ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಎಲ್ಲ ರಂಗಗಳಲ್ಲೂ ಸಾವಿನ ವದಂತಿಗಳ ಕಾರುಬಾರು ಜೋರಾಗಿಬಿಟ್ಟಿದೆ. ಕನ್ನಡದ ಹಲವು ಹಿರಿಯ ನಟರು, ಗಾಯಕ, ಗಾಯಕಿಯರ ಸಾವಿನ ಸುದ್ದಿಯನ್ನು ಅದ್ಯಾರು ಹಬ್ಬಿಸ್ತಾರೋ ಗೊತ್ತಿಲ್ಲ, ಕನ್‍ಫರ್ಮೇಷನ್‍ಗಾಗಿ ಹುಡುಕಾಡಿದವರು ಬೇಸ್ತು ಬೀಳೋದು ಮಾತ್ರ ಖಚಿತ. ಇಂತಹ ಸಾವಿನ ಸುದ್ದಿಯ ವದಂತಿಗೆ ಸಿಕ್ಕಿದ್ದವರು ನಿರ್ದೇಶಕ ಪಿ.ವಾಸು.
ಆಪ್ತಮಿತ್ರ, ಆಪ್ತರಕ್ಷಕ, ಆರಕ್ಷಕ, ದೃಶ್ಯ, ಶಿವಲಿಂಗ.. ಮೊದಲಾದ ಹಿಟ್ ಚಿತ್ರಗಳನ್ನು ಕೊಟ್ಟಿರುವ ಪಿ.ವಾಸು ಅವರು ಮೊನ್ನೆ ಮೊನ್ನೆಯಷ್ಟೇ ಈ ಸಾವಿನ ವದಂತಿಗೆ ಸಿಕ್ಕು ನರಳಿದ್ದಾರೆ. ಆಗ ತಾನೇ ಜಿಮ್‍ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸಿ ಉಸ್ಸಪ್ಪಾ ಎಂದು ಬಂದು ಕುಳಿತವರಿಗೆ ಮೊಬೈಲ್ ತುಂಬಾ ಮೆಸೇಜುಗಳು. ಏನಿದು ಅಂಥಾ ನೋಡಿದರೆ, ಅವರ ಸಾವಿನ ಸುದ್ದಿ.
ಸುದ್ದಿ ನೋಡಿ ನಗುವುದು ಬಿಟ್ಟು ಬೇರೇನೂ ಮಾಡೋಕೆ ಆಗಲಿಲ್ಲ. ನಾನು ಚೆನ್ನಾಗಿಯೇ ಇದ್ದೇನೆ. ಈ ವರ್ಷ 3 ಸಿನಿಮಾ ನಿರ್ದೆಶನ ಮಾಡಲಿದ್ದೇನೆ. ಕಾಳಜಿ ತೋರಿದವರಿಗೆಲ್ಲ ಧನ್ಯವಾದಗಳು ಎಂದಿದ್ದಾರೆ ಪಿ.ವಾಸು.