` meghana gaonkar - chitraloka.com | Kannada Movie News, Reviews | Image

meghana gaonkar

 • `ಕಾಳಿ'ಯನ್ನು ಕಾಡುತ್ತಿದೆ ಅದೊಂದು ಬೇಸರ

  meghana gaonkar happy, but still

  ಕಾಳಿ ಅಂದ್ರೆ ಯಾರು..? ಕಾಳಿದಾಸ ಕನ್ನಡ ಮೇಷ್ಟುç ನೋಡಿದವರಿಗೆ ನೋ ಡೌಟ್, ಜಗ್ಗೇಶ್ ಅವರಿಗಂತೂ ಕನಸಿನಲ್ಲೂ ಕಣ್ಮುಂದೆ ಬರೋ ಕಾಳಿ, ಮೇಘನಾ ಗಾಂವ್ಕರ್. ಕವಿರಾಜ್ ಸೃಷ್ಟಿಸಿದ ಪಾತ್ರ ಈಗ ಸೆನ್ಸೇಷನ್. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ಮೇಘನಾ ಗಾಂವ್ಕರ್, ಸಾಕ್ಷಾತ್ ಕಾಳಿಯೇ ಆಗಿದ್ದಾರೆ. ಚಿತ್ರರಂಗದ ಗಣ್ಯರು ಮತ್ತು ಪ್ರೇಕ್ಷಕರೆಲ್ಲರ ಮೆಚ್ಚುಗೆ ಪಡೆದಿರುವ ಮೇಘನಾ, ಚಿತ್ರರಂಗಕ್ಕೆ ಬಂದಿದ್ದೇ ಆಕಸ್ಮಿಕ.

  ಡೈರೆಕ್ಟರ್ ಆಗಲು ಬಂದ ಮೇಘನಾ, ಫಿಲಂ ಮೇಕಿಂಗ್ ಕ್ಲಾಸಿನಲ್ಲಿ ತರಬೇತಿ ಪಡೆದುಕೊಂಡರು. ಡ್ಯಾನ್ಸ್ ಕಲಿತಿರುವ ಮೇಘನಾ, ಒಳ್ಳೆಯ ಗಾಯಕಿಯೂ ಹೌದು. ಎಲ್ಲವೂ ಚಿತ್ರರಂಗಕ್ಕಾಗಿಯೇ. ಆದರೆ, ಮೇಘನಾಗೆ ನಾಯಕಿಯಾಗಬೇಕು ಎನ್ನುವ ಉದ್ದೇಶವೇ ಇರಲಿಲ್ಲ. ಆಕಸ್ಮಿಕವಾಗಿ ಹೀರೋಯಿನ್ ಆದ ಮೇಘನಾ, ಸತತವಾಗಿ ಗಮನ ಸೆಳೆಯುತ್ತಿದ್ದಾರೆ.

  ನಮ್ ಏರಿಯಾಲ್ ಒಂದಿನ, ತುಘಲಕ್, ಚಾರ್‌ಮಿನಾರ್, ಸಿಂಪಲ್ ಆಗಿ ಇನ್ನೊಂದು ಲವ್ ಸ್ಟೋರಿ ಹೀಗೆ.. ಬೆರಳೆಣಿಕೆ ಚಿತ್ರಗಳಲ್ಲಿ ನಟಿಸಿದರೂ.. ಪ್ರತೀ ಚಿತ್ರದಲ್ಲೂ ಗಮನ ಸೆಳೆದ ನಟಿ. ಈಗ ಕಾಳಿದಾಸ ಕನ್ನಡ ಮೇಷ್ಟುç.

  ಆಫರ್ ಬಂದಿಲ್ಲ ಅಂತಲ್ಲ, ಆದರೆ ಹಾಗೆ ಬಂದ ಅವಕಾಶಗಳು ಇನ್ಯಾವುದೋ ಕಾರಣಕ್ಕೆ ಮಿಸ್ ಆಗಿವೆ. ಸಿಕ್ಕಿರುವ ಪಾತ್ರಗಳೇನೋ ಚೆನ್ನಾಗಿದ್ದವು. ಆದರೆ, ಬ್ಯುಸಿ ಎನ್ನಿಸುವಷ್ಟು ಅವಕಾಶಗಳು ಇನ್ನೂ ಬಂದಿಲ್ಲ ಎನ್ನುವ ಮೇಘನಾ, ಚಿತ್ರರಂಗದಲ್ಲಿ ಇರಲೆಂದೇ ಬಂದವಳು ನಾನು. ನಾಯಕಿಯೋ.. ನಿರ್ದೇಶಕಿಯೋ.. ಗಾಯಕಿಯೋ.. ಏನಾದ್ರೂ ಆಗಲಿ, ಇಲ್ಲೇ ಇರುತ್ತೇನೆ ಎನ್ನುತ್ತಾರೆ ಮೇಘನಾ ಗಾಂವ್ಕರ್. ಗುಡ್ ಲಕ್.

 • ೯೦% ಕಾಮಿಡಿ.. ಉಳಿದದ್ದು ಸಂದೇಶ

  a complete comedy ride with strong message is kaalidasa kananda mestru

  ಕಾಳಿದಾಸ ಕನ್ನಡ ಮೇಷ್ಟುç ಚಿತ್ರದ ವಿಷಯ ಬಂದಾಗಲೆಲ್ಲ ಇದು ಕನ್ನಡ ಭಾಷೆ, ಶಿಕ್ಷಣ ವ್ಯವಸ್ಥೆಯ ಹಿನ್ನೆಲೆಯಲ್ಲಿ ಸಿದ್ಧವಾಗಿರುವ ಚಿತ್ರ ಎಂಬ ಒಂದು ಮಾತು ಎಲ್ಲೆಡೆ ಕೇಳಿ ಬರುತ್ತೆ. ಹಾಗಾದರೆ, ಇಡೀ ಸಿನಿಮಾ ಸಂದೇಶವೇ ಇರುತ್ತಾ..? ಮೊದಲೇ ಎಜುಕೇಷನ್ ಸಿಸ್ಟಂ ವಿಷ್ಯ ಅಂತೀರಿ ಅಂದ್ರೆ.. ಹಾಗೇನಿಲ್ಲ. ಇಡೀ ಚಿತ್ರದ ಮೂಲ ದ್ರವ್ಯವೇ ಶಿಕ್ಷಣ ವ್ಯವಸ್ಥೆ, ಕನ್ನಡ ಇಂಗ್ಲಿಷ್ ಪೈಪೋಟಿಯಾಗಿದ್ದರೂ, ೯೦% ಕಾಮಿಡಿ ಚಿತ್ರದಲ್ಲಿದೆ.

  ನಿರ್ದೇಶಕ ಕವಿರಾಜ್ ಹೆಜ್ಜೆ ಹೆಜ್ಜೆಯಲ್ಲೂ ಹಾಸ್ಯ ತುಂಬಿದ್ದಾರೆ. ಒಂದಕ್ಷರ ಇಂಗ್ಲಿಷ್ ಬಾರದ ಕನ್ನಡ ಮೇಷ್ಟಾçಗಿ ಜಗ್ಗೇಶ್, ಇಂಗ್ಲಿಷ್ ಪ್ರೇಮಿಯಾಗಿ, ಗ್ಲಾಮರಸ್ ಚೆಲುವೆಯಾಗಿ, ಬಜಾರಿಯಾಗಿ ಗಂಡನನ್ನು ಹದ್ದುಬಸ್ತಿನಲ್ಲಿಡುವ ಮೇಘನಾ ಗಾಂವ್ಕರ್.. ಅವರಿಬ್ಬರ ದೃಶ್ಯಗಳು ಕಚಗುಳಿಯಿಡುತ್ತಾ ಹೋಗುತ್ತವೆ.

  ಅಂಬಿಕಾ, ನಾಗಾಭರಣ, ತಬಲಾ ನಾಣಿ, ಯತಿರಾಜ್, ಉಷಾ ಭಂಡಾರಿ, ಪಿ.ಡಿ.ಸತೀಶ್, ಬಾಲನಟರಾದ ಓಂ ಆರ್ಯ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಉದಯ್ ಕುಮಾರ್ ಚಿತ್ರದ ನಿರ್ಮಾಪಕರಾಗಿದ್ದು, ಈಗಾಗಲೇ ಗುರುಕಿರಣ್ ನಿರ್ದೇಶನದ ಹಾಡುಗಳು ಪ್ರೇಕ್ಷಕರ ಹೃದಯ ಮುಟ್ಟಿವೆ.

 • Kalidasa Kannada Meshtru: Chitraloka Rating 3.5 /5*

  kaalidasa kananda mestru movie review

  After the romantic comedy, director Kaviraj returns with educative tale in 'Kalidasa Kannada Meshtru', which talks about the sad state of affairs pertaining to the present educational system, which has turned into a profit-making business by the private institutions, the conditions of government run schools and more importantly on the unnecessary pressure being exerted on the innocent children.

  While a lot of movies are made in the past, questioning the present system of education and its irreversible damage being caused on the young minds at an early age, Kaviraj's 'Kalidasa Kannada Meshtru' is another eye opener for the public to look at the burgeoning issue with a great cause of concern.

  Presenting such a serious issue is always a challenge, and the makers of this one has struck a good balance between conveying the message through a decent entertainment for the audience.

  The first half throws light on over-emphasis being given on the English language when it comes to the medium of education with a satirical touch to it coupled with a well performed character of Kalidasa played by Navarasa Nayaka Jaggesh, a Kannada teacher with very little knowledge about English and his escapades when getting his only child admitted into a English private school. And, how Kalidasa stuffers at the hands of his wife played by Meghana Goankar, who is hell-bent upon getting the child admitted into a reputed English school.

  The director has webbed an intelligent script showcasing the educational system in a heart touching drama. Whereas, the conditions of government run schools is another issue dealt brilliantly in this infotainment.

  The second half is the struggle and the pain of this Kannada teacher showcased through personally and professionally. It is a must watch for all the parents and the authorities concerned to realise the grave mistake being committed in the name of the current educational system, to save the dreams and future of our little ones. 

  Navarasa deserves appreciation for his heart touching performances and hope the system changes for the good in the coming days where only marks do not measure the real talents of the students.

 • Meghana's Grandmom Is Kalburgi Mayor 

  meghana goenkar's grandmother

  Sandalwood star Meghana Gaonkar's grandmother Mallamma has been elected as the Mayor of Kalburgi (Gulbarga) city. The election to the posts of Mayor and Deputy Mayor. Mallamma contested on a Congress ticket and won.

  Meghana is excited about her grandmother's success. She posted "I’m so so proud of my grandma, Mallamma. She has won the recent election held & is now the Mayor of Gulbarga. Wohooooo

 • Simpleaag Innond Love Story Audio Released

  Simpleaag Innond Love Story image

  Lahari Audio has not only purchased the audio rights of 'Simpleaag Innond Love Story' for a good amount, but Lahari Velu also released the audio of the film recently. Simpleaag Innond Love Story' stars Praveen and Meghana Gaonkar in lead roles and Suni has himself written the story, screenplay and dialogues apart from directing the film. While 'Simpleaag Ond Love Story' had B J Bharath as the music director, this new film has Bharath and Saikiran as the music directors.

  simple_aag_inondu2.jpg

  The film is being produced by Ashu Bedra.

 • ಕನ್ನಡ ಮೇಷ್ಟçನ್ನು ನೋಡ್ತಾರಂತೆ ಮುಖ್ಯಮಂತ್ರಿ, ಶಿಕ್ಷಣ ಸಚಿವರು..!

  cm and educational minister likely to watch kaalidasa kananda mestru

  ಕಾಳಿದಾಸ ಕನ್ನಡ ಮೇಷ್ಟುç, ತಾತ, ಮಕ್ಕಳು, ಮೊಮ್ಮಕ್ಕಳು.. ಹೀಗೆ 3 ಜನರೇಷನ್‌ನವರು ಒಟ್ಟಿಗೇ ಇಷ್ಟಪಟ್ಟು ಹಿಟ್ ಆಗಿರುವ ಸಿನಿಮಾ. ಕನ್ನಡ ಕಲಿಕೆಯಂತಹ ಗಂಭೀರ ವಿಷಯವನ್ನು ಹಾಸ್ಯಮಯವಾಗಿಯೇ ಹೇಳಿ, ಹೃದಯ ಮುಟ್ಟಿ ಗೆದ್ದಿದ್ದಾರೆ ನಿರ್ದೇಶಕ ಕವಿರಾಜ್. ಹೀಗಾಗಿಯೇ ವೀಕ್ ಡೇಸ್‌ಗಳಲ್ಲೂ ಕಾಳಿದಾಸ ಕನ್ನಡ ಮೇಷ್ಟುç ಹೌಸ್‌ಫುಲ್. ಈಗ ಚಿತ್ರವನ್ನು ಸರ್ಕಾರದ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.

