` devaraj - chitraloka.com | Kannada Movie News, Reviews | Image

devaraj

  • ದರ್ಶನ್‍ಗೆ ಅಜ್ಜನಾಗಲು ದೇವರಾಜ್ ಒಪ್ಪಿದ್ದು ಹೇಗೆ..?

    devraj as darshan's grand father in tarak

    ತಾರಕ್‍ನಲ್ಲಿ ಡೈನಮಿಕ್ ಸ್ಟಾರ್ ದೇವರಾಜ್ ದರ್ಶನ್‍ಗೆ ಅಜ್ಜನಾಗಿ ನಟಿಸುತ್ತಿದ್ದಾರೆ. ದೇವರಾಜ್ ಅವರ ಅನುಭವಕ್ಕೆ ಹೋಲಿಸಿದರೆ, ಆ ಪಾತ್ರ ಅವರಿಗೆ ಸವಾಲು ಎನಿಸಲು ಸಾಧ್ಯವಿಲ್ಲ. ಅದರಲ್ಲೂ ದೇವರಾಜ್ ಮೂಲತಃ ರಂಗಭೂಮಿ ಕಲಾವಿದರು. ಹೀಗಿದ್ದರೂ ದೇವರಾಜ್ ಪಾತ್ರದ ವಿವರ ಹೇಳುತ್ತಿದ್ದಂತೆ ಒಪ್ಪಿಕೊಳ್ಳಲಿಲ್ಲವಂತೆ.

    ಆದರೆ, ದೇವರಾಜ್‍ಗೆ ಪಾತ್ರ ಮತ್ತು ಕಥೆ ಇಷ್ಟವಾಗಿತ್ತು. ಹೀಗಾಗಿ ಚಿತ್ರದಲ್ಲಿ ನಟಿಸುವ ಮುನ್ನ ಅವರೊಂದು ಷರತ್ತು ಹಾಕಿದರು. ಏನೆಂದರೆ, ಚಿತ್ರದಲ್ಲಿ ತಾನು ಹೇಗೆ ಕಾಣುತ್ತೇನೆ ಅನ್ನೋದನ್ನು ಮೇಕಪ್ ಸಮೇತ ಟೆಸ್ಟ್ ಮಾಡಬೇಕು. ಅದನ್ನು ನೋಡಿ ಅದು ಇಷ್ಟವಾದರೆ ಮಾತ್ರ ನಾನು ನಟಿಸುತ್ತೇನೆ ಎಂದರು. 

    ಕೊನೆಗೆ ತಾರಕ್‍ನಲ್ಲಿನ ಅವರ ಪಾತ್ರದ ಸಂಪೂರ್ಣ ಲುಕ್‍ನ್ನು ನೋಡಿ, ಸಮಾಧಾನವಾದ ಮೇಲೇ ದೇವರಾಜ್ ನಟಿಸಲು ಒಪ್ಪಿಕೊಂಡಿದ್ದು. ಈಗ ತಾರಕ್ ರಿಲೀಸಾಗುತ್ತಿದೆ. ನಿರ್ದೇಶಕ ಮಿಲನ ಪ್ರಕಾಶ್ ಆ ಅನುಭವವನ್ನು ಹಂಚಿಕೊಂಡಿದ್ದಾರೆ.

     

  • 'Hebbet Ramakka' To Release On April 27th

    hebbet ramakka to release tomorrow

    Tara-Devaraj starrer 'Hebbet Ramakka' is all set to be released on the 27th of April across Karnataka.

    'Hebbet Ramakka' is being written and directed by N R Nanjundegowda and produced by Puttaraju. Poornachandra Tejaswi is the music composer of the film. 

    The film stars Tara, Devaraj, Hanumanthe Gowda and others in prominent roles.

  • 3 ಗಂಟೆ 30 ನಿಮಿಷ 30 ಸೆಕೆಂಡು, ದೇವರಾಜ್‍ಗೆ ಕಣ್ಣು ಕಾಣಲ್ಲ

    3 gante movie image

    ಕನ್ನಡದಲ್ಲಿ ಅಂಧರ ಪಾತ್ರಧಾರಿಗಳು ಹೆಚ್ಚುತ್ತಿದ್ದಾರೆ. ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ಕವಚ ಚಿತ್ರದಲ್ಲಿ ಅಂಧರಾಗುತ್ತಿದ್ದರೆ, ಸಂಹಾರದಲ್ಲಿ ಚಿರಂಜೀವಿ ಸರ್ಜಾ ಕುರುಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಇವರಿಬ್ಬರಿಗಿಂತ ಅಂಧನಾಗಿ ಮೊದಲು ಬರುತ್ತಿರುವುದು ಡೈನಮಿಕ್ ಸ್ಟಾರ್ ದೇವರಾಜ್.

    3 ಗಂಟೆ, 30 ದಿನ, 30 ಸೆಕೆಂಡ್ ಚಿತ್ರದಲ್ಲಿ ದೇವರಾಜ್ ಅವರದ್ದು ಅಂಧನ ಪಾತ್ರ. ಇಡೀ ಚಿತ್ರದ ಹೈಲೈಟೇ ಅದು. ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ಕಣ್ಣು ಕಳೆದುಕೊಂಡಿರುವ ಸೈನಿಕನ ಪಾತ್ರ ದೇವರಾಜ್ ಅವರದ್ದು. ಇಡೀ ಚಿತ್ರ ಟೇಕಾಫ್ ಆಗುವುದೇ ದೇವರಾಜ್ ಪಾತ್ರದಿಂದ ಎನ್ನುತ್ತಾರೆ ನಿರ್ದೇಶಕ ಮಧುಸೂದನ್. ಚಿತ್ರವನ್ನು ಭರ್ಜರಿಯಾಗಿ ತೆರೆಗೆ ತರುತ್ತಿದ್ದಾರೆ ನಿರ್ಮಾಪಕ ಚಂದ್ರಶೇಖರ್ ಆರ್ ಪದ್ಮಸಾಲಿ.

    ಅಂದಹಾಗೆ ದೇವರಾಜ್‍ಗೆ ಅಂಧನ ಪಾತ್ರ ಹೊಸದಲ್ಲ. ಈ ಹಿಂದೆ ಎಸ್‍ಪಿ ಬಾರ್ಗವಿ ಚಿತ್ರದಲ್ಲಿ ಇರುಳು ಕುರುಡನ ಪಾತ್ರದಲ್ಲಿ ಮಿಂಚಿದ್ದರು. ಇತ್ತೀಚೆಗೆ ವಿಭಿನ್ನ ಪಾತ್ರಗಳಿಂದ ಅಭಿನಯದ ವೈಭವ ಪರಿಚಯಿಸುತ್ತಿರುವ ದೇವರಾಜ್‍ಗೆ, 3 ಗಂಟೆ, 30 ದಿನ, ಸೆಕೆಂಡಿನಲ್ಲೂ ವಿಶೇಷ ಪಾತ್ರ ದಕ್ಕಿದೆ.

  • Devaraj Joins Run Anthony

    run anthony image

    Veteran actor Devaraj has joined the cast of Run Anthony, the second film of Vinay Rajkumar. Devaraj participated in the shooting from a few days ago and from the looks of the few photos that have been released of the shooting it looks like he plays an investigator.

    But it is all speculation as of now. It is the home production of the Rajkumar family under the Vajreshwari Combines and directed by first time director Raghu Shastri. Raghu was an assistant to Bollywood director Anurag Kashyap. Since the shooting of the film began a few weeks ago, the posters of the film have been in big news. Every few days a new poster which had the class of Hollywood film posters was released and it has kept the audience hooked in anticipation about the film. 

  • Devaraj To Act In Tagaru

    devaraj to act in tagaru

    After a gap of nearly 20 years Devaraj has acted with Shivarajakumar in his latest film 'Tagaru'. The last time, the two were seen together was in 'Samara' directed by Chi Gurudutt. Now Shivarajakumar and Devaraj will be acting together in 'Tagaru' after almost two years.

    'Tagaru' stars Shivarajakumar, Dhananjay, Vasishta Simha, Manvitha Harish, Bhavana Menon, Devaraj and others in prominent roles. 'Tagaru - Maiyyalla Pogaru' is being written and directed by Suri, while K P Srikanth is producing the film. The second schedule of the film is already complete.

    Mahendra Simha is the cinematographer, while Charan Raj of 'Godhi Banna Sadharana Maikattu' is the music director.

    Tagaru Gallery - View

    Related Articles :-

    Bhavana Menon Joins Tagaru

    Shivanna Gets Teddy Hairstyle For Tagaru 

    Tagaru Action Packed First Schedule Completed

    Tagaru Movie Team Donates 50,000 To Riot Victim

    Manvitha's Tapanguchi For Tagaru

    Suri Cuts Dhananjay's Hair For Tagaru - Exclusive

    Suhasini To Play Shivanna's Sister In Tagaru

    Tagaru Promo on September 23

    The First Look Of Tagaru Is Here

    Dhananjay To Play A Villain In Tagaru

    Manvita Harish is Heroine for Tagaru

    Tagaru To Be Launched On August 21st

  • Hebbet Ramakka Movie Review - Chitraloka Rating - 4/5

    hebbet ramakka is an eye opener

    Hebbet Ramakka which won the National Award for the best Kannada film this year is a film that is an eye-opener for many reasons. It is definitely one of the best films in recent times. With excellent acting by the main cast including Tara Anuradha and Devaraj, the film warms your heart with its inspiring story and a close-to-reality narrative by director Nanjunde Gowda. For a change, Nanjunde Gowda has made a film about politics rather than the children's films he is famous for. He has managed to deliver a film that will touch your heart. 

    The story is about a family in a village. Kallesh played by Devaraj is a contractor who manages to get small government contracts. But he is always in trouble because of money issues. He is hardly able to make ends meet. At home is his wife Ramakka who is not only managing the household but is also the one who is doing the agriculture on the family land. Kallesh never helps her there. By a strange twist of fate, Ramakka has to contest the panchayat election and ends up as the president due to in-fighting among the other party members. Everyone thinks they can handle Ramakka for their own benefit including the party members, opposition and least but not the least Kallesh himself. 

    However women empowerment turns out to be something different altogether. How does Ramakka do good to the people and become a role model despite being a 'hebbet' or illitirate forms the rest of the story. There are some funny episodes, some teary ones, some surprising ones and some shocking ones. But all of them are close to reality. You will not find anything filmy in this film. Everything is the hardcore reality of village life and most importantly the politics at the village and panchayat level. Such films are very rare. We hardly get to see even in news, reports about panchayat level politics. This film shows it in an entertaining way. 

    Nanjunde Gowda bats for women in politics. While it seems like it is funny to have reservation in the beginning the film shows why it is important. Tara makes an impressive show of acting as Ramakka. From being a mild mannered village woman to being the panchayat president her talent is on display. This is one of her best performances in her career. Another career defining performance is seen by Devaraj. You would not have seen him in such a role ever. Though it is the title role for Ramakka (Tara), Devaraj also has a big meaty role that needs his acting abilities. 

    Nanjunde Gowda has chosen a very good subject and makes an impressive film. The film is also technically good with good camerawork and two good songs. The dialogues by Siddaramaiah is impressive. It is a kind of film that defines the reality of the society.  

    Chitraloka Rating - 4/5

     

  • Preethiyalli Sahaja Releasing During Valentine Day

    preethiyalli sahaja image

    On the eve of Valentine day director Rathnaja is releasing his love based movie Preethiyalli Sahaja on February 12th.  Preethiyalli Sahaja is making a comeback vehicle for director Ratnaja who is making this movie after five years. His last film was 'Premism'. 

    Suryaa and Aqsa Bhatt are in lead role while Raghu Mukherjee, Devaraj, Suhasini and Avinash play prominent roles in the film.

    Raviraj has composed the music and there are seven melody songs in the movie.

    Also See

    preethiyalli_sahaja4a.gif

    Kashmiri Beauty Aqsa in Full Demand

    Preethiyalli Sahaja Audio and Website Released

    Kashmiri Beauty For Preethiyalli Sahaja

    Ratnaja Back with Preethiyalli Sahaja

     

  • ಗ್ರಾಮ ಪಂಚಾಯ್ತಿ ಸದಸ್ಯೆ ಹೆಬ್ಬೆಟ್ ರಾಮಕ್ಕನ ಕಥೆ

    tarakka becomes hebbet ramakka

    ಹೆಬ್ಬೆಟ್ ರಾಮಕ್ಕ ಚಿತ್ರದ ಕಥೆ ಏನು.? ಹೆಸರೇ ಸೂಚಿಸಿರುವ ರಾಮಕ್ಕ ಅರ್ಥಾತ್ ತಾರಾ ಅನಕ್ಷರಸ್ತೆ. ಮೀಸಲಾತಿಯ ಪರಿಣಾಮದಿಂದ ಗ್ರಾಮ ಪಂಚಾಯ್ತಿ ಸದಸ್ಯೆಯಾಗುವ ರಾಮಕ್ಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆಯೂ ಆಗುತ್ತಾಳೆ. ಅನಕ್ಷರಸ್ತೆ ಎಂಬ ಕಾರಣದಿಂದಲೇ ಎದುರಿಸುವ ಸಮಸ್ಯೆಗಳು, ಸವಾಲುಗಳು ಚಿತ್ರದ ಕಥೆ.

    ಹಳ್ಳಿ ಹಳ್ಳಿಗಳ ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ರಾಜಕೀಯವನ್ನು ಹಸಿಹಸಿಯಾಗಿ ಕಟ್ಟಿ ಕೊಡಲಾಗಿದೆ. ಎಲೆಕ್ಷನ್ ಹೊತ್ತಿನಲ್ಲೇ ಬಂದಿರುವ ಸಿನಿಮಾ, ಜನರನ್ನು ಚಿಂತನೆಗೆ ದೂಡಿದರೆ, ಅದು ಚಿತ್ರಕ್ಕೆ ಸಿಗುವ ಅತಿ ದೊಡ್ಡ ಯಶಸ್ಸು. ಸಿಕ್ಕಿರುವ ರಾಷ್ಟ್ರಪ್ರಶಸ್ತಿಗಿಂತ ದೊಡ್ಡ ಯಶಸ್ಸು ಆ ಮೂಲಕ ಸಿಗುವುದರಲ್ಲಿ ಅನುಮಾನವಿಲ್ಲ.

    ತಾರಾ ಮತ್ತು ದೇವರಾಜ್ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ನಿರ್ದೇಶಕ ನಂಜುಂಡೇಗೌಡರ ಶ್ರಮಕ್ಕೆ ರಾಷ್ಟ್ರಪ್ರಶಸ್ತಿಗಳಲ್ಲಿ ಪುರಸ್ಕಾರ ಸಿಕ್ಕಿದೆ. ಹಾಗೆ ಪ್ರಶಸ್ತಿ ಪಡೆದ ಚಿತ್ರವನ್ನ ರಾಜ್ಯಾದ್ಯಂತ ತೆರೆಗೆ ತರುತ್ತಿರುವುದು ನಿರ್ಮಾಪಕ ಮತ್ತು ವಿತರಕ ಜಾಕ್‍ಮಂಜು.

  • ಡೈನಮಿಕ್ ಸ್ಟಾರ್ ಗೆ ಯಜಮಾನ ಕೊಟ್ಟ ಅಚ್ಚರಿ..!

    darshan surprises devaraj

    ಡೈನಮಿಕ್ ಸ್ಟಾರ್ ದೇವರಾಜ್‍ಗೆ ಗುರುವಾರ ಹುಟ್ಟುಹಬ್ಬ. ಅದೂ 65ನೇ ವರ್ಷದ ಹುಟ್ಟುಹಬ್ಬ. ಪ್ರತೀ ವರ್ಷ ಹುಟ್ಟುಹಬ್ಬವನ್ನು ಮನೆ ಮಕ್ಕಳೊಂದಿಗೆ ಆಚರಿಸಿಕೊಳ್ಳುತ್ತಿದ್ದ ದೇವರಾಜ್, ಈ ಬಾರಿ ಶೂಟಿಂಗ್‍ನಲ್ಲಿ ಬ್ಯುಸಿಯಾಗಿಬಿಟ್ಟಿದ್ದರು. ಯಜಮಾನ ಚಿತ್ರದ ಶೂಟಿಂಗ್ ಸೆಟ್‍ನಲ್ಲಿ ಬ್ಯುಸಿಯಾಗಿದ್ದ ದೇವರಾಜ್‍ಗೆ ಅಚ್ಚರಿಯೆಂಬಂತೆ ಕೇಕ್ ಬಂತು. ದರ್ಶನ್ ಬಂದ್ರು. ಇಡೀ ಚಿತ್ರತಂಡ ಬಂತು. 

    ದೇವರಾಜ್ ಅವರ ಹುಟ್ಟುಹಬ್ಬವನ್ನು ದರ್ಶನ್ ಸೆಲಬ್ರೇಟ್ ಮಾಡಿದ್ರು. ದೇವರಾಜ್ ಅವರಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ರು. ದೇವರಾಜ್ ಅವರಿಗೆ ಪ್ರಜ್ವಲ್ ದೇವರಾಜ್ ಸೇರಿದಂತೆ ಚಿತ್ರರಂಗದ ಹಲವು ತಾರೆಯರು ಶುಭ ಹಾರೈಸಿದ್ದಾರೆ.

  • ತಾರಕ್ ಚಿತ್ರದ ಹೀರೋ ನಾನಲ್ಲ - ದರ್ಶನ್

    i am not tarak hero

    ತಾರಕ್, ದರ್ಶನ್ ಅಭಿನಯದ 49ನೇ ಚಿತ್ರ. ಚಿತ್ರದ ಹೀರೋ ಅವರೇ. ಹೀಗಿರುವಾಗ ಚಿತ್ರದ ಹೀರೋ ನಾನಲ್ಲ  ಎಂದು ದರ್ಶನ್ ಅವರೇ ಹೇಳಿದರೆ ಏನಪ್ಪಾ ಕಥೆ ಅಂತಾ ತಲೆಗೆ ಹುಳ ಬಿಟ್ಕೋಬೇಡಿ. ದರ್ಶನ್ ಪ್ರಕಾರ ಚಿತ್ರದ ಹೀರೋ ಡೈನಮಿಕ್ ಸ್ಟಾರ್ ದೇವರಾಜ್. 

    ತಾರಕ್ ಚಿತ್ರದ ಆಡಿಯೋ ಬಿಡುಗಡೆ ವೇಳೆ, ದೇವರಾಜ್ ಅವರ ಪ್ರೀತಿ ಮತ್ತು ಪಾತ್ರವನ್ನು ಪ್ರೀತಿಯಿಂದ ಮೆಚ್ಚಿಕೊಂಡ ದರ್ಶನ್, ದೇವರಾಜ್ ಅವರನ್ನು ಹೊಗಳಿದರು. ದೇವರಾಜ್ ತಮಗಿಂತ ಎತ್ತರದ ಸ್ಥಾನದಲ್ಲಿದ್ಧಾರೆ ಎಂದು ಹೇಳಿ ಪ್ರೀತಿಯಿಂದ ಧನ್ಯವಾದ ಅರ್ಪಿಸಿದರು ದರ್ಶನ್.

    ಚಿತ್ರದಲ್ಲಿ ದೇವರಾಜ್ ದರ್ಶನ್ ತಂದೆಯ ಪಾತ್ರ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಫುಟ್​ಬಾಲ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಮಗೆ ಈ ಚಿತ್ರದಲ್ಲಿ ಹಳೆಯ ದರ್ಶನ್ ಸಿಕ್ಕೋದಿಲ್ಲ. ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶಿಸಿರುವ ನಟ ದರ್ಶನ್ ಅವರನ್ನಷ್ಟೇ ನೋಡಬಹುದು ಎನ್ನುವ ಮೂಲಕ ಚಿತ್ರದ ಬಗೆಗಿನ ಕುತೂಹಲವನ್ನೂ ಹೆಚ್ಚಿಸಿದ್ರು ದರ್ಶನ್.

  • ತಾರಕ್‍ನಲ್ಲಿ ದೇವರಾಜ್ ಅವರೇ ಹೀರೋ - ದರ್ಶನ್

    devraj is real hero says darshan

    ತಾರಕ್ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀರೋ ಆಗಿ ನಟಿಸಿರುವ ಸಿನಿಮಾ. ಆದರೆ, ದರ್ಶನ್ ಹೇಳೋದೇ ಬೇರೆ. ಒಂದ್ಸಲ ಸಿನಿಮಾ ನೋಡಿ. ನಿಮಗೇ ಗೊತ್ತಾಗುತ್ತೆ. ಸಿನಿಮಾದ ರಿಯಲ್ ಹೀರೋ ಡೈನಮಿಕ್ ಸ್ಟಾರ್ ದೇವರಾಜ್ ಅಂತಾರೆ ದರ್ಶನ್.

    ದೇವರಾಜ್‍ರಂತ ಹಿರಿಯ ಕಲಾವಿದ 80 ವರ್ಷದ ಅಜ್ಜನ ಪಾತ್ರಕ್ಕೆ ಒಪ್ಪಿಕೊಂಡಿದ್ದೇ ದರ್ಶನ್‍ಗೆ ಖುಷಿ ಕೊಟ್ಟಿದೆ. ತಾತನ ಗೆಟಪ್‍ನಲ್ಲಿ ದೇವರಾಜ್ ಅವರ ನಟನೆ ನೋಡಿದರೆ, ಚಿತ್ರದ ಹೀರೋಗಿರಿಯನ್ನ ದೇವರಾಜ್‍ಗೇ ಕೊಡ್ತಾರೆ ಅನ್ನೋದು ದರ್ಶನ್ ಮಾತು.

    ಸ್ವತಃ ಚಿತ್ರದ ನಾಯಕನಾಗಿದ್ದರೂ, ಚಿತ್ರದ ಹಿರಿಯ ಕಲಾವಿದರ ಬಗ್ಗೆ ದರ್ಶನ್ ಆಡಿರುವ ಮಾತುಗಳು, ದರ್ಶನ್ ಅವರ ವ್ಯಕ್ತಿತ್ವವನ್ನು ಎತ್ತಿಹಿಡಿಯುತ್ತಿವೆ. 

  • ದರ್ಶನ್ ಹೇಗೆ..? - ದೇವರಾಜ್ ಕೊಟ್ಟ ಸರ್ಟಿಫಿಕೇಟ್ ಏನು..?

    darshan gets certificate from devaraj

    `ನಾನು ದರ್ಶನ್ ಜೊತೆ ಒಂದಲ್ಲ.. 4 ಸಿನಿಮಾಗಳಲ್ಲಿ ನಟಿಸಿದ್ದೇನೆ. ದರ್ಶನ್ ಬೇರೆಯವರ ಹಾಗಲ್ಲ. ಸಾಮಾನ್ಯವಾಗಿ ಬೇರೆ ಚಿತ್ರಗಳಲ್ಲಿ ಪೋಷಕ ನಟರ ರೋಲ್‍ಗಳನ್ನು ಎಡಿಟ್ ಮಾಡಿಬಿಡುತ್ತಾರೆ. ಹೆಚ್ಚು ಕಾಣಿಸಿಕೊಳ್ಳೋಕೇ ಬಿಡಲ್ಲ. ಆದರೆ ದರ್ಶನ್ ಹಾಗಲ್ಲ' ಯಜಮಾನನ ಸುದ್ದಿಗೋಷ್ಠಿಯಲ್ಲಿ ದರ್ಶನ್ ಬಗ್ಗೆ ಮಾತನಾಡುತ್ತಾ ಹೋದ ದೇವರಾಜ್, ದರ್ಶನ್‍ರ ಇನ್ನೊಂದು ಮುಖ ಪರಿಚಯ ಮಾಡಿಸಿದ್ರು.

    ದರ್ಶನ್, ಚಿತ್ರರಂಗಕ್ಕೆ ದೊಡ್ಡ ಆಲದ ಮರ ಇದ್ದಹಾಗೆ. ಗುಣ, ವ್ಯಕ್ತಿತ್ವ ತುಂಬಾ ಡಿಫರೆಂಟ್. ಆಲದ ಮರ ಹಲವರಿಗೆ ಆಸರೆ ನೀಡುವಂತೆ, ದರ್ಶನ್ ಕೂಡಾ ಹಲವರನ್ನು ಪೋಷಿಸುತ್ತಾ ಬೆಳೆಯುತ್ತಿದ್ದಾರೆ ಅಂತಾರೆ ದೇವರಾಜ್.

  • ದೇವರಾಜ್`ಗೆ ರಾಜ್ಯೋತ್ಸವ ಪ್ರಶಸ್ತಿ

    ದೇವರಾಜ್`ಗೆ ರಾಜ್ಯೋತ್ಸವ ಪ್ರಶಸ್ತಿ

    ಚಿತ್ರರಂಗದ ಹಿರಿಯ ನಟ ದೇವರಾಜ್ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. 66ನೇ ರಾಜ್ಯೋತ್ಸವದಲ್ಲಿ 66 ಮಂದಿಗೆ ಪ್ರಶಸ್ತಿ ಘೋಷಣೆಯಾಗಿದ್ದು, ಚಿತ್ರರಂಗದಿಂದ ಪುರಸ್ಕಾರ ಪಡೆದಿರುವ ಚಿತ್ರೋದ್ಯಮದ ಏಕೈಕ ವ್ಯಕ್ತಿ ದೇವರಾಜ್.

    ದೇವರಾಜ್ ಮೂಲತಃ ರಂಗಭೂಮಿಯಿಂದ ಬಂದ ಪ್ರತಿಭೆ. ನಾಟಕಗಳಿಂದ ಗಮನ ಸೆಳೆದವರು, ನಂತರ ಸಿನಿಮಾಗೆ ಬಂದು ಖಳನಟನ ಪಾತ್ರಗಳಲ್ಲಿ ಮಿಂಚಿದ್ದವರು. ನಂತರ ಹೀರೋ ಆಗಿ ಡೈನಮಿಕ್ ಸ್ಟಾರ್ ಎಂದೇ ಖ್ಯಾತರಾದರು. ಕರ್ನಾಟಕ ಮತ್ತು ಆಂಧ್ರಪ್ರದೇಶ.. ಎರಡೂ ಕಡೆ ರಾಜ್ಯ ಪ್ರಶಸ್ತಿ ಪಡೆದಿರುವ ನಟ ದೇವರಾಜ್. ಸದ್ಯಕ್ಕೆ ಪೋಷಕ ನಟನಾಗಿ ನಟಿಸುತ್ತಿದ್ದಾರೆ. ಅಭಿನಂದನೆಗಳು ದೇವರಾಜ್.

  • ದೇವರಾಜ್-ದರ್ಶನ್ ಅಟ್ಯಾಚ್‍ಮೆಂಟ್ ಒಂದೊಂದ್ಸಲ ಅಸೂಯೆ ಹುಟ್ಟಿಸುತ್ತೆ - ಪ್ರಜ್ವಲ್ ದೇವರಾಜ್

    darshan and devaraj's attacthment is a must

    ಜಂಟಲ್‍ಮನ್ ಚಿತ್ರದ ಆಡಿಯೋ ರಿಲೀಸ್‍ಗೆ ಬಂದಿದ್ದ ದರ್ಶನ್, ಇಂಥಾದ್ದೊಂದು ವಿಭಿನ್ನ ಕಥೆಯ ವಿಶೇಷ ಚಿತ್ರವನ್ನು ನೋಡಿ ಎಂದು ಕನ್ನಡಿಗರಿಗೆ ಆದೇಶವನ್ನೇ ಕೊಟ್ಟುಬಿಟ್ಟರು. ಏಕೆಂದರೆ ಇದು ಸ್ಲೀಪಿಂಗ್ ಸಿಂಡ್ರೋಮ್ ಬ್ಯೂಟಿ ಅನ್ನೋ ರೋಗ ಇರುವ ಹೀರೋನ ಕಥೆ. ಅಲ್ಲಿ ವಿಭಿನ್ನ ಸ್ಮಗ್ಲಿಂಗ್ ಕಥೆಯೂ ಇದೆ. ಅಂಥಾದ್ದೊಂದು ಕಥೆಯನ್ನು ಸಿನಿಮಾ ಮಾಡಿರುವಾಗ ದರ್ಶನ್ ಹಾಗೆ ಹೇಳೋದು ಸಹಜವೇ ಬಿಡಿ.

