ಜಗ್ಗೇಶ್ ಅವರ ಪುತ್ರ ಯತಿರಾಜ್ ಜಗ್ಗೇಶ್ ಡ್ರಗ್ಸ್ ಮಾಫಿಯಾ ಎಂಬ ನಶೆಯ ಲೋಕಕ್ಕೆ ಕಾಲಿಟ್ಟಿದ್ದಾರೆ. ಗೋಸಿಗ್ಯಾಂಗ್ ಚಿತ್ರದ ಮೂಲಕ. ಅದು ಪಾತಕ ಲೋಕದ ಭೂಗತ ಕಥೆ. ಡ್ರಗ್ಸ್ ಮಾಫಿಯಾ ಸುತ್ತಲೇ ಹೆಣೆದಿರುವ ಕಥೆಯಲ್ಲಿ ಯತಿರಾಜ್ ಜಗ್ಗೇಶ್ ಮತ್ತು ಅಜಯ್ ಕಾರ್ತಿಕ್ ನಟಿಸುತ್ತಿದ್ದಾರೆ.
ಸದ್ಯಕ್ಕಂತೂ ಗೃಹ ಸಚಿವ ಪರಮೇಶ್ವರ್, ರಾಜ್ಯದ ಮಾನಮರ್ಯಾದೆ ಹರಾಜು ಹಾಕುತ್ತಿರುವ ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರುತ್ತಿದ್ದರೆ, ಇತ್ತ, ಕೆ.ಶಿವಕುಮಾರ್ ಡ್ರಗ್ಸ್ ಮಾಫಿಯಾ ಕುರಿತ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ರಾಜು ದೇವಸಂದ್ರ ಎಂಬುವರು ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಹಳ್ಳಿಯಿಂದ ಬಂದ ಹುಡುಗರು ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿಕೊಂಡು ನರಳುವ ಕಥೆಯಿದೆಯಂತೆ. ಚಿತ್ರದ ಹಾಡುಗಳು ರಿಲೀಸ್ ಆಗಿವೆ.