` rishabh shetty - chitraloka.com | Kannada Movie News, Reviews | Image

rishabh shetty

 • ತಾಯಿ ಶಾರದೆ ಲೋಕಪೂಜಿತೆ ನೆನಪಿಸಿದ ರಿಷಬ್ ಶೆಟ್ಟಿ

  rishab shetty's prarthana song

  ಹೇ ಶಾರದೆ.. ದಯಪಾಲಿಸು.. ಈ ಬಾಳನು ಬೆಳಕಾಗಿಸು.. ನಾಳೆಗಳ ದಾರಿಯಲಿ ನಂಬಿಕೆಯಾ ನೆಲೆಯಾಗಿರಿಸು... ಮುನ್ನಡೆಸು.. ಎಂದು ಸಾಗುವ ಹಾಡಿದು. ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ ಚಿತ್ರದ ಹಾಡಿದು. ಹಾಡಿನ ಸಾಹಿತ್ಯ ನೋಡಿದರೆ, ಇದೊಂದು ಪ್ರಾರ್ಥನಾ ಗೀತೆ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಸರ್ಕಾರಿ ಪ್ರಾಥಮಿಕ ಪಾಠಶಾಲೆ ಚಿತ್ರದ 2ನೇ ಹಾಡು ಇದು. 

  ಹಾಡು ನೋಡಿದವರೆಲ್ಲ ಥಟ್ಟನೆ ನೆನಪಿಸಿಕೊಳ್ಳುತ್ತಿರುವುದು ಬೆಟ್ಟದ ಹೂವು ಚಿತ್ರದ ತಾಯಿ ಶಾರದೆ ಲೋಕ ಪೂಜಿತೆ.. ತೇನಮೋಸ್ತು ನಮೋಸ್ತುತೆ.. ಹಾಡನ್ನು. ಪುನೀತ್ ರಾಜ್‍ಕುಮಾರ್ ಬಾಲನಟನಾಗಿ ನಟಿಸಿದ್ದ ಸಿನಿಮಾದ ಆ ಹಾಡು, ಅದೆಷ್ಟೋ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿತ್ತು. ಅಂಥಾದ್ದೊಂದು ಪ್ರಾರ್ಥನಾ ಗೀತೆಯ ಕೊರತೆ ನೀಗಿಸಿದ್ದಾರೆ ರಿಷಬ್ ಶೆಟ್ಟಿ. 

  ಹಾಡು ಹಾಡಿರುವ ಆಶಾ ಮತ್ತು ಸುನಿಧಿ ಕೂಡಾ ಯುವ ಪ್ರತಿಭೆಗಳು. ಆಶಾ, ಮೂಲತಃ ಕಾಸರಗೋಡಿನವರು. ಸುನಿಧಿ ರೇಡಿಯೋ ಕಾಂಪಿಟೇಷನ್ ಒಂದರಲ್ಲಿ ಪ್ರಶಸ್ತಿ ಪುರಸ್ಕøತರು. ದಡ್ಡ ದಡ್ಡ ಹಾಡಿನ ಮೂಲಕ ಮಧ್ಯವಯಸ್ಕರನ್ನು ಬಾಲ್ಯದ ತುಂಟಾಟಕ್ಕೆ ಹೊತ್ತೊಯ್ದಿದ್ದ ರಿಷಬ್ ಶೆಟ್ಟಿ, ಈ ಹಾಡಿನ ಮೂಲಕ ಪ್ರಾರ್ಥನಾ ಗೀತೆಗೆ ಕರೆದೊಯ್ದಿದ್ದಾರೆ.

 • ದಡ್ಡ.. ಶಾರದೆ.. ನಂತರ ಈಗ ಬಲೂನು..

  balloon song is also super hit

  ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ ಎಂಬ ಸುದೀರ್ಘ ಟೈಟಲ್ಲಿನ ಸಿನಿಮಾ, ಹಾಡುಗಳಿಂದಲೇ ಸದ್ದು ಮಾಡುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿರೋದು ಸರ್ಕಾರಿ ಶಾಲೆಯ ಮಕ್ಕಳ ಕಥೆ. ಈ ಬಾರಿ ಚಿತ್ರದ ಬಲೂನಿನ ಹಾಡು ಸದ್ದು ಮಾಡಿದೆ. 

  ಈ ಹಾಡನ್ನೂ ಮಕ್ಕಳಿಂದಲೇ ಹಾಡಿಸಿರುವುದು ವಿಶೇಷ. ಬಲೂನ್ ಮಾರಾಟಗಾರನೊಬ್ಬ, ತನ್ನ ಜೊತೆಯಲ್ಲಿ ತನ್ನ ಮಗನನ್ನೂ ಬಲೂನು ಮಾರೋಕೆ ಕರೆದುಕೊಂಡು ಹೋಗುತ್ತಾನೆ. ಆಗ ಆ ಹುಡುಗನ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನೇ ಒಂದಿಷ್ಟು ಹಾಸ್ಯ ಹಾಗೂ ಭಾವನೆಗಳನ್ನು ಬೆರೆಸಿ ಬರೆದಿರುವ ಹಾಡು ಇದು. 

  ಹಾಡು ಮಕ್ಕಳಿಗೆ ಇಷ್ಟವಾಗುತ್ತಿದ್ದರೆ, ಪೋಷಕರಿಗೆ, ಹಿರಿಯರಿಗೆ ತಮ್ಮ ಬಾಲ್ಯಕ್ಕೆ ಕರೆದೊಯ್ಯುತ್ತಿದೆ. ಈ ಮೊದಲು ದಡ್ಡ ಪ್ರಶಾಂತ ಹಾಗೂ ತಾಯಿ ಶಾರದೇ ಹಾಡುಗಳೂ ಕೂಡಾ ಹಿಟ್ ಆಗಿದ್ದವು. ಈಗ 3ನೇ ಹಾಡು ಕೂಡಾ ಹಿಟ್ ಲಿಸ್ಟ್ ಸೇರಿದೆ.

  ಇನ್ನೂ ಒಂದು ವಿಶೇಷವಿದೆ. ಸರಿಗಮಪ ಲಿಟ್ಲ್ ಚಾಂಪ್ ಶೋ ಮೂಲಕ ಕನ್ನಡದ ಮನೆಮಾತಾಗಿದ್ದ ಜ್ಞಾನೇಶ್ ಈ ಹಾಡು ಹಾಡಿದ್ದಾರೆ. ಬಳ್ಳಾರಿಯ ಹುಡುಗನ ಪ್ರತಿಭೆ, ಕಂಠಸಿರಿಗೆ ಪ್ರೇಕ್ಷಕರು ತಲೆದೂಗಿದ್ದಾರೆ.

