` dr rajkumar, - chitraloka.com | Kannada Movie News, Reviews | Image

dr rajkumar,

 • Yesterday Was Rajkumars's Birthday!

  yesterday was rajkumar's birthday

  Not many people know but yesterday was Rajkumar's birthday too. Every year we celebrate Rajkumar's birthday on April 24. That is as per the common calendar. But there is also another birthday of Rajkumar as per the Hindu calendar.

  The day he was born as per this calendar is the Chaitra Hunnime or the full moon of the Chaitra month. Only family members celebrate this birthday. It falls on different dates every year. This year it has fallen on March 31. Yesterday was also the last Blue Moon of 2018. 

   

 • ಅಣ್ಣಾವ್ರನ್ನು ನೆನಪಿಸಿಕೊಂಡು ಬಂತು ಜಾವಾ ಬೈಕ್

  jawa bikes makes its come back

  ಜಾವಾ ಮೋಟರ್ ಸೈಕಲ್. ಇದು ಒಂದು ರೀತಿಯಲ್ಲಿ ಬೈಕ್‍ಗಳ ಲೋಕದ ರಾಜ, ಚಕ್ರವರ್ತಿಯೆಂದರೂ ತಪ್ಪಿಲ್ಲ. ಇಂತಹ ಜಾವಾ ಬೈಕ್ ದಶಕಗಳ ನಂತರ ಮಾರುಕಟ್ಟೆಗೆ ಬಂದಿದೆ. ಅದೂ ತನ್ನ ಓಲ್ಡ್ ಸ್ಟೈಲ್‍ನಲ್ಲಿ. ಜಾವಾ ಬೈಕುಗಳು ಇನ್ನೂ ರಸ್ತೆಗಿಳಿದಿಲ್ಲವಾದರೂ ಅದರ ಕ್ರೇಜೇ ಬೇರೆ. ಆದರೆ, ವಿಷಯ ಇದಲ್ಲ. 

  ಜಗದ್ವಿಖ್ಯಾತ ಮೋಟರ್ ಸೈಕಲ್ ಕಂಪೆನಿ, ತನ್ನ ಪ್ರತಿಷ್ಟಿತ ಬೈಕ್‍ನ್ನು ಮಾರುಕಟ್ಟೆಗೆ ಬಿಡುವಾಗ ಅಣ್ಣಾವ್ರನ್ನು ನೆನಪಿಸಿಕೊಂಡಿರೋದು. ನಾ ನಿನ್ನ ಮರೆಯಲಾರೆ ಚಿತ್ರದಲ್ಲಿ ಡಾ.ರಾಜ್ ಬೈಕ್ ರೇಸರ್ ಪಾತ್ರ ಮಾಡಿದ್ದಾರೆ. ಅವರು ಚಿತ್ರದಲ್ಲಿ ಬಳಸೋದು ಜಾವಾ ಬೈಕ್‍ನ್ನ. ಚಿತ್ರದ ಕ್ಲೈಮಾಕ್ಸ್ ಅಂತೂ ಅದೇ ಜಾವಾ ಬೈಕ್ ಮೇಲೆ ಅದ್ಭುತವಾಗಿ ಮೂಡಿಬಂದಿದೆ. ಆ ನಾ ನಿನ್ನ ಮರೆಯಲಾರೆ ವಿಡಿಯೋವನ್ನೇ ಟ್ವೀಟ್ ಮಾಡುವ ಮೂಲಕ ಜಾವಾ ಮತ್ತೆ ಬರುತ್ತಿರುವುದನ್ನು ಜಗತ್ತಿಗೆ ಸಾರಿದೆ.

 • ಅಣ್ಣಾವ್ರಿಗೆ ಭಾರತರತ್ನ ಸಿಗಲಿ - ಸಿಎಂಗೆ ಅಭಿಮಾನಿ ದೇವರುಗಳ ಮನವಿ

  Dr Rajkumar Image

  ಡಾ.ರಾಜ್‍ಕುಮಾರ್, ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗ ಕಂಡ ಮೇರುನಟರಲ್ಲಿ ಒಬ್ಬರು. ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪುರಸ್ಕøತರಾಗಿರುವ ರಾಜ್, ಪದ್ಮಭೂಷಣ ಪುರಸ್ಕøತರೂ ಹೌದು. ಈಗ ಡಾ.ರಾಜ್ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿಗೆ ಶಿಫಾರಸು ಮಾಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ ಅಭಿಮಾನಿಗಳು.

  ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಮತ್ತು ರಾಜರತ್ನ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

  ಅಷ್ಟೇ ಅಲ್ಲ, ಡಾ.ಶಿವರಾಜ್ ಕುಮಾರ್ ಅವರ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುವಂತೆಯೇ ಮನವಿ ಮಾಡಿದ್ದಾರೆ.

 • ಅಣ್ಣಾವ್ರು.. ಅಂಬರೀಷ್.. ವೆಂಕಟೇಶ್ ಪ್ರಸಾದ್.. ಐಪಿಎಲ್..!!!

  crickter venkatesh prasad sings kannada kannada

  ಅಣ್ಣಾವ್ರು.. ಅಂಬರೀಷ್.. ವೆಂಕಟೇಶ್ ಪ್ರಸಾದ್.. ಐಪಿಎಲ್.. ಇವುಗಳಿಗೆ ಎತ್ತಣಿಂದೆತ್ತಣ ಸಂಬಂಧವಯ್ಯಾ ಎನ್ನುತ್ತೀರಾ..? ವೆಂಕಟೇಶ್ ಪ್ರಸಾದ್ ಎಂದರೆ, ಅವರು ಪಾಕಿಸ್ತಾನದ ವಿರುದ್ಧ ರೊಚ್ಚಿನಿಂದ ಬೌಲಿಂಗ್ ಮಾಡುತ್ತಿದ್ದ ದಿನಗಳು, ಬೌಂಡರಿ ಹೊಡೆದು ಕೆಣಕಿದ್ದ ಅಮೀರ್ ಸೋಹೈಲ್‍ಗೆ ಬೆರಳು ತೋರಿಸಿ ಪೆವಿಲಿಯನ್‍ಗೆ ಅಟ್ಟಿದ್ದ ಕ್ಷಣಗಳು ನೆನಪಾಗುತ್ತವೆ. ಸದ್ಯಕ್ಕೆ ವೆಂಕಿ, ಐಪಿಎಲ್‍ನಲ್ಲಿ ವೀಕ್ಷಣೆ ವಿವರಣೆಗಾರ.

  ಹೀಗೆ ಕಾಮೆಂಟರಿ ನೀಡುವಾಗ ಹೃದಯ ಹಾಡಿತು ಚಿತ್ರದ ನಲಿಯುತಾ ಹೃದಯ ಹಾಡನು ಹಾಡಿದೆ ಎಂಬ ಹಾಡು ಕೇಳಿಸಿದೆ. ಕಾಮೆಂಟ್ರಿ ಬಾಕ್ಸ್‍ನಲ್ಲಿ ಕುಳಿತುಕೊಂಡೇ ಅಣ್ಣಾವ್ರ ಹಾಡಿನ ಜೊತೆ ಜೊತೆಯಲ್ಲೇ ಹಾಡು ಹಾಡಿ, ಕ್ರಿಕೆಟ್ ನೋಡುತ್ತಿದ್ದ ಸಮಸ್ತ ಕನ್ನಡಿಗರ ಹೃದಯ ಕದ್ದಿದ್ದಾರೆ ವೆಂಕಟೇಶ್ ಪ್ರಸಾದ್.

  ಅಂದಹಾಗೆ ಈ ಹಾಡನ್ನು ಹಾಡಿದವರು ಡಾ.ರಾಜ್. ಅದು ಅಂಬರೀಷ್ ಅವರಿಗಾಗಿ, ಅವರ ಮೇಲಿನ ಪ್ರೀತಿಗಾಗಿ ಹಾಡಿದ್ದ ಹಾಡು. ಈಗ ಗೊತ್ತಾಯ್ತಲ್ಲ.. ಅಣ್ಣಾವ್ರು.. ಅಂಬರೀಷ್.. ವೆಂಕಟೇಶ್ ಪ್ರಸಾದ್.. ಐಪಿಎಲ್..!!! ಹೆಡ್‍ಲೈನ್ ಯಾಕೆ ಅಂತಾ..

 • ಅಪ್ಪು-ಶಿವಣ್ಣ ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. ಗೊತ್ತಾ..?

  shiva mecchidha kannappa movie image

  ಶಿವರಾಜ್ ಕುಮಾರ್ ಮತ್ತು ಶಿವಣ್ಣ ಒಟ್ಟಿಗೇ ನಟಿಸಬೇಕು, ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕು ಅನ್ನೋದು ಅಭಿಮಾನಿ ದೇವರುಗಳ ಬಯಕೆ. ನಿರೀಕ್ಷೆ. ಹಾರೈಕೆ..ಎಲ್ಲ. ಶಿವರಾಜ್‍ಕುಮಾರ್ ಮತ್ತು ಪುನೀತ್ ಇಬ್ಬರೂ ಒಟ್ಟಿಗೇ ನಟಿಸುವ ಚಿತ್ರ ಯಾವುದು..? ಯಾವಾಗ..? ಎಂಬ ನಿರೀಕ್ಷೆಗಳ ನಡುವೆಯೇ ಒಂದು ಇಂಟ್ರೆಸ್ಟಿಂಗ್ ಮಾಹಿತಿ ನಿಮಗಾಗಿ.

