` priyamani - chitraloka.com | Kannada Movie News, Reviews | Image

priyamani

 • ಮತ್ತೊಂದು ಚಿನ್ನಮ್ಮ ಚಾಲೆಂಜ್ ಸ್ವೀಕರಿಸಿದ ಪ್ರಿಯಾಮಣಿ

  priyamani plays the role of chinama in thalaivi

  ನಟಿ ಪ್ರಿಯಾಮಣಿ ಮತ್ತೊಮ್ಮೆ ಚಾಲೆಂಜ್ ಸ್ವೀಕರಿಸಿದ್ದಾರೆ. ಒಬ್ಬ ನಟಿಯಾಗಿ ಕೆರಿಯರ್‌ಗೇ ರಿಸ್ಕಿ ಎನ್ನಿಸುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡ, ಗೆದ್ದ ಪ್ರಿಯಾಮಣಿ ಈಗ ಮತ್ತೊಮ್ಮೆ ಅಂಥದ್ದೇ ಚಾಲೆಂಜ್ ಸ್ವೀಕರಿಸಿದ್ದಾರೆ. ಈಗ ಅವರು ಒಪ್ಪಿಕೊಂಡಿರುವುದು ಶಶಿಕಲಾ ಪಾತ್ರ.

  ಕಂಗನಾ ರಣಾವತ್ ಜಯಲಲಿತಾ ಪಾತ್ರದಲ್ಲಿ ನಟಿಸುತ್ತಿರುವ ತಲೈವಿ ಚಿತ್ರದಲ್ಲಿ ಪ್ರಿಯಾಮಣಿ ಶಶಿಕಲಾ ಪಾತ್ರ ಮಾಡಲಿದ್ದಾರೆ. ಶಶಿಕಲಾ, ಜಯಲಲಿತಾ ಅವರ ಆಪ್ತ ಗೆಳತಿ. ಜಯಲಲಿತಾ ಸಮಾಧಿ ಎದುರು ಶಪಥ ಮಾಡಿದ್ದ ದೃಶ್ಯ ನೆನಪಿದೆಯಲ್ಲಾ.. ಅದೇ ಶಶಿಕಲಾ. ಪಾತ್ರ ಎಂಥದ್ದೇ ಆಗಿರಲಿ, ಜೀವ ತುಂಬುವ ಪ್ರಿಯಾಮಣಿ ಶಶಿಕಲಾ ಪಾತ್ರಕ್ಕೂ ಪರಕಾಯ ಪ್ರವೇಶ ಮಾಡುವುದು ದಿಟ.

 • ಮದುವೆ ಆದ್ಮೇಲೆ ಪ್ರಿಯಾಮಣಿ ಮೂರು ಸಿನಿಮಾ

  priyamani busy after marriage

  ಮದುವೆ ಆದ ಮೇಲೆ ಪ್ರಿಯಾಮಣಿ `ನನ್ನ ಪ್ರಕಾರ' ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿಯೇನೋ ಗೊತ್ತಾಗಿತ್ತು. ಆದರೆ, ಅವರು ಒಪ್ಪಿಕೊಂಡಿರುವ ಚಿತ್ರ ಅದೊಂದೇ ಅಲ್ಲ, ಇನ್ನೂ 2 ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.  ಮಲಯಾಳಂನಲ್ಲಿ `ಆಶಿಕ್ ವನ್ನಾ ದಿವಸಂ' ಅನ್ನೋ ಚಿತ್ರವನ್ನು ಒಪ್ಪಿಕೊಂಡು ಚಿತ್ರೀಕರಣವನ್ನೂ ಮುಗಿಸಿಕೊಟ್ಟಿದ್ದಾರೆ ಪ್ರಿಯಾಮಣಿ. ಇನ್ನು ಹಿಂದಿಯಲ್ಲಿ ಒಪ್ಪಿಕೊಂಡಿರುವ ಸಿನಿಮಾ ಕೂಡಾ ಮುಗಿಯುವ ಹಂತಕ್ಕೆ ಬಂದಿದೆ.

  ಮದುವೆಯಾಗಿ ಕೇವಲ ಮೂರೇ ಮೂರು ದಿನಕ್ಕೆ ಒಪ್ಪಿಕೊಂಡ ಸಿನಿಮಾ ನನ್ನ ಪ್ರಕಾರ. ಚಿತ್ರ ಕ್ರೈಂ, ಥ್ರಿಲ್ಲರ್. ಕಿಶೋರ್ ಜೊತೆ ನಟಿಸುವ ಅವಕಾಶ. ಹೀಗಾಗಿ ಸಿನಿಮಾ ಒಪ್ಪಿಕೊಂಡೆ ಎಂದಿದ್ದಾರೆ ಪ್ರಿಯಾ.

  ಸೆಲಬ್ರಿಟಿಯಾಗಿದ್ದುಕೊಂಡೂ ಮದುವೆಯ ಪ್ರಚಾರದಿಂದ ದೂರ ಉಳಿದದ್ದು ಏಕೆ ಎಂಬ ಪ್ರಶ್ನೆಗೆ ಇಷ್ಟವಾಗುವಂತಾ ಉತ್ತರವನ್ನೇ ಕೊಟ್ಟಿದ್ದಾರೆ. ಪ್ರಿಯಾಮಣಿ ಅವರದ್ದು ಅಂತರ್‍ಧರ್ಮೀಯ ವಿವಾಹ. ಯಾವುದೇ ಸಂಪ್ರದಾಯ, ಸಂಸ್ಕøತಿಗಳಿಗೆ ಧಕ್ಕೆ ಆಗಬಾರದು. ಮೌಲ್ಯಗಳಿಗೆ ಧಕ್ಕೆಯಾಗಬಾರದು. ಈ ಕಾರಣಕ್ಕೇ ಮದುವೆಯನ್ನು ಸರಳವಾಗಿ ಮಾಡಿಕೊಂಡೆವು. ಪ್ರಚಾರ ಬೇಡ ಎಂದು ನಿರ್ಧರಿಸಿಯೇ ಸರಳವಾಗಿ ಮದುವೆಯಾದೆವು. ಎಲ್ಲಕ್ಕಿಂತ ಮಿಗಿಲಾಗಿ ಮದುವೆ ಅತ್ಯಂತ ಖಾಸಗಿ ವಿಷಯ ಎಂದಿದ್ದಾರೆ ಪ್ರಿಯಾಮಣಿ.

 • ರಾಜಕಾರಣಿ ರಮ್ಯಾ ಪಾತ್ರದಲ್ಲಿ ಪ್ರಿಯಾಮಣಿ

  priyamani to act as politician ramya

  ಪ್ರಿಯಾಮಣಿ ರಾಜಕಾರಣಿಯಾಗುತ್ತಿದ್ದಾರೆ. ರಾಜಕೀಯ ಪ್ರವೇಶಿಸುತ್ತಿದ್ದಾರೆ. ನಾವು ಹೇಳ್ತಿರೋದು ಧ್ವಜ ಚಿತ್ರದ ಕಥೆ. ಈ ಚಿತ್ರದಲ್ಲಿ ಪ್ರಿಯಾಮಣಿ ರಾಜಕಾರಣಿ. ಅಂದಹಾಗೆ ಸಿನಿಮಾದಲ್ಲಿ ಪ್ರಿಯಾಮಣಿ ಪಾತ್ರದ ಹೆಸರು ರಮ್ಯಾ.

  ಅಶೋಕ್ ಕಶ್ಯಪ್ ನಿರ್ದೇಶನದ ಪೊಲಿಟಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಪ್ರಿಯಾಮಣಿ ನಾಯಕಿ. ಅದು ರಾಜಕಾರಣಿಯ ಪಾತ್ರ. ಆ ಪಾತ್ರದ ಹೆಸರು ರಮ್ಯಾ. ರಿಯಲ್ ರಾಜಕಾರಣಿ ರಮ್ಯಾಗೂ, ಈ ಪಾತ್ರಕ್ಕೂ ಏನಾದರೂ ಲಿಂಕ್ ಇದೆಯಾ..? ಸದ್ಯಕ್ಕೆ ಗೊತ್ತಿಲ್ಲ.

  ಚಿತ್ರಕ್ಕೆ ಹೊಸ ಪ್ರತಿಭೆ ರವಿಗೌಡ ನಾಯಕ. ಟಿ.ಎನ್.ಸೀತಾರಾಂ, ಸುಂದರ್‍ರಾಜ್ ಮೊದಲಾದ ಹಿರಿಯ ಕಲಾವಿದರು ಚಿತ್ರದಲ್ಲಿದ್ದಾರೆ. ಅಂದಹಾಗೆ ಇದೇ ಚಿತ್ರ ತಮಿಳಿನಲ್ಲಿಯೂ ಬರುತ್ತಿದೆ. ತಮಿಳಿನಲ್ಲಿ ಧನುಷ್ ಹೀರೋ. ಪ್ರಿಯಾಮಣಿ ಪಾತ್ರವನ್ನ ತಮಿಳಿನಲ್ಲಿ ತ್ರಿಷಾ ಮಾಡುತ್ತಿದ್ದಾರೆ.

 • ರಾಜಕೀಯದಲ್ಲಿ ಸ್ನೇಹ, ದ್ವೇಷ ಶಾಶ್ವತವಲ್ಲ.. ಪ್ರೀತಿ..?

  political love hate story is dhwaja

  ಧ್ವಜ. ಈಗ ಥಿಯೇಟರುಗಳಲ್ಲಿರುವ ಚಿತ್ರದಲ್ಲಿರುವುದು ಪೊಲಿಟಿಕಲ್ ಡ್ರಾಮಾ. ಎಲೆಕ್ಷನ್ ಟೈಂನಲ್ಲೇ ಬಂದಿರೋ ಈ ಸಿನಿಮಾದಲ್ಲಿ ಹೀರೋ ಮತ್ತು ಹೀರೋಯಿನ್.. ಇಬ್ಬರೂ ರಾಜಕಾರಣಿಗಳೇ. ಹೀರೋ ಒಂದು ಪಾರ್ಟಿಯಲ್ಲಿದ್ದರೆ, ಹೀರೋಯಿನ್ ಇನ್ನೊಂದು ಪಾರ್ಟಿಯಲ್ಲಿ. ಆ ಎರಡೂ ಪಾರ್ಟಿಗಳು ಎದುರಾಳಿಗಳು ಅನ್ನೋದನ್ನ ಬೇರೆ ಹೇಳಬೇಕಿಲ್ಲ. ಆದರೆ, ಅವರಿಬ್ಬರಿಗೂ ಪ್ರೀತಿಯಾಗುತ್ತೆ. 

  ರಾಜಕೀಯದಲ್ಲಿ ಸ್ನೇಹ, ದ್ವೇಷ ಎರಡೂ ಶಾಶ್ವತವಲ್ಲ ಅನ್ನೋದು ಗೊತ್ತಿರೋ ವಿಷಯ. ರಾಜಕೀಯವಾಗಿ ಹಾವು ಮುಂಗುಸಿಗಳಂತೆ ಕಚ್ಚಾಡಿಕೊಳ್ಳುವ ನಾಯಕರ ಮಧ್ಯೆ, ಸಂಬಂಧಗಳು ಬೆಳೆದಿರುವುದನ್ನೂ ರಾಜ್ಯದ ಜನ ನೋಡಿದ್ದಾರೆ. ಆದರೆ, ಪ್ರೀತಿ ಹುಟ್ಟಿರೋದನ್ನು ನೋಡಿಲ್ಲ. ಅದನ್ನು ನೋಡಬೇಕೆಂದರೆ, ನೀವೊಂದ್ಸಲ ಧ್ವಜ ನೋಡಬೇಕು.

  ಹೀರೋ ಆಗಿ ರವಿ ಗೌಡ ನಟಿಸಿದ್ದರೆ, ಹೀರೋಯಿನ್ ರಮ್ಯಾ ಪಾತ್ರದಲ್ಲಿರೋದು ಪ್ರಿಯಾಮಣಿ. ಸುಧಾ ಬಸವೇಗೌಡ ನಿರ್ಮಾಣದ ಚಿತ್ರ, ತಮಿಳಿನ ಕೋಡಿ ಚಿತ್ರದ ರೀಮೇಕ್.

   

 • ರಾಜಮೌಳಿ ಜೊತೆ ಪ್ರಿಯಾಮಣಿ - 12-12-12ಕ್ಕೆ ಕಾಯಿರಿ..!

  will priyamani act in rajamoul's movie

  ಪ್ರಿಯಾಮಣಿ ಮತ್ತೊಮ್ಮೆ ರಾಜಮೌಳಿ ಚಿತ್ರದಲ್ಲಿ ನಟಿಸುತ್ತಿದ್ದಾರಾ..? ಇಂಥಾದ್ದೊಂದು ಸುದ್ದಿಗೆ ಪ್ರಿಯಾಮಣಿ ಹೇಳಿರೋದಿಷ್ಟು. ``ರಾಜಮೌಳಿ ಚಿತ್ರದಲ್ಲಿ ನಾನಿರುತ್ತೇನೋ ಇಲ್ವೋ ಗೊತ್ತಿಲ್ಲ. ಅವರು ಅವಕಾಶ ಕೊಟ್ಟರೆ ನಾನು ರೆಡಿ. ಸದ್ಯಕ್ಕಂತೂ ಯಾವುದೂ ಫೈನಲ್ ಆಗಿಲ್ಲ''. 