 • ದಡ್ಡನನ್ನು ಮೆಚ್ಚಿಕೊಂಡ ಬುದ್ದಿವಂತರು..!

  daddha song goes viral

  ದಡ್ಡ.. ದಡ್ಡ.. ದಡ್ಡ.. ದಡ್ಡ.. ಈ ಹಾಡು ಈಗ ವೈರಲ್ ಆಗುತ್ತಿದೆ. ಇದು ಸಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಚಿತ್ರದ ಮೊದಲ ಹಾಡು. ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರದ ಈ ಹಾಡಿನಲ್ಲಿ ಮನರಂಜನೆಯೂ ಇದೆ.. ಸಂದೇಶವೂ ಇದೆ. ಹೀಗಾಗಿಯೇ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

  ಮೋಡ ಮುಸುಕಿದ ಭಾನು.. ರೆಕ್ಕೆ ತಿರುಗದ ಫ್ಯಾನು.. ಸಿಂಗಲ್ ಆದ್ಯಲ್ಲೋ ನೀನು.. ಪ್ರವೀಣಾ.. ಪ್ರವೀಣಾ.. ದಡ್ಡ ದಡ್ಡ ಎಂದು ಆರಂಭವಾಗುವ ಸಾಲು ನಗೆಯುಕ್ಕಿಸುತ್ತಲೇ ಚಿಂತನೆಗೆ ಹಚ್ಚಿಸುತ್ತೆ. ಕಿರಿಕ್ ಪಾರ್ಟಿ ನಂತರ ರಿಷಬ್ ಶೆಟ್ಟಿ ನಿರ್ದೇಶಿಸಿರುವ ಚಿತ್ರದ ಈ ಹಾಡು ಗೆಲ್ಲುವ ಮೂಲಕ, ಚಿತ್ರತಂಡವೂ ಖುಷಿಯಾಗಿದೆ.

 • ನಾಥೂರಾಮನಾಗ್ತಾರಂತೆ ರಿಷಬ್ ಶೆಟ್ಟಿ

  rishab shetty turns nathuram

  ಕಿರಿಕ್ ಪಾರ್ಟಿ ರಿಷಬ್ ಶೆಟ್ಟಿ, ಡೈರೆಕ್ಷನ್‍ಗಿಂಗ ನಟನೆಯಲ್ಲೇ ಬ್ಯುಸಿಯಾಗುವ ಸೂಚನೆಗಳು ಸಿಗುತ್ತಿವೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಕಾಸರಗೋಡು ಸಿನಿಮಾವನ್ನು ತೆರೆಗೆ ತರಲು ಸಿದ್ಧಪಡಿಸಿರುವ ರಿಷಬ್ ಶೆಟ್ಟಿ, ಬೆಲ್‍ಬಾಟಂ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಜೊತೆ ಜೊತೆಯಲ್ಲೇ ನಾಥೂರಾಮನಾಗುತ್ತಿದ್ದಾರೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿರೋ ರಿಷಬ್ ಶೆಟ್ಟಿಗೆ ನಾಥೂರಾಮನ ವೇಷ ಹಾಕಿಸುತ್ತಿರುವುದು ವಿನ ಬಳಂಜ. ಕಿರುತೆರೆಯಲ್ಲಿ ಪ್ರೀತಿ ಇಲ್ಲದ ಮೇಲೆ, ಜೋಗುಳ ಧಾರಾವಾಹಿ ನಿರ್ದೇಶಿಸಿದ್ದ ವಿನು ಬಳಂಜ, ನಾಥೂರಾಮ ಚಿತ್ರದ ಮೂಲಕ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಅವರ ಮೊದಲ ಚಿತ್ರದ ಹೀರೋ ರಿಷಬ್ ಶೆಟ್ಟಿ.

  ನಟನಾಗಲೆಂದೇ ಚಿತ್ರರಂಗಕ್ಕೆ ಬಂದ ರಿಷಬ್ ಶೆಟ್ಟಿಗೆ ಸಕ್ಸಸ್ ಸಿಕ್ಕಿದ್ದು ನಿರ್ದೇಶಕನಾದ ಮೇಲೆ. ನಿರ್ದೇಶಕನಾಗಿ ಯಶಸ್ವಿಯಾದ ನಂತರ ಸಿಕ್ಕಿರುವ ನಟನೆಯ ಅವಕಾಶಗಳನ್ನು ರಿಷಬ್ ಶೆಟ್ಟಿ ಬಿಡೋಕೆ ರೆಡಿಯಾಗಿಲ್ಲ. ಹೀಗಾಗಿ ನಿರ್ದೇಶಕನಿಗಿಂತ ಹೆಚ್ಚಾಗಿ ನಟನೆಯತ್ತಲೇ ಒಲವು ತೋರಿಸುತ್ತಿದ್ದಾರೆ.

 • ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ದೇಶದಿಂದ ಹೊರಹಾಕಬೇಕು - ರಿಷಬ್ ಶೆಟ್ಟಿ, ಹರಿಪ್ರಿಯಾ

  pro pakistani intellectuals should leave india says rishab shetty

  ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆಲ್‍ಬಾಟಂ ಚಿತ್ರತಂಡ ಹುತಾತ್ಮ ಯೋಧ ಗುರು ಕುಟುಂಬದ ನೆರವಿಗೆ ಧಾವಿಸಿದೆ. ಗುರು ಕುಟುಂಬಕ್ಕೆ ರಿಷಬ್ ಶೆಟ್ಟಿ 50 ಸಾವಿರ ರೂ. ಹಾಗೂ ನಿರ್ಮಾಪಕ ಸಂತೋಷ್ 25 ಸಾವಿರ ರೂ. ಪರಿಹಾರನೀಡಿ ಸಾಂತ್ವನ ಹೇಳಿದ್ದಾರೆ. 

  ನಾವು ನೀಡುವ ಹಣ, ಗುರು ಕುಟುಂಬದ ತ್ಯಾಗಕ್ಕೆ ಯಾವ ರೀತಿಯಲ್ಲೂ ಸಮನಲ್ಲ ಎಂದಿರುವ ರಿಷಬ್ ಶೆಟ್ಟಿ, ಇಂತಹ ವೇಳೆಯಲ್ಲೂ ಪಾಕ್ ಪರ ಘೋಷಣೆ ಕೂಗುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ತಂದೆಯನ್ನು ಕಳೆದುಕೊಂಡವರ ನೋವು, ನನಗೆ ಅರ್ಥವಾಗುತ್ತೆ ಎಂದಿರುವ ಹರಿಪ್ರಿಯಾ ಕೂಡಾ ಪಾಕ್ ಪರ ಘೋಷಣೆ ಕೂಗುವವರು ದೇಶದಲ್ಲಿರಲು ಅರ್ಹತೆ ಹೊಂದಿಲ್ಲ ಎಂದಿದ್ದಾರೆ ಹರಿಪ್ರಿಯಾ.

 • ಪೋಸ್ಟರ್‍ಗಳಿಂದಲೇ ಸದ್ದು ಮಾಡಿದ ಬೆಲ್‍ಬಾಟಂ

  bellbottom poster attracts audience

  ಎ ಚಿತ್ರದ ಪೋಸ್ಟರ್ ನೆನಪಿದೆಯಲ್ಲವೇ.. ಉಪೇಂದ್ರ ಚಿತ್ರದ್ದು. ಉಪ್ಪಿ ನಿರ್ದೇಶನದ ಉಪ್ಪಿ2 ಚಿತ್ರದ ಪೋಸ್ಟರ್. ಹೀಗೆ ಪೋಸ್ಟರ್‍ಗಳ ಮೂಲಕವೇ ತಲೆಗೆ ಹುಳ ಬಿಟ್ಟು ಗೆದ್ದವರು ಉಪೇಂದ್ರ. ತಲೆಗೆ ಹುಳ ಬಿಡದೆ.. ಹಳೆಯ ದಿನಗಳನ್ನೆಲ್ಲ ನೆನಪಿಸಿ ನೆನಪಿಸಿ ಪ್ರಚಾರ ಮಾಡುತ್ತಿರುವುದು ಬೆಲ್‍ಬಾಟಂ.

  ಇದೇ ಫೆಬ್ರವರಿ 15ಕ್ಕೆ ರಿಲೀಸ್ ಆಗುತ್ತಿರುವ ಬೆಲ್‍ಬಾಟಂ ಚಿತ್ರದ ಪೋಸ್ಟರ್‍ಗಳು ತಮ್ಮ ವಿಭಿನ್ನತೆಯಿಂದಲೇ ಗಮನ ಸೆಳೆದಿವೆ. 78-80ರ ದಶಕದ ಜಾಹೀರಾತುಗಳಿದ್ದವಲ್ಲ. ಅಟ್ಲಾಸ್ ಸೈಕಲ್ಲು, ಇಮಾಮಿ, ಬೀಡಿಗಳು, ಹಳೇ ಟಿವಿ.. ಹೀಗೆ ಎಲ್ಲವೂ ಹಳೆಯ ಸ್ಟೈಲ್. ಆ ಸ್ಟೈಲ್ ಮೂಲಕವೇ ಪ್ರಚಾರ ಮಾಡಿ ಗೆದ್ದಿದ್ದಾರೆ ನಿರ್ದೇಶಕ ಜಯತೀರ್ಥ.

  ರಿಷಬ್ ಶೆಟ್ಟಿ, ಹರಿಪ್ರಿಯಾ ಜೋಡಿಯ ಚಿತ್ರ ರೆಟ್ರೋ ಸ್ಟೈಲ್ ಸಿನಿಮಾ. ನಿರ್ದೇಶಕ ಯೋಗರಾಜ್ ಭಟ್ ಕೂಡಾ ಪ್ರಧಾನ ಪಾತ್ರದಲ್ಲಿರುವ ಬೆಲ್‍ಬಾಟಂ ಇದೇ ವಾರ ತೆರೆಗೆ ಬರುತ್ತಿದೆ.

 • ಪ್ರಗತಿ ರಿಷಬ್ ಶೆಟ್ಟಿ & ರಿಷಬ್ ಶೆಟ್ಟಿ ಪ್ರೆಸೆಂಟ್ಸ್ ಪ್ರೊಡಕ್ಷನ್ ನಂ.1..

  rishab shetty wife pragathi's production number 1

  ವೋ.. ರಿಷಬ್ ಶೆಟ್ಟಿ ಪ್ರೊಡ್ಯೂಸರ್ ಆಗ್ತಿದ್ದಾರಾ..? ಪತ್ನಿ ಪ್ರಗತಿ ಹೆಸರಲ್ಲಿ ಪ್ರೊಡಕ್ಷನ್ ಹೌಸ್, ಬ್ಯಾನರ್ ಮಾಡಿದ್ರಾ..? ಸಿನಿಮಾ ಯಾವುದಂತೆ..? ಅವರೇ ನಿರ್ದೇಶಕರಾ..? ಕಥೆ, ಚಿತ್ರಕಥೆ ಅವರದ್ದೇನಾ..? ಅವರೇ ಹೀರೋನಾ..? ಅಥವಾ ಅವರ ಫ್ರೆಂಡ್ ರಕ್ಷಿತ್ ಶೆಟ್ಟಿನಾ..? ಇಲ್ಲಾ.. ಹೊಸಬರನ್ನ ಹಾಕಿಕೊಳ್ತಿದ್ದಾರಾ..? ಓ ಮೈ ಗಾಡ್.. ಇಷ್ಟೆಲ್ಲ ಪ್ರಶ್ನೆಗಳಾ..? ಹೋಲ್ಡಾನ್.. ಇದು ಸಿನಿಮಾ ಸುದ್ದಿ ಅಲ್ಲ.

  ಪ್ರಗತಿ ರಿಷಬ್ ಶೆಟ್ಟಿ & ರಿಷಬ್ ಶೆಟ್ಟಿ ಪ್ರೆಸೆಂಟ್ಸ್ ಪ್ರೊಡಕ್ಷನ್ ನಂ.1 ಅಂತಾ ರಿಷಬ್ ಶೆಟ್ಟಿ ಹೇಳಿರೋದೇನೋ ನಿಜ. ಆದರೆ, ಅದು ಅವರು ತಂದೆಯಾಗ್ತಿರೋ ಬಗ್ಗೆ. ಏಪ್ರಿಲ್‍ನಲ್ಲಿ ಸಪ್ತಪದಿ ತುಳಿದಿದ್ದ ರಿಷಬ್-ಪ್ರಗತಿ ಈಗ ಮುದ್ದಾದ ಮಗುವನ್ನು ಸ್ವಾಗತಿಸೋಕೆ ರೆಡಿಯಾಗಿದ್ದಾರೆ.

 • ಬೆಲ್ ಬಾಟಂ  ಫಾರಿನ್ ಟೂರ್

  bellbottom will release soon

  ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಬೆಲ್‍ಬಾಟಂ ಸಿನಿಮಾ, ಈಗ ಫಾರಿನ್ ಟೂರ್ ಹೊರಟಿದೆ.  ಫೆಬ್ರವರಿ 22ರಿಂದ ಅಮೆರಿಕ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಸೇರಿದಂತೆ ಹಲವು ಕಡೆ ಬಿಡುಗಡೆಯಾಗುತ್ತಿದೆ. ಕಿರಿಕ್ ಪಾರ್ಟಿ,ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರಗಳ ಮೂಲಕ, ವಿದೇಶದಲ್ಲಿಯೂ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರೋ ರಿಷಬ್ ಶೆಟ್ಟಿಗೆ, ಬೆಲ್‍ಬಾಟಂ ಮೇಲೆ ಹೊಸದೇ ನಿರೀಕ್ಷೆ ಇದೆ.

  ಸ್ಯಾಂಡಲ್‍ವುಡ್ ಗೆಳೆಯರ ಬಳಗ ಅಮೆರಿಕದ 30ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ.  ಇತ್ತ, ರಾಜ್ಯದ ಹಲವು ಕಡೆ ಥಿಯೇಟರುಗಳ ಸಂಖ್ಯೆ ಹೆಚ್ಚುತ್ತಿದೆ. ಮಲ್ಟಿಪ್ಲೆಕ್ಸುಗಳಲ್ಲಿ ಶೋಗಳ ಸಂಖ್ಯೆಯೂ ಹೆಚ್ಚುತ್ತಿದೆ.

  ರಿಷಬ್ ಶೆಟ್ಟಿಗೆ ಹರಿಪ್ರಿಯಾ ಜೋಡಿಯಾಗಿದ್ದು, ಜಯತೀರ್ಥ ನಿರ್ದೇಶನ ಮಾಡಿದ್ದಾರೆ.

 • ಬೆಲ್‍ಬಾಟಂ ಅಪ್ಪಟ ಶುದ್ಧ ಕಾಮಿಡಿ ಸಿನಿಮಾ.

  healthy comedy and no vulgarity n bell bottom

  ನಾಳೆ ರಿಲೀಸ್ ಆಗುತ್ತಿರುವ ಬೆಲ್‍ಬಾಟಂ ಸಿನಿಮಾ, ಅಪ್ಪಟ ಕಾಮಿಡಿ ಥ್ರಿಲ್ಲರ್. ರಿಷಬ್ ಶೆಟ್ಟಿ, ಹರಿಪ್ರಿಯಾ ನಟಿಸಿರುವ ಚಿತ್ರದಲ್ಲಿ ಕಾಮಿಡಿಗೆ ಕೊರತೆಯಿಲ್ಲ. ಆದರೆ, ಇಲ್ಲೇ ಒಂದು ವಿಭಿನ್ನತೆಯಿದೆ. ಇತ್ತೀಚೆಗೆ ಕಾಮಿಡಿ ಸಿನಿಮಾಗಳೆಂದರೆ, ಅಲ್ಲೊಂದಿಷ್ಟು ಡಬಲ್ ಮೀನಿಂಗ್, ತ್ರಿಬ್ಬಲ್ ಮೀನಿಂಗ್, ಡೈರೆಕ್ಟ್ ಮೀನಿಂಗ್ ಡೈಲಾಗುಗಳು ತುಂಬಿ ತುಳುಕುತ್ತವೆ. ಆದರೆ, ಬೆಲ್‍ಬಾಟಂ ಹಾಗಲ್ಲ. ಅಲ್ಲಿರುವುದು ಶುದ್ಧ, ಸ್ವಚ್ಚ ಕಾಮಿಡಿ.

  ಡಿಟೆಕ್ಟಿವ್ ಸಿನಿಮಾ ಅಂದಾಕ್ಷಣ, ಇದು ಗಂಭೀರವಾದ ಕಥೆಯಲ್ಲ. ಕಾಮಿಡಿ ಜಾನರ್‍ನಲ್ಲಿಯೇ ಸಾಗುವ ಸಿನಿಮಾ. ಕಾಮಿಡಿ ಎಂದಾಕ್ಷಣ, ಅಲ್ಲಿ ಅಶ್ಲೀಲತೆ, ಮುಜುಗರ ತರಿಸುವ ಸಂಭಾಷಣೆ ಯಾವುದೂ ಇಲ್ಲ. ಇದು ಅಪ್ಪಟ ಕೌಟುಂಬಿಕ ಸಿನಿಮಾ ಎಂದು ಭರವಸೆ ನೀಡಿದ್ದಾರೆ ನಿರ್ದೇಶಕ ಜಯತೀರ್ಥ. ಸಂತೋಷ್ ಕುಮಾರ್ ನಿರ್ಮಾಣದ ಚಿತ್ರದಲ್ಲಿ ಯೋಗರಾಜ್ ಭಟ್, ಶಿವಮಣಿ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. 

 • ಬೆಲ್‍ಬಾಟಂ ಕಾಮಿಡಿ.. ಓದಿ.. ನಕ್ಕುಬಿಡಿ.. ಆಮೇಲೆ ಸಿನಿಮಾ ನೋಡಿ..

  bellbottom's funny promotions

  ಬೆಲ್‍ಬಾಟಂ ಚಿತ್ರದ ಪ್ರಮೋಷನ್ ಭರ್ಜರಿಯಾಗಿದೆ. ಡಿಫರೆಂಟ್ ಆಗಿದೆ. ಅವರು ಯಾವುದನ್ನೂ ಬಿಟ್ಟಿಲ್ಲ. ಅಟ್ಲಾಸ್ ಸೈಕಲ್ಲು, ಹೊಲಿಗೆ ಮೆಷಿನ್ನು, ದೀಪಾವಳಿ ಲಾಟರಿ, ಹಲ್ಲುಪುಡಿ, ಥ್ರಿಲ್ಲರ್ ಕಾದಂಬರಿ, ಸ್ನೋ ಪೌಡರು.. ಹೀಗೆ ಎಲ್ಲವನ್ನೂ ಚಿತ್ರದ ಪ್ರಚಾರಕ್ಕೆ ಬಳಸಿಕೊಂಡು ಕಿಕ್ ಕೊಟ್ಟಿರೋ ಬೆಲ್‍ಬಾಟಂ, ಒಂದಿಷ್ಟು ಕಾಮಿಡಿಯನ್ನೂ ಬಿಟ್ಟಿದೆ. ಸುಮ್ಮನೆ ಇವುಗಳನ್ನು ಓದುತ್ತಾ ಹೋಗಿ..

  ಅಯ್ಯೋ ಸಿವನೆ.. ಈ ನನ್ ಕಂದ ಓದಲ್ಲ.. ಬರೆಯಲ್ಲ.. ಡಿಟೆಕ್ಟಿವ್ ಆಗ್ತೀನಿ ಅಂತ ಕುಂತದಲ್ಲ. ಇದನ್ನು ತಗೊಂಡು ಏನ್ ಮಾಡ್ಲಿ, ಒಂದ್ ತಾಯತನಾದ್ರೂ ಕಟ್ಟುಸ್ಲ..

  ತಾಯಿ ಹೀಗೆ ಯೋಚಿಸ್ತಿದ್ರೆ, ಟಾಪಲ್ಲಿ ಎದೆ ಕಲಕುವ ಸೆಂಟಿಮೆಂಟ್ ಪತ್ತೇದಾರಿ ಪಿಕ್ಚರ್ ಎಂಬ ಒಕ್ಕಣೆ. ಮತ್ತೊಂದು ಕಡೆ ಚಿತ್ರಚೋರ ರಿಷಬ್ ಶೆಟ್ಟಿ, ಹಂಸವದನೆ ಹರಿಪ್ರಿಯಾ ನಟನೆಯಲ್ಲಿ.. ಎಂಬ ಸಾಲು. ಟೆಂಟ್ ಸಿನಿಮಾ ನೆನಪಾಯ್ತಾ..

  ಕಂಟಿನ್ಯೂ.. ಕಂಟಿನ್ಯೂ..

  ಸರ್ಪದೇವನ ಶಾಪದಿಂದ ಸಂಸಾರವನ್ನು ರಕ್ಷಿಸುವ ಗೃಹಿಣಿಯೊಬ್ಬಳ ಮೈನವಿರೇಳಿಸುವ ಸಾಹಸಯಮ ಕಥೆ. ಹೊಚ್ಚ ಹೊಸ ಕಾದಂಬರಿ, ಇದೀಗ ಮಾರುಕಟ್ಟೆಯಲ್ಲಿ ಲಭ್ಯ.

  ಇದು ಕಾದಂಬರಿ ಸ್ಟೈಲು. ಮುಂದಿನದ್ದು.. ಕೆಜಿಎಫ್ ಸ್ಟೈಲು.

  ಕೆಜಿಎಫ್ ಡಾನ್ : ನಂಗೊಂದ್ ಕೆಲಸ ಆಗಬೇಕು. ಒಂದ್ ಆನೇ ಹೊಡೀಬೇಕು.

  ಡಿಟೆಕ್ಟಿವ್ ದಿವಾಕರ : ಅಷ್ಟು ದೊಡ್ಡ ಪ್ರಾಣೀನೇ ಯಾಕೆ..?

  ಕೆಜಿಎಫ್ ಡಾನ್ : ಮಗಳ ಮದುವೆ ಆಯ್ತು. ಬೀಗರಿಗೆ ಗ್ರ್ಯಾಂಡ್ ಆಗಿ ಊಟ ಹಾಕಿಸ್ಬೇಕು.

  ಡಿಟೆಕ್ಟಿವ್ ದಿವಾಕರ : ಸಾರಿ ಆಂಡ್ರೂಸ್. ಆನೆ ಹೊಡೆದ್ರೆ ಅರಣ್ಯ ಇಲಾಖೆಯವರು ಕೇಸ್ ಹಾಕ್ತಾರೆ. ಬೇಕಾದ್ರೆ 50 ಕೆಜಿ ನಾಟಿಕೋಳಿ ಕೊಡ್ತೀನಿ. ಎಂಜಾಯ್.

  ಇದು ಸಿನಿಮಾ ಸ್ಟೈಲು. ಧಾರಾವಾಹಿ ಬುಟ್‍ಬುಡ್ತಾರಾ..? ಅಲ್ಲಿ ಪುಟ್ಟಗೌರಿ ಸ್ಟೈಲು. ಅತ್ತ.. ಗೆಳೆಯ ರಕ್ಷಿತ್ ಶೆಟ್ಟಿಯ ರಿಲೀಸ್ ಕೂಡಾ ಆಗದ ಅವನೇ ಶ್ರೀಮನ್ನಾರಾಯಣನೂ ಬೆಲ್‍ಬಾಟಂ ಪ್ರಚಾರಕ್ಕೆ ಬಂದಿದ್ದಾನೆ. 

  ರಕ್ಷಿತ್ ಶೆಟ್ಟಿ : ಅವನು ಚರ್ಮ ವೈದ್ಯ ಅಲ್ಲ ಅಂತ ಹೆಂಗೆ ಪತ್ತೆ ಹಚ್ಚಿದೆ ದಿವಾಕರ..?

  ದಿವಾಕರ : ಬಡ್ಡಿ ಮಗ, ಕ್ಲಿನಿಕ್ ಬೋರ್ಡಲ್ಲಿ ಲೆದರ್ ಸ್ಪೆಷಲಿಸ್ಟ್ ಅಂತಾ ಹಾಕ್ಕೊಂಡಿದ್ದ.

  ಫೈನಲ್ಲಾಗಿ.. ಟೈಟಾನಿಕ್ ನೋಡ್ಕಳಿ..

  ಟೈಟಾನಿಕ್ ಹಡಗು ಮುಳುಗೋಕೆ ಕಾರಣ ಏನ್ ಗೊತ್ತಾ..? ದಿವಾಕರನ ಪತ್ತೆದಾರಿಕೆಯ ವರದಿ ಇಷ್ಟೆ. ಟೈಟಾನಿಕ್ ಹಡಗಿಗೆ ಮಂತ್ರಿಸಿದ ನಿಂಬೆಹಣ್ಣನ್ನೇ ಕಟ್ಟಿಲ್ಲ. ಅಷ್ಟೆಲ್ಲ ದೃಷ್ಟಿ ಆದ್ರೆ ಇನ್ನೇನಾಗುತ್ತೆ. ಸ್ಸೋ.. ದೃಷ್ಟಿ ತಗುಲಿ ಟೈಟಾನಿಕ್ ಮುಳುಗಿದೆ.

 • ಬೆಲ್‍ಬಾಟಂ ಹರಿಕಥೆ ಸ್ಪೆಷಲ್

  bellbottom trailer has harikathe special

  ಬೆಲ್‍ಬಾಟಂ. ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಅಭಿನಯದ ಸಿನಿಮಾ. ಸಿನಿಮಾದಲ್ಲಿರೋದು 80ರ ದಶಕದ ಸ್ಟೋರಿ. ರಿಷಬ್ ಪತ್ತೇದಾರನಾಗಿ, ಪೊಲೀಸ್ ಆಗಿ ನಟಿಸಿರುವ ಚಿತ್ರ. ಇನ್ನು ಹರಿಕಥೆ. ಇದು ಬಹುತೇಕ ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಇರುವ ಜನಪದ ಸಂಪ್ರದಾಯ. ಹರಿಕಥೆ ಹೇಳುವ ಶೈಲಿಯೇ ವಿಭಿನ್ನ. ವಿಶೇಷ ಅಂದ್ರೆ ಇವರೆಡನ್ನೂ ಬೆಲ್‍ಬಾಟಂ ಸಿನಿಮಾ ಮಿಕ್ಸ್ ಮಾಡಿಕೊಂಡು ಬಂದಿದೆ.

  ಬೆಲ್‍ಬಾಟಂ ಟ್ರೇಲರ್ ಗಮನ ಸೆಳೆಯುತ್ತಿರುವುದೇ ಈ ಕಾರಣಕ್ಕೆ. ತುಸು ತಮಾಷೆಯಾಗಿಯೇ ಶುರುವಾಗುವ ಟ್ರೇಲರ್, ಹರಿಕಥೆಯಿಂದಾಗಿ ಗಮನ ಸೆಳೆಯುತ್ತದೆ. ಕನ್ನಡಿಗರ ಜೇಮ್ಸ್‍ಬಾಂಡ್ ಸಿಐಡಿ 999 ಡಾ.ರಾಜ್, ಹೀರೋಗೆ ಪತ್ತೇದಾರನಾಗಲು ಸ್ಫೂರ್ತಿಯಾಗುತ್ತಾರೆ ಅನ್ನೋದು ಟ್ರೇಲರ್‍ನಲ್ಲಿಯೇ ಗೊತ್ತಾಗಿಬಿಡುತ್ತೆ. ಇನ್ನು ರಿಷಬ್ ಶೆಟ್ಟಿ, ಗುಂಡಿಯಲ್ಲಿ ಬಿದ್ದು ಹಾಗೇಕೆ ಇರುತ್ತಾರೆ..? ಪೊಲೀಸ್ ಕಾನ್‍ಸ್ಟೇಬಲ್ ಮತ್ತು ಪತ್ತೇದಾರ.. ಎರಡೂ ಹೇಗೆ..? ಟ್ರೇಲರ್ ಹುಟ್ಟಿಸುವ ಕುತೂಹಲಗಳಿವು.

  ಮುದ್ದು ಮುದ್ದಾಗಿ ಕಾಣುವ ಹರಿಪ್ರಿಯಾ ಸೈಲೆಂಟಾಗಿ ನಗೆಯುಕ್ಕಿಸುತ್ತಾರೆ. ಪೊಲೀಸ್ ಠಾಣೆಯಿಂದ 5 ಲಕ್ಷ ನಾಪತ್ತೆ ಎನ್ನುವ ಬ್ರೇಕಿಂಗ್ ನ್ಯೂಸ್ ಜೊತೆ ಟ್ರೇಲರ್ ಮುಗಿಯುತ್ತೆ. 

  ಸಿನಿಮಾದ ಟ್ರೇಲರ್ ಚಿಕ್ಕದಾಗಿರಬೇಕು. ಕುತೂಹಲ ಹುಟ್ಟಿಸಬೇಕು. ಎರಡನ್ನೂ ಸರಿಯಾಗಿ ನಿರ್ವಹಿಸಿ ಗೆದ್ದಿದ್ದಾರೆ ನಿರ್ದೇಶಕ ಜಯತೀರ್ಥ. ಚಿತ್ರಕ್ಕೆ ಸಂತೋಷ್ ಕುಮಾರ್ ನಿರ್ಮಾಪಕ.

 • ಬೆಲ್‍ಬಾಟಂ ಹಿಂದಿ ರೈಟ್ಸ್ ಮುಕ್ಕಾಲು ಕೋಟಿಗೆ ಸೇಲ್

  bell bottoms remake rights sold

  ಬಾಕ್ಸಾಫೀಸ್‍ನಲ್ಲಿ ಮಾಯೆ ಸೃಷ್ಟಿಸಿದ ಬೆಲ್‍ಬಾಟಂ ಚಿತ್ರದ ರೀಮೇಕ್ ಹಕ್ಕುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದುಬಿಟ್ಟಿದೆ. ಕಾರಣ, ಚಿತ್ರದ ಕಥೆ. ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ ಚಿತ್ರಕ್ಕೆ ಜಯತೀರ್ಥ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ.. ಎಲ್ಲದರಲ್ಲೂ ಇದ್ದ ಹೊಸತನ ಚಿತ್ರವನ್ನು ಗೆಲ್ಲಿಸಿದೆ. 

  ಹೀಗೆ ಸಂಭ್ರಮದ ತುತ್ತತುದಿಯಲ್ಲಿರುವಾಗಲೇ ಚಿತ್ರದ ರೀಮೇಕ್ ರೈಟ್ಸ್‍ಗಳಿಗೆ ವ್ಯಾಪಾರ ಕುದುರಿದೆ. ಮುಂಬೈನ ಪ್ರತಿಷ್ಠಿತ ಕೆ.ಎನ್.ಎಂಟರ್‍ಟೈನ್‍ಮೆಂಟ್ ಸಂಸ್ಥೆ ಬೆಲ್‍ಬಾಟಂನ ಹಿಂದಿ ಮತ್ತು ತೆಲುಗು ರೈಟ್ಸ್‍ಗಳನ್ನು 75 ಲಕ್ಷ ಕೊಟ್ಟ ಖರೀದಿಸಿದೆ ತೆಲುಗು ಮತ್ತು ಹಿಂದಿ ಎರಡರಲ್ಲೂ ಇದೇ ಸಂಸ್ಥೆ ಚಿತ್ರ ನಿರ್ಮಾಣ ಮಾಡಲಿದೆಯಂತೆ.

 • ಬೆಲ್‍ಬಾಟಂಗೆ ಅಪ್ಪು ಬಹುಪರಾಕ್

  puneeth applauds bellbottom

  ಬಾಕ್ಸಾಫೀಸ್‍ನಲ್ಲಿ ಮೋಡಿ ಮಾಡುತ್ತಿರುವ ಬೆಲ್‍ಬಾಟಂ ಸಿನಿಮಾಗೆ ಈಗ ಇನ್ನೂ ಒಂದು ಪವರ್ ಸಿಕ್ಕಿದೆ. ಅದು ಅಪ್ಪು ಪವರ್. ಸಿನಿಮಾ ನೋಡಿದ ಪುನೀತ್ ರಾಜ್‍ಕುಮಾರ್ ಚಿತ್ರವನ್ನು ಮನಸಾರೆ ಹೊಗಳಿದ್ದಾರೆ.

  35 ವರ್ಷಗಳ ಹಿಂದಿನ ದೃಶ್ಯ ಸೃಷ್ಟಿಸುವುದು ಅತಿದೊಡ್ಡ ಸವಾಲು. ಸಾಮಾನ್ಯದ ಮಾತಲ್ಲ. ರಿಷಬ್, ಹರಿಪ್ರಿಯಾ ಅಭಿನಯವಂತೂ ಅದ್ಭುತ. ಪೋಷಕ ಪಾತ್ರಧಾರಿಗಳ ಸಣ್ಣ ಸಣ್ಣ ದೃಶ್ಯಗಳೂ ಕೂಡಾ ಮನಮುಟ್ಟುತ್ತವೆ ಎಂದಿದ್ದಾರೆ ಅಪ್ಪು.

  ಅಷ್ಟೇ ಅಲ್ಲ, ಚಿತ್ರದಲ್ಲಿ ಡಿಟೆಕ್ಟಿವ್ ಸುಧಾಕರ ಸಿಐಡಿ 999 ಡಾ.ರಾಜ್ ಅಭಿಮಾನಿ. ಅಪ್ಪಾಜಿ ಮೇಲಿಟ್ಟಿರುವ ಪ್ರೀತಿಗೆ ನಾನು ಋಣಿ ಎಂದಿದ್ದಾರೆ ಅಪ್ಪು.

 • ಬೆಲ್‍ಬಾಟಂನಲ್ಲಿ ಸುಂದರ ಕೃಷ್ಣ ಅರಸ್..!

  sundar krishna urs voice in bell bottom

  ಬೆಲ್‍ಬಾಟಂ ಚಿತ್ರದಲ್ಲಿ ಸುಂದರ ಕೃಷ್ಣ ಅರಸ್ ಇದ್ದಾರೆ. ಹೌದು, ಇದು ಅಚ್ಚರಿಯಾದರೂ ಸತ್ಯ. ಭೌತಿಕವಾಗಿ ನಮ್ಮೊಂದಿಗಿಲ್ಲದ ಸುಂದರ್ ಕೃಷ್ಣ ಅರಸ್ ಅವರನ್ನು, ಬೆಲ್‍ಬಾಟಂ ಚಿತ್ರದಲ್ಲಿ ಮತ್ತೊಮ್ಮೆ ಕೇಳಬಹುದು. ಯೆಸ್. ಚಿತ್ರದ ಹಾಡಿನಲ್ಲಿ ಅರಸ್ ಅವರ ಕಂಚಿನ ಕಂಠದ ವಿಶಿಷ್ಟ ಧ್ವನಿಯನ್ನು ವಿಶೇಷವಾಗಿ ಬಳಸಿಕೊಂಡಿದ್ದಾರೆ ನಿರ್ದೇಶಕ ಜಯತೀರ್ಥ.

  ಚಿತ್ರವನ್ನು ಡಿಫರೆಂಟ್ ಆಗಿಯೇ ಪ್ರಮೋಟ್ ಮಾಡುತ್ತಿರುವ ಜಯತೀರ್ಥ, ಹಳೆಯ ಜಾಹೀರಾತುಗಳ ಮೂಲಕವೇ ಚಿತ್ರದ ನಿರೀಕ್ಷೆ ಡಬಲ್ ಮಾಡಿದ್ದಾರೆ. ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ ಚಿತ್ರದಲ್ಲಿ ಯೋಗರಾಜ್ ಭಟ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆ.ಟಿ.ದಯಾನಂದ್ ಬರೆದಿರುವ ಕಥೆಗೆ ಬಂಡವಾಳ ಹೂಡಿರುವುದು ಸಂತೋಷ್ ಕುಮಾರ್ ಎಂಸಿ..

   

 • ಬೆಲ್‍ಬಾಟಮ್ ಹಾಕ್ಕೊಳ್ತಾರೆ ಹರಿಪ್ರಿಯಾ

  haripriya in bellbottom

  ಕಿರಿಕ್ ಪಾರ್ಟಿಯ ನಿರ್ದೇಶಕ ರಿಷಬ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ಚಿತ್ರ ಬೆಲ್‍ಬಾಟಮ್. ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಜಯತೀರ್ಥ. ಇವರಿಬ್ಬರ ಜೊತೆ ಹರಿಪ್ರಿಯಾ ಅವರದ್ದು ಎರಡನೇ ಪ್ರಯತ್ನ. ರಿಷಬ್ ನಿರ್ದೇಶನದ ರಿಕ್ಕಿ ಚಿತ್ರದಲ್ಲಿ ನಾಯಕಿಯಾಗಿದ್ದವರು ಹರಿಪ್ರಿಯಾ. ಇನ್ನು ಜಯತೀರ್ಥ ನಿರ್ದೇಶನದ ಬುಲೆಟ್ ಬಸ್ಯಾ ಚಿತ್ರದಲ್ಲೂ ಹರಿಪ್ರಿಯಾ ನಾಯಕಿಯಾಗಿದ್ದರು. ಈಗ ಈ ಇಬ್ಬರೂ ನಿರ್ದೇಶಕರು ಜೊತೆಯಾಗಿರುವ ಚಿತ್ರದಲ್ಲಿಯೂ ಹರಿಪ್ರಿಯಾ ನಾಯಕಿ.

  ಗೋಲ್ಡನ್ ಹಾರ್ಸ್ ಸಿನಿಮಾಸ್‍ನಲ್ಲಿ ಸಂತೋಷ್ ಕುಮಾರ್ ನಿರ್ಮಿಸುತ್ತಿರುವ ಚಿತ್ರಕ್ಕೆ, ಅಜನೀಶ್ ಲೋಕನಾಥ್ ಸಂಗೀತವಿದೆ. ಚಿತ್ರದ ಶೂಟಿಂಗ್ ಫೆಬ್ರವರಿಯಲ್ಲಿ ಶುರುವಾಗಲಿದೆ.

   

 • ಬೆಲ್‍ಬಾಟಮ್‍ನಲ್ಲಿ ಮುಳುಗಿ ಹೋಗಿದ್ದಾರೆ ಹರಿಪ್ರಿಯಾ

  haripriya in bellbottom

  ಹರಿಪ್ರಿಯಾ ಈಗ ಸಿಕ್ಕಾಪಟ್ಟೆ ಬ್ಯುಸಿ ನಟಿ. ಅವರ ಸಂಹಾರ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಇನ್ನೊಂದು ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ ಶೂಟಿಂಗ್‍ನ ಕೊನೆಯ ಹಂತದಲ್ಲಿದೆ. ಸೂಜಿದಾರ ಚಿತ್ರ ಪ್ರೊಡಕ್ಷನ್ ಹಂತದಲ್ಲಿದೆ. ತೆಲುಗಿನಲ್ಲಿ ನಟಿಸಿದ್ದ ಜೈಸಿಂಹ, ಭರ್ಜರಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಬೆಲ್‍ಬಾಟಮ್ ಚಿತ್ರಕ್ಕೆ ರೆಡಿಯಾಗಿದ್ದಾರೆ ಹರಿಪ್ರಿಯಾ.

  ಬೆಲ್‍ಬಾಟಮ್ ಚಿತ್ರದ ಬಗ್ಗೆ ಹರಿಪ್ರಿಯಾ ಖುಷಿ ಪಡೋಕೆ ಕಾರಣಗಳಿವೆ. ಏಕೆಂದರೆ, ಇಡೀ ಚಿತ್ರದ ಸ್ಕ್ರಿಪ್ಟ್ ಅವರ ಕೈಲಿದೆ. ಇಷ್ಟು ವರ್ಷಗಳಲ್ಲಿ ಈ ರೀತಿ ಚಿತ್ರದ ಇಡೀ ಸ್ಕ್ರಿಪ್ಟ್ ನೋಡುತ್ತಿರುವುದು ಅವರಿಗೂ ಮೊದಲ ಅನುಭವ. ರಿಷಬ್ ಶೆಟ್ಟಿ ನಾಯಕರಾಗಿರುವ ಚಿತ್ರಕ್ಕೆ ಜಯತೀರ್ಥ ನಿರ್ದೇಶಕ.

  80ರ ದಶಕದ ಕಥೆ. ವಸ್ತ್ರ ವಿನ್ಯಾಸ, ಡೈಲಾಗ್ ಪ್ರತಿಯೊಂದೂ ವಿಭಿನ್ನವಾಗಿದೆ. ಚಿತ್ರದ ಮೇಲೆ ಭಾರಿ ವಿಶ್ವಾಸ ಇಟ್ಟುಕೊಂಡಿದ್ದಾರೆ.

 • ಬೆಲ್‍ಬಾಟಮ್‍ನಲ್ಲಿ ಮುಳುಗಿ ಹೋಗಿದ್ದಾರೆ ಹರಿಪ್ರಿಯಾ

  bellbottom team bus with working on script

  ಹರಿಪ್ರಿಯಾ ಈಗ ಸಿಕ್ಕಾಪಟ್ಟೆ ಬ್ಯುಸಿ ನಟಿ. ಅವರ ಸಂಹಾರ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಇನ್ನೊಂದು ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ ಶೂಟಿಂಗ್‍ನ ಕೊನೆಯ ಹಂತದಲ್ಲಿದೆ. ಸೂಜಿದಾರ ಚಿತ್ರ ಪ್ರೊಡಕ್ಷನ್ ಹಂತದಲ್ಲಿದೆ. ತೆಲುಗಿನಲ್ಲಿ ನಟಿಸಿದ್ದ ಜೈಸಿಂಹ, ಭರ್ಜರಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಬೆಲ್‍ಬಾಟಮ್ ಚಿತ್ರಕ್ಕೆ ರೆಡಿಯಾಗಿದ್ದಾರೆ ಹರಿಪ್ರಿಯಾ.

  ಬೆಲ್‍ಬಾಟಮ್ ಚಿತ್ರದ ಬಗ್ಗೆ ಹರಿಪ್ರಿಯಾ ಖುಷಿ ಪಡೋಕೆ ಕಾರಣಗಳಿವೆ. ಏಕೆಂದರೆ, ಇಡೀ ಚಿತ್ರದ ಸ್ಕ್ರಿಪ್ಟ್ ಅವರ ಕೈಲಿದೆ. ಇಷ್ಟು ವರ್ಷಗಳಲ್ಲಿ ಈ ರೀತಿ ಚಿತ್ರದ ಇಡೀ ಸ್ಕ್ರಿಪ್ಟ್ ನೋಡುತ್ತಿರುವುದು ಅವರಿಗೂ ಮೊದಲ ಅನುಭವ. ರಿಷಬ್ ಶೆಟ್ಟಿ ನಾಯಕರಾಗಿರುವ ಚಿತ್ರಕ್ಕೆ ಜಯತೀರ್ಥ ನಿರ್ದೇಶಕ.

  80ರ ದಶಕದ ಕಥೆ. ವಸ್ತ್ರ ವಿನ್ಯಾಸ, ಡೈಲಾಗ್ ಪ್ರತಿಯೊಂದೂ ವಿಭಿನ್ನವಾಗಿದೆ. ಚಿತ್ರದ ಮೇಲೆ ಭಾರಿ ವಿಶ್ವಾಸ ಇಟ್ಟುಕೊಂಡಿದ್ದಾರೆ.

 • ಮತ್ತೆ ನಿರ್ದೇಶನದತ್ತ ರಿಷಬ್ ಶೆಟ್ಟಿ

  rishab shetty to direct again

  ಕಿರಿಕ್ ಪಾರ್ಟಿ, ಸಹಿಪ್ರಾಶಾದಂತಹ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟು ಗೆದ್ದ ನಿರ್ದೇಶಕ ರಿಷಬ್ ಶೆಟ್ಟಿ, ಬೆಲ್‍ಬಾಟಂ ಮೂಲಕ ಹೀರೋ ಆಗಿಯೂ ಮಿಂಚಿದರು. ಈಗ ಯೆಸ್ ಎಂದರೆ, ನಟ ರಿಷಬ್ ಕೈತುಂಬಾ ಸಿನಿಮಾಗಳು ತುಂಬಿ ತುಳುಕಲಿವೆ. ಆದರೆ, ನಾಥೂರಾಂ ಚಿತ್ರದಲ್ಲಿ ಬ್ಯುಸಿಯಾಗಿರುವ ರಿಷಬ್, ಮತ್ತೆ ನಿರ್ದೇಶನದತ್ತ ಮನಸ್ಸು ಮಾಡಿದ್ದಾರೆ.

  ಈ ಬಾರಿ ರಿಷಬ್ ಶೆಟ್ಟಿ, ಜಯಣ್ಣ ಕಂಬೈನ್ಸ್‍ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದು, ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ.

 • ಮಹನೀಯರೇ.. ಮಹಿಳೆಯರೇ.. ಕರೆಯುತ್ತಿದ್ದಾರೆ ರಿಷಬ್ ಶೆಟ್ಟಿ

  rishab shetty's next movie is mahaniyare mahileyare

  ಬೆಲ್‍ಬಾಟಂ ನಂತರ ರಿಷಬ್ ಶೆಟ್ಟಿ ನಾಯಕರಾಗಿ ನಟಿಸಲಿರುವ ಹೊಸ ಚಿತ್ರದ ಟೈಟಲ್ ಹೊರಬಿದ್ದಿದೆ. ಮಹನೀಯರೇ.. ಮಹಿಳೆಯರೇ.. ಇದು ಚಿತ್ರದ ಟೈಟಲ್. ದಯವಿಟ್ಟು ಗಮನಿಸಿ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ನಿರ್ದೇಶಕ. ಇಲ್ಲಿಯೂ ಅವರು ಸಾರ್ವಜನಿಕ ಪ್ರಕಟಣೆಯನ್ನೇ ತಮ್ಮ ಚಿತ್ರದ ಟೈಟಲ್ ಮಾಡಿರುವುದು ವಿಶೇಷ.

  ಬೆಲ್‍ಬಾಟಂ ನಿರ್ಮಾಪಕ ಕೃಷ್ಣ ಸಾರ್ಥಕ್ ಅವರೇ ಈ ಚಿತ್ರಕ್ಕೂ ನಿರ್ಮಾಪಕರಾಗಿದ್ದಾರೆ. ಇದು ಕೂಡಾ ಕಾಮಿಡಿ ಟ್ರ್ಯಾಕ್ ಸಿನಿಮಾ ಆಗಿದೆ. ರಿಷಬ್ ಶೆಟ್ಟಿಯವರ ಕಥಾ ಸಂಗಮ ಚಿತ್ರೀಕರಣ ಮುಗಿಸಿದೆ. ಆ್ಯಂಟಿಗೋನಿ ಶೆಟ್ಟಿ, ನಾಥೂರಾಮ್ ಚಿತ್ರದ ಕೆಲಸಗಳು ಪ್ರಗತಿಯಲ್ಲಿವೆ. ಇನ್ನು ಸ್ವತಃ ರಿಷಬ್ ಶೆಟ್ಟಿ ನಿರ್ದೇಶಿಸಬೇಕಿರುವ ರುದ್ರಪ್ರಯಾಗ ಚಿತ್ರದ ಪ್ರಿಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಇದರ ನಡುವೆಯೇ ಮಹನೀಯರೇ.. ಮಹಿಳೆಯರೇ.. ಎನ್ನಲು ರಿಷಬ್ ರೆಡಿಯಾಗಿದ್ದಾರೆ.

 • ಮುಚ್ಚುತ್ತಿದ್ದ ಸರ್ಕಾರಿ ಶಾಲೆ ಉಳಿಸಿದ ರಿಷಬ್ ಶೆಟ್ಟಿ : ಸಕ್ಸಸ್ ಸ್ಟೋರಿ

  rishab shetty makes this school a model school

  ಸರ್ಕಾರಿ ಶಾಲೆಗಳೆಂದರೆ ಹಾರಿ ಹೋದ ಹೆಂಚುಗಳು, ಕುಸಿದು ಬೀಳುವ ಸ್ಥಿತಿಯಲ್ಲಿರುವ ಗೋಡೆ, ಹತ್ತೋ.. ಹದಿನೈದೋ ಮಕ್ಕಳು.. ಶಿಕ್ಷಕರಿಲ್ಲ.. ಬೋರ್ಡಿಲ್ಲ.. ಹೀಗೆ ನೂರಾರು ಸಮಸ್ಯೆಗಳು.. ಇಂತಹ ಕಾರಣಗಳಿಗೇ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ದ.ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈರಂಗಳ ಶಾಲೆಯ ಸ್ಥಿತಿಯೂ ಹಾಗೆಯೇ ಇತ್ತು.

  ಅಂದಹಾಗೆ ಈ ಶಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಾಸರಗೋಡು ಸಿನಿಮಾ ಚಿತ್ರೀಕರಣಗೊಂಡಿದ್ದ ಶಾಲೆ. ಮುಚ್ಚುವ ಸ್ಥಿತಿಗೆ ಬಂದಿದದ್ ಶಾಲೆಯನ್ನು ಶೂಟಿಂಗ್ ಮುಗಿಸಿದ ಬಳಿಕವೂ ಮರೆಯದ ರಿಷಬ್ ಶೆಟ್ಟಿ, ಶಾಲೆಯನ್ನು ದತ್ತು ಪಡೆದುಕೊಂಡರು. ಈಗದು ಮಾದರಿ ಶಾಲೆಯಾಗಿ ಬದಲಾಗಿದೆ.

  ಶಾಲೆಯನ್ನು ದತ್ತು ಪಡೆದಾಗ ಈ ಶಾಲೆಯಲ್ಲಿದ್ದ ಮಕ್ಕಳ ಸಂಖ್ಯೆ 17. ಈಗ 84. ಶಾಲೆಗೆ ಸುಣ್ಣಬಣ್ಣ ಹೊಡೆಸಿ ಸಿಂಗರಿಸಲಾಗಿದೆ. ಶಾಲೆಯಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಶುರುವಾಗಿದೆ. ಶಾಲೆಯಲ್ಲಿ ಎಲ್‍ಕೆಜಿ, ಯುಕೆಜಿ ಕೂಡಾ ಶುರುವಾಗಿದೆ. ಊರಿನ ಜನರೆಲ್ಲ ಹೇಳ್ತಿರೋದು ಒಂದೇ ಮಾತು. ಥ್ಯಾಂಕ್ಯೂ ರಿಷಬ್ ಶೆಟ್ಟಿ.

Ayushmanbhava Movie Gallery

Ellidhe Illitanaka Movie Gallery