ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ಡಾ.ರಾಜ್ ಕುಮಾರ್ ಜಯಂತಿ ದಿನವೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡೋದಾಗಿ ಘೋಷಿಸಿದ್ದರು. ಅದರಂತೆ, 2016ರಲ್ಲಿ ರಾಜ್ ಹುಟ್ಟುಹಬ್ಬದಂದೇ ಪ್ರಶಸ್ತಿ ಪ್ರದಾನವಾಗಿತ್ತು. ಆದರೆ, 2017ಕ್ಕೆ ಆ ಭಾಗ್ಯ ಇರಲಿಲ್ಲ. ಎಲೆಕ್ಷನ್ ಬಂತು. ನೀತಿ ಸಂಹಿತೆ ಅಡ್ಡಿಯಾಯ್ತು. ಮುಂದಕ್ಕೆ ಹೋಯ್ತು. ಅದೂ ಹೋಗಲಿ ಅಂದರೆ, ಅದಾದ ನಂತರ ನಿಗದಿಯಾದ ಕಾರ್ಯಕ್ರಮಕ್ಕೆ ಮಂಡ್ಯದ ದುರಂತದಿಂದಾಗಿ ಮತ್ತೆ ಮುಂದೂಡಲ್ಪಟ್ಟು, ಇದುವರೆಗೆ ಪ್ರಶಸ್ತಿ ಪ್ರದಾನ ಸಮಾರಂಭವೇ ನಡೆದಿಲ್ಲ. ಈ ಬಾರಿಯೂ ಹಾಗೆಯೇ ಆಗುವ ಎಲ್ಲ ಸಾಧ್ಯತೆಗಳೂ ಇವೆ.
ಪ್ರಶಸ್ತಿ ಆಯ್ಕೆ ಸಮಿತಿಗೆ ನಿರ್ದೇಶಕಿ ಸುಮನಾ ಕಿತ್ತೂರು ಅವರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು. ಈಗ ಸುಮನಾ ಕಿತ್ತೂರು ಹಾಗೂ ಇನ್ನೊಬ್ಬ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ ಸಮಿತಿಯಿಂದ ಹೊರಬಂದಿದ್ದಾರೆ.
ಸುಮನಾ ಕಿತ್ತೂರು, ತಾವು ಸಿನಿಮಾ ಕೆಲಸದಲ್ಲಿ ಬ್ಯುಸಿ ಎನ್ನುತ್ತಿದ್ದರೆ, ಯಾಕೂಬ್ ಸಿನಿಮಾ ನಿರ್ದೇಶನ ಮಾಡ್ತಾರಂತೆ. ಹೀಗಾಗಿ ಸಮಿತಿ, ಸಿನಿಮಾಗಳನ್ನೇ ನೋಡೋಕೆ ಸಾಧ್ಯವಾಗ್ತಿಲ್ಲ.
ಇಷ್ಟೆಲ್ಲ ಆಗಿ, ಹೊಸ ಸಮಿತಿ ರಚನೆಯಾಗಿ, ಆಯ್ಕೆಯಾಗಿ ಪ್ರಶಸ್ತಿ ಪ್ರದಾನ ನಡೆಯುವ ಹೊತ್ತಿಗೆ ಲೋಕಸಭೆ ಎಲೆಕ್ಷನ್ ಘೋಷಣೆಯಾಗಿರುತ್ತೆ. ಅಲ್ಲಿಗೆ.. ಮತ್ತೆ ನೀತಿ ಸಂಹಿತೆ. ಇದರ ತಾತ್ಪರ್ಯ ಇಷ್ಟೆ, 2018ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ, ಏಪ್ರಿಲ್ 24ಕ್ಕೆ ನಡೆಯುವುದು ಸಾಧ್ಯವೇ ಇಲ್ಲ.