` shubha poonja, - chitraloka.com | Kannada Movie News, Reviews | Image

shubha poonja,

 • 40 ರಾತ್ರಿಗಳ ಕಥೆ ಹೇಳಿದ ಶುಭಾ ಪೂಂಜಾ

  shubha punja sharesh her horror experiences

  ಒಂದಲ್ಲ..ಎರಡಲ್ಲ.. 40 ರಾತ್ರಿಗಳು. ಒಂದೊಂದು ರಾತ್ರಿಯ ಕಥೆಯೂ ವಿಭಿನ್ನ. 40 ರಾತ್ರಿಗಳ ದಟ್ಟ ಅನುಭವವನ್ನು ಮರೆಯುವ ಹಾಗೆಯೇ ಇಲ್ಲ. ಸಂಜೆ 6 ಗಂಟೆಗೆ ಶುರುವಾದರೆ, ಎಲ್ಲ ಮುಗಿಯುತ್ತಿದ್ದುದು ಬೆಳಗ್ಗೆ 6 ಗಂಟೆಗೆ. ಅದು ಶಿವರಾತ್ರಿಯೂ ಹೌದು, ಶುಭರಾತ್ರಿಯೂ ಹೌದು. ಸತತ 40 ದಿನ. `ಕೆಲವು ದಿನಗಳ ನಂತರ' ಚಿತ್ರದ ಶೂಟಿಂಗ್ ಅನುಭವವನ್ನು ಹೀಗೆ ಬಿಚ್ಚಿಟ್ಟಿದ್ದಾರೆ ಶುಭಾ ಪೂಂಜಾ.

  ಜಯಮಹಲ್ ನಂತರ, ಇದು ಅವರಿಗೆ ಎರಡನೇ ಹಾರರ್ ಸಿನಿಮಾ. ಶುಭಾ ಪೂಂಜಾ ಸಾಫ್ಟ್‍ವೇರ್ ಎಂಜಿನಿಯರ್ ಪಾತ್ರ ಮಾಡಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ದೇವರಾಯನ ದುರ್ಗದ ಕಾಡಿನಲ್ಲಿ ನಡೆದಿದೆ. ಚಿತ್ರದಲ್ಲಿ ಮಕ್ಕಳು, ಹೃದಯರೋಗಿಗಳು ಬೆಚ್ಚಿಬೀಳುವಂತ ದೃಶ್ಯಗಳಿವೆಯಂತೆ. ಯಾವುದಕ್ಕೂ ಹುಷಾರಾಗಿರಿ.

 • Jai Maruti 800 Collects 4 crores in First Week

  jai maruthi 800 image

  Sharan starrer 'Jai Maruti 800' which was released last week has collected four crores in the first week hereby making the producer safe. Producer Ramesh had organised a success meet recently and announced that the film has grossed four crores in the first week and he is safe and the returns he gets in the coming weeks are profits.

  Sharan said he was glad about the film's success and acknowledged the success to the entire team of 'Jai Maruti 800'. Sharan said the real hero of the film is cinematographer Swamy and Swamy's work has reflected neatly on the screen.

 • Jai Maruti 800 is Sharan's Costliest Film

  jai maruthi 800 image

  Jai Maruti 800 is the costliest film of Sharan's career. The production cost of the film itself crossed Rs 6 crore. By the release tomorrow, the publicity and post production expenses have taken the budget to Rs 7 crore.

  The film directed by Harsha is produced by Manjula Ramesh and distribution by Jayanna. The film is releasing on Ugadi day and has high expectations riding on it as Sharan's list of comedy hits continues. The film will release in over 200 screens.

 • Meenakshi Revived; To Release On June 23rd

  meenakshi revived

  Raghu Mukherjee and Shubha Poonja starrer 'Meenakshi' which was launched four years back, is all set to release on the 23rd of this month.

  It's been more than four years since the film was launched. Though the shooting for the film was completed, the release got delayed due to various reasons. Now Jayanna has taken over the film and will be releasing the film on the 23rd of June.

  'Meenakshi' stars Raghu Mukherjee, Shubha Poonja, Geetha and others in prominent roles. The film is directed by Sridhar Hegade, while Aditya Ramesh is the producer. Vani Harikrishna has composed the music for the film, while Malhar Bhatt Joshi is the cameraman

 • Shubha Poonja Shuts Down Her FB Page 

  shubha punja shuts down her fb page

  Sandalwood actress Shubha Poonja has shut down her Facebook page for "technical reasons". Fans following her on social media are surprised with this sudden development. Sources close to the actress said a revamp is underway and the actress will be back soon with online presence to interact directly with fans.

