` rishabh shetty - chitraloka.com | Kannada Movie News, Reviews | Image

rishabh shetty

 • ಮುಚ್ಚುತ್ತಿದ್ದ ಸರ್ಕಾರಿ ಶಾಲೆ ಉಳಿಸಿದ ರಿಷಬ್ ಶೆಟ್ಟಿ : ಸಕ್ಸಸ್ ಸ್ಟೋರಿ

  rishab shetty makes this school a model school

  ಸರ್ಕಾರಿ ಶಾಲೆಗಳೆಂದರೆ ಹಾರಿ ಹೋದ ಹೆಂಚುಗಳು, ಕುಸಿದು ಬೀಳುವ ಸ್ಥಿತಿಯಲ್ಲಿರುವ ಗೋಡೆ, ಹತ್ತೋ.. ಹದಿನೈದೋ ಮಕ್ಕಳು.. ಶಿಕ್ಷಕರಿಲ್ಲ.. ಬೋರ್ಡಿಲ್ಲ.. ಹೀಗೆ ನೂರಾರು ಸಮಸ್ಯೆಗಳು.. ಇಂತಹ ಕಾರಣಗಳಿಗೇ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ದ.ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈರಂಗಳ ಶಾಲೆಯ ಸ್ಥಿತಿಯೂ ಹಾಗೆಯೇ ಇತ್ತು.

  ಅಂದಹಾಗೆ ಈ ಶಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಾಸರಗೋಡು ಸಿನಿಮಾ ಚಿತ್ರೀಕರಣಗೊಂಡಿದ್ದ ಶಾಲೆ. ಮುಚ್ಚುವ ಸ್ಥಿತಿಗೆ ಬಂದಿದದ್ ಶಾಲೆಯನ್ನು ಶೂಟಿಂಗ್ ಮುಗಿಸಿದ ಬಳಿಕವೂ ಮರೆಯದ ರಿಷಬ್ ಶೆಟ್ಟಿ, ಶಾಲೆಯನ್ನು ದತ್ತು ಪಡೆದುಕೊಂಡರು. ಈಗದು ಮಾದರಿ ಶಾಲೆಯಾಗಿ ಬದಲಾಗಿದೆ.

  ಶಾಲೆಯನ್ನು ದತ್ತು ಪಡೆದಾಗ ಈ ಶಾಲೆಯಲ್ಲಿದ್ದ ಮಕ್ಕಳ ಸಂಖ್ಯೆ 17. ಈಗ 84. ಶಾಲೆಗೆ ಸುಣ್ಣಬಣ್ಣ ಹೊಡೆಸಿ ಸಿಂಗರಿಸಲಾಗಿದೆ. ಶಾಲೆಯಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಶುರುವಾಗಿದೆ. ಶಾಲೆಯಲ್ಲಿ ಎಲ್‍ಕೆಜಿ, ಯುಕೆಜಿ ಕೂಡಾ ಶುರುವಾಗಿದೆ. ಊರಿನ ಜನರೆಲ್ಲ ಹೇಳ್ತಿರೋದು ಒಂದೇ ಮಾತು. ಥ್ಯಾಂಕ್ಯೂ ರಿಷಬ್ ಶೆಟ್ಟಿ.

 • ರಕ್ಷಿತ್ ಶೆಟ್ಟಿ ಚಿತ್ರಕ್ಕೆ ರಿಷಬ್ ಶೆಟ್ಟಿ ಹೀರೋ..

  ರಕ್ಷಿತ್ ಶೆಟ್ಟಿ ಚಿತ್ರಕ್ಕೆ ರಿಷಬ್ ಶೆಟ್ಟಿ ಹೀರೋ..

  ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಹೋಗೋ ಬಾರೋ ಮಗಾ ಫ್ರೆಂಡ್ಸ್. ಸೋಷಿಯಲ್ ಮೀಡಿಯಾದಲ್ಲೂ ಅವರಿಬ್ಬರ ನಡುವಿನ ಸಂಭಾಷಣೆಗಳಲ್ಲಿ ಮಗಾ.. ಜಾಸ್ತಿ ಇರುತ್ತೆ. ರಿಷಬ್ ಶೆಟ್ಟಿ ಸಿನಿ ಜರ್ನಿ ಶುರುವಾಗಿದ್ದು ರಕ್ಷಿತ್ ಶೆಟ್ಟಿ ಚಿತ್ರದಿಂದ. ರಿಕ್ಕಿ. ಸಖತ್ ಹಿಟ್ ಸಿಕ್ಕಿದ್ದೂ ರಕ್ಷಿತ್ ಶೆಟ್ಟಿ ಚಿತ್ರದಿಂದ. ಕಿರಿಕ್ ಪಾರ್ಟಿ. ಇದೆಲ್ಲ ಆದ ಮೇಲೆ ಇಬ್ಬರೂ ಪರಸ್ಪರ ಚಿತ್ರಗಳ ಪ್ರಮೋಷನ್ ಮತ್ತಿತರೆ ಶೋಗಳಲ್ಲಿ ಆಕ್ಟಿವ್ ಆಗಿರುತ್ತಾರೆ. ಈಗ ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರಕ್ಕೆ ರಿಷಬ್ ಹೀರೋ ಆಗುತ್ತಿದ್ದಾರೆ.

  ಈ ಶೆಟ್ಟರ ಗ್ಯಾಂಗಿನಲ್ಲಿರೋ ಅಭಿಜಿತ್ ಮಹೇಶ್ ಹೊಸ ಚಿತ್ರಕ್ಕೆ ಡೈರೆಕ್ಟರ್. ಈ ಮೊದಲು ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಥೆಯೊಂದು ಶುರುವಾಗಿದೆ.. ಚಿತ್ರಗಳ ರೈಟರ್ ಟೀಂನಲ್ಲಿದ್ದವರು. 777 ಚಾರ್ಲಿಯಲ್ಲಿ ಕಾಂಪೌಂಡರ್ ಪಾತ್ರ ಮಾಡಿದ್ದಾರೆ.. ಅವರೇ ಈ ಅಭಿಜಿತ್ ಮಹೇಶ್.

  ರಿಷಬ್ ಹುಟ್ಟುಹಬ್ಬಕ್ಕಾಗಿ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಪೋಸ್ಟರ್‍ನಲ್ಲಿ ಬೆಂಗಳೂರು ಟು ಬ್ಯಾಂಕಾಕ್ ಎಂದಿರೋ ಬೋರ್ಡಿಂಗ್ ಪಾಸ್ ಇದೆ. ಒಂದು ಕಡೆ ಕಾಂತಾರ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿರೋ ರಿಷಬ್ ಶೆಟ್ಟಿ ಕೈಲಿ ಹಲವು ಚಿತ್ರಗಳಿವೆ. ಕ್ಯೂನಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ ಯಾವಾಗ ಬರುತ್ತೆ ಅನ್ನೋದನ್ನ ನೋಡಬೇಕು.

 • ರಣ್ ವಿತ್ ಶೆಟ್ಟಿ ಸ/ಒ ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ

  rishab shetty's special teaser for his son

  ರಿಷಬ್ ಶೆಟ್ಟಿ ಕ್ರಿಯೇಟಿವ್ ಅನ್ನೋದ್ರಲ್ಲಿ ನೋ ಡೌಟ್. ಅವರ ಮಗನನ್ನೂ ಅಷ್ಟೇ ಕ್ರಿಯೇಟಿವ್ ಆಗಿ ಜನರಿಗೆ ಪರಿಚಯಿಸಿದ್ದಾರೆ ರಿಷಬ್. ಒಂದು ಸ್ಪೆಷಲ್ ಟೀಸರನ್ನೇ ಸೃಷ್ಟಿಸಿ ಬಿಟ್ಟಿದ್ದಾರೆ.

  ಅಲ್ಲಿ ಬೆಲ್‌ಬಾಟಂನ ಎಲ್ ಬೋರ್ಡ್ ಬರ್ತಾನೆ. ಬ್ಯಾಕ್ ಗ್ರೌಂಡಲ್ಲಿ ಬಭ್ರುವಾಹನವ ಕಂಠವೂ ಕೇಳುತ್ತೆ. ಪುಟ್ಟ ಕಂದನ ಮೇಲೆ ಅಪ್ಪ, ಅಮ್ಮ ಏನೇನೆಲ್ಲ ಆಸೆ ಇಟ್ಟುಕೊಳ್ಳಬಹುದೋ.. ಅದರ ಝಲಕ್ಕೂ ಇದೆ. ಎಲ್ಲಕ್ಕಿಂತ ಕಣ್ಮನ ಸೆಳೆಯುವುದು ಒನ್ಸ್ ಎಗೇಯ್ನ್ ಬೆಣ್ಣೆ ಮುರುಕಿನಂತ ರಣ್‌ವಿತ್ ಶೆಟ್ಟಿ.

  ಮಗನ ನಾಮಕರಣಕ್ಕೆ ಏನಾದರೂ ಸ್ಪೆಷಲ್ ಕೊಡಬೇಕು ಎನ್ನಿಸಿತು. ಹೀಗಾಗಿ ಹುಟ್ಟಿದ್ದು ಈ ಟೀಸರ್ ಕಲ್ಪನೆ. ಟೀಸರ್ ಎಲ್ಲರಿಗೂ ಇಷ್ಟವಾಗಿದೆ ಎಂದಿದ್ದಾರೆ ರಿಷಬ್ ಶೆಟ್ಟಿ.

 • ರಾಬರ್ಟ್ ಚಿತ್ರಕ್ಕೆ ನಾನೂ ವೇಯ್ಟಿಂಗ್ - ರಿಷಬ್ ಶೆಟ್ಟಿ

  ರಾಬರ್ಟ್ ಚಿತ್ರಕ್ಕೆ ನಾನೂ ವೇಯ್ಟಿಂಗ್ - ರಿಷಬ್ ಶೆಟ್ಟಿ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರವನ್ನು ಕನ್ನಡ ಮತ್ತು ತೆಲುಗು ಎರಡೂ ಚಿತ್ರರಂಗಗಳು ಎದುರು ನೋಡುತ್ತಿವೆ. ದರ್ಶನ್ ಚಿತ್ರ ಎಂದ ಮೇಲೆ ಕರ್ನಾಟಕದಲ್ಲಿ ಸಹಜವಾಗಿಯೇ ಕ್ರೇಜ್ ಇರುತ್ತೆ. ಇನ್ನು ತೆಲುಗಿನಲ್ಲಿ ಕಣ್ಣೇ ಅದಿರಿಂದಿ.. ಹಾಡು ಮತ್ತು ಟ್ರೇಲರ್ ಸೃಷ್ಟಿಸಿರುವ ಕ್ರೇಜ್ ಹಾಗಿದೆ. ಹೀಗೆ ಅವರಿವರು ಚಿತ್ರದ ಬಗ್ಗೆ ಪ್ಯಾಷನ್ ಇಟ್ಟುಕೊಂಡು ಕಾಯೋದು ಸಹಜ. ಆ ಲಿಸ್ಟಿನಲ್ಲಿ ರಿಷಬ್ ಶೆಟ್ಟಿ ಕೂಡಾ ಇದ್ದಾರೆ ಎನ್ನುವುದೇ ವಿಶೇಷ.

  ಕಾರಣ ಇಷ್ಟೆ, ರಿಷಬ್ ಶೆಟ್ಟಿಯವರೇ ಹೀರೋ ಆಗಿ ನಟಿಸಿರುವ, ನಿರ್ಮಾಪಕರೂ ಆಗಿರುವ, ಅವರದ್ದೇ ಕಥೆಯೂ ಇರುವ ಹೀರೋ ಸಿನಿಮಾ ಈಗ ಥಿಯೇಟರಿನಲ್ಲಿದೆ. ರಾಬರ್ಟ್ ರಿಲೀಸ್ ಆದರೆ ಮೊದಲ ಏಟು ಬೀಳೋದೂ ಹೀರೋ ಚಿತ್ರಕ್ಕೆ. ಅರ್ಧಕ್ಕರ್ಧ ಚಿತ್ರಮಂದಿರಗಳನ್ನು ಹೀರೋ, ರಾಬರ್ಟ್‍ಗಾಗಿ ಬಿಟ್ಟುಕೊಡಬೇಕು. ಹೀಗಿದ್ದರೂ.. `ನಾನೂ ರಾಬರ್ಟ್ ಚಿತ್ರಕ್ಕಾಗಿ ಕಾಯುತ್ತಿದ್ದೇನೆ..' ಎಂದಿದ್ದಾರೆ ರಿಷಬ್.

  ಸದ್ಯ 165ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ನಮ್ಮ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ರಾಬರ್ಟ್ ಬಂದ್ರೆ ನಮ್ಮ ಅರ್ಧಕ್ಕರ್ಧ ಥಿಯೇಟರ್ಸ್ ಹೋಗುತ್ತವೆ. ಅದೂ ಗೊತ್ತಿದೆ. ಹಾಗಂತ ನಾವು ಯಾವುದೋ ಗುಂಗಿನಲ್ಲಿ ಬದುಕೋಕೆ ಸಾಧ್ಯವಿಲ್ಲ. ದರ್ಶನ್ ಸ್ಟಾರ್ ನಟ. ದೊಡ್ಡ ನಟ. ಅವರ ಚಿತ್ರಗಳ ಬಜೆಟ್ ಕೂಡಾ ದೊಡ್ಡದು. ಹೀಗಾಗಿ ಅವರ ಸಿನಿಮಾ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗಬೇಕು. ಇಲ್ಲದೇ ಹೋದರೆ ಅಷ್ಟು ದುಡ್ಡು ರಿಕವರಿ ಸಾಧ್ಯವಿಲ್ಲ. ನಮ್ ಥಿಯೇಟರ್ ಹೋಯ್ತು ಅಂತಾ ಕಣ್ಣೀರ್ ಹಾಕೋ ಸೀನ್ ಎಲ್ಲ ಇಲ್ಲ. ಒಂದು ವಾರ ಟೈಂ ಇದೆ, ನಮಗೆ ಅಷ್ಟು ಸಾಕು. ಉಳಿದದ್ದೆಲ್ಲ ಆಮೇಲೆ' ಎಂದಿದ್ದಾರೆ ರಿಷಬ್ ಶೆಟ್ಟಿ.

 • ರಿಷಬ್ ರುದ್ರಪ್ರಯಾಗಕ್ಕೆ ಅನಂತ್ ನಾಗ್ ಹೀರೋ

  ananth nag roped in as hero for rudraprayag

  ರಿಷಬ್ ಶೆಟ್ಟಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ರುದ್ರಪ್ರಯಾಗ. ಜಯಣ್ಣ ಕಂಬೈನ್ಸ್‍ನಲ್ಲಿ ನಿರ್ಮಾಣವಾಗ್ತಿರೋ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಚುರುಕಾಗಿನಡೆಯುತ್ತಿವೆ. ರಿಷಬ್ ನಿರ್ದೇಶನ ಇರುವ ಕಾರಣ ಕಥೆ ಫೈನಲ್ ಆದ ಚಿತ್ರಕಥೆಯನ್ನು ಹಲವು ಬಾರಿ ತಿದ್ದಿತೀಡಿ ರೂಪಿಸಲಾಗಿದೆ. ಅದೆಲ್ಲವನ್ನೂ ಫೈನಲ್ ಮಾಡಿಕೊಂಡೇ ನಿರ್ದೇಶನಕ್ಕಿಳಿಯುವ ರಿಷಬ್, ತಮ್ಮ ಚಿತ್ರಕ್ಕೆ ಹೀರೋ ಆಯ್ಕೆ ಮಾಡಿಕೊಂಡಿದ್ದಾರೆ. ಅದು ಅನಂತ್‍ನಾಗ್.

  ಸ.ಹಿ.ಪ್ರಾ.ಪಾ. ದಲ್ಲಿ ಕೂಡಾ ಅನಂತ್ ನಟಿಸಿದ್ದರು. ಒಂದು ಲೆಕ್ಕದಲ್ಲಿ ಆ ಚಿತ್ರಕ್ಕೂ ಅನಂತ್ ಅವರೇ ಹೀರೋ. ಈ ಚಿತ್ರಕ್ಕೂ ಅನಂತ್ ಅವರೇ ಹೀರೋ.

  ಇದು ಮುಖ್ಯಪಾತ್ರವಲ್ಲ. ಅವರೇ ಹೀರೋ ಎಂದು ಅಧಿಕೃತವಾಗಿಯೇ ಘೋಷಿಸಿದ್ದಾರೆ ರಿಷಬ್ ಶೆಟ್ಟಿ. ಈಗ ಅನಂತ್ ಅವರಿಗೆ ನಾಯಕಿಯನ್ನು ಹುಡುಕುತ್ತಿದ್ದಾರೆ ರಿಷಬ್.

  ಕಥೆ ಕೇಳಿ ಮರುಮಾತನಾಡದೆ ಖುಷಿಯಿಂದ ಒಪ್ಪಿಕೊಂಡರಂತೆ ಅನಂತ್ ನಾಗ್. ಡಿಸೆಂಬರ್‍ನಲ್ಲಿ ರುದ್ರಪ್ರಯಾಗ ಶೂಟಿಂಗ್ ಶುರುವಾಗಲಿದೆ. 55 ದಿನಗಳ ಶೂಟಿಂಗ್ ಪ್ಲಾನ್ ಮಾಡಲಾಗಿದ್ದು, ಬೆಳಗಾವಿ, ಖಾನಾಪುರ, ಉತ್ತರಾಖಂಡಗಳಲ್ಲಿ ಶೂಟಿಂಗ್ ನಡೆಯಲಿದೆ.

 • ರಿಷಬ್ ರುದ್ರಪ್ರಯಾಗಕ್ಕೆ ಶ್ರದ್ಧಾ ಶ್ರೀನಾಥ್

  shraddha srinath is fmale lead in rudraprayag

  ರಿಷಬ್ ಶೆಟ್ಟಿ ನಿರ್ದೇಶನದ ರುದ್ರಪ್ರಯಾಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಅನಂತ್ ನಾಗ್ ಅವರನ್ನು ನಾಯಕರನ್ನಾಗಿಸಿರುವ ರಿಷಬ್, ಚಿತ್ರಕ್ಕೆ ಹೀರೋಯಿನ್ ಆಗಿ ಶ್ರದ್ಧಾ ಶ್ರೀನಾಥ್ ಅವರನ್ನು ಸೆಲೆಕ್ಟ್ ಮಾಡಿದ್ದಾರೆ. ಶ್ರದ್ಧಾ ಶ್ರೀನಾಥ್ ಕನ್ನಡದಿಂದ ಚಿತ್ರರಂಗಕ್ಕೆ ಬಂದವರಾದರೂ ಸದ್ಯಕ್ಕೆ ತಮಿಳು, ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ.

  ಅವರದ್ದು ರೆಗ್ಯುಲರ್ ಪಾತ್ರ ಅಲ್ಲ. ಚಿತ್ರದಲ್ಲಿ ಒಟ್ಟು 9 ಪಾತ್ರಗಳಿವೆ. ಆ 9 ಪಾತ್ರಗಳಲ್ಲಿ ಶ್ರದ್ಧಾ ಅವರದ್ದು ಪ್ರಮುಖ ಪಾತ್ರ. ತುಂಬಾ ವೈಶಿಷ್ಟ್ಯಪೂರ್ಣ ಪಾತ್ರ ಎಂದಿದ್ದಾರೆ ರಿಷಬ್.

  ಜಯಣ್ಣ ಕಂಬೈನ್ಸ್‍ನಲ್ಲಿ ನಿರ್ಮಾಣವಾಗುತ್ತಿರುವ ರುದ್ರಪ್ರಯಾಗ ಚಿತ್ರಕ್ಕೆ ಮುಂದಿನ ತಿಂಗಳು ಶೂಟಿಂಗ್ ಶುರುವಾಗಲಿದೆ.

 • ರಿಷಬ್ ಶೆಟ್ಟಿ ಮನೆಗೆ ಹೊಸ ಹೀರೋ

  rishab shetty pragathi welcomes baby boy

  ನಟ, ನಿರ್ದೇಶಕ ರಿಷಬ್ ಶೆಟ್ಟಿ ಮನೆಗೆ ಹೊಸ ಹೀರೋ ಒಬ್ಬ ಎಂಟ್ರಿ ಕೊಟ್ಟಿದ್ದಾನೆ. ನಿರ್ದೇಶಕರಾಗಿ, ನಾಯಕ ನಟನಾಗಿ ಸತತ ಸಕ್ಸಸ್ ಕಂಡ ಖುಷಿಯಲ್ಲಿರುವ ರಿಷಬ್ ಶೆಟ್ಟಿಗೆ ಈಗ ಫ್ಯಾಮಿಲಿಯಲ್ಲೊಂದು ಸಿಹಿ ಕನಸು ಸಿಕ್ಕಿದೆ.

  ರಿಷಬ್ ಶೆಟ್ಟಿ-ಪ್ರಗತಿ ದಂಪತಿ ಪುಟ್ಟ ಗಂಡುಮಗುವಿನ ತಂದೆಯಾಗಿದ್ದಾರೆ. ಯುಗಾದಿ ಹಬ್ಬ ಮುಗಿದ ಬೆನ್ನಲ್ಲೇ ಪ್ರಗತಿ ಅವರಿಗೆ ಹೆರಿಗೆಯಾಗಿರುವುದು ವಿಶೇಷ.

  ರಿಷಬ್ ಶೆಟ್ಟಿ-ಪ್ರಗತಿ ದಂಪತಿಗೆ ಚಿತ್ರರಂಗದ ಗೆಳೆಯರು ಶುಭ ಹಾರೈಸಿದ್ದಾರೆ. ಹರಿಪ್ರಿಯಾ ಸ್ವಲ್ಪ ಡಿಫರೆಂಟ್, ಇನ್ನಾದರೂ ಕ್ಯಾಂಡಿ ಕದಿಯೋದನ್ನು ನಿಲ್ಲಿಸು. ಇಲ್ಲದೇ ಹೋದರೇ, ನಿನ್ನ ಮಗನಿಗೆ ನೀನೇ ವಿಲನ್ ಆಗಿಬಿಡಬಹುದು ಎಂದು ಕಿಂಡಲ್ ಮಾಡಿದ್ದಾರೆ.

 • ರಿಷಬ್ ಶೆಟ್ಟಿ ಸರ್ಕಾರಿ ಶಾಲೆಯ ದಡ್ಡನ ಕಥೆ

  rishab shetty to release dadda video song

  ಕಿರಿಕ್ ಪಾರ್ಟಿ ನಂತರ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ದೊಡ್ಡ ದೊಡ್ಡ ಬ್ಯಾನರ್ ಮತ್ತು ನಿರ್ಮಾಪಕರನ್ನು ಬದಿಗಿಟ್ಟು ರಿಷಬ್ ಕೈಗೆತ್ತಿಕೊಂಡ ಸಿನಿಮಾ `ಸಹಿಪ್ರಾ ಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ' ಅನ್ನೋ ಚಿತ್ರ. ಅದು ನನ್ನ ಮನಸ್ಸಿಗೆ ಹತ್ತಿರವಾದ ಕಥೆ. ಹೀಗಾಗಿ ಕಮರ್ಷಿಯಲ್ ಬಿಟ್ಟು ಇದೇ ಸಿನಿಮಾ ಆಯ್ಕೆ ಮಾಡಿಕೊಂಡೆ ಎಂದಿದ್ದ ರಿಷಬ್, ಇಡೀ ಚಿತ್ರವನ್ನು ತಮ್ಮ ತಂಡದ ಮೂಲಕವೇ ಕಟ್ಟಿಕೊಟ್ಟಿದ್ದಾರೆ. ರಿಷಬ್ ಟೀಂನ ಸದಸ್ಯರು ಸಂಭಾವನೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ. 

  ಸಿನಿಮಾ ಬಿಡುಗಡೆಗೆ ತಯಾರಾಗಿರುವ ರಿಷಬ್, ಚಿತ್ರವನ್ನು ಜಯಣ್ಣ ಫಿಲಂಸ್ ಮೂಲಕ ರಿಲೀಸ್ ಮಾಡಲಿದ್ದಾರೆ. ಸದ್ಯಕ್ಕೆ ಚಿತ್ರದ ದಡ್ಡ ಎಂಬ ಹಾಡನ್ನು ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡ ಶಾಲೆಗಳ ಬಗೆಗಿನ ಕಾಳಜಿಯೇ ಚಿತ್ರದ ಜೀವಾಳ. ಆದರೆ, ಸಂದೇಶವನ್ನು ಮನರಂಜನಾತ್ಮಕವಾಗಿ ಹೇಳುತ್ತಿದ್ದೇವೆ. ಯಾವುದೂ ಇಲ್ಲಿ ವಾಚ್ಯವಾಗಿಲ್ಲ ಎಂದು ಭರವಸೆ ಕೊಡುತ್ತಿದ್ದಾರೆ ರಿಷಬ್ ಶೆಟ್ಟಿ

 • ರಿಷಬ್ ಶೆಟ್ಟಿ..ಸಪ್ತಮಿ ಗೌಡ ಸಿಂಗರ ಸಿರಿಯೇ.. ಶೃಂಗಾರ ಗೀತೆ..

  ರಿಷಬ್ ಶೆಟ್ಟಿ..ಸಪ್ತಮಿ ಗೌಡ ಸಿಂಗರ ಸಿರಿಯೇ.. ಶೃಂಗಾರ ಗೀತೆ..

  ಅವಳ ಮುಖದಲ್ಲಿ ಮುಗ್ದತೆ.. ಹುಸಿ ಕೋಪ.. ಪ್ರೀತಿ.. ನಿರೀಕ್ಷೆ.. ಕಾತುರ.. ಅವನ ಮುಖದಲ್ಲಿ ಪ್ರೀತಿ.. ಆತುರ.. ನಗು.. ತುಂಟತನ.. ಗತ್ತು..

  ಅವರಿಬ್ಬರ ಮಧ್ಯೆ ಹುಟ್ಟಿಕೊಳ್ಳೋ ಪ್ರೀತಿಯ ಮಧ್ಯೆ ಕರಾವಳಿಯ ಸೊಗಡು.. ಮೀನು.. ಮಾರುಕಟ್ಟೆ.. ದೋಣಿ.. ಜೊತೆ ಜೊತೆಯಲ್ಲೇ ಸಾಗುವ ಪುಟ್ಟದೊಂದು ಕಥೆ..

  ಕಾಂತಾರ ಚಿತ್ರತಂಡ ಸ್ವಾತಂತ್ರ್ಯ ದಿನದಂದು ಹೊರಗೆ ಬಿಟ್ಟ ಸಿಂಗಾರ ಸಿರಿಯೇ ಎಂಬ ಶೃಂಗಾರ ಗೀತೆಯಲ್ಲಿ ಇಷ್ಟೆಲ್ಲ ಇದೆ.

  ಅವಳು ಸಪ್ತಮಿ ಗೌಡ.. ಹಾಡಿನ ಆರಂಭದಲ್ಲಿ ಅರ್ಜಿ ಕೊಟ್ಟವಳು.. ಹಾಡಿನ ಕೊನೆಯಲ್ಲಿ ಫಾರೆಸ್ಟ್ ಆಫೀಸರ್ ಆಗುತ್ತಾಳೆ. ಆಕೆಗೆ ಆ ಕೆಲಸ ಸಿಗಲು ಓಡಾಡುವ ರಿಷಬ್ ಶೆಟ್ಟಿ.. ಓಡಾಡುತ್ತಲೇ ಆಕೆಯ ಹೃದಯ ಗೆಲ್ಲುತ್ತಾನೆ.

