ತಾಯಿಗೆ ತಕ್ಕ ಮಗ. ಶಶಾಂಕ್ ನಿರ್ದೇಶನದ ಸಿನಿಮಾ. ನಟ ಅಜಯ್ ರಾವ್‍ಗೆ ಇದು 25ನೇ ಸಿನಿಮಾ. ಮತ್ತೊಂದು ಹಿಟ್ ನಿರೀಕ್ಷೆಯಲ್ಲಿದೆ ಜೋಡಿ. ಏಕೆಂದರೆ, ಇದು ಇವರಿಬ್ಬರೂ ಒಟ್ಟಾಗಿ ಮಾಡಿರುವ 3ನೇ ಸಿನಿಮಾ. ಈ ಹಿಂದೆ ಶಶಾಂಕ್, ಅಜಯ್ ರಾವ್ ಅವರಿಗಾಗಿ ಕೃಷ್ಣನ್ ಲವ್ ಸ್ಟೋರಿ ಮಾಡಿದ್ದರು. ಅದು ಸೂಪರ್ ಹಿಟ್. ಕೃಷ್ಣಲೀಲ ಮಾಡಿದರು. ಅದೂ ಸೂಪರ್ ಹಿಟ್. ಈಗ ತಾಯಿಗೆ ತಕ್ಕ ಮಗ ಸಿದ್ಧ ಮಾಡಿದ್ದಾರೆ. ಮುಂದಿನ ವಾ ತೆರೆಗೆ ಬರುತ್ತಿರುವ ತಾಯಿಗೆ ತಕ್ಕ ಮಗ ಚಿತ್ರದ ಮೇಲಿನ ನಿರೀಕ್ಷೆ ಮತ್ತು ಹಾಡುಗಳು ಹಿಟ್ ಆಗಿರುವ ರೀತಿ ನೋಡಿದರೆ, ಸಿನಿಮಾ ಹಿಟ್ ಸಾಲಿಗೆ ಸೇರುವ ಸಾಧ್ಯತೆಗಳು ಹೆಚ್ಚಿವೆ.
ಇನ್ನು ಅಜಯ್ ರಾವ್‍ಗೆ ಮೊದಲ ಚಿತ್ರದಲ್ಲಿ ತಾಯಿಯಾಗಿದ್ದ ಸುಮಲತಾ, 25ನೇ ಚಿತ್ರದಲ್ಲೂ ತಾಯಿಯಾಗಿದ್ದಾರೆ. ಎಕ್ಸ್‍ಕ್ಯೂಸ್ ಮಿ ಕೊಟ್ಟ ಸ್ಟಾರ್‍ಗಿರಿಯನ್ನು 25ನೇ ಚಿತ್ರವೂ ಕೊಡಲಿದೆ ಎಂಬ ನಿರೀಕ್ಷೆ ಚಿತ್ರತಂಡದ್ದು. ಅಜಯ್ ರಾವ್, ಸುಮಲತಾ, ಆಶಿಕಾ ರಂಗನಾಥ್ ಪ್ರಧಾನ ಪಾತ್ರದಲ್ಲಿರುವ ಸಿನಿಮಾ, ಭಾರಿ ನಿರೀಕ್ಷೆ ಹುಟ್ಟುಹಾಕಿದೆ.