` shilpa shetty - chitraloka.com | Kannada Movie News, Reviews | Image

shilpa shetty

 • Shilpa Shetty Judge Dance Dance

  shilpa shetty image

  Bollywood actress Shilpa Shetty has silently judged the hugely popular reality show 'Dance Dance' being aired in Suvarna Entertainment Channel. 'Dance Dance' was launched two weeks back and Ravichandran was the special judge of the programme on the first day. The second week saw actress turned politician Khushboo judging the show. The third week will have Shilpa Shetty judging the show.

  'Dance Dance' is being hosted by Akul Balaji and the programme have three judges including Chinni Prakash, Shruthi Hariharan and Sharmila Mandre.

 • ಗರ್ಭಿಣಿಯಾಗದೇ ಅಮ್ಮನಾದ ಶಿಲ್ಪಾ ಶೆಟ್ಟಿ..!

  shilpa shetty image

  ಶಿಲ್ಪಾ ಶೆಟ್ಟಿ ಮತ್ತೆ ಅಮ್ಮನಾಗಿದ್ದಾರೆ. 2ನೇ ಮಗುವಿಗೆ ತಾಯಿಯಾಗಿದ್ದಾರೆ. ಈ ಬಾರಿ ಅವರಿಗೆ ಹೆಣ್ಣು ಮಗು. ಅರೆ.. ಗರ್ಭಿಣಿಯಾದ ಸುದ್ದಿಯೇ ಇರಲಿಲ್ವಲ್ಲಾ ಎನ್ನಬೇಡಿ. ಅವರು ತಾಯಿಯಾಗಿರುವುದು ಸತ್ಯ.

  ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರಾ ದಂಪತಿ ಮಡಿಲಿಗೆ ಈಗ ಹೆಣ್ಣು ಮಗು ಬಂದಿದೆ. 2009ರಲ್ಲಿ ವಿವಾಹವಾಗಿದ್ದ ಈ ಜೋಡಿಗೆ ಈಗಾಗಲೇ ವಿಯಾನ್ ಎಂಬ  8 ವರ್ಷದ ಮಗನಿದ್ದಾನೆ.

  `ನಮ್ಮ ಪ್ರಾರ್ಥನೆಗೆ ಅಚ್ಚರಿ ರೀತಿಯ ಫಲ ಸಿಕ್ಕಿದೆ. ಮನೆಗೆ ಮುದ್ದು ದೇವತೆ ಸಮಿಶಾ ಶೆಟ್ಟಿ ಕುಂದ್ರಾ ಆಗಮನವಾಗಿರುವ ವಿಷಯವನ್ನು ನಿಮ್ಮೆಲ್ಲರ ಜತೆಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಫೆ.15, 2020ಕ್ಕೆ ಜೂನಿಯರ್ ಶಿಲ್ಪಾ ಶೆಟ್ಟಿ ನಮ್ಮ ಮನೆಗೆ ಬಂದಿದ್ದಾಳೆ' ಎಂದಿರುವ ಶಿಲ್ಪಾ ಶೆಟ್ಟಿ, ಮಗುವಿನ ಹೆಸರನ್ನೂ ಬಹಿರಂಗಪಡಿಸಿದ್ದಾರೆ.

  ಅಂದಹಾಗೆ ಸಮಿಶಾ ಅಂದ್ರೆ ಸಂಸ್ಕೃತದಲ್ಲಿ `ಸ' ಎಂದರೆ ಪಡೆದುಕೊಳ್ಳುವುದು ಎಂದರ್ಥ. ರಷ್ಯನ್ ಭಾಷೆಯಲ್ಲಿ `ಮಿಶಾ' ಎಂದರೆ ದೇವರ ರೂಪ. ಲಕ್ಷ್ಮೀಯ ಅವತಾರ' ಎಂದರ್ಥವಂತೆ. ವಿಶೇಷ ಅಂದ್ರೆ ಈ ಮಗುವನ್ನು ಅವರು ಪಡೆದಿರುವುದು ಬಾಡಿಗೆ ತಾಯ್ತನದ ಮೂಲಕ. ಹೀಗಾಗಿ ಎಲ್ಲರಿಗೂ ಅಚ್ಚರಿಯಾಗಿದೆ.. ಅಷ್ಟೆ..

