` sudharani - chitraloka.com | Kannada Movie News, Reviews | Image

sudharani

  • Shivarajkumar and Sudharani in ad

    sudharani, shivarajkumar image

    For the first time ever, Shivarajkumar and Sudharani the most popular pair of Kannada cinema are seen together in a commercial of Kalyan Jewels. Shivarajkumar and Sudharani made their screen debut together with 'Anand' and after that the duo acted in many films including 'Mana Mechchida Hudugi', 'Aasegobba Meesegobba', 'Samara', 'Ranaranga', 'Ananda Jyothi', 'Anna Thangi' and others. Recently, Sudharani was seen in Shivarajkumar's 'Belli', not as the heroine, but in a prominent character.

    Though the duo have been seen in number of films, this is the first time that they are seen together in an ad. Earlier, Shivarajkumar was seen in Kalyan Jewellerss ad along with 'Big B' Amitabh Bachchan. Now in continuation, Shivarajkumar has acted with Sudharani in a new ad

  • Sudharani In Belli Hejje On 2nd July

    sudharani image

    Well known actress Sudharani is all set to be the guest at the Belli Hejje being conducted by the Karnataka Chalanachitra Academy. The programme is being held on 02nd July at the Gandhi Bhavan at 5'o clock in the evening.

    Actress Tara, veteran director Bhagawan of Dorai-Bhagawan fame, Karntaka Chalanachitra Academy president S V Rajendra Singh Babu and others are expected to attend the event

  • ಅರ್ಜುನ್ ಸರ್ಜಾ ಬಗ್ಗೆ ಸುಧಾರಾಣಿ ಹೇಳಿದ ಮಾತಿದು..

    sudharani stands for arjun sarja

    ಅರ್ಜುನ್ ಸರ್ಜಾ ಅವರ ಅತಿ ದೊಡ್ಡ ಹಿಟ್‍ಗಳಲ್ಲಿ ಒಂದು ಪ್ರತಾಪ್. ಪ್ರೇಮ ಬರಹ ಕೋಟಿ ತರಹ.. ಹಾಡು ಅದೇ ಚಿತ್ರದ್ದು. ಆ ಚಿತ್ರದಲ್ಲಿ ಅರ್ಜುನ್ ಸರ್ಜಾಗೆ ಜೊತೆಯಾಗಿದ್ದವರು ಕನ್ನಡಿಗರ ಮನ ಮೆಚ್ಚಿದ ಹುಡುಗಿ ಸುಧಾರಾಣಿ. ಅರ್ಜುನ್ ಜೊತೆ ಹಲವು ಚಿತ್ರಗಳಲ್ಲಿ ನಟಿಸಿರುವ ಸುಧಾರಾಣಿ, ಅರ್ಜುನ್ ಸರ್ಜಾ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ನಾನು ಅವರನ್ನು ಹತ್ತಿರದಿಂದ ಬಲ್ಲೆ. ಅವರ ಜೊತೆ ಅಭಿನಯಿಸಿದ್ದೇನೆ. ನನಗೆ ಅವರಿಂದ ಯಾವತ್ತೂ ಕೆಟ್ಟ ಅನುಭವವಾಗಿಲ್ಲ. ನನಗೆ ಗೊತ್ತಿರುವಂತೆ ಅವರೊಬ್ಬ ಸಜ್ಜನ ವ್ಯಕ್ತಿ. ಇದೇ ಮೊದಲ ಬಾರಿಗೆ ಅವರ ಮೇಲೆ ಇಂಥಾದ್ದೊಂದು ಆರೋಪ ಕೇಳಿ ಬಂದಿದೆ. ಅವರು ಈ ಆರೋಪದಿಂದ ಮುಕ್ತರಾಗುತ್ತಾರೆ. ಚಿತ್ರರಂಗದ ಹಿರಿಯರು, ಇದೆಲ್ಲವನ್ನೂ ನೋಡಿಕೊಳ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ ಸುಧಾರಾಣಿ.

  • ಆನಂದ್ ಮೀಟ್ಸ್ ಮಾಲಾ

    anand meets mala

    ಆತ ಆನಂದ್. ಈಕೆ ಮಾಲಾ. ಅವನು ಅವಳನ್ನು ಲೈಬ್ರರಿಯಲ್ಲಿ ನೋಡುತ್ತಾನೆ. ಆಕೆ ಮುದುಕಿಯಲ್ಲ, ಲವ್ಲಿ ಗರ್ಲ್ ಎಂದು ಗೊತ್ತಾಗಿ ಪ್ರೀತಿಸುತ್ತಾನೆ. ಆಕೆಯೂ ಆತನನ್ನು ಪ್ರೀತಿಸಿ ಜೊತೆಯಾಗಿ.. ಹಿತವಾಗಿ ಎಂದು ಹಾಡುತ್ತಾರೆ. ಏನ್ರೀ ಇದು.. ಆನಂದ್ ಫಿಲಂ ಸ್ಟೋರಿ ಹೇಳ್ತಿದ್ದೀರಲ್ಲ ಎಂದು ಕೇಳಬೇಡಿ.

    ಆನಂದ್ ಸಿನಿಮಾ ನೆನಪಾಗುವಂತೆ ಮಾಡಿರೋದು ಮಾಲಾ ಅರ್ಥಾತ್ ಸುಧಾರಾಣಿ. ಕನ್ನಡ ಚಿತ್ರರಂಗದಲ್ಲಿ ಶಿವರಾಜ್ ಕುಮಾರ್ ಸುಧಾರಾಣಿ ಜೋಡಿ ಎಷ್ಟು ಫೇಮಸ್ ಅನ್ನೋದನ್ನು ಪ್ರತ್ಯೇಕವಾಗಿ ಹೇಳೋ ಅಗತ್ಯವೇ ಇಲ್ಲ. ಆ ಇಬ್ಬರೂ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮುಖಾಮುಖಿಯಾಗಿದ್ದಾರೆ. ಹಳೆಯ ನೆನಪುಗಳು ಚಿಗುರಿವೆ. ಆ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿರೋ ಸುಧಾರಾಣಿ ಅದಕ್ಕೆ ಕೊಟ್ಟಿರೋ ಕ್ಯಾಪ್ಷನ್ ಆನಂದ್ ಮೀಟ್ಸ್ ಮಾಲಾ.

  • ಇಷ್ಟು ವರ್ಷದಲ್ಲಿ ಇಂತಹ ಸಿನಿಮಾ ಮಾಡಿಲ್ಲ : ಸುಧಾರಾಣಿಗೆ ಥ್ರಿಲ್ ಕೊಟ್ಟ ಸಿನಿಮಾ

    ಇಷ್ಟು ವರ್ಷದಲ್ಲಿ ಇಂತಹ ಸಿನಿಮಾ ಮಾಡಿಲ್ಲ : ಸುಧಾರಾಣಿಗೆ ಥ್ರಿಲ್ ಕೊಟ್ಟ ಸಿನಿಮಾ

    ಸಹಜ ಸುಂದರಿ ಸುಧಾರಾಣಿ ಹುಟ್ಟು ಕಲಾವಿದೆ. ಮಗುವಾಗಿದ್ದಾಗಿನಿಂದಲೂ ನಟಿಸಿರೋ ಸುಧಾರಾಣಿ ಅವರ ಸಿನಿಮಾ ಜರ್ನಿ ಈಗಾಗಲೇ ಮೂರು ದಶಕ ಪೂರೈಸಿದೆ. ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರೋ ಸುಧಾರಾಣಿಯನ್ನು ಥ್ರಿಲ್ ಆಗುವಂತೆ ಮಾಡಿರುವ ಸಿನಿಮಾದ ಕಥೆ ಇದು.

    ನಾನೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದೇನೆ. ಇಷ್ಟು ವರ್ಷಗಳಲ್ಲಿ ನಾನು ಇದೂವರೆಗೆ ನೋಡಿಯೇ ಇರದಂತಹ ಸ್ಕ್ರಿಪ್ಟ್ ಮತ್ತು ಕಥೆ ಇದು. ಕಥೆಯ ಒನ್‍ಲೈನ್ ಕೇಳಿಯೇ ಸಿನಿಮಾಗೆ ಯೆಸ್ ಹೇಳಿ ಡೇಟ್ಸ್ ಕೊಟ್ಟೆ. ನಂತರ ಸೆಟ್‍ಗೆ ಹೋದ ಮೇಲೂ ಅಷ್ಟೆ.. ಚಿತ್ರದ ಬಗ್ಗೆ ಪ್ರತಿಯೊಬ್ಬರೂ ಮಾಡಿದ್ದ ಹೋಂ ವರ್ಕ್, ತಯಾರಿಗಳು ಎಷ್ಟು ಖುಷಿ ಕೊಟ್ಟವೆಂದರೆ ಇಷ್ಟು ವರ್ಷದಲ್ಲಿ ನಾನು ನಟಿಸಿದ ಪಾತ್ರಗಳ ತೂಕವೇ ಒಂದಾದರೆ, ಈ ಪಾತ್ರದ ತೂಕವೇ ಬೇರೆ ಎಂದಿದ್ದಾರೆ ಸುಧಾರಾಣಿ. ಸುಧಾರಾಣಿಯಂತಹಾ ಸುಧಾರಾಣಿಯವರಿಗೆ ಇಷ್ಟು ಥ್ರಿಲ್ ಕೊಟ್ಟಿರುವ ಸಿನಿಮಾ ತುರ್ತು ನಿರ್ಗಮನ.

    ಅಂದಹಾಗೆ ಇದು ಹೇಮಂತ್ ಕುಮಾರ್ ನಿರ್ದೇಶನದ ಸಿನಿಮಾ. ಭರತ್ ಕುಮಾರ್ ಮತ್ತು ಹೇಮಂತ್ ಕುಮಾರ್ ನಿರ್ಮಾಪಕರಾಗಿರೋ ಚಿತ್ರದಲ್ಲಿ ಎಕ್ಸ್‍ಕ್ಯೂಸ್ ಮಿ ಸುನಿಲ್ ರಾವ್, ಅಚ್ಯುತ್ ಕುಮಾರ್, ಸಂಯುಕ್ತಾ ಹೆಗ್ಡೆ, ಹಿತ ಚಂದ್ರಶೇಖರ್, ರಾಜ್ ಬಿ.ಶೆಟ್ಟಿ ಸೇರಿದಂತೆ ಬೃಹತ್ ತಾರಾಗಣವೇ ಇದೆ.

  • ಈ ತಿಂಗಳ ರಾಗಿ ಮುದ್ದೆ ಪಾರ್ಟಿ ಎಲ್ಲಾಯ್ತು ಗೊತ್ತಾ?

    ಈ ತಿಂಗಳ ರಾಗಿ ಮುದ್ದೆ ಪಾರ್ಟಿ ಎಲ್ಲಾಯ್ತು ಗೊತ್ತಾ?

    ಇನ್ಮೇಲೆ ಈ ಪಾರ್ಟಿಗೆ ರಾಗಿ ಮುದ್ದೆ ಪಾರ್ಟಿ ಎಂದೇ ಕರೆಯಬಹುದು. ಎಲ್ಲರೂ ಡಿಸೈನ್ ಡಿಸೈನ್ ಪಾರ್ಟಿ ಮಾಡ್ತಾ ಇರೋವಾಗ ಈ ನಟಿಯರು ರಾಗಿ ಮುದ್ದೆ ಪಾರ್ಟಿ ಮಾಡ್ತಿದ್ದಾರೆ.

    ಈ ಬಾರಿ ರಾಗಿ ಮುದ್ದೆ ಪಾರ್ಟಿ ನಡೆದಿರೋದು ನಟಿ ಸುಧಾರಾಣಿ ಮನೆಯಲ್ಲಿ. ಈ ಪಾರ್ಟಿಯಲ್ಲಿ ಶೃತಿ ರಾಗಿ ಮುದ್ದೆ ಮಾಡಿದರೆ, ಮಾಳವಿಕಾ ಅವಿನಾಶ್ ಅವರದ್ದು ಹೆಲ್ಪಿಂಗ್ ಪಾತ್ರ. ಮುದ್ದೆ ಸಖತ್ತಾಗಿತ್ತು.

    ಕಳೆದ ತಿಂಗಳು ಇವರೆಲ್ಲ ಲೀಲಾವತಿ ಮನೆಯಲ್ಲಿ ಸೇರಿದ್ದರು. ಈಗ ಮತ್ತೊಮ್ಮೆ ಜೊತೆಯಾಗಿದ್ದಾರೆ. ಸುಧಾರಾಣಿ ಮಗಳು ನಿಧಿಗೆ ರಾಗಿ ಮುದ್ದೆಗಿಂತ ಹೆಚ್ಚು ಇಷ್ಟವಾಗಿರೋದು ಇವರ ಫ್ರೆಂಡ್‍ಶಿಪ್. 

  • ಕನ್ನೇರಿಯ ಕಥೆ : ಸತ್ಯ ಕಥೆಗೆ ಸಿನಿಮಾ ರೂಪ

    ಕನ್ನೇರಿಯ ಕಥೆ : ಸತ್ಯ ಕಥೆಗೆ ಸಿನಿಮಾ ರೂಪ

    ಕನ್ನೇರಿ ಚಿತ್ರದ ಇನ್ನೊಂದು ಹಾಡು ಜನಮೆಚ್ಚುಗೆ ಗಳಿಸಿದೆ. ಕಾಣದ ಊರಿಗೆ.. ಅನ್ನೋ ಹಾಡನ್ನು ಕಂಚಿನ ಕಂಠದಿಂದಲೇ ಕನ್ನಡಿಗರನ್ನು ಗೆದ್ದ ವಸಿಷ್ಠ ಸಿಂಹ ಬಿಡುಗಡೆ ಮಾಡಿದ್ದಾರೆ. ಕೋಟಗಾನಹಳ್ಳಿ ರಾಮಯ್ಯ ಅವರು ಬರೆದಿರೋ ಹಾಡಿದು. ಕನ್ನೇರಿ ಚಿತ್ರ ತಂಡ ಬಿಡುಗಡೆ ಮಾಡಿರೋ 2ನೇ ಹಾಡಿದು.

    ಅಂದಹಾಗೆ ಇದು ಸತ್ಯಕಥೆ ಆಧರಿಸಿದ ಚಿತ್ರ. ಸರ್ಕಾರ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಿದಾಗ ಹಲವರು ನಗರಕ್ಕೆ ಬಂದರು. ನಗರದ ಮನೆಗಳಲ್ಲಿ ಮನೆ ಕೆಲಸಕ್ಕೆ ಸೇರಿದರು. ಹಾಗೆ ಮನೆಗೆಲಸಕ್ಕೆ ಸೇರಿದ ಕನ್ನೇರಿ ಮೇಲೆ ಆ ಮನೆಯ ಮಾಲಕಿ ನಡೆಸಿದ ದೌರ್ಜನ್ಯ, ದೌರ್ಜನ್ಯಕ್ಕೊಳಗಾದರೂ ಆಕೆಯೇ ಜೈಲು ಸೇರುವುದು ಏಕೆ?

    ಜೈಲಿನಿಂದ ಬಿಡುಗಡೆಯಾಗಲು ಆಕೆ ನಡೆಸುವ ಹೋರಾಟದ ಕಥೆ ಇಟ್ಟುಕೊಂಡು ಸಿನಿಮಾ ರೂಪಿಸಿದ್ದಾರೆ ನೀನಾಸಂ ಮಂಜು. ಪಿ.ಪಿ.ಹೆಬ್ಬಾರ್ ಮತ್ತು ಚಂದ್ರಶೇಖರ್ ಈ ಹೋರಾಟದ ಕಥೆಗೆ ಬಂಡವಾಳ ಹೂಡಿದ್ದಾರೆ. ಅರ್ಚನಾ ಮಧುಸೂದನ್, ಅರುಣ್ ಸಾಗರ್, ಅನಿತಾ ಭಟ್, ಕರಿಸುಬ್ಬು ಮೊದಲಾದವರು ನಟಿಸಿರುವ ಚಿತ್ರಕ್ಕೆ ಕಥೆ, ಸಂಭಾಷಣೆ ಕೋಟಗಾನಹಳ್ಳಿ ರಾಮಯ್ಯ ಅವರದ್ದು.

