` rishabh shetty - chitraloka.com | Kannada Movie News, Reviews | Image

rishabh shetty

 • ಪ್ರಗತಿ ರಿಷಬ್ ಶೆಟ್ಟಿ & ರಿಷಬ್ ಶೆಟ್ಟಿ ಪ್ರೆಸೆಂಟ್ಸ್ ಪ್ರೊಡಕ್ಷನ್ ನಂ.1..

  rishab shetty wife pragathi's production number 1

  ವೋ.. ರಿಷಬ್ ಶೆಟ್ಟಿ ಪ್ರೊಡ್ಯೂಸರ್ ಆಗ್ತಿದ್ದಾರಾ..? ಪತ್ನಿ ಪ್ರಗತಿ ಹೆಸರಲ್ಲಿ ಪ್ರೊಡಕ್ಷನ್ ಹೌಸ್, ಬ್ಯಾನರ್ ಮಾಡಿದ್ರಾ..? ಸಿನಿಮಾ ಯಾವುದಂತೆ..? ಅವರೇ ನಿರ್ದೇಶಕರಾ..? ಕಥೆ, ಚಿತ್ರಕಥೆ ಅವರದ್ದೇನಾ..? ಅವರೇ ಹೀರೋನಾ..? ಅಥವಾ ಅವರ ಫ್ರೆಂಡ್ ರಕ್ಷಿತ್ ಶೆಟ್ಟಿನಾ..? ಇಲ್ಲಾ.. ಹೊಸಬರನ್ನ ಹಾಕಿಕೊಳ್ತಿದ್ದಾರಾ..? ಓ ಮೈ ಗಾಡ್.. ಇಷ್ಟೆಲ್ಲ ಪ್ರಶ್ನೆಗಳಾ..? ಹೋಲ್ಡಾನ್.. ಇದು ಸಿನಿಮಾ ಸುದ್ದಿ ಅಲ್ಲ.

  ಪ್ರಗತಿ ರಿಷಬ್ ಶೆಟ್ಟಿ & ರಿಷಬ್ ಶೆಟ್ಟಿ ಪ್ರೆಸೆಂಟ್ಸ್ ಪ್ರೊಡಕ್ಷನ್ ನಂ.1 ಅಂತಾ ರಿಷಬ್ ಶೆಟ್ಟಿ ಹೇಳಿರೋದೇನೋ ನಿಜ. ಆದರೆ, ಅದು ಅವರು ತಂದೆಯಾಗ್ತಿರೋ ಬಗ್ಗೆ. ಏಪ್ರಿಲ್‍ನಲ್ಲಿ ಸಪ್ತಪದಿ ತುಳಿದಿದ್ದ ರಿಷಬ್-ಪ್ರಗತಿ ಈಗ ಮುದ್ದಾದ ಮಗುವನ್ನು ಸ್ವಾಗತಿಸೋಕೆ ರೆಡಿಯಾಗಿದ್ದಾರೆ.

 • ಬಾಲಿವುಡ್‍ನಲ್ಲೀಗ ಕಾಂತಾರ ಗುಂಗು

  ಬಾಲಿವುಡ್‍ನಲ್ಲೀಗ ಕಾಂತಾರ ಗುಂಗು

  ಸ್ಯಾಂಡಲ್ವುಡ್ನಲ್ಲಿ ಈಗ ಎಲ್ಲಿ ನೋಡಿದರೂ ಕಾಂತಾರದ್ದೇ ಮಾತು. ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ಚಿತ್ರ ಕಾಂತಾರ. ಈ ಅದ್ಭುತ ಚಿತ್ರ ಬೇರೆ ಬೇರೆ ರಾಜ್ಯಗಳಲ್ಲಿ, ಅಯಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಅಕ್ಟೋಬರ್ 14ರ ಶುಕ್ರವಾರ ಹಿಂದಿಯಲ್ಲೂ ಕಾಂತಾರ ತೆರೆ ಕಾಣುತ್ತಿದೆ. ಮುಂಬೈ ಸೇರಿದಂತೆ ವಿವಿಧೆಡೆ ಸುಮಾರು 2,500ಕ್ಕೂ ಅಧಿಕ ಸ್ಕೀನ್ಗಳಲ್ಲಿ ಕಾಂತಾರ ಪ್ರದರ್ಶನವಾಗಲಿದೆ.

  ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆ.ಜಿ.ಎಫ್ 2 ಬಾಲಿವುಡ್ ನಲ್ಲಿ ದಾಖಲೆ ಮಟ್ಟದ ಯಶಸ್ಸು ಗಳಿಸಿತ್ತು. ಆ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ಹೊಂಬಾಳೆ ಆ ಹಿಡಿತದ ಮೂಲಕವೇ ಕಾಂತಾರವನ್ನು 2500ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಬಿಡುಗಡೆ ಮಾಡುತ್ತಿದೆ. ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವ ಹಾಗೆ ಮಾಡುತ್ತಿದ್ದಾರೆ ಕನ್ನಡದ ಹೆಮ್ಮೆಯ ನಿರ್ಮಾಪಕ ವಿಜಯ್ ಕಿರಗಂದೂರು.

  ಕಾಂತಾರ ಕನ್ನಡದಲ್ಲಿ ದಾಖಲೆ ಬರೆದಿದ್ದರೂ ಸಂಭ್ರಮಿಸುವಷ್ಟು ಪುರುಸೊತ್ತು ರಿಷಬ್ ಶೆಟ್ಟಿಯವರಿಗೆ ಇಲ್ಲ. ನಿರ್ದೇಶಕರೂ ಅವರೇ ಆದ್ದರಿಂದ ಚಿತ್ರದ ಔಟ್ ಕಮ್ ನೋಡಿಕೊಳ್ಳಬೇಕು. ಹೀರೋ ಅವರೇ ಆದ್ದರಿಂದ ಚಿತ್ರದ ಪ್ರತಿ ಪ್ರೆಸ್ ಮೀಟ್, ಈವೆಂಟ್‍ಗಳಲ್ಲೂ ಪ್ರಚಾರದ ನೇತೃತ್ವ ವಹಿಸಬೇಕು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿರುವ ರಿಷಬ್ ಶೆಟ್ಟಿ & ಟೀಂ ಸಂಭ್ರಮದ ಹೊಳೆಯಲ್ಲಿ ತೇಲುತ್ತಿದೆ.

 • ಬುಸಾನ್ ಚಲನಚಿತ್ರೋತ್ಸವಕ್ಕೆ ರಿಷಬ್ ಶೆಟ್ಟಿ ಸಿನಿಮಾ

  ಬುಸಾನ್ ಚಲನಚಿತ್ರೋತ್ಸವಕ್ಕೆ ರಿಷಬ್ ಶೆಟ್ಟಿ ಸಿನಿಮಾ

  ಬುಸಾನ್ ಚಲನಚಿತ್ರೋತ್ಸವಕ್ಕೆ ಕನ್ನಡದಿಂದ ಪೆಡ್ರೋ ಸಿನಿಮಾ ಆಯ್ಕೆಯಾಗಿದೆ. ಇದು ರಿಷಬ್ ಶೆಟ್ಟಿ ಸಿನಿಮಾ. ರಿಷಬ್ ಶೆಟ್ಟಿ ನಿರ್ಮಿಸಿರುವ ಚಿತ್ರಕ್ಕೆ ನಟೇಶ್ ಹೆಗಡೆ ನಿರ್ದೇಶನವಿದೆ. ಬುಸಾನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಮೊದಲ ಕನ್ನಡ ಸಿನಿಮಾ ಪೆಡ್ರೋ ಎನ್ನುವುದು ಚಿತ್ರದ ಹೆಗ್ಗಳಿಕೆ.

  ಮಧ್ಯವಯಸ್ಕ ಎಲೆಕ್ಟ್ರಿಷಿಯನ್ ಒಬ್ಬ ಹಳ್ಳಿಯೊಂದರಲ್ಲಿ ಮಾಡುವ ಒಂದು ಅಪರಾಧ, ಅದರಿಂದ ಎದುರಾಗುವ ಅವಮಾನದ ಸುತ್ತ ಹೆಣೆದಿರುವ ಕಥೆ ಪೆಡ್ರೋ.

 • ಬೆಲ್ ಬಾಟಂ  ಫಾರಿನ್ ಟೂರ್

  bellbottom will release soon

  ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಬೆಲ್‍ಬಾಟಂ ಸಿನಿಮಾ, ಈಗ ಫಾರಿನ್ ಟೂರ್ ಹೊರಟಿದೆ.  ಫೆಬ್ರವರಿ 22ರಿಂದ ಅಮೆರಿಕ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಸೇರಿದಂತೆ ಹಲವು ಕಡೆ ಬಿಡುಗಡೆಯಾಗುತ್ತಿದೆ. ಕಿರಿಕ್ ಪಾರ್ಟಿ,ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರಗಳ ಮೂಲಕ, ವಿದೇಶದಲ್ಲಿಯೂ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರೋ ರಿಷಬ್ ಶೆಟ್ಟಿಗೆ, ಬೆಲ್‍ಬಾಟಂ ಮೇಲೆ ಹೊಸದೇ ನಿರೀಕ್ಷೆ ಇದೆ.

  ಸ್ಯಾಂಡಲ್‍ವುಡ್ ಗೆಳೆಯರ ಬಳಗ ಅಮೆರಿಕದ 30ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ.  ಇತ್ತ, ರಾಜ್ಯದ ಹಲವು ಕಡೆ ಥಿಯೇಟರುಗಳ ಸಂಖ್ಯೆ ಹೆಚ್ಚುತ್ತಿದೆ. ಮಲ್ಟಿಪ್ಲೆಕ್ಸುಗಳಲ್ಲಿ ಶೋಗಳ ಸಂಖ್ಯೆಯೂ ಹೆಚ್ಚುತ್ತಿದೆ.

  ರಿಷಬ್ ಶೆಟ್ಟಿಗೆ ಹರಿಪ್ರಿಯಾ ಜೋಡಿಯಾಗಿದ್ದು, ಜಯತೀರ್ಥ ನಿರ್ದೇಶನ ಮಾಡಿದ್ದಾರೆ.

 • ಬೆಲ್‍ಬಾಟಂ ಅಪ್ಪಟ ಶುದ್ಧ ಕಾಮಿಡಿ ಸಿನಿಮಾ.

  healthy comedy and no vulgarity n bell bottom

  ನಾಳೆ ರಿಲೀಸ್ ಆಗುತ್ತಿರುವ ಬೆಲ್‍ಬಾಟಂ ಸಿನಿಮಾ, ಅಪ್ಪಟ ಕಾಮಿಡಿ ಥ್ರಿಲ್ಲರ್. ರಿಷಬ್ ಶೆಟ್ಟಿ, ಹರಿಪ್ರಿಯಾ ನಟಿಸಿರುವ ಚಿತ್ರದಲ್ಲಿ ಕಾಮಿಡಿಗೆ ಕೊರತೆಯಿಲ್ಲ. ಆದರೆ, ಇಲ್ಲೇ ಒಂದು ವಿಭಿನ್ನತೆಯಿದೆ. ಇತ್ತೀಚೆಗೆ ಕಾಮಿಡಿ ಸಿನಿಮಾಗಳೆಂದರೆ, ಅಲ್ಲೊಂದಿಷ್ಟು ಡಬಲ್ ಮೀನಿಂಗ್, ತ್ರಿಬ್ಬಲ್ ಮೀನಿಂಗ್, ಡೈರೆಕ್ಟ್ ಮೀನಿಂಗ್ ಡೈಲಾಗುಗಳು ತುಂಬಿ ತುಳುಕುತ್ತವೆ. ಆದರೆ, ಬೆಲ್‍ಬಾಟಂ ಹಾಗಲ್ಲ. ಅಲ್ಲಿರುವುದು ಶುದ್ಧ, ಸ್ವಚ್ಚ ಕಾಮಿಡಿ.

  ಡಿಟೆಕ್ಟಿವ್ ಸಿನಿಮಾ ಅಂದಾಕ್ಷಣ, ಇದು ಗಂಭೀರವಾದ ಕಥೆಯಲ್ಲ. ಕಾಮಿಡಿ ಜಾನರ್‍ನಲ್ಲಿಯೇ ಸಾಗುವ ಸಿನಿಮಾ. ಕಾಮಿಡಿ ಎಂದಾಕ್ಷಣ, ಅಲ್ಲಿ ಅಶ್ಲೀಲತೆ, ಮುಜುಗರ ತರಿಸುವ ಸಂಭಾಷಣೆ ಯಾವುದೂ ಇಲ್ಲ. ಇದು ಅಪ್ಪಟ ಕೌಟುಂಬಿಕ ಸಿನಿಮಾ ಎಂದು ಭರವಸೆ ನೀಡಿದ್ದಾರೆ ನಿರ್ದೇಶಕ ಜಯತೀರ್ಥ. ಸಂತೋಷ್ ಕುಮಾರ್ ನಿರ್ಮಾಣದ ಚಿತ್ರದಲ್ಲಿ ಯೋಗರಾಜ್ ಭಟ್, ಶಿವಮಣಿ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. 

 • ಬೆಲ್‍ಬಾಟಂ ಕಾಮಿಡಿ.. ಓದಿ.. ನಕ್ಕುಬಿಡಿ.. ಆಮೇಲೆ ಸಿನಿಮಾ ನೋಡಿ..

  bellbottom's funny promotions

  ಬೆಲ್‍ಬಾಟಂ ಚಿತ್ರದ ಪ್ರಮೋಷನ್ ಭರ್ಜರಿಯಾಗಿದೆ. ಡಿಫರೆಂಟ್ ಆಗಿದೆ. ಅವರು ಯಾವುದನ್ನೂ ಬಿಟ್ಟಿಲ್ಲ. ಅಟ್ಲಾಸ್ ಸೈಕಲ್ಲು, ಹೊಲಿಗೆ ಮೆಷಿನ್ನು, ದೀಪಾವಳಿ ಲಾಟರಿ, ಹಲ್ಲುಪುಡಿ, ಥ್ರಿಲ್ಲರ್ ಕಾದಂಬರಿ, ಸ್ನೋ ಪೌಡರು.. ಹೀಗೆ ಎಲ್ಲವನ್ನೂ ಚಿತ್ರದ ಪ್ರಚಾರಕ್ಕೆ ಬಳಸಿಕೊಂಡು ಕಿಕ್ ಕೊಟ್ಟಿರೋ ಬೆಲ್‍ಬಾಟಂ, ಒಂದಿಷ್ಟು ಕಾಮಿಡಿಯನ್ನೂ ಬಿಟ್ಟಿದೆ. ಸುಮ್ಮನೆ ಇವುಗಳನ್ನು ಓದುತ್ತಾ ಹೋಗಿ..

  ಅಯ್ಯೋ ಸಿವನೆ.. ಈ ನನ್ ಕಂದ ಓದಲ್ಲ.. ಬರೆಯಲ್ಲ.. ಡಿಟೆಕ್ಟಿವ್ ಆಗ್ತೀನಿ ಅಂತ ಕುಂತದಲ್ಲ. ಇದನ್ನು ತಗೊಂಡು ಏನ್ ಮಾಡ್ಲಿ, ಒಂದ್ ತಾಯತನಾದ್ರೂ ಕಟ್ಟುಸ್ಲ..

  ತಾಯಿ ಹೀಗೆ ಯೋಚಿಸ್ತಿದ್ರೆ, ಟಾಪಲ್ಲಿ ಎದೆ ಕಲಕುವ ಸೆಂಟಿಮೆಂಟ್ ಪತ್ತೇದಾರಿ ಪಿಕ್ಚರ್ ಎಂಬ ಒಕ್ಕಣೆ. ಮತ್ತೊಂದು ಕಡೆ ಚಿತ್ರಚೋರ ರಿಷಬ್ ಶೆಟ್ಟಿ, ಹಂಸವದನೆ ಹರಿಪ್ರಿಯಾ ನಟನೆಯಲ್ಲಿ.. ಎಂಬ ಸಾಲು. ಟೆಂಟ್ ಸಿನಿಮಾ ನೆನಪಾಯ್ತಾ..

  ಕಂಟಿನ್ಯೂ.. ಕಂಟಿನ್ಯೂ..

  ಸರ್ಪದೇವನ ಶಾಪದಿಂದ ಸಂಸಾರವನ್ನು ರಕ್ಷಿಸುವ ಗೃಹಿಣಿಯೊಬ್ಬಳ ಮೈನವಿರೇಳಿಸುವ ಸಾಹಸಯಮ ಕಥೆ. ಹೊಚ್ಚ ಹೊಸ ಕಾದಂಬರಿ, ಇದೀಗ ಮಾರುಕಟ್ಟೆಯಲ್ಲಿ ಲಭ್ಯ.

  ಇದು ಕಾದಂಬರಿ ಸ್ಟೈಲು. ಮುಂದಿನದ್ದು.. ಕೆಜಿಎಫ್ ಸ್ಟೈಲು.

  ಕೆಜಿಎಫ್ ಡಾನ್ : ನಂಗೊಂದ್ ಕೆಲಸ ಆಗಬೇಕು. ಒಂದ್ ಆನೇ ಹೊಡೀಬೇಕು.

  ಡಿಟೆಕ್ಟಿವ್ ದಿವಾಕರ : ಅಷ್ಟು ದೊಡ್ಡ ಪ್ರಾಣೀನೇ ಯಾಕೆ..?

  ಕೆಜಿಎಫ್ ಡಾನ್ : ಮಗಳ ಮದುವೆ ಆಯ್ತು. ಬೀಗರಿಗೆ ಗ್ರ್ಯಾಂಡ್ ಆಗಿ ಊಟ ಹಾಕಿಸ್ಬೇಕು.

  ಡಿಟೆಕ್ಟಿವ್ ದಿವಾಕರ : ಸಾರಿ ಆಂಡ್ರೂಸ್. ಆನೆ ಹೊಡೆದ್ರೆ ಅರಣ್ಯ ಇಲಾಖೆಯವರು ಕೇಸ್ ಹಾಕ್ತಾರೆ. ಬೇಕಾದ್ರೆ 50 ಕೆಜಿ ನಾಟಿಕೋಳಿ ಕೊಡ್ತೀನಿ. ಎಂಜಾಯ್.

  ಇದು ಸಿನಿಮಾ ಸ್ಟೈಲು. ಧಾರಾವಾಹಿ ಬುಟ್‍ಬುಡ್ತಾರಾ..? ಅಲ್ಲಿ ಪುಟ್ಟಗೌರಿ ಸ್ಟೈಲು. ಅತ್ತ.. ಗೆಳೆಯ ರಕ್ಷಿತ್ ಶೆಟ್ಟಿಯ ರಿಲೀಸ್ ಕೂಡಾ ಆಗದ ಅವನೇ ಶ್ರೀಮನ್ನಾರಾಯಣನೂ ಬೆಲ್‍ಬಾಟಂ ಪ್ರಚಾರಕ್ಕೆ ಬಂದಿದ್ದಾನೆ. 

  ರಕ್ಷಿತ್ ಶೆಟ್ಟಿ : ಅವನು ಚರ್ಮ ವೈದ್ಯ ಅಲ್ಲ ಅಂತ ಹೆಂಗೆ ಪತ್ತೆ ಹಚ್ಚಿದೆ ದಿವಾಕರ..?

  ದಿವಾಕರ : ಬಡ್ಡಿ ಮಗ, ಕ್ಲಿನಿಕ್ ಬೋರ್ಡಲ್ಲಿ ಲೆದರ್ ಸ್ಪೆಷಲಿಸ್ಟ್ ಅಂತಾ ಹಾಕ್ಕೊಂಡಿದ್ದ.

  ಫೈನಲ್ಲಾಗಿ.. ಟೈಟಾನಿಕ್ ನೋಡ್ಕಳಿ..

  ಟೈಟಾನಿಕ್ ಹಡಗು ಮುಳುಗೋಕೆ ಕಾರಣ ಏನ್ ಗೊತ್ತಾ..? ದಿವಾಕರನ ಪತ್ತೆದಾರಿಕೆಯ ವರದಿ ಇಷ್ಟೆ. ಟೈಟಾನಿಕ್ ಹಡಗಿಗೆ ಮಂತ್ರಿಸಿದ ನಿಂಬೆಹಣ್ಣನ್ನೇ ಕಟ್ಟಿಲ್ಲ. ಅಷ್ಟೆಲ್ಲ ದೃಷ್ಟಿ ಆದ್ರೆ ಇನ್ನೇನಾಗುತ್ತೆ. ಸ್ಸೋ.. ದೃಷ್ಟಿ ತಗುಲಿ ಟೈಟಾನಿಕ್ ಮುಳುಗಿದೆ.

 • ಬೆಲ್ಬಾಟಂ ಕ್ಲಾಸ್.. ಹೀರೋ ಕ್ಲಾಸ್ ಮಸಾಲಾ..

  ಬೆಲ್ಬಾಟಂ ಕ್ಲಾಸ್.. ಹೀರೋ ಕ್ಲಾಸ್ ಮಸಾಲಾ..

  ಹೀರೋ ಚಿತ್ರದ ಬಗ್ಗೆ ಪ್ರೇಕ್ಷಕರು ಇಷ್ಟೆಲ್ಲ ಕುತೂಹಲದಿಂದ ಕಾಯ್ತಿರೋದಕ್ಕೆ ಕಾರಣ ಬೆಲ್ಬಾಟಂ. ಯಾಕಂದ್ರೆ,

  ಬೆಲ್ ಬಾಟಂ ಮಾಸ್ ಅಲ್ಲ. ಪಕ್ಕಾ ಕ್ಲಾಸ್.

  ಆದರೆ, ಹೀರೋ ಹಾಗಿಲ್ಲ. ಅಲ್ಲೊಂದು ರೊಮ್ಯಾಂಟಿಕ್ ಲವ್ ಸ್ಟೋರಿ, ಬಿಸಿ ನೆತ್ತರನ್ನೇ ಕುಡಿಯುವ ಕ್ರೌರ್ಯ, ಫೈಟಿಂಗ್, ಚೇಸಿಂಗ್.. ಎಲ್ಲವೂ ಇದೆ. ಆದರೆ.. ಎಲ್ಲಿಯೂ ಕ್ಲಾಸ್ ಟಚ್ ಕಳೆದುಕೊಂಡಿಲ್ಲ.ಜೊತೆಗೆ ಹೀರೋ ಅನ್ನೋ ಮಾಸ್ ಟೈಟಲ್.

  ಹೀಗಾಗಿ.. ಹೀರೋ ಚಿತ್ರವನ್ನು ಕ್ಲಾಸ್ ಮಸಾಲಾ ಎನ್ನಬಹುದು.

  ಭರತ್ ರಾಜ್ ಅನ್ನೋ ತಮ್ಮದೇ ಗರಡಿಯ ಹುಡುಗನ ಬೆನ್ನಿಗೆ ನಿಂತು, ಚೆಂದದ ಚಿತ್ರ ಕಟ್ಟಿಕೊಟ್ಟಂತಿದೆ ರಿಷಬ್ ಶೆಟ್ಟಿ & ಟೀಂ. ರಿಷಬ್ ಶೆಟ್ಟಿಯ ಎದುರು ನಟಿಸಿರೋ ಗಾನವಿ ಲಕ್ಷ್ಮಣ್, ಹೀರೋ ಪಾತ್ರಕ್ಕೆ ಸೇರಿಗೆ ಸವ್ವಾಸೇರು ಎನ್ನುವಂತೆ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಕಣ್ಣುಗಳಲ್ಲೇ ಕೊಲ್ಲುತ್ತಿದ್ದಾರೆ.