  ಶಿವರಾಜ್ ಕುಮಾರ್ ಹಾಗೂ ಪುನೀತ್ ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರದಲ್ಲಿ ಅಣ್ಣಾವ್ರು ಕೂಡಾ ಇದ್ದಾರೆ. ಅದು ಶಿವ ಮೆಚ್ಚಿದ ಕಣ್ಣಪ್ಪ ಚಿತ್ರ.

  ಬೇಡರ ಕಣ್ಣಪ್ಪ, ಡಾ.ರಾಜ್ ಎಂಬ ಅನಘ್ರ್ಯ ರತ್ನವನ್ನು ಕನ್ನಡ ಚಿತ್ರರಂಗಕ್ಕೆ ದಯಪಾಲಿಸಿತ್ತು. ಅದೇ ಕಥೆಯನ್ನಿಟ್ಟುಕೊಂಡು 1988ರಲ್ಲಿ ತೆರೆಗೆ ಬಂದಿದ್ದ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಈಶ್ವರನ ಪಾತ್ರದಲ್ಲಿ ನಟಿಸಿದ್ದರೆ, ಶಿವರಾಜ್ ಕುಮಾರ್ ಕಣ್ಣಪ್ಪನಾಗಿ ನಟಿಸಿದ್ದರು. ಆ ಚಿತ್ರದಲ್ಲಿ ಬಾಲಕ ಕಣ್ಣಪ್ಪನಾಗಿ ನಟಿಸಿದ್ದವರು ಪುನೀತ್ ರಾಜ್‍ಕುಮಾರ್. 

  ಮೂರು ರತ್ನಗಳು ಒಟ್ಟಿಗೇ ಸೇರಿದ್ದ ಆ ಚಿತ್ರದಲ್ಲಿ ಅಭಿಮಾನಿಗಳ ಬೇಡಿಕೆ ಭಾಗಶಃ ಈಡೇರಿತ್ತು. ಆದರೆ, ಅಭಿಮಾನಿಗಳ ಬೇಡಿಕೆ ಅಷ್ಟಕ್ಕೇ ಸುಮ್ಮನಾಗುವುದಿಲ್ಲವಲ್ಲ. ಆ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. 

 • ಅಭಿಮಾನಿ ದೇವರುಗಳಿಂದ ಅಣ್ಣಾವ್ರ ಸ್ಮರಣೆ : ರಾಜ್ ಪುತ್ರರ ಪ್ರತ್ಯೇಕ ಪೂಜೆ

  fans follow lockdown rules amidst dr rajkumar

  ಡಾ.ರಾಜ್ ಕುಮಾರ್ ಅವರು ಅಗಲಿ 14 ವರ್ಷ. ಏಪ್ರಿಲ್ 12ಕ್ಕೆ 14ನೇ ಪುಣ್ಯತಿಥಿ. ಈ ಬಾರಿ ಕೊರೋನಾ ಎಫೆಕ್ಟ್‍ನಿಂದಾಗಿ ಅಭಿಮಾನಿಗಳು ಸಮಾಧಿ ಬಳಿ ಬರೋಕೆ ಆಗಲಿಲ್ಲ. ಆದರೂ ಅಭಿಮಾನಿ ದೇವರುಗಳು ಬಿಡಲಿಲ್ಲ. ಸ್ಮಾರಕದ ಬಳಿ ಗೇಟ್‍ಗೆ ಬೀಗ ಹಾಕಿದ್ದರೂ, ಗೇಟ್‍ಗೇ ಪೂಜೆ ಸಲ್ಲಿಸಿ ಅಣ್ಣಾವ್ರನ್ನು ಸ್ಮರಿಸಿದರು. ಕಡಿಮೆ ಸಂಖ್ಯೆಯಲ್ಲಿ ಮಾಸ್ಕ್ ಧರಿಸಿಕೊಂಡು ಸುರಕ್ಷಾ ಕ್ರಮಗಳನ್ನು ಅನುಸರಿಸಿಕೊಂಡೇ ಸಮಾಧಿಗೆ ಭೇಟಿ ಕೊಟ್ಟರು.

  ಇನ್ನು ಡಾ.ರಾಜ್ ಪುತ್ರರು ಈ ಬಾರಿ ಪ್ರತ್ಯೇಕವಾಗಿ, ಸುದ್ದಿಯನ್ನು ಬಹಿರಂಗ ಮಾಡದೇ ಬಂದು ಹೋಗಿದ್ದು ವಿಶೇಷ. ಶಿವಣ್ಣ, ಪುನೀತ್ ಮತ್ತು ರಾಘವೇಂದ್ರ ರಾಜ್‍ಕುಮಾರ್ ಮೂವರೂ ಪ್ರತ್ಯೇಕವಾಗಿ ಕುಟುಂಬ ಸಮೇತರಾಗಿ ಮುಂಜಾನೆಗೂ ಮೊದಲು ಹೋಗಿ ಪೂಜೆ ಸಲ್ಲಿಸಿ ವಾಪಸ್ ಆದರು. ಸುದ್ದಿ ಬಹಿರಂಗವಾದರೆ ಅಭಿಮಾನಿಗಳು ಮುತ್ತಿಕೊಂಡು ಕೋವಿಡ್ 19 ಲೌಕ್ ಡೌನ್ ಉಲ್ಲಂಘನೆಯಾದೀತು ಎಂಬ ಕಾರಣದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರು.

 • ಅಮೆರಿಕ ರೆಸ್ಟೊರೆಂಟ್‍ನಲ್ಲಿ ಅಣ್ಣಾವ್ರ ಫೋಟೋ

  rajkumar's photo in american resto

  ಕನ್ನಡ ಕಂಠೀರವ ಎಂದೇ ಅಭಿಮಾನಿಗಳಿಂದ ಕರೆಸಿಕೊಂಡ ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಖ್ಯೆ ದೊಡ್ಡದು. ಅದು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಹಬ್ಬಿದೆ. ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿರುವ ರೆಸ್ಟೊರೆಂಟ್ ಒಂದರಲ್ಲಿ ಅಣ್ಣಾವ್ರ ಫೋಟೋ ಹಾಕಲಾಗಿದೆ. 

  ಈ ಫೋಟೋವನ್ನು ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಹಾಕಿಕೊಂಡಿರುವುದು ಧೀರನ್ ರಾಮ್‍ಕುಮಾರ್. ರಾಜ್ ಅವರ ಮೊಮ್ಮಗ. ರಾಮ್ ಕುಮಾರ್ ಅವರ ಪುತ್ರ. ಅವರಿಗೆ ಅವರ ಮಿತ್ರ ಹರೀಶ್ ಎಂಬುವವರು ಈ ಫೋಟೋ ಕಳಿಸಿದ್ದರಂತೆ. 

  ಅಣ್ಣಾವ್ರ ಟ್ರೇಡ್‍ಮಾರ್ಕ್ ನಗು ಎಂದು ಬರೆದುಕೊಂಡು ತಾತನ ಈ ಫೋಟೋವನ್ನು ಖುಷಿಯಿಂದ ಷೇರ್ ಮಾಡಿಕೊಂಡಿದ್ದಾರೆ ಧೀರನ್ ರಾಮ್‍ಕುಮಾರ್.

 • ಅಮೆರಿಕಾ ಅಮೆರಿಕಾ ನಟಿ ಹೇಮಾ ಕಾಲಿಗೆ ನಮಸ್ಕರಿಸಿದ್ದ ಡಾ.ರಾಜ್

  hema panchamukhi shares her working experience with dr rajkuamr

  ಡಾ.ರಾಜ್ ಕುಮಾರ್ ಎಂದರೆ ಪ್ರತಿಯೊಬ್ಬ ಕಲಾವಿದರೂ ಭಯಭಕ್ತಿಯಿಂದ ನಮಸ್ಕರಿಸುತ್ತಾರೆ. ಅಂತಹ ಕಲಾವಿದ ಅಗ ತಾನೇ ಬೆಳಕಿಗೆ ಬರುತ್ತಿದ್ದ ಕಲಾವಿದೆಯ ಕಾಲಿಗೆ ನಮಸ್ಕರಿಸಿದರು ಎಂದರೆ.. ಇಂಥಾದ್ದೊಂದು ಅನುಭವ ಪಡೆದುಕೊಂಡಿರೋದು ಹೇಮಾ ಪಂಚಮುಖಿ.

  `ನಮ್ಮ ಕುಟುಂಬಕ್ಕೂ ರಾಜ್ ಕುಟುಂಬಕ್ಕೂ ಬಹು ಕಾಲದ ಪರಿಚಯ. ನನ್ನ ನೃತ್ಯಾಭ್ಯಾಸದ ಬಗ್ಗೆ ರಾಜ್ ಅವರಿಗೆ ವಿಶೇಷ ಕಾಳಜಿಯೂ ಇತ್ತು. ಹೀಗಾಗಿಯೇ ಜೀವನ ಚೈತ್ರ ಚಿತ್ರದಲ್ಲಿ ನನಗೊಂದು ಪುಟ್ಟ ಪಾತ್ರ ನಿರ್ವಹಿಸಲು ಕೇಳಿದರು. ಚಿತ್ರದಲ್ಲಿ ಬರುವ ನಾದಮಯ ಹಾಡಿನಲ್ಲಿ.. ಡಾ.ರಾಜ್ ಮುಗಿಲಿನಲ್ಲಿ ಕಲ್ಪಿಸಿಕೊಳ್ಳುವ ಸರಸ್ವತಿ ಇದ್ದಾಳಲ್ಲ.. ಅದು ನಾನು. ಮೇಕಪ್ ಹಾಕಿಕೊಂಡು ಬಂದ ನನ್ನನ್ನು ನೋಡಿ ರಾಜ್‍ಕುಮಾರ್ ತಕ್ಷಣ ನನ್ನ ಕಾಲುಮುಟ್ಟಿ ನಮಸ್ಕರಿಸಿದರು. ನಾನು ನಡುಗಿ ಹೋಗಿದ್ದೆ. ತಕ್ಷಣ ನಾನೂ ಅವರ ಕಾಲುಮುಟ್ಟಿ ನಮಸ್ಕರಿಸಿದೆ' ಎಂದು ನೆನಪಿಸಿಕೊಂಡಿದ್ದಾರೆ ಹೇಮಾ.

  ಅದಕ್ಕೆ ಕಾರಣವಾಗಿದ್ದುದು ಇಷ್ಟೆ, ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತಿದ್ದ ಡಾ.ರಾಜ್ ಕುಮಾರ್ ಕಣ್ಣಿಗೆ ಹೇಮಾ ಪಂಚಮುಖಿ ಸಾಕ್ಷಾತ್ ಸರಸ್ವತಿಯೇ ಆಗಿ ಕಂಡಿದ್ದಾರೆ. ಆದರೆ, ತಿರುಗಿ ತಮ್ಮ ಕಾಲಿಗೆ ನಮಸ್ಕರಿಸಿದ ಹೇಮಾರನ್ನು ರಾಜ್ ಹಾಗೆಲ್ಲ ನನ್ನ ಕಾಲಿಗೆ ನಮಸ್ಕರಿಸಬಾರದು. ನೀನು ಸರಸ್ವತಿ ಎಂದಿದ್ದರಂತೆ.

  ಇಂಥದ್ದೇ ಅನುಭವ ಕವಿರತ್ನ ಕಾಳಿದಾಸ ಚಿತ್ರದಲ್ಲೂ ಎದುರಾಗಿತ್ತು. ಆ ಚಿತ್ರದಲ್ಲಿ ಬರುವ ಕಾಳಿಕಾದೇವಿಗೆ ರಾಜ್ ಪಾದಮುಟ್ಟಿ ನಮಸ್ಕರಿಸುವ ದೃಶ್ಯ ಇದೆಯಲ್ಲ, ಆ ದೃಶ್ಯವನ್ನು ಮಾಡಿದ್ದ ಕಲಾವಿದೆಯ ಹೆಸರು ನಳಿನಿ. ರಾಜ್ ತಮ್ಮ ಮಗಳ ಕಾಲಿಗೆ ನಮಸ್ಕರಿಸುವ ದೃಶ್ಯ ಬೇಡವೇ ಬೇಡ ಎಂದು ನಳಿನಿಯ ತಂದೆ ತಾಯಿ ಹಠ ಹಿಡಿದಿದ್ದರಂತೆ. ಆಕೆಯ ಪಾದಕ್ಕೆ ನಮಸ್ಕರಿಸುವುದು ರಾಜಕುಮಾರ ಅಲ್ಲ, ಕಾಳಿದಾಸ. ಆಕೆ ನಳಿನಿಯೂ ಅಲ್ಲ, ಕಾಳಿಮಾತೆ ಎಂದು ನಳಿನಿ ಹೆತ್ತವರನ್ನು ಸಮಾಧಾನಿಸಿದ್ದರಂತೆ ಡಾ.ರಾಜ್. ಅಂತಹುದೇ ಅನುಭವವನ್ನು ಹೇಮಾ ಪಂಚಮುಖಿ ಹಂಚಿಕೊಂಡಿದ್ದಾರೆ.

 • ಎಂಎಲ್ಎ ಹ್ಯಾರಿಸ್ ಡಾ.ರಾಜ್ ಬಗ್ಗೆ ಕೇವಲವಾಗಿ ಮಾತನಾಡಿದ್ರಾ..?

  ಎಂಎಲ್ಎ ಹ್ಯಾರಿಸ್ ಡಾ.ರಾಜ್ ಬಗ್ಗೆ ಕೇವಲವಾಗಿ ಮಾತನಾಡಿದ್ರಾ..?

  ಇಲ್ಲ.. ಇಲ್ಲ.. ನಾನು ರಾಜ್ ಕುಮಾರ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ನಾನು ಡಾ.ರಾಜ್ ಅಭಿಮಾನಿ. ಯಾರೋ  ನನ್ನ ಬಗ್ಗೆ ಸುಮ್ಮನೆ ಕಟ್ ಅಂಡ್ ಪೇಸ್ಟ್ ಮಾಡಿ ಹಾಕುತ್ತಿದ್ದಾರೆ. Sorry ಸಹೋದರರೆ ದಯವಿಟ್ಟು ಹೀಗೆಲ್ಲ ಮಾಡಬೇಡಿ ಹೀಗೆಂದು ಮನವಿ ಮಾಡಿರೋದು ಶಾಸಕ ಹ್ಯಾರಿಸ್.

  ಡಾ ರಾಜ್ ಕುಮಾರ್ ಪರವಾಗಿ ಏನು ಬೇಕಾದರೂ ಮಾಡಲು ನಾನು ತಯಾರಿದ್ದೇನೆ. ಸ್ಟ್ಯಾಚ್ಯೂ ಇಟ್ಟು ಯಾರಾದ್ರೂ ಕವರ್ ಮಾಡ್ತಾರಾ.?..ಪ್ರತಿಮೆ ಇಟ್ಟು ಮುಚ್ಚೋದು ಸರಿಯಲ್ಲ..ಕವರ್ ಮಾಡೋದು ಸರಿಯಲ್ಲ ಅಂತ ಅಷ್ಟೇ ನಾನು ಹೇಳಿದ್ದು ಎಂದಿದ್ದಾರೆ ಹ್ಯಾರಿಸ್.

   

  ಹ್ಯಾರಿಸ್ ಈ ಸ್ಪಷ್ಟನೆ ಕೊಡಲು ಕಾರಣವಾಗಿದ್ದು ಒಂದು ವಿಡಿಯೋ. ದೊಮ್ಮಲೂರಿನಲ್ಲಿ ಡಾ.ರಾಜ್ ಪ್ರತಿಮೆಯನ್ನು ಕವರ್ ಹಾಕಿ ಮುಚ್ಚಲಾಗಿತ್ತು. ಕಾರಣವೂ ಇತ್ತು. ಅಲ್ಲಿಯೇ ಅಂಬೇಡ್ಕರ್ ಮತ್ತು ಕೆಂಪೇಗೌಡ ಪ್ರತಿಮೆ ಕೆಲಸ ನಡೆಯುತ್ತಿದೆ. ಅದರ ದೂಳು ಬೀಳದಂತೆ ಮುಚ್ಚಲಾಗಿದೆ.

  ಇದರ ವೀಕ್ಷಣೆಗೆ ಹೋಗಿದ್ದಾಗ ಹ್ಯಾರಿಸ್, ಅವರಿಗೆ ಸ್ಟ್ಯಾಚ್ಯೂ ಇಡೋದೇ ದೊಡ್ಡದು. ಇನ್ನು ಆಫೀಸ್ ಬೇರೆ ಮಾಡಿಕೊಡೋಕೆ ಆಗುತ್ತಾ..? ಏನೂ ಆಗಲ್ಲ. ಓಪನ್ ಮಾಡಿ ಇಡಿ. ಪ್ರೊಟೆಕ್ಷನ್ ಏನಾದರೂ ಬೇಕಿದ್ದರೆ, ಅವರ ಮನೆಯಲ್ಲೇ ಇಟ್ಟುಕೊಳ್ಳಲಿ ಎಂದಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

  ಇದಕ್ಕೆ ಡಾ.ರಾಜ್ ಅಭಿಮಾನಿಗಳು ಕೆರಳಿದ್ದರು. ಜೊತೆಗೆ ಹ್ಯಾರಿಸ್ ಪುತ್ರ ನಲಪಾಡ್ ಗಲಾಟೆಯೂ ನೆನಪಾಗಿತ್ತು. ಹೀಗಾಗಿ ಹ್ಯಾರಿಸ್ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ, ಹ್ಯಾರಿಸ್ ಈ ಸ್ಪಷ್ಟನೆ ಕೊಟ್ಟಿದ್ದಾರೆ.

 • ಐಎಎಸ್‍ನಲ್ಲಿ ಅಣ್ಣಾವ್ರ ಅಕಾಡೆಮಿ ಸಾಧನೆ ಗೊತ್ತಾಯ್ತಾ..?

  proud moment for dr rajkumar academy

  ಮೊನ್ನೆಯಷ್ಟೇ ಐಎಎಸ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ರಾಜ್ಯದಿಂದ 28 ಜನ ಐಎಎಸ್‍ಗೆ ಆಯ್ಕೆಯಾಗಿದ್ದಾರೆ. ಈ 28 ಜನರ ಪೈಕಿ ಅರ್ಧಕ್ಕಿಂತಲೂ ಹೆಚ್ಚಿನ ಮಂದಿ ಡಾ.ರಾಜ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು ಎನ್ನುವುದು ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರ.

  ಡಾ.ರಾಜ್‍ಕುಮಾರ್ ಅವರ ಮೊಮ್ಮಗ ಯುವರಾಜ್‍ಕುಮಾರ್ (ರಾಘವೇಂದ್ರ ರಾಜ್‍ಕುಮಾರ್ ಅವರ 2ನೇ ಪುತ್ರ) ಡಾ.ರಾಜ್‍ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ ನಡೆಸುತ್ತಿದ್ದಾರೆ. ಐಎಎಸ್ ಪ್ರಿಲಿಮಿನರಿ ಪಾಸ್ ಆದವರಿಗೆ ಅಂತಿಮ ಪರೀಕ್ಷೆಗೆ ಸಿದ್ಧಗೊಳಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತೆ. ಕಳೆದ ವರ್ಷವಷ್ಟೇ ಶುರುವಾದ ಈ ಅಕಾಡೆಮಿ, ಮೊದಲ ವರ್ಷದಲ್ಲಿಯೇ ಅದ್ಭುತ ಸಾಧನೆಗೂ ಪಾತ್ರವಾಗಿದೆ. ಅಂದಹಾಗೆ ಅದು ಉಚಿತ.

  ಹೀಗೆ ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಐಎಎಸ್‍ನಲ್ಲಿ ಕನ್ನಡಿಗರ ಕೊರತೆ ನೀಗಿಸಲು ಹೊರಟಿರುವ ಡಾ.ರಾಜ್ ಸಂಸ್ಥೆ, ಈ ನಿಟ್ಟಿನಲ್ಲಿ ಮೊದಲ ಪ್ರಯತ್ನದಲ್ಲಿಯೇ ಅಭೂತಪೂರ್ವ ಸಾಧನೆ ಮೆರೆದಿರುವುದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ವಿಚಾರವೇ ಸರಿ.

  ಅದು ನನಗಿಂತ ಹೆಚ್ಚಾಗಿ ನನ್ನ ಮಗನ ಕನಸು. ಮಗ ಗುರು(ಯುವರಾಜ್‍ಕುಮಾರ್) ಒಮ್ಮೆ ಬಂದು ಐಎಎಸ್ ಅಕಾಡೆಮಿಯ ಕನಸು ಹೇಳಿಕೊಂಡ. ನಮಗೂ ಕನ್ನಡದಲ್ಲಿ ಐಎಎಸ್ ಅಧಿಕಾರಿಗಳ ಕೊರತೆ ಇದೆ ಅನ್ನಿಸ್ತಾ ಇತ್ತು. ಒಮ್ಮೆ ದೆಹಲಿಯ ತರಬೇತಿ ಕೇಂದ್ರಕ್ಕೆ ಹೋದಾಗ, ಅಲ್ಲಿಯೂ ಇದೇ ರೀತಿಯ ಬೇಡಿಕೆ ಬಂತು. ಕರ್ನಾಟಕದಲ್ಲಿ ಐಎಎಸ್ ತರಬೇತಿ ಕೊಡುವ ಅಕಾಡೆಮಿಗಳಿಲ್ಲ. ದೆಹಲಿಗೇ ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಗೊತ್ತಾಯ್ತು. ಆಗ ಶುರುಮಾಡಿದ ಸಂಸ್ಥೆ ಇದು. ನನ್ನ ಮಗನಿಗೆ ಆತನ ಸ್ನೇಹಿತೆಯಿಂದಲೂ ಉತ್ತಮ ಬೆಂಬಲ ಸಿಕ್ಕಿತು. ಅದು ಈಗ ಫಲ ಕೊಡುತ್ತಿದೆ ಎಂದು ಖುಷಿಯಾಗಿದ್ದಾರೆ ರಾಘವೇಂದ್ರ ರಾಜ್‍ಕುಮಾರ್.

  Related Articles :-

  CM Inagurate Rajkumar Civli service Academy

  Dr Rajkumar Academy For IAS Aspirants 

 • ಕಥೆ ಕೇಳಿದಾಗ ಅಪ್ಪುಗೆ ನೆನಪಾಗಿದ್ದೇ ಆ ಇಬ್ಬರು..!

  puneeth remembered rajkumar and amabreesh when he heard natasarvabhouma script

  ನಟಸಾರ್ವಭೌಮ ಚಿತ್ರದ ಕಥೆ ಕೇಳಿದಾಗ ಥ್ರಿಲ್ಲಾದೆ. ಜರ್ನಲಿಸ್ಟ್ ಪಾತ್ರ ನನಗೂ ಹೊಸದು. ಹೀಗಾಗಿ ಕ್ಯೂರಿಯಾಸಿಟಿ ಶುರುವಾಯ್ತು. ಜೊತೆಗೆ ಹಾರರ್ ಎಲಿಮೆಂಟ್ಸ್ ಇವೆ ಎಂದಾಗ ಇನ್ನಷ್ಟು ಕುತೂಹಲ ಹುಟ್ಟಿತು... ಎಂದು ಕಥೆ ಕೇಳಿದಾಗಿನ ಅನುಭವ ಹೇಳಿಕೊಂಡಿದ್ದಾರೆ ಪುನೀತ್.

  ಅಂದಹಾಗೆ ಕನ್ನಡದಲ್ಲಿ ಜರ್ನಲಿಸ್ಟ್ ಪಾತ್ರಗಳನ್ನು ಹಲವರು ಮಾಡಿದ್ದಾರೆ. ಆದರೆ, ಇವತ್ತಿಗೂ ಕನ್ನಡ ಸಿನಿಮಾಗಳಲ್ಲಿ ಜರ್ನಲಿಸ್ಟ್ ಪಾತ್ರ ಎಂದರೆ ತಕ್ಷಣ ನೆನಪಿಗೆ ಬರುವ 2 ಚಿತ್ರಗಳು ಜ್ವಾಲಾಮುಖಿ ಮತ್ತು ನ್ಯೂ ಡೆಲ್ಲಿ.

  `ನನಗೂ ಅಷ್ಟೆ, ಕಥೆ ಕೇಳಿದ ತಕ್ಷಣ ಅಪ್ಪಾಜಿಯ ಜ್ವಾಲಾಮುಖಿ ಸಿನಿಮಾ ಮತ್ತು ಅಂಬರೀಷ್ ಅಂಕಲ್ ಅಭಿನಯದ ನ್ಯೂ ಡೆಲ್ಲಿ ಸಿನಿಮಾ ನೆನಪಾಯ್ತು. ಆದರೆ, ಇದು ಅಂತಹ ಪಾತ್ರ ಅಲ್ಲ. ನಾನಿಲ್ಲಿ ಫೋಟೋ ಜರ್ನಲಿಸ್ಟ್ ಎಂದಿದ್ದಾರೆ ಪುನೀತ್.

 • ಕಿಚ್ಚನಿಗಿಂತ ಮೊದಲ ಪೈಲ್ವಾನ್ ಡಾ.ರಾಜ್

  sudeep's pailwan reminds dr rajkumar's roles

  ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಪೈಲ್ವಾನ್ ಆಗಿ ನಟಿಸಿದ್ದಾರೆ. ಸಿನಿಮಾ ರಿಲೀಸ್ ಆಗಿದೆ. ಭರ್ಜರಿ ಹಿಟ್ ಆಗುವತ್ತ ದೊಡ್ಡ ಹೆಜ್ಜೆಯಿಟ್ಟಿದೆ. ಕನ್ನಡದಲ್ಲಿ ಕ್ರೀಡೆಯನ್ನೇ ಆಧರಿಸಿದ ಸಿನಿಮಾಗಳು ಅಪರೂಪದಲ್ಲಿ ಅಪರೂಪ. ಅದರಲ್ಲೂ ಕುಸ್ತಿ ಇದೆಯಲ್ಲ. ಈ ಆಟಕ್ಕೆ ಕೈ ಹಾಕಿದವರ ಸಂಖ್ಯೆ ಬಹಳ ಕಡಿಮೆ.

  ಆದರೆ ಆಡು ಮುಟ್ಟದ ಸೊಪ್ಪಿಲ್ಲ.. ರಾಜ್ ಮಾಡದ ಪಾತ್ರವಿಲ್ಲ ಎಂಬ ಹಾಗೆ, ಪೈಲ್ವಾನನಾಗಿಯೂ ಕಂಗೊಳಿಸಿರುವ ಹಿರಿಮೆ ಅಣ್ಣಾವ್ರಿಗಿದೆ.

  ಡಾ.ರಾಜ್ ಹಲವು ಚಿತ್ರಗಳಲ್ಲಿ ಕುಸ್ತಿ ಪಟುವಾಗಿ, ಜಟ್ಟಿಯಾಗಿ ನಟಿಸಿದ್ದಾರೆ. ಕನ್ನಡ ಚಿತ್ರರಂಗವನ್ನು ಕರ್ನಾಟಕಕ್ಕೆ ತರುವ ಸಲುವಾಗಿ ಅತಿ ದೊಡ್ಡ ಸಾಹಸಕ್ಕೆ ಕೈ ಹಾಕಿ ನಿರ್ಮಿಸಿದ್ದ ರಣಧೀರ ಕಂಠೀರವ ಚಿತ್ರದಲ್ಲಿಯೇ ಡಾ.ರಾಜ್ ಕುಸ್ತಿ ಮಾಡಿ ಗೆಲ್ಲುತ್ತಾರೆ. ಮಯೂರ ಚಿತ್ರದಲ್ಲಿ ರಾಜ್ ಎಂಟ್ರಿಯೇ ಕುಸ್ತಿ ಅಖಾಡದಲ್ಲಿ. ರಾಜ್ ಎದುರು ಲಂಗೋಟಿಯಲ್ಲಿ ಕುಸ್ತಿ ಆಡುವುದು ಟೈಗರ್ ಪ್ರಭಾಕರ್. ಶ್ರೀಕೃಷ್ಣದೇವರಾಯ ಚಿತ್ರದಲ್ಲೂ ಕುಸ್ತಿ ಪಟುವಾಗಿ ಗಮನ ಸೆಳೆಯುವ ರಾಜ್‍ಕುಮಾರ್ ಪೈಲ್ವಾನನಂತೆಯೇ ದೇಹದಾಢ್ರ್ಯ ಹೊಂದಿದ್ದರು. ಅದರಲ್ಲಿಯೂ ರಣಧೀರ ಕಂಠೀರವ ಚಿತ್ರದಲ್ಲಿ ರಾಜ್ ಅವರ ದೇಹ ಸೌಷ್ಟವ ಅದ್ಭುತವಾಗಿತ್ತು.