  ಪ್ರಿಯಾಮಣಿ ಈ ಹಿಂದೆ ರಾಜಮೌಳಿಯವರ ಯಮದೊಂಗ ಚಿತ್ರದಲ್ಲಿ ನಟಿಸಿದ್ದರು. ಜ್ಯೂ.ಎನ್‍ಟಿಆರ್‍ಗೆ ನಾಯಕಿಯಾಗಿದ್ದರು. ಮತ್ತೊಮ್ಮೆ ಅವಕಾಶ ಸಿಕ್ಕರೆ ಬಿಡೋದಿಲ್ಲ ಎಂದಿದ್ದಾರೆ ಪ್ರಿಯಾಮಣಿ.

  ಇದು ಕನ್‍ಫರ್ಮ್ ಆಗೋದು ಇದೇ ಡಿಸೆಂಬರ್ 12ಕ್ಕೆ. ಆ ದಿನ ಮಧ್ಯಾಹ್ನ 12 ಗಂಟೆಗೆ ಆರ್‍ಆರ್‍ಆರ್ ಚಿತ್ರದ ಮಾಹಿತಿಯನ್ನೆಲ್ಲ ಹೇಳಲಿದ್ದಾರಂತೆ ರಾಜಮೌಳಿ. ವೇಯ್ಟಿಂಗ್.

 • ಸೈಲೆಂಟ್ ಸಕ್ಸಸ್ ನನ್ನ ಪ್ರಕಾರ - 25ನೇ ದಿನದ ಸೆಲಬ್ರೇಷನ್

  nanna prakara completes 25 days

  ನನ್ನ ಪ್ರಕಾರ ಸದ್ದು ಗದ್ದಲವೇ ಇಲ್ಲದೆ ಪ್ರೇಕ್ಷಕರ ಮನಗೆದ್ದು ಯಶಸ್ಸಿನ ಜಯಭೇರಿ ಮೊಳಗಿಸಿದೆ. ಸದ್ದು ಗದ್ದಲವಿಲ್ಲದೆ ಎಂದಿದ್ದು ಏಕೆಂದರೆ, ಈ ಚಿತ್ರಕ್ಕೆ ಎದುರಾಗಿ ಬಂದಿದ್ದ ಚಿತ್ರ ಪ್ರಭಾಸ್ ಅಭಿನಯದ ಸಾಹೋ. ಅದು ಘರ್ಜಿಸಿಕೊಂಡೇ ಬಂದಿತ್ತು. ಆ ಚಿತ್ರದ ಎದುರು ಬಂದಿದ್ದ ನನ್ನ ಪ್ರಕಾರ ಕೇವಲ ಕಥೆ, ಚಿತ್ರಕಥೆ, ನಿರೂಪಣೆ, ವಿಭಿನ್ನತೆಯಿಂದಾಗಿಯೇ ಪ್ರೇಕ್ಷಕರ ಮನ ಗೆದ್ದು ಯಶಸ್ವೀ 25 ದಿನ ಪೂರೈಸಿದೆ.

  ವಿನಯ್ ಬಾಲಾಜಿ ನಿರ್ದೇಶನದ ನನ್ನ ಪ್ರಕಾರ ಚಿತ್ರದಲ್ಲಿ ಪ್ರಿಯಾಮಣಿ, ಕಿಶೋರ್, ಮಯೂರಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ನನ್ನ ಪ್ರಕಾರ ಮುಂದಿನ ವಾರ ವಿದೇಶಗಳಲ್ಲೂ ರಿಲೀಸ್ ಆಗುತ್ತಿದೆ. ಆಸ್ಟ್ರೇಲಿಯ, ಜರ್ಮನಿ, ದುಬೈನಲ್ಲಿ ತೆರೆ ಕಾಣುತ್ತಿದೆ. ಎಸ್.ಗುರುರಾಜ್ ನಿರ್ಮಾಣದ ಚಿತ್ರವನ್ನು ತುಳು, ತೆಲುಗು ಹಾಗೂ ಹಿಂದಿಗೂ ಡಬ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