  ಇನ್ನು ಗ್ರಾಫಿಕ್ಸ್ ಕೆಲಸ ಮೇಲ್ನೋಟಕ್ಕೆ ಗೊತ್ತೇ ಆಗದಂತೆ ವರ್ಕೌಟ್ ಆದ ಹಾಗಿದೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಬೇರೆಯದ್ದೇ ಮ್ಯಾಜಿಕ್ ಇರುವ ಹಾಗಿದೆ. ಮೊದಲು ಕಥೆಯನ್ನು ಹೀರೋ ಆಗಿ ಸೆಲೆಕ್ಟ್ ಮಾಡಿಕೊಳ್ಳೋದು ರಿಷಬ್ ಶೆಟ್ಟಿ ಸ್ಟೈಲ್. ನಂತರ ಕೂರೋದು ಚಿತ್ರಕಥೆಗೆ.

  ಈ ಹಿಂದೆ ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಥಾಸಂಗಮ, ಬೆಲ್ಬಾಟಂಗಳಲ್ಲಿ ಅವರು ಗೆದ್ದಿದ್ದೇ ಹಾಗೆ. ಆ ಕ್ಲಾಸಿಕಲ್ ಟಚ್ ಇಲ್ಲೂ ವರ್ಕೌಟ್ ಆಗಿದ್ದರೆ, ನೋ ಡೌಟ್. ಈ ಕ್ಲಾಸ್ ಮಸಾಲಾ ಚಿತ್ರವನ್ನು ರಿಲೀಸ್ ಆಗುವ ಮೊದಲೇ ಹಿಟ್ ಎಂದು ಘೋಷಿಸಬಹುದು.

 • ಬೆಲ್‍ಬಾಟಂ ಹರಿಕಥೆ ಸ್ಪೆಷಲ್

  bellbottom trailer has harikathe special

  ಬೆಲ್‍ಬಾಟಂ. ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಅಭಿನಯದ ಸಿನಿಮಾ. ಸಿನಿಮಾದಲ್ಲಿರೋದು 80ರ ದಶಕದ ಸ್ಟೋರಿ. ರಿಷಬ್ ಪತ್ತೇದಾರನಾಗಿ, ಪೊಲೀಸ್ ಆಗಿ ನಟಿಸಿರುವ ಚಿತ್ರ. ಇನ್ನು ಹರಿಕಥೆ. ಇದು ಬಹುತೇಕ ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಇರುವ ಜನಪದ ಸಂಪ್ರದಾಯ. ಹರಿಕಥೆ ಹೇಳುವ ಶೈಲಿಯೇ ವಿಭಿನ್ನ. ವಿಶೇಷ ಅಂದ್ರೆ ಇವರೆಡನ್ನೂ ಬೆಲ್‍ಬಾಟಂ ಸಿನಿಮಾ ಮಿಕ್ಸ್ ಮಾಡಿಕೊಂಡು ಬಂದಿದೆ.

  ಬೆಲ್‍ಬಾಟಂ ಟ್ರೇಲರ್ ಗಮನ ಸೆಳೆಯುತ್ತಿರುವುದೇ ಈ ಕಾರಣಕ್ಕೆ. ತುಸು ತಮಾಷೆಯಾಗಿಯೇ ಶುರುವಾಗುವ ಟ್ರೇಲರ್, ಹರಿಕಥೆಯಿಂದಾಗಿ ಗಮನ ಸೆಳೆಯುತ್ತದೆ. ಕನ್ನಡಿಗರ ಜೇಮ್ಸ್‍ಬಾಂಡ್ ಸಿಐಡಿ 999 ಡಾ.ರಾಜ್, ಹೀರೋಗೆ ಪತ್ತೇದಾರನಾಗಲು ಸ್ಫೂರ್ತಿಯಾಗುತ್ತಾರೆ ಅನ್ನೋದು ಟ್ರೇಲರ್‍ನಲ್ಲಿಯೇ ಗೊತ್ತಾಗಿಬಿಡುತ್ತೆ. ಇನ್ನು ರಿಷಬ್ ಶೆಟ್ಟಿ, ಗುಂಡಿಯಲ್ಲಿ ಬಿದ್ದು ಹಾಗೇಕೆ ಇರುತ್ತಾರೆ..? ಪೊಲೀಸ್ ಕಾನ್‍ಸ್ಟೇಬಲ್ ಮತ್ತು ಪತ್ತೇದಾರ.. ಎರಡೂ ಹೇಗೆ..? ಟ್ರೇಲರ್ ಹುಟ್ಟಿಸುವ ಕುತೂಹಲಗಳಿವು.

  ಮುದ್ದು ಮುದ್ದಾಗಿ ಕಾಣುವ ಹರಿಪ್ರಿಯಾ ಸೈಲೆಂಟಾಗಿ ನಗೆಯುಕ್ಕಿಸುತ್ತಾರೆ. ಪೊಲೀಸ್ ಠಾಣೆಯಿಂದ 5 ಲಕ್ಷ ನಾಪತ್ತೆ ಎನ್ನುವ ಬ್ರೇಕಿಂಗ್ ನ್ಯೂಸ್ ಜೊತೆ ಟ್ರೇಲರ್ ಮುಗಿಯುತ್ತೆ. 

  ಸಿನಿಮಾದ ಟ್ರೇಲರ್ ಚಿಕ್ಕದಾಗಿರಬೇಕು. ಕುತೂಹಲ ಹುಟ್ಟಿಸಬೇಕು. ಎರಡನ್ನೂ ಸರಿಯಾಗಿ ನಿರ್ವಹಿಸಿ ಗೆದ್ದಿದ್ದಾರೆ ನಿರ್ದೇಶಕ ಜಯತೀರ್ಥ. ಚಿತ್ರಕ್ಕೆ ಸಂತೋಷ್ ಕುಮಾರ್ ನಿರ್ಮಾಪಕ.

 • ಬೆಲ್‍ಬಾಟಂ ಹಿಂದಿ ರೈಟ್ಸ್ ಮುಕ್ಕಾಲು ಕೋಟಿಗೆ ಸೇಲ್

  bell bottoms remake rights sold

  ಬಾಕ್ಸಾಫೀಸ್‍ನಲ್ಲಿ ಮಾಯೆ ಸೃಷ್ಟಿಸಿದ ಬೆಲ್‍ಬಾಟಂ ಚಿತ್ರದ ರೀಮೇಕ್ ಹಕ್ಕುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದುಬಿಟ್ಟಿದೆ. ಕಾರಣ, ಚಿತ್ರದ ಕಥೆ. ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ ಚಿತ್ರಕ್ಕೆ ಜಯತೀರ್ಥ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ.. ಎಲ್ಲದರಲ್ಲೂ ಇದ್ದ ಹೊಸತನ ಚಿತ್ರವನ್ನು ಗೆಲ್ಲಿಸಿದೆ. 

  ಹೀಗೆ ಸಂಭ್ರಮದ ತುತ್ತತುದಿಯಲ್ಲಿರುವಾಗಲೇ ಚಿತ್ರದ ರೀಮೇಕ್ ರೈಟ್ಸ್‍ಗಳಿಗೆ ವ್ಯಾಪಾರ ಕುದುರಿದೆ. ಮುಂಬೈನ ಪ್ರತಿಷ್ಠಿತ ಕೆ.ಎನ್.ಎಂಟರ್‍ಟೈನ್‍ಮೆಂಟ್ ಸಂಸ್ಥೆ ಬೆಲ್‍ಬಾಟಂನ ಹಿಂದಿ ಮತ್ತು ತೆಲುಗು ರೈಟ್ಸ್‍ಗಳನ್ನು 75 ಲಕ್ಷ ಕೊಟ್ಟ ಖರೀದಿಸಿದೆ ತೆಲುಗು ಮತ್ತು ಹಿಂದಿ ಎರಡರಲ್ಲೂ ಇದೇ ಸಂಸ್ಥೆ ಚಿತ್ರ ನಿರ್ಮಾಣ ಮಾಡಲಿದೆಯಂತೆ.

 • ಬೆಲ್‍ಬಾಟಂಗೆ ಅಪ್ಪು ಬಹುಪರಾಕ್

  puneeth applauds bellbottom

  ಬಾಕ್ಸಾಫೀಸ್‍ನಲ್ಲಿ ಮೋಡಿ ಮಾಡುತ್ತಿರುವ ಬೆಲ್‍ಬಾಟಂ ಸಿನಿಮಾಗೆ ಈಗ ಇನ್ನೂ ಒಂದು ಪವರ್ ಸಿಕ್ಕಿದೆ. ಅದು ಅಪ್ಪು ಪವರ್. ಸಿನಿಮಾ ನೋಡಿದ ಪುನೀತ್ ರಾಜ್‍ಕುಮಾರ್ ಚಿತ್ರವನ್ನು ಮನಸಾರೆ ಹೊಗಳಿದ್ದಾರೆ.

  35 ವರ್ಷಗಳ ಹಿಂದಿನ ದೃಶ್ಯ ಸೃಷ್ಟಿಸುವುದು ಅತಿದೊಡ್ಡ ಸವಾಲು. ಸಾಮಾನ್ಯದ ಮಾತಲ್ಲ. ರಿಷಬ್, ಹರಿಪ್ರಿಯಾ ಅಭಿನಯವಂತೂ ಅದ್ಭುತ. ಪೋಷಕ ಪಾತ್ರಧಾರಿಗಳ ಸಣ್ಣ ಸಣ್ಣ ದೃಶ್ಯಗಳೂ ಕೂಡಾ ಮನಮುಟ್ಟುತ್ತವೆ ಎಂದಿದ್ದಾರೆ ಅಪ್ಪು.

  ಅಷ್ಟೇ ಅಲ್ಲ, ಚಿತ್ರದಲ್ಲಿ ಡಿಟೆಕ್ಟಿವ್ ಸುಧಾಕರ ಸಿಐಡಿ 999 ಡಾ.ರಾಜ್ ಅಭಿಮಾನಿ. ಅಪ್ಪಾಜಿ ಮೇಲಿಟ್ಟಿರುವ ಪ್ರೀತಿಗೆ ನಾನು ಋಣಿ ಎಂದಿದ್ದಾರೆ ಅಪ್ಪು.

 • ಬೆಲ್‍ಬಾಟಂನಲ್ಲಿ ಸುಂದರ ಕೃಷ್ಣ ಅರಸ್..!

  sundar krishna urs voice in bell bottom

  ಬೆಲ್‍ಬಾಟಂ ಚಿತ್ರದಲ್ಲಿ ಸುಂದರ ಕೃಷ್ಣ ಅರಸ್ ಇದ್ದಾರೆ. ಹೌದು, ಇದು ಅಚ್ಚರಿಯಾದರೂ ಸತ್ಯ. ಭೌತಿಕವಾಗಿ ನಮ್ಮೊಂದಿಗಿಲ್ಲದ ಸುಂದರ್ ಕೃಷ್ಣ ಅರಸ್ ಅವರನ್ನು, ಬೆಲ್‍ಬಾಟಂ ಚಿತ್ರದಲ್ಲಿ ಮತ್ತೊಮ್ಮೆ ಕೇಳಬಹುದು. ಯೆಸ್. ಚಿತ್ರದ ಹಾಡಿನಲ್ಲಿ ಅರಸ್ ಅವರ ಕಂಚಿನ ಕಂಠದ ವಿಶಿಷ್ಟ ಧ್ವನಿಯನ್ನು ವಿಶೇಷವಾಗಿ ಬಳಸಿಕೊಂಡಿದ್ದಾರೆ ನಿರ್ದೇಶಕ ಜಯತೀರ್ಥ.

  ಚಿತ್ರವನ್ನು ಡಿಫರೆಂಟ್ ಆಗಿಯೇ ಪ್ರಮೋಟ್ ಮಾಡುತ್ತಿರುವ ಜಯತೀರ್ಥ, ಹಳೆಯ ಜಾಹೀರಾತುಗಳ ಮೂಲಕವೇ ಚಿತ್ರದ ನಿರೀಕ್ಷೆ ಡಬಲ್ ಮಾಡಿದ್ದಾರೆ. ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ ಚಿತ್ರದಲ್ಲಿ ಯೋಗರಾಜ್ ಭಟ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆ.ಟಿ.ದಯಾನಂದ್ ಬರೆದಿರುವ ಕಥೆಗೆ ಬಂಡವಾಳ ಹೂಡಿರುವುದು ಸಂತೋಷ್ ಕುಮಾರ್ ಎಂಸಿ..

   

 • ಬೆಲ್‍ಬಾಟಮ್ ಹಾಕ್ಕೊಳ್ತಾರೆ ಹರಿಪ್ರಿಯಾ

  haripriya in bellbottom

  ಕಿರಿಕ್ ಪಾರ್ಟಿಯ ನಿರ್ದೇಶಕ ರಿಷಬ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ಚಿತ್ರ ಬೆಲ್‍ಬಾಟಮ್. ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಜಯತೀರ್ಥ. ಇವರಿಬ್ಬರ ಜೊತೆ ಹರಿಪ್ರಿಯಾ ಅವರದ್ದು ಎರಡನೇ ಪ್ರಯತ್ನ. ರಿಷಬ್ ನಿರ್ದೇಶನದ ರಿಕ್ಕಿ ಚಿತ್ರದಲ್ಲಿ ನಾಯಕಿಯಾಗಿದ್ದವರು ಹರಿಪ್ರಿಯಾ. ಇನ್ನು ಜಯತೀರ್ಥ ನಿರ್ದೇಶನದ ಬುಲೆಟ್ ಬಸ್ಯಾ ಚಿತ್ರದಲ್ಲೂ ಹರಿಪ್ರಿಯಾ ನಾಯಕಿಯಾಗಿದ್ದರು. ಈಗ ಈ ಇಬ್ಬರೂ ನಿರ್ದೇಶಕರು ಜೊತೆಯಾಗಿರುವ ಚಿತ್ರದಲ್ಲಿಯೂ ಹರಿಪ್ರಿಯಾ ನಾಯಕಿ.

  ಗೋಲ್ಡನ್ ಹಾರ್ಸ್ ಸಿನಿಮಾಸ್‍ನಲ್ಲಿ ಸಂತೋಷ್ ಕುಮಾರ್ ನಿರ್ಮಿಸುತ್ತಿರುವ ಚಿತ್ರಕ್ಕೆ, ಅಜನೀಶ್ ಲೋಕನಾಥ್ ಸಂಗೀತವಿದೆ. ಚಿತ್ರದ ಶೂಟಿಂಗ್ ಫೆಬ್ರವರಿಯಲ್ಲಿ ಶುರುವಾಗಲಿದೆ.

   

 • ಬೆಲ್‍ಬಾಟಮ್‍ನಲ್ಲಿ ಮುಳುಗಿ ಹೋಗಿದ್ದಾರೆ ಹರಿಪ್ರಿಯಾ

  haripriya in bellbottom

  ಹರಿಪ್ರಿಯಾ ಈಗ ಸಿಕ್ಕಾಪಟ್ಟೆ ಬ್ಯುಸಿ ನಟಿ. ಅವರ ಸಂಹಾರ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಇನ್ನೊಂದು ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ ಶೂಟಿಂಗ್‍ನ ಕೊನೆಯ ಹಂತದಲ್ಲಿದೆ. ಸೂಜಿದಾರ ಚಿತ್ರ ಪ್ರೊಡಕ್ಷನ್ ಹಂತದಲ್ಲಿದೆ. ತೆಲುಗಿನಲ್ಲಿ ನಟಿಸಿದ್ದ ಜೈಸಿಂಹ, ಭರ್ಜರಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಬೆಲ್‍ಬಾಟಮ್ ಚಿತ್ರಕ್ಕೆ ರೆಡಿಯಾಗಿದ್ದಾರೆ ಹರಿಪ್ರಿಯಾ.

  ಬೆಲ್‍ಬಾಟಮ್ ಚಿತ್ರದ ಬಗ್ಗೆ ಹರಿಪ್ರಿಯಾ ಖುಷಿ ಪಡೋಕೆ ಕಾರಣಗಳಿವೆ. ಏಕೆಂದರೆ, ಇಡೀ ಚಿತ್ರದ ಸ್ಕ್ರಿಪ್ಟ್ ಅವರ ಕೈಲಿದೆ. ಇಷ್ಟು ವರ್ಷಗಳಲ್ಲಿ ಈ ರೀತಿ ಚಿತ್ರದ ಇಡೀ ಸ್ಕ್ರಿಪ್ಟ್ ನೋಡುತ್ತಿರುವುದು ಅವರಿಗೂ ಮೊದಲ ಅನುಭವ. ರಿಷಬ್ ಶೆಟ್ಟಿ ನಾಯಕರಾಗಿರುವ ಚಿತ್ರಕ್ಕೆ ಜಯತೀರ್ಥ ನಿರ್ದೇಶಕ.

  80ರ ದಶಕದ ಕಥೆ. ವಸ್ತ್ರ ವಿನ್ಯಾಸ, ಡೈಲಾಗ್ ಪ್ರತಿಯೊಂದೂ ವಿಭಿನ್ನವಾಗಿದೆ. ಚಿತ್ರದ ಮೇಲೆ ಭಾರಿ ವಿಶ್ವಾಸ ಇಟ್ಟುಕೊಂಡಿದ್ದಾರೆ.

 • ಬೆಲ್‍ಬಾಟಮ್‍ನಲ್ಲಿ ಮುಳುಗಿ ಹೋಗಿದ್ದಾರೆ ಹರಿಪ್ರಿಯಾ

  bellbottom team bus with working on script

  ಹರಿಪ್ರಿಯಾ ಈಗ ಸಿಕ್ಕಾಪಟ್ಟೆ ಬ್ಯುಸಿ ನಟಿ. ಅವರ ಸಂಹಾರ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಇನ್ನೊಂದು ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ ಶೂಟಿಂಗ್‍ನ ಕೊನೆಯ ಹಂತದಲ್ಲಿದೆ. ಸೂಜಿದಾರ ಚಿತ್ರ ಪ್ರೊಡಕ್ಷನ್ ಹಂತದಲ್ಲಿದೆ. ತೆಲುಗಿನಲ್ಲಿ ನಟಿಸಿದ್ದ ಜೈಸಿಂಹ, ಭರ್ಜರಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಬೆಲ್‍ಬಾಟಮ್ ಚಿತ್ರಕ್ಕೆ ರೆಡಿಯಾಗಿದ್ದಾರೆ ಹರಿಪ್ರಿಯಾ.

  ಬೆಲ್‍ಬಾಟಮ್ ಚಿತ್ರದ ಬಗ್ಗೆ ಹರಿಪ್ರಿಯಾ ಖುಷಿ ಪಡೋಕೆ ಕಾರಣಗಳಿವೆ. ಏಕೆಂದರೆ, ಇಡೀ ಚಿತ್ರದ ಸ್ಕ್ರಿಪ್ಟ್ ಅವರ ಕೈಲಿದೆ. ಇಷ್ಟು ವರ್ಷಗಳಲ್ಲಿ ಈ ರೀತಿ ಚಿತ್ರದ ಇಡೀ ಸ್ಕ್ರಿಪ್ಟ್ ನೋಡುತ್ತಿರುವುದು ಅವರಿಗೂ ಮೊದಲ ಅನುಭವ. ರಿಷಬ್ ಶೆಟ್ಟಿ ನಾಯಕರಾಗಿರುವ ಚಿತ್ರಕ್ಕೆ ಜಯತೀರ್ಥ ನಿರ್ದೇಶಕ.

  80ರ ದಶಕದ ಕಥೆ. ವಸ್ತ್ರ ವಿನ್ಯಾಸ, ಡೈಲಾಗ್ ಪ್ರತಿಯೊಂದೂ ವಿಭಿನ್ನವಾಗಿದೆ. ಚಿತ್ರದ ಮೇಲೆ ಭಾರಿ ವಿಶ್ವಾಸ ಇಟ್ಟುಕೊಂಡಿದ್ದಾರೆ.

 • ಭೋಲೇನಾಥ್ ಶಿವನಾಗಿ ರಾಜ್ ಬಿ. ಶೆಟ್ಟಿ. ರಿಷಬ್ ಶೆಟ್ಟಿ ಪಾತ್ರವೇನು?

  ಭೋಲೇನಾಥ್ ಶಿವನಾಗಿ ರಾಜ್ ಬಿ. ಶೆಟ್ಟಿ. ರಿಷಬ್ ಶೆಟ್ಟಿ ಪಾತ್ರವೇನು?

  ಮುಗ್ಧನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಮೊಟ್ಟೆ ಸ್ಟಾರ್ ಆದವರು ರಾಜ್ ಬಿ.ಶೆಟ್ಟಿ. ಈಗ ಭೂಗತ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಗರುಡ ಗಮನ ವೃಷಭ ವಾಹನ ಚಿತ್ರದ ಮೂಲಕ. ಈ ಚಿತ್ರಕ್ಕೆ ಅವರೇ ಹೀರೋ. ಅವರೇ ಡೈರೆಕ್ಟರ್. ಅವರೇ ಪ್ರೊಡ್ಯೂಸರ್. ಕಥೆ ಹೊಸದಾಗಿದೆ ಎನ್ನುವ ಸಿಗ್ನಲ್ ಟ್ರೇಲರ್‍ನಲ್ಲಿ ಸಿಕ್ಕಿದೆ.

  ಶಿವನನ್ನು ಭೋಲೆನಾಥ್ ಎನ್ನುತ್ತಾರೆ. ಭೋಲೆ ಎಂದರೆ ಮುಗ್ಧ ಎಂದರ್ಥ. ಹೀಗಾಗಿಯೇ ಶಿವನಿಗೆ ಮುಗ್ಧತೆ ಮತ್ತು ಕೋಪ ಬಿಟ್ಟು ಬೇರೇನೂ ಗೊತ್ತಿಲ್ಲ. ಚಿತ್ರದಲ್ಲಿ ನನ್ನ ಪಾತ್ರವೂ ಅಂತಹುದೇ. ಮುಗ್ಧ ಮತ್ತು ಸಿಟ್ಟು ಎರಡನ್ನೂ ತುಂಬಿಕೊಂಡಿರೋ ಮುಗ್ಧ ಮೃಗ. ತನ್ನ ತಂಟೆಗೆ ಬಂದವರ ಮೇಲೆ ಕ್ರೂರವಾಗಿ ದಾಳಿ ಮಾಡುವ ಮೃಗದಂತವನು ಎನ್ನುತ್ತಾರೆ ರಾಜ್ ಬಿ.ಶೆಟ್ಟಿ.

  ರಿಷಬ್ ಶೆಟ್ಟಿ ಚಿತ್ರದಲ್ಲಿ ಹರಿ ಅನ್ನೋ ಪಾತ್ರ ಮಾಡಿದ್ದಾರೆ. ನನ್ನ ಪಾತ್ರ ಮತ್ತು ಅವರ ಪಾತ್ರ ಫ್ರೆಂಡ್ಸ್. ರಿಯಲ್ಲಾಗಿ ನಾವಿಬ್ಬರೂ ಫ್ರೆಂಡ್ಸ್. ಅಷ್ಟೇ ಅಲ್ಲ, ಇತ್ತೀಚೆಗೆ ಕಾಮಿಡಿ ಶೇಡ್ ಪಾತ್ರಗಳಲ್ಲೇ ಹೆಚ್ಚು ಕಾಣಿಸುತ್ತಿದ್ದ ರಿಷಬ್ ಶೆಟ್ಟಿ ಇಲ್ಲಿ ಸ್ವಲ್ಪ ಸೀರಿಯಸ್ ಆಗಿದ್ದಾರೆ. ಅವರ ಪಾತ್ರಕ್ಕೆ ಎರಡು ಶೇಡ್‍ಗಳಿವೆ ಎನ್ನುತ್ತಾರೆ ರಾಜ್ ಬಿ.ಶೆಟ್ಟಿ. ಸಿನಿಮಾ ರಿಲೀಸ್ ಆಗೋಕೆ ಸಮಯ ಫಿಕ್ಸ್ ಆಗಿದೆ. ವೇಯ್ಟ್ & ಸೀ.

 • ಮತ್ತೆ ನಿರ್ದೇಶನದತ್ತ ರಿಷಬ್ ಶೆಟ್ಟಿ

  rishab shetty to direct again

  ಕಿರಿಕ್ ಪಾರ್ಟಿ, ಸಹಿಪ್ರಾಶಾದಂತಹ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟು ಗೆದ್ದ ನಿರ್ದೇಶಕ ರಿಷಬ್ ಶೆಟ್ಟಿ, ಬೆಲ್‍ಬಾಟಂ ಮೂಲಕ ಹೀರೋ ಆಗಿಯೂ ಮಿಂಚಿದರು. ಈಗ ಯೆಸ್ ಎಂದರೆ, ನಟ ರಿಷಬ್ ಕೈತುಂಬಾ ಸಿನಿಮಾಗಳು ತುಂಬಿ ತುಳುಕಲಿವೆ. ಆದರೆ, ನಾಥೂರಾಂ ಚಿತ್ರದಲ್ಲಿ ಬ್ಯುಸಿಯಾಗಿರುವ ರಿಷಬ್, ಮತ್ತೆ ನಿರ್ದೇಶನದತ್ತ ಮನಸ್ಸು ಮಾಡಿದ್ದಾರೆ.

  ಈ ಬಾರಿ ರಿಷಬ್ ಶೆಟ್ಟಿ, ಜಯಣ್ಣ ಕಂಬೈನ್ಸ್‍ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದು, ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ.

 • ಮತ್ತೊಮ್ಮೆ.. ಹೊಸ ಹುಡುಗನ ಬೆನ್ನಿಗೆ ನಿಂತ ರಿಷಬ್ ಶೆಟ್ಟಿ

  ಮತ್ತೊಮ್ಮೆ.. ಹೊಸ ಹುಡುಗನ ಬೆನ್ನಿಗೆ ನಿಂತ ರಿಷಬ್ ಶೆಟ್ಟಿ

  ರಿಷಬ್ ಶೆಟ್ಟಿ. ಚಿತ್ರರಂಗದಲ್ಲಿ ಮೊದಲ ಗೆಲುವು ಕಂಡ ಬೆನ್ನಲ್ಲೇ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದಕ್ಕೆ ಶುರು ಮಾಡಿದರು. ಅದು ಮುಂದುವರೆಯುತ್ತಲೇ ಇದೆ. ಇದೀಗ ರಿಷಬ್ ಶೆಟ್ಟಿ ಶಿವಮ್ಮ ಅನ್ನೋ ಸಿನಿಮಾದ ಬೆನ್ನಿಗೆ ನಿಂತಿದ್ದಾರೆ. ಆ ಚಿತ್ರವನ್ನು ಪ್ರತಿಷ್ಠಿತ ಕ್ಯಾನೆ ಚಲನಚಿತ್ರೋತ್ಸವಕ್ಕೆ ಕೊಂಡೊಯ್ಯುತ್ತಿದ್ದಾರೆ ರಿಷಬ್ ಶೆಟ್ಟಿ. ಇತ್ತೀಚೆಗೆ ಇದೇ ರೀತಿ ರಿಷಬ್, ಪೆದ್ರೋ ಚಿತ್ರವನ್ನು ಪ್ರಮೋಟ್ ಮಾಡಿದ್ದರು.

  ಶಿವಮ್ಮ ಕಡಿಮೆ ಬಜೆಟ್ಟಿನ ಚಿತ್ರ. ರಿಷಬ್ ಶೆಟ್ಟಿಯವರ ವಿಭಿನ್ನ ಪ್ರಯೋಗವಾಗಿದ್ದ ಕಥಾ ಸಂಗಮದಲ್ಲಿ ಲಚ್ಚವ್ವ ಅನ್ನೋ ಸಿನಿಮಾ ನೋಡಿದ್ದೀರಲ್ಲ. ಆ ಸಿನಿಮಾ ನಿರ್ದೇಶಿಸಿದ್ದ ಜೈ ಶಂಕರ್ ಅವರೇ ಈ ಶಿವಮ್ಮ ಚಿತ್ರಕ್ಕೆ ಡೈರೆಕ್ಟರ್.

  ಈ ಚಿತ್ರದಲ್ಲಿ ಸೇಲ್ಸ್‍ಮನ್‍ಗಳ ಕಥೆ ಹೇಳಿದ್ದೇನೆ. ಚಿತ್ರದ ಶೂಟಿಂಗ್ ನಡೆದಿರೋದು ನಮ್ಮ ಕೊಪ್ಪಳದಲ್ಲೇ. ಲಚ್ಚವ್ವ ಚಿತ್ರದ ರೀತಿಯಲ್ಲೇ ಇಲ್ಲಿಯೂ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡಿದ್ದೇನೆ. ಇದು ನಾನು ಕಥೆ ಹೇಳೋ ಶೈಲಿ ಎನ್ನುತ್ತಾರೆ ಜೈ.

  ಇದು ನಮ್ಮ ನೆಲದ ಮಣ್ಣಿನ ಹೃದಯದ ಕಥೆ ಎನ್ನಿಸಿತು. ಕಮರ್ಷಿಯಲ್ ಚಿತ್ರಗಳನ್ನು ಹೊರತುಪಡಿಸಿ ಇಂತಹ ಚಿತ್ರಗಳ ಬೆನ್ನಿಗೆ ನಿಲ್ಲೋದು ನಮ್ಮ ಕರ್ತವ್ಯ. ಒಬ್ಬ ನಿರ್ಮಾಪಕನಾಗಿ ಇಂತಹ ಔಟ್ ಆಫ್ ಬಾಕ್ಸ್ ಸಿನಿಮಾಗಳನ್ನು ಮಾಡುವ ಕಷ್ಟ ನನಗೆ ಗೊತ್ತಿದೆ. ಅಲ್ಲದೆ ಜೈ ನನಗೆ ಕಥಾ ಸಂಗಮದಿಂದಲೂ ಗೊತ್ತು. ಅವರ ಲಚ್ಚವ್ವಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ.. ಎನ್ನುತ್ತಾರೆ ರಿಷಬ್ ಶೆಟ್ಟಿ.

 • ಮಹನೀಯರೇ.. ಮಹಿಳೆಯರೇ.. ಕರೆಯುತ್ತಿದ್ದಾರೆ ರಿಷಬ್ ಶೆಟ್ಟಿ

  rishab shetty's next movie is mahaniyare mahileyare

  ಬೆಲ್‍ಬಾಟಂ ನಂತರ ರಿಷಬ್ ಶೆಟ್ಟಿ ನಾಯಕರಾಗಿ ನಟಿಸಲಿರುವ ಹೊಸ ಚಿತ್ರದ ಟೈಟಲ್ ಹೊರಬಿದ್ದಿದೆ. ಮಹನೀಯರೇ.. ಮಹಿಳೆಯರೇ.. ಇದು ಚಿತ್ರದ ಟೈಟಲ್. ದಯವಿಟ್ಟು ಗಮನಿಸಿ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ನಿರ್ದೇಶಕ. ಇಲ್ಲಿಯೂ ಅವರು ಸಾರ್ವಜನಿಕ ಪ್ರಕಟಣೆಯನ್ನೇ ತಮ್ಮ ಚಿತ್ರದ ಟೈಟಲ್ ಮಾಡಿರುವುದು ವಿಶೇಷ.