  ಈಗ ಪೈಲ್ವಾನ್ ರೂಪದಲ್ಲಿ ಸುದೀಪ್ ಕುಸ್ತಿ ಪಟುವಾಗಿ, ಬಾಕ್ಸರ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅಭಿಮಾನಿಗಳು ಅಣ್ಣಾವ್ರ ಆ ಕುಸ್ತಿ ಪಟ್ಟುಗಳನ್ನು ನೆನಪಿಸಿಕೊಂಡೇ ಕಿಚ್ಚನಿಗೆ ಜೈಜೈಜೈ ಎಂದಿದ್ದಾರೆ. ಪೈಲ್ವಾನ್ ಸೃಷ್ಟಿಕರ್ತ ಕೃಷ್ಣಗೆ ಮತ್ತೊಮ್ಮೆ ಗೆದ್ದ ಖುಷಿ. ಸ್ವಪ್ನಾ ಕೃಷ್ಣ ಅವರಿಗೆ ಮೊದಲ ಪ್ರಯತ್ನದಲ್ಲೇ ದಿಗ್ವಿಜಯ ಸಾಧಿಸಿದ ಸಂಭ್ರಮ.

 • ಗಾಜನೂರಿನಲ್ಲಿ ಪರಶುರಾಮ್ ಆದ ರಾಘವೇಂದ್ರ ರಾಜಕುಮಾರ್

  ಗಾಜನೂರಿನಲ್ಲಿ ಪರಶುರಾಮ್ ಆದ ರಾಘವೇಂದ್ರ ರಾಜಕುಮಾರ್

  ಗಾಜನೂರು ಎಂದರೆ ಥಟ್ಟನೆ ನೆನಪಾಗೋದು ಅಣ್ಣಾವ್ರು. ಗಾಜನೂರು ಕನ್ನಡಿಗರಿಗೆ ಡಾ.ರಾಜ್ ಎಂಬ ವರನಟನನ್ನ ಕೊಟ್ಟ ಊರು. ಈ ಊರಿನಲ್ಲಿ ಇದುವರೆಗೆ ಅಣ್ಣಾವ್ರ ಕೆಲವು ಚಿತ್ರಗಳ ಕೆಲವು ದೃಶ್ಯಗಳ ಚಿತ್ರೀಕರಣವಾಗಿದೆಯೇ ಹೊರತು, ಮುಹೂರ್ತ, ಇಡೀ ಸಿನಿಮಾ ಚಿತ್ರೀಕರಣ ಮುಂತಾದುವೆಲ್ಲ ನಡೆದಿಲ್ಲ. ಅದನ್ನು ಮಾಡಿರೋದು ಖಡಕ್ ಹಳ್ಳಿ ಹುಡುಗರು ಚಿತ್ರತಂಡ.

  ಗಾಜನೂರಿನಲ್ಲಿಯೇ ಚಿತ್ರದ ಮುಹೂರ್ತ ಮಾಡಿ ಶೂಟಿಂಗ್ ಶುರು ಮಾಡಿದೆ ಖಡಕ್ ಹಳ್ಳಿ ಹುಡುಗರ ಟೀಂ. ಕ್ಯಾಮೆರಾ ಆನ್ ಮಾಡಿ ಶುಭ ಕೋರಿರುವುದು ಡಾ.ರಾಜ್ ಅವರ ತಂಗಿ ನಾಗಮ್ಮ ಮತ್ತು ಮಂಗಳಾ ರಾಘವೇಂದ್ರ ರಾಜಕುಮಾರ್. ಎಂ.ಯು.ಪ್ರಸನ್ನ ಹಳ್ಳಿ ನಿರ್ದೇಶನದ ಸಿನಿಮಾ ಖಡಕ್ ಹಳ್ಳಿ ಹುಡುಗರು. ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ರಾಜೀವ್ ರಾಥೋಡ್, ಪ್ರಭಾಸ್ ರಾಜ್, ಪ್ರಭು ನಾಯಕರಾಗಿದ್ದಾರೆ.  ಯುಕ್ತಾ ಮಲ್ನಾಡ್, ದೀಪು ವಿಜಯ, ಚಂದ್ರಪ್ರಭಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ದಾರಿ ತಪ್ಪುವ ಹಳ್ಳಿ ಹುಡುಗರಿಗೆ ಗೈಡ್ ಮಾಡುವ, ಅವರನ್ನು ಮತ್ತೆ ಸರಿದಾರಿಗೆ ತರುವ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಹಿರಿಯನ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ನಟಿಸುತ್ತಿದ್ದಾರೆ. ಅಂದಹಾಗೆ ರಾಘಣ್ಣನ ಪಾತ್ರದ ಹೆಸರು ಪರಶುರಾಮ್.

 • ಗೀತಾ ಶಿವ ರಾಜ್ ಕುಮಾರ್ ಕಾಂಗ್ರೆಸ್ ಸೇರ್ತಾರಾ..?

  ಗೀತಾ ಶಿವ ರಾಜ್ ಕುಮಾರ್ ಕಾಂಗ್ರೆಸ್ ಸೇರ್ತಾರಾ..?

  ಡಾ.ರಾಜ್ ಕುಮಾರ್ ಕುಟುಂಬದ ದೊಡ್ಡ ಸೊಸೆ ಗೀತಾ ಶಿವ ರಾಜ್ ಕುಮಾರ್ ಅವರಿಗೆ ರಾಜಕೀಯ ಹೊಸದಲ್ಲ. ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಮಗಳು. ತಮ್ಮಂದಿರಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಇಬ್ಬರೂ ರಾಜಕೀಯದಲ್ಲಿದ್ದಾರೆ. ಈ ಹಿಂದೆ ಗೀತಾ ಶಿವರಾಜ್ ಕುಮಾರ್, ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ವಿರುದ್ಧ ಜೆಡಿಎಸ್ನಿಂದ ಸ್ಪರ್ಧಿಸಿ ಸೋತಿದ್ದರು. ಅದಾದ ನಂತರ ತೆರೆಮರೆಯಲ್ಲಿದ್ದ ಗೀತಾ, ಮಧು ಬಂಗಾರಪ್ಪ ಪರ ಪ್ರಚಾರವನ್ನೂ ಮಾಡಿದ್ದರು. ಈಗ ಕಾಂಗ್ರೆಸ್ಗೆ ಬರುತ್ತಾರೆ ಎಂಬ ಸುದ್ದಿಯಿದೆ.

  ಜೆಡಿಎಸ್ನಲ್ಲಿದ್ದ ಮಧು ಬಂಗಾರಪ್ಪ ಈಗ ಕಾಂಗ್ರೆಸ್ ಕದ ತಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧು ಬಂಗಾರಪ್ಪ ಅವರನ್ನು ಅಪ್ಪಿಕೊಂಡಿದ್ಧಾರೆ. ಈ ವೇಳೆ ಸ್ವತಃ ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್ ಕೂಡಾ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾಹಿತಿ ನೀಡಿದ್ದಾರೆ. ಆದರೆ, ಅದಕ್ಕೆ ಇನ್ನೂ ಟೈಂ ಇದೆ ಎಂದಿದ್ದಾರೆ ಡಿಕೆ ಶಿವಕುಮಾರ್.

  ಪತ್ನಿಯ ಪರ ಆಗ ಪ್ರಚಾರವನ್ನೂ ಮಾಡಿದ್ದ ಶಿವರಾಜ್ ಕುಮಾರ್, ನನಗೆ ರಾಜಕೀಯ ಅರ್ಥವಾಗಲ್ಲ. ಆದರೆ ನನ್ನ ಪತ್ನಿ ಹಾಗಲ್ಲ. ಆಕೆಗೆ ಇಷ್ಟವಿದೆ. ಆಕೆಯನ್ನು ಬೆಂಬಲಿಸುತ್ತೇನೆ ಎಂದಿದ್ದರು.

  ಡಾ.ರಾಜ್ ಅವರನ್ನು ಇಂದಿರಾ ಗಾಂಧಿ ವಿರುದ್ಧ ನಿಲ್ಲಿಸಲು ನಡೆದಿದ್ದ ಯತ್ನ ಕನ್ನಡಿಗರಿಗೆ ನೆನಪಿದೆ. ಅಂದಹಾಗೆ ಎಲ್ಲರಿಗೂ ಗೊತ್ತಿರೋ ಹಾಗೆ ಡಾ.ರಾಜ್ ಸ್ವತಃ ರಾಜಕೀಯದಿಂದ ದೂರ ಹೋಗಿರಲಿಲ್ಲ. ರಾಜಕಾರಣಿಗಳು ಆಗ ರಾಜ್ ಅವರಿಗೆ ಸುಳ್ಳು ಭರವಸೆ ಕೊಟ್ಟಿದ್ದರು. ಅದನ್ನು ಮುಗ್ಧರಾಗಿ ನಂಬಿ ಬಂದಿದ್ದ ರಾಜ್ ಅವರಿಗೆ ಸತ್ಯದರ್ಶನ ಮಾಡಿಸಿದ್ದವರು ಅವರ ಗೆಳೆಯ ತಿಪಟೂರು ರಾಮಸ್ವಾಮಿ ಚಿತ್ರಲೋಕದಲ್ಲ ಸವಿವರವಾಗಿ ಹೇಳಿದ್ದಾರೆ.

  ರಾಜ್ ರಾಜಕೀಯ ಪ್ರವೇಶಕ್ಕೆ ಒಪ್ಪಿಕೊಂಡಿದ್ದೇಕೆ? | ರಾಜ್ ಹಾಕಿದ ಕಂಡಿಷನ್ಸ್ ಏನು? | Tiptur Ramaswamy Ep 15. ಲಿಂಕ್ ಇಲ್ಲಿದೆ.

  https://www.youtube.com/watch?v=lHvWZC3wm68

  ಈಗ ಅವರ ಸೊಸೆ ರಾಜಕೀಯಕ್ಕೆ, ಅದರಲ್ಲೂ ಕಾಂಗ್ರೆಸ್ ಮೂಲಕ ಮತ್ತೆ ಬರುತ್ತಿದ್ದಾರೆ.

 • ಗೂಗಲ್ ದುರಹಂಕಾರ : ಡಾ.ರಾಜ್ `ಹಾಫ್ ಬಾಯ್ಲ್' ನಟನಂತೆ..!

  ಗೂಗಲ್ ದುರಹಂಕಾರ : ಡಾ.ರಾಜ್ `ಹಾಫ್ ಬಾಯ್ಲ್' ನಟನಂತೆ..!

  ಡಾ.ರಾಜ್ ಕುಮಾರ್ ಹಾಫ್ ಬಾಯ್ಲ್ ನಟ. ಹೌದು, ಇಂತಾದ್ದೊಂದು ಎಡವಟ್ಟು ಈಗ ಗೂಗಲ್‍ನಲ್ಲಿ ಸಿಗುತ್ತಿದೆ. ವಿಕ್ರಂ ವೇದ ಅನ್ನೋ ತಮಿಳು ಚಿತ್ರ ಬಂದಿತ್ತಲ್ಲಾ.. ಮಾಧವನ್, ಶ್ರದ್ಧಾ ಶ್ರೀನಾಥ್, ವಿಜಯ್ ಸೇತುಪತಿ ನಟಿಸಿದ್ದ ಚಿತ್ರವದು. ಆ ಚಿತ್ರದಲ್ಲಿ ಹಾಫ್ ಬಾಯ್ಲ್ ಅನ್ನೋ ಕ್ಯಾರೆಕ್ಟರ್ ಇತ್ತು. ಆ ಪಾತ್ರದಲ್ಲಿ ನಟಿಸಿದ್ದವನ ಹೆಸರು ರಾಜ್ ಕುಮಾರ್. ಆದರೆ ಗೂಗಲ್‍ನಲ್ಲಿ ಆ ಪಾತ್ರವನ್ನು ಡಾ.ರಾಜ್ ಕುಮಾರ್ ಮಾಡಿದ್ದರು ಎನ್ನುವ ರೀತಿ ತೋರಿಸಲಾಗುತ್ತಿದೆ. ಹಾಫ್ ಬಾಯ್ಲ್ ಕ್ಯಾಸ್ಟ್ ಲಿಸ್ಟ್‍ನಲ್ಲಿ ಹಾಫ್ ಬಾಯ್ಲ್ ಪಾತ್ರಧಾರಿಯನ್ನು ತೋರಿಸುವ ಜಾಗದಲ್ಲಿ ಕಸ್ತೂರಿ ನಿವಾಸದ ಅಣ್ಣಾವ್ರ ಚಿತ್ರವನ್ನು ಅಟ್ಯಾಚ್ ಮಾಡಿದೆ ಗೂಗಲ್.

  ಇದ್ಯಾಕೋ ಅತಿಯಾಯ್ತು. ಮೊದಲು ಇದನ್ನು ರಿಮೂವ್ ಮಾಡಿ ಎಂದು ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವರು ಈಗಾಗಲೇ ಗೂಗಲ್‍ನ್ನು ಒತ್ತಾಯಿಸಿದ್ದಾರೆ. ಗೂಗಲ್ ದುರಹಂಕಾ ಎಷ್ಟರಮಟ್ಟಿಗೆ ಇದೆಯೆಂದರೆ, ಇಷ್ಟೆಲ್ಲ ಆದ ನಂತರವೂ ಅದನ್ನು ರಿಮೂವ್ ಮಾಡಿಲ್ಲ.

  ಡಾ.ರಾಜ್ ಮತ್ತು ಕರ್ನಾಟಕದ ಬಾಂಧವ್ಯದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಕನ್ನಡ ಎಂದರೆ ಡಾ.ರಾಜ್. ಡಾ.ರಾಜ್ ಎಂದರೆ ಕನ್ನಡ ಎಂಬಷ್ಟರಮಟ್ಟಿಗೆ ಪ್ರೀತಿ ಬಾಂಧವ್ಯ ಬೆರೆತಿದೆ. ಇತ್ತೀಚೆಗಷ್ಟೇ ಕನ್ನಡವನ್ನು ಜಗತ್ತಿನ ಕೆಟ್ಟ ಭಾಷೆ ಎಂದು ಯಾರೋ ತಲೆಕೆಟ್ಟವನು ಹಾಕಿದ್ದನ್ನು ವರ್ಷಗಟ್ಟಲೆ ಉಳಿಸಿಕೊಂಡಿದ್ದ ಗೂಗಲ್, ಸರ್ಕಾರವೇ ನೋಟಿಸ್ ನೀಡಿದ ಮೇಲೆ ಅದನ್ನು ರಿಮೂವ್ ಮಾಡಿತ್ತು. ಈಗ ಡಾ.ರಾಜ್ ಸರದಿ. ಚಿತ್ರರಂಗದಲ್ಲಿ ಎತ್ತರಎತ್ತರಕ್ಕೇರಿದರೂ ಜೀವನದುದ್ದಕ್ಕೂ ಅವಮಾನಗಳನ್ನು ಅನುಭವಿಸಿಕೊಂಡೇ ಬಂದವರು ಡಾ.ರಾಜ್. ಅದರ ಬಗ್ಗೆ ಒಮ್ಮೆಯೂ ಬಾಯ್ಬಿಟ್ಟವರಲ್ಲ. ಈಗ ಅವರನ್ನು ಒಂದು ತಮಿಳು ಚಿತ್ರದ ಕೆಟ್ಟ ಪಾತ್ರದಲ್ಲಿ ತೋರಿಸಲಾಗುತ್ತಿದೆ. ಗೂಗಲ್ ದುರಹಂಕಾರ ಇನ್ನೂ ಕೊನೆಯಾಗಿಲ್ಲ.

 • ಜನವರಿ 29. ಅಣ್ಣಾವ್ರ ಕಸ್ತೂರಿ ನಿವಾಸಕ್ಕೆ 50

  ಜನವರಿ 29. ಅಣ್ಣಾವ್ರ ಕಸ್ತೂರಿ ನಿವಾಸಕ್ಕೆ 50

  ಡಾ. ರಾಜ್‌ ಅಭಿನಯದ ಮಾಸ್ಟರ್ ಪೀಸ್ಗಳಲ್ಲಿ ಒಂದು ಕಸ್ತೂರಿ ನಿವಾಸ. ಈ ಚಿತ್ರಕ್ಕೀಗ 50 ವರ್ಷ. ಹೌದು, ಮೊನ್ನೆ ಮೊನ್ನೆಯಷ್ಟೇ ಈ ಚಿತ್ರ ಅರ್ಧ ಶತಮಾನ ಪೂರೈಸಿದೆ. 1971ರ ಜನವರಿ 29ರಂದು ತೆರೆಗೆ ಬಂದಿದ್ದ ಸಿನಿಮಾ, 2021ರ ಜನವರಿ 29ಕ್ಕೆ 50 ವರ್ಷ ಪೂರೈಸಿದ ದಾಖಲೆ ಬರೆದಿದೆ. ಈ ಚಿತ್ರದ ದಾಖಲೆಗಳು ಒಂದೆರಡಲ್ಲ..

  ಈ ಚಿತ್ರದಲ್ಲಿ ಡಾ.ರಾಜ್ ರವಿ ಅನ್ನೋ ಉದ್ಯಮಿಯ ಪಾತ್ರದಲ್ಲಿ ನಟಿಸಿದ್ದರು. ಕೊಡುಗೈ ದೊರೆ ಉದ್ಯಮಿ, ಭಗ್ನಪ್ರೇಮಿ, ಗೆಳೆಯನಿಗೆ ಸಹಾಯ ಮಾಡಿ ಗೆಳೆಯನಿಂದಲೇ ಮೋಸ ಹೋಗುವ ಪಾತ್ರದಲ್ಲಿ ರಾಜ್ ನಟನೆ ಅಮೋಘವಾಗಿತ್ತು.

  ರಾಜ್ ಎದುರು ನಾಯಕಿಯಾಗಿ ನಟಿಸಿದ್ದವರು ಜಯಂತಿ ಮತ್ತು ಆರತಿ.

  ಕೆಸಿಎನ್‌ ಗೌಡ ನಿರ್ಮಾಣದ ಚಿತ್ರಕ್ಕೆ ದೊರೈ ಭಗವಾನ್ ಜೋಡಿಯ ನಿರ್ದೇಶನವಿತ್ತು. ರಾಜಾಶಂಕರ್, ಕೆಎಸ್‌ ಅಶ್ವತ್ಥ್ ಅವರ ಪೋಷಕ ಪಾತ್ರಗಳೂ ಜನರಿಗೆ ಇಷ್ಟವಾಗಿದ್ದವು.

  ಈ ಚಿತ್ರದಲ್ಲಿದ್ದದ್ದು 6 ಹಾಡು. ಜಿಕೆ ವೆಂಕಟೇಶ್ ಸಂಗೀತ ನಿರ್ದೇಶನದ ಎಲ್ಲ ಹಾಡುಗಳೂ ಸೂಪರ್ ಹಿಟ್. ಎಲ್ಲ ಹಾಡುಗಳಿಗೂ ಸಾಹಿತ್ಯ ಒದಗಿಸಿದ್ದವರು ಚಿ.ಉದಯ್ ಶಂಕರ್.

  ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು.. & ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ.. ಒಂದೇ ಟ್ರ್ಯಾಕ್ನಲ್ಲಿ ಇರುವ ಎರಡು ವಿಷಾದ ಗೀತೆಗಳು. ನೀ ಬಂದು ನಿಂತಾಗ ನಿಂತು ನೀ ನಕ್ಕಾಗ.. ಹಾಡಂತೂ ಇಂದಿಗೂ ಪ್ರೇಮಿಗಳ ಎದೆಯಲ್ಲಿ ರೋಮಾಂಚನ ಸೃಷ್ಟಿಸುತ್ತದೆ. ಆಡೋಣ ನೀನು ನಾನು.. ಹಾಡು ಮಗುವಿಗೆ ಹಾಡುಗ ಜೋಗುಳ ಗೀತೆಯಾದರೆ, ಎಲ್ಲೇ ಇರು ಹೇಗೇ ಇರು.. ಹಾಡು ಪ್ರೇಮಿ.. ಪ್ರೇಮಿಗಾಗಿಯೇ ಹಾಡುವ ಗೀತೆ. ಓ ಗೆಳೆಯ.. ಅನ್ನೋ ಕ್ಯಾಬರೆ ಸಾಂಗ್ ಕೊಟ್ಟ ಥ್ರಿಲ್ಲೇ ಬೇರೆ.

  ಈ ಕ್ಲಾಸಿಕ್ ಸಿನಿಮಾದ ಓಪನಿಂಗ್ ಡಲ್ ಹೊಡೆದಿತ್ತು. ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದ್ದು 9ನೇ ವಾರದ ಬಳಿಕ. ಅದಾದ ಮೇಲೆ ಈ ಚಿತ್ರ ಸತತ 100 ವಾರ ಓಡಿ ದಾಖಲೆಯನ್ನೇ ಬರೆಯಿತು. ಕಸ್ತೂರಿ ನಿವಾಸ ಚಿತ್ರವನ್ನ ಕಲರ್ನಲ್ಲಿ 2014ರಲ್ಲಿ ರಿಲೀಸ್ ಮಾಡಿದಾಗಲೂ 100 ಡೇಸ್ ಓಡಿದ್ದು ಈ ಚಿತ್ರದ ಸಾಧನೆ.

  ವಿಶೇಷವೆಂದರೆ ಈ ಚಿತ್ರವನ್ನು ಕಲರ್ನಲ್ಲಿ ಚಿತ್ರೀಕರಿಸಲು ಮುಂದಾಗಿದ್ದ ಚಿತ್ರತಂಡ, ಬಜೆಟ್ 5 ಲಕ್ಷ ದಾಟಲಿದೆ ಎಂಬ ಕಾರಣಕ್ಕೆ ಬ್ಲಾಕ್ & ವೈಟ್ನಲ್ಲಿ ಚಿತ್ರೀಕರಣ ಮಾಡಿತಂತೆ. ಈ ಚಿತ್ರಕ್ಕೆ ಕಥೆ ಬರೆದಿದ್ದವರು ಜಿ.ಬಾಲಸುಬ್ರಹ್ಮಣ್ಯಂ. ಶಿವಾಜಿ ಗಣೇಶನ್ ಅವರನ್ನು ಕಲ್ಪಿಸಿಕೊಂಡು ಬರೆದಿದ್ದ ಕಥೆ, ಶಿವಾಜಿ ಗಣೇಶನ್ಗೇ ಇಷ್ಟವಾಗಲಿಲ್ಲ.  ದುರಂತದ ಕ್ಲೈಮಾಕ್ಸ್ ಬೇಡ ಎಂದ ಕಾರಣಕ್ಕೆ ಕನ್ನಡಕ್ಕೆ ಬಂದ ಕಥೆ ಕಸ್ತೂರಿ ನಿವಾಸ. ತಮಿಳಿನಲ್ಲಿ ಈ ಕಥೆಗಾಗಿ 25 ಸಾವಿರ ಖರ್ಚು ಮಾಡಲಾಗಿತ್ತು. ನಂತರ ಇದನ್ನು ಕನ್ನಡಕ್ಕೆ 38 ಸಾವಿರ ಕೊಟ್ಟು ತರಲಾಯ್ತು. ವಿಶೇಷ ಅಂದ್ರೆ ಈ ಕಥೆ ಅಣ್ಣಾವ್ರ ಸಹೋದರ ವರದಪ್ಪನವರಿಗೂ ಅಷ್ಟು ಇಷ್ಟವಾಗಿರಲಿಲ್ಲ. ಕ್ಲೈಮಾಕ್ಸ್ ಬಗ್ಗೆ ಅವರಿಗೂ ತಕರಾರಿತ್ತು. ಆದರೆ ಡಾ.ರಾಜ್ ಅವರೇ ಒಪ್ಪಿಸಿದರಂತೆ. ನಂತರ ಆ ಸಿನಿಮಾ ಇತಿಹಾಸವನ್ನೇ ಸೃಷ್ಟಿಸಿಬಿಡ್ತು.

  20 ದಿನದಲ್ಲಿ ರೆಡಿಯಾದ ಚಿತ್ರಕ್ಕೆ ಆಗಿನ ಕಾಲಕ್ಕೆ 3 ಲಕ್ಷದ 75 ಸಾವಿರ ಬಜೆಟ್ ಆಗಿತ್ತು. ಅದೇ ಚಿತ್ರವನ್ನು ಕಲರ್ ಮಾಡಿದಾಗ ಚಿತ್ರಕ್ಕೆ ಬಣ್ಣ ತುಂಬಲು 20 ತಿಂಗಳು ತಗುಲಿತ್ತು. ಮೊದಲ ವಾರದಲ್ಲೇ ಅಣ್ಣಾವ್ರ ಹಳೆಯ ಚಿತ್ರ 2 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ.

  ಅಣ್ಣಾವ್ರು ಈ ಚಿತ್ರಕ್ಕೆ ಪಡೆದಿದ್ದ ಸಂಭಾವನೆ 15 ಸಾವಿರ ರೂಪಾಯಿಗಳು. ಆ ಚಿತ್ರದಲ್ಲಿ ಡಾ.ರಾಜ್ ಅವರ ಹೆಗಲ ಮೇಲೆ ಕೂರುವ ಪಾರಿವಾಳವನ್ನು 500 ರೂ. ಕೊಟ್ಟು ತರಲಾಗಿತ್ತು. ಅದಕ್ಕಿಂತ ಮಜಾ ಇನ್ನೊಂದಿದೆ.

  ಯಾವ ಶಿವಾಜಿ ಗಣೇಶನ್ ಈ ಚಿತ್ರವನ್ನು ಬೇಡ ಎಂದು ತಿರಸ್ಕರಿಸಿದ್ದರೋ, ನಂತರ ಅವರೇ ಈ ಚಿತ್ರವನ್ನು ರೀಮೇಕ್ ಮಾಡಲು 2 ಲಕ್ಷ ಕೊಟ್ಟು ಹಕ್ಕುಗಳನ್ನು ಪಡೆದುಕೊಂಡರು. ಆದರೆ, ಡಾ.ರಾಜ್ ಅವರ ಅಭಿನಯದ ಎತ್ತರಕ್ಕೆ ನನ್ನ ಅಭಿನಯ ಬರಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು ಶಿವಾಜಿ ಗಣೇಶನ್.

 • ಡಾ. ರಾಜ್ ಏಕೆ ಗ್ರೇಟ್..? ಕರ್ನಾಟಕ ರತ್ನ ಪ್ರಶಸ್ತಿಯ ಈ ಕಥೆ ಓದಿ..!

  dr rajkumar and karnataka ratna story

  ಭಾರತದಲ್ಲಿ ಹೇಗೆ ಭಾರತರತ್ನ ಅತ್ಯುನ್ನತ ಪ್ರಶಸ್ತಿಯೋ, ಹಾಗೆಯೇ ಕರ್ನಾಟಕದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ. ಆ ಪ್ರಶಸ್ತಿಯನ್ನು ಆರಂಭಿಸಿದವರು ಎಸ್.ಬಂಗಾರಪ್ಪ. ಆ ಪ್ರಶಸ್ತಿಯನ್ನು ಪಡೆದ ಮೊದಲಿಗರು ಇಬ್ಬರು, ಕುವೆಂಪು ಹಾಗೂ ಡಾ.ರಾಜ್.

  ವಿಧಿಯಾಟ ನೋಡಿ, ಆ ಪ್ರಶಸ್ತಿಯನ್ನು ನೀಡುವ ದಿನ, ಕುವೆಂಪು ಅನಾರೋಗ್ಯಕ್ಕೊಳಗಾಗಿದ್ದರು. ಹಾಸಿಗೆ ಹಿಡಿದಿದ್ದರು. ವೇದಿಕೆಯ ಮೇಲೆ ಆ ಪ್ರಶಸ್ತಿ ಸ್ವೀಕರಿಸಿದ್ದು ಡಾ.ರಾಜ್ ಮಾತ್ರ. ಆದರೆ, ಅದಕ್ಕೂ ಮುನ್ನ ಡಾ.ರಾಜ್ ಹಠ ಹಿಡಿದಿದ್ದರಂತೆ.

