ಈ ಮಾತು ಹೇಳೋಕೆ ಕಾರಣ ಇದೆ. ಏಕೆಂದರೆ ಈ ಚಿತ್ರದ ನಿರ್ದೇಶಕ ಶಶಾಂಕ್. ಸಿಕ್ಸರ್‍ನಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿದೇಶಕ ಶಶಾಂಕ್, ತಮ್ಮ ಮೊದಲ ಚಿತ್ರದಿಂದಲೂ ಹೊಸಬರಿಗೆ ಬೆನ್ನು ತಟ್ಟುತ್ತಲೇ ಬಂದವರು. ಶಶಾಂಕ್ ಅವರ ಪ್ರತಿ ಚಿತ್ರದಲ್ಲೂ ಕನಿಷ್ಠ ಐದಾರು ಹೊಸ ಪ್ರತಿಭೆಗಳಿರುತ್ತವೆ. ಕಲಾವಿದರು, ತಂತ್ರಜ್ಞರು, ಸಾಹಿತಿಗಳು.. ಹೀಗೆ ಪ್ರತಿ ಕಡೆಯಲ್ಲೂ ಹೊಸ ಹೊಸಬರನ್ನು ಪರಿಚಯಿಸುತ್ತಲೇ ಇರುತ್ತಾರೆ.
ಇನ್ನು ಕಾಯ್ಕಿಣಿಗೆ ತಕ್ಕ ನಿರ್ದೇಶಕ ಎಂದಿದ್ದು ಇದೇ ಕಾರಣಕ್ಕೆ. ತಾಯಿಗೆ ತಕ್ಕ ಮಗ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಜಯಂತ್ ಕಾಯ್ಕಿಣಿ ``ಪ್ರತಿ ಚಿತ್ರದಲ್ಲೂ ಒಬ್ಬೊಬ್ಬ ಸಾಹಿತಿಗೆ, ಹೊಸ ಪ್ರತಿಭೆಗೆ ಅವಕಾಶ ಕೊಟ್ಟರೂ ಸಾಕು. ವರ್ಷಕ್ಕೆ ಕನಿಷ್ಠ 100 ಸಾಹಿತಿಗಳು ಬೆಳಕಿಗೆ ಬರುತ್ತಾರೆ. ಚಿತ್ರ ನಿರ್ದೇಶಕರು ಈ ಬಗ್ಗೆ ಮನಸ್ಸು ಮಾಡಬೇಕು'' ಎಂದಿದ್ದರು.
ಆದರೆ, ಕಾಯ್ಕಿಣಿ ಹೇಳಿದ್ದನ್ನು ಜಾರಿಗೇ ತಂದಿರೋ ಶಶಾಂಕ್, ತಾಯಿಗೆ ತಕ್ಕ ಮಗ ಚಿತ್ರದಲ್ಲೂ ಅದನ್ನು ಮುಂದವರೆಸಿದ್ದಾರೆ. ಚಿತ್ರದಲ್ಲಿನ ಎದೆಯ ಒಳಗೆ ಬಲಗಾಲಿಟ್ಟು ಒಳಗೆ ಬಂದೇ ನೀನು ಹಾಡನ್ನು ಬರೆದಿರುವುದು ಹೊಸ ಪ್ರತಿಭೆ ರಾಘವೇಂದ್ರ. ಹಾಡು ಹಿಟ್ ಆಗಿದೆ.
ಸಿಕ್ಸರ್, ಮೊಗ್ಗಿನ ಮನಸ್ಸು, ಕೃಷ್ಣಲೀಲ, ಕೃಷ್ಣನ್ ಲವ್ ಸ್ಟೋರಿ.. ಹೀಗೆ ಪ್ರತಿ ಚಿತ್ರದಲ್ಲೂ ಹೊಸಬರನ್ನು ಪರಿಚಯಿಸಿ ಗೆದ್ದಿರುವ ಶಶಾಂಕ್, ಈ ಚಿತ್ರದಲ್ಲೂ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.