  • ಕೆಜಿಎಫ್ 2ಗೆ ಸುಧಾರಾಣಿ, ಶೃತಿ ಎಂಟ್ರಿ : ಶೂಟಿಂಗ್ ಇನ್ನೂ ಮುಗಿದಿಲ್ವಾ?

    ಕೆಜಿಎಫ್ 2ಗೆ ಸುಧಾರಾಣಿ, ಶೃತಿ ಎಂಟ್ರಿ : ಶೂಟಿಂಗ್ ಇನ್ನೂ ಮುಗಿದಿಲ್ವಾ?

    ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಹತ್ತಿರ ಬರುತ್ತಿದೆ. ಏಪ್ರಿಲ್ 14ಕ್ಕೆ ರಿಲೀಸ್. ಈ ನಡುವೆ ಚಿತ್ರದ ಶೂಟಿಂಗ್ ಇನ್ನೂ ಮುಗಿದಿಲ್ವಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಮೂಲಗಳ ಪ್ರಕಾರ ಚಿತ್ರದ ಇಂಟ್ರೊಡಕ್ಷನ್ ಸಾಂಗ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ತೃಪ್ತಿ ತಂದಿಲ್ಲ.

    ಹೀಗಾಗಿ ಮತ್ತೊಮ್ಮೆ ಚಿತ್ರೀಕರಣಕ್ಕೆ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಇದೆ. ಪ್ರಶಾಂತ್ ನೀಲ್ ಇರೋದೇ ಹಾಗೆ.. ಉಗ್ರಂ ಚಿತ್ರದ ಚಿತ್ರೀಕರಣ ಮುಗಿದ ಮೇಲೆ ತೃಪ್ತಿಯಾಗದೆ ಇಡೀ ಸಿನಿಮಾವನ್ನು ಮತ್ತೊಮ್ಮೆ ಶೂಟ್ ಮಾಡಿದ್ದರು. ಗೆದ್ದಿದ್ದರೂ ಕೂಡಾ. ಕೆಜಿಎಫ್ ಚಾಪ್ಟರ್ 1ನಲ್ಲೂ ಅಷ್ಟೆ, ಚಿತ್ರದ ರಿಲೀಸ್ ಹತ್ತಿರ ಬಂದಾಗ ಹಿಂದಿ ವರ್ಷನ್‍ಗಾಗಿ ಮೌನಿ ರಾಯ್ ಅವರನ್ನು ಹಾಕಿಕೊಂಡು ಶೂಟ್ ಮಾಡಲಾಗಿತ್ತು. ಕೆಜಿಎಫ್ ಚಾಪ್ಟರ್ 2 ಕೂಡಾ ಇದೇ ಹಾದಿಯಲ್ಲಿದೆ.

    ಇನ್ನು ಚಿತ್ರದ ಡಬ್ಬಿಂಗ್‍ಗೆ ಸುಧಾರಾಣಿ ಮತ್ತು ಶೃತಿ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ ರವೀನಾ ಟಂಡನ್ ಪಾತ್ರಕ್ಕೆ ಸುಧಾರಾಣಿ ಮತ್ತು ಈಶ್ವರಿ ರಾವ್ ಪಾತ್ರಕ್ಕೆ ಶೃತಿ ಡಬ್ಬಿಂಗ್ ಮಾಡುತ್ತಿದ್ದಾರೆ.

  • ಕೆಜಿಎಫ್ ಚಾಪ್ಟರ್-2ಗೆ ಸುಧಾರಾಣಿ, ಶೃತಿ ಎಂಟ್ರಿ

    ಕೆಜಿಎಫ್ ಚಾಪ್ಟರ್-2ಗೆ ಸುಧಾರಾಣಿ, ಶೃತಿ ಎಂಟ್ರಿ

    ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗೋದು ಯಾವಾಗ ಎಂದು ಅಭಿಮಾನಿಗಳು ಚಾತಕಪಕ್ಷಿಗಳಂತೆ ಕಾಯುತ್ತಲೇ ಇದ್ದಾರೆ. ಅತ್ತ.. ಕೆಜಿಎಫ್ ಟೀಂ, ಪ್ರೇಕ್ಷಕರನ್ನು ಇನ್ನಷ್ಟು ಮತ್ತಷ್ಟು ಕುತೂಹಲಿಗಳಾಗುವಂತೆ ಮಾಡುತ್ತಿದೆ. ಏಕೆಂದರೆ ಯಶ್, ಸಂಜಯ್ ದತ್, ಪ್ರಕಾಶ್ ರೈ, ರವೀನಾ ಟಂಡನ್, ಮಾಳವಿಕಾ.. ಮೊದಲಾದವರಿದ್ದ ಟೀಂಗೆ ಈಗ ಸೀನಿಯರ್ ನಟಿಯರಾದ ಸುಧಾರಾಣಿ ಮತ್ತು ಶೃತಿ ಎಂಟ್ರಿ ಕೊಟ್ಟಿದ್ದಾರೆ.

    ತೆರೆಯ ಮೇಲೆ ರವೀನಾ ಟಂಡನ್ ಪ್ರಧಾನಿ ರಮಿಕಾ ಸೇನ್ ಪಾತ್ರ ಮಾಡಿದ್ದಾರಷ್ಟೇ. ಆ ಪಾತ್ರಕ್ಕೆ ಕನ್ನಡದಲ್ಲಿ ಶಕ್ತಿ ತುಂಬಿರುವುದು ಸುಧಾರಾಣಿ ಅವರ ಕಂಠ. ತೆಲುಗಿನ ಈಶ್ವರಿ ರಾವ್ ನಟಿಸಿರುವ ಪಾತ್ರಕ್ಕೆ ನಟಿ ಶೃತಿ ಧ್ವನಿ  ನೀಡಿದ್ದಾರೆ.  ಈ ಮೂಲಕ ಹೊಂಬಾಳೆಯ ರತ್ನವಾಗುತ್ತಿರುವ ಕೆಜಿಎಫ್ ಚಿತ್ರಕ್ಕೆ ಇನ್ನೊಂದು ಮುತ್ತು ಜೋಡಿಸಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.

  • ತುರ್ತು ನಿರ್ಗಮನ : ಮಾಮೂಲಿ ಸಿನಿಮಾ ಖಂಡಿತಾ ಅಲ್ಲ..!

    ತುರ್ತು ನಿರ್ಗಮನ : ಮಾಮೂಲಿ ಸಿನಿಮಾ ಖಂಡಿತಾ ಅಲ್ಲ..!

    ಬಹುಶಃ ಸುಧಾರಾಣಿ ಇಷ್ಟೊಂದು ಎಕ್ಸೈಟ್ ಆಗಿ ಒಂದು ಸಿನಿಮಾದ ಬಗ್ಗೆ.. ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದು ಅವರ 3 ದಶಕಗಳ ಹಿಸ್ಟರಿಯಲ್ಲಿ ಇದೇ ಮೊದಲಿರಬೇಕು. ಸುನಿಲ್ ರಾವ್ ಅವರಿಗೆ ಒಂದು ದೊಡ್ಡ ಗ್ಯಾಪ್ ನಂತರ ಮತ್ತೊಮ್ಮೆ ತೆರೆ ಮೇಲೆ ಬರುವ ಚಾನ್ಸ್ ಸಿಕ್ಕಿದೆ. ರಾಜ್ ಬಿ.ಶೆಟ್ಟಿ ಇದ್ದಾರೆ. ಚಿತ್ರದ ಮೇಕಿಂಗ್, ಟ್ರೇಲರ್ ನೋಡಿದವರಿಗೆ ಥಟ್ಟನೆ ಅನ್ನಿಸೋದು ಒಂದೇ.. ಇದು ಮಾಮೂಲಿ ಸಿನಿಮಾ ಅಲ್ವೇ ಅಲ್ಲ. ಹೇಮಂತ್ ಕುಮಾರ್ ವಿಭಿನ್ನತೆಯನ್ನೆಲ್ಲ ಚಿತ್ರದ ಕಾನ್ಸೆಪ್ಟ್‍ನಲ್ಲಿ ತುಂಬಿ ತರುತ್ತಿದ್ದಾರೆ.

    ಸತ್ತವನಿಗೆ ಮತ್ತೊಮ್ಮೆ ಬದುಕುವ ಅವಕಾಶ ಸಿಕ್ಕರೆ.. ಅದೂ ಸ್ವಲ್ಪವೇ ಸ್ವಲ್ಪ ಕಾಲ.. ಆದರೆ ಅವನಿಗೆ ಮತ್ತೊಮ್ಮೆ ಇಡೀ ಲೈಫ್ ಬದುಕುವ ಆಸೆ ಹುಟ್ಟಿಬಿಟ್ಟರೆ.. ಅದಕ್ಕಾಗಿ ಅವನು ಏನೇನೆಲ್ಲ ಮಾಡಬಹುದು.. ಸಿನಿಮಾ ಇಂಟ್ರೆಸ್ಟಿಂಗ್ ಅನ್ನಿಸೋದೇ ಈ ರೀತಿಯ ಕಾನ್ಸೆಪ್ಟ್‍ನಲ್ಲಿ.

    ಇದೊಂದು ಸೈ-ಫೈ ಅಂದ್ರೆ ಸೈಂಟಿಫಿಕ್ ಫಿಕ್ಷನ್ ಮೂವಿ. ಕನ್ನಡಕ್ಕೆ ಇದು ಹೊಸದು ಎನ್ನುತ್ತಿದ್ದಾರೆ ಡೈರೆಕ್ಟರ್ ಹೇಮಂತ್ ಕುಮಾರ್. ಸುಧಾರಾಣಿ ನರ್ಸ್ ಪಾತ್ರದಲ್ಲಿ, ರಾಜ್ ಬಿ.ಶೆಟ್ಟಿ ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಜೂನ್ 24ಕ್ಕೆ ರಿಲೀಸ್.

  • ಮನ ಮೆಚ್ಚಿದ ಹುಡುಗಿಯ ಮಗಳು ಬಂದರು ದಾರಿ ಬಿಡಿ

    sudharani's daughter nidhi

    ಸುಧಾರಾಣಿ, ಕನ್ನಡಿಗರ ಮನ ಮೆಚ್ಚಿದ ಹುಡುಗಿ. ಮೈಸೂರು ಮಲ್ಲಿಗೆ. 12ನೇ ವಯಸ್ಸಿನಲ್ಲಿ ಆನಂದ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುಧಾರಾಣಿ, ಇಂದಿಗೂ ಅದೇ ನಗು, ಸೌಂದರ್ಯ ಉಳಿಸಿಕೊಂಡಿದ್ದಾರೆ. ಅವರಿಗೆ 17 ವರ್ಷದ ಮಗಳಿದ್ದಾರೆ ಎಂದರೆ ನಂಬುವುದು ಕಷ್ಟ. 

    ಆದರೆ ಈಗ ಆ 17 ವರ್ಷದ ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಧರ್ಮ ಕೀರ್ತಿರಾಜ್ ನಟನೆಯ `ಇದು ಚಕ್ರವ್ಯೂಹ' ಚಿತ್ರದಲ್ಲಿ ಸುಧಾರಾಣಿ ಅವರ ಮಗಳು ನಿಧಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸುಧಾರಾಣಿ ಜೊತೆ ಜಾಹೀರಾತಿನಲ್ಲಿ ನಟಿಸಿದ್ದ ನಿಧಿ, ಈಗ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ವಿಶೇಷ ಎಂದರೆ, ಈ ಚಿತ್ರದಲ್ಲಿ ಸುಧಾರಾಣಿ ರಿಯಲ್ ಮಗಳಿಗೆ ರೀಲ್ ಅಮ್ಮನಾಗಿಯೂ ನಟಿಸುತ್ತಿರುವುದು ವಿಶೇಷ. ನಿಧಿಗೊಂದು ಗುಡ್‍ಲಕ್ ಹೇಳೋಣವೇ..

  • ಯುವರತ್ನ ಚಿತ್ರಕ್ಕೆ ಸುಧಾರಾಣಿ ಎಂಟ್ರಿ

    sudharani joins yuvaratna team

    ಯುವರತ್ನ ಚಿತ್ರದ ತಾರಾಬಳಗ ದೊಡ್ಡದಾಗುತ್ತಲೇ ಹೋಗುತ್ತಿದೆ. ಈಗ ಯುವರತ್ನ ಚಿತ್ರ ತಂಡಕ್ಕೆ ಸುಧಾರಾಣಿ ಬಂದಿದ್ದಾರೆ. ಸುಧಾರಾಣಿಯವರ ಪಾತ್ರ ಏನು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್. ಸುಧಾರಾಣಿಯವರ ಜೊತೆಗೆ ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಗುರುದತ್, ಕುರಿ ಪ್ರತಾಪ್, ಪ್ರಕಾಶ್ ಬೆಳವಾಡಿ ಕೂಡಾ ಜಾಯಿನ್ ಆಗಿದ್ದಾರೆ.

    ಈಗಾಗಲೇ ಚಿತ್ರದಲ್ಲಿ ಪ್ರಕಾಶ್ ರೈ, ದಿಗಂತ್, ಸಾಯಿ ಕುಮಾರ್, ಸೋನುಗೌಡ, ಧನಂಜಯ್, ರಾಧಿಕಾ ಶರತ್ ಕುಮಾರ್, ಆರುಗೌಡ, ವಸಿಷ್ಠ ಸಿಂಹ, ಟಗರು ತ್ರಿವೇಣಿ ಇದ್ದಾರೆ. ಪುನೀತ್‍ಗೆ ಸಯೇಷಾ ನಾಯಕಿ.

    ಸಂತೋಷ್ ಆನಂದರಾಮ್ ನಿರ್ದೇಶನದ ಯುವರತ್ನ, ಹೊಂಬಾಳೆ, ಪುನೀತ್ ಮತ್ತು ಸಂತೋಷ್ ಕಾಂಬಿನೇಷನ್‍ನಿಂದಾಗಿಯೇ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ.

  • ರವಿಚಂದ್ರನ್-ಸುಧಾರಾಣಿ ಮತ್ತೆ ಜೋಡಿ..!

    ravichandran adnd sudharani in paddehuli

    ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಧಾರಾಣಿ ಒಟ್ಟಿಗೇ ನಟಿಸಿದ್ದ ಸಿನಿಮಾ ಮನೆದೇವ್ರು. ನಟಿಸಿದ್ದು ಒಂದೇ ಸಿನಿಮಾ ಆದರೂ ಕನ್ನಡ ಚಿತ್ರರಸಿಕರ ನೆನಪಿನಲ್ಲಿ ಸದಾ ಹಸಿರಾಗಿರುವ ಜೋಡಿ ರವಿ-ಸುಧಾ ಅವರದ್ದು. ಈಗ ಆ ಜೋಡಿ ಮತ್ತೆ ಒಂದಾಗುತ್ತಿದೆ. ತೆರೆಯ ಮೇಲೆ. ಪಡ್ಡೆ ಹುಲಿ ಚಿತ್ರದಲ್ಲಿ.

    ಪಡ್ಡೆ ಹುಲಿ ಚಿತ್ರದಲ್ಲಿ ರವಿಚಂದ್ರನ್ ಕನ್ನಡ ಪ್ರೊಫೆಸರ್ ಪಾತ್ರ ಮಾಡುತ್ತಿದ್ದಾರೆ. ಅದು ಚಾಮಯ್ಯ ಮೇಷ್ಟ್ರು ಪಾತ್ರದಂತೆಯೇ ಹಿಟ್ ಆಗಲಿದೆ ಅನ್ನೋದು ನಿರ್ದೇಶಕ ಗುರು ದೇಶಪಾಂಡೆ ಭರವಸೆ. ಆ ಪಾತ್ರದಲ್ಲಿ ನಿಮಗೆ ಯು.ಆರ್.ಅನಂತಮೂರ್ತಿ ಮತ್ತು ಎಸ್.ಎಲ್. ಭೈರಪ್ಪ ಕಂಡರೆ ಅಚ್ಚರಿಯಿಲ್ಲ, ಅಷ್ಟರಮಟ್ಟಿಗೆ ಆ ಪಾತ್ರವನ್ನು ಕಟ್ಟಲಾಗಿದೆ. ನಾಯಕನ ತಂದೆಯಾಗಿ ನಟಿಸುತ್ತಿರುವ ರವಿಚಂದ್ರನ್‍ಗೆ ಸುಧಾರಾಣಿ ಜೋಡಿ.

    ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಟಿಸುತ್ತಿರುವ ಮೊದಲ ಸಿನಿಮಾ ಪಡ್ಡೆಹುಲಿ. ನಿಶ್ವಿಕಾ ನಾಯ್ಡು ನಾಯಕಿಯಾಗಿರುವ ಚಿತ್ರದ ನಿರ್ಮಾಪಕರು ರಮೇಶ್ ರೆಡ್ಡಿ ನಂಗ್ಲಿ.

     

  • ಸಾಯಿಕುಮಾರ್ ಅಣ್ಣ, ಸುಧಾರಾಣಿ ತಂಗಿ.!!

    25 years later sai kumar and sudharani come together

    ಕನ್ನಡದಲ್ಲಿ ಸಾಯಿಕುಮಾರ್ ಹೀರೋ ಆಗಿ ನಟಿಸಿದ ಮೊದಲ ಚಿತ್ರ ಕುಂಕುಮ ಭಾಗ್ಯ. ಆ ಚಿತ್ರದಲ್ಲಿ ಸುಧಾರಾಣಿ, ಸಾಯಿಕುಮಾರ್‍ಗೆ ನಾಯಕಿ. ಈಗ ಸಾಯಿಕುಮಾರ್‍ಗೆ ಸುಧಾರಾಣಿ ತಂಗಿಯಾಗಿದ್ದಾರೆ. ಅವತಾರ್ ಪುರುಷ ಚಿತ್ರದಲ್ಲಿ.

    ಅವತಾರ್ ಪುರುಷ ಸಿನಿಮಾದಲ್ಲಿ ಸಾಯಿಕುಮಾರ್ ಅವರದ್ದು ರಾಮಾ ಜೋಯಿಸ್ ಎನ್ನುವ ಆಯುರ್ವೇದಿಕ್ ಪಂಡಿತನ ಪಾತ್ರ. ಅವರಿಗೆ ತಂಗಿಯಾಗಿರುವುದು ಸುಧಾರಾಣಿ. ಸಾಯಿಕುಮಾರ್‍ಗೆ ಭವ್ಯ ಜೋಡಿ.

    ರಂಗಿತರಂಗ ನಂತರ ಒಂದೊಳ್ಳೆ ವಿಶೇಷ ಪಾತ್ರ ಸಿಕ್ಕಿದೆ ಎನ್ನುವ ಖುಷಿಯಲ್ಲಿರುವ ಸಾಯಿಕುಮಾರ್‍ಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಭಲೇ ಇಷ್ಟವಾಗಿದ್ದಾರೆ. ಕಾರಣ ಇಷ್ಟೆ..

    ಚಿತ್ರದ ಪೋಷಕ ನಟನ ಪಾತ್ರಕ್ಕೂ ಲಾಂಚಿಂಗ್ ಸಂಭ್ರಮ ಮಾಡುತ್ತಿರುವ ಸಂಭ್ರಮ. ಸಾಯಿಕುಮಾರ್ ಹುಟ್ಟುಹಬ್ಬಕ್ಕೆ ಪುಷ್ಕರ್ ನೀಡಿದ ಸ್ಪೆಷಲ್ ಕಾಣಿಕೆ. ಅಫ್‍ಕೋರ್ಸ್, ಅದು ಪುಷ್ಕರ್ ಅವರ ಪ್ಯಾಷನ್.

    ಸಿಂಪಲ್ ಸುನಿ ನಿರ್ದೇಶನದ ಚಿತ್ರದಲ್ಲಿ ಶರಣ್ ನಾಯಕ, ಅಶಿಕಾ ರಂಗನಾಥ್ ನಾಯಕಿ.

    ಅಂದಹಾಗೆ ಶರಣ್ ಚಿತ್ರಗಳಲ್ಲಿ ಸಾಯಿಕುಮಾರ್ ತಮ್ಮ ರವಿಶಂಕರ್ ಭಲೇ ಜೋಡಿ. ಅಣ್ಣನೊಂದಿಗೆ ಶರಣ್ ನಟಿಸ್ತಿರೋದು ಇದೇ ಫಸ್ಟ್ ಟೈಮು.

  • ಸುಧಾರಾಣಿ ಮಗಳ ಪಿಯು ರಿಸಲ್ಟ್ 

    d.o sudharani makes her parents proud

    ಮನ ಮೆಚ್ಚಿದ ಹುಡುಗಿ ಸುಧಾರಾಣಿಗೆ ಪಿಯು ಓದುತ್ತಿರುವ ಮಗಳಿದ್ದಾಳೆ. ಸುಧಾರಾಣಿ ಮಗಳ ಹೆಸರು ನಿಧಿ. ಇತ್ತೀಚೆಗೆ ನಿಧಿ, ಚಿತ್ರರಂಗಕ್ಕೆ ಬರುತ್ತಾರೆ ಎಂಬ ಸುದ್ದಿಯೂ ಹೊರಬಿದ್ದಿತ್ತು. ಅದಕ್ಕೆ ಸುಧಾರಾಣಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬದಲಿಗೆ ನಿಧಿ, ತಮ್ಮ ಪಾಡಿಗೆ ತಾವು ಓದಿನತ್ತ ಗಮನ ಹರಿಸಿದ್ದರು. 

    ಸಿಬಿಎಸ್‍ಇ ಓದುತ್ತಿದ್ದ ಸುಧಾರಾಣಿ ಮಗಳು, ಕಾಮರ್ಸ್ ತೆಗೆದುಕೊಂಡಿದ್ದರು. ರಿಸಲ್ಟ್ ಬಂದಿದೆ. ನಿಧಿ 96.4% ಮಾಕ್ರ್ಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಸುಧಾರಾಣಿ-ಗೋವರ್ಧನ್ ದಂಪತಿಯ ಸುಬ್ಬಿನಕುಟ್ಟಿ, ಇಡೀ ಕಾಲೇಜಿಗೆ 2ನೇ ಟಾಪರ್.  ಅಪ್ಪ ಅಮ್ಮನ ಖುಷಿಗೆ ಪಾರವೇ ಇಲ್ಲ. 

  • ಸುಧಾರಾಣಿ ಮಗಳು ಚಿತ್ರರಂಗಕ್ಕೆ ಎಂಟ್ರಿ.. 

    sudharani's daughter to enter films

    ಸುಧಾರಾಣಿ.. ಒಂದು ಕಾಲದ ಚಿತ್ರರಸಿಕರ ಕನಸಿರಾಣಿ. ಆನಂದ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಸುಧಾರಾಣಿ, ದಶಕದ ಕಾಲ ಚಿತ್ರರಂಗವನ್ನು ಆಳಿದ ಚೆಲುವೆ. ಈಗ ಅವರ ಮಗಳು ನಿಧಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಚಿತ್ರದ ಮೂಲಕ.

    ಜೋಗಿ ಪ್ರೇಮ್ ಹೊಸ ಚಿತ್ರ ಪ್ರೇಮಿಗಳ ದಿನದಂದು ಶುರುವಾಗಲಿದೆ. ಆ ಚಿತ್ರಕ್ಕೆ ರಕ್ಷಿತಾ ಅವರ ಸೋದರ ಅಭಿಷೇಕ್ ಹೀರೋ. ಅವರಿಗೂ ಇದು ಮೊದಲ ಸಿನಿಮಾ. ಇಬ್ಬರು ನವತಾರೆಗಳನ್ನು ಪ್ರೇಮ್ ಈ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

    ಇತ್ತೀಚೆಗೆ ನಿಧಿ, ತಾಯಿ ಸುಧಾರಾಣಿ ಜೊತೆ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ. ಪಡ್ಡೆಹುಲಿ ಚಿತ್ರಕ್ಕೆ ಕೂಡಾ ನಿಧಿಯನ್ನು ನಟಿಸುವಂತೆ ಕೆ.ಮಂಜು ಕೇಳಿದ್ದರಂತೆ. ಆದರೆ, ಆಗ ಓದುತ್ತಿದ್ದೆನಾದ ಕಾರಣ, ಒಪ್ಪಿರಲಿಲ್ಲ ಎಂದಿದ್ದಾರೆ ನಿಧಿ.

    ಫೆಬ್ರವರಿ 14ರ ಪ್ರೇಮಿಗಳ ದಿನಕ್ಕೆ ಜೋಗಿ ಪ್ರೇಮ್‍ರ ಹೊಸ ಚಿತ್ರ ಸೆಟ್ಟೇರಲಿದೆ. ಎಕ್ಸ್‍ಕ್ಯೂಸ್ ಮಿ ಚಿತ್ರದ ನಂತರ ಇದೇ ಮೊದಲ ಬಾರಿಗೆ ಪ್ರೇಮ್ ಹೊಸಬರೊಂದಿಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಇನ್ನೊಂದು ವಿಶೇಷ.

  • ಸುಧಾರಾಣಿಗೆ ಪ್ರಮೋಷನ್ - ಈಗ ಕಮಿಷನರ್

    sudharani is now commisnor

    ಸ್ಯಾಂಡಲ್‍ವುಡ್‍ನ ಸರಳ ಸುಂದರಿ ಸುಧಾರಾಣಿ, ಇದುವರೆಗೆ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ಸ್‍ಪೆಕ್ಟರ್ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಅವರಿಗೀಗ ಏಕ್‍ದಂ ಪ್ರಮೋಷನ್ ಸಿಕ್ಕಿದೆ. ಅವರೀಗ ಕಮಿಷನರ್. ಪ್ರಮೋಷನ್ ಕೊಟ್ಟಿರುವುದು ಕನ್ನಡ್ ಗೊತ್ತಿಲ್ಲ ಸಿನಿಮಾ ಟೀಂ.

    ಹರಿಪ್ರಿಯಾ ನಾಯಕಿಯಾಗಿರುವ ಚಿತ್ರದಲ್ಲಿ ಸುಧಾರಾಣಿ ಕಮಿಷನರ್ ಆಗಿ ನಟಿಸುತ್ತಿದ್ದಾರೆ. ಚಿತ್ರದಲ್ಲೊಂದು ಪಾತ್ರ ಮಾಡುತ್ತಿರುವ ನಟ ಮಯೂರ ರಾಘವೇಂದ್ರ ಚಿತ್ರದ ನಿರ್ದೇಶಕರೂ ಹೌದು. ಸುಧಾರಾಣಿ ಎದುರು ನಟಿಸುವಾಗ ನರ್ವಸ್ ಆಗಿದ್ದೆ ಎನ್ನುವ ಮಯೂರ ಸುಧಾರಾಣಿ, ಹರಿಪ್ರಿಯಾ ಕಾಂಬಿನೇಷನ್ ಚೆನ್ನಾಗಿ ಬಂದಿದೆ ಎಂದು ಹೇಳುವುದನ್ನು ಮರೆಯೋದಿಲ್ಲ.