    ಅಂದಹಾಗೆ ಇದೇ ವೇಳೆ ಪ್ರಜ್ವಲ್ ದೇವರಾಜ್ ದರ್ಶನ್ ಮತ್ತು ತಮ್ಮ ತಂದೆಯ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ದರ್ಶನ್, ನಮ್ಮ ಮನೆಯ ಸದಸ್ಯನೇ ಆಗಿಹೋಗಿದ್ದಾರೆ.

    ನನಗೆ ಹಿರಿಯಣ್ಣನಂತಿದ್ದಾರೆ. ಅಪ್ಪ ಮತ್ತು ದರ್ಶನ್ ಮಧ್ಯೆ  ಸಂಬಂಧ ಇನ್ನಷ್ಟು ಚೆನ್ನಾಗಿದ್ದು ತಾರಕ್ ಚಿತ್ರದ ನಂತರ. ಅದು ಎಷ್ಟರಮಟ್ಟಿಗೆ ಎಂದರೆ ಎಷ್ಟೋ ಬಾರಿ ನನಗೆ ದರ್ಶನ್ ಕಂಡರೆ ಅಸೂಯೆಯಾಗುವಷ್ಟು ಆತ್ಮೀಯತೆ ಅವರಿಬ್ಬರ ಮಧ್ಯೆ ಇದೆ ಎಂದು ಪ್ರೀತಿಯಿಂದಲೇ ಹೇಳಿದ್ದಾರೆ ಪ್ರಜ್ವಲ್.

    ಜಡೇಶ್ ಕುಮಾರ್ ನಿರ್ದೇಶನದ ಜಂಟಲ್‍ಮನ್ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದ್ದು, ಗುರು ದೇಶಪಾಂಡೆ ನಿರ್ಮಾಪಕ. ನಿಶ್ವಿಕಾ ನಾಯ್ಡು ನಾಯಕಿಯಾಗಿರುವ ಚಿತ್ರದಲ್ಲಿ ಸಂಚಾರಿ ವಿಜಯ್ ಇನ್ಸ್‍ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.

  • ದೇವರಾಜ್‍ಗೂ ಭಯ ಹುಟ್ಟಿಸಿದ್ದ ಪಾತ್ರ ಅದು..!

    devaraj image

    ಡೈನಮಿಕ್ ಸ್ಟಾರ್ ದೇವರಾಜ್, ಎಂಥಹ ಕಲಾವಿದ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ರಂಗಭೂಮಿಯಿಂದ ಬಂದಿರುವ, ಚಿತ್ರರಂಗದಲ್ಲೇ ಸುಮಾರು 30 ವರ್ಷ ಕಳೆದಿರುವ ದೇವರಾಜ್, ಎಂತಹ ಪಾತ್ರಗಳನ್ನೇ ಆದರೂ ಲೀಲಾಜಾಲವಾಗಿ ನಟಿಸಬಲ್ಲ ಕಲಾವಿದ. ಅಂತಹ ದೇವರಾಜ್ ಕೂಡಾ ನಟಿಸೋಕೆ ಎರಡು ಬಾರಿ ಯೋಚಿಸುವಂತಹ ಪಾತ್ರವೊಂದು ಬಂದಿತ್ತಂತೆ. ಈ ಪಾತ್ರ ಮಾಡೋಕೆ ನನ್ನಿಂದ ಸಾಧ್ಯಾನಾ ಎಂದು ಯೋಚಿಸಿ, ಆಗಲ್ಲ ಎಂದು ಚಿತ್ರತಂಡಕ್ಕೆ ವಾಪಸ್ ಕಳಿಸಿದ್ದರಂತೆ. ಆದರೂ, ಚಿತ್ರತಂಡದವರು ಹಠ ಬಿಡದೆ.. ದೇವರಾಜ್‍ರನ್ನು ಒಪ್ಪಿಸಿ ಪಾತ್ರವನ್ನು ಮಾಡಿಸಿದ್ದಾರೆ.

    ಈ ಪಾತ್ರ ಮಾಡೋಕೆ ನನ್ನಿಂದ ಆಗುತ್ತಾ ಎಂದು ದೇವರಾಜ್ ಯೋಚಿಸುವಂತೆ ಮಾಡಿದ್ದ ಪಾತ್ರ, 3 ಗಂಟೆ 30 ದಿನ 30 ಸೆಕೆಂಡ್ ಚಿತ್ರದ ಅಶಕ್ತ ಯೋಧನ ಪಾತ್ರ. ಕಣ್ಣು ಕಾಣಲ್ಲ, ಕಿವಿ ಕೇಳಲ್ಲ, ಮಾತು ಬರಲ್ಲ.. ಇಂಥ ಪಾತ್ರವನ್ನು ನಿಭಾಯಿಸುವುದೇ ಹೇಗೆ ಅನ್ನೋದೇ ದೊಡ್ಡ ಚಾಲೆಂಜ್. ಆದರೆ, ಅಭಿನಯಿಸುತ್ತಾ ಹೋದ ಮೇಲೆ ಸಲೀಸಾಯ್ತು. ನನಗಿಂತ ಹೆಚ್ಚಾಗಿ ಚಿತ್ರತಂಡಕ್ಕೆ ಖುಷಿಯಾಯ್ತು ಎಂದು ಹೇಳಿಕೊಂಡಿದ್ದಾರೆ ದೇವರಾಜ್.

