ನಟಸಾರ್ವಭೌಮ. ಇದು ಪುನೀತ್ ರಾಜ್ಕುಮಾರ್ ಅಭಿನಯದ ಸಿನಿಮಾ. ರಣವಿಕ್ರಮ ನಂತರ ಮತ್ತೆ ನಿರ್ದೇಶಕ ಪವನ್ ಒಡೆಯರ್ ಮತ್ತು ಪುನೀತ್ ಒಂದಾಗಿರುವ ಚಿತ್ರ. ಚಿತ್ರಕ್ಕೆ ರಾಕ್ಲೈನ್ ವೆಂಕಟೇಶ್ ನಿರ್ಮಾಪಕರಾದರೆ, ರಚಿತಾ ರಾಮ್ ನಾಯಕಿ. ಈ ಚಿತ್ರದಲ್ಲಿ ಬಿ.ಸರೋಜಾದೇವಿ, ಚಿತ್ರನಟಿಯಾಗಿಯೇ ನಟಿಸಿದ್ದಾರೆ ಅನ್ನೋದು ವಿಶೇಷ.
ಸಿನಿಮಾದಲ್ಲಿ ಪುನೀತ್ ಪತ್ರಕರ್ತರಾಗಿ ನಟಿಸಿದ್ದಾರೆ. ಪತ್ರಕರ್ತನಾಗಿ ಬಿ.ಸರೋಜಾದೇವಿಯವರನ್ನು ಪುನೀತ್ ಸಂದರ್ಶನ ಮಾಡುವ ದೃಶ್ಯ ಚಿತ್ರದಲ್ಲಿದೆ. ನನಗೆ ಇದೊಂದು ಹೆಮ್ಮೆಯ ಕ್ಷಣ. ಇಬ್ಬರು ಶ್ರೇಷ್ಟರನ್ನು ಒಟ್ಟಿಗೇ ನಿರ್ದೇಶಿಸುವ ಸೌಭಾಗ್ಯ ನನ್ನದು ಎಂದು ಬರೆದುಕೊಂಡಿದ್ದಾರೆ ಪವನ್ ಒಡೆಯರ್.
ಪುನೀತ್ ರಾಜ್ಕುಮಾರ್ ಮತ್ತು ಬಿ.ಸರೋಜಾದೇವಿ ಎಂದರೆ ತಕ್ಷಣ ನೆನಪಾಗೋದು ಯಾರಿವನು ಚಿತ್ರದ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ಹಾಡು.. ಆಗ ಪುನೀತ್ ಮಾಸ್ಟರ್ ಲೋಹಿತ್ ಆಗಿದ್ದರು. ಈಗ ಪವರ್ಸ್ಟಾರ್ ಆಗಿದ್ದಾರೆ. ಮತ್ತೊಮ್ಮೆ ಸರೋಜಾದೇವಿ ಎದುರು ನಟಿಸಿದ್ದಾರೆ.