 • ಹೃತಿಕ್ ರೋಷನ್ ದಾರಿಯಲ್ಲಿ ಧ್ವಜ ಹೀರೋ..!

  dhwaja hero ravi

  ಡಬಲ್ ರೋಲ್, ತ್ರಿಬಲ್ ರೋಲ್‍ನಲ್ಲಿ ನಟಿಸಬೇಕು ಅನ್ನೋದು ಪ್ರತಿಯೊಬ್ಬ ಕಲಾವಿದರ ಕನಸು. ಕನ್ನಡದಲ್ಲಿ ಅತೀ ಹೆಚ್ಚು ದ್ವಿಪಾತ್ರ, ತ್ರಿಪಾತ್ರಗಳಲ್ಲಿ ನಟಿಸಿರುವ ಹಿರಿಮೆ ವಿಷ್ಣುವರ್ಧನ್ ಅವರದ್ದು. ಡಾ.ರಾಜ್, ಅಂಬರೀಷ್, ರವಿಚಂದ್ರನ್, ಶಿವರಾಜ್‍ಕುಮಾರ್, ದರ್ಶನ್, ಸುದೀಪ್ ಮೊದಲಾದವರೆಲ್ಲ ಡಬಲ್ ತ್ರಿಬಲ್ ರೋಲ್‍ಗಳಲ್ಲಿ ಮಿಂಚಿದವರೇ. ಆದರೆ, ಇವರ್ಯಾರಿಗೂ ಮೊದಲ ಚಿತ್ರದಲ್ಲೇ ಡಬಲ್ ರೋಲ್‍ನಲ್ಲಿ ನಟಿಸುವ ಅದೃಷ್ಟ ಇರಲಿಲ್ಲ. ಆದರೆ, ಮೊದಲ ಸಿನಿಮಾದಲ್ಲೇ ಡಬಲ್ ರೋಲ್ ಮಾಡಿದವರಲ್ಲಿ ಬಾಲಿವುಡ್‍ನ ಹೃತಿಕ್ ರೋಷನ್ ಇದ್ದಾರೆ. ಅವರ ಅಭಿನಯದ ಮೊದಲ ಸಿನಿಮಾ ಕಹೋನಾ ಪ್ಯಾರ್ ಹೈ ಚಿತ್ರದಲ್ಲಿ ಹೃತಿಕ್ ಡಬಲ್ ರೋಲ್‍ನಲ್ಲಿ ನಟಿಸಿದ್ದರು.

  ಈಗ ಆ ದಾಖಲೆಯನ್ನು ಕನ್ನಡದಲ್ಲಿ ಮಾಡಲು ಹೊರಟಿರುವುದು ರವಿಗೌಡ. ಧ್ವಜ, ರವಿ ಗೌಡ ನಾಯಕರಾಗಿ ನಟಿಸಿರುವ ಮೊದಲ ಸಿನಿಮಾ. ಈ ಚಿತ್ರದಲ್ಲಿ ರವಿ ಗೌಡ ಅವರದ್ದು ಡಬಲ್ ರೋಲ್. ಅಣ್ಣತಮ್ಮ ಎರಡೂ ಕ್ಯಾರೆಕ್ಟರ್‍ಗಳಲ್ಲಿ ನಟಿಸಿರುವ ರವಿ ಗೌಡಗೆ ಜೋಡಿಯಾಗಿ ಪ್ರಿಯಾಮಣಿ ಮತ್ತು ದಿವ್ಯಾ ಇದ್ದಾರೆ.

  ರಾಜಕಾರಣದ ಕಥೆ ಹೊಂದಿರುವ ಚಿತ್ರಕ್ಕೆ ಅಶೋಕ್ ಕಶ್ಯಪ್ ನಿರ್ದೇಶನವಿದೆ. ರಾಜಕೀಯ ಕಾರ್ಯಕರ್ತನೊಬ್ಬನ ಕೊಲೆ, ನಂತರ ಅದನ್ನು ಮುಚ್ಚಿ ಹಾಕಲು ನಡೆಯುವ ತಂತ್ರ ಕುತಂತ್ರಗಳ ಕಥೆ ಚಿತ್ರದಲ್ಲಿದೆ. ಚುನಾವಣೆ ಹೊತ್ತಿನಲ್ಲೇ ಬಿಡುಗಡೆಯಾಗುತ್ತಿರುವ ಸಿನಿಮಾ, ಇದೇ ಕಾರಣಕ್ಕೆ ಕುತೂಹಲ ಕೆರಳಿಸಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery