಪ್ರಕೃತಿ ಸಹಜವಾಗಿ ನಡೆಯುವ ಕ್ರಿಯೆಗಳು ಅಪರಾಧವೂ ಅಲ್ಲ. ಆದರೆ, ಅಂತಾದ್ದೊಂದು ಆಸೆ ಈಡೇರಿಸಿಕೊಳ್ಳಲು ಅಸಾಧ್ಯ ಎನ್ನುವ ಸ್ಥಿತಿಯಲ್ಲಿರುವವರು ಏನು ಮಾಡಬೇಕು..? ಅದರಲ್ಲೂ ಅಂತಹ ಸ್ಥಿತಿಯಲ್ಲಿ ಮಗನೇ ಇದ್ದರೆ.. ವ್ಹೀಲ್ ಚೇರ್ ರೋಮಿಯೋ ಚಿತ್ರದ ವಿಭಿನ್ನತೆಯೇ ಅದು.

    ಚಿತ್ರದಲ್ಲಿ ನಾಯಕ ವ್ಹೀಲ್‍ವೇರ್‍ನಲ್ಲೇ ಬದುಕುತ್ತಾನೆ. ಆತನಿಗೆ ಟೆಟ್ರಾಪ್ಲಿಗಿಯಾ ಸಿಂಡ್ರೋಮ್ ಕಾಯಿಲೆ. ಆ ಕಾಯಿಲೆ ಇದ್ದವರಿಗೆ ದೇಹದ ಮೇಲ್ಭಾಗ ಮತ್ತು ಕೆಳಭಾಗದ ಯಾವುದೇ ಅಂಗಗಳನ್ನು ಸ್ವಯಂ ಆಗಿ ಮೂವ್ ಮಾಡೋಕೆ ಆಗಲ್ಲ. ಅಸಹಾಯಕರು. ಅಂತಹ ಕಾಯಿಲೆ ಇರುವವನಿಗೆ ವಧು ಹುಡುಕಲು ಹೊರಡುತ್ತಾನೆ ಅಪ್ಪ. ಮಗನನ್ನು ವೇಶ್ಯಾಗೃಹಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವನಿಗೆ ಕಣ್ಣೇ ಕಾಣದ ವೇಶ್ಯೆಯೊಬ್ಬಳ ಮೇಲೆ ಪ್ರೀತಿಯಾಗುತ್ತದೆ. ಅವರನ್ನು ಒಂದುಗೂಡಿಸಲು ಅಪ್ಪನೇ ಹೊರಡುತ್ತಾನೆ. ಇದನ್ನು ಒಂದಿಷ್ಟು ಕಾಮಿಡಿ ಬ್ಯಾಕ್‍ಗ್ರೌಂಡ್‍ನಲ್ಲಿಯೇ ಹೇಳಿದ್ದೇನೆ. ಕಚಗುಳಿಯಿಡುತ್ತಲೇ ಗಂಭೀರವಾಗುತ್ತಾ ಸಾಗುವ ಕಥೆ ಚಿತ್ರದಲ್ಲಿದೆ ಎನ್ನುತ್ತಾರೆ ಡೈರೆಕ್ಟರ್ ನಟರಾಜ್.

    ಅನುಮಾನವೇ ಇಲ್ಲ. ಮಗನನ್ನು ತಂದೆಯೇ ವೇಶ್ಯಾಗೃಹಕ್ಕೆ ಕರೆದುಕೊಂಡು ಹೋಗುವ ಕಲ್ಪನೆಯೇ ವಿಚಿತ್ರವಾದದ್ದು. ಆದರೆ ಪತ್ನಿಯೇ ಪತಿಯನ್ನು ವೇಶ್ಯಾಗೃಹಕ್ಕೆ ಕರೆದೊಯ್ಯುವ ಕಥೆಯನ್ನು ಪುರಾಣದಲ್ಲಿ ಕೇಳಿರುವ ನಮಗೆ ಇದು ವಿಭಿನ್ನ ಎನಿಸುವುದು ಸಹಜ. ಈ ಕಥೆಯಲ್ಲಿ ಮಗನಾಗಿರೋದು  ರಾಮ್ ಚೇತನ್. ವೇಶ್ಯೆಯ ಪಾತ್ರದಲ್ಲಿ ನಾಯಕನ ಲವ್ ಆಗಿ ನಟಿಸಿರೋದು ಮಯೂರಿ. ಹೀರೋನನ್ನು ವೇಶ್ಯೆಯ ಮನೆಗೆ ಕರೆದೊಯ್ಯುವ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ನಟಿಸಿದ್ದರೆ, ವೇಶ್ಯೆಯರು ಮತ್ತು ಗಿರಾಕಿಗಳ ನಡುವಿನ ಮಾಮಾ ಆಗಿ ನಟಿಸಿರೋದು ರಂಗಾಯಣ ರಘು. ತಬಲಾ ನಾಣಿ ಅವರಿಗೆ ಬೇರೆಯದ್ದೇ ಶೇಡ್ ಇದೆ. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.

    ಥಿಯೇಟರಿಗೆ ಹೋದವರಿಗೆ ಬೇರೆಯದೇ ಅನುಭವ ಸಿಗುವುದು ಪಕ್ಕಾ. ಏಕೆಂದರೆ ಕಥೆಯೇ ಅಂಥಾದ್ದು. ತಿಮ್ಮಪ್ಪ ವೆಂಕಟಾಚಲ

  • ಮತ್ತೆ ಕಿರುತೆರೆಯತ್ತ ಕೃಷ್ಣಲೀಲಾ ಮಯೂರಿ

    mayuri image

    ಕೃಷ್ಣಲೀಲಾ, ಇಷ್ಟಕಾಮ್ಯ, ನಟರಾಜ ಸರ್ವಿಸ್ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದ್ದ ಮಯೂರಿ, ಈಗ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಉದಯ ಟಿವಿ ಜೋಜೋ ಲಾಲಿ ಧಾರಾವಾಹಿಯಲ್ಲಿ ಮಯೂರಿ ನಟಿಸುತ್ತಿದ್ದಾರೆ.

    ಆದರೆ, ಇದು ಮುಖ್ಯ ಪಾತ್ರವೇನಲ್ಲ. ಅತಿಥಿ ಪಾತ್ರವಷ್ಟೆ. ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಮನೆ ಮಾತಾಗಿದ್ದ ಮಯೂರಿ, ಅದೇ ಫೇಮ್​ನಿಂದ ಬೆಳ್ಳಿತೆರೆಗೂ ಎಂಟ್ರಿ ಕೊಟ್ಟಿದ್ದರು. ಕೃಷ್ಣಲೀಲಾ ಸಿನಿಮಾ ಹಿಟ್ ಆಗುವುದರೊಂದಿಗೆ ಲೀಲಾ ಎಂದೇ ಖ್ಯಾತರಾಗಿದ್ದರು.

    ಅಶ್ವಿನಿ ನಕ್ಷತ್ರ ಶೂಟಿಂಗ್ ನಡೆದಿದ್ದ ಮನೆಯಲ್ಲಿಯೇ ಜೋ ಜೋ ಲಾಲಿ ಧಾರಾವಾಹಿಯ ಶೂಟಿಂಗ್ ಕೂಡಾ ನಡೆದಿದೆ. ಬಾಡಿಗೆ ತಾಯಿ ಕಾನ್ಸೆಪ್ಟ್ ಇರುವ ಧಾರಾವಾಹಿಯಲ್ಲಿ ಮಯೂರಿ ಲೀಲಾ ಎಂಬ ಹೆಸರಿನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

    ಸಿನಿಮಾಗಿಂತ ಧಾರಾವಾಹಿಯಲ್ಲಿ ನಟಿಸುವುದು ಮನೆಯ ವಾತಾವರಣದ ಅನುಭವ ಕೊಡುತ್ತೆ. ಕಂಫರ್ಟಾಗಿರುತ್ತೆ  ಎಂದು ಹೇಳಿಕೊಂಡಿದ್ದಾರೆ ನಟಿ ಮಯೂರಿ.

  • ವಿಡಿಯೋ ಆಲ್ಬಂನಲ್ಲಿ ಲೀಲಾ ಮಯೂರಿ

    mayuri in hindi video album

    ಕೃಷ್ಣಲೀಲಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಮಯೂರಿ, ಇಷ್ಟಕಾಮ್ಯ ನಂತರ ತೆರೆ ಮೇಲೆ ಕಾಣಿಸಿಲ್ಲ. ಕರಿಯ-2, ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರಗಳಲ್ಲಿ ನಟಿಸಿದ್ದರೂ, ಅವುಗಳು ಇನ್ನೂ ರಿಲೀಸ್ ಆಗಿಲ್ಲ. ಈ ಗ್ಯಾಪ್‍ನಲ್ಲೇ ಮಯೂರಿ, ಗರ್ಲ್ ಅನ್ನೋ ವಿಡಿಯೋ ಆಲ್ಬಂನಲ್ಲಿ ನಟಿಸಿ ಬಂದಿದ್ದಾರೆ. ಮುಂಬೈ ಮೂಲಕ ವಿಶಾಲ್, ಅಭಿಷೇಕ್ ಎಂಬುವರು ಮಾಡಿರುವ ಹಿಂದಿ ಆಲ್ಬಂನಲ್ಲಿ ನಟಿಸಿದ್ದಾರೆ ಮಯೂರಿ.

    ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಬೇಕು ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಲಾಗಿರುವ ವಿಡಿಯೋ ಆಲ್ಬಂನ್ನು, ಬ್ಯಾಂಕಾಕ್‍ನಲ್ಲಿ ಶೂಟಿಂಗ್ ಮಾಡಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲೂ ಬರುತ್ತಿರುವ ವಿಡಿಯೋ ಆಲ್ಬಂನ ಟ್ರೇಲರ್ ಇದೇ ವಾರ ರಿಲೀಸ್ ಆಗುತ್ತಿದೆ.

  • ಸಂತ್ರಸ್ತೆಯ ಪರವೇ ನಿಂತ ರಘು ದೀಕ್ಷಿತ್ ಪತ್ನಿ ಮಯೂರಿ..!

    raghu dixit's wife mayuri

    me ಣoo ಬಿರುಗಾಳಿಯಲ್ಲಿ ಬೆತ್ತಲಾದ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಈ ಕುರಿತು ರಘು ದೀಕ್ಷಿತ್ ಕ್ಷಮೆ ಕೇಳಿದ್ದಾರೆ. ಸುದ್ದಿ ಹೊರಬಿದ್ದ ನಂತರ ರಘು ದೀಕ್ಷಿತ್ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಈ ಹಿಂದೆ ಜಮ್ಮು ಕಾಶ್ಮೀರದ  ಅತ್ಯಾಚಾರ ಪ್ರಕರಣವೊಂದರಲ್ಲಿ ಪ್ರಧಾನಿ ಮೋದಿಯವರೇ.. ಈಗಲಾದರೂ ಮಾತನಾಡಿ ಎಂದು ಅಭಿಯಾನ ನಡೆಸಿದ್ದವರಲ್ಲಿ ರಘು ದೀಕ್ಷಿತ್ ಕೂಡಾ ಇದ್ದರು. ಅ ಪ್ರಕರಣವನ್ನು ನೆನಪಿಸಿ ರಘು ದೀಕ್ಷಿತ್‍ರನ್ನು ಟೀಕಿಸಲಾಗುತ್ತಿದೆ. ಹೀಗಿರುವಾಗಲೇ, ರಘು ದೀಕ್ಷಿತ್‍ರಿಂದ ಕಿರುಕುಳಕ್ಕೊಳಗಾದೆ ಎಂದು ಹೇಳಿದ್ದ ಸಂತ್ರಸ್ತೆಯ ಪರ ರಘು ದೀಕ್ಷಿತ್ ಪತ್ನಿ ಮಯೂರಿ ಉಪಾಧ್ಯ ಅವರೇ ನಿಂತಿದ್ದಾರೆ.

    ನಾನು ಒಬ್ಬ ಪತ್ನಿಯಾಗುವ ಮುಂಚೆ ಹೆಣ್ಣು. ಹೆಣ್ಣಿನ ಗೌರವ, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಅದನ್ನು ಪ್ರತಿಭಟಿಸುವುದು ನನ್ನ ಕರ್ತವ್ಯ. ಆ ಯುವತಿ ಹಾಗೂ ನಿರ್ದಿಷ್ಟ ಘಟನೆಯ ಬಗ್ಗೆ ನನಗೆ ಗೊತ್ತಿಲ್ಲ. ಇಂತಹ ಪ್ರಕರಣಗಳಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಶಿಕ್ಷೆಯಾಗಬೇಕು ಎಂದಿದ್ದಾರೆ ಮಯೂರಿ.

    ಈ ಪ್ರಕರಣದಲ್ಲಿ ನಾವು ಡೈವೋರ್ಸ್ ತೆಗೆದುಕೊಳ್ಳುತ್ತಿರುವುದನ್ನು ತರುವ ಅಗತ್ಯವಿಲ್ಲ ಎಂದು ಕೂಡಾ ಹೇಳಿದ್ದಾರೆ. ಆತ್ಮಗೌರವ, ಆತ್ಮಾಭಿಮಾನ ಸೆಲಬ್ರಟಿಗಳಿಗಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನಿಗೂ ತಮ್ಮದೇ ಆದ ಆತ್ಮಗೌರವ, ಆತ್ಮಾಭಿಮಾನ ಇದ್ದೇ ಇರುತ್ತೆ. ಸತ್ಯ ಸಂಗತಿ ಹೊರಬರಲಿ ಎಂದಿದ್ದಾರೆ ಮಯೂರಿ ಉಪಾಧ್ಯಾ.

    ಮಯೂರಿ ಉಪಾಧ್ಯ ಕೂಡಾ ಸೆಲೆಬ್ರಿಟಿಯೇ. ಅಂತಾರಾಷ್ಟ್ರೀಯ ಖ್ಯಾತಿ ನೃತ್ಯ ಕಲಾವಿದೆ. ವಿಶ್ವಸಂಸ್ಥೆಯಲ್ಲೂ ಕೂಡಾ ಹಲವು ಬಾರಿ ನೃತ್ಯ ಪ್ರದರ್ಶನ ನೀಡಿರುವ ಖ್ಯಾತಿ ಅವರದ್ದು. ಕಿರುತೆರೆ ಶೋಗಳಲ್ಲಿ ಜಡ್ಜ್ ಆಗಿರುವ ಮಯೂರಿ, 50ಕ್ಕೂ ಹೆಚ್ಚು ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.

  • ಹಲವರು ಹೆದರಿ ನೋ ಎಂದ ಪಾತ್ರಕ್ಕೆ ಮಯೂರಿ ಎಸ್ ಎಂದಿದ್ದು ಏಕೆ?

    ಹಲವರು ಹೆದರಿ ನೋ ಎಂದ ಪಾತ್ರಕ್ಕೆ ಮಯೂರಿ ಎಸ್ ಎಂದಿದ್ದು ಏಕೆ?

    ಮಯೂರಿ ಮೊದಲಿನಿಂದಲೂ ಚಾಲೆಂಜಿಂಗ್ ಪಾತ್ರಗಳನ್ನೇ ಇಷ್ಟಪಟ್ಟವರು. ನಟರಾಜ ಸರ್ವಿಸ್ ಚಿತ್ರದ ಲತ್ತೆ ಪಾತ್ರವೇ ಇರಲಿ, ಕೃಷ್ಣಲೀಲಾದ ಲೀಲಾ ಪಾತ್ರವೇ ಇರಲಿ.. ಎಲ್ಲವೂ ಸವಾಲಿನ ಪಾತ್ರಗಳೇ. ಅಂತಹುದೇ ಪಾತ್ರ ವೀಲ್‍ಚೇರ್ ರೋಮಿಯೋ ಚಿತ್ರದ ನಾಯಕಿಯ ಪಾತ್ರ.

    ಚಿತ್ರದಲ್ಲಿ ನಾಯಕಿಗೆ ಕಣ್ಣು ಕಾಣಲ್ಲ. ವೃತ್ತಿಯಲ್ಲಿ ವೇಶ್ಯೆ. ಪಾತ್ರದ ಮೊದಲ ಸಾಲು ಕೇಳಿ ಥ್ರಿಲ್ಲಾಗುತ್ತಿದ್ದ ಹಲವು ನಾಯಕಿಯರು, ವೇಶ್ಯೆ ಎಂದ ತಕ್ಷಣ ನೋ ಎನ್ನುತ್ತಿದ್ದರಂತೆ. ಆದರೆ ಪಾತ್ರಕ್ಕೆ ನಿರ್ದೇಶಕರು ನೀಡಿರುವ ಘನತೆ ಪಾತ್ರವನ್ನು ಒಪ್ಪುವಂತೆ ಮಾಡಿತು ಎನ್ನುತ್ತಾರೆ ಮಯೂರಿ. ಚಿತ್ರದಲ್ಲಿ ನಾಯಕಿಗೆ ಎಕ್ಸ್‍ಪೋಸ್ ಇಲ್ಲ. ಬೀಡುಬೀಸು ಸಂಭಾಷಣೆಗಳಲ್ಲಿ ವಿಭಿನ್ನ ವ್ಯಕ್ತಿತ್ವದ ಅನಾವರಣವಾಗುತ್ತಾ ಹೋಗುತ್ತದೆ. ಹೀಗಾಗಿಯೇ ಪಾತ್ರಕ್ಕೆ ಒಪ್ಪಿಕೊಂಡೆ ಎನ್ನುತ್ತಾರೆ ಮಯೂರಿ.

    ಚಿತ್ರದ ಹೀರೋ ರಾಮ್ ಚೇತನ್. ವಿಕಲಚೇತನ. ಕಾಲಿಲ್ಲದೆ ವೀಲ್‍ಚೇರ್‍ನಲ್ಲೇ ಓಡಾಡುವ ನಾಯಕ ವೇಶ್ಯಾಗೃಹಕ್ಕೆ ಹೋಗುವ ಆಸೆ ತೋರಿಸುತ್ತಾನೆ. ಕರೆದುಕೊಂಡು ಹೋಗೋದು ಖುದ್ದು ಆತನ ತಂದೆ ಸುಚೇಂದ್ರ ಪ್ರಸಾದ್. ಅಲ್ಲಿ ಅವನಿಗೆ ವೇಶ್ಯೆ ಮಯೂರಿಯ ಮೇಲೆ ಪ್ರೀತಿಯಾಗುತ್ತೆ. ನಂತರ ನಡೆಯೋ ಕಥೆಯೇ ವೀಲ್‍ಚೇರ್ ರೋಮಿಯೋ. ನಿರ್ದೇಶಕ ನಟರಾಜ್ ಚಿತ್ರ ಕಥೆಯನ್ನೂ ಅಷ್ಟೇ ಚೆಂದವಾಗಿ ಹೇಳಿದ್ದಾರೆ. ರಂಗಾಯಣ ರಘು ವಿಭಿನ್ನ ಪಾತ್ರದಲ್ಲಿ ಆವರಿಸಿಕೊಂಡಿದ್ದಾರೆ. ಚಿತ್ರ ಇದೇ ತಿಂಗಳು 27ನೇ ತಾರೀಕು ರಿಲೀಸ್ ಆಗುತ್ತಿದೆ.