    ನನ್ನ ಬಾಡಿ ಲಾಂಗ್ವೇಜ್ ನೊಡಿ ಜನ ನಗಬಹುದೇನೋ ಎಂಬ ಭಯ ಇದೆ. ಆದರೆ, ನಿರ್ದೇಶಕರು ವಿಶ್ವಾಸದಿಂದಿದ್ದಾರೆ. ಜೊತೆಗೆ ಸುಧಾರಾಣಿ ಇದ್ದ ಕಾರಣ, ಅಭಿನಯಿಸೋಕೆ ನನಗೂ ಕಂಪರ್ಟಬಲ್ ಆಗಿತ್ತು ಎಂದು ಹೇಳಿದ್ದಾರೆ ದೇವರಾಜ್. ಚಿತ್ರ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.

  • ದೇವರಾಜ್‍ಗೆ ಜಗ್ಗೇಶ್ ಕೊಟ್ಟ ಅಭಿಮಾನದ ಸರ್ಟಿಫಿಕೇಟ್

    jaggesh praises devaraj

    ದೇವರಾಜ್ ಒಬ್ಬ ಅದ್ಭುತ ನಟ. ಅವರ ಮುಖಚರ್ಯೆ, ಕಣ್ಣು.. ಇವೆಲ್ಲ ಎಂಥ ಪಾತ್ರಕ್ಕೂ ಸೂಟ್ ಆಗುತ್ತವೆ. ಅಣ್ಣ, ಅಪ್ಪ, ತಾತ.. ಹೀಗೆ ಯಾವ ಪಾತ್ರವಾದರೂ ಸರಿ. ಅವರು ಸರಿಯಾಗಿ ನಿಂತಿದ್ದರೆ, ಬೇರೆ ಭಾಷೆಯ ಚಿತ್ರಗಳಲ್ಲಿ ರೈ ಅಂತಹವರಿಗೆ ಚಾನ್ಸ್ ಕೂಡಾ ಸಿಗುತ್ತಿರಲಿಲ್ಲ. ಆಂಧ್ರಪ್ರದೇಶಕ್ಕೆ ನಂದಿ ಅವಾರ್ಡ್ ಪಡೆದುಕೊಂಡ ನಟ ಅವರು. ನಿಜಕ್ಕೂ ಅವರು ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಸ್ತಿ. ಅವರು ಗಟ್ಟಿಯಾಗಿ ನಿಂತುಬಿಟ್ಟರೆ, ಅವರು ಬೆಳೆಯೋ ಎತ್ತರವೇ ಬೇರೆ. ಅವರನ್ನು ಮುಟ್ಟೋಕೆ ಆಗಲ್ಲ.

    ಇದು ಡೈನಮಿಕ್ ಸ್ಟಾರ್ ದೇವರಾಜ್ ಅವರಿಗೆ ಜಗ್ಗೇಶ್ ಕೊಟ್ಟಿರುವ ಅಭಿಮಾನದ ಸರ್ಟಿಫಿಕೇಟು. ಸಾಗುವ ದಾರಿಯಲ್ಲಿ ಚಿತ್ರದ ಆಡಿಯೋ ಬಿಡುಗಡೆ ವೇಳೆ ಅತಿಥಿಗಳಾಗಿ ಆಗಮಿಸಿದ್ದ ಜಗ್ಗೇಶ್, ದೇವರಾಜ್ ಅವರನ್ನು ಕೊಂಡಾಡಿದ್ದು ಹೀಗೆ. ತಾವು, ದೇವರಾಜ್, ಅವಿನಾಶ್, ಶಶಿಕುಮಾರ್ ಎಲ್ಲರೂ ಕೆ.ವಿ. ರಾಜು ಅವರ ಬಳಿ ಕೆಲಸ ಮಾಡಿದ ದಿನಗಳನ್ನು ನೆನಪಿಸಿಕೊಂಡ ಜಗ್ಗೇಶ್, ರಾಜು ಚಿತ್ರಗಳಲ್ಲಿ ದೇವರಾಜ್‍ಗೆ ಒಂದು ಪಾತ್ರ ಖಾಯಂ ಇರುತ್ತಿತ್ತು. ದೇವರಾಜ್ ಆಯ್ಕೆಯಾದ ಮೇಲೆಯೇ ಉಳಿದವರ ಆಯ್ಕೆಯಾಗುತ್ತಿತ್ತು ಎಂದು ನೆನಪಿಸಿಕೊಂಡರು.

    ದೇವರಾಜ್ ಅವರಿಗೆ ಅವರ ಪತ್ನಿ ಮೇಲೆ ಪ್ರೀತಿ ಜಾಸ್ತಿ. ಪ್ರೀತಿ ಮಾಡಿ ತಪ್ಪೇನಿಲ್ಲ. ಆದರೆ, ಪ್ರೀತಿಯನ್ನು ಸ್ವಲ್ಪ ಕಡಿಮೆ ಮಾಡಿ, ಹೊರಗೆ ಬನ್ನಿ ಎಂದು ಸಲಹೆಯನ್ನೂ ಕೊಟ್ಟರು. ಸಲಹೆಯನ್ನು ಸ್ವೀಕರಿಸೋದು ಬಿಡೋದು ದೇವರಾಜ್ ಅವರಿಗೆ ಬಿಟ್ಟಿದ್ದು.

  • ಮೈಸೂರು ಬಳಿ ದರ್ಶನ್ ಕಾರು ಅಪಘಾತ

    darshan met with an accident in mysore

    ಮೈಸೂರು ಬಳಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಅಪಘಾತಕ್ಕೀಡಾಗಿದೆ. ಕಾರ್‍ನಲ್ಲಿ ದರ್ಶನ್ ಜೊತೆ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಕೂಡಾ ಇದ್ದರು. ನಿನ್ನೆಯಷ್ಟೇ ಮೈಸೂರಿನಲ್ಲಿ ಗಜಪಡೆಯ ಮಾವುತರೊಂದಿಗೆ ವಿಶೇಷ ಭೋಜನ ಕಾರ್ಯಕ್ರಮ ಹಮ್ಮಿಕೊಂಡಿದ್ದ ದರ್ಶನ್ ಜೊತೆ ಸ್ಯಾಂಡಲ್‍ವುಡ್‍ನ ಹಲವರು ಭಾಗವಹಿಸಿದ್ದರು.

    ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಬರುವಾಗ ಹಿನಕಲ್ ರಿಂಗ್ ರೋಡ್ ಬಳಿ ದರ್ಶನ್‍ರ ಆಡಿ ಕಾರು ಸ್ಕಿಡ್ ಆಗಿದೆ. ಅಪಘಾತದಲ್ಲಿ ದರ್ಶನ್ ಬಲಗೈ  ಮೂಳೆ ಮುರಿದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್‍ಗೂ ಕೂಡಾ ಗಾಯಗಳಾಗಿವೆ.

    ಮುಂಜಾನೆ 3 ಗಂಟೆ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದೆ. ದರ್ಶನ್ ಅವರ ಕಾರು ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮೈಸೂರಿಗೆ ಧಾವಿಸಿದ್ದಾರೆ.

  • ರಾಷ್ಟ್ರಪ್ರಶಸ್ತಿ ಪುರಸ್ಕøತ ಹೆಬ್ಬೆಟ್ ರಾಮಕ್ಕ ಬಂದಿದ್ದಾಳೆ..!

    national award winning movie

    ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳೆಂದರೆ, ಅವು ಥಿಯೇಟರಿನಲ್ಲಿ ಬಿಡುಗಡೆಯಾಗುವುದೇ ಇಲ್ಲ ಎಂಬ ಕಾಲವೂ ಇತ್ತು. ಆದರೆ, ಈಗ ಹಾಗಿಲ್ಲ. ಪ್ರಶಸ್ತಿ ವಿಜೇತ ಚಿತ್ರಗಳು ಚಿತ್ರಮಂದಿರಕ್ಕೂ ಕಾಲಿಡುತ್ತಿವೆ. ಹೀಗೆ ಥಿಯೇಟರಿಗೆ ಬರುತ್ತಿರುವ ಪ್ರಶಸ್ತಿ ವಿಜೇತ ಚಿತ್ರ ಹೆಬ್ಬೆಟ್ ರಾಮಕ್ಕ.

    ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವ ಚಿತ್ರತಂಡ, ಈಗ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ಬಿಡುಗಡೆಯ ಹೊಣೆ ಹೊತ್ತಿರುವುದು ಜಾಕ್‍ಮಂಜು.

    ತಾರಾ ಮತ್ತು ದೇವರಾಜ್ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ನಿರ್ದೇಶಕ ನಂಜುಂಡೇಗೌಡ. ಚಿತ್ರಕ್ಕೆ ಸಾಹಿತಿ ಎಸ್‍ಜಿ ಸಿದ್ದರಾಮಯ್ಯ ಸಂಭಾಷಣೆ ಬರೆದಿದ್ದಾರೆ.

     

  • ಹುಲಿಯಾ 2ಗೆ ದೇವರಾಜ್ ಕಥೆಗಾರ..!

    devaraj turns story writer for huliya 2

    ಡೈನಮಿಕ್ ಸ್ಟಾರ್ ದೇವರಾಜ್ ಅವರ ವೃತ್ತಿ ಜೀವನದಲ್ಲಿಯೇ ಮೈಲುಗಲ್ಲು ಎನ್ನಬಹುದಾದ ಸಿನಿಮಾ ಹುಲಿಯಾ. 1996ರಲ್ಲಿ ಬಂದಿದ್ದ ಹುಲಿಯಾ ಚಿತ್ರ ಉ. ಕರ್ನಾಟಕ ಭಾಗದ ಬರಗಾಲ, ಬಡವರ ಕಣ್ಣೀರಿನ ಕಥೆ ಹೇಳಿದ್ದ ಸಿನಿಮಾ. ಶೋಷಣೆಯ ಪರಾಕಾಷ್ಠೆಯನ್ನು ಕನ್ನಡಿಗರ ಎದುರು ತೆರೆದಿಟ್ಟಿದ್ದ ಹುಲಿಯಾ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದವರು ಕೆ.ವಿ.ರಾಜು.

    ಈಗ ಆ ಚಿತ್ರದ ಸೀಕ್ವೆಲ್ ಮಾಡಲು ಹೊರಟಿದ್ದಾರೆ ದೇವರಾಜ್. ಹುಲಿಯಾ 2ಗೆ ತಮ್ಮದೇ ಕಥೆ ಬರೆಯುತ್ತಿದ್ದಾರಂತೆ. ಆದರೆ ಅವರು ನಟಿಸೋದಿಲ್ಲ. ಬದಲಿಗೆ ಹುಲಿಯಾ 2ನಲ್ಲಿ ಹೀರೋ ಆಗಲಿರೋದು ಪ್ರಜ್ವಲ್ ದೇವರಾಜ್. ಸದ್ಯಕ್ಕೆ ಕಥೆಯ ಎಳೆಗೆ ಒಂದು ಮೂರ್ತರೂಪ ಸಿಕ್ಕಿದೆ. ಅಪ್ಪನೇ ಡೈರೆಕ್ಷನ್ ಮಾಡಿದರೂ ಮಾಡಬಹುದು ಎಂದಿದ್ದಾರೆ ಪ್ರಜ್ವಲ್ ದೇವರಾಜ್. ರಂಗಭೂಮಿಯಿಂದ ಬಂದಿರೋ ದೇವರಾಜ್ ಅವರಿಗೆ ನಿರ್ದೇಶನವೂ ಸವಾಲಾಗಲಾರದು.