  ಬೆಲ್‍ಬಾಟಂ ನಿರ್ಮಾಪಕ ಕೃಷ್ಣ ಸಾರ್ಥಕ್ ಅವರೇ ಈ ಚಿತ್ರಕ್ಕೂ ನಿರ್ಮಾಪಕರಾಗಿದ್ದಾರೆ. ಇದು ಕೂಡಾ ಕಾಮಿಡಿ ಟ್ರ್ಯಾಕ್ ಸಿನಿಮಾ ಆಗಿದೆ. ರಿಷಬ್ ಶೆಟ್ಟಿಯವರ ಕಥಾ ಸಂಗಮ ಚಿತ್ರೀಕರಣ ಮುಗಿಸಿದೆ. ಆ್ಯಂಟಿಗೋನಿ ಶೆಟ್ಟಿ, ನಾಥೂರಾಮ್ ಚಿತ್ರದ ಕೆಲಸಗಳು ಪ್ರಗತಿಯಲ್ಲಿವೆ. ಇನ್ನು ಸ್ವತಃ ರಿಷಬ್ ಶೆಟ್ಟಿ ನಿರ್ದೇಶಿಸಬೇಕಿರುವ ರುದ್ರಪ್ರಯಾಗ ಚಿತ್ರದ ಪ್ರಿಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಇದರ ನಡುವೆಯೇ ಮಹನೀಯರೇ.. ಮಹಿಳೆಯರೇ.. ಎನ್ನಲು ರಿಷಬ್ ರೆಡಿಯಾಗಿದ್ದಾರೆ.

 • ಮಾತೇ ಇಲ್ಲದ ಪಾತ್ರಕ್ಕೆ ಹರಿಪ್ರಿಯಾ ಡಬ್ಬಿಂಗ್..!

  haripriya dubs for her silent role in katha sangama

  ಕಥಾ ಸಂಗಮ. ೭ ನಿರ್ದೇಶಕರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಈ ಚಿತ್ರದಲ್ಲಿ ಹರಿಪ್ರಿಯಾ ಮತ್ತು ರಿಷಬ್ ಶೆಟ್ಟಿ ಮತ್ತೆ ಜೊತೆಯಾಗಿದ್ದಾರೆ. ಇದರಲ್ಲಿ ಹರಿಪ್ರಿಯಾ ಪಿಹೆಚ್‌ಡಿ ವಿದ್ಯಾರ್ಥಿನಿಯಾದರೆ, ರಿಷಬ್ ಶೆಟ್ಟಿಯದ್ದು ಮಾನಸಿಕ ಅಸ್ವಸ್ಥ ಭಿಕ್ಷÄಕನ ಪಾತ್ರ. ಜೊತೆಯಲ್ಲಿ ಒಂದ ನಾಯಿಯೂ ಇದೆ. ಇಷ್ಟೆಲ್ಲ ಇದ್ದರೂ, ಇಬ್ಬರ ಪಾತ್ರಕ್ಕೂ ಮಾತಿಲ್ಲ.. ಕಥೆಯಿಲ್ಲ. ಮೌನಂ ಶರಣಂ ಪಾತ್ರಾಮಿ.. ಆದರೂ ಈ ಪಾತ್ರಕ್ಕೆ ಹರಿಪ್ರಿಯಾ ಡಬ್ ಮಾಡಿದ್ದಾರಂತೆ.

  ನಿರ್ದೇಶಕರು ಒಂದು ದಿನ ಫೋನ್ ಮಾಡಿ ಡಬ್ಬಿಂಗ್‌ಗೆ ಬನ್ನಿ ಎಂದಾಗ ಆಶ್ಚರ್ಯವಾಯಿತು. ಸಂಭಾಷಣೆಯೇ ಇಲ್ಲದ ಪಾತ್ರಕ್ಕೆ ಯಾವ ಡಬ್ಬಿಂಗ್ ಎಂದುಕೊAಡೆ. ಆದರೆ, ಕೆಲವು ಉಸಿರು, ಶಬ್ಧಗಳನ್ನು ನನ್ನ ಧ್ವನಿಯಲ್ಲೇ ತೆಗೆದುಕೊಂಡರು. ಮಾತೇ ಇಲ್ಲದ ಈ ಪಾತ್ರದಲ್ಲಿ ನಾನು, ರಿಷಬ್ ಕಣ್ಣು, ಮುಖದಲ್ಲೇ ಭಾವನೆಗಳನ್ನು ವ್ಯಕ್ತಪಡಿಸಿದ್ದೇವೆ ಎನ್ನುತ್ತಾರೆ ಹರಿಪ್ರಿಯಾ.

  ೨೯೭೬ರಲ್ಲಿ ಪುಟ್ಟಣ್ಣ ಕಣಗಾಲ್ ೩ ಕಥೆಗಳನ್ನಿಟ್ಟುಕೊಂಡು ಕಥಾಸಂಗಮ ಚಿತ್ರ ಮಾಡಿದ್ದರು. ಅವರ ಪ್ರೇರಣೆಯಿಂದಲೇ ಶುರುವಾದ ಈ ಕಥಾಸಂಗಮ ಚಿತ್ರದ ಟ್ರೇಲರ್‌ನ್ನು ಪುಟ್ಟಣ್ಣನವರ ಪತ್ನಿ ಲಕ್ಷಿö್ಮÃ ಕಣಗಾಲ್ ಅವರಿಂದ ರಿಲೀಸ್ ಮಾಡಿಸುತ್ತಿದೆ ಕಥಾಸಂಗಮ ಟೀಂ.

 • ಮಾರ್ಚ್ 1ರಿಂದ ರುದ್ರ ಪ್ರಯಾಗ ಶೂಟಿಂಗ್

  rudra prayag shooting from march 1st

  ಬೆಲ್‍ಬಾಟಂ ಹೀರೋ ಆಗಿ ಗೆದ್ದ ರಿಷಬ್ ಶೆಟ್ಟಿ, ಮತ್ತೊಮ್ಮೆ ನಿರ್ದೇಶನದತ್ತ ಹೊರಳಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರದ ರುದ್ರಪ್ರಯಾಗ ಚಿತ್ರ ಅನೌನ್ಸ್ ಮಾಡಿದ್ದ ರಿಷಬ್ ಶೆಟ್ಟಿ, ಮಾರ್ಚ್ 1ರಿಂದ ಶೂಟಿಂಗ್ ಶುರು ಮಾಡುತ್ತಿದ್ದಾರೆ.

  ಪ್ರಿ ಪ್ರೊಡಕ್ಷನ್ ಕೆಲಸಗಳನ್ನು ಹೆಚ್ಚೂ ಕಡಿಮೆ ಮುಗಿಸಿಕೊಂಡೇ ಚಿತ್ರೀಕರಣಕ್ಕೆ ಕೈ ಹಾಕುತ್ತಿದ್ದಾರೆ ರಿಷಬ್. ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸ ಬಹಳ ಸೂಕ್ಷ್ಮವಾಗಿದ್ದು, ಸೆಟ್, ಪ್ರಾಪರ್ಟಿ ಡಿಸೈನ್ ಮತ್ತು ರಿಹರ್ಸಲ್ ಮುಗಿಸಿಕೊಂಡೇ ಚಿತ್ರೀಕರಣಕ್ಕೆ ಹೊರಟಿದೆ ರುದ್ರಪ್ರಯಾಗ ಟೀಂ.

  ಬೆಳಗಾವಿ, ಉತ್ತರಾಖಂಡಗಳಲ್ಲಿ, ಮಂದಾಕಿನಿ, ಅಲಕನಂದಾ ನದಿಗಳ ಸಂಗಮದಲ್ಲಿ ಚಿತ್ರೀಕರಣ ನಡೆಯಲಿದೆ. ಜಯಣ್ಣ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದ್ದರೆ, ಅರವಿಂದ ಕಶ್ಯಪ್ ಕ್ಯಾಮೆರಾ ವರ್ಕ್ ಇದೆ.