  But what is not known for now is why the actress chose to shut down the page altogether instead of making alterations to it. Chitraloka will bring you the latest about the development as soon as Shubha Poonja is contacted by us. We are in the process

 • ಖಾಲಿದೋಸೆ ಶುಭಾ

  shubha poonja in khalidose kalpana

  ಚಿತ್ರರಂಗದವರಿಗೆ ದೋಸೆ ಮೇಲೆ ಲವ್ವಾಗಿದೆ. ನೀರ್ ದೋಸೆ ಹಾಕಿ ಹರಿಪ್ರಿಯಾ ಸಕ್ಸಸ್ ಆದರೆ, ಈಗ ಶುಭಾ ಪೂಂಜಾ ಖಾಲಿದೋಸೆ ಹಾಕೋಕೆ ಬಂದಿದ್ದಾರೆ. ಶುಭಾ ಪೂಂಜಾ ನಟಿಸುತ್ತಿರುವ ಹೊಸ ಚಿತ್ರದ ಹೆಸರೇ ಖಾಲಿದೋಸೆ ಕಲ್ಪನಾ.

  ಪೂಜಾರಿ ಖ್ಯಾತಿಯ ಶರಣ್ ನಿರ್ದೇಶನದ ಚಿತ್ರವಿದು. ಸಿನಿಮಾದೊಳಗೊಂದು ಸಿನಿಮಾ ಇರುವ ಹಾರರ್ ಥ್ರಿಲ್ಲರ್ ಸಿನಿಮಾ ಖಾಲಿದೋಸೆ ಕಲ್ಪನಾ. ಶುಭಾ ಪೂಂಜಾ ಚಿತ್ರದಲ್ಲಿ ನಾಯಕ ನಟಿಯಾಗಿಯೇ ನಟಿಸಲಿದ್ದಾರೆ. ಈ ಚಿತ್ರಕ್ಕೂ ನಟಿ ಕಲ್ಪನಾ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಶುಭಾ ಪೂಂಜಾ.

 • ನಾನು ಮದುವೆ ಆಗಬೇಕು.. ನನಗೂ ಒಬ್ಬ ಹುಡುಗ ಬೇಕು..

  shubha ounja ready to marry

  ನನಗೂ ಒಬ್ಬ ಗೆಳೆಯ ಬೇಕು ಎಂದು ಹಾಡುತ್ತಲೇ ಕನ್ನಡಿಗರ ಮೊಗ್ಗಿನ ಮನಸ್ಸಿನಲ್ಲಿ ಹೂವಾಗಿ ಅರಳಿದ್ದವರು ಶುಭಾ ಪೂಂಜಾ. ಈಗ ಮದುವೆಗೆ ಸಿದ್ಧವಾಗಿದ್ದಾರೆ. ಸಿನಿಮಾದಲ್ಲಿ ಅಲ್ಲ. ನಿಜ ಜೀವನದಲ್ಲಿ ಮದುವೆಯಾಗಲು ಸಿದ್ಧವಾಗಿದ್ದಾರೆ. 2018ಕ್ಕೆ ಮದುವೆಯಾಗಬೇಕು ಅನ್ನೋದು ಶುಭಾ ಅವರ ಯೋಜನೆ.

  ಅವರಿಗೆ ತೀರಾ ಅವರು ಮೊಗ್ಗಿನ ಮನಸ್ಸಿನಲ್ಲಿ ಹಾಡಿದಂತಹ ಹುಡುಗನೇ ಬೇಕಿಲ್ಲ. ಪ್ರಾಣಿಗಳನ್ನು ಪ್ರೀತಿಸುವ ಗುಣವುಳ್ಳ, ಮಹತ್ವಾಕಾಂಕ್ಷೆಗಳೇನೂ ಇರದ, ಸ್ವಲ್ಪ ಗೋಧಿಬಣ್ಣದ ಮೈಕಟ್ಟು ಹೊಂದಿರುವ ಒಳ್ಳೆಯ ಮನುಷ್ಯನಾಗಿರುವ ಹುಡುಗ ಬೇಕು.

  ಈ ಅರ್ಹತೆಗಳಿರುವ ಹುಡುಗ ನೀವಾಗಿದ್ದರೆ.. ಅಥವಾ ನಿಮ್ಮ ಕಣ್ಣಿಗೆ ಬಿದ್ದರೆ, ಶುಭಾ ಅವರಿಗೆ ತೋರಿಸಿ. ಹೇಳಿ.. ಮದುವೆ ಮಾಡಿಸಿಬಿಡಿ.