 • ಬ್ಲೂಫಿಲಂ ದಂಧೆ : ಶಿಲ್ಪಾಶೆಟ್ಟಿ ಪತಿ ಅರೆಸ್ಟ್

  ಬ್ಲೂಫಿಲಂ ದಂಧೆ : ಶಿಲ್ಪಾಶೆಟ್ಟಿ ಪತಿ ಅರೆಸ್ಟ್

  ಬಾಲಿವುಡ್ ನಟಿ ಶಿಲ್ಪಾಶೆಟ್ಟಿಯವರ ಪತಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬ್ಲೂಫಿಲ್ಮ್ ಚಿತ್ರೀಕರಣ ಮತ್ತು ಮಾರಾಟದ ಕೇಸ್‍ನಲ್ಲಿ ರಾಜ್ ಕುಂದ್ರಾ ಅರೆಸ್ಟ್ ಆಗಿದ್ದಾರೆ.

  ರಾಜ್ ಕುಂದ್ರಾ ಕೆಲವು ಮಾಡೆಲ್‍ಗಳನ್ನು ಸಂಪರ್ಕಿಸುತ್ತಿದ್ದರು. ನಂತರ ಅವರ ಬ್ಲೂಫಿಲ್ಮ್ ಚಿತ್ರೀಕರಿಸುತ್ತಿದ್ದರು. ಅಂತಹ ವಿಡಿಯೋಗಳನ್ನು ಮೊಬೈಲ್ ಆ್ಯಪ್`ಗಳಿಗೆ ಮಾರಾಟ ಮಾಡುತ್ತಿದ್ದರು. ಇಂತಹ ವಿಡಿಯೋಗಳಿಗಾಗಿಯೇ ಪ್ರತ್ಯೇಕ ಗ್ರಾಹಕರಿದ್ದಾರೆ. ಹಣ ಕೊಟ್ಟು ಅಂತಹ ಆ್ಯಪ್`ಗಳಲ್ಲಿ ವಿಡಿಯೋ ನೋಡುತ್ತಾರೆ. ಇಂತಾದ್ದೊಂದು ದೊಡ್ಡ ದಂಧೆಯೇ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ. ಅಂತಹ ಜಾಲದಲ್ಲಿದ್ದ ರಾಜ್ ಕುಂದ್ರಾ, ಈ ದಂಧೆಯನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದರು ಎನ್ನುವುದು ಅವರ ಮೇಲಿರುವ ಆರೋಪ. ಸಾಕ್ಷ್ಯಗಳಿವೆ ಎಂದಿದ್ದಾರೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು.

  ರಾಜ್ ಕುಂದ್ರಾ ಉದ್ಯಮಿ. ರಾಜಸ್ಥಾನ್ ಐಪಿಎಲ್ ತಂಡದ ಫ್ರಾಂಚೈಸಿಯೂ ಆಗಿದ್ದ ಅವರ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪವೂ ಕೇಳಿ ಬಂದಿತ್ತು. ಐಪಿಎಲ್‍ನಿಂದಲೇ ಬ್ಯಾನ್ ಆಗಿದ್ದ ಕುಂದ್ರಾ, ಸುಪ್ರೀಂಕೋರ್ಟ್‍ನಲ್ಲಿ ಕೇಸು ಗೆದ್ದಿದ್ದರು. ಇತ್ತೀಚೆಗೆ ವಿಚ್ಛೇದಿತ ಪತ್ನಿ ರಾಜ್ ಕುಂದ್ರಾ ಮೇಲೆ ಆರೋಪ ಮಾಡಿದ್ದರು. ಹಲವು ವಿವಾದಗಳಲ್ಲಿ ಸಿಲುಕಿದ್ದ ಕುಂದ್ರಾ, ಈಗ ಬ್ಲೂಫಿಲ್ಮ್ ದಂಧೆಯಲ್ಲಿ ಅರೆಸ್ಟ್ ಆಗಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery