ಸುದೀಪ್ಗೆ ಶುಭ ಹಾರೈಸುವ ಮೂಲಕ... ಫೈನಲಿ ಟ್ವಿಟರ್ಗೆ ಎಂಟ್ರಿ ಕೊಟ್ಟಿದ್ದೇನೆ. ಹುಟ್ಟುಹಬ್ಬದ ಶುಭಾಶಯಗಳು ಸುದೀಪ್. ನನ್ನ ಗೆಳೆಯ ಸುದೀಪ್ಗೆ ಒಳ್ಳೆಯದಾಗಲಿ. ನಿನ್ನ ಜೀವನದಲ್ಲಿ ಸುಖ ಸಂತೋಷ ತುಂಬಿ ತುಳುಕಲಿ. ಇದು ರಕ್ಷಿತಾ ಪ್ರೇಮ್ ಮಾಡಿದ ಮೊದಲ ಟ್ವೀಟ್.
ರಕ್ಷಿತಾ ಪ್ರೇಮ್ ಕಿಚ್ಚನ ಹುಟ್ಟುಹಬ್ಬದ ದಿನವೇ ಟ್ವಿಟರ್ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗೆ ಟ್ವಿಟರ್ಗೆ ಬಂದ ರಕ್ಷಿತಾ ಮಾಡಿರುವ ಮೊದಲ ಟ್ವೀಟ್ ಕಿಚ್ಚನಿಗೆ ಹುಟ್ಟುಹಬ್ಬದ ಶುಭ ಕೋರಿದ್ದು. ರಕ್ಷಿತಾ ಅವರ ಪತಿ ಜೋಗಿ ಪ್ರೇಮ್ ಸುದೀಪ್, ಶಿವರಾಜ್ ಕುಮಾರ್ ಜೋಡಿಯ ದಿ ವಿಲನ್ ಚಿತ್ರದ ನಿರ್ದೇಶಕ.
ಕಿಚ್ಚ ಸುದೀಪ್ ಜೊತೆ ಹುಬ್ಬಳ್ಳಿ ಚಿತ್ರದಲ್ಲಿನ ಹಾಡಿನ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ರಕ್ಷಿತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಅಪ್ಪು ಚಿತ್ರದ ಮೂಲಕ. ರಕ್ಷಿತಾ ನಟಿಸಿದ ಎರಡನೇ ಚಿತ್ರ ಧಮ್. ಆ ಚಿತ್ರದ ನಾಯಕ ಸುದೀಪ್. ಆನಂತರವೂ ಕಾಶಿ ಫ್ರಂ ವಿಲೇಜ್ ಹಾಗೂ ಹುಬ್ಬಳ್ಳಿ ಚಿತ್ರಗಳಲ್ಲಿ ರಕ್ಷಿತಾ ಸುದೀಪ್ ಒಟ್ಟಿಗೇ ನಟಿಸಿದ್ದರು.