  ಈ ಚಿತ್ರವನ್ನು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರಿಗೆ ತೋರಿಸುವ ಮನಸ್ಸಿತ್ತು. ಆದರೆ ಉಪಚುನಾವಣೆ ಭರಾಟೆಯಲ್ಲಿ ಅದು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಹಾಗೂ ಸುರೇಶ್ ಕುಮಾರ್ ಅವರಿಗೆ ಸಮಯ ಕೇಳಲಾಗಿದೆ. ಶೀಘ್ರದಲ್ಲೇ ಅವರು ಸಿನಿಮಾ ವೀಕ್ಷಿಸಲಿದ್ದಾರೆ ಬಿಜೆಪಿ ಮುಖಂಡರೂ ಆಗಿರುವ ನಟ ಜಗ್ಗೇಶ್.

  ಸಿನಿಮಾ ನೋಡಿದವರು ಮಕ್ಕಳ ಶಿಕ್ಷಣದ ಬಗ್ಗೆ ಯೋಚಿಸುವ ರೀತಿ ಬದಲಾಗಿದೆ ಎನ್ನುವುದೇ ಈ ಸಿನಿಮಾದ ಅತಿದೊಡ್ಡ ಯಶಸ್ಸು ಎನ್ನುತ್ತಾರೆ ನಿರ್ದೇಶಕ ಕವಿರಾಜ್. ಒಟ್ಟಿನಲ್ಲಿ ಇದೆಲ್ಲದರಿಂದ ಹ್ಯಾಪಿಯಾಗಿರೋದು ಜಗ್ಗೇಶ್, ಮೇಘನಾ, ಕವಿರಾಜ್ ಅವರಿಗಿಂತ ಹೆಚ್ಚಾಗಿ ನಿರ್ಮಾಪಕ ಉದಯ್ ಕುಮಾರ್. 

 • ಕನ್ನಡ ಮೇಷ್ಟ್ರುಗೆ ಉಘೇ ಉಘೇ

  kaalidasa kannada mestru image

  ಕಾಳಿದಾಸ ಕನ್ನಡ ಮೇಷ್ಟ್ರು ಇದೇ ವಾರ ರಿಲೀಸ್ ಆಗಿರುವ ಸಿನಿಮಾ, ಪ್ರೇಕ್ಷಕರನ್ನು ನಗಿಸುತ್ತಲೇ ಕಾಡುವಂತೆ ಮಾಡಿದೆ. ಹೊಟ್ಟೆ ತುಂಬಾ ನಗಿಸುತ್ತಾ.. ಹೃದಯಕ್ಕೇ ಕೈ ಹಾಕಿ ಗೆದ್ದಿದ್ದಾರೆ ನಿರ್ದೇಶಕ ಕವಿರಾಜ್. ಹೀಗಾಗಿಯೇ ಚಿತ್ರ ನೋಡಿದವರು.. ನೋಡುತ್ತಾ.. ನಗುತ್ತಾ. ಕಣ್ಣಂಚು ಒದ್ದೆ ಮಾಡಿಕೊಂಡಿದ್ದಾರೆ. ಅಷ್ಟರಮಟ್ಟಿಗೆ ಕಾಳಿದಾಸ ಕನ್ನಡ ಪ್ರೀತಿ ಮೂಡಿಸಿದ್ದಾನೆ.

  ಹೀಗಾಗಿಯೇ ಚಿತ್ರ ನೋಡಿದ ಪ್ರೇಕ್ಷಕರಷ್ಟೇ ಅಲ್ಲ, ಚಿತ್ರರಂಗದ ಹಲವರು ಚಿತ್ರದ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ. ಜಗ್ಗೇಶ್, ಮೇಘನಾ ಗಾಂವ್ಕರ್ ಜೋಡಿಗೆ ಬಹುಪರಾಕ್ ಹೇಳಿದ್ದಾರೆ. ಕವಿರಾಜ್‌ಗೆ ೧೦೦ಕ್ಕೆ ೧೦೦ ಅಂಕ ಕೊಟ್ಟಿದ್ದಾರೆ.

  ಸಾಹಿತಿ ಜಯಂತ ಕಾಯ್ಕಿಣಿ, ನಿರ್ದೇಶಕ ದಿನಕರ್ ತೂಗುದೀಪ, ಕವಿತಾ ಲಂಕೇಶ್, ಪ್ರಿಯಾಂಕಾ ಉಪೇಂದ್ರ, ಅರ್ಚನಾ ಉಡುಪ.. ಹೀಗೆ ಸಿನಿಮಾ ನೋಡಿದ ಸಿನಿಮಾ ಮಂದಿಯೇ ಥ್ರಿಲ್ಲಾಗಿದ್ದಾರೆ. ಎಲ್ಲರಿಗಿಂತ ಹೆಚ್ಚು ಖುಷಿಯಾಗಿರುವುದು ಪ್ರೇಕ್ಷಕ. ಹೀಗಾಗಿ ನಿರ್ಮಾಪಕರೂ ಹ್ಯಾಪಿ.

   

 • ಕರ್ವ-2ಗೆ ಮೊದಲೇ ಕರ್ವ-3

  karva 3 to release before karva 2

  ಕರ್ವ, 2016ರಲ್ಲಿ ರಿಲೀಸ್ ಆಗಿ ಹಿಟ್ ಆಗಿದ್ದ ಸಿನಿಮಾ. ಈಗ ಆ ಚಿತ್ರದ ಸೀಕ್ವೆಲ್ ಕರ್ವ 3 ತೆರೆಗೆ ಬರೋಕೆ ರೆಡಿಯಾಗಿದೆ. ಅರೆ.. ಕರ್ವ 2ನೇ ಬಂದಿಲ್ಲ.. ಕರ್ವ 3ನಾ.. ಎನ್ನಬೇಡಿ. ಕರ್ವ 2ಗಿಂತ ಮೊದಲೇ ಕರ್ವ 3 ಬರುತ್ತಿರುವುದು ಪಕ್ಕಾ. ನಿರ್ಮಾಪಕರು ಒನ್ಸ್ ಎಗೇಯ್ನ್ ಅದೇ ಕೃಷ್ಣ ಚೈತನ್ಯ.

  6-5 = 2, ದಿಯಾ ಚಿತ್ರಗಳನ್ನು ನಿರ್ಮಿಸಿದ್ದ ಕೃಷ್ಣ ಚೈತನ್ಯ, ಈಗ ಕರ್ವ 3ಗೆ ವೇದಿಕೆ ನಿರ್ಮಿಸುತ್ತಿದ್ದಾರೆ. ನಾಯಕರಾಗಿ ತಿಲಕ್ ಮತ್ತು ಮೇಘನಾ ಗಾಂವ್ಕರ್ ಆಯ್ಕೆಯಾಗಿದ್ದಾರೆ.

  ಕರ್ವಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ನವನೀತ್, ಕೃಷ್ಣ ಚೈತನ್ಯ ಜೊತೆಯಲ್ಲಿದ್ದರೂ, ಕರ್ವ 3ಗೆ ನಿರ್ದೇಶಕರು ಹೊಸಬರು. ವಿಶಾಲ್ ಶೇಖರ್. ಕರ್ವ 2ಗೆ ನವನೀತ್ ಅವರೇ ಡೈರೆಕ್ಷನ್ ಮಾಡಲಿದ್ದಾರೆ. ಸದ್ಯಕ್ಕೆ ಕರ್ವ 3 ಎಂದಿದ್ದಾರೆ ಕೃಷ್ಣ ಚೈತನ್ಯ.

  ಚಿತ್ರದ ಕಥೆ ಕೇಳಿಯೇ ಇಂಪ್ರೆಸ್ ಆದೆ. ಈ ಚಿತ್ರದಲ್ಲಿ ಅತಿಥಿ ಪಾತ್ರ ಕೊಟ್ಟಿದ್ದರೂ ಮಾಡುತ್ತಿದೆ. ಕಥೆ ಅಷ್ಟು ಚೆನ್ನಾಗಿದೆ. ಅವರು ನನಗೆ ನಾಯಕಿ ಪಾತ್ರವನ್ನೇ ಕೊಟ್ಟಿದ್ದಾರೆ ಎಂದಿರೋ ಮೇಘನಾ ಚಿತ್ರದಲ್ಲಿ ನಟಿಸೋಕೆ ಉತ್ಸುಕರಾಗಿದ್ದಾರೆ. ಇದೂ ಕೂಡಾ ಹಾರರ್ ಥ್ರಿಲ್ಲರ್.

 • ಕಾಳಿ ಅವತಾರ ನೋಡಿದ್ರೆ, ಮೇಘನಾರನ್ನ ಯಾರೂ ಮದುವೆಯಾಗಲ್ವಂತೆ..!

  kaalidasa kananda mestru

  ಬಜಾರಿ.. ಗಠವಾಣಿ.. ಆಕೆಯ ಅಬ್ಬರದ ಎದುರು ಗಂಡ ವಿಲವಿಲನೆ ಒದ್ದಾಡುತ್ತಾನೆ. ಬಜಾರಿ ಹೆಂಡತಿಯ ಕಾಳಿಯ ಎದುರು ಆತ ದಾಸ. ಇದು ಕಾಳಿದಾಸ ಕನ್ನಡ ಮೇಷ್ಟುç ಕಥೆ. ಇದುವರೆಗೆ ಸಾಫ್ಟ್ & ಸ್ವೀಟ್ ಪಾತ್ರ ಮಾಡುತ್ತಿದ್ದ ಮೇಘನಾ ಗಾಂವ್ಕರ್, ಇಲ್ಲಿ ಬಜಾರಿ. ಇಂಗ್ಲಿಷ್ ವ್ಯಾಮೋಹಿ. ಜಗ್ಗೇಶ್ ಇವರಿಗೆ ತದ್ವಿರುದ್ಧ. ಸಾಧುಪ್ರಾಣಿ.. ಕನ್ನಡ ಪ್ರೇಮಿ.

  ಈ ಚಿತ್ರದಲ್ಲಿ ಮೇಘನಾ ಅವತಾರ ನೋಡಿದರ‍್ಯಾರೂ ಆಕೆಯನ್ನು ಮದುವೆಯಾಗಲ್ಲ. ಅಷ್ಟರಮಟ್ಟಿಗೆ ಭಯ ಹುಟ್ಟಿಸುತ್ತಾರೆ ಎನ್ನುವ ಸರ್ಟಿಫಿಕೇಟು ಕೊಟ್ಟಿರೋದು ಸಂಗೀತ ನಿರ್ದೇಶಕ ಗುರುಕಿರಣ್.

  ಕನ್ನಡ ಮತ್ತು ಇಂಗ್ಲಿಷ್ ಶಿಕ್ಷಣದ ಕಥೆಯನ್ನು ಎಲ್ಲಿಯೂ ಬೋರ್ ಹೊಡೆಯದ ರೀತಿಯಲ್ಲಿ ಮನರಂಜನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ಕವಿರಾಜ್. ನಿರ್ಮಾಪಕ ಉದಯ್ ಕುಮಾರ್, ಕಥೆ ಮತ್ತು ದೃಶ್ಯ ಕೇಳುವ ಪ್ರತಿಯೊಂದನ್ನೂ ಒದಗಿಸಿಕೊಟ್ಟಿದ್ದಾರೆ.

  ಇದು ಕೇವಲ ಸಿನಿಮಾ ಅಲ್ಲ. ನಗು ನಗುತ್ತಾ ಸಿನಿಮಾ ನೋಡುವ ಜನ, ಮನೆಗೆ ಹೋದ ಮೇಲೂ ಚಿತ್ರದ ಬಗ್ಗೆ ಯೋಚಿಸುತ್ತಾರೆ. ಹೀಗಾಗಿಯೇ ಈ ಸಿನಿಮಾ ಮಾಡಿದೆ ಎನ್ನುತ್ತಾರೆ ಉದಯ್ ಕುಮಾರ್. ಚಿತ್ರ ಇದೇ ವಾರ ರಿಲೀಸ್.