 • ನೀನಾಸಂ ಅಶ್ವತ್ಥ್‍ಗೆ ರಾ..ರಾ.. ಎಂದಳು ಮಾತಂಗಿ..!

  its mathangi and not nagavalli

  ನಾಗವಲ್ಲಿ ಎಂದರೆ ಕನ್ನಡ ಚಿತ್ರರಸಿಕರಷ್ಟೇ ಅಲ್ಲ, ದಕ್ಷಿಣ ಭಾರತದ ಎಲ್ಲ ಚಿತ್ರರಂಗದವರೂ ಕಣ್ಣರಳಿಸ್ತಾರೆ. ಆದರೆ ಜಯಮಹಲ್‍ನಲ್ಲಿ ಇರೋದು ನಾಗವಲ್ಲಿ ಅಲ್ಲ. ಮಾತಂಗಿ. ಈ ಮಾತಂಗಿ, ವಕ್ಕರಿಸಿಕೊಂಡಿರೋದು ನೀನಾಸಂ ಅಶ್ವತ್ಥ್ ಅವರಿಗೆ. ಹ್ಞಾ.. ಸಿನಿಮಾದಲ್ಲಿ ಮಾತ್ರ.

  ಜಯಮಹಲ್‍ನಲ್ಲಿ ನೀನಾಸಂ ಅಶ್ವತ್ಥ್ ಪರಮನಾಸ್ತಿಕ ಪ್ರೊಫೆಸರ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ದೇಹಕ್ಕೆ ಒಬ್ಬ ಅತೃಪ್ತ ರಾಣಿಯ ಆತ್ಮ ಪ್ರವೇಶವಾಗುತ್ತೆ.  ರಂಗಭೂಮಿಯಲ್ಲಿ ಬೆವರು ಹರಿಸಿರುವ ನೀನಾಸಂ ಅಶ್ವತ್ಥ್, ಪಾತ್ರವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರಂತೆ.

  ನೀನಾಸಂ ಅಶ್ವತ್ಥ್ ಅವರಿಗೆ ಇಂಥಾದ್ದೊಂದು ಪಾತ್ರ ಸಿಕ್ಕಿರುವುದು ಇದೇ ಮೊದಲು. ಹೃದಯಶಿವ ನಿರ್ದೇಶನದ ಸಿನಿಮಾ, ರಿಲೀಸ್‍ಗೆ ರೆಡಿಯಾಗಿದೆ.

 • ಯೋಗ ಶಿಲಾಬಾಲಿಕೆ ಶುಭಾ ಪೂಂಜಾ

  shubha punja's yoga photo shoot

  ಶುಭಾ ಪೂಂಜಾ. ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಆಗಾಗ್ಗೆ ಫೋಟೋಶೂಟ್ ಮಾಡಿಸಿ, ಹೊರಗೆ ತೋರಿಸಿ.. ಪಡ್ಡೆಗಳ ನಿದ್ದೆಗೆಡಿಸುತ್ತಿದ್ದ ಸುಂದರಿ ಈ ಪ್ರೇಮಿಗಳ ದಿನಕ್ಕೆ ಶಿಲಾಬಾಲಿಕೆಯಾಗಿದ್ದಾರೆ. ಅದೂ ಯೋಗ ಶಿಲಾ ಬಾಲಿಕೆ.

  ಕಾಮ ಸೂತ್ರ ಮತ್ತು ಯೋಗವನ್ನು ಮಿಕ್ಸ್ ಮಾಡಿ, ಯೋಗಸೂತ್ರ ಎಂಬ ಹೊಸ ಕಾನ್ಸೆಪ್ಟಿನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ ಶುಭಾ ಪೂಂಜಾ. ಮೇಕಪ್ ಡಿಸೈನರ್ ಮಂಗಳ ಇದರ ಹಿಂದಿನ ಸೃಷ್ಟಿಕರ್ತೆ. ಪ್ರೇಮಿಗಳ ದಿನ, ನಮ್ಮ ದೇಸೀ ಸ್ಟೈಲಿನಲ್ಲಿಯೇ ಆಗಬೇಕು ಎನ್ನುವುದು ಈ ಫೋಟೋ ಶೂಟ್ ಹಿಂದಿನ ಉದ್ದೇಶವಂತೆ.

Shivarjun Movie Gallery

Actor Bullet Prakash Movie Gallery