` gurunandan - chitraloka.com | Kannada Movie News, Reviews | Image

gurunandan

  • Raju Kannada Medium Not To Release On September 29th

    raju kannada medium image

    Gurunandan starrer 'Raju Kannada Medium' which has Sudeep in a very special role will not be releasing on the 29th of September. The team has decided to avoid clash and is looking for a new date for the film's release.

    Earlier, there was a rumour that 'Raju Kannada Medium' will be releasing on 29th of September and the film will be clashing with Darshan's 'Tarak'. However, the makers don't have any intentions to release the film on that day and is looking for a further date to avoid competitions and complications. 

    'Raju Kannada Medium' film is being written and directed by Naresh Kumar who had earlier directed 'Ist Rank Raju'. Avantika Shetty, Angelina and Anusha are the heroines in this film. Kiran Ravindranath is the music director, while Shekhar Chandra is the cameraman.

  • Raju Kannada Medium Review - Chitraloka Rating 4/5

    raju kannada medium review

    Raju Kannada Medium is one of the best entertainers you have seen on Kannada screen in the last few years. The film breaks fresh ground in some of the scenes like that of the shark attacks and the aeroplane scenes. It matches what you see in many international films. Such groundbreaking scenes will do a wealth of good for Kannada films. Apart from these spectacular scenes, the film has a good story that combines natural story telling to entertainment. The film also has star power in the form of Sudeep who enlightens the screen from the interval. 

    Raju comes from a village and loses his father early. His father gives him a letter and tells him to read it only after reaching 16 years of age. When Raju sees it, he is confused. He seeks to find answers for it. The answer keeps changing with every new experience he has. This is an interesting story telling format. Raju's interest keeps changing as he grows up. He has to finally leave his village. His handicap in Bengaluru is his Kannada medium. How Raju overcomes it? Does he find answer to his father's riddle? Does Raju succeed in his life? All these are answered in the film. 

    Sudeep arrives in style. He not only shows his style quotient but his screen presence. The screen lights up with energy in those scenes. He plays India's richest businessman in the film and Raju's mentor. How he helps Raju and what Raju learns from him is best seen on screen. Suffice to say that Sudeep's fans will get a special treat in Raju Kannada Medium. 

    Avantika Shetty and Ashika Ranganath get good roles in the film. Raghunandan comes up trumps and gives his best performance. There is also very good supporting cast in the film including Sundar, Suchendra Prasad, Sadhu Kokila etc. Chikkanna comes in a small role but packs it with a powerful dialogue. His one single dialogue about Bengaluru is worth his role in the film. It calls for whistles. Even those appearing in one or two scenes make memorable impressions on the film. The director has handled the film beautifully. There is lavishness in every scene. Some of the scenes makes you sit up and wonder who good they look. As mentioned earlier many of the scenes set new standards in Kannada films. 

    There is superb technical backupu to the film. Shekar Chandru has shown his best talent behind the camera. Kiran Ravindranath has scored some of the best tunes in Kannada in the last years. His works in his next films will be eagerly awaited. Overall this is one of the best entertainers you will see in a long time. This film is one of those that will be watched again and again by fans. It is that good.

    Raju Kannada Medium will rank among one of the best comedy films of this decade and possibly one of the films with the best special effects in Kannada ever.

    Chitraloka Rating - 4/5

  • Raju Rangitaranga Renamed As Raju Kannada Medium

    actor gurunandan image

    Actor Gurunandan's new film which was earlier titled as 'Raju Rangitaranga' has been renamed as 'Raju Kannada Medium'. The film is being written and directed by Naresh Kumar who had earlier directed 'Ist Rank Raju'.

    The team of the film has been continued here also. Avantika Shetty is the heroine for Gurunandan. The film is being produced by K A Suresh under Suresh Arts. The shooting for the film has been completed.

  • Russian Model To In Raju Kannada Medium

    angelina image

    Gurunandan's new film 'Raju Kannada Medium' is almost nearing completion. The film is in the last leg of shooting and the team has roped in a Russian model to play a prominent role in the film.

    Yes, 'Raju Kannada Medium' will now feature a Russian model called Angelina. Angelina will be playing a prominent role in the film and the shooting of her portion will be held soon. The scenes will be shot abroad and with that portion, the shooting for the will be completed.

    The film is being written and directed by Naresh Kumar who had earlier directed 'Ist Rank Raju'. Avantika Shetty is the heroine for Gurunandan. The film is being produced by K A Suresh under Suresh Arts.

  • Smile Please Talkie Finished

    smile please image

    The talkie portion for Gurunandan starrer 'Smile Please' which is being produced by K Manju has been finished in a matter of one month and now the team is getting ready to shoot the songs.

    'Smile Please' is being written and directed by Raghu Samarth and the film conveys the message of 'Be Happy No BP'. Kavya Shetty and Neha Patil play female leads to Gurunandan. Rangayana Raghu, Sudha Belawadi, Srinivasaaprabhu and others play prominent roles in the film.

    Anup Seelin is composing the music, while Jagadish Wali is the cameraman.

  • Vijay Kiran To Direct Gurunandan

    vijay kiran to direct gurunandan

    Vijay Kiran's last release 'Singa' might not be a great hit, but the director is busy with a couple of films in hand. Vijay Kiran's new film is all set to be launched on Monday.

    The new film which is yet to be titled stars Gurunandan of 'First Rank Raju' fame. Gurunandan's last release was 'Missing Boy'. Though the film got good reviews, the film failed badly at box-office. After a six month gap, Gurunandan has signed this film.

    The film is being produced by Jayanna and Bhogendra under Jayanna Films banner. As of now the heroine nor the title has been finalised. Sadhu Kokila has been roped in to play a major role in the film.

  • Yash Releases The Songs Of Smile Please

    smile please audio launch image

    Actor Yash on Monday released the songs of 'Smile Please' composed by Anup Seelin at the Chamundeshwari Studios in Bangalore. Producer K Manju, director Raghu Samarth and others were present at the occasion.

    smileplease_audiorel.jpg'Smile Please' is being written and directed by Raghu Samarth and the film conveys the message of 'Be Happy No BP'. Kavya Shetty and Neha Patil play female leads to Gurunandan. Rangayana Raghu, Sudha Belawadi, Srinivasaaprabhu and others play prominent roles in the film.

  • ಅಂಬರೀಷ್ ಮೆಚ್ಚಿಕೊಂಡ್ರೆ ರಾಜು ನಾಚಿಕೊಂಡ್ರು..!

    ambi praises gurunandan

    ರಾಜು ಕನ್ನಡ ಮೀಡಿಯಂ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ತಾನು ಸೀರಿಯಸ್ಸಾಗಿದ್ದುಕೊಂಡು ನೋಡುವವರನ್ನು ನಗಿಸುವುದು ಚಿತ್ರದ ಹೀರೋ ಗುರುನಂದನ್ ಸ್ಪೆಷಾಲಿಟಿ. ಆದರೆ, ಇಂಥ ಹುಡುಗನೂ ನಾಚುವಂತೆ ಮಾಡಿದ್ದು ಅಂಬರೀಷ್. ಚಿತ್ರದ ಟ್ರೇಲರ್ ನೋಡಿದ ಅಂಬರೀಷ್ `ನಿಜಕ್ಕೂ ನಿಮ್ಮ ಹೀರೋ ತುಂಬಾ ಕಷ್ಟಪಟ್ಟಿದ್ದಾನೆ. ತಾಯಿ ಜೊತೆ ಹೋಗುತ್ತಾ ಇರುವ ಹೀರೋಯಿನ್‍ಗೆ ಹಿಂದಿನಿಂದ ಕಲ್ಲು ಹೊಡೆಯೋದು ಅಂದ್ರೆ ಏನ್ ತಮಾಷೆನಾ..? ಎಂದು ಛೇಡಿಸಿದ್ದಾರೆ. 

    ರಘುನಂದನ್ ನಾಚಿ ನೀರಾದರೆ, ಅಂಬರೀಷ್ ಗಹಗಹಿಸಿ ನಕ್ಕಿದ್ದಾರೆ. ಚಿತ್ರದಲ್ಲಿರೋದು ಜಾಲಿ ಜಾಲಿ ಕಥೆ. ಹಾಗೆಂದು ಸೀರಿಯಸ್‍ನೆಸ್ ಇಲ್ಲ ಎಂದುಕೊಳ್ಳಬೇಡಿ. ಚಿತ್ರದಲ್ಲೊಂದು ಉತ್ತಮ ಸಂದೇಶವಿದೆ. ನಿರ್ಮಾಪಕ ಸುರೇಶ್ ಹಾಗೂ ನಿರ್ದೇಶಕ ನರೇಶ್‍ಗೆ ಒಂದು ಒಳ್ಳೆಯ ಚಿತ್ರ ಕೊಟ್ಟಿದ್ದೇವೆ ಎಂಬ ಖುಷಿಯೂ ಇದೆ.

     

  • ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಮನವಿ

    sudeep requests fans to watch raju kannada medium

    ರಾಜು ಕನ್ನಡ ಮೀಡಿಯಂ ಚಿತ್ರತಂಡಕ್ಕೆ ಶುಭವಾಗಲಿ. ಅವರು ಗೆಲುವಿಗೆ ಅರ್ಹರು. ಅಭಿಮಾನಿಗಳೇ, ನಿಮ್ಮಲ್ಲಿ ನನ್ನ ಮನವಿ ಇಷ್ಟೆ. ರಾಜು ಕನ್ನಡ ಮೀಡಿಯಂ ಚಿತ್ರವನ್ನು ಪ್ರತಿಯೊಬ್ಬರೂ ಚಿತ್ರಮಂದಿರಗಳಲ್ಲಿ ನೋಡಿ. ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಿ.

    ಇದು ತಮ್ಮ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಮಾಡಿರುವ ಮನವಿ. ಅಷ್ಟೇ ಅಲ್ಲ, ರಾಜು ಕನ್ನಡ ಮೀಡಿಯಂ ಚಿತ್ರವನ್ನು ಬೆಂಬಲಿಸಿದ ಚಿತ್ರಲೋಕ ವೀರೇಶ್ ಅವರಿಗೂ ಸುದೀಪ್ ಧನ್ಯವಾದ ಹೇಳಿದ್ದಾರೆ. ಅಂದಹಾಗೆ ಸುದೀಪ್‍ಗೆ ರಾಜು ಕನ್ನಡ ಮೀಡಿಯಂ ಚಿತ್ರತಂಡದ ತಂತ್ರಜ್ಞರು ಹಾಗೂ ನಿರ್ಮಾಪಕರ ಚಿತ್ರದ ಮೇಲಿನ ಪ್ರೀತಿ ಇಷ್ಟವಾಗಿದೆ. ಸಿನಿಮಾ ಬಗ್ಗೆ ಇಷ್ಟೊಂದು ಪ್ಯಾಷನ್ ಇರುವವರು ಸೋಲಬಾರದು ಅನ್ನೋದು ಸುದೀಪ್ ಮನದಾಸೆ.

    ಥ್ಯಾಂಕ್ಯೂ ಸುದೀಪ್.

  • ಆವಂತಿಕಾ.. ರಾಜುಗೆ ಜೋಡಿಯಾಗಿದ್ದು ಹೇಗೆ..?

    raju kannada medium image

    ರಾಜು ಕನ್ನಡ ಮೀಡಿಯಂ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಮುಂದಿನ ಶುಕ್ರವಾರ ತೆರೆಗೆ ಬರುತ್ತಿರುವ ಚಿತ್ರದಲ್ಲಿ ಆವಂತಿಕಾ ಶೆಟ್ಟಿ, ರಾಜು ಹೃದಯ ಕದಿಯುವ ಚೆಲುವೆ. ರಂಗಿತರಂಗದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಆವಂತಿಕಾ ಶೆಟ್ಟಿಗೆ ಇದು 4ನೇ ಸಿನಿಮಾ. ಆರಂಭದಲ್ಲಿ ನಿರ್ಮಾಪಕರ ಜೊತೆ ಮುನಿಸಿಕೊಂಡಿದ್ದ ಆವಂತಿಕಾ, ನಂತರ  ಎಲ್ಲವನ್ನೂ ಮರೆತು ಚಿತ್ರವನ್ನು ಯಶಸ್ವಿಯಾಗಿ ಪೂರೈಸಿದ್ಧಾರೆ.

    ರಂಗಿತರಂಗದಂತಹ ಚಿತ್ರದಲ್ಲಿ ನಟಿಸಿದ್ದರೂ, ಆವಂತಿಕಾ ಅವರನ್ನು ಅಡಿಷನ್ ಮೂಲಕವೇ ಸಿನಿಮಾಗೆ ಆಯ್ಕೆ ಮಾಡಿಕೊಂಡರಂತೆ ನಿರ್ದೇಶಕ ನರೇಶ್ ಕುಮಾರ್. ಆವಂತಿಕಾ ಕೂಡಾ ಅಷ್ಟೆ, ಯಾವುದೇ ಬಿಗುಮಾನ ಇಟ್ಟುಕೊಳ್ಳದೆ ಅಡಿಷನ್ ಕೊಟ್ಟರು. ಅಷ್ಟೇ ಅಲ್ಲ, ಸೂಪರ್‍ಬೈಕ್ ರೈಡಿಂಗ್ ದೃಶ್ಯವನ್ನೂ ಲೀಲಾಜಾಲವಾಗಿ ನಿರ್ವಹಿಸಿದರು ಎಂದಿದ್ದಾರೆ ನರೇಶ್.

    ಆವಂತಿಕಾ ಶೆಟ್ಟಿ ಅವರಿಗೆ ಒಂದು ಅರ್ಬನ್ ಲುಕ್ ಇದೆ. ನಗರದ ಮಾಡರ್ನ್ ಹುಡುಗಿಯಾಗಿ ಆವಂತಿಕಾ ಶೆಟ್ಟಿ ಅತ್ಯುತ್ತಮವಾಗಿ ನಟಿಸಿದ್ದಾರೆ. ಚಿತ್ರದ ಪ್ರಮುಖ ನಾಯಕಿ ಅವರೇ ಅಂತಾರೆ ನರೇಶ್. ರಘುನಂದನ್ ಅವರನ್ನು ಯಾರೇ ಇವನು ಕನ್ನಡದ ಕಂದ ಎನ್ನುವ ಆವಂತಿಕಾ, ಚಿತ್ರದ ಟರ್ನಿಂಗ್ ಪಾಯಿಂಟ್ ಕ್ಯಾರೆಕ್ಟರ್.

  • ಇವರಿಗೆ ವೋಟೇ ಸಿಗಲಿಲ್ಲ..!

    these stars voting name missing in the list

    ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್‍ಗಳು ಈಗಾಗಲೇ ಬೆರಳಿಗೆ ಇಂಕಿನ ಗುರುತು ಹಾಕಿಸಿಕೊಂಡು ಸಂಭ್ರಮಿಸಿದ್ದಾರೆ. ಪ್ರಚಾರದ ರಾಯಭಾರಿಯಾಗಿದ್ದ ಯೋಗರಾಜ್ ಭಟ್, ಪ್ರಣೀತಾ ಸೇರಿದಂತೆ ಚಿತ್ರರಂಗದ ಎಲ್ಲ ಸ್ಟಾರ್‍ಗಳೂ ವೋಟ್ ಹಾಕಿದ್ದಾರೆ. ಕುಟುಂಬ ಸಮೇತರಾಗಿ ವೋಟ್ ಮಾಡಿ ಜಾಗೃತಿ ಸಂದೇಶ ಸಾರಿದ್ದಾರೆ. ಆದರೆ, ಇಷ್ಟೆಲ್ಲ ಆದರೂ ಬೆಂಗಳೂರಿನ ಜನ ವೋಟ್ ಹಾಕೋಕೆ ಬರಲಿಲ್ಲ.

    ವೋಟ್ ಇದ್ದವರು ವೋಟ್ ಹಾಕಿದ್ದರೆ, ಇನ್ನೂ ಕೆಲವು ಸ್ಟಾರ್‍ಗಳಿಗೆ ವೋಟ್ ಹಾಕೋ ಭಾಗ್ಯವೇ ಸಿಗಲಿಲ್ಲ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ ಅವರ ಹೆಸರನ್ನು ಮತದಾರರ ಪಟ್ಟಿಯಿಂದಲೇ ತೆಗೆದುಬಿಟ್ಟಿದ್ದಾರಂತೆ. ಹೀಗಾಗಿ ಅವರು ಈ ಬಾರಿ ಮತಗಟ್ಟೆಯಿಂದ ದೂರವೇ ಉಳಿದರು.

    ಇನ್ನು ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಮತಗಟ್ಟೆಗೆ ಹೋದಾಗ ಶಾಕ್ ಕಾದಿತ್ತು. ಇವರ ಬಳಿ ವೋಟರ್ ಐಡಿ ಇದ್ದರೂ, ಮತದಾರರರ ಲಿಸ್ಟ್‍ನಲ್ಲಿ ಹೆಸರೇ ಇರಲಿಲ್ಲ. ಹೀಗಾಗಿ ಮತದಾನ ಮಾಡಲು ಆಗಲಿಲ್ಲ.

    ಬಹುತೇಕ ಚಿತ್ರತಾರೆಯರ ವೋಟ್ ಬೆಂಗಳೂರಿನಲ್ಲೇ ಇತ್ತು. ಬಿಗ್‍ಬಾಸ್ ಪ್ರಥಮ್, ಬೆಂಗಳೂರಿನಲ್ಲೇ ಇದ್ದರೂ ವೋಟ್ ಇದ್ದದ್ದು ಕೊಳ್ಳೇಗಾಲದಲ್ಲಿ. ಮತದಾನದ ಹಕ್ಕು ಮಿಸ್ ಮಾಡದ ಪ್ರಥಮ್, ಬೆಳ್ಳಂಬೆಳಗ್ಗೆಯೇ ಕೊಳ್ಳೇಗಾಲಕ್ಕೆ ಹೋಗಿ ಮತದಾನ ಮಾಡಿದ್ದು ವಿಶೇಷ.

  • ಕನ್ನಡ ಮೀಡಿಯಂ ರಾಜು ಟ್ರೇಲರ್‍ನಲ್ಲಿ ಅಂಥಾದ್ದೇನಿದೆ..?

    raju kannada medium image

    ರಾಜು ಕನ್ನಡ ಮೀಡಿಯಂ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಗೊತ್ತಿರುವ ವಿಚಾರ. ಆದರೆ, ಆ ಟ್ರೇಲರ್‍ನ ಪುಟ್ಟ ವಿಡಿಯೋವನ್ನು ಎಡಿಟ್ ಮಾಡಿರುವ ಅಭಿಮಾನಿಗಳು, ಅದನ್ನು ತಮ್ಮ ತಮ್ಮ ಪೇಜ್‍ಗಳಲ್ಲಿ ಹಾಕಿಕೊಂಡು ಷೇರ್ ಮಾಡುತ್ತಿದ್ದಾರೆ. ಇಷ್ಟಕ್ಕೂ ಆ ವಿಡಿಯೋವನ್ನು ಕನ್ನಡಿಗರು ಮೆಚ್ಚಿದ್ದೇಕೆ..? ಅದರಲ್ಲಿ ಅಂಥದ್ದೇನಿದೆ ಅನ್ನೋ ಕುತೂಹಲ ಇದೆಯಾ..?

    ಆ ವಿಡಿಯೋದಲ್ಲಿರೋದು ಇಷ್ಟೆ. ಕನ್ನಡ ರಾಜು ಫಾರಿನ್‍ಗೆ ಹೋಗಿರ್ತಾನೆ. ಆತನನ್ನು ವಿದೇಶಿ ಸುಂದರಿಯೊಬ್ಬಳು ಮಾತನಾಡಿಸಿ ನೀನು ಮಾತನಾಡುತ್ತಿರುವುದು ಯಾವ ಭಾಷೆ. ಕೇಳೋಕೆ ಚೆನ್ನಾಗಿದೆ ಅಂತಾಳೆ.

    ರಾಜು, ಕನ್ನಡ.. ಕಸ್ತೂರಿ ಕನ್ನಡ ಅಂಥಾನೆ. ಆ ಫಾರಿನ್ ಹುಡುಗಿ, ನಾನೂ ಕನ್ನಡ ಕಲಿಯುತ್ತೇನೆ.. ನನಗೂ ಕನ್ನಡ ಕಲಿಸಿ ಎಂದಾಗ ರಾಜು ಹೇಳುವುದು ಇಷ್ಟು. ನಿಮಗೆ ಇರುವ ಈ ಕಳಕಳಿ, ನಮ್ಮ ಪಕ್ಕದ ರಾಜ್ಯದಿಂದ ಬಂದಿರುವವರಿಗೆ ಇದ್ದು ಕನ್ನಡ ಕಲಿತಿದ್ದರೆ, ಕನ್ನಡ ನವೆಂಬರ್ ಕನ್ನಡ ಅಲ್ಲ, ನಂಬರ್ 1 ಕನ್ನಡ ಆಗುತ್ತಿತ್ತು ಅಂತಾನೆ. 

    ನವೆಂಬರ್ ರಾಜ್ಯೋತ್ಸವ ಬೇರೆ ಹತ್ತಿರ ಬರುತ್ತಿರುವಾಗ, ರಾಜು ಕನ್ನಡ ಮೀಡಿಯಂನ ಈ ಡೈಲಾಗ್ ಇಷ್ಟವಾಗಿರೋದೇ ಈ ಕಾರಣಕ್ಕೆ.

     

  • ಕನ್ನಡ ಮೀಡಿಯಂ ರಾಜುಗೆ 50 ಲಕ್ಷ+ ದಾಖಲೆ

    sudeep, gurunandan, avantika shetty

    ರಾಜು ಕನ್ನಡ ಮೀಡಿಯಂ. ಜನವರಿ 19ಕ್ಕೆ ರಿಲೀಸ್ ಆಗಲಿರುವ ಚಿತ್ರ. ಫಸ್ಟ್ ರ್ಯಾಂಕ್ ರಾಜು ಗುರುನಂದನ್, ರಂಗಿತರಂಗದ ಆವಂತಿಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಕಿಚ್ಚ ಸುದೀಪ್ ಕಿಕ್ ಕೂಡಾ ಇದೆ.

    ಸ್ಟೈಲಿಶ್ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿರುವ ಸುದೀಪ್ ಲುಕ್‍ಗೆ ಅಭಿಮಾನಿಗಳಂತೂ ಫಿದಾ. ಹೀಗಾಗಿಯೇ ಚಿತ್ರದ ಟ್ರೇಲರ್ ದಾಖಲೆಯನ್ನೇ ಬರೆದುಬಿಟ್ಟಿದೆ. ಯೂಟ್ಯೂಬ್, ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಸಿನಿಮಾಗೆ 50 ಲಕ್ಷಕ್ಕೂ ಹೆಚ್ಚು ಜನ ಶುಭ ಕೋರಿದ್ದಾರೆ. ನೋಡಿದ್ದಾರೆ. ಮೆಚ್ಚಿದ್ದಾರೆ.

    ಇದು ಖುಷಿ ಕೊಟ್ಟಿರೋದು ಸಹಜವಾಗಿಯೇ ನಿರ್ಮಾಪಕ ಸುರೇಶ್ ಅವರಿಗೆ. ಎಷ್ಟೆಂದರೂ ಅವರು ನಿರ್ಮಾಪಕರು. ನೋಡುವವರ ಸಂಖ್ಯೆ ಹೆಚ್ಚಿದಷ್ಟೂ ಖುಷಿ ಪಡುವವರು. ಅವರೆಲ್ಲರೂ ಥಿಯೇಟರ್‍ಗೆ ಬಂದು ಖುಷಿಪಡುವಂತಾಗಲಿ. ಕನ್ನಡ ಮೀಡಿಯಂ ರಾಜುಗೆ ಚಿನ್ನದ ಪದಕ ಕೊಡಲಿ ಎಂದು ಹಾರೈಸೋಣ.

  • ಕಿಚ್ಚನ ಎಫೆಕ್ಟ್, ರಾಜು ಕನ್ನಡ ಮೀಡಿಯಂಗೆ ಫಾರಿನ್ ಡಿಮ್ಯಾಂಡ್

    kiccha effect

    ಕೆ.ಎ. ಸುರೇಶ್‌ ನಿರ್ಮಾಣದ  'ರಾಜು ಕನ್ನಡ ಮೀಡಿಯಂ' ಚಿತ್ರ, ಭರ್ಜರಿ ಸದ್ದು ಮಾಡುತ್ತಿದೆ. ಟೀಸರ್ ಬಿಡುಗಡೆಯ ನಂತರವಂತೂ ಡಿಮ್ಯಾಂಡ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆಯಂತೆ. ಅದರಲ್ಲೂ ಸುರೇಶ್ ಥ್ರಿಲ್ಲಾಗೋಕೆ ಕಾರಣ, ವಿದೇಶಗಳಲ್ಲಿ ಸೃಷ್ಟಿಯಾಗಿರುವ ಕ್ರೇಜ್. ಚಿತ್ರವನ್ನು ವಿದೇಶಗಳಲ್ಲಿ ವಿತರಣೆ ಮಾಡಲು ವಿತರಕರು ಬೆನ್ನು ಬಿದ್ದಿದ್ದಾರಂತೆ. ಕಾರಣವೇನೆಂದು ಹುಡುಕಿದರೆ ಸಿಕ್ಕಿರುವ ಉತ್ತರ ಕಿಚ್ಚ ಸುದೀಪ್.

    ಚಿತ್ರದ ಟೀಸರ್ ಬಾಲಿವುಡ್​ ಲೆವೆಲ್ಲಿನಲ್ಲಿದೆ. 'ಫಸ್ಟ್ ರ‍್ಯಾಂಕ್ ರಾಜು' ಖ್ಯಾತಿಯ ಗುರುನಂದನ್, ರಾಜು ಪಾತ್ರ ನಿಭಾಯಿಸಿದ್ದಾರೆ. ರಂಗಿತರಂಗ ಖ್ಯಾತಿಯ ಅವಂತಿಕಾ ಶೆಟ್ಟಿ ನಾಯಕಿ.  ಇವರ ಜೊತೆ ಆಶಿಕ ರಂಗನಾಥ್ ಹಾಗೂ ಅಂಜೇಲಿನ ಕೂಡಾ ನಾಯಕಿಯರಾಗಿ ನಟಿಸಿದ್ದಾರೆ. ಸಾಧು ಕೋಕಿಲ, ಕುರಿ ಪ್ರತಾಪ್, ಚಿಕ್ಕಣ್ಣ, ಸುಚಿಂದ್ರ ಪ್ರಸಾದ್, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಕಿರಿಕ್ ಕೀರ್ತಿ, ನಿರ್ದೇಶಕರಾದ ಓಂ ಪ್ರಕಾಶ್ ರಾವ್, ಇಂದ್ರಜಿತ್ ಲಂಕೇಶ್.. ಹೀಗೆ ಅದ್ಧೂರಿ ತಾರಾಗಣದ ಚಿತ್ರ, ರಿಲೀಸ್ ಆಗೋಕೆ ರೆಡಿಯಾಗಿದೆ.

  • ಕ್ಯೂಆರ್ ಕೋಡ್‍ನಲ್ಲಿ ಮಿಸ್ಸಿಂಗ್ ಬಾಯ್

    missing boy in qr code

    ಕ್ಯೂಆರ್ ಕೋಡ್ ಎಂದರೆ ಏನು..? ಈಗಿನ ಕಾಲದ ನೆಟ್ ಪ್ರವೀಣರಿಗೆ ಅದನ್ನು ಬಿಡಿಸಿ ಹೇಳಬೇಕಾದ ಅಗತ್ಯವೇನಿಲ್ಲ. ನೀವು ಪೇಟಿಎಂನಲ್ಲೋ.. ಭೀಮ್ ಆ್ಯಪ್‍ನಲ್ಲೋ ಹಣ ಟ್ರಾನ್ಸ್‍ಫರ್ ಮಾಡಬೇಕೆಂದರೆ, ಆ ಅಕೌಂಟ್‍ನ ಪುಟ್ಟದೊಂದು ಕೊಲಾಜ್ ಮಾದರಿಯ ಚಿತ್ರವನ್ನು ಸ್ಕ್ಯಾನ್ ಮಾಡುತ್ತೀರಿ ತಾನೇ.. ಅದನ್ನು ಕ್ಯೂಆರ್ ಕೋಡ್ ಅಂತಾರೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ, ಅದಕ್ಕೆ ಸಂಬಂಧಪಟ್ಟ ಖಾತೆ ಕಾಣಿಸಿಕೊಳ್ಳುತ್ತಲ್ಲ..

    ಹಾಗೆಯೇ.. ಮಿಸ್ಸಿಂಗ್ ಬಾಯ್ ಚಿತ್ರತಂಡದವರೂ ಒಂದು ಕೋಡ್ ಮಾಡಿದ್ದಾರೆ. ಈ ಕ್ಯೂಆರ್ ಕೋಡ್‍ನ್ನು ಸ್ಕ್ಯಾನ್ ಮಾಡಿದರೆ ಸಾಕು, ಚಿತ್ರದ ಎಲ್ಲ ವಿವರಗಳೂ, ಮಾಹಿತಿಗಳೂ, ಫೋಟೋಗಳೂ, ವಿಡಿಯೋಗಳು ಎಲ್ಲವೂ ಒಟ್ಟಿಗೇ ಸಿಗುತ್ತವೆ. ಸೋಷಿಯಲ್ ನೆಟ್‍ವರ್ಕುಗಳಲ್ಲಿ ಈ ಕ್ಯೂಆರ್ ಕೋಡ್ ಸಿಗುತ್ತಿದೆ.

    ಫಸ್ಟ್ ರ್ಯಾಂಕ್ ರಾಜು ಗುರುನಂದನ್ ಅಭಿನಯದ ಮಿಸ್ಸಿಂಗ್ ಬಾಯ್ ಸಿನಿಮಾ, ಚಿಕ್ಕಂದಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಎಲ್ಲೋ ಬೆಳೆದು ದೊಡ್ಡವರಾದವರು.. ಹೆತ್ತವರನ್ನು ಹುಡುಕಿಕೊಂಡು ಬರುವ ಕಥೆ ಹೊಂದಿದೆ. ರಘುರಾಮ್ ನಿರ್ದೇಶನದ ಸಿನಿಮಾ ಮುಂದಿನ ವಾರ ತೆರೆಗೆ ಬರುತ್ತಿದೆ.

  • ಜೇಮ್ಸ್ ಬಾಂಡ್ ರಾಜು

    first rank raju is now james bond raju

    ಫಸ್ಟ್ ರ್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ಖ್ಯಾತಿಯ ಗುರುನಂದನ್, ಈಗ ಜೇಮ್ಸ್ ಬಾಂಡ್ ಆಗುತ್ತಿದ್ದಾರೆ. ಭಾಗ್ಯರಾಜ್, ಕಳ್ಬೆಟ್ಟದ ದರೋಡೆಕೋರರು ಚಿತ್ರ ನಿರ್ದೇಶಿಸಿದ್ದ ದೀಪಕ್ ಮಧುವನಹಳ್ಳಿ ನಿರ್ದೇಶನದ ರಾಜು ಜೇಮ್ಸ್ ಬಾಂಡ್ ಚಿತ್ರಕ್ಕೆ ಗುರುನಂದನ್ ಹೀರೋ.

    ಪಂಜಾಬ್‍ನಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ ಇದು. ಬ್ಯಾಂಕ್ ರಾಬರಿ ಕಥೆಯಂತೆ. ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವನ್ನು ಕನ್ನಡೀಕರಿಸಿ ಸಿನಿಮಾ ಮಾಡಲಾಗುತ್ತಿದೆ. ಲಂಡನ್‍ನಲ್ಲಿಯೂ ಒಂದಿಷ್ಟು ದೃಶ್ಯಗಳ ಚಿತ್ರೀಕರಣ ಇದೆಯಂತೆ. ಆಗಸ್ಟ್ 17ಕ್ಕೆ ಸಿನಿಮಾ ಸೆಟ್ಟೇರುತ್ತಿದೆ.

  • ತಾಯಿ ಕಳೆದುಕೊಂಡವರು, ಅಮ್ಮನನ್ನು ಹುಡುಕುವ ಕಥೆ ಮಿಸ್ಸಿಂಗ್ ಬಾಯ್

    missing boy is based on real life inciden

    ಯಾವುದೋ ಕಾರಣಕ್ಕಾಗಿ, ತಾಯಿಯನ್ನು ಕಳೆದುಕೊಳ್ಳೋ ಮಕ್ಕಳು. 30 ವರ್ಷ ಕಳೆದ ಮೇಲೆ ತಾಯಿಯನ್ನು ಹುಡುಕಿಕೊಂಡು ಬರುವ ಮಗ. ಇದು ಹುಬ್ಬಳ್ಳಿಯಲ್ಲಿ ನಡೆದಿದ್ದ ರಿಯಲ್ ಸ್ಟೋರಿ. ಅಂಥಾದ್ದೊಂದು ಪ್ರಕರಣವನ್ನು ಕೇವಲ ಮಾನವೀಯತೆ ಮೇಲೆ ಹುಡುಕಿಕೊಟ್ಟಿದ್ದ ಪೊಲೀಸ್ ಅಧಿಕಾರಿಯ ಹೆಸರು ಲವಕುಮಾರ್. ಅದೇ ರಿಯಲ್ ಕಥೆಯನ್ನು ಮಿಸ್ಸಿಂಗ್ ಬಾಯ್ ಎಂದು ಸಿನಿಮಾ ಮಾಡಿದ್ದಾರೆ ನಿದೇಶಕ ರಘುರಾಮ್.

    ಗುರುನಂದನ್ ತಾಯಿಯನ್ನು ಹುಡುಕುವ ಮಗನಾಗಿ ನಟಿಸಿದ್ದಾರೆ. ರಿಯಲ್ ಕಥೆಯಲ್ಲಿ ಹೇಗೆ.. ಕಥೆಯ ಜಾಡು ಸಾಗುತ್ತದೋ.. ಅದೇ ಜಾಡಿನಲ್ಲಿ ಚಿತ್ರಕಥೆ ಕಟ್ಟಿದ್ದಾರೆ ರಘುರಾಮ್. ಎಲ್ಲಿಯೂ ಇದು ವಾಸ್ತವಕ್ಕೆ ದೂರ ಎನಿಇಸುವುದಿಲ್ಲ ಎಂದು ಭರವಸೆ ಕೊಡ್ತಾರೆ ರಘುರಾಮ್

  • ತಾಯಿನೇ ಎಲ್ಲ.. ಬದಲಾಗೋದಿಲ್ಲ.. ಮಿಸ್ಸಿಂಗ್ ಬಾಯ್ ಜೋಗಿ ಹಾಡು

    missing boy film gets jogi song

    ಜೋಗಿ ಚಿತ್ರದ ಸೂಪರ್ ಹಿಟ್ ಹಾಡು ಬೇಡುವೆನು ವರವನ್ನು ಕೊಡು ತಾಯಿ ಜನ್ಮವನು ಕಡೆತನಕ ಮರೆಯಲ್ಲ ಜೋಗಿ.. ಆ ಹಾಡು ಹಿಟ್ ಅಷ್ಟೇ ಅಲ್ಲ, ನೋಡುಗರ ಕಣ್ಣಾಲಿಗಳನ್ನು ಒದ್ದೆ ಮಾಡುವ ಶಕ್ತಿ ಆ ಹಾಡು ಮತ್ತು ಸಾಹಿತ್ಯಕ್ಕಿದೆ. ಹಾಡಿನ ಆ ತುಣುಕನ್ನು ಮಿಸ್ಸಿಂಗ್ ಬಾಯ್ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ತಂದೆ-ತಾಯಿಯಿದ್ದರೂ ಅನಾಥನಾಗುವ ಹುಡುಗ, ದೊಡ್ಡವನಾದ ಮೇಲೆ ಹಳೆಯ ನೆನಪುಗಳನ್ನು ಬೆನ್ನತ್ತಿಕೊಂಡು ಹೆತ್ತವರನ್ನು ಹುಡುಕುವುದೇ ಚಿತ್ರದ ಕತೆ. 

    ಚಿತ್ರದ ಕಥೆಗೆ ಹೇಳಿ ಮಾಡಿಸಿದಂತಿರುವ ಹಾಡನ್ನು ನಿರ್ದೇಶಕ ರಘುರಾಮ್ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಚಿತ್ರದ ತೀವ್ರತೆಯನ್ನು ಈ ಹಾಡು ಇನ್ನಷ್ಟು ಹೆಚ್ಚಿಸುತ್ತೆ. ಚಿತ್ರದ ಬಗ್ಗೆ ಅಪಾರ ಮೆಚ್ಚುಗೆಯ ಮಾತು ಕೇಳಿಬರುತ್ತಿವೆ. ಈ ಮಾತುಗಳು ರಘುರಾಮ್, ಕೊಲ್ಲ ಪ್ರವೀಣ್ ಅವರಿಗಷ್ಟೇ ಅಲ್ಲ, ಕಿಚ್ಚ ಸುದೀಪ್, ನಿರ್ದೇಶಕ ಸಂತೋಷ್ ಆನಂದ್‍ರಾಮ್, ಕಾರ್ತಿಕ್ ಗೌಡ ಮೊದಲಾದವರಿಗೆಲ್ಲ ಖುಷಿ ಕೊಟ್ಟಿದೆ.

  • ಫಸ್ಟ್ Rank ರಾಜು ಭಲೇ ಅದೃಷ್ಟವೋ ಅದೃಷ್ಟ

    raju kannada medium image

    ಗುರುನಂದನ್ ಆಂದ್ರೆ  ಯಾರು ಅಂತಾ ಕೇಳೋವ್ರು ಕೂಡಾ ಫಸ್ಟ್ Rank ರಾಜು ಅಂದ್ರೆ ಕಣ್ಣರಳಿಸ್ತಾರೆ. ಈ ಬಾರಿ ರಾಜುಗೆ ಅಲಿಯಾಸ್ ಗುರುನಂದನ್‍ಗೆ ಅದೃಷ್ಟ ಖುಲಾಯಿಸಿಟ್ಟಿದೆ. ಅದು ಮೂರ್ ಮೂರು ಹೀರೋಯಿನ್‍ಗಳ ಜೊತೆ ರೊಮ್ಯಾನ್ಸ್ ಮಾಡೋ ಅವಕಾಶ. ಅದು ಒಲಿದಿರೋದು ರಾಜು ಕನ್ನಡ ಮೀಡಿಯಂನಲ್ಲಿ.

    ಚಿತ್ರದಲ್ಲಿ ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಮತ್ತು ಏಂಜಲಿನಾ ಎಂಬ ಮೂವರು ತಾರೆಯರಿದ್ದಾರೆ. ಹೈಸ್ಕೂಲ್‍ನಲ್ಲಿಂದಲೇ ಲವ್ ಶುರುವಾಗುತ್ತೆ. ಅಲ್ಲಿ ಆಶಿಕಾ ರಂಗನಾಥ್ ಜೊತೆ. ಆಶಿಕಾ ಜೊತೆಗಿನ ರೋಲ್‍ಗಾಗಿ 15 ಕೆಜಿ ತೂಕ ಇಳಿಸಿಕೊಂಡಿದ್ದರಂತೆ ಗುರುನಂದನ್. 

    ನಂತರ ಸಾಫ್ಟ್ವೇರ್ ಕಂಪೆನಿ ಉದ್ಯೋಗಿಯಾಗಿ, ಕನ್ನಡದ ಕಂದನಾಗಿ ಆವಂತಿಕಾ ಶೆಟ್ಟಿ ಜೊತೆ ನಟಿಸ್ತಾರೆ ಗುರುನಂದನ್. ಇದಾದ ಮೇಲೇ ಫಾರಿನ್‍ನಲ್ಲಿ ಏಂಜಲಿನಾ ಜೊತೆ ಲವ್. ಈ ಪ್ರೀತಿ, ಪ್ರೇಮ, ಪ್ರಣಯದ ಕಥೆಯನ್ನು ನಗಿಸುತ್ತಲೇ ಹೇಳಿದ್ದಾರೆ ನಿರ್ದೇಶಕ ನರೇಶ್ ಕುಮಾರ್. ನಿರ್ದೇಶಕರ ಕನಸು ನನಸು ಮಾಡೋಕೆ ಎಲ್ಲ ರೀತಿಯ ಸೌಲಭ್ಯವನ್ನೂ ನೀಡಿರುವ ನಿರ್ಮಾಪಕ ಸುರೇಶ್, ಈಗ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

  • ಫಸ್ಟ್ ರ್ಯಾಂಕ್ ರಾಜುಗೆ ಹರಿಪ್ರಿಯಾ ಜೋಡಿ..?

    haripriya in gurunandan's movie ?

    ಕನ್ನಡದ ಬಹುಬೇಡಿಕೆಯ ನಾಯಕಿಯಾಗಿರುವ ಹರಿಪ್ರಿಯಾ, ಗುರುನಂದನ್ ಚಿತ್ರಕ್ಕೆ ನಾಯಕಿಯಾಗುತ್ತಾರಾ..? ಹರಿಪ್ರಿಯಾ ಎದುರು ಆ ರೀತಿಯ ಪ್ರಪೋಸಲ್ ಅಂತೂ ಇದೆ. ಗುರುನಂದನ್ ನಾಯಕಿಯಾಗಿರುವ ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ನಿರ್ಮಾಪಕರು. ರಾಮ್‍ಲೀಲಾ, ಸಿಂಗ ಖ್ಯಾತಿಯ ವಿಜಯ್ ಕಿರಣ್, ಈ ಚಿತ್ರಕ್ಕೆ ನಿರ್ದೇಶಕ.

    ಲವ್ ಕಮ್ ಕಾಮಿಡಿ ಜಾನರ್‍ನ ಕಥೆ ಹರಿಪ್ರಿಯಾಗೂ ಇಷ್ಟವಾಗಿದೆಯಂತೆ. ಒಂದು ಹಂತದ ಮಾತುಕತೆ ಮುಗಿದಿದ್ದು, ಫೈನಲ್ ಹಂತದಲ್ಲಿದೆ.