 • ಕಾಳಿದಾಸನ ಕಥೆ ಹುಟ್ಟಿದ್ದೇ ಆ ಯುವಕನ ಆತ್ಮಹತ್ಯೆಯಿಂದ..!

  kaalidasa kannada mestru is an inspiraton from a real life incident

  ಕಥೆಗಳು ಎಲ್ಲಿ ಬೇಕಾದರೂ ಹುಟ್ಟಬಹುದು. ಸಣ್ಣದೊಂದು ಕ್ಷಣದಲ್ಲಿ ಒನ್ ಲೈನ್ ಎಳೆ ಕಣ್ಣೆದುರು ಬಂದು ನಿಲ್ಲಬಹುದು. ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದ ಕಥೆಯೂ ಹಾಗೆಯೇ.. ಶಿಕ್ಷಣ ವ್ಯವಸ್ಥೆ, ಸಂಸಾರ, ಕನ್ನಡ ಮೇಷ್ಟ್ರು, ಗಠವಾಣಿ ಹೆಂಡತಿ, ಹುಡುಗಾಟದ ಮಕ್ಕಳು.. ಇವೆಲ್ಲವನ್ನು ಇಟ್ಟುಕೊಂಡು ಒಂದು ಮನರಂಜನಾತ್ಮಕ ಚಿತ್ರ ಕಟ್ಟಿದ್ದಾರೆ ಕವಿರಾಜ್.

  ಈ ಕಥೆ ಹುಟ್ಟಲು ಕಾರಣ ಒಬ್ಬ ಯುವಕನ ಆತ್ಮಹತ್ಯೆ ಮತ್ತು ಆತ ಸಾವಿಗೆ ಮುನ್ನ ಬರೆದಿಟ್ಟಿದ್ದ ಒಂದು ಪತ್ರ ಎಂದರೆ ಅಚ್ಚರಿಯಾದೀತು. ಆದರೆ, ಇದು ಸತ್ಯ. ದುಬೈನಲ್ಲಿದ್ದ ಭಾರತೀಯ ಮೂಲದ ಯುವಕನೊಬ್ಬ ಓದುವ ಒತ್ತಡ ತಡೆದುಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದಿಟ್ಟಿದ್ದ. ಆ ಸುದ್ದಿಯನ್ನು ಓದುವಾಗ ಶಿಕ್ಷಣ ವ್ಯವಸ್ಥೆ ಇಷ್ಟೊಂದು ಒತ್ತಡ ಸೃಷ್ಟಿಸುತ್ತಾ ಎಂದು ಅನಿಸಿಬಿಟ್ಟಿತು. ಆ ಘಟನೆಯೇ ಕಾಳಿದಾಸ ಕನ್ನಡ ಮೇಷ್ಟ್ರುಗೆ ಪ್ರೇರಣೆ ಎಂದಿದ್ದಾರೆ ಕವಿರಾಜ್.

  ಜಗ್ಗೇಶ್ ಇದ್ದಾರೆ ಎಂದಮೇಲೆ ತರಲೆ, ತಮಾಷೆ, ತುಂಟಾಟ ಇರಲೇಬೇಕು. ಅವೆಲ್ಲವನ್ನೂ ಇಟ್ಟುಕೊಂಡೇ ಕಾಳಿದಾಸ ಕನ್ನಡ ಮೇಷ್ಟ್ರು ಕಥೆ ಸಿದ್ಧಪಡಿಸಿದೆವು. ಜಗ್ಗೇಶ್ ಅವರ ಇನ್ಪುಟ್ಸ್ ಕೂಡಾ ಚೆನ್ನಾಗಿತ್ತು ಎಂದಿದ್ದಾರೆ ಕವಿರಾಜ್. ಉದಯ್ ಕುಮಾರ್ ನಿರ್ಮಾಣದ ಚಿತ್ರದಲ್ಲಿ ಜಗ್ಗೇಶ್ ಕನ್ನಡ ಮೇಷ್ಟ್ರು. ಅವರ ಪತ್ನಿ ಕಾಳಿಯಾಗಿ ನಟಿಸಿರುವುದು ಮೇಘನಾ ಗಾಂವ್ಕರ್. ಹೆಂಡತಿಗೆ ಹೆದರುವ ಅಮಾಯಕ.. ಮುಗ್ಧ.. ಪಾಪದ ಮೇಷ್ಟ್ರು ಜಗ್ಗೇಶ್.

 • ಚಾರ್‍ಮಿನಾರ್ ಸುಂದರಿಯ ಫೋಟೋ.. ಅಬ್ಬಾ..!

  meghana goenkar's hot photoshoot

  ಮೇಘನಾ ಗಾಂವ್ಕರ್. ಚಾರ್‍ಮಿನಾರ್ ಸುಂದರಿ ಎಂದೇ ಕರೆಸಿಕೊಂಡವರು. ನಮ್ ಏರಿಯಾಲ್ ಒಂದಿನ, ವಿನಾಯಕ ಗೆಳೆಯರ ಬಳಗ, ತುಘ್ಲಕ್, ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ.. ಹೀಗೆ ಅವರು ನಟಿಸಿದ ಚಿತ್ರಗಳಲ್ಲಿ ಹೋಮ್ಲಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಅಂತಹ ಮೇಘನಾರ ಈ ಫೋಟೋ ಅಭಿಮಾನಿಗಳಿಗೆ ಕಚಗುಳಿಯಿಟ್ಟಿರುವುದು ನಿಜ.

  ಇದು ಯಾವುದೇ ಸಿನಿಮಾದ ಫೋಟೋ ಶೂಟ್ ಅಲ್ಲ. ಮೇಕ್‍ಓವರ್‍ಗೆಂದು ಫೋಟೋಶೂಟ್ ಮಾಡಿಸಿದೆ. ಆಗ ಮೇಕಪ್‍ನವರು ಇಂಥಾದ್ದೊಂದು ಹೊಸ ಕಾಸ್ಟ್ಯೂಮ್ ಇದೆ ನೋಡಿ ಎಂದರು. ಇಷ್ಟವಾಯಿತು. ಈಗ ನೋಡಿದರೆ.. ಎಲ್ಲರಿಗೂ ಇಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ ಮೇಘನಾ.

  ಬಹುಶಃ ಮೇಘನಾ ಅವರನ್ನು ಇಷ್ಟೊಂದು ಗ್ಲಾಮರಸ್ ಆಗಿ ನೋಡದೇ ಇದ್ದ ಕಾರಣಕ್ಕೋ ಏನೋ.. ಫೋಟೋ ಆನ್‍ಲೈನ್‍ನಲ್ಲಿ ವೈರಲ್ ಆಗಿಬಿಟ್ಟಿದೆ.

   

   

   

 • ದಾಸ ಜಗ್ಗೇಶ್ ಪಾಲಿಗೆ ಮೇಘನಾನೇ ಕಾಳಿ..!

  meghana troubles jaggesh as kaali

  ಕಾಳಿದಾಸ ಕನ್ನಡ ಮೇಷ್ಟುç ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ. ಹಾಗಂತ ಚಿತ್ರದಲ್ಲಿ ಜಗ್ಗೇಶ್ ಪಾತ್ರದ ಹೆಸರು ಕಾಳಿದಾಸ ಎಂದಿರಬೇಕು ಎಂದುಕೊAಡ್ರೆ.. ಅಲ್ಲೊಂದು ಟ್ವಿಸ್ಟ್ ಇದೆ. ಸಿನಿಮಾದಲ್ಲಿ ಕಾಳಿ ಮೇಘನಾ ಗಾಂವ್ಕರ್. ದಾಸ ಜಗ್ಗೇಶ್. ಕಾಳಿಯ ದಾಸ ಜಗ್ಗೇಶ್ ಎಂದರೆ, ಮೇಘನಾ ಅವರದ್ದು ಜಗ್ಗೇಶ್ ಪತ್ನಿಯ ಪಾತ್ರ.

  ಮಗನನ್ನು ಕನ್ನಡ ಸ್ಕೂಲಿನಲ್ಲೇ ಓದಿಸಬೇಕು ಎನ್ನುವ ಹಂಬಲದ ಜಗ್ಗೇಶ್, ಇಂಗ್ಲಿಷ್ ಮೀಡಿಯಂನಲ್ಲೇ ಓದಿಸಬೇಕು ಎನ್ನುವ ಮೇಘನಾ. ಜಗ್ಗೇಶ್‌ರನ್ನು ಇಡೀ ಚಿತ್ರದಲ್ಲಿ ಪರಿ ಪರಿಯಾಗಿ ಕಾಡುತ್ತೇನೆ. ಒಂದು ಲೆಕ್ಕದಲ್ಲಿ ಜಗ್ಗೇಶ್ ಅವರಿಗೆ ಆ್ಯಂಟಿ ಹೀರೋ ಎನ್ನುವ ಮೇಘನಾ, ಚಿತ್ರದಲ್ಲಿ ಗ್ಲಾಮರಸ್ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಕವಿರಾಜ್ ನಿರ್ದೇಶನದ ಚಿತ್ರಕ್ಕೆ ಉದಯ್ ಕುಮಾರ್ ನಿರ್ಮಾಪಕ.

 • ಪರಿಮಳಾ ಜಗ್ಗೇಶ್ ಫೇವರಿಟ್ ಲಿಸ್ಟಲ್ಲಿ ಕಾಳಿದಾಸನ ನಂಬರ್ ಎಷ್ಟು..?

  parimala jaggesh likes kaalidasa kannada mestru

  ಕಾಳಿದಾಸ ಕನ್ನಡ ಮೇಷ್ಟುç ಪ್ರೇಕ್ಷಕರ ಹೃದಯಕ್ಕೇ ಲಗ್ಗೆಯಿಟ್ಟು ದಾಖಲೆ ಬರೆಯುತ್ತಿರುವ ಚಿತ್ರ. ಪ್ರೇಕ್ಷಕರಿಗೆ ಇಷ್ಟವಾದ, ಸ್ಯಾಂಡಲ್‌ವುಡ್ ಗಣ್ಯರು ನೋಡಿ ಮೆಚ್ಚಿದ ಚಿತ್ರಕ್ಕೆ ಈಗ ಜಗ್ಗೇಶ್ ಅವರ ಪತ್ನಿ ಒಂದು ಅವಾರ್ಡ್ ಕೊಟ್ಟಿದ್ದಾರೆ.

  ಪರಿಮಳ ಜಗ್ಗೇಶ್ ಅವರಿಗೆ ಅವರ ಪತಿ ಅಭಿನಯಿಸಿದ ಚಿತ್ರಗಳಲ್ಲಿ ಫೇವರಿಟ್ ನಂ.1 ಸರ್ವರ್ ಸೋಮಣ್ಣ. ಆ ಚಿತ್ರದಲ್ಲಿ ಜಗ್ಗೇಶ್ ಸಕಲಕಲಾವಲ್ಲಭನಾಗಿ ಮೆರೆದಿದ್ದರು. ಈಗ ಕಾಳಿದಾಸ ಮೇಷ್ಟುç. ಹಾಗಂತ ನಂ.1 ಸ್ಥಾನ ಈಗಲೂ ಸೋಮಣ್ಣನಿಗೇ ಇದೆ. ಕಾಳಿದಾಸ ಕನ್ನಡ ಮೇಷ್ಟುç ಚಿತ್ರ ಜಗ್ಗೇಶ್ ಅವರ ಅಭಿನಯದಲ್ಲಿ ನನಗೆ ಫೇವರಿಟ್ ನಂ.2 ಎಂದಿದ್ದಾರೆ ಪರಿಮಳ ಜಗ್ಗೇಶ್.

  ಪರಿಮಳ ಜಗ್ಗೇಶ್ ಅವರಿಗೆ ಕಾಳಿದಾಸ ಕನ್ನಡ ಮೇಷ್ಟುç ನಂ.2ನೇ ಇರಬಹುದು. ಜಗ್ಗೇಶ್ ಅವರ ಪಾಲಿಗೆ ಮಾತ್ರ ಇದು ಮೆಚ್ಚುಗೆ ನಂ.1 ಆಗಲೇಬೇಕು. ಅವರಿಗೆ ಬೇರೆ ಆಯ್ಕೆಯಾದರೂ ಎಲ್ಲಿದೆ..? ಮೊದಲೇ ಚಿತ್ರ ಮೆಚ್ಚಿಕೊಂಡಿರುವ ಪರಿಮಳ, ಕಾಳಿಯ ಅವತಾರ ಎತ್ತಿಬಿಟ್ಟರೆ..

 • ಮದುವೆಗೆ ಓಕೆ ಅಂದ್ರು ಕಾಳಿ ಮೇಘನಾ

  meghana gaonkar says okay to next film

  ಕಾಳಿದಾಸ ಕನ್ನಡ ಮೇಷ್ಟುç ಚಿತ್ರದ ಕಾಳಿ ಮೇಘನಾ ಗಾಂವ್ಕರ್ ಮದುವೆಗೆ ಓಕೆ ಎಂದುಬಿಟ್ಟಿದ್ದಾರೆ. ರೀಲಾ.. ರಿಯಲ್ಲಾ.. ಅನ್ನೋ ಪ್ರಶ್ನೆಗೆ ಒನ್ ಲೈನ್ ಉತ್ತರ ರೀಲು. ಮೇಘನಾ ಸಂತೋಷ್ ಎಂಬ ಹೊಸ ನಿರ್ದೇಶಕರ ಜೊತೆ ಹೊಸ ಸಿನಿಮಾಗೆ ಓಕೆ ಎಂದಿದ್ದಾರೆ. ಅದು ಮದುವೆಯದ್ದೇ ಕಥೆ.

  ಮದುವೆ ಮಂಟಪದಲ್ಲಿಯೇ ನಡೆಯುವ ಲವ್ ಸ್ಟೋರಿಯ ಸಿನಿಮಾ. ಒಟ್ಟು 5 ಟ್ರಾö್ಯಕ್ ಲವ್ ಸ್ಟೋರಿ ಇದೆ. ಟೀನೇಜ್, ಮಧ್ಯವಯಸ್ಕರದ್ದು, ಓಲ್ಡ್ ಏಜ್.. ಹೀಗೆ ಒಟ್ಟು 5 ಟ್ರಾö್ಯಕ್ ಲವ್ ಸ್ಟೋರಿ. ಇಡೀ ಕಥೆ ಕಾಮಿಡಿ. ಕನ್‌ಫ್ಯೂಷನ್. ಸಖತ್ ಮಜಾ ಇದೆ ಎಂದಿದ್ದಾರೆ ಮೇಘನಾ ಗಾಂವ್ಕರ್.

 • ಮೇಘನಾ ಕಣ್ಣೀರ್ ಹಾಕ್ತಿದ್ರೆ ಕವಿರಾಜ್ ನಗೋದಾ..

  meghana goenkar in tears while dubbing

  ಮೇಘನಾ ಗಾಂವ್ಕರ್.. ಅದೇ ಚಾರ್‍ಮಿನಾರ್ ಚೆಲುವೆ.. ಗಳಗಳಾಂತಾ ಅಳ್ತಿದ್ದಾರೆ. ಕಣ್ಣಲ್ಲಿ ಧಾರಾಕಾರ ನೀರು.. ಅಲ್ಲಿ ಅವರು ಗೊಳೋ ಅಂತಿದ್ರೆ, ಇಲ್ಲಿ ನಿರ್ದೇಶಕ ಕವಿರಾಜ್ ನಗ್ತಾ ಇದ್ದಾರೆ. 

  ಮೇಘನಾ ಗಾಂವ್ಕರ್ ಗೊಳೋ ಎಂದು ಅತ್ತಿರೋದು ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದ ಡಬ್ಬಿಂಗ್‍ನಲ್ಲಿ. ಜಗ್ಗೇಶ್ ಎದುರು ತಪ್ಪಾಯ್ತು ಎಂದು ಹೇಳಿಕೊಂಡು ಕಣ್ಣೀರು ಹಾಕುವ ವೇಳೆ. ಅಳುವ ದೃಶ್ಯದ ಡಬ್ಬಿಂಗ್‍ಗಾಗಿ ಮೇಘನಾ ಸ್ವತಃ ಕಣ್ಣೀರಿಟ್ಟಿದ್ದರೆ, ಅದನ್ನ ವಿಡಿಯೋ ಮಾಡಿಕೊಂಡು ನಕ್ಕಿದ್ದಾರೆ ನಿರ್ದೇಶಕ ಕವಿರಾಜ್. 

 • ಶಿವಾಜಿ ಸುರತ್ಕಲ್ -2 ಆರಂಭ

  ಶಿವಾಜಿ ಸುರತ್ಕಲ್ -2 ಆರಂಭ

  ಲಾಕ್ ಡೌನ್ ಶುರುವಾಗುವ ಮುನ್ನ ರಿಲೀಸ್ ಆಗಿ ಹಿಟ್ ಆಗಿದ್ದ ಚಿತ್ರ ಶಿವಾಜಿ ಸುರತ್ಕಲ್. ರಮೇಶ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಚಿತ್ರವೀಗ 2ಭಾಗದಲ್ಲಿ ತೆರೆಗೆ ಬರುತ್ತಿದೆ. ಶಿವಾಜಿ ಸುರತ್ಕಲ್ 2 ಚಿತ್ರ ಶುರುವಾಗಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರೋ ಬಂಡೆ ಗಣೇಶ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ.

  ರಮೇಶ್, ರಾಧಿಕಾ ನಾರಾಯಣ್ ಜೊತೆಗೆ ಈ ಬಾರಿ ಮೇಘನಾ ಗಾಂವ್ಕರ್, ವಿನಾಯಕ್ ಜೋಷಿ, ರಾಕೇಶ್ ಸೇರ್ಪಡೆಗೊಂಡಿದ್ದಾರೆ. ಎಲ್ಲರದ್ದೂ ಪೊಲೀಸ್ ಪಾತ್ರಗಳೇ ಎನ್ನುವುದು ವಿಶೇಷ. ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ 2 ಚಿತ್ರೀಕರಣ ಡಿಸೆಂಬರ್‍ನಲ್ಲಿ ಶುರುವಾಗಲಿದೆ.

 • ಸರ್ವರ್ ಸೋಮಣ್ಣ ಬಂದಾಗ ಬಾಲಕಿ.. ಈಗ ಅವರಿಗೇ ನಾಯಕಿ..!

  jaggesh's now heroine was a kid when server somanna

  ನವರಸ ನಾಯಕ ಜಗ್ಗೇಶ್ ಅಭಿನಯದ ಚಿತ್ರ ಸರ್ವರ್ ಸೋಮಣ್ಣ. ೧೯೯೩ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಆ ಸಿನಿಮಾ ರಿಲೀಸ್ ಆದಾಗ ಮೇಘನಾ ಗಾಂವ್ಕರ್ ಪುಟ್ಟ ಹುಡುಗಿ. ೮ ವರ್ಷದ ಬಾಲಕಿ. ವಿಶೇಷವೇನು ಗೊತ್ತೇ.. ಈಗ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟು ಚಿತ್ರದಲ್ಲಿ ಅವರಿಗೇ ನಾಯಕಿ.

  ಈ ಚಿತ್ರದಲ್ಲಿ ಮೇಘನಾ ಗಾಂವ್ಕರ್ ಕಾಳಿ ಎಂಬ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಜಗ್ಗೇಶ್ ಅವರ ಪತ್ನಿ.

  ಎಲ್ಲರನ್ನೂ ನಗಿಸುವ ಜಗ್ಗೇಶ್ ಅವರನ್ನು ಹೆದರಿಸುವ ಕಾಳಿಯ ಪಾತ್ರ ನನ್ನದು. ನಾನು ಈ ಮೊದಲು ಕಾಮಿಡಿ ಚಿತ್ರದಲ್ಲಿ ನಟಿಸಿದ್ದರೂ, ಜಗ್ಗೇಶ್ ಜೊತೆ ನಟಿಸುವಾಗ ಎಕ್ಸೆöÊಟ್‌ಮೆಂಟ್ ಇತ್ತು. ಜಗ್ಗೇಶ್ ಅವರ ಸ್ಟೆöÊಲ್ ಬೇರೆ ಎನ್ನುವ ಮೇಘನಾ ಚಿಕ್ಕವಳಿದ್ದಾಗ ಅವರ ಸರ್ವರ್ ಸೋಮಣ್ಣ ಚಿತ್ರವನ್ನು ನೋಡಿ ಫ್ಯಾನ್ ಆಗಿದ್ದೆ. ಈಗ ಅವರ ಜೊತೆಗೇ ನಟಿಸಿದ್ದೇನೆ. ಅವರು ನಮ್ಮ ಭಾವನೆಗಳನ್ನು ನಾವು ಮಾತನಾಡದೇ ಇದ್ದರೂ ಅರ್ಥ ಮಾಡಿಕೊಳ್ತಾರೆ ಎಂದಿದ್ದಾರೆ ಮೇಘನಾ.

  ಕವಿರಾಜ್ ನಿರ್ದೇಶನದ ಕಾಳಿದಾಸ ಕನ್ನಡ ಮೇಷ್ಟು ಇದೇ ವಾರ ರಿಲೀಸ್ ಆಗುತ್ತಿದೆ.

 • ಹೌಸ್ ಫುಲ್ ಇದ್ದರೂ.. ಕನ್ನಡ ಮೇಷ್ಟುç ಎತ್ತಂಗಡಿ

  kaalidasa kananda mestru shows helplessness

  ಕಾಳಿದಾಸ ಕನ್ನಡ ಮೇಷ್ಟುç ರಿಲೀಸ್ ಆಗಿ ಯಶಸ್ವಿಯಾಗಿ 2ನೇ ವಾರಕ್ಕೆ ಕಾಲಿಟ್ಟಿದೆ. ಸುಮ್ಮನೆ ಅಲ್ಲ.. ಪ್ರೇಕ್ಷಕರು, ಚಿತ್ರರಂಗದವರು ಮೆಚ್ಚಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಆದರೆ.. ಕರ್ನಾಟಕದಲ್ಲಿ ಕನ್ನಡಿಗರೇ ಪರದೇಶಿಗಳಾಗಿ ಕಾಳಿದಾಸ ಕನ್ನಡ ಮೇಷ್ಟುç ಎತ್ತಂಗಡಿಯಾಗಿದೆ. ಈ ವಾರ ಒಟ್ಟು 45 ಸಿನಿಮಾ ರಿಲೀಸ್ ಆಗಿದ್ದವು. ಅವುಗಳಲ್ಲಿ 32 ಪರಭಾಷಾ ಚಿತ್ರಗಳು. ಕಾಳಿದಾಸನನ್ನು ಎತ್ತಿ ಹೊರಗೆ ಹಾಕಿರುವುದು ಈ ಪರಭಾಷಾ ಚಿತ್ರಗಳಿಗಾಗಿ.

  ಸಿನಿಮಾ ಚೆನ್ನಾಗಿಲ್ಲ, ಜನ ಬರ್ತಿಲ್ಲ ಎಂದರೆ ಕೇಳೋಕೆ ನಮಗೂ ಕಷ್ಟ. ಆದರೆ, ಜನ ಮೆಚ್ಚಿ, ಕಲೆಕ್ಷನ್ ಕೂಡಾ ಚೆನ್ನಾಗಿರುವಾಗ ಈ ರೀತಿ ಆದರೆ ಯಾರನ್ನು ಕೇಳೋಣ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಜಗ್ಗೇಶ್. ನಿರ್ದೇಶಕ ಕವಿರಾಜ್ ಅವರದ್ದೂ ಅದೇ ಮಾತು. ಯಾರನ್ನು ಕೇಳೋದು..?

  ಅಂದಹಾಗೆ ಜಗ್ಗೇಶ್ ಹುಟ್ಟಾ ಹೋರಾಟಗಾರ. ಮಾಜಿ ಶಾಸಕ. ನಟ, ನಿರ್ಮಾಪಕರಷ್ಟೇ ಅಲ್ಲ, ರಾಜಕೀಯದಲ್ಲಿಯೂ ಪ್ರಭಾವಿ ನಾಯಕ. ಅವರೇ ಹೀಗೆ ಅಸಹಾಯಕರಾಗಿದ್ದಾರೆ ಎಂದರೆ..

  ಅತ್ತ ನಿರ್ದೇಶಕ ಕವಿರಾಜ್ ಕೂಡಾ ಅಸಹಾಯಕತೆ ತೋಡಿಕೊಳ್ಳುವವರಲ್ಲ. ಕನ್ನಡದ ಹೋರಾಟಗಳಲ್ಲಿ ಏಕಾಂಗಿಯಾಗಿಯೇ ನುಗ್ಗಿದ್ದವರು. ಅವರೂ ಅಸಹಾಯಕರಾಗಿದ್ದಾರೆ ಎಂದರೆ..