` manju swaraj - chitraloka.com | Kannada Movie News, Reviews | Image

manju swaraj

  • Manju Swaraj Busy With 'Raghupathi Raghava Raja Ram'

    manju swaraj busy with raghupathi raghava raja ram

    Manju Swaraj who had directed 'Pataki' last year is back with a new film called  'Raghupathi Raghava Raja Ram'. The film is about four people called Raghupathi, Raghava, Raja and Ram and Manju has already shot for 15 days for this film.

    'Raghupathi Raghava Raja Ram' stars Sadhu Kokila, Ravishankar Gowda, Kuri Pratap and Chikkanna in prominent roles. Shruthi Hariharan is the heroine in this film. Apart from them, Shivaramanna, Sumithramma, Rajesh Nataranga and others play prominent roles in the film.

    'Raghupathi Raghava Raja Ram' is being produced by S V Babu and the film is a horror comedy. The shooting for the film is currently being held at the Mohan B Kere Studios in Bangalore. Suresh Babu is the cameraman, while Abhiman Roy is the music director.

     

  • Manju Swaraj Weds Sahana in Mandya

    manju swaraj wedding image

    Director Manju Swaraj of 'Shravani Subramanya' entered into a wedlock with Sahana on Sunday in Mandya. Shivarajakumar, Ganesh, Amulya, Karunya Ram, Sindhu Lokanath, producer Mahadev and others visited the wedding and wished the newly wed couple a happy married life.

  • ಮಂಜು ಸ್ವರಾಜ್, ರಾಧಿಕಾ ಕುಮಾರಸ್ವಾಮಿ ಜೊತೆ ಜೊತೆಯಲಿ

    radhika kuamraswamy's next film with manju swaraj

    ಒಂದೆಡೆ ನಿರ್ದೇಶಕ ಮಂಜು ಸ್ವರಾಜ್, ಮನೆ ಮಾರಾಟಕ್ಕಿದೆ ಚಿತ್ರದ ಯಶಸ್ಸಿನ ಅಲೆಯಲ್ಲಿದ್ದಾರೆ. ಮತ್ತೊಂದೆಡೆ ರಾಧಿಕಾ ಕುಮಾರಸ್ವಾಮಿ, ದಮಯಂತಿ ಮೂಲಕ ಕಮ್‌ಬ್ಯಾಕ್ ಮಾಡಿ ಪ್ರೇಕ್ಷಕರ ರಿಯಾಕ್ಷನ್ ನೋಡುತ್ತಿದ್ದಾರೆ. ಇವರಿಬ್ಬರೂ ಈಗ ಜೊತೆ ಜೊತೆಯಾಗುತ್ತಿದ್ದಾರೆ ಅನ್ನೋದು ಗಾಂಧಿನಗರದ ಸೆನ್ಸೇಷನ್.

    ಮಂಜು ಸ್ವರಾಜ್ ಅವರು ಹೇಳಿರೋ ಕಥೆಯೊಂದರ ಒನ್‌ಲೈನ್, ರಾಧಿಕಾ ಅವರಿಗೂ ಇಷ್ಟವಾಗಿದೆಯಂತೆ. ಅದೊಂದು ಕಾಮಿಡಿ ಬೇಸ್ ಇರುವ ಲವ್ ಸ್ಟೋರಿಯಾಗಿದ್ದು, ಸ್ವತಃ ನಿರ್ಮಾಪಕಿಯಾಗಲು ಆಸಕ್ತಿ ತೋರಿಸಿದ್ದಾರಂತೆ ರಾಧಿಕಾ. ಎಲ್ಲವೂ ಅಂದುಕೊAಡAತೆಯೇ ಆದರೆ, ಮುಂದಿನ ವರ್ಷದಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಶಮಿಕಾ ಬ್ಯಾನರ್‌ನಲ್ಲಿ ಮಂಜು ಸ್ವರಾಜ್ ನಿರ್ದೇಶನದ ಹೊಸ ಚಿತ್ರ ಶುರುವಾಗಲಿದೆ.

  • ಶರಣ್ ಚಿತ್ರಕ್ಕೆ ಮಂಜು ಸ್ವರಾಜ್ ನಿರ್ದೇಶನ

    sharan's new movie with manju swaraj

    ಶ್ರೀಕಂಠ ಚಿತ್ರದ ಮೂಲಕ ಶಿವರಾಜ್ ಕುಮಾರ್ ಅವರನ್ನು ವಿಭಿನ್ನ ಗೆಟಪ್‍ನಲ್ಲಿ ತೋರಿಸಿದ್ದ ಮಂಜು ಸ್ವರಾಜ್, ಈಗ ಶರಣ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಮಾಸ್ ಲೀಡರ್ ನಂತರ ತರುಣ್ ಶಿವಪ್ಪ ನಿರ್ಮಿಸುತ್ತಿರುವ ಚಿತ್ರಕ್ಕೆ ಶರಣ್ ಹೀರೋ. ಮಂಜು ಸ್ವರಾಜ್ ನಿರ್ದೇಶಕ.

    ಚಿತ್ರಕ್ಕೆ ಕಥೆ ಸಿದ್ಧವಾಗುತ್ತಿದ್ದು, ತರುಣ್ ಸುಧೀರ್ ಆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಶರಣ್ ಅಭಿನಯದ ರ್ಯಾಂಬೋ, ವಿಕ್ಟರಿ, ಅಧ್ಯಕ್ಷ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದ ತರುಣ್ ಸುಧೀರ್, ಮತ್ತೊಮ್ಮೆ ಶರಣ್ ಚಿತ್ರಕ್ಕೆ ಜೊತೆಯಾಗಿದ್ದಾರೆ. ರ್ಯಾಂಬೋ 2 ಚಿತ್ರದಲ್ಲಿ ಬ್ಯುಸಿಯಾಗಿರುವ ಶರಣ್, ನಂತರ ಮಲಯಾಳಂನ `ಟು ಕಂಟ್ರೀಸ್' ಚಿತ್ರದ ರೀಮೇಕ್‍ನಲ್ಲಿ ನಟಿಸಲಿದ್ದಾರೆ. ಅದಾದ ಮೇಲೆ ಮಂಜು ಸ್ವರಾಜ್ ನಿರ್ದೇಶನದ ಚಿತ್ರ ಶುರುವಾಗಲಿದೆ.

  • ಶ್ರಾವಣಿ ಸುಬ್ರಹ್ಮಣ್ಯದ ಮಂಜು ಸ್ವರಾಜ್ ಮನೆ ಮಾರಾಟಕ್ಕಿದೆ

    manju swarja's horror comedy mane maratakkidhe

    ಮನೆ ಮಾರಾಟಕ್ಕಿದೆ. ಇದು ಈ ವಾರ ರಿಲೀಸ್ ಆಗುತ್ತಿರುವ ಸಿನಿಮಾ. ಈ ಚಿತ್ರದ ನಿರ್ದೇಶಕ ಮಂಜು ಸ್ವರಾಜ್. ಇದುವರೆಗೆ ಅವರು ನಿರ್ದೇಶಿಸಿರುವುದು ೪ ಸಿನಿಮಾಗಳು. ಒಂದಕ್ಕಿAತ ಒಂದು ಡಿಫರೆಂಟ್ ಎನ್ನುವುದೇ ಮಂಜು ಸ್ವರಾಜ್ ಸ್ಪೆಷಾಲಿಟಿ.

    ಮೊದಲ ಚಿತ್ರ ಶಿಶಿರ. ಪ್ರೇಮಾ ಕಂ ಬ್ಯಾಕ್ ಸಿನಿಮಾ. ಒಂದು ಲೆವೆಲ್ಲಿಗೆ ಸಕ್ಸಸ್ ಆಗಿದ್ದ ಸಿನಿಮಾ, ಪ್ರೇಕ್ಷಕರನ್ನು ಥ್ರಿಲ್ ಮಾಡಿತ್ತು.

    ನಂತರದ್ದು ಶ್ರಾವಣಿ ಸುಬ್ರಹ್ಮಣ್ಯ. ಗಣೇಶ್‌ಗೆ ಅತಿ ದೊಡ್ಡ ಬ್ರೇಕ್ ಕೊಟ್ಟ ಚಿತ್ರವದು.

    ಇನ್ನು ಶ್ರೀಕಂಠ ಚಿತ್ರ ಶಿವಣ್ಣಗೆ ಬೇರೆಯದೇ ಇಮೇಜ್ ಕೊಟ್ಟರೆ, ಪಟಾಕಿ ಚಿತ್ರ ನಕ್ಕು ನಲಿಸಿತ್ತು.

    ಈಗ ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಬರುತ್ತಿದ್ದಾರೆ ಮಂಜು ಮಾಂಡವ್ಯ. ಎಸ್.ವಿ. ಬಾಬು ನಿರ್ಮಾಣದ ಚಿತ್ರದಲ್ಲಿರೋದು ಕಾಮಿಡಿ ಹಾರರ್. ಇದೇ ನವೆಂಬರ್ ೧೫ಕ್ಕೆ ರಿಲೀಸ್. ಹೆದರಿಕೊಂಡು ನಗೋಕೆ ರೆಡಿಯಾಗಿ.

  • ಸ್ವಮೇಕ್‍ಗಾಗಿ ಕಾದು ಸಿನಿಮಾ ಒಪ್ಪಿದ ಗುರುನಂದನ್

    gurunandan okays manju swaraj

    ಫಸ್ಟ್ ರ್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ಚಿತ್ರಗಳ ಸಕ್ಸಸ್ ನಂತರ ಗುರುನಂದನ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಅದು ಮಂಜು ಸ್ವರಾಜ್ ನಿರ್ದೇಶನದ ಚಿತ್ರ. ಕಥೆ ಓಕೆ ಆಗಿದೆ. ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ರಾಜು ಕನ್ನಡ ಮೀಡಿಯಂ ನಂತರ ಗುರುನಂದನ್ ಅವರ ಬಳಿ ಹಲವು ನಿರ್ಮಾಪಕರು ಬಂದಿದ್ದಾರೆ. ಆದರೆ, ಬಂದವರೆಲ್ಲ ರೀಮೇಕ್ ಚಿತ್ರಗಳನ್ನೇ ಹಿಡಿದು ತಂದಿದ್ದಾರೆ. ಆದರೆ, ಸ್ವಮೇಕ್ ಕಥೆಯನ್ನೇ ಮಾಡೋಣ ಎಂದು ನಿರ್ಧರಿಸಿ ಎಲ್ಲವನ್ನೂ ತಿರಸ್ಕರಿಸಿದೆ. ಮಂಜು ಸ್ವರಾಜ್ ಅವರ ಕಥೆ ಇಷ್ಟವಾಯ್ತು ಎಂದಿದ್ದಾರೆ ಗುರುನಂದನ್.

    ಮಂಜು ಸ್ವರಾಜ್ ಚಿತ್ರದ ಜೊತೆ ಜೊತೆಯಲ್ಲೇ ಮತ್ತೊಂದು ಸಿನಿಮಾ ಶುರುವಾಗಲಿದೆ. ಆ ಚಿತ್ರ ಫೈನಲ್ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಸ್ಪಷ್ಟ ಮಾಹಿತಿ ನೀಡಲಿದ್ದೇನೆ ಎಂದಿದ್ದಾರೆ ಗುರು. ಅದರ ನಂತರ ಮತ್ತೊಮ್ಮೆ ರಾಜು ಕನ್ನಡ ಮೀಡಿಯಂ ನಿರ್ದೇಶಕರ ಜೊತೆ ಇನ್ನೊಂದು ಸಿನಿಮಾ ಮಾಡಲಿದ್ದಾರಂತೆ.