` rishabh shetty - chitraloka.com | Kannada Movie News, Reviews | Image

rishabh shetty

 • ಗುರು ಶಿಷ್ಯರು ಮತ್ತು ಕಾಂತಾರ ಗೆಲುವು ಸೃಷ್ಟಿಸಿದ ಹೊಸ ಹೆಜ್ಜೆ

  ಗುರು ಶಿಷ್ಯರು ಮತ್ತು ಕಾಂತಾರ ಗೆಲುವು ಸೃಷ್ಟಿಸಿದ ಹೊಸ ಹೆಜ್ಜೆ

  ಗುರು ಶಿಷ್ಯರು ರಿಲೀಸ್ ಆದ ಒಂದೇ ವಾರಕ್ಕೆ ರಿಲೀಸ್ ಆಗಿದ್ದು ಕಾಂತಾರ. ಕ್ರಿಕೆಟ್ ಭಾಷೆಯಲ್ಲಿ ಹೇಳೋದಾದರೆ ಕಾಂತಾರದ ಓಟ ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗಿನಂತಿದೆ. ಗುರು ಶಿಷ್ಯರ ಓಟ ವಿರಾಟ್ ಕೊಹ್ಲಿ ಬ್ಯಾಟಿಂಗಿನಂತೆ. ಸ್ಟಡಿ ಗೋ. ಆದರೆ ಗುರು ಶಿಷ್ಯರ ಗೆಲುವು ಸೃಷ್ಟಿಸಿದ ಹೊಸ ಹೆಜ್ಜೆಯಲ್ಲಿ ಕಥೆಗಳ ಹುಡುಕಾಟ ಶುರುವಾಗಿರೋದು ವಿಶೇಷ.

  ಜಡೇಶ್ ಕುಮಾರ್ ಹಂಪಿ ಖೋಖೋ ಎಂಬ ಹಳ್ಳಿ ಆಟವನ್ನು ಗುರು ಶಿಷ್ಯರು ಚಿತ್ರದಲ್ಲಿ ಎಲ್ಲ ಕಾಮಿಡಿ, ಮನರಂಜನೆ, ಪ್ರೀತಿಯೊಂದಿಗೆ ಬೆರೆಸಿ ರುಚಿಕಟ್ಟಾದ ಅಡುಗೆ ಮಾಡಿ ಉಣಬಡಿಸಿದ್ದರು. ಶರಣ್-ನಿಶ್ವಿಕಾ, 12 ಹುಡುಗರ ಅದ್ಭುತ ಆಟ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗಲೂ ಚಿತ್ರಮಂದಿರಗಳಲ್ಲಿ ಬೊಂಬಾಟ್ ಕಲೆಕ್ಷನ್ ಮಾಡುತ್ತಿದೆ. ಅತ್ತ ಕಾಂತಾರ ಕೂಡಾ ಕರಾವಳಿ ಕಡೆಯ ಅಪ್ಪಟ ನಂಬಿಕೆ ಆಚರಣೆಗಳ ಕುರಿತು ಬೆಳಕು ಚೆಲ್ಲಿರುವ ಚಿತ್ರ.

  ಈ ಎರಡೂ ಚಿತ್ರಗಳ ಗೆಲುವು ಕನ್ನಡ ಚಿತ್ರರಂಗದವರನ್ನು ಹೊಸ ಹುಡುಕಾಟಕ್ಕೆ ಪ್ರೇರೇಪಿಸಿವೆ. ಎರಡೂ ಕೂಡಾ ದೇಸಿ ಕಥೆಗಳದ್ದು. ಇಲ್ಲಿನ ಮಣ್ಣಿನ ಕಥೆಗಳು. ಇವುಗಳಿಗೆ ಸ್ಥಳೀಯ ಜನಪದಗಳನ್ನು ಕೂಡಾ ಹೊಂದಿಸಿ ಜೋಡಿಸಲಾಗಿದೆ. ಇದು ಹೊಸ ಕ್ರಾಂತಿಗೆ ನಂದಿ ಹಾಡಿದ್ದು ಇಂತಹ ಹಳ್ಳಿ ಸೊಗಡಿನ ಕಥೆಗಳ ಹುಡುಕಾಟ ಈಗ ಶುರುವಾಗಿದೆ. ಬರಲಿ.. ಅಂತಹ ಎಲ್ಲ ಕಥೆಗಳೂ ಸಿನಿಮಾಗಳಾಗಿ ಕನ್ನಡದ ಸಂಸೃತಿ ವಿಜೃಂಭಿಸಲಿ.

 • ಚಿತ್ರ ಹಿಟ್ಟಾದ ಮೇಲೆ ಶಾಲೆ ಮರೆಯಲಿಲ್ಲ ರಿಷಬ್ ಶೆಟ್ಟಿ

  rishab shetty did not forget sarkari shale

  ಬೆಲ್‍ಬಾಟಂ ಚಿತ್ರದ ಸಕ್ಸಸ್‍ನಲ್ಲಿ ಮಿಂದೇಳುತ್ತಿರುವ ರಿಷಬ್ ಶೆಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನೂ ಮರೆತಿಲ್ಲ. ನೀವು ಸ.ಹಿ.ಪ್ರಾ.ಪಾ. ಸಿನಿಮಾ ನೋಡಿದ್ದರೆ, ಚಿತ್ರದಲ್ಲಿ ಬರುವ ಶಾಲೆಯೂ ನೆನಪಿದ್ದೇ ಇರುತ್ತದೆ. ಅದು ಕೈರಂಗಳ ಶಾಲೆ. 

  ದುಸ್ಥಿತಿಯಲ್ಲಿದ್ದ ಶಾಲೆಗೆ ಏನಾದರೂ ನೆರವು ನೀಡಬೇಕು ಎಂದು ನಿರ್ಧರಿಸಿದ್ದ ರಿಷಬ್ ಶೆಟ್ಟಿ, ಚಿತ್ರ ಹಿಟ್ ಆಗಿ ಲಾಭ ಬಂದ ಮೇಲೆ ಸುಮ್ಮನೆ ಕೂರಲಿಲ್ಲ. ಇಡೀ ಶಾಲೆಯ ಜೀರ್ಣೋದ್ಧಾರಕ್ಕೆ ಕೈ ಹಾಕಿದರು. ಕೆಲಸ ಈಗ ಅಂತಿಮ ಹಂತದಲ್ಲಿದೆ.

  ಸಿನಿಮಾದ 125ನೇ ದಿನದ ಸಂಭ್ರಮಾಚರಣೆ ವೇಳೆ ರಿಷಬ್ ಈ ವಿಷಯ ಬಹಿರಂಗಪಡಿಸಿದ್ದಾರೆ.

 • ಚೇತನ್ ಟೀಕೆಗೆ ಶಿವನ ಅಣ್ಣ ಗೊರವ ಕೊಟ್ಟ ಉತ್ತರ

  ಚೇತನ್ ಟೀಕೆಗೆ ಶಿವನ ಅಣ್ಣ ಗೊರವ ಕೊಟ್ಟ ಉತ್ತರ

  ಗುರುವ, ಕಾಂತಾರದಲ್ಲಿ ಶಿವನ ಅಣ್ಣ. ವಂಶಪಾರಂಪರಿಕವಾಗಿ ಶಿವ ಮಾಡಬೇಕಿದ್ದ ದೈವನರ್ತಕನ ಪದ್ಧತಿಯನ್ನು ಗುರುವ ಮುಂದುವರೆಸುತ್ತಿರುತ್ತಾನೆ. ಗುರುವನನ್ನು ತುಂಬಾ ಪ್ರೀತಿಸುವ, ತರಲೆ ತುಂಟತನ ಮಾಡಿಕೊಂಡಿರುತ್ತಿದ್ದ ತಮ್ಮ ಶಿವ ಗುರುವನ ಕೊಲೆಯ ನಂತರ ಧಣಿಯ ವಿರುದ್ಧವೇ ಸಿಡಿದೇಳುತ್ತಾನೆ. ರಿಷಬ್ ಶೆಟ್ಟಿಗೂ ಮೊದಲು ಪಂಜುರ್ಲಿಯಾಗಿ ಗುರುವನ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ ಸ್ವರಾಜ್ ಶೆಟ್ಟಿ. ಅಂತಹ ಸ್ವರಾಜ್ ಶೆಟ್ಟಿ ಚೇತನ್ ಟೀಕೆಗೆ ಕಿಡಿಯಾಗಿದ್ದಾರೆ.