  ಕುವೆಂಪು ಅವರ ಮುಂದೆ ನಾನೆಷ್ಟರವನು..? ಮೊದಲು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನವಾಗಬೇಕು. ಪುರಸ್ಕಾರ ಪಡೆಯಲು ನನ್ನದೇನೂ ತಕರಾರಿಲ್ಲ. ಆದರೆ, ಪುಟ್ಟಪ್ಪನವರಿಗಿಂತ ಮೊದಲು ನನಗೆ ಕೊಡುವುದು ಬೇಡ. ಅವರು ಅಕ್ಷರ ಸರಸ್ವತಿ ಎಂದು ಹಠ ಹಿಡಿದುಬಿಟ್ಟರು ಡಾ.ರಾಜ್.

  ಕೊನೆಗೆ ಮೈಸೂರಿನಲ್ಲಿ ಕುವೆಂಪು ಅವರಿಗೆ, ಅವರ ಮನೆಯಲ್ಲಿಯೇ ಕರ್ನಾಟಕ ರತ್ನ ಪ್ರದಾನ ಮಾಡಲಾಯಿತು. ಅನಂತರ ಬೆಂಗಳೂರಿನಲ್ಲಿ ಡಾ.ರಾಜ್ ಅವರಿಗೆ ಕರ್ನಾಟಕ ರತ್ನ ಪುರಸ್ಕಾರ ನೀಡಿ ಗೌರವಿಸಲಾಯ್ತು. 

  ಅಂದಹಾಗೆ, ಅಭಿಮಾನಿಗಳನ್ನು ಅಭಿಮಾನಿ ದೇವರು ಎಂದು ಡಾ.ರಾಜ್ ಮೊದಲು ಸಂಬೋಧಿಸಿದ್ದು ಅಲ್ಲಿಯೇ..

 • ಡಾ.ರಾಜ್ ಮೊಮ್ಮಗಳು ಚಿತ್ರರಂಗಕ್ಕೆ ಬರ್ತಾರಾ..?

  dr raj's grandaughter dhanya

  ಧನ್ಯಾ. ಈಕೆ ರಾಮ್‍ಕುಮಾರ್ ಹಾಗೂ ಪೂರ್ಣಿಮಾ ದಂಪತಿಯ ಮಗಳು. ಅಂದರೆ, ಡಾ.ರಾಜ್‍ಕುಮಾರ್ ಅವರ ಮೊಮ್ಮಗಳು. ಪೂರ್ಣಿಮಾ ಡಾ.ರಾಜ್ ಅವರ ಪುತ್ರಿ. ಇತ್ತೀಚೆಗೆ ಧನ್ಯಾರ ಒಂದಷ್ಟು ಫೋಟೋಗಳು ಆನ್‍ಲೈನ್‍ನಲ್ಲಿ ಭರ್ಜರಿ ಸದ್ದು ಮಾಡಿದ್ದವು. ಆ ಫೋಟೋ ನೋಡಿದವರು, ಇದು ಚಿತ್ರರಂಗಕ್ಕೆ ಬರುವ ಮುನ್ಸೂಚನೆ ಎಂದುಕೊಂಡಿದ್ದರು. ಆದರೆ, ಅದಕ್ಕೆ ತದ್ವಿರುದ್ಧ ಉತ್ತರ ನೀಡಿರೋದು ಧನ್ಯಾ ರಾಮ್‍ಕುಮಾರ್.

  ನಾನು ಸದ್ಯಕ್ಕೆ ಪಿಆರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಚಿತ್ರರಂಗಕ್ಕೆ ಬರಲು ಇಷ್ಟವಿಲ್ಲ. ಹಾಗೆ ನೋಡಿದರೆ, ಸಂಗೀತ ನನ್ನ ಆಸಕ್ತಿಯ ಕ್ಷೇತ್ರ. ಗಾಯಕಿಯಾಗಿ ಬಂದರೂ ಬರಬಹುದೇನೋ.. ನಾಯಕಿಯಾಗಿಯಂತೂ ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಧನ್ಯಾ.

  ಆದರೆ, ತಮ್ಮ ಅಣ್ಣ ಧಿರೇನ್ ನಟಿಸುವ ಮೊದಲ ಚಿತ್ರಕ್ಕೆ ಸ್ಟೈಲಿಂಗ್ ಮಾಡುವುದು ನಾನೇ. ನನ್ನ ಅಣ್ಣ ಎಲ್ಲರಿಗಿಂತ ಚೆನ್ನಾಗಿ ಕಾಣಬೇಕು. ಹಾಗೆ ಮಾಡುತ್ತೇನೆ ಎಂದು ಹೇಳಿಕೊಳ್ತಾರೆ ಧನ್ಯಾ.

  ಒಟ್ಟಿನಲ್ಲಿ ಚಿತ್ರರಂಗಕ್ಕೆ ಧನ್ಯಾ ಬರಬಹುದು. ಆದರೆ, ನಾಯಕಿಯಾಗಿ ಬರೋದಿಲ್ಲ. ಬಂದರೆ, ಗಾಯಕಿಯಾಗಿ ಬರಬಹುದೇನೋ. 

 • ಡಾ.ರಾಜ್‍ಕುಮಾರ್ ಸೌಹಾರ್ದ ಪ್ರಶಸ್ತಿ ಪ್ರದಾನ

  rajkumar sau harda awards

  ಪಾರ್ವತಮ್ಮ ರಾಜ್‍ಕುಮಾರ್ ಅವರ ಅನಾರೋಗ್ಯ, ನಿಧನದ ಹಿನ್ನೆಲೆಯಲ್ಲಿ ಘೋಷಣೆಯಾಗಿದ್ದರೂ ಪ್ರದಾನವಾಗದೇ ಇದ್ದ ಡಾ.ರಾಜ್‍ಕುಮಾರ್ ಸೌಹಾರ್ದ ಪ್ರಶಸ್ತಿಯನ್ನು ಡಾ.ರಾಜ್‍ಕುಮಾರ್ ಟ್ರಸ್ಟ್ ಪ್ರದಾನ ಮಾಡಿದೆ. 

  2016ನೇ ಸಾಲಿನಲ್ಲಿ - ಜಯಂತಿ, ವಿಜಯ್ ರೆಡ್ಡಿ, ರಾಜನ್ ನಾಗೇಂದ್ರ, 2017ನೇ ಸಾಲಿನ ಲೋಕನಾಥ್, ಶಿವಶಂಕರ್, ರಾಜೇಶ್ ಹಾಗೂ 2018ನೇ ಸಾಲಿನಲ್ಲಿ ಬಿ.ಜಯಾ, ಎಂ.ಎಸ್.ಉಮೇಶ್ ಹಾಗೂ ಎಸ್.ಮನೋಹರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

  ಪುನೀತ್ ರಾಜ್‍ಕುಮಾರ್ ಹಾಗೂ ರಾಘವೇಂದ್ರ ರಾಜ್‍ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಶಸ್ತಿ ಪುರಸ್ಕøತರನ್ನು ಗೌರವಿಸಿದರು.

 • ದಾರಿ ತಪ್ಪಿದ ಮಗ ಮತ್ತೆ ಬಂದ

  dari thappidha maga to release again

  ಡಾ.ರಾಜ್‍ಕುಮಾರ್ ಅಭಿನಯದ ದಾರಿ ತಪ್ಪಿದ ಮಗ ಸಿನಿಮಾ ಮತ್ತೊಮ್ಮೆ ರಿಲೀಸ್ ಆಗಿದೆ. 1975ರಲ್ಲಿ ತಯಾರಾಗಿದ್ದ ದಾರಿ ತಪ್ಪಿದ ಮಗ ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಡಾ.ರಾಜ್ ದ್ವಿಪಾತ್ರದಲ್ಲಿ ನಟಿಸಿದ್ದ ಚಿತ್ರದಲ್ಲಿ ಕಲ್ಪನಾ, ಆರತಿ, ಮಂಜುಳಾ, ಜಯಮಾಲಾ ಮತ್ತು ಜೋಡಿಯಾಗಿದ್ದರು. ಪೇಕೆಟಿ ಶಿವರಾಂ ನಿರ್ದೇಶನದ ಸಿನಿಮಾ.

  ಈಗ ಮತ್ತೊಮ್ಮೆ ಬಿಡುಗಡೆಯಾಗಿದೆ. ತ್ರಿವೇಣಿ ಚಿತ್ರಮಂದಿರದಲ್ಲಿ ದಾರಿ ತಪ್ಪಿದ ಮಗ ಚಿತ್ರದ ಪ್ರದರ್ಶನವಾಗುತ್ತಿದೆ. 1975ರಲ್ಲಿ ರಿಲೀಸ್ ಆಗಿ, ಸತತ 25 ವಾರಗಳ ಪ್ರದರ್ಶನ ಕಂಡಿದ್ದ ದಾರಿ ತಪ್ಪಿದ ಮಗ ಸಿನಿಮಾ, ಆನಂತರವೂ ಹಲವು ಬಾರಿ ರಿಲೀಸ್ ಆಗಿ, ಸಕ್ಸಸ್ ಕಂಡಿದೆ. ಈಗ ಮತ್ತೊಮ್ಮೆ..