  ಅಜನೀಶ್ ಲೋಕನಾಥ್ ಮ್ಯೂಸಿಕ್ಕಿನಲ್ಲಿ ಮತ್ತೊಮ್ಮೆ ಮಾಂತ್ರಿಕಲೋಕ ಸೃಷ್ಟಿಸಿದ್ದರೆ.. ಆ ಹಾಡಿಗೆ ವಿಜಯ್ ಪ್ರಕಾಶ್ ಮತ್ತು ಅನನ್ಯಾ ಭಟ್ ಹೃದಯದಿಂದಲೇ ಧ್ವನಿ ನೀಡಿದ್ದಾರೆ. ಪ್ರಮೋದ್ ಮರವಂತೆ ಹಾಡಿನ ಪದಪದಗಳನ್ನೂ ತಾಜಾ ಮೀನು ಪೋಣಿಸುವಂತೆ ಪೋಣಿಸಿದ್ದಾರೆ. ಕುಂದಾಪ್ರದ ಜನಪದದ ಸಿರಿ ಹಾಡಿನ ಮಧ್ಯೆ ಇಣುಕುತ್ತದೆ..

 • ರಿಷಬ್.. ಕೌಬಾಯ್ ಕೃಷ್ಣಾವತಾರ

  avane srimannarayna cow boy krishna movie title

  ಡಿಟೆಕ್ಟಿವ್ ದಿವಾಕರ ಖ್ಯಾತಿಯ ರಿಷಬ್ ಶೆಟ್ಟಿ, ಕೌಬಾಯ್ ಕೃಷ್ಣನ ಅವತಾರ ಎತ್ತಲು ಸಿದ್ಧರಾಗಿದ್ದಾರೆ. ಅವನೇ ಶ್ರೀಮನ್ನಾರಾಯಣದಲ್ಲಿ ಸೆಕೆಂಡ್ ಹೀರೋ ಅರ್ಥಾತ್ ಅವರೇ ಹೇಳಿಕೊಂಡಂತೆ ಕೆಲವೇ ಸೆಕೆಂಡು ಬಂದು ಹೋಗುವ ಕೌಬಾಯ್ ಕೃಷ್ಣನಾಗಿ ಗಮನ ಸೆಳೆದಿದ್ದರು ರಿಷಬ್ ಶೆಟ್ಟಿ. ಈಗ ಅದೇ ಹೆಸರನ್ನು ಫಿಲಂ ಚೇಂಬರಿನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ.

  ರಂಗಿತರಂಗ ಖ್ಯಾತಿಯ ಪ್ರಕಾಶ್ ಕೌಬಾಯ್ ಶೆಟ್ಟಿಗೆ ನಿರ್ಮಾಪಕರಾಗಲಿದ್ದಾರಂತೆ. ಸದ್ಯಕ್ಕೆ ರಿಷಬ್ ರುದ್ರಪ್ರಯಾಗ ಚಿತ್ರದಲ್ಲಿ ಬ್ಯುಸಿ. ಅದಾದ ನಂತರ ಆಂಟೋನಿ ಶೆಟ್ಟಿ ಮತ್ತು ಬೆಲ್‍ಬಾಟಂ 2 ಚಿತ್ರಗಳಿವೆ. ಮೋಸ್ಟ್‍ಲೀ.. ಆ ಮೂರೂ ಚಿತ್ರಗಳ ನಂತರ ಕೌಬಾಯ್ ಕೃಷ್ಣ ಸೆಟ್ಟೇರಬಹುದು.

 • ರಿಷಭ್ ಶೆಟ್ಟಿ ಜೊತೆ ಶಿವಣ್ಣ

  ರಿಷಭ್ ಶೆಟ್ಟಿ ಜೊತೆ ಶಿವಣ್ಣ

  ಲಾಕ್ ಡೌನ್ ಟೈಮ್‍ನಲ್ಲಿ ಸುಮಾರು ಕಥೆ ಕೇಳಿದ್ದೇನೆ. ರಿಷಬ್ ಶೆಟ್ಟಿಯವರು ಹೇಳಿದ ಕಥೆ ಇಷ್ಟವಾಯ್ತು. ಅದರಲ್ಲೂ ಅವರ ಮಂಗಳೂರು ಕನ್ನಡದ ಶೈಲಿಯಲ್ಲಿ ಕತೆ  ಕೇಳೋದೇ ಚೆಂದ. ಜೊತೆಗೆ ಜಯಣ್ಣ ಭೋಗೇಂದ್ರ ನಿರ್ಮಾಣ. ಮೇಕಿಂಗ್‍ನಲ್ಲೂ ಅದ್ಧೂರಿತನವಿರುತ್ತೆ ಅನ್ನೋ ವಿಶ್ವಾಸ. ಹೀಗಾಗಿ ಓಕೆ ಎಂದಿದ್ದೇನೆ ಎಂದಿದ್ದಾರೆ ಶಿವಣ್ಣ.

  ಅಲ್ಲಿಗೆ ಕನ್ನಡದಲ್ಲಿ ಹೊಸದೊಂದು ಕಾಂಬಿನೇಷನ್ ಹುಟ್ಟಿದೆ. ತಾನು ಜ್ಯೂನಿಯರ್‍ಗಳೊಂದಿಗೂ ಕೆಲಸ ಮಾಡ್ತೇನೆ. ವಯಸ್ಸು, ಅನುಭವ ಮುಖ್ಯವಲ್ಲ ಅನ್ನೋ ಮೆಸೇಜ್ ರವಾನಿಸಿದ್ದಾರೆ ಶಿವಣ್ಣ. ಮತ್ತೊಮ್ಮೆ.

  ನನ್ನ ಮತ್ತು ಶಿವಣ್ಣ ಹೊಸ ಕಾಂಬಿನೇಷನ್‍ನ ಹೊಸ ಸಿನಿಮಾ ಮುಂದಿನ ವರ್ಷ ಶುರುವಾಗಲಿದೆ. ಅದಕ್ಕೂ ಮೊದಲು ನಾನು ಇನ್ನೊಂದು ಸಿನಿಮಾ ಮುಗಿಸಬೇಕಿದೆ. ಬೇರೆಯದೇ ಕಥೆ ಸಿದ್ಧ ಮಾಡಿಕೊಂಡಿದ್ದೇನೆ. ಈಗಲೇ ಹೇಳಿದರೆ ಥ್ರಿಲ್ ಹೋಗುತ್ತೆ ಎಂದಿದ್ದಾರೆ ರಿಷಬ್ ಶೆಟ್ಟಿ.

 • ರಿಸಬ್ ಶೆಟ್ಟಿಯ 13 ವರ್ಷದ ಕನಸು

  rishab shetty's dream come reality

  ಕಿರಿಕ್ ಪಾರ್ಟಿ, ರಿಕ್ಕಿ ಚಿತ್ರಗಳ ನಿರ್ದೇಶಕ ರಿಷಬ್ ಶೆಟ್ಟಿ. ಈಗ ಬೆಲ್‍ಬಾಟಂ ಚಿತ್ರದ ನಾಯಕ. ಅಂದಹಾಗೆ ಎರಡು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ನಿರ್ದೇಶಕ ರಿಷಬ್ ಶೆಟ್ಟಿಯವರ ಕನಸು, ಡೈರೆಕ್ಟರ್ ಆಗುವುದಾಗಿರಲಿಲ್ಲ. ನಾಯಕನಾಗಬೇಕು ಎಂಬ ಕನಸಿಟ್ಟುಕೊಂಡು ಚಿತ್ರರಂಗಕ್ಕೆ ಬಂದವರು ರಿಷಬ್ ಶೆಟ್ಟಿ.

  13 ವರ್ಷಗಳ ಹಿಂದೆ ಚಿತ್ರರಂಗ ಪ್ರವೇಶಿಸಿದ ರಿಷಬ್ ಶೆಟ್ಟಿಗೆ ನಟನಾಗುವ ಅವಕಾಶ ಸಿಗಲಿಲ್ಲ. ಉಳಿದವರು ಕಂಡಂತೆ ಚಿತ್ರದಲ್ಲಿ ನಟಿಸಿದರಾದರೂ, ಪೂರ್ಣ ಪ್ರಮಾಣದ ಹೀರೋ ಆಗಲು ಸಾಧ್ಯವಾಗಿರಲಿಲ್ಲ. ಆದರೆ, ನಿರ್ದೇಶಕರಾಗಿ ಹೆಸರು ಮಾಡಿದ ರಿಷಬ್ ಶೆಟ್ಟಿ, ಬೆಲ್‍ಬಾಟಂ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ.

  ಕೆಲವೊಮ್ಮೆ ನಾವು ಊರಿಗೆ ಹೊರಟಾಗ ಡೈರೆಕ್ಟ್ ಬಸ್ ಸಿಗೋದಿಲ್ಲ. ಸುತ್ತಿ ಬಳಸಿ ಹೋಗಬೇಕಾಗುತ್ತೆ. ಆದರೆ, ನಮ್ಮ ಗಮ್ಯ ತಲುಪುವ ತವಕ ಕಡಿಮೆಯಾಗೋದಿಲ್ಲ. 2005ರಲ್ಲಿ ಚಿತ್ರರಂಗಕ್ಕೆ ಬಂದ ನನ್ನ ಕನಸು, 13 ವರ್ಷಗಳ ನಂತರ ನನಸಾಗುತ್ತಿದೆ ಎಂದು ತಮ್ಮ ಹಾದಿಯನ್ನು ನೆನಪಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ.

  ಪ್ರಯತ್ನ ನಿರಂತರವಾಗಿದ್ದರೆ, ಅವಕಾಶಗಳು ಸಿಕ್ಕೇ ಸಿಗುತ್ತವೆ. ಪರಿಶ್ರಮ ಪ್ರಾಮಾಣಿಕವಾಗಿದ್ದರೆ, ಗೆಲುವು ಕೂಡಾ ಸಿಗುತ್ತೆ. ಅದೃಷ್ಟವೂ ಜೊತೆಯಲ್ಲಿದ್ದರೆ, ಅಂದುಕೊಂಡ ಗುರಿಯನ್ನು ತಲುಪಬಹುದು. ಇವೆಲ್ಲದಕ್ಕೂ ಉದಾಹರಣೆಯಂತಿದ್ದಾರೆ ರಿಷಬ್ ಶೆಟ್ಟಿ.

   

 • ರುದ್ರಪ್ರಯಾಗ : ರಿಷಬ್ ಶೆಟ್ಟಿ ಹೇಳೋಕೆ ಹೊರಟಿರುವ ಕಥೆ ಏನು..?

  rudraprayag poster creates curiosty

  ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂತರ ರಿಷಬ್ ಶೆಟ್ಟಿ, ಬೆಲ್‍ಬಾಟಂನಲ್ಲಿ ಹೀರೋ ಆಗಿ ಮಿಂಚಿದ್ದರು. ಹೀರೋ ಆದ ಮೇಲೆ ಡೈರೆಕ್ಷನ್ ಮರೆತುಬಿಟ್ರಾ ಎಂಬ ಡೌಟ್ ಇದ್ದವರಿಗೆ ಮತ್ತೊಮ್ಮೆ ನಿರ್ದೇಶಕರ ಕ್ಯಾಪ್ ತೊಟ್ಟು ಖುಷಿ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ. ಚಿತ್ರದ ಹೆಸರು ರುದ್ರಪ್ರಯಾಗ.

  ಕಥೆ ಏನಿರಬಹುದು..? ಪೋಸ್ಟರ್‍ನಲ್ಲಿ ಚಿರತೆ, ಕಾಡು, ನದಿ, ವಿಧಾನಸೌಧ, ಚೆನ್ನಮ್ಮನ ಪ್ರತಿಮೆ ಎಲ್ಲ ಇದೆ. ಇದು ಪೊಲಿಟಿಕಲ್ ಡ್ರಾಮಾನಾ..? ನೋ ಐಡಿಯಾ..

  ರುದ್ರಪ್ರಯಾಗದ ನರಭಕ್ಷಕ ಅನ್ನೋದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ. ಇದು ಆ ಕಥೆನಾ..? ಗೊತ್ತಿಲ್ಲ.

  ರುದ್ರಪ್ರಯಾಗ.. ಉತ್ತರಾಖಂಡ ರಾಜ್ಯದಲ್ಲಿರೋ ಪ್ರದೇಶ. ಅಲಕನಂದಾ, ಮಂದಾಕಿನಿ ನದಿಗಳ ಪವಿತ್ರ ಸಂಗಮ ಸ್ಥಾನ. ಇದು ಜರ್ನಿ ಸ್ಟೋರಿನಾ.. 

  ಜಯಣ್ಣ, ಭೋಗೇಂದ್ರ ಬ್ಯಾನರ್‍ನಲ್ಲಿ ಬರುತ್ತಿರುವ ಚಿತ್ರದ ಬಗ್ಗೆ ಕುತೂಹಲಗಳೇನೇ ಇದ್ದರೂ, ಉತ್ತರ ಸದ್ಯಕ್ಕೆ ಗೊತ್ತಿರುವುದು ರಿಷಬ್ ಶೆಟ್ಟಿಗೆ ಮಾತ್ರ. ರಿಷಬ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಪೋಸ್ಟರ್ ಹೊರಬಿದ್ದಿದೆ.

 • ಲಂಡನ್ ಲಂಬೋದರನಿಗೆ ರಿಷಬ್ ಶೆಟ್ಟಿ ಪವರ್

  londonalli lambodara gets rishab's power

  ತೆರೆಗೆ ಬರಲು ಸಿದ್ಧವಾಗಿರುವ ಲಂಡನ್‍ನಲ್ಲಿ ಲಂಬೋದರ ಚಿತ್ರಕ್ಕೆ ರಿಷಬ್ ಶೆಟ್ಟಿ ಬಲ ಸಿಕ್ಕಿದೆ. ಚಿತ್ರವನ್ನು ರಿಷಬ್ ಶೆಟ್ಟಿಯವರೇ ರಿಲೀಸ್ ಮಾಡುತ್ತಿದ್ದಾರೆ. ಬಿಗ್‍ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ನಾಯಕಿಯಾಗಿ ನಟಿಸಿರುವ ಸಿನಿಮಾ ಲಂಡನ್‍ನಲ್ಲಿ ಲಂಬೋದರ್. ಸಂತೋಷ್ ಎಂಬ ಯುವಪ್ರತಿಭೆ ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ದೊಡ್ಡ ಲಕ್ ಎದುರು ನೋಡುತ್ತಿರುವ ಚಿತ್ರ ತಂಡಕ್ಕೆ ಲಕ್ಕಿ ಸ್ಟಾರ್ ರಿಷಬ್ ಶೆಟ್ಟಿ ಸಪೋರ್ಟು ಸಿಕ್ಕಿರುವುದೇ ಖುಷಿ.

  ರಾಜ್ ಸೂರ್ಯ ನಿರ್ದೇಶನದ ಮೊದಲ ಚಿತ್ರ ಲಂಡನ್‍ನಲ್ಲಿ ಲಂಬೋದರ ಚಿತ್ರ, ವಿದೇಶಿ ವ್ಯಾಮೋಹದ ಕಥೆಯನ್ನೊಳಗೊಂಡಿದೆ. ಚಿತ್ರದ ಟ್ರೇಲರ್ ಮಾರ್ಚ್ 18ರಂದು ರಿಲೀಸ್ ಆಗುತ್ತಿದೆ.

 • ಲಹರಿ ವಿರುದ್ಧ ತಿರುಗಿಬಿದ್ದ ರಿಷಬ್ ಶೆಟ್ಟಿ

  ಲಹರಿ ವಿರುದ್ಧ ತಿರುಗಿಬಿದ್ದ ರಿಷಬ್ ಶೆಟ್ಟಿ

  ಅವರಿಗೆ ಇದೊಂದು ಅಭ್ಯಾಸವಾಗಿ ಹೋಗಿದೆ. ರಿಲೀಸ್ ಆಗೋಕೆ ಮೊದಲು ಕೋರ್ಟ್ಗೆ ಹೋಗೋದು, ಸ್ಟೇ ತರೋ ಅಭ್ಯಾಸ ಅವರದ್ದು. ಇಂತಹದ್ದಕ್ಕೆಲ್ಲ ಹೆದರಲ್ಲ. ನಾವು ಕೋರ್ಟಿನಲ್ಲೇ ಅವರಿಗೆ ಉತ್ತರ ಕೊಡ್ತೇವೆ.

  ಇದು ಕಿರಿಕ್ ಪಾರ್ಟಿ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಮಾತು. ಕಿರಿಕ್ ಪಾರ್ಟಿ ತಂಡದ ವಿರುದ್ಧದ ಲಹರಿ ಸಂಸ್ಥೆಯ ಕೇಸ್ನಲ್ಲಿ ಜಾರಿಯಾಗುವ ನಾನ್ ಬೇಲಬಲ್ ವಾರೆಂಟ್ ಬಗ್ಗೆ ಅವರು ಕೊಟ್ಟಿರೋ ಉತ್ತರ ಇದು.

  ಆಗ ನಾವು ಸಿನಿಮಾ ರಿಲೀಸ್ ಆಗುವ  1 ತಿಂಗಳು ಮೊದಲು ಹಾಡು ರಿಲೀಸ್ ಮಾಡಿದ್ದೆವು. ಅವರು ಸಿನಿಮಾ ರಿಲೀಸ್ ಆಗೋಕೆ ಸ್ಟೇ ತರಲು ಹೋಗಿದ್ದರು. ನಮಗೆ ಅದರ ಸೂಚನೆಯಿದ್ದ ಕಾರಣ,  ಆ ಹಾಡು ಇಲ್ಲದ ಇನ್ನೊಂದು ಪ್ರತಿಯನ್ನೂ ಇಟ್ಟುಕೊಂಡಿದ್ದೆವು. ಕೋರ್ಟ್ನಲ್ಲಿ ಇತ್ಯರ್ಥವಾಗುವವರೆಗೂ ಆ ಹಾಡನ್ನು ಚಿತ್ರದಲ್ಲಿ ಬಳಸಿರಲಿಲ್ಲ. ಲಾಕ್ ಡೌನ್ಗೆ ಮುನ್ನ ಅವರು ಇನ್ನೊಂದು ರೀತಿ ಕೇಸ್ ಹಾಕಿದ್ರು. ಅದನ್ನು ರಕ್ಷಿತ್ ಶೆಟ್ಟಿ ಫಾಲೋ ಮಾಡ್ತಿದ್ದಾನೆ. ಅವನೇ ಇವರಿಗೆ ಉತ್ತರ ಕೊಡ್ತಾನೆ. ಅವರು ಹಿಂದೆ ಕಳುಹಿಸಿದ್ದ ಪತ್ರ ಹಳೆಯ ಅಡ್ರೆಸ್ಗೆ ಹೋಗಿತ್ತು. ನಮಗೆ ಸಿಕ್ಕಿರಲಿಲ್ಲ. ಈಗ ರಕ್ಷಿತ್ ಶೆಟ್ಟಿಗೂ ನೋಟಿಸ್ ಸಿಕ್ಕಿದೆ. ಆತನೇ ಇವರಿಗೆಲ್ಲ ಉತ್ತರ ಕೊಡ್ತಾನೆ ಎಂದು ಗರಂ ಆಗಿಯೇ ಉತ್ತರ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ.

  ರಿಲೀಸ್ ಟೈಂನಲ್ಲಿ ಸಿನಿಮಾ ರಿಲೀಸ್ ಆಗೋಕೆ ಬಿಡಲ್ಲ. ಕೋರ್ಟ್ನಿಂದ ಕೋರ್ಟಿಗೆ ಅಲೆದಾಡಿಸುತ್ತೇವೆ ಎಂದೆಲ್ಲ ಲಹರಿ ಸಂಸ್ಥೆ ಬೆದರಿಕೆ ಹಾಕಿತ್ತು. ಇನ್ನೊಂದು ಹಂತದಲ್ಲಿ ಪ್ರಶಾಂತ್ ಸಂಬರಗಿ ಅವರೇ ಇಷ್ಟು ಹಣ ಕೊಟ್ಟುಬಿಡಿ, ಕೇಸ್ ಇತ್ಯರ್ಥ ಮಾಡಿಕೊಳ್ಳೋಣ ಎಂದಿದ್ದರು. ನಾವು ಜಗ್ಗಲೂ ಇಲ್ಲ. ಬಗ್ಗಲೂ ಇಲ್ಲ. ಇದನ್ನು ಕೋರ್ಟ್ನಲ್ಲಿಯೇ ಎದುರಿಸುತ್ತೇವೆ ಎಂದಿದ್ದಾರೆ ರಿಷಬ್ ಶೆಟ್ಟಿ.

  ಶಾಂತಿ ಕ್ರಾಂತಿಯ ಆ ಹಾಡಿನಲ್ಲಿ ಬಳಸಿದ್ದ  ಸಂಗೀತ ಪರಿಕರಗಳನ್ನೇ ಈ ಹಾಡಿನಲ್ಲಿ ಬಳಸಿದ್ದೆವು. ಆ ಹಾಡನ್ನು  ಹಂಸಲೇಖ ಮತ್ತು ರವಿಚಂದ್ರನ್ ಸರ್ಗೆ ಡೆಡಿಕೇಟ್ ಮಾಡುವ ಉದ್ದೇಶವಿತ್ತು. ಆದರೆ, ಈ ವಿವಾದ ಸೃಷ್ಟಿಯಾದ ಕಾರಣ, ಅದನ್ನು ಕೈಬಿಟ್ಟೆವು ಎಂಬ ಮಾಹಿತಿಯನ್ನೂ ಬಹಿರಂಗಪಡಿಸಿದ್ದಾರೆ ರಿಷಬ್ ಶೆಟ್ಟಿ.

 • ವರಾಹರೂಪಂ.. : ಹಾಡು ಬಳಸದಂತೆ ಕೋರ್ಟ್ ಆದೇಶ

  ವರಾಹರೂಪಂ.. : ಹಾಡು ಬಳಸದಂತೆ ಕೋರ್ಟ್ ಆದೇಶ

  ಕಾಂತಾರ ಚಿತ್ರ ಹಿಟ್ ಅಗುತ್ತಿದ್ದಂತೆಯೇ ಕಾಂತಾರದ ವರಾಹರೂಪಂ ಹಾಡು ಕೂಡಾ ಹಿಟ್ ಆಗಿತ್ತು. ಇಡೀ ಸಿನಿಮಾಗೆ ಆ ಹಾಡು, ಸಂಗೀತದಿಂದ ದೈವೀಕ ಕಳೆ ಬಂದಿತ್ತು. ಅಜನೀಶ್ ಲೋಕನಾಥ್ ವ್ಹಾವ್ ಎನ್ನಿಸಿಕೊಂಡಿದ್ದರು. ಆದರೆ ಈಗ ಆ ಹಾಡಿಗೆ ತಡೆ ನೀಡಿದ ನ್ಯಾಯಾಲಯ. ಇದೀಗ ‘ತೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್ನ ಅನುಮತಿ ಇಲ್ಲದೆ ‘ವರಾಹ ರೂಪಂ’ ಹಾಡನ್ನ ಬಳಕೆ ಮಾಡುವಂತಿಲ್ಲ ಎಂದು ಕೇರಳ ಕೋರ್ಟ್ ಆದೇಶ ನೀಡಿದೆ.

  ‘ತೈಕ್ಕುಡಂ ಬ್ರಿಡ್ಜ್’ ಎಂಬ ಮ್ಯೂಸಿಕ್ ಬ್ಯಾಂಡ್ನ ಅನುಮತಿ ಇಲ್ಲದೆ ‘ವರಾಹ ರೂಪಂ’ ಹಾಡನ್ನ ಬಳಕೆ ಮಾಡದಂತೆ ‘ಕಾಂತಾರ’ ಚಿತ್ರತಂಡಕ್ಕೆ ಕೇರಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಂದು ಆದೇಶ ನೀಡಿದೆ. ‘ಕಾಂತಾರ’ ಚಿತ್ರದಲ್ಲಿ ಬಳಸಲಾದ ವರಾಹ ರೂಪಂ..  ತಮ್ಮ ಒರಿಜಿನಲ್ ಸಾಂಗ್ ನವರಸಂನಿಂದ ಯಥಾವತ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ‘ತೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್ ಕೋರ್ಟ್ ಮೆಟ್ಟಿಲೇರಿತ್ತು.ಕೋರ್ಟ್ ತೈಕ್ಕುಡಂ ಬ್ರಿಡ್ಜ್ ಮನವಿಗೆ ಸ್ಪಂದಿಸಿ ಅವರ ಪರವಾಗಿಯೇ ತೀರ್ಪು ಕೊಟ್ಟಿದೆ.

  ರಾಗಗಳು ಒಂದೇ ಹೊರತು ಕಾಪಿ ಮಾಡಿದ್ದಲ್ಲ. ಹಾಗಾಗಿ  ಈ ರೀತಿ ಅನ್ನಿಸುವುದು ಸಹಜ ಎಂದಿದ್ದರು ಅಜನೀಶ್ ಲೋಕನಾಥ್. ನಿರ್ದೇಶಕ ರಿಷಬ್ ಶೆಟ್ಟಿ ಕೂಡಾ ಹಾಡು ಕಾಪಿ ಮಾಡಿದ್ದಲ್ಲ. ನ್ಯಾಯಾಂಗ ಹೋರಾಟ ನಡೆಸುತ್ತೇವೆ ಎಂದಿದ್ದರು. ಈಗ ಕೋರ್ಟ್ ತಡೆಯಾಜ್ಞೆ ನೀಡಿದೆ.

  ಕೊಲಿಕ್ಕೋಡ್‍ನ ಜಿಲ್ಲಾ ನ್ಯಾಯಾಲಯದ ಆದೇಶದ ಪ್ರಕಾರ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಅಮೇಜಾನ್, ಯೂಟ್ಯೂಬ್, ಸ್ಫೂಫಿ, ವಿಂಕ್ ಮ್ಯೂಸಿಕ್, ಜಿಸೋವಾನ್ ಸೇರಿದಂತೆ ಎಲ್ಲರಿಗೂ ಅನ್ವಯವಾಗಲಿದೆ. ನವರಸಂ ಹಾಡಿನ ಮೂಲ ಸೃಷ್ಟಿಕರ್ತರಾದ ತೈಕ್ಕುಡಂ ಬ್ರಿಡ್ಜ್ ಅನುಮತಿಯಿಲ್ಲದೆ ಹಾಡನ್ನು ಬಳಸುವಂತಿಲ್ಲ ಎಂಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ತೈಕ್ಕುಡಂ ಬ್ರಿಡ್ಜ್ ಪರವಾಗಿ ಸುಪ್ರೀಂಕೋರ್ಟ್ ವಕೀಲ ಸತೀಶ್ ಮೂರ್ತಿ ವಾದಿಸುತ್ತಿದ್ದಾರೆ.

 • ವರಾಹರೂಪಂ.. ಹಾಡು : ಗೊಂದಲಗಳಾಗಿದ್ದೇಕೆ?

  ವರಾಹರೂಪಂ.. ಹಾಡು : ಗೊಂದಲಗಳಾಗಿದ್ದೇಕೆ?

  ವರಾಹರೂಪಂ.. ಕಾಂತಾರದ ಸಿಗ್ನೇಚರ್ ಟ್ಯೂನ್ ಸಾಂಗ್ ಎನ್ನಬಹುದು. ಚಿತ್ರದ ಯಶಸ್ಸಿನಲ್ಲಿ ರಿಷಬ್ ಶೆಟ್ಟಿ ನಟನೆ, ನಿರ್ದೇಶನ, ಸಪ್ತಮಿ ಗೌಡ ಅಭಿನಯ, ಚಿತ್ರದ ಎಲ್ಲ ಕಲಾವಿದರು ಮತ್ತು ತಂತ್ರಜ್ಞರ ಒಟ್ಟಾರೆ ಶ್ರಮ ಹೇಗೆ ಕಾರಣವೋ.. ಅಷ್ಟೇ ದೊಡ್ಡ ಕಾರಣ ಅಜನೀಶ್ ಲೋಕನಾಥ್ ಅವರ ಸಂಗೀತ. ಈ ಹಾಡು ಪ್ರೇಕ್ಷಕರ ಹೃದಯಕ್ಕೇ ಇಳಿದಿತ್ತು. ಆದರೆ ಸಿನಿಮಾ ಬಿಡುಗಡೆಯ ನಂತರ ಈ ಹಾಡು ತಮ್ಮದು ತೈಕ್ಕುಡಂ ಬ್ರಿಡ್ಜ್ ಎಂಬ ಕೇರಳದ ಮ್ಯೂಸಿಕ್ ತಂಡದವರು ಕೇಸು ಹಾಕಿದರು. ವರಾಹರೂಪಂ.. ರಾಗ..ತಾಳವನ್ನೇ ಹೋಲುವ ತೈಕ್ಕುಡಂ ಬ್ರಿಡ್ಜ್‍ನವರ ನವರಸನ್.. ಅಲ್ಬಂ, 2017ರಿಂದಲೇ ಯೂಟ್ಯೂಬ್‍ನಲ್ಲಿತ್ತು. ಇಲ್ಲ ಇದು ತಮ್ಮದು ಎಂದು ವಾದಿಸಿದವರು ರಿಷಬ್ ಶೆಟ್ಟಿ ಮತ್ತು ಅಜನೀಶ್ ಲೋಕನಾಥ್. ವಿವಾದ ಕೋರ್ಟ್ ಮೆಟ್ಟಿಲೇರಿತು. ಕೋರ್ಟಿನಲ್ಲಿ ವರಾಹರೂಪಂ.. ಹಾಡು ಮತ್ತು ಸಂಗೀತದ ಬಳಕೆಗೆ ತಡೆಯಾಜ್ಞೆ ನೀಡಿತು. ತಡೆಯಾಜ್ಞೆ ತೆರವುಗೊಳಿಸುವ ಕುರಿತಂತೆ ಕೇರಳ ಹೈಕೋರ್ಟ್‍ನಲ್ಲಿ ಕೂಡಾ ಹೊಂಬಾಳೆ ಸಂಸ್ಥೆಗೆ ಹಿನ್ನಡೆಯಾಗಿತ್ತು. ಕೆಳಹಂತದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಕಾರಣ, ತಡೆಯಾಜ್ಞೆ ತೆರವು ಸಾಧ್ಯವಿಲ್ಲ ಎಂದಿತ್ತು ಹೈಕೋರ್ಟ್. ಇದರ ಮಧ್ಯೆ ನಿನ್ನೆ ಇದ್ದಕ್ಕಿದ್ದಂತೆ ಸಂಚಲನ.

  ಕೇರಳದ ಕೋಝಿಕ್ಕೋಡ್ ನ್ಯಾಯಾಲಯದಲ್ಲಿ ಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವಾಯ್ತು. ಅದೇ ಕೋರ್ಟಿನಲ್ಲಿ ತೈಕ್ಕುಡಂ ಬ್ರಿಡ್ಜ್ ತಂಡದವರು ಅರ್ಜಿ ಸಲ್ಲಿಸಿದ್ದರು. ತೈಕ್ಕುಡಂ ತಂಡದ ಅರ್ಜಿಯನ್ನೇ ವಜಾ ಮಾಡಿತು ಕೋಝಿಕ್ಕೋಡ್ ನ್ಯಾಯಾಲಯ. ತಡೆಯಾಜ್ಞೆ ತೆರವು ಎಂದೇ ಎಲ್ಲ ಭಾವಿಸಿದರು. ಆದರೆ ಅದು ಕೋಝಿಕ್ಕೋಡ್ ನ್ಯಾಯಾಲಯದ ತೀರ್ಪಿಗೆ ಮಾತ್ರವೇ ಸೀಮಿತವಾಗಿತ್ತು.

  ಏಕೆಂದರೆ ತೈಕ್ಕುಡಂ ತಂಡದವರು ಪಾಲಕ್ಕಾಡ್ ಕೋರ್ಟಿನಲ್ಲಿಯೂ ಅರ್ಜಿ ಸಲ್ಲಿಸಿದ್ದರು. ಪಾಲಕ್ಕಾಡ್ ಕೋರ್ಟ್ ತಡೆಯಾಜ್ಞೆ ಜಾರಿ ಮಾಡಿದೆ.

  ಹಾಗಾದರೆ ಕಾಂತಾರದಲ್ಲಿ ಈ ಮೊದಲು ಇದ್ದ ವರಾಹರೂಪಂ.. ಹಾಡನ್ನೇ ಕೇಳಬಹುದಾ? ಇಲ್ಲ. ಸದ್ಯಕ್ಕೆ ಸಾಧ್ಯವಿಲ್ಲ. ಏಕೆಂದರೆ ಪಾಲಕ್ಕಾಡ್ ಕೋರ್ಟ್ ಇನ್ನೂ ತಡೆ ನೀಡಿಲ್ಲ. ಕೋರ್ಟ್ ಅದೇಶವನ್ನು ಹೀಗೆಯೇ ಬರಲಿದೆ ಎಂದು ಹೇಳೋಕೆ ಸಾಧ್ಯವಿಲ್ಲ. ತಡೆಯಾಜ್ಞೆ ಜಾರಿಯಲ್ಲಿದೆ.

 • ವಿವಾದಾತ್ಮಕ ವಾದದ ಪಟ್ಟು ಬಿಡದ ಚೇತನ್ : ಪಂಜುರ್ಲಿ ದೈವಕ್ಕೆ ದೂರು

  ವಿವಾದಾತ್ಮಕ ವಾದದ ಪಟ್ಟು ಬಿಡದ ಚೇತನ್ : ಪಂಜುರ್ಲಿ ದೈವಕ್ಕೆ ದೂರು

  ಆ ದಿನಗಳು ಖ್ಯಾತಿಯ ನಟ ಚೇತನ್ ಕಾಂತಾರ ಚಿತ್ರದ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿ ಸುದ್ದಿಯಲ್ಲಿದ್ದಾರೆ. ಭೂತಕೋಲ, ದೈವಾರಾಧನೆ ಇವ್ಯಾವುವೂ ಹಿಂದೂಗಳದ್ದಲ್ಲ. ನಮ್ಮ ಬುಡಕಟ್ಟು ಸಂಸ್ಕøತಿಯದ್ದು. ಹಿಂದೂಗಳೇ ಬೇರೆ. ಬುಡಕಟ್ಟು ಜನಗಳೇ ಬೇರೆ. ವೈದಿಕತೆ, ಬ್ರಾಹ್ಮಣ್ಯವನ್ನು ಕಾಂತಾರ ಚಿತ್ರದ ಮೂಲಕ ಹೇರಲಾಗುತ್ತಿದೆ ಎಂದಿದ್ದರು ಚೇತನ್. ನಟ ನಿರ್ದೇಶಕ ರಿಷಬ್ ಶೆಟ್ಟಿ ಸಂಸ್ಕøತಿ ಆರಾಧಿಸುವವರಿಗೆ ಮಾತ್ರವೇ ಇದರ ಬಗ್ಗೆ ಮಾತನಾಡಲು ಹಕ್ಕಿದೆ. ಚೇತನ್ ಹೇಳಿಕೆಗೆ ನೋ ಕಮೆಂಟ್ಸ್ ಎಂದಿದ್ದರು. ವಿವಾದಾತ್ಮಕ ಹೇಳಿಕೆ ಬಗ್ಗೆ ಚಿತ್ರರಂಗದ ಖ್ಯಾತನಾಮರು, ರಾಜಕಾರಣಿಗಳೂ ಮಾತನಾಡಿದ್ದಾರೆ. ಚೇತನ್ ನಡವಳಿಕೆಯನ್ನು ಖಂಡಿಸಿದ್ದಾರೆ. ಈ ಮಧ್ಯೆ ಚೇತನ್ ವಿರುದ್ಧ ಪೊಲೀಸ್ ಕೇಸ್ ಕೂಡಾ ದಾಖಲಾಗಿದೆ. ಆದರೆ ಇದಕ್ಕೆಲ್ಲ ಚೇತನ್ ಬಗ್ಗುವವರೂ ಅಲ್ಲ. ಹೀಗಾಗಿಯೇ ಚೇತನ್ ಮತ್ತೊಮ್ಮೆ ಮಾತನಾಡಿದ್ದಾರೆ.

  ಹಿಂದೂ ಧರ್ಮವನ್ನು ಆಮದು ಮಾಡಿಕೊಂಡ ಧರ್ಮ ಎಂದಿದ್ದಾರೆ. ಈ ಬಾರಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನೂ ಆಮದು ಮಾಡಿಕೊಂಡ ಧರ್ಮ ಎಂದಿದ್ದಾರೆ. ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಕಾಂತಾರ ಸಿನಿಮಾ ನೋಡಿಲ್ಲ. ಚಿತ್ರ ನೋಡಿ ರಿಯಾಕ್ಟ್ ಮಾಡ್ತೀನಿ. ಎಲ್ಲರೂ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೇಳಿದ್ದಾರೆ. ಚಿತ್ರೀಕರಣದ ಮಧ್ಯೆ ಬಿಡುವಾಗಿಲ್ಲ. ಇನ್ನು ಚೇತನ್ ವಿವಾದದ ಬಗ್ಗೆ ಮಾತನಾಡಿರೋ ಉಪೇಂದ್ರ ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡಲ್ಲ. ಈ ರೀತಿಯ ಬೆಳವಣಿಗೆ ಅಸಹ್ಯ ತರಿಸುತ್ತೆ. ಭೂತಾರಾಧನೆ ಅವರ ವೈಯಕ್ತಿಕ ನಂಬಿಕೆ. ನಾನೂ ಅದೇ ಊರಿಂದ ಬಂದವನು. ನಾವು ನಾಗಾರಾಧನೆ ಮಾಡುತ್ತೇವೆ. ಇದನ್ನು ನಿರ್ಲಕ್ಷಿಸುವುದೇ ಒಳ್ಳೆಯದು ಎಂದಿದ್ದಾರೆ ಉಪೇಂದ್ರ. ಆದರೆ ದೈವಾರಾಧಕರು ಸುಮ್ಮನಾಗಿಲ್ಲ.

   ಉಡುಪಿಯಲ್ಲಿ ಹಿರಿಯ ದೈವರಾಧಕ ಕುಮಾರ ಪಂಪದ ಮಾತನಾಡಿ, ಸಂಸ್ಕೃತಿಯ ಅವಹೇಳನ ಆದಾಗೆಲ್ಲ ನಾವು ದೈವದ ಮುಂದೆ ಪ್ರಾರ್ಥನೆ ಮಾಡುತ್ತೇವೆ. ನಾವು ಸೇವೆ ಕೊಡುವ ದೈವಗಳ ಮುಂದೆಯೇ ಪ್ರಾರ್ಥನೆ ಮಾಡುತ್ತೇವೆ. ನಮ್ಮ ಮೂಲ ಆರಾಧನೆಯ ಪಂಜುರ್ಲಿ ದೈವದ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದಿದ್ದಾರೆ.  

  ನಟರಿಗೆ ನಟನೆ ಮಾಡಲು ಗೊತ್ತಿರಬಹುದು. ನಾವು ದೈವಾರಾಧಕರು. ನಮಗೆ ನಟಿಸಲು ಗೊತ್ತಿಲ್ಲ. ನಾವು ತಲೆತಲಾಂತರಗಳಿಂದ ಸತ್ಯವನ್ನು ಪಾಲನೆ ಮಾಡಿಕೊಂಡು ಬಂದವರು. ಭೂತಾರಾಧನೆಗೆ ಇಂತಿಷ್ಟು ವರ್ಷದ ಹಿನ್ನೆಲೆ ಎಂಬ ದಾಖಲೆ ನಮ್ಮಲ್ಲಿ ಇಲ್ಲ. ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಮಾತನಾಡುವುದು ತಪ್ಪು ಎಂದು ಗರಂ ಆದರು. ಕರಾವಳಿಯಾದ್ಯಂತ ಪರವ, ಪಂಪದ ನಲಿಕೆಯವರು ಜೀವಿಸುತ್ತಿದ್ದೇವೆ. ನಾವು ಅಲೆಮಾರಿಗಳು ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಹಿರಿಯರ ಕಾಲದಿಂದ ನಾವು ಹಿಂದೂ ಸಂಪ್ರದಾಯವನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ದೈವಗಳಿಗೆ ಮೂಲ ಶಬ್ದವೇ ತುಳು. ನಾವು ನಂಬಿಕೊಂಡ ಸತ್ಯದ ಮೂಲಕ ಚೇತನ್ ಗೆ ಪ್ರತಿಕ್ರಿಯೆ ಕೊಡುತ್ತೇವೆ ಎಂದು ಹೇಳಿದರು.

  ನಟ ಚೇತನ್ ಬಹಳ ದೊಡ್ಡ ಜ್ಞಾನಿ ಆಗಿರಬಹುದು. ನಮ್ಮ ನೆಲ, ನಮ್ಮ ಕುಲ ನಮ್ಮ ಆಚರಣೆಯ ಬಗ್ಗೆ ಮಾತನಾಡುವ ಜ್ಞಾನ ಇವರಿಗೆ ಇಲ್ಲ. ವ್ಯಕ್ತಿಗತವಾಗಿ ಇವರಿಗೆ ನಾವು ಉತ್ತರ ಕೊಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು. 

 • ಸಂಕ್ರಾಂತಿಗೆ ಮನೆ ಮನೆಗೆ ಗರುಡ ಗಮನ ವೃಷಭ ವಾಹನ

  ಸಂಕ್ರಾಂತಿಗೆ ಮನೆ ಮನೆಗೆ ಗರುಡ ಗಮನ ವೃಷಭ ವಾಹನ

  2021ರ ಸೂಪರ್ ಹಿಟ್ ಚಿತ್ರ ಗರುಡ ಗಮನ ವೃಷಭ ವಾಹನ ಈಗ ಮನೆ ಮನೆಗೂ ಬರಲಿದೆ. ನ.19ರಂದು ರಿಲೀಸ್ ಆಗಿದ್ದ ಜಿಜಿವಿವಿ ಬಾಕ್ಸಾಫೀಸ್‍ನಲ್ಲಿ ಅದ್ಭುತ ಕಲೆಕ್ಷನ್ ಮಾಡಿತ್ತು. ಪ್ರೇಕ್ಷಕರು ಮತ್ತು ವಿಮರ್ಶಕರಿಬ್ಬರ ಮೆಚ್ಚುಗೆಯನ್ನೂ ಪಡೆದಿದ್ದ ಗರುಡ ಗಮನ ವೃಷಭ ವಾಹನ ಓಟಿಟಿಯಲ್ಲಿ ಬರಲಿದೆ. ಸಂಕ್ರಾಂತಿಗೆ.

  ರಾಜ್ ಬಿ.ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿದ್ದರು. ಜೀ5ನಲ್ಲಿ ರಿಲೀಸ್ ಆಗುತ್ತಿರುವ ಗರುಡ ಗಮನ ವೃಷಭ ವಾಹನ ಜನವರಿ 15ರಂದು ಓಟಿಟಿಯಲ್ಲಿ ಪ್ರಸಾರವಾಗಲಿದೆ.

 • ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ; ಕೊಡುಗೆ ರಿಷಬ್ ಶೆಟ್ಟಿ

  rishab shetty school

  ನಟ, ನಿರ್ಮಾಪಕ, ನಿರ್ದೇಶಕ ರಿಷಬ್ ಶೆಟ್ಟಿಯವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕೊಡುಗೆ ರಾಮಣ್ಣ ರೈ ಸಿನಿಮಾ ಗೊತ್ತು. ಇದೇನು ರಿಷಬ್ ಶೆಟ್ಟಿ ಕೊಡುಗೆ ಅಂತೀರಾ.

  ಅದೇ ಶಾಲೆಯನ್ನು ರಿಷಬ್ ಶೆಟ್ಟಿ ನವೀಕರಣಗೊಳಿಸಿದ್ದನ್ನು ನೀವು ಓದಿದ್ದೀರಿ. ನೋಡಿದ್ದೀರಿ. ಮೆಚ್ಚಿದ್ದೀರಿ. ಅದನ್ನು ಅಲ್ಲಿಗೇ ಬಿಟ್ಟಿಲ್ಲ ರಿಷಬ್. ಬೇಸಗೆ ರಜೆ ಬಂದ ಕೂಡಲೇ ಆ ಶಾಲೆಯನ್ನು ಸಿಂಗಾರಗೊಳಿಸಲು ಮುಂದಾಗಿದ್ದಾರೆ. ಇಡೀ ಶಾಲೆಗೆ ಚೆಂದದ ಚಿತ್ರಗಳನ್ನು ಬರೆಸಿ, ಆ ಮೂಲಕ ಕನ್ನಡದ ಕಂಪನ್ನು ಸಾರಲು ಹೊರಟಿದ್ದಾರೆ ರಿಷಬ್ ಶೆಟ್ಟಿ.

  ಇದೆಲ್ಲವನ್ನೂ ಅವರು ಸ್ವಂತ ಹಣದಲ್ಲಿ ಮಾಡುತ್ತಿದ್ದಾರೆ ಎನ್ನವುದೇ ಮೆಚ್ಚುಗೆಯ ಅಂಶ. ಅದಕ್ಕೇ ಹೇಳಿದ್ದು, ಕೊಡುಗೆ ರಿಷಬ್ ಶೆಟ್ಟಿ ಅಂತ.