  ನಮ್ಮ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡಬೇಡಿ. ನಮ್ಮ ಪೂರ್ವಜರು ಹೇಳಿದ್ದನ್ನು ನಾವು ಮಾಡಿಕೊಂಡು ಬರ್ತಾ ಇದೀವಿ. ದೈವಾರಾಧನೆ ಮತ್ತು ಕಾಂತಾರದ ವಿಷಯ ಬೇಡ. ಸಿನಿಮಾ ಸಿನಿಮಾವಾಗಿ ಇರಲಿ. ನಟರಾಗಿ ಸಿನಿಮಾ ನೋಡಿ. ಖುಷಿ ಪಡಲಿ. ಅದು ಬಿಟ್ಟು ಇಲ್ಲದ್ದನ್ನು ಹೇಳಿ ಬೇಳೆ ಬೇಯಿಸಿ ಕೊಳ್ಳುವ ಕೆಲಸ ಬೇಡ ಎಂದಿದ್ದಾರೆ.

  ಶಿವದೂತ ಗುಳಿಗ ಅನ್ನೋ ನಾಟಕದ ಕಥೆ ಒಂದು ಶಕ್ತಿಯ ಕಥೆ. ಗುಳಿಗನ ಕಥೆಯನ್ನ ಜನರ ಮುಂದೆ ತೆರೆದಿಡೋ ಕೆಲಸ ನಾವು ಮಾಡಿದ್ದೇವೆ. ಧರ್ಮವನ್ನ ಹಾಳು ಮಾಡೋರನ್ನ ಈ ದೈವಗಳು ಬಿಡಲ್ಲ. ಕರಾವಳಿಯ ಎಲ್ಲಾ ದೈವಗಳು ಇದೇ ರೀತಿ ಮಾಡುತ್ತವೆ. ದೈವಗಳು ಭೂಮಿಯಲ್ಲಿ ಇರೋದೇ ಧರ್ಮ ರಕ್ಷಣೆಗಾಗಿ, ಅದನ್ನ ದಾಟಿದ್ರೆ ಉಳಿಗಾಲವಿಲ್ಲ ಎಂದು ಎಚ್ಚಿರಿಕೆಯನ್ನೂ ಕೊಟ್ಟಿದ್ದಾರೆ ಸ್ವರಾಜ್ ಶೆಟ್ಟಿ.

 • ಜಪಾನ್‍ಗೆ ಹೊರಟ ಬೆಲ್‍ಬಾಟಂ

  bell bottom goes to japan

  ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ ಜಯತೀರ್ಥ ನಿರ್ದೇಶನದ ಬೆಲ್‍ಬಾಟಂ ಸಿನಿಮಾ, ಜಪಾನ್‍ಗೆ ಹೊರಟು ನಿಂತಿದೆ. ಕನ್ನಡದಲ್ಲಿ ಈಗಾಗಲೇ ಶತದಿನೋತ್ಸವ ಆಚರಿಸಿರುವ ಸಿನಿಮಾ ಇದು. ಸಾಮಾನ್ಯವಾಗಿ ಜಪಾನ್‍ನಲ್ಲಿ ತಮಿಳು ಚಿತ್ರಗಳಿಗೆ, ಅದರಲ್ಲೂ ರಜನಿ ಚಿತ್ರಗಳಿಗೆ ಡಿಮ್ಯಾಂಡ್ ಇದೆ. ಅಂಥಾದ್ದರಲ್ಲಿ ಈಗ ಕನ್ನಡ ಚಿತ್ರಕ್ಕೆ ಬೇಡಿಕೆ ಸೃಷ್ಟಿಯಾಗಿದೆ. ಬೆಲ್‍ಬಾಟಂ ಟೀಂ ಥ್ರಿಲ್ಲಾಗೋದು ಸಹಜವೇ ಬಿಡಿ.

  ಚಿತ್ರವನ್ನು ಜಪಾನಿ ಭಾಷೆಗೆ ಡಬ್ ಮಾಡುವುದೋ ಅಥವಾ ಜಪಾನ್ ಸಬ್‍ಟೈಟಲ್ ಹಾಕುವುದೋ ಎಂಬ ಬಗ್ಗೆ ಚಿತ್ರತಂಡ ಸ್ವಲ್ಪ ಗೊಂದಲದಲ್ಲಿದೆ. ಚರ್ಚೆ ನಡೆಯುತ್ತಿದೆ. ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರ ಬೆಲ್‍ಬಾಟಂ ಟೋಕಿಯೋದಲ್ಲಿ ರಿಲೀಸ್ ಆಗಲಿದೆ.

 • ಜೂನ್ 23ಕ್ಕೆ ರಿಷಬ್ ಶೆಟ್ರ ಹೊಸ ಕಥೆ..!

  ಜೂನ್ 23ಕ್ಕೆ ರಿಷಬ್ ಶೆಟ್ರ ಹೊಸ ಕಥೆ..!

  2013ರಲ್ಲಿ ರಿಷಬ್ ಶೆಟ್ಟಿ ಅಟ್ಟಹಾಸ ಚಿತ್ರದಲ್ಲಿ ಅಂಡರ್ ಕವರ್ ಕಾಪ್ ಪಾತ್ರದಲ್ಲಿ ಕಾಣಿಸಿಕೊಂಡಾಗ.. ಈ ನಟ ಇಷ್ಟು ದೊಡ್ಡ ಡೈರೆಕ್ಟರ್ ಮತ್ತು ಹೀರೋ ಆಗ್ತಾರೆ ಅನ್ನೋದು ಬಹುಶಃ ಯಾರಿಗೂ ಗೊತ್ತಿರಲಿಲ್ಲ. ಅವರೀಗ ಅನ್‍ಸ್ಟಾಪಬಲ್ ಸ್ಟಾರ್. ನಟಿಸಿದ ಚಿತ್ರಗಳೆಲ್ಲ ಹಿಟ್ ಆಗುತ್ತಿರೋ ಹೊತ್ತಿನಲ್ಲಿ ಹೊಸದದೊಂದು ಚಿತ್ರದೊಂದಿಗೆ ಬರೋದಾಗಿ ಘೋಷಿಸಿದ್ದಾರೆ. ಜೂನ್ 23ಕ್ಕೆ ರಿಷಬ್ ಶೆಟ್ಟಿ ಹೀರೋ ಆಗಿರೋ ಹರಿಕಥೆ ಅಲ್ಲ ಗಿರಿಕಥೆ ರಿಲೀಸ್.

  ರಿಷಬ್ ಶೆಟ್ಟಿಗೆ ಇಲ್ಲಿ ಇಬ್ಬರು ಹೀರೋಯಿನ್ಸ್. ಹೆಂಗೆ ನಾವು ಖ್ಯಾತಿಯ ರಚನಾ ಇಂದರ್ ಹಾಗೂ ತಪಸ್ವಿನಿ. ವೃತ್ತಿಯಲ್ಲಿ ಮೇಲೇರಲು ಕಷ್ಟ ಪಡುವ ಸಿನಮಾ ಡೈರೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ ರಿಷಬ್. ಕಾಮಿಡಿ ಟ್ರ್ಯಾಕ್‍ನಲ್ಲೇ ಸಾಗುವ ಕಥೆಗೆ ಆ್ಯಕ್ಷನ್ ಕಟ್ ಹೇಳಿರೋದು ಅನಿರುದ್ಧ್ ಮಹೇಶ್ ಮತ್ತು ಕರಣ್ ಅನಂತ್. ರಿಷಬ್ ಗರಡಿಯ ಹುಡುಗರೇ. ಸಂದೇಶ್ ನಾಗರಾಜ್ ಚಿತ್ರದ ನಿರ್ಮಾಪಕರು.

 • ಡಿಟೆಕ್ಟಿವ್ ದಿವಾಕರ್ ಲವ್ಸ್ ಕುಸುಮಾ ಹಳೇ ಲವ್ ಸ್ಟೋರಿ

  rishab hari[riya's retro love story

  ರಿಷಬ್ ಶೆಟ್ಟಿ.. ಅಲ್ಲಲ್ಲ ಡಿಟೆಕ್ಟಿವ್ ದಿವಾಕರ.. ಕುಸುಮಾ.. ಅದೇ ರೀ.. ಹರಿಪ್ರಿಯಾ. ಅವರಿಬ್ಬರಿಗೂ ಲವ್ವಾಗಿದೆ. ಇದೆಲ್ಲ ಆಗಿದ್ದು ಹೀಗೆ.. ದಿವಾಕರ್ ಸ್ಕೂಟರಲ್ಲಿ ಹೋಗ್ತಾ ಇದ್ರು. ಹರಿಪ್ರಿಯಾ ಅಲ್ಲೇ ನೀರು ಕುಡೀತಾ ಇದ್ರು. ಅದೇ ಟೈಮಲ್ಲಿ ಇನ್ನೊಬ್ಬ ಬಾಟ್ಲೀಲಿ ಮೀನು ಹಿಡ್ಕೊಂಡು ಬರ್ತಾ ಇದ್ದ. ಬಾಟ್ಲಿ ಹೊಡ್ದೋಯ್ತು. ನೀರು ರೋಡಿಗ್ ಬಿತ್ತು. 

  ರಿಷಬ್ ಓಡೋಡಿ ಬಂದು ಮೀನನ್ನ ಬೊಗಸೆಯಲ್ಲಿಡ್ಕೊಂಡ್ರೆ, ಹರಿಪ್ರಿಯಾ ಬಾಯಲ್ಲಿದ್ದ ನೀರನ್ನ ರಿಷಬ್ ಕೈಗೆ ಉಗಿದು.. ಮೀನನ್ನ ಬದುಕಿಸಿಬಿಟ್ರು. ಲವ್ ಶುರುವಾಗಿದ್ದೇ ಆವಾಗ..

  ಏತಕೆ.. ಬೊಗಸೆ ತುಂಬ ಆಸೆ ನೀಡುವೆ ಎಂದು ಹಾಡು ಶುರುವಾಗಿ ಹೋಯ್ತು. 

  ಇಬ್ಬರಿಗೂ ಹಿಂಗಿಂಗೇ ಲವ್ ಮಾಡ್ಬೇಕು ಅಂತಾ ಲವ್ ಮಾಡ್ಸಿರೋದು ನಿರ್ದೇಶಕ ಜಯತೀರ್ಥ. ನೀವ್ ಲವ್ ಮಾಡೋದಕ್ಕೆ ಖರ್ಚು ನಮ್ದು ಅಂದಿರೋದು ಸಂತೋಷ್ ಕುಮಾರ್. ಇಬ್ಬರ ಪ್ರೀತಿಗೆ ಸಂಗೀತದ ಸ್ಪರ್ಶ ಕೊಟ್ಟಿರೋದು ಅಜನೀಶ್ ಲೋಕನಾಥ್. ಹೇಗಿದೆ ಇಬ್ಬರ ಪ್ರೀತಿ.. ಪ್ರೇಮಿಗಳ ದಿನ ಕಳೆದ ಮಾರನೇ ದಿನವೇ ನೀವೆಲ್ಲ ನೋಡಬಹುದು. ಬೆಲ್‍ಬಾಟಂ ಅವತ್ತೇ ರಿಲೀಸು.

 • ಡಿಟೆಕ್ಟಿವ್ ದಿವಾಕಲ್ ಲವ್ಸ್ ಹರಿಪ್ರಿಯಾ..!

  bell bottom movie image

  ಪತ್ತೇದಾರನಾಗಬೇಕು ಎಂದು ಆಸೆಪಟ್ಟು ಹೊರಟಿರುವ ಹುಡುಗನ ಮೇಲೆ ಹರಿಪ್ರಿಯಾ ಕಣ್ಣು ಹಾಕಿದ್ದಾರೆ. ಹರಿಪ್ರಿಯಾರ ನಗುವಿನ ಮೋಹಕತೆಗೆ ಸಿಲುಕಿರುವ ಪತ್ತೇದಾರನಿಗೂ ಲವ್ವಾಗಿಬಿಟ್ಟಿದೆ. ಈಗಲ್ಲ...80ರ ದಶಕದಲ್ಲಿ. ಇದು ಬೆಲ್‍ಬಾಟಂ ಚಿತ್ರದ ಕಥೆಯ ಒಂದು ಎಳೆ ಮಾತ್ರ.

  ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿರುವುದು ಡಿಟೆಕ್ಟಿವ್ ಪಾತ್ರದಲ್ಲಿ. ಡಾ.ರಾಜ್, ಅನಂತ್‍ನಾಗ್ ಶೈಲಿಯಲ್ಲಿ ಮಿಮಿಕ್ರಿ ಮಾಡುತ್ತಿದ್ದ ರಿಷಬ್ ಶೆಟ್ಟಿಗೆ, ಈ ಚಿತ್ರದಲ್ಲಿ ಆ ಮಿಮಿಕ್ರಿಯೇ ವರವಾಗಿದೆಯಂತೆ. ಡಿಟೆಕ್ಟಿವ್ ಸಿನಿಮಾ ನೋಡಿಕೊಂಡೇ ಚಿತ್ರರಂಗಕ್ಕೆ ಬಂದವನು ನಾನು. ನನ್ನ ಮೊದಲ ಸಿನಿಮಾದಲ್ಲೇ ಡಿಟೆಕ್ಟಿವ್ ಕ್ಯಾರೆಕ್ಟರ್ ಸಿಕ್ಕಿದೆ. ಖುಷಿಯಾಗಿದೆ ಅಂತಾರೆ ರಿಷಬ್.

  ಇಡೀ ಚಿತ್ರದಲ್ಲಿ ಗಮನ ಸೆಳೆಯುತ್ತಿರುವುದು ಕಾಸ್ಟ್ಯೂಮ್. ರಿಷಬ್.. ಆಗಿನ ಕಾಲದ ಕನ್ನಡಕ, ಕ್ಯಾಪ್, ಮಫ್ಲರ್, ಕೋಟು ಧರಿಸಿದ್ದರೆ, ಹರಿಪ್ರಿಯಾ.. ಕಣ್ಣಿಗೆ ಕಾಡಿಗೆ, ಹೂವು, ಸೀರೆಗಳಲ್ಲಿ 80ರ ದಶಕವನ್ನು ನೆನಪಿಸುತ್ತಿದ್ದಾರೆ. ಒಂದು ಕಾಮಿಡಿ, ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾ ಬರುತ್ತಿದೆ.

   

 • ಡೈರೆಕ್ಟರ್ ರಿಷಬ್ ಶೆಟ್ಟಿ ಹೀರೋ ಆಗಿದ್ದು ಹೀಗೆ

  story behind how director rishab shetty turned nto an actor

  ರಿಷಬ್ ಶೆಟ್ಟಿ ಎಂದರೆ ಥಟ್ಟನೆ ಕಣ್ಮುಂದೆ ಬರೋದು ಕಿರಿಕ್ ಪಾರ್ಟಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ. ಎರಡು ಸೂಪರ್ ಹಿಟ್ ಚಿತ್ರ ಕೊಟ್ಟಿರುವ ರಿಷಬ್ ಶೆಟ್ಟಿ, ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ತುಗ್ಲಕ್ ಚಿತ್ರದಲ್ಲಿಯೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ರಿಷಬ್ ಶೆಟ್ಟಿ, ಈಗ ಪೂರ್ಣ ಪ್ರಮಾಣದ ಹೀರೋ. 

  ಹಾಗೆ ನೊಡಿದರೆ ರಿಷಬ್, ಹೀರೋ ಆಗಲೆಂದೇ ಚಿತ್ರರಂಗಕ್ಕೆ ಬಂದು ಡೈರೆಕ್ಟರ್ ಆದವರು. ಈಗ ಬೆಲ್‍ಬಾಟಂ ಚಿತ್ರದಲ್ಲಿ ಡಿಟೆಕ್ಟಿವ್ ಸುಧಾಕರ್ ಆಗಿದ್ದಾರೆ. ಹರಿಪ್ರಿಯಾ ರಿಷಬ್ ಶೆಟ್ಟಿಗೆ ನಾಯಕಿ. ಜಯತೀರ್ಥ ನಿರ್ದೇಶನದ ಚಿತ್ರದಲ್ಲಿ ಯೋಗರಾಜ್ ಭಟ್, ಶಿವಮಣಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಟಿ.ಕೆ.ದಯಾನಂದ್ ಅವರ ಕಥೆ ಚಿತ್ರದಲ್ಲಿದೆ. 

  ಒಟ್ಟಿನಲ್ಲಿ ಗೆಳೆಯರೆಲ್ಲ ಒಂದಾಗಿ ಮಾಡಿರುವ ಸಿನಿಮಾ ಬೆಲ್‍ಬಾಟಂ, ಇದೇ ವಾರ ತೆರೆಗೆ ಬರುತ್ತಿದೆ.

 • ತಾಯಿ ಶಾರದೆ ಲೋಕಪೂಜಿತೆ ನೆನಪಿಸಿದ ರಿಷಬ್ ಶೆಟ್ಟಿ

  rishab shetty's prarthana song

  ಹೇ ಶಾರದೆ.. ದಯಪಾಲಿಸು.. ಈ ಬಾಳನು ಬೆಳಕಾಗಿಸು.. ನಾಳೆಗಳ ದಾರಿಯಲಿ ನಂಬಿಕೆಯಾ ನೆಲೆಯಾಗಿರಿಸು... ಮುನ್ನಡೆಸು.. ಎಂದು ಸಾಗುವ ಹಾಡಿದು. ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ ಚಿತ್ರದ ಹಾಡಿದು. ಹಾಡಿನ ಸಾಹಿತ್ಯ ನೋಡಿದರೆ, ಇದೊಂದು ಪ್ರಾರ್ಥನಾ ಗೀತೆ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಸರ್ಕಾರಿ ಪ್ರಾಥಮಿಕ ಪಾಠಶಾಲೆ ಚಿತ್ರದ 2ನೇ ಹಾಡು ಇದು. 

  ಹಾಡು ನೋಡಿದವರೆಲ್ಲ ಥಟ್ಟನೆ ನೆನಪಿಸಿಕೊಳ್ಳುತ್ತಿರುವುದು ಬೆಟ್ಟದ ಹೂವು ಚಿತ್ರದ ತಾಯಿ ಶಾರದೆ ಲೋಕ ಪೂಜಿತೆ.. ತೇನಮೋಸ್ತು ನಮೋಸ್ತುತೆ.. ಹಾಡನ್ನು. ಪುನೀತ್ ರಾಜ್‍ಕುಮಾರ್ ಬಾಲನಟನಾಗಿ ನಟಿಸಿದ್ದ ಸಿನಿಮಾದ ಆ ಹಾಡು, ಅದೆಷ್ಟೋ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿತ್ತು. ಅಂಥಾದ್ದೊಂದು ಪ್ರಾರ್ಥನಾ ಗೀತೆಯ ಕೊರತೆ ನೀಗಿಸಿದ್ದಾರೆ ರಿಷಬ್ ಶೆಟ್ಟಿ. 

  ಹಾಡು ಹಾಡಿರುವ ಆಶಾ ಮತ್ತು ಸುನಿಧಿ ಕೂಡಾ ಯುವ ಪ್ರತಿಭೆಗಳು. ಆಶಾ, ಮೂಲತಃ ಕಾಸರಗೋಡಿನವರು. ಸುನಿಧಿ ರೇಡಿಯೋ ಕಾಂಪಿಟೇಷನ್ ಒಂದರಲ್ಲಿ ಪ್ರಶಸ್ತಿ ಪುರಸ್ಕøತರು. ದಡ್ಡ ದಡ್ಡ ಹಾಡಿನ ಮೂಲಕ ಮಧ್ಯವಯಸ್ಕರನ್ನು ಬಾಲ್ಯದ ತುಂಟಾಟಕ್ಕೆ ಹೊತ್ತೊಯ್ದಿದ್ದ ರಿಷಬ್ ಶೆಟ್ಟಿ, ಈ ಹಾಡಿನ ಮೂಲಕ ಪ್ರಾರ್ಥನಾ ಗೀತೆಗೆ ಕರೆದೊಯ್ದಿದ್ದಾರೆ.

 • ತೆಲುಗಿಗೆ ರಿಷಬ್ ಶೆಟ್ಟಿ : RRR V/s KGF

  ತೆಲುಗಿಗೆ ರಿಷಬ್ ಶೆಟ್ಟಿ : RRR V/s KGF

  ರಿಷಬ್ : ಏನ್ ನಿಮ್ ಹೆಸ್ರು..?

  ಮಕ್ಕಳು : ರಘುಪತಿ.. ರಾಘವ.. ರಾಜಾರಾಂ.. ಆರ್.ಆರ್.ಆರ್. ನಿಮ್ ಹೆಸ್ರೇನು?

  ರಿಷಬ್ : ಖಲೀಲ್. ಜಿಲ್ಲಾನಿ. ಫರೂಕ್. ಕೆ.ಜಿ.ಎಫ್.

  ಮಕ್ಕಳು : ಕೆಜಿಎಫ್ ಒನ್ನಾ..? 2ನಾ..?

  ಇಂತಾದ್ದೊಂದು ಮಜಾ ಡೈಲಾಗ್ ಇರೋದು ಮಿಷನ್ ಇಂಪಾಸಿಬಲ್ ಅನ್ನೋ ಸಿನಿಮಾದಲ್ಲಿ. ಇದು ತೆಲುಗು ಸಿನಿಮಾ. ಈ ಚಿತ್ರದ ಮೂಲಕ ರಿಷಬ್ ಶೆಟ್ಟಿ ತೆಲುಗಿಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಇದು ಪಕ್ಕಾ ಮಸಾಲಾ ಮೂವಿ. ಕಾಮಿಡಿ ಮತ್ತು ಥ್ರಿಲ್ಲರ್ ಎರಡನ್ನೂ ಹದವಾಗಿ ಬೆರೆಸಿರೋ ಚಿತ್ರದಲ್ಲಿ ರಿಷಬ್ ಶೆಟ್ಟಿಯವರ ಪಾತ್ರ ಕುತೂಹಲವನ್ನಂತೂ ಹುಟ್ಟಿಸಿದೆ.

  ಚಿತ್ರದಲ್ಲಿ ತಾಪ್ಸಿ ಪನ್ನು ನಾಯಕಿ ಕಂ ನಾಯಕ. ಮೂವರು ಬಾಲಕರು ದಾವೂದ್ ಇಬ್ರಾಹಿಂನನ್ನು ಹಿಡಿಯಲು ಹೊರಡುವ ಕಥೆ ಚಿತ್ರದ್ದು. ಏಪ್ರಿಲ್‍ನಲ್ಲಿ ರಿಲೀಸ್ ಆಗುತ್ತಿದೆ.

 • ದಡ್ಡ.. ಶಾರದೆ.. ನಂತರ ಈಗ ಬಲೂನು..

  balloon song is also super hit

  ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ ಎಂಬ ಸುದೀರ್ಘ ಟೈಟಲ್ಲಿನ ಸಿನಿಮಾ, ಹಾಡುಗಳಿಂದಲೇ ಸದ್ದು ಮಾಡುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿರೋದು ಸರ್ಕಾರಿ ಶಾಲೆಯ ಮಕ್ಕಳ ಕಥೆ. ಈ ಬಾರಿ ಚಿತ್ರದ ಬಲೂನಿನ ಹಾಡು ಸದ್ದು ಮಾಡಿದೆ. 

  ಈ ಹಾಡನ್ನೂ ಮಕ್ಕಳಿಂದಲೇ ಹಾಡಿಸಿರುವುದು ವಿಶೇಷ. ಬಲೂನ್ ಮಾರಾಟಗಾರನೊಬ್ಬ, ತನ್ನ ಜೊತೆಯಲ್ಲಿ ತನ್ನ ಮಗನನ್ನೂ ಬಲೂನು ಮಾರೋಕೆ ಕರೆದುಕೊಂಡು ಹೋಗುತ್ತಾನೆ. ಆಗ ಆ ಹುಡುಗನ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನೇ ಒಂದಿಷ್ಟು ಹಾಸ್ಯ ಹಾಗೂ ಭಾವನೆಗಳನ್ನು ಬೆರೆಸಿ ಬರೆದಿರುವ ಹಾಡು ಇದು. 

  ಹಾಡು ಮಕ್ಕಳಿಗೆ ಇಷ್ಟವಾಗುತ್ತಿದ್ದರೆ, ಪೋಷಕರಿಗೆ, ಹಿರಿಯರಿಗೆ ತಮ್ಮ ಬಾಲ್ಯಕ್ಕೆ ಕರೆದೊಯ್ಯುತ್ತಿದೆ. ಈ ಮೊದಲು ದಡ್ಡ ಪ್ರಶಾಂತ ಹಾಗೂ ತಾಯಿ ಶಾರದೇ ಹಾಡುಗಳೂ ಕೂಡಾ ಹಿಟ್ ಆಗಿದ್ದವು. ಈಗ 3ನೇ ಹಾಡು ಕೂಡಾ ಹಿಟ್ ಲಿಸ್ಟ್ ಸೇರಿದೆ.

  ಇನ್ನೂ ಒಂದು ವಿಶೇಷವಿದೆ. ಸರಿಗಮಪ ಲಿಟ್ಲ್ ಚಾಂಪ್ ಶೋ ಮೂಲಕ ಕನ್ನಡದ ಮನೆಮಾತಾಗಿದ್ದ ಜ್ಞಾನೇಶ್ ಈ ಹಾಡು ಹಾಡಿದ್ದಾರೆ. ಬಳ್ಳಾರಿಯ ಹುಡುಗನ ಪ್ರತಿಭೆ, ಕಂಠಸಿರಿಗೆ ಪ್ರೇಕ್ಷಕರು ತಲೆದೂಗಿದ್ದಾರೆ.

 • ದಡ್ಡನನ್ನು ಮೆಚ್ಚಿಕೊಂಡ ಬುದ್ದಿವಂತರು..!

  daddha song goes viral

  ದಡ್ಡ.. ದಡ್ಡ.. ದಡ್ಡ.. ದಡ್ಡ.. ಈ ಹಾಡು ಈಗ ವೈರಲ್ ಆಗುತ್ತಿದೆ. ಇದು ಸಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಚಿತ್ರದ ಮೊದಲ ಹಾಡು. ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರದ ಈ ಹಾಡಿನಲ್ಲಿ ಮನರಂಜನೆಯೂ ಇದೆ.. ಸಂದೇಶವೂ ಇದೆ. ಹೀಗಾಗಿಯೇ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

  ಮೋಡ ಮುಸುಕಿದ ಭಾನು.. ರೆಕ್ಕೆ ತಿರುಗದ ಫ್ಯಾನು.. ಸಿಂಗಲ್ ಆದ್ಯಲ್ಲೋ ನೀನು.. ಪ್ರವೀಣಾ.. ಪ್ರವೀಣಾ.. ದಡ್ಡ ದಡ್ಡ ಎಂದು ಆರಂಭವಾಗುವ ಸಾಲು ನಗೆಯುಕ್ಕಿಸುತ್ತಲೇ ಚಿಂತನೆಗೆ ಹಚ್ಚಿಸುತ್ತೆ. ಕಿರಿಕ್ ಪಾರ್ಟಿ ನಂತರ ರಿಷಬ್ ಶೆಟ್ಟಿ ನಿರ್ದೇಶಿಸಿರುವ ಚಿತ್ರದ ಈ ಹಾಡು ಗೆಲ್ಲುವ ಮೂಲಕ, ಚಿತ್ರತಂಡವೂ ಖುಷಿಯಾಗಿದೆ.

 • ದೈವಾರಾಧನೆ ಮಾಡುವವರಿಗೆ ಮಾತ್ರ ಮಾತನಾಡುವುದಕ್ಕೆ ಅರ್ಹತೆ ಇದೆ : ರಿಷಬ್ ಶೆಟ್ಟಿ

  ದೈವಾರಾಧನೆ ಮಾಡುವವರಿಗೆ ಮಾತ್ರ ಮಾತನಾಡುವುದಕ್ಕೆ ಅರ್ಹತೆ ಇದೆ : ರಿಷಬ್ ಶೆಟ್ಟಿ

  ಭೂತಕೋಲ, ದೈವಾರಾಧನೆ ಹಿಂದೂಗಳದ್ದಲ್ಲ. ಹಿಂದೂ ಸಂಸ್ಕøತಿಯನ್ನು ಕಾಂತಾರ ಚಿತ್ರದಲ್ಲಿ ಹೇರಿಕೆ ಮಾಡಲಾಗಿದೆ. ಅದು ಮೂಲನಿವಾಸಿಗಳ ಬುಡಕಟ್ಟು ಜನರ ಆಚರಣೆ. ಕಾಂತಾರ ಸಿನಿಮಾದಲ್ಲಿ ಹಿಂದೂ ಧರ್ಮದ ವೈದಿಕ ಬ್ರಾಹ್ಮಣ್ಯ ಅಂಶಗಳನ್ನು ತುರುಕಲಾಗಿದೆ... ಇಂತಹ ವಾದಗಳನ್ನು ಮುಂದಿಟ್ಟು ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದರು ಆ ದಿನಗಳು ನಟ ಚೇತನ್. ಇದಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಟೀಕೆ ಮಾಡಿದ್ದರಾದರೂ ಒಂದು ಹಂತದ ಖ್ಯಾತನಾಮರಾರೂ ಮಾತನಾಡಿರಲಿಲ್ಲ. ಹೀಗಾಗಿಯೇ ಚೇತನ್ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ಸಿನಿಮಾ ನೋಡಿ ಮೆಚ್ಚಿದವರು ಚೇತನ್ ವಿರುದ್ಧ ಹಿಗ್ಗಾಮುಗ್ಗ ಝಾಡಿಸಿದ್ದರು.

  ಚಿತ್ರ ತಂಡದ ಸದಸ್ಯರಾದ ಗುರುವ ಪಾತ್ರಧಾರಿ ಸೂರಜ್ ಶೆಟ್ಟಿ, ರಿಷಬ್ ಶೆಟ್ಟಿಯವರ ತಂದೆ, ದೈವನರ್ತನದ ಸೂಕ್ಷ್ಮಗಳನ್ನು ಹೇಳಿಕೊಟ್ಟಿದ್ದ ಮುಕುಂದ್, ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮೊದಲಾದವರು ಚೇತನ್‍ನ್ನು ಹಿಗ್ಗಾಮುಗ್ಗ ಜಾಡಿಸಿದ್ದರು. ಈಗ ರಿಷಬ್ ಶೆಟ್ಟಿಯವರೇ ಚೇತನ್ ಮಾತಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

  ಭೂತಕೋಲ, ದೈವಾರಾಧನೆಯನ್ನು ಬಾಲ್ಯದಿಂದಲೇ ನೋಡಿಕೊಂಡು ಬೆಳದವನು ನಾನು. ಅಂಥಾದ್ದೊಂದು ಕಥೆ ಮಾಡುವಾಗ ಸಿನಿಮಾ ಮಾಡುವಾಗ ಏನೇನೆಲ್ಲ ಮುಂಜಾಗ್ರತೆ ತೆಗೆದುಕೊಳ್ಳಬೇಕೋ.. ತೆಗೆದುಕೊಂಡಿದ್ದೇವೆ. ಯಾರಿಗೂ ನೋವಾಗದಂತೆ ಸಿನಿಮಾ ಇರಬೇಕು ಎಂದು ನಾನು ಬಯಸಿದ್ದೆ. ಇದನ್ನು ಆರಾಧಿಸುವವರಿಗೆ, ನಾವು ದೈವ ದೇವಾದಿಗಳನ್ನು ಲೋಪವಾಗದಂತೆ ಸಿನಿಮಾ ಮಾಡಬೇಕು ಎನ್ನುವುದು ನನ್ನ ಅಪೇಕ್ಷೆಯಾಗಿತ್ತು. ಅದಕ್ಕೆಂದೇ ನಾನು ಹಿರಿಯರನ್ನು, ದೈವಾರಾಧಕರನ್ನು ಜೊತೆಯಲ್ಲಿಟ್ಟುಕೊಂಡೇ ಸಿನಿಮಾ ಚಿತ್ರೀಕರಿಸಿದ್ದೆವು ಎಂದಿದ್ದಾರೆ.

  ನನಗೆ ಸಂಸ್ಕøತಿಯ ಬಗ್ಗೆ ಮಾತನಾಡುವಷ್ಟು ಗೊತ್ತಿಲ್ಲ. ಸಂಸ್ಕøತಿಯ ಬಗ್ಗೆ ಮಾತನಾಡುವುದಕ್ಕೆ ದೊಡ್ಡ ಅರ್ಹತೆ ಬೇಕು. ನನಗೆ ಆ ಅರ್ಹತೆ ಇಲ್ಲ. ಟೀಕಿಸಿದವರಿಗೂ ಆ ಅರ್ಹತೆ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಚೇತನ್ ಟೀಕೆಗೆ ಉತ್ತರಿಸಬೇಕಾದವರು ಉತ್ತರಿಸುತ್ತಾರೆ. ದೈವಾರಾಧಕರನ್ನು ಬೇರೆ ಯಾರಿಗೂ ಟೀಕಿಸುವ ಅರ್ಹತೆ ಇಲ್ಲ ಎಂದಿದ್ದಾರೆ ರಿಷಬ್ ಶೆಟ್ಟಿ. ಚಿತ್ರಕ್ಕಾಗಿ ಶ್ರಮ ಹಾಕಿದ್ದೇವೆ. ರಕ್ತ ಸುರಿಸಿದ್ದೇವೆ. ಎಲ್ಲವನ್ನೂ ವೀಕ್ಷಕರಿಗೆ ಬಿಟ್ಟಿದ್ದೇವೆ. ಪ್ರತಿಫಲವೂ ಸಿಗುತ್ತಿದೆ ಎಂದು ಸಿನಿಮಾ ಯಶಸ್ಸಿನ ಬಗ್ಗೆ ಖುಷಿಯಾಗಿ ಮಾತನಾಡಿದ್ದಾರೆ ರಿಷಬ್ ಶೆಟ್ಟಿ.

 • ದ್ವಾರಕೀಶ್ ಅವರ ಆಪ್ತಮಿತ್ರ ಬಂಗಲೆ ಖರೀದಿಸಿದ ರಿಷಬ್ ಶೆಟ್ಟಿ

  ದ್ವಾರಕೀಶ್ ಅವರ ಆಪ್ತಮಿತ್ರ ಬಂಗಲೆ ಖರೀದಿಸಿದ ರಿಷಬ್ ಶೆಟ್ಟಿ

  ಕನ್ನಡ ಚಿತ್ರರಂಗದ ಕುಳ್ಳ ದ್ವಾರಕೀಶ್ ಅವರ ಬಂಗಲೆ ಮಾರಾಟವಾಗಿದೆ. ದ್ವಾರಕೀಶ್ ಅವರು ತಾವು ದುಡಿದದ್ದೆಲ್ಲವನ್ನೂ ಕಳೆದುಕೊಳ್ಳೋದು ಹೊಸದಲ್ಲ. ಆದರೆ, ಹೆಚ್‍ಎಸ್‍ಆರ್ ಲೇಔಟ್ ಬಂಗಲೆ ಇದೆಯಲ್ಲ, ಅದು ಆಪ್ತಮಿತ್ರ ಚಿತ್ರ ಸಕ್ಸಸ್ ಆದಾಗ ಆ ಹಣದಲ್ಲಿ ಖರೀದಿಸಿದ್ದ ಬಂಗಲೆ ಅದು. ಆಪ್ತಮಿತ್ರ ಚಿತ್ರದ ಲಾಭದಲ್ಲಿ ತಮ್ಮ ಹಳೆಯ ಸಾಲಗಳನ್ನೆಲ್ಲ ತೀರಿಸಿ ಖರೀದಿಸಿದ್ದ ಮನೆ ಅದು. ಅದನ್ನೀಗ ದ್ವಾರಕೀಶ್ ಮಾರಾಟ ಮಾಡಿದ್ದಾರೆ.

  ಇತ್ತೀಚೆಗೆ ದ್ವಾರಕೀಶ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಮನೆಯನ್ನು ಮಾರಿದ್ದಾರೆ. ಈ ಮನೆಯನ್ನು ಖರೀದಿಸಿರುವುದು ರಿಷಬ್ ಶೆಟ್ಟಿ. ಅಂದಹಾಗೆ ಇದು ದ್ವಾರಕೀಶ್ ಅವರ 13ನೇ ಮನೆ. ಈ ಮನೆಯನ್ನು ರಿಷಬ್ ಶೆಟ್ಟಿ ಹತ್ತೂವರೆ ಕೋಟಿಗೆ ಖರೀದಿಸಿದ್ದಾರಂತೆ.

  ವ್ಯವಹಾರ ಅಂದ್ಮೇಲೆ ಲಾಭ ನಷ್ಟ ಇದ್ದಿದ್ದೇ. ಈ ಹಿಂದೆಯೂ ಮಾರಿದ್ದೆ. ಮತ್ತೆ ಖರೀದಿಸಿದ್ದೆ. ಹಣ ಇದ್ದಾಗ ಮನೆಗಳನ್ನು ಖರೀದಿಸುವುದು ಕಷ್ಟ ಬಂದಾಗ ಮಾರುವುದು ನನಗೆ ಹೊಸದೇನಲ್ಲ. ಮತ್ತೆ ಪುಟಿದೇಳುತ್ತೇನೆ ಎಂಬ ಆತ್ಮವಿಶ್ವಾಸ ದ್ವಾರಕೀಶ್ ಅವರದ್ದು.

 • ನ.19ಕ್ಕೆ ಪ್ರೇಕ್ಷಕ ಗಮನ ಥಿಯೇಟರ್ ವಾಹನ

  ನ.19ಕ್ಕೆ ಪ್ರೇಕ್ಷಕ ಗಮನ ಥಿಯೇಟರ್ ವಾಹನ

  ಗರುಡ ಗಮನ ವೃಷಭ ವಾಹನ. ತನ್ನ ಟೈಟಲ್ಲಿನಿಂದಲೇ ಕುತೂಹಲ ಹುಟ್ಟಿಸಿದ್ದ ಚಿತ್ರ. ಶೆಟ್ಟಿ + ಶೆಟ್ಟಿ ಕಾಂಬಿನೇಷನ್ ಸಿನಿಮಾ. ಯೆಸ್, ಇದು ರಿಷಬ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ ಜೊತೆಯಾಗಿ ನಟಿಸಿರೋ ಸಿನಿಮಾ. ಚಿತ್ರದ ನಿರ್ದೇಶಕರೂ ಸ್ವತಃ ರಾಜ್ ಬಿ.ಶೆಟ್ಟಿ. ಪ್ರೇಕ್ಷಕರ ಬಾಯಲ್ಲಿ ಗರುಡ ಗಮನ ವೃಷಭ ವಾಹನ ಅನ್ನೋ ಟೈಟಲ್ ಈಗ ಸಿಂಪಲ್ಲಾಗಿ ಜಿಜಿವಿವಿ ಆಗಿ ಹೋಗಿದೆ. ಈ ಚಿತ್ರವೀಗ ನವೆಂಬರ್ 19ರಂದು ತೆರೆಗೆ ಬರುತ್ತಿದೆ.

  ಈಗಾಗಲೇ ಚಿತ್ರದ ಟ್ರೇಲರ್ ಹೊರಬಿದ್ದಿದೆ. ರೆಗ್ಯುಲರ್ ಸ್ಟೈಲ್‍ಗಿಂತ, ಶೈಲಿಗಿಂತ ಬೇರೆಯದೇ ಆದ ಸಿನಿಮಾ ಈ ಜಿಜಿವಿವಿ ಅನ್ನೋ ಫೀಲಿಂಗ್ ಕೊಟ್ಟಿದೆ ಚಿತ್ರದ ಟ್ರೇಲರ್. ಗ್ಯಾಂಗ್‍ಸ್ಟರ್, ಫ್ರೆಂಡ್‍ಶಿಪ್ ಮತ್ತು ಗ್ಯಾಂಗ್‍ವಾರ್.. ಎಲ್ಲವನ್ನೂ ಕರಾವಳಿ ಬ್ಯಾಕ್‍ಗ್ರೌಂಡ್‍ನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಮೊಟ್ಟೆ ಸ್ಟಾರ್ ರಾಜ್ ಬಿ.ಶೆಟ್ಟಿ.

  ರಿಷಬ್ ಮತ್ತು ರಾಜ್ ಇಬ್ಬರ ಕಾಂಬಿನೇಷನ್ನೇ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸುವಂತೆ ಮಾಡಿದೆ. 

 • ನಾಥೂರಾಮನಾಗ್ತಾರಂತೆ ರಿಷಬ್ ಶೆಟ್ಟಿ

  rishab shetty turns nathuram

  ಕಿರಿಕ್ ಪಾರ್ಟಿ ರಿಷಬ್ ಶೆಟ್ಟಿ, ಡೈರೆಕ್ಷನ್‍ಗಿಂಗ ನಟನೆಯಲ್ಲೇ ಬ್ಯುಸಿಯಾಗುವ ಸೂಚನೆಗಳು ಸಿಗುತ್ತಿವೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಕಾಸರಗೋಡು ಸಿನಿಮಾವನ್ನು ತೆರೆಗೆ ತರಲು ಸಿದ್ಧಪಡಿಸಿರುವ ರಿಷಬ್ ಶೆಟ್ಟಿ, ಬೆಲ್‍ಬಾಟಂ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಜೊತೆ ಜೊತೆಯಲ್ಲೇ ನಾಥೂರಾಮನಾಗುತ್ತಿದ್ದಾರೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿರೋ ರಿಷಬ್ ಶೆಟ್ಟಿಗೆ ನಾಥೂರಾಮನ ವೇಷ ಹಾಕಿಸುತ್ತಿರುವುದು ವಿನ ಬಳಂಜ. ಕಿರುತೆರೆಯಲ್ಲಿ ಪ್ರೀತಿ ಇಲ್ಲದ ಮೇಲೆ, ಜೋಗುಳ ಧಾರಾವಾಹಿ ನಿರ್ದೇಶಿಸಿದ್ದ ವಿನು ಬಳಂಜ, ನಾಥೂರಾಮ ಚಿತ್ರದ ಮೂಲಕ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಅವರ ಮೊದಲ ಚಿತ್ರದ ಹೀರೋ ರಿಷಬ್ ಶೆಟ್ಟಿ.

  ನಟನಾಗಲೆಂದೇ ಚಿತ್ರರಂಗಕ್ಕೆ ಬಂದ ರಿಷಬ್ ಶೆಟ್ಟಿಗೆ ಸಕ್ಸಸ್ ಸಿಕ್ಕಿದ್ದು ನಿರ್ದೇಶಕನಾದ ಮೇಲೆ. ನಿರ್ದೇಶಕನಾಗಿ ಯಶಸ್ವಿಯಾದ ನಂತರ ಸಿಕ್ಕಿರುವ ನಟನೆಯ ಅವಕಾಶಗಳನ್ನು ರಿಷಬ್ ಶೆಟ್ಟಿ ಬಿಡೋಕೆ ರೆಡಿಯಾಗಿಲ್ಲ. ಹೀಗಾಗಿ ನಿರ್ದೇಶಕನಿಗಿಂತ ಹೆಚ್ಚಾಗಿ ನಟನೆಯತ್ತಲೇ ಒಲವು ತೋರಿಸುತ್ತಿದ್ದಾರೆ.

 • ನಿರ್ದೇಶಕರೇ ಮೆಚ್ಚಿದ ನಿರ್ದೇಶಕರ ಸಿನಿಮಾ ಗಗವೃವಾ

  ನಿರ್ದೇಶಕರೇ ಮೆಚ್ಚಿದ ನಿರ್ದೇಶಕರ ಸಿನಿಮಾ ಗಗವೃವಾ

  ಒಂದು ಚಿತ್ರವನ್ನು ಸಿದ್ಧ ಮಾಡಿ ತೆರೆಗೆ ತರುವ ಪ್ರತಿಯೊಬ್ಬರಿಗೂ ಒಂದು ಆಸೆ ಸಹಜವಾಗಿಯೇ ಇರುತ್ತದೆ. ತಮ್ಮ ಕ್ಷೇತ್ರದ ಸಾಧಕರೆಲ್ಲರೂ ಈ ಚಿತ್ರವನ್ನು ಮೆಚ್ಚಬೇಕು ಎನ್ನುವುದು. ಸದ್ಯಕ್ಕೆ ರಾಜ್ ಬಿ.ಶೆಟ್ಟಿ ಆ ಸಾಧನೆ ಮಾಡಿದ್ದಾರೆ. ಒಂದು ಕಡೆ ಗರುಡ ಗಮನ ವೃಷಭ ವಾಹನವನ್ನು ಪ್ರೇಕ್ಷಕರು, ವಿಮರ್ಶಕರು ಮೆಚ್ಚಿದ್ದಾರೆ. ಬಾಕ್ಸಾಫೀಸ್ ದಾಖಲೆ ಬರೆಯುತ್ತಿದೆ. ಸಿನಿಮಾ ಚೆನ್ನಾಗಿದೆಯಾ..? ಕೆಟ್ಟದಾಗಿಯಾ..? ಓಕೆನಾ..? ಆವರೇಜ್ ಮೂವಿನಾ..? ಎಕ್ಸ್‍ಟ್ರಾರ್ಡನರಿ ಸಿನಿಮಾನಾ..? ಹೀಗೆ.. ಪರ ವಿರೋಧ ಎರಡೂ ಚರ್ಚೆಗಳು ಚಾಲ್ತಿಯಲ್ಲಿವೆ. ಇದೆಲ್ಲದರ ಮಧ್ಯೆ ರಾಜ್ ಬಿ.ಶೆಟ್ಟಿಗೆ ಚಿತ್ರರಂಗದ ನಿರ್ದೇಶಕರಿಂದ ಪ್ರಶಂಸೆಗಳು ಸಿಗುತ್ತಿವೆ.

  ಚಿತ್ರದಲ್ಲಿ ನಟಿಸಿರುವ ಇನ್ನೊಬ್ಬ ಹೀರೋ ರಿಷಬ್ ಶೆಟ್ಟಿ, ಸ್ವತಃ ಹಿಟ್ ಡೈರೆಕ್ಟರ್ ಅನ್ನೋದನ್ನು ಮರೆಯುವಂತಿಲ್ಲ. ಚಿತ್ರವನ್ನು ವಿತರಣೆ ಮಾಡಿದವರಲ್ಲಿ ಒಬ್ಬರಾದ ರಕ್ಷಿತ್ ಶೆಟ್ಟಿ ಕೂಡಾ ಸ್ಟಾರ್ ನಿರ್ದೇಶಕರೇ. ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡಾ ಚಿತ್ರದ ಬಗ್ಗೆ ಚೆಂದದ ಮಾತನಾಡಿದ್ದಾರೆ.

  ಅವರಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಪುಟ್ಟ ಪತ್ರವನ್ನೇ ಬರೆದು ರಾಜ್ ಬಿ.ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಶಶಾಂಕ್, ಅನೂಪ್ ಭಂಡಾರಿ, ಸತ್ಯ ಪ್ರಕಾಶ್, ಹೇಮಂತ್ ರಾವ್.. ಹೀಗೆ ಚಿತ್ರವನ್ನು ನೋಡಿದವರೆಲ್ಲ ಗರುಡ ಗಮನ ವೃಷಭ ವಾಹನ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

 • ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ದೇಶದಿಂದ ಹೊರಹಾಕಬೇಕು - ರಿಷಬ್ ಶೆಟ್ಟಿ, ಹರಿಪ್ರಿಯಾ

  pro pakistani intellectuals should leave india says rishab shetty

  ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆಲ್‍ಬಾಟಂ ಚಿತ್ರತಂಡ ಹುತಾತ್ಮ ಯೋಧ ಗುರು ಕುಟುಂಬದ ನೆರವಿಗೆ ಧಾವಿಸಿದೆ. ಗುರು ಕುಟುಂಬಕ್ಕೆ ರಿಷಬ್ ಶೆಟ್ಟಿ 50 ಸಾವಿರ ರೂ. ಹಾಗೂ ನಿರ್ಮಾಪಕ ಸಂತೋಷ್ 25 ಸಾವಿರ ರೂ. ಪರಿಹಾರನೀಡಿ ಸಾಂತ್ವನ ಹೇಳಿದ್ದಾರೆ. 

  ನಾವು ನೀಡುವ ಹಣ, ಗುರು ಕುಟುಂಬದ ತ್ಯಾಗಕ್ಕೆ ಯಾವ ರೀತಿಯಲ್ಲೂ ಸಮನಲ್ಲ ಎಂದಿರುವ ರಿಷಬ್ ಶೆಟ್ಟಿ, ಇಂತಹ ವೇಳೆಯಲ್ಲೂ ಪಾಕ್ ಪರ ಘೋಷಣೆ ಕೂಗುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ತಂದೆಯನ್ನು ಕಳೆದುಕೊಂಡವರ ನೋವು, ನನಗೆ ಅರ್ಥವಾಗುತ್ತೆ ಎಂದಿರುವ ಹರಿಪ್ರಿಯಾ ಕೂಡಾ ಪಾಕ್ ಪರ ಘೋಷಣೆ ಕೂಗುವವರು ದೇಶದಲ್ಲಿರಲು ಅರ್ಹತೆ ಹೊಂದಿಲ್ಲ ಎಂದಿದ್ದಾರೆ ಹರಿಪ್ರಿಯಾ.

 • ಪೆದ್ರೋ ಟ್ರೇಲರ್ ರಿಲೀಸ್

  ಪೆದ್ರೋ ಟ್ರೇಲರ್ ರಿಲೀಸ್

  ಪೆದ್ರೋ. ತನ್ನ ಮುದ್ದಿನ ನಾಯಿಯನ್ನು ಕೊಂದ ಹಂದಿಯನ್ನು ಕೊಲ್ಲಲು ಹೋದಾಗ ಆಗುವ ಅನಾಹುತಗಳು, ತಿರುವುಗಳ ಕಥೆ. ಕಥೆಯಲ್ಲಿ ಮಲೆನಾಡಿನ ಮಣ್ಣಿನ ವಾಸನೆ ಇದೆ. ಈಗಾಗಲೇ ಈ ಚಿತ್ರ ವಿದೇಶಗಳಲ್ಲಿ ನಡೆದ ಸಿನಿಮೋತ್ಸವಗಳಲ್ಲಿ ಮೆಚ್ಚುಗೆ ಗಳಿಸಿದೆ. ಪ್ರಶಸ್ತಿಗಳನ್ನೂ ಗೆದ್ದಿದೆ. ಅಂದಹಾಗೆ ಈ ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ಮಾಪಕ.

  ನಾನು ನಟೇಶ್ ಅವರ ಕುರ್ಲಿ ಶಾರ್ಟ್ ಫಿಲ್ಮ್ ನೋಡಿ ಬೆರಗಾಗಿದ್ದೆ. ಈಗ ಪೆದ್ರೋದಲ್ಲಿ ಹೊಸ ಸಿನಿಮಾ ಭಾಷೆ ಇದೆ. ಇಂತಹ ಪ್ರಯೋಗಗಳಿಗೆ ರಿಷಬ್ ಶೆಟ್ಟಿಯವರಂತಹ ಸ್ಟಾರ್ ನಟರು ನಿರ್ಮಾಪಕರಾಗುತ್ತಿರೋದು ಒಳ್ಳೆಯ ಬೆಳವಣಿಗೆ ಎಂದಿದ್ದು ಟ್ರೇಲರ್ ರಿಲೀಸ್ ಮಾಡಿದ ಗಿರೀಶ್ ಕಾಸರವಳ್ಳಿ.

  ಬೂಸಾನ್ ಸೇರಿದಂತೆ ಹಲವು ಕಡೆ, ವಿದೇಶಿ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆದ್ದ ಚಿತ್ರಕ್ಕೆ ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರವೇಶವೂ ಸಿಕ್ಕಲಿಲ್ಲ ಎಂದರು ನಿರ್ಮಾಪಕ ರಿಷಬ್ ಶೆಟ್ಟಿ. ಕನ್ನಡ ಚಿತ್ರಗಳೇಕೆ ಇಂತಹ ಪ್ರಯೋಗಗಳಲ್ಲಿ ಸೋಲುತ್ತಿವೆ ಅನ್ನೋದರ ಒಂದು ಸತ್ಯ ರಿಷಬ್ ಮಾತಿನಲ್ಲಿತ್ತು. ಸಿನಿಮೋತ್ಸವ ಅನ್ನೋದು ಇತ್ತೀಚೆಗೆ ಕೇವಲ ತಮ್ಮ ತಮ್ಮವರ ಬೆನ್ನು ತಟ್ಟುವ ಒಳರಾಜಕೀಯಕ್ಕಷ್ಟೇ ಸೀಮಿತವಾಗಿದೆ ಅನ್ನೋದನ್ನೂ ಅವರ ಮಾತಿನಲ್ಲಿ ನೋಡಬಹುದಾಗಿತ್ತು.

  ಅಂದಹಾಗೆ ಈ ಚಿತ್ರಕ್ಕೆ ನಟೇಶ್ ಹೆಗಡೆ ನಿರ್ದೇಶನವಿದೆ. ರಾಜ್ ಬಿ.ಶೆಟ್ಟಿ ಕೂಡಾ ನಟಿಸಿದ್ದಾರೆ. ಗೋಪಾಲ್ ಹೆಗ್ಡೆ, ರಾಮಕೃಷ್ಣ ಭಟ್ ದುಂದಿ, ಮೇದಿನಿ ಕೆಳ್ಮನೆ, ನಾಗರಾಜ್ ಹೆಗ್ಡೆ ಮೊದಲಾದವರು ನಟಿಸಿರೋ ಚಿತ್ರವಿದು.

 • ಪೋಸ್ಟರ್‍ಗಳಿಂದಲೇ ಸದ್ದು ಮಾಡಿದ ಬೆಲ್‍ಬಾಟಂ

  bellbottom poster attracts audience

  ಎ ಚಿತ್ರದ ಪೋಸ್ಟರ್ ನೆನಪಿದೆಯಲ್ಲವೇ.. ಉಪೇಂದ್ರ ಚಿತ್ರದ್ದು. ಉಪ್ಪಿ ನಿರ್ದೇಶನದ ಉಪ್ಪಿ2 ಚಿತ್ರದ ಪೋಸ್ಟರ್. ಹೀಗೆ ಪೋಸ್ಟರ್‍ಗಳ ಮೂಲಕವೇ ತಲೆಗೆ ಹುಳ ಬಿಟ್ಟು ಗೆದ್ದವರು ಉಪೇಂದ್ರ. ತಲೆಗೆ ಹುಳ ಬಿಡದೆ.. ಹಳೆಯ ದಿನಗಳನ್ನೆಲ್ಲ ನೆನಪಿಸಿ ನೆನಪಿಸಿ ಪ್ರಚಾರ ಮಾಡುತ್ತಿರುವುದು ಬೆಲ್‍ಬಾಟಂ.

  ಇದೇ ಫೆಬ್ರವರಿ 15ಕ್ಕೆ ರಿಲೀಸ್ ಆಗುತ್ತಿರುವ ಬೆಲ್‍ಬಾಟಂ ಚಿತ್ರದ ಪೋಸ್ಟರ್‍ಗಳು ತಮ್ಮ ವಿಭಿನ್ನತೆಯಿಂದಲೇ ಗಮನ ಸೆಳೆದಿವೆ. 78-80ರ ದಶಕದ ಜಾಹೀರಾತುಗಳಿದ್ದವಲ್ಲ. ಅಟ್ಲಾಸ್ ಸೈಕಲ್ಲು, ಇಮಾಮಿ, ಬೀಡಿಗಳು, ಹಳೇ ಟಿವಿ.. ಹೀಗೆ ಎಲ್ಲವೂ ಹಳೆಯ ಸ್ಟೈಲ್. ಆ ಸ್ಟೈಲ್ ಮೂಲಕವೇ ಪ್ರಚಾರ ಮಾಡಿ ಗೆದ್ದಿದ್ದಾರೆ ನಿರ್ದೇಶಕ ಜಯತೀರ್ಥ.

  ರಿಷಬ್ ಶೆಟ್ಟಿ, ಹರಿಪ್ರಿಯಾ ಜೋಡಿಯ ಚಿತ್ರ ರೆಟ್ರೋ ಸ್ಟೈಲ್ ಸಿನಿಮಾ. ನಿರ್ದೇಶಕ ಯೋಗರಾಜ್ ಭಟ್ ಕೂಡಾ ಪ್ರಧಾನ ಪಾತ್ರದಲ್ಲಿರುವ ಬೆಲ್‍ಬಾಟಂ ಇದೇ ವಾರ ತೆರೆಗೆ ಬರುತ